ಗಾಳಿಮರ

ಗಾಳಿಮರ ಕ್ಯಾಸುವರೈನೆಸಿ ಕುಟುಂಬಕ್ಕೆ ಸೇರಿದ ಒಂದು ಚೆಲುವಾದ ಮರ.

ಸರ್ವೆಮರ ಪರ್ಯಾಯನಾಮ. ಕ್ಯಾಸುವರೀನಾ ಎಕ್ವಿಸಿಟಿಫೋಲಿಯ ಇದರ ವ್ಶೆಜ್ಞಾನಿಕ ಹೆಸರು. ಇದರ ಪುಟ್ಟರೆಂಬೆಗಳು ಕ್ಯಾಸೊವರಿ ಹಕ್ಕಿಯ ಪುಕ್ಕಗಳನ್ನು ಹೋಲುತ್ತವೆ ಎಂಬ ಕಾರಣದಿಂದ ಬಹುಶಃ ಈ ವ್ಶೆಜ್ಞಾನಿಕ ಹೆಸರು ಬಂದಿರಬೇಕು (ಕ್ಯಾಸೊವರಿಯ ವ್ಶೆಜ್ಞಾನಿಕ ಹೆಸರು ಕ್ಯಾಸ್ಯುಯೇರಿಯಸ್ ಎಂದು). ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಬೀಫ್ವುಡ್, ಶೀ ಓಕ್ ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯ, ಮಲೇಸಿಯ ಮತ್ತು ಪೆಸಿಫಿಕ್ ದ್ವೀಪಗಳ ತೀರಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಬಂಗಾಳ, ಬರ್ಮ ಮತ್ತು ಅಂಡಮಾನ್‌ಗಳಲ್ಲೂ ಇದನ್ನು ಸಮುದ್ರ ತೀರಪ್ರದೇಶಗಳಲ್ಲಿ ಕಾಣಬಹುದು. ಅಲ್ಲದೆ ಉರುವಲಾಗಿ ಉಪಯೋಗಿಸುವುದರಿಂದ ಇದನ್ನು ದೊಡ್ಡ ದೊಡ್ಡ ತೋಪುಗಳಲ್ಲಿ ಬೆಳೆಸಲಾಗುತ್ತಿದೆ. ನೋಡಲು ಅಂದವಾಗಿ ಪೈನ್ ಮರಗಳಂತೆ ಕಾಣುವುದರಿಂದ ಅಲಂಕಾರಕ್ಕೆಂದು ಉದ್ಯಾನಗಳಲ್ಲಿ ರಸ್ತೆ ಪಕ್ಕಗಳಲ್ಲಿ ಬೆಳೆಸುವುದೂ ಉಂಟು.

Casuarina equisetifolia
ಗಾಳಿಮರ
C. equisetifolia subsp. incana
Scientific classification e
Unrecognized taxon (fix): Casuarina
ಪ್ರಜಾತಿ:
C. equisetifolia
Binomial name
Casuarina equisetifolia
L.
Subspecies
  • C. e. subsp. equisetifolia
  • C. e. subsp. incana
ಗಾಳಿಮರ
C. equisetifolia tree at Mahamaya Lake
ಗಾಳಿಮರ
C. equisetifolia tree at Chikhaldara, Maharashtra
ಗಾಳಿಮರ
C. equisetifolia - MHNT

ಗಾಳಿಮರದ ಬಾಹ್ಯಗುಣ

  • ಗಾಳಿಮರ ಸುಮಾರು 3 ಮೀ ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮತ್ತು ನಿತ್ಯಹಸಿರಿನ ಮರ. ಬಲು ವೇಗವಾಗಿ ಬೆಳೆಯುವ ಗುಣ ಇದಕ್ಕೆ ಉಂಟು. ಮುಖ್ಯ ಕಾಂಡ ನೆಟ್ಟಗೆ ಮೇಲ್ಮುಖವಾಗಿ ಬೆಳೆಯುತ್ತಿದ್ದು ಉರುಳೆಯಾಕಾರದಲ್ಲಿದೆ. ತುದಿಯಲ್ಲಿನ ರೆಂಬೆಗಳು ಸಣ್ಣದಾಗಿ ಮೃದುವಾಗಿವೆ. ಎಲೆಗಳು ಹುರುಪೆಗಳಾಗಿ ಮಾರ್ಪಾಡಾಗಿರುವು ದರಿಂದ ಆಹಾರ ತಯಾರಿಕೆಯ ಕಾರ್ಯ ಈ ಎಳೆಯ ರೆಂಬೆಗಳದ್ದು. ಇದಕ್ಕಾಗಿ ಇವುಗಳಲ್ಲಿ ಹರಿತ್ತು ಇರುತ್ತದೆ. ಇದರಿಂದಲೇ ಇವುಗಳ ಬಣ್ಣ ಹಸುರು. ಎಲೆಗಳು ರೆಂಬೆಗಳ ಗೆಣ್ಣುಗಳಲ್ಲಿ ವರ್ತುಲ ಮಾದರಿಯಲ್ಲಿ ಜೋಡಣೆಗೊಂಡಿವೆ. ಈ ಲಕ್ಷಣದಲ್ಲಿ ಗಾಳಿಮರ ಕುದುರೆಬಾಲದ ಗಿಡವನ್ನು ಹೋಲುತ್ತದೆ. ಗಾಳಿಮರದ ಹೂಗಳು ಏಕಲಿಂಗಿಗಳು. ಗಂಡು ಹೂಗಳು ಉದ್ದವಾದ ಕದಿರುಗೋಂಚಲುಗಳಲ್ಲೂ ಹೆಣ್ಣು ಹೂಗಳು ಗುಂಡನೆಯ ಚಂಡು ಮಂಜರಿಗಳಲ್ಲೂ ಜೋಡಣೆಗೊಂಡಿವೆ.
  • ಗಂಡು ಹೂಗಳಲ್ಲಿ 1-2 ಪುಷ್ಪಪತ್ರಗಳೂ ಒಂದೇ ಒಂದು ಕೇಸರವೂ ಇವೆ. ಹೆಣ್ಣು ಹೂಗಳಲ್ಲಿ ಪುಷ್ಪಪತ್ರಗಳೇ ಇಲ್ಲ, ಬರಿಯ ಒಂದೇ ಒಂದು ಅಂಡಾಶಯವಿದೆ. ಫಲ ನಟ್ಲೆಟ್ ಮಾದರಿಯದು. ಒಂದು ಹೂಗೊಂಚಲಿನ ಫಲಗಳೆಲ್ಲ ಒಟ್ಟುಗೂಡಿ ಹೆಚ್ಚು ಕಡಿಮೆ ರುದ್ರಾಕ್ಷಿಯನ್ನು ಹೋಲುವಂತ ಸಂಯುಕ್ತ ಫಲವಾಗಿ ಬೆಳೆಯುತ್ತವೆ. ಗಾಳಿಮರ ಕಡಲ ತೀರಪ್ರದೇಶಗಳ ಮರಳು ಭೂಗುಣಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯುತ್ತದೆ. ಆದರೆ ಗಟ್ಟಿಯಾದ ಜಿಗುಟು ಅಥವಾ ಜೌಗುನೆಲದಲ್ಲಿ ಬೆಳೆಯಲಾರದು. ಗಾಳಿಮರಗಳ ಬೇರಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಗಳ ಗಂಟುಗಳಿರುತ್ತವೆ. ಗಟ್ಟಿ ನೆಲದಲ್ಲಿ ಈ ಬ್ಯಾಕ್ಟೀರಿಯಗಳ ಕಾರ್ಯ ನಿಂತುಹೋಗುವುದರಿಂದ ಅಂಥ ನೆಲ ಗಾಳಿಮರದ ಬೆಳೆವಣಿಗೆಗೆ ಯೋಗ್ಯವಲ್ಲ.

ಗಾಳಿಮರದ ಬೆಳವಣಿಗೆ

  • ಗಾಳಿಮರವನ್ನು ಭೂರಿಗಾತ್ರದಲ್ಲಿ ಬೆಳೆಸುವಾಗ ಮೊದಲು ನರ್ಸರಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಬೇಕಾದ ಸ್ಥಳಕ್ಕೆ ವರ್ಗಾಯಿಸುತ್ತಾರೆ. ಬಿತ್ತಿದ ಬೀಜಗಳಿಗೆ ಇರುವೆಗಳು ಮುತ್ತಿ ಅವು ನಾಶವಾಗುವುದನ್ನು ತಪ್ಪಿಸಲು ಬೀಜ ಬಿತ್ತುವ ಮುನ್ನ ಅಥವಾ ಅನಂತರ ನೀರಿನೊಂದಿಗೆ ಮೈಲುತುತ್ತದ ದುರ್ಬಲ ದ್ರಾವಣವನ್ನೊ ಮೀನುಮಾರಿ ಗಿಡದ ಬೇರಿನ ಕಷಾಯವನ್ನೊ ಹಾಕುತ್ತಾರೆ. ಬಿತ್ತುವ ಸಮಯ, ಸಸಿಗಳನ್ನು ವರ್ಗಾಯಿಸುವ ಕಾಲ ಮತ್ತು ಇತರ ವ್ಯವಸಾಯ ಕ್ರಮಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಬೇರೆಯಾಗಿವೆ. ಸಾಮಾನ್ಯವಾಗಿ ಬಿತ್ತಿದ 6-18 ತಿಂಗಳ ಅನಂತರ ಸಸಿಗಳನ್ನು ಬೇರೆಡೆಗೆ ವರ್ಗಾಯಿಸಬಹುದು. ನಾಟಿ ಮಾಡುವಾಗ ಅವುಗಳ ನಡುವೆ 2-3 ಮೀ ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ. ಕೆಲವು ಬಾರಿ 4 ಮೀ ಅಂತರವಿಟ್ಟು ತ್ರಿಕೋನಾಕೃತಿಯಲ್ಲಿ ನೆಡುವ ಪದ್ಧತಿಯೂ ಉಂಟು.
  • ಸಸಿಗಳ ನಡುವಣ ಅಂತರ ಮರಗಳನ್ನು ಯಾವ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ ಎಂಬ ಅಂಶವನ್ನು ಅವಲಂಬಿಸಿದೆ. ಸೌದೆಗಾಗಿ ಬೆಳೆಸುವಾಗ ಅಂತರ ಕಡಿಮೆ ಇದ್ದರೂ ಪರವಾಗಿಲ್ಲ. ಚೌಬೀನೆಗಾಗಿ ಬೆಳೆಸಿದರೆ ಸಸಿಯಿಂದ ಸಸಿಗೆ ಅಂತರ ಸಾಕಷ್ಟಿರಬೇಕು. ಇದರಿಂದ ಮರಗಳು ಹುಲುಸಾಗಿ ಬೆಳೆಯುತ್ತವೆ. ಸಸಿಗಳು ಚೆನ್ನಾಗಿ ಬೇರೂರುವ ತನಕ (1-3 ವರ್ಷಗಳ ವರೆಗೆ) ನೀರು ಹಾಯಿಸುವುದು ಅತ್ಯಗತ್ಯ. ಗಾಳಿಮರ ಹಲವು ಕೀಟಗಳ ಹಾಗೂ ಶಿಲೀಂಧ್ರಗಳ ಹಾವಳಿಗೆ ತುತ್ತಾಗುತ್ತದೆ. ನರ್ಸರಿಯಲ್ಲಿ ಸಸಿಗಳು ಚಿಮ್ಮಂಡೆಗಳ ಹಾವಳಿಗೆ ತುತ್ತಾಗುತ್ತದೆ. ಇವನ್ನು ತಡೆಯಲು ನರ್ಸರಿಯ ಸುತ್ತ 6 ಮೀ ಆವರಣದಲ್ಲಿ ಬೆಳೆಯುವ ಗಿಡಮರಗಳನ್ನು ತೆಗೆದು ಆಗಾಗ್ಗೆ ಕಾಣಬರುವ ಚಿಮ್ಮಂಡೆಗಳನ್ನು ನಾಶ ಮಾಡಬೇಕು. ಇದಲ್ಲದೆ ತೊಗಟೆ ತಿನ್ನುವ ಕಂಬಳಿಹುಳುಗಳು (ಆರ್ಟೆಲ ಜಾತಿ) ಗಾಳಿಮರಕ್ಕೆ ಸಾಕಷ್ಟು ಹಾನಿ ಉಂಟುಮಾಡುತ್ತವೆ.
  • ನೆಲದಲ್ಲಿ ನೀರಿನ ಅಂಶ ಹೆಚ್ಚಿದಲ್ಲಿ ಬೇರುಗಳಿಗೆ ಟ್ರೈಕೋ ಸ್ಟೋರಿಯಮ್ ವೆನಿಕ್ಯುಲೋಸಮ್ ಎಂಬ ಶಿಲೀಂಧ್ರ ರೋಗ ಬರುತ್ತದೆ. ಶಿಲೀಂಧ್ರ ಹಾಗೂ ಕೀಟಗಳಿಗೆ ತುತ್ತಾದ ಮರಗಳನ್ನು ನಾಶಗೊಳಿಸುವುದರಿಂದ ರೋಗ ಹರಡುವಿಕೆ ಯನ್ನು ತಡೆಯಬಹುದಲ್ಲದೆ ತೋಪಿನಲ್ಲಿ ಮರಗಳನ್ನು ಬೀಳಿಸಿ ಮತ್ತೆ ಬೇರೆ ಸಸಿಗಳನ್ನು ಹಾಕಲು 2 ತಿಂಗಳ ಅವಧಿ ಇರುವಾಗ ಈ ಮರಗಳ ನಡುವೆ ಗೇರು, ಹೊಂಗೆ, ಬೇವು, ಬೇಟೆ ಮುಂತಾದವನ್ನು ಬೆಳೆಸುವುದರಿಂದ ರೋಗಕ್ಕೆ ತುತ್ತಾದ ಮರಗಳು ಮಿಕ್ಕ ಆರೋಗ್ಯವಂತ ಮರಗಳಿಂದ ಬೇರ್ಪಡುತ್ತವೆ.
  • ಅಲ್ಲದೆ ಬೇರೆ ಜಾತಿಯ ಮರಗಳಿಂದ ಆಕರ್ಷಿತವಾಗುವ ಕೀಟಾಹಾರಿ ಹಕ್ಕಿಗಳ ಸಂಖ್ಯೆ ಹೆಚ್ಚಾಗಿ ಕೀಟಪಿಡುಗು ಕಡಿಮೆಯಾಗುತ್ತದೆ. ತೋಪಿನಲ್ಲಿನ ಗಾಳಿಮರಗಳನ್ನು ನಿರ್ದಿಷ್ಟ ಅವಧಿಯ ಅನಂತರ ಕಡಿದು ಹಾಕಿ ಮತ್ತೆ ಹೊಸ ಮರಗಳನ್ನು ಬೆಳೆಸುವ ಕ್ರಮ ಇದೆ. ಈ ಅವಧಿ ತಮಿಳುನಾಡಿನಲ್ಲಿ 10 ವರ್ಷಗಳಾದರೆ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ 30 ವರ್ಷಗಳು. ಆರ್ಥಿಕ ದೃಷ್ಟಿಯಿಂದ 15 ವರ್ಷಗಳ ಅವಧಿ ಉತ್ತಮವೆನ್ನಲಾಗಿದೆ.

ಗಾಳಿಮರದ ವಿಶೇಷ ಗುಣಗಳು

  • ಗಾಳಿಮರಕ್ಕೆ ಕೆಲವು ವಿಶೇಷ ಗುಣಗಳಿವೆ. ಅದರ ರಸಕಾಷ್ಠದ ಬಣ್ಣ ನಸುಗಂದು. ಚೇಗುಕಾಷ್ಠ ಕೆಂಪು ಮಿಶ್ರಿತ ಕಪ್ಪು ಬಣ್ಣದ್ದಾಗಿದ್ದು ಬಲಿಯುತ್ತ ಹೋದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಭಾರವಾಗಿ ಗಟ್ಟಿಯಾಗಿ ಇದ್ದರೂ ಒಣಗಿದ ಮೇಲೆ ಸೀಳುತ್ತದೆ. ಅಲ್ಲದೆ ಇದನ್ನು ಹದ ಮಾಡುವುದು ಸ್ವಲ್ಪ ಕಷ್ಟಕರವಾದ ಕೆಲಸ. ಈ ಮರವನ್ನು ಸೌದೆಯಾಗಿ ಉಪಯೋಗಿಸುವುದೇ ಹೆಚ್ಚು. ಇದು ಹಸಿಯಾಗಿರುವಾಗಲೇ ಚೆನ್ನಾಗಿ ಉರಿಯುವುದಲ್ಲದೆ ಹೆಚ್ಚಿನ ಕಾವನ್ನು ಸಹ ಉಳಿಸಿ ಕೊಂಡಿರುತ್ತದೆ.

ಉಪಯೋಗಗಳು

ಇದನ್ನು ಅತ್ಯುತ್ತಮ ಉರುವಲು ಎಂದು ಪರಿಗಣಿಸಲಾಗಿದೆ. ಆದರೂ ಗಾಳಿಮರಕ್ಕೆ ಬೇರೆ ಉಪಯೋಗಗಳೂ ಇಲ್ಲದಿಲ್ಲ. ಇದನ್ನು ತೊಲೆ, ಆಸರೆಕಂಬ, ವಿದ್ಯುತ್ ಕಂಬಗಳಾಗಿ ಉಪಯೋಗಿಸುತ್ತಾರೆ.

  • ಇದಲ್ಲದೆ ಗೃಹಕೈಗಾರಿಕೆಗಳಲ್ಲಿ, ಗ್ಯಾಲರಿಗಳ, ನೊಗಗಳ ಹಾಗೂ ದೋಣಿಯ ಮೀಟುಕೋಲಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ; ಚಕ್ರಗಳ ಆಧಾರ ಕಂಬಗಳಾಗಿಯೂ ಬಳಸುತ್ತಾರೆ.

ಔಷಧೀಯ ಗುಣಗಳು

ಗಾಳಿಮರಕ್ಕೆ ಔಷಧೀಯ ಗುಣಗಳೂ ಉಂಟು. ಇದರ ತೊಗಟೆ ಒಳ್ಳೆಯ ಪ್ರತಿಬಂಧಕವೆನಿಸಿದೆ. ಇದನ್ನು ಅತಿಸಾರ ಮತ್ತು ಆಮಶಂಕೆಗೆ ಮದ್ದಾಗಿ ಉಪಯೋಗಿಸುತ್ತಾರೆ. ಎಲೆಗಳ ಕಷಾಯವನ್ನು ಉದರ ಶೂಲೆಗೂ ಪುಡಿಮಾಡಿದ ಬೀಜಗಳನ್ನು ತಲೆನೋವಿಗೆ ಪಟ್ಟು ಹಾಕಲೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಶೇ. 6-15 ರಷ್ಟು ಟ್ಯಾನಿನ್ ಇವೆ. ತೊಗಟೆಯನ್ನು ಬಟ್ಟೆಗಳಿಗೆ ನಸುಕೆಂಪು ಬಣ್ಣ ಹಾಕಲೂ ಮೀನಿನ ಬಲೆಯನ್ನು ಗಟ್ಟಿಯಾಗಿಸಲೂ ಉಪಯೋಗಿಸುತ್ತಾರೆ.

ಗಾಳಿಮರ ಮತ್ತು ಭೂಮಿಯ ಸಾರವರ್ಧನೆ

ಗಾಳಿಮರದಿಂದ ಭೂಸಾರವು ಹೆಚ್ಚಾಗುತ್ತದೆ. ಗಿಡದ ಬೇರುಗಳಲ್ಲಿ ಫ್ರಾಂಕಿಯಾ ಎನ್ನುವ ಉದ್ದನೆಯ ಎಳೆಯಾಕಾರದ ಒಂದು ಜಾತಿಯ ಬ್ಯಾಕ್ಟೀರಿಯಾವು ವಾತಾವರಣದಲ್ಲಿನ ಸಾರಜನಕವನ್ನು ಭೂಸಾರವನ್ನಾಗಿ ಬದಲಾಯಿಸಿ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಸಮುದ್ರ ತೀರದ ಲವಣಯುಕ್ತ ಮಣ್ಣಿನಲ್ಲಿಯೂ ಗಾಳಿಮರವು ಹುಲುಸಾಗಿ ಬೆಳೆಯಬಲ್ಲದು. ನೂರಾ ಐವತ್ತಕ್ಕಿಂತಲೂ ಹೆಚ್ಚಿನ ಫ್ರಾಂಕಿಯಾ ವಿಧಗಳನ್ನು ವಿಜ್ಞಾನಿಗಳು ಈವರೆಗೂ ಗುರುತಿಸಿದ್ದಾರೆ ಹಾಗೂ ಅವುಗಳು ಗಾಳಿಮರ ಸೇರಿದಂತೆ ಹಲವಾರು ಬಗೆಯ ಗಿಡ-ಮರಗಳ ಬೇರುಗಳಲ್ಲಿ ಆಶ್ರಯ ಪಡೆದು ಮಣ್ಣಿನ ಸಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ.

Tags:

ಗಾಳಿಮರ ದ ಬಾಹ್ಯಗುಣಗಾಳಿಮರ ದ ಬೆಳವಣಿಗೆಗಾಳಿಮರ ದ ವಿಶೇಷ ಗುಣಗಳುಗಾಳಿಮರ ಉಪಯೋಗಗಳುಗಾಳಿಮರ ಔಷಧೀಯ ಗುಣಗಳುಗಾಳಿಮರ ಮತ್ತು ಭೂಮಿಯ ಸಾರವರ್ಧನೆಗಾಳಿಮರಬಂಗಾಳಮರ

🔥 Trending searches on Wiki ಕನ್ನಡ:

ಮಧುಮೇಹಕ್ರೀಡೆಗಳುರಾಮಾನುಜಕೇದಾರನಾಥಸುದೀಪ್ರಾಧಿಕಾ ಕುಮಾರಸ್ವಾಮಿಕರುಳುವಾಳುರಿತ(ಅಪೆಂಡಿಕ್ಸ್‌)ತೀರ್ಥಹಳ್ಳಿಸ್ವಾಮಿ ರಮಾನಂದ ತೀರ್ಥಭಾರತೀಯ ಶಾಸ್ತ್ರೀಯ ನೃತ್ಯಉತ್ತರ ಪ್ರದೇಶಉತ್ತರ ಕರ್ನಾಟಕಹಾಕಿಸಮುಚ್ಚಯ ಪದಗಳುಜಾನಪದಲಿನಕ್ಸ್ಪೂರ್ಣಚಂದ್ರ ತೇಜಸ್ವಿಸಂಧಿಹಿಂದೂ ಮದುವೆಅಕ್ಕಮಹಾದೇವಿರವಿ ಡಿ. ಚನ್ನಣ್ಣನವರ್ಕೆ.ಎಲ್.ರಾಹುಲ್ವೀರಗಾಸೆಕರ್ಬೂಜಮಳೆಮೌರ್ಯ ಸಾಮ್ರಾಜ್ಯಕರ್ನಾಟಕ ಸರ್ಕಾರಗಣಗಲೆ ಹೂಪೊನ್ನಚದುರಂಗ (ಆಟ)ಹಂಪೆಚಾಲುಕ್ಯನಾಥೂರಾಮ್ ಗೋಡ್ಸೆವರದಕ್ಷಿಣೆಬೇವುಪಂಚತಂತ್ರಸ್ವಚ್ಛ ಭಾರತ ಅಭಿಯಾನಚಾಮರಾಜನಗರಹೆಣ್ಣು ಬ್ರೂಣ ಹತ್ಯೆಕುಷಾಣ ರಾಜವಂಶಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭಾರತದ ಆರ್ಥಿಕ ವ್ಯವಸ್ಥೆಭಾರತೀಯ ಜನತಾ ಪಕ್ಷರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜ್ಯೋತಿಬಾ ಫುಲೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕೈಮೀರತುಳಸಿಕನ್ನಡ ಪತ್ರಿಕೆಗಳುಪ್ರತಿಷ್ಠಾನ ಸರಣಿ ಕಾದಂಬರಿಗಳುಹರ್ಯಂಕ ರಾಜವಂಶಈಡನ್ ಗಾರ್ಡನ್ಸ್ಮೇರಿ ಕ್ಯೂರಿಭೂಮಿಚಂದ್ರಶೇಖರ ಕಂಬಾರಜವಾಹರ‌ಲಾಲ್ ನೆಹರುಕನ್ನಡಸಮಾಜಶಾಸ್ತ್ರದುರ್ಯೋಧನಗರ್ಭಕಂಠದ ಕ್ಯಾನ್ಸರ್‌ಕರ್ನಾಟಕ ವಿಧಾನ ಪರಿಷತ್ಕ್ಷಯದುಂಡು ಮೇಜಿನ ಸಭೆ(ಭಾರತ)ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹುಬ್ಬಳ್ಳಿಗರುಡ ಪುರಾಣಕನ್ನಡ ವ್ಯಾಕರಣದೊಡ್ಡಬಳ್ಳಾಪುರ2ನೇ ದೇವ ರಾಯಮಲ್ಲಿಕಾರ್ಜುನ್ ಖರ್ಗೆದೂರದರ್ಶನಭಾರತದ ಇತಿಹಾಸಕೈಗಾರಿಕೆಗಳುಭಾರತೀಯ ಕಾವ್ಯ ಮೀಮಾಂಸೆಮುಹಮ್ಮದ್🡆 More