ಗಸಗಸೆ ಹಣ್ಣಿನ ಮರ

ಗಸಗಸೆ ಹಣ್ಣಿನ ಮರಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮಧ್ಯಮಗಾತ್ರದ ಮರ.

ಗಸಗಸೆ ಹಣ್ಣಿನ ಮರ
ಗಸಗಸೆ ಹಣ್ಣಿನ ಮರ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Malvales
ಕುಟುಂಬ:
Muntingiaceae
ಕುಲ:
Muntingia

L.
ಪ್ರಜಾತಿ:
M. calabura
Binomial name
Muntingia calabura
L.
ಗಸಗಸೆ ಹಣ್ಣಿನ ಮರ
Hyderabad, India

ಇದರ ಹಣ್ಣಿನಲ್ಲಿ ಗಸಗಸೆ ಬೀಜವನ್ನು ಹೋಲುವ ನೂರಾರು ಬೀಜಗಳು ಇರುವುದರಿಂದ ಇದಕ್ಕೆ ಈ ಹೆಸರು. ಇದನ್ನು ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಸಿಂಗಪುರ ಚೆರಿ ಅಥವಾ ಜಪಾನೀಸ್ ಚೆರಿ ಎನ್ನಲಾಗುತ್ತದೆ. ಮುಂಟಿಂಜಿಯ ಕ್ಯಾಲಬುರ ಶಾಸ್ತ್ರೀಯ ನಾಮ. ಇದು ಮೂಲತಃ ದಕ್ಷಿಣ ಅಮೆರಿಕದ್ದು. ಉಷ್ಣವಲಯ ದೇಶಗಳಲ್ಲೆಲ್ಲ ಇದನ್ನು ಹಣ್ಣಿಗಾಗಿ ಮತ್ತು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಎಲ್ಲ ದಿಕ್ಕುಗಳಲ್ಲಿಯೂ ಹರಡಿ ಬೆಳೆಯುವ ಕೊಂಬೆಗಳು, ಭರ್ಜಿಯಾಕಾರದ ಹಾಗೂ ಗರಗಸ ಅಂಚುಳ್ಳ ಎಲೆಗಳು ಮತ್ತು ಸಣ್ಣಗಾತ್ರದ ಬಿಳಿಯಬಣ್ಣದ ಹೂಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹಣ್ಣು ಬೆರಿ ಮಾದರಿಯದು. ಇದು ಗುಂಡಾಗಿಯೂ ನುಣುಪಾಗಿಯೂ ಇದೆ. ಇದರ ಬಣ್ಣ ಕೆಂಪು. ರುಚಿ ಸಿಹಿ. ಹಣ್ಣಿನಲ್ಲಿ ರಸಭರಿತ ತಿರುಳಿದೆ. ಇದರಿಂದ ಮುರಬ್ಬ ತಯಾರಿಸಬಹುದು. ಗಸಗಸೆ ಹಣ್ಣಿನ ಮರವನ್ನು ಕಾಂಡತುಂಡುಗಳಿಂದ ವೃದ್ಧಿಸುತ್ತಾರೆ. ಮರಳುಭೂಮಿ ಇದರ ಬೆಳವಣಿಗೆಗೆ ಉತ್ತಮ. ಈ ಮರದ ಎಲೆಗಳಿಂದ ಒಂದು ಬಗೆಯ ಕಷಾಯ ಮಾಡುವುದುಂಟು. ಹೂಗಳನ್ನು ತಲೆನೋವು ಮತ್ತು ನೆಗಡಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ತೊಗಟೆಯಿಂದ ನಾರು ತೆಗೆದು ಹಗ್ಗಗಳನ್ನು ತಯಾರಿಸುವುದಿದೆ.

ಗಸಗಸೆ ಹಣ್ಣಿನ ಮರ
leaves and fruits

ಛಾಯಾಂಕಣ

ಬಾಹ್ಯ ಸಂಪರ್ಕಗಳು

Tags:

ಉದ್ಯಾನವನ

🔥 Trending searches on Wiki ಕನ್ನಡ:

ಭಾರತದ ರಾಜಕೀಯ ಪಕ್ಷಗಳುಓಂ ನಮಃ ಶಿವಾಯಕಲಿಯುಗಹರಿದಾಸಪಾರ್ವತಿಕರ್ನಾಟಕದಲ್ಲಿ ಸಹಕಾರ ಚಳವಳಿಪ್ರೇಮಾಅಲ್ಲಮ ಪ್ರಭುಹಣ್ಣುಲೋಕತುಂಗಭದ್ರಾ ಅಣೆಕಟ್ಟುಮೌರ್ಯ ಸಾಮ್ರಾಜ್ಯನಯಾಗರ ಜಲಪಾತRX ಸೂರಿ (ಚಲನಚಿತ್ರ)ಭಾರತದ ರಾಷ್ಟ್ರಪತಿವಾಲಿಬಾಲ್ಸಂಗನಕಲ್ಲುಪ್ರೀತಿಸೂರ್ಯಹಿಂದೂ ಧರ್ಮಮೈಗ್ರೇನ್‌ (ಅರೆತಲೆ ನೋವು)ಎನ್ ಸಿ ಸಿಪ್ರಜಾಪ್ರಭುತ್ವದ ಲಕ್ಷಣಗಳುಬಿ.ಎಫ್. ಸ್ಕಿನ್ನರ್ಆವಕಾಡೊವಸಾಹತು೧೯೭೧ರ ಭಾರತ-ಪಾಕಿಸ್ತಾನ ಯುದ್ಧಕರ್ನಾಟಕದ ಜಾನಪದ ಕಲೆಗಳುಓಂ (ಚಲನಚಿತ್ರ)ತತ್ಪುರುಷ ಸಮಾಸವ್ಯವಹಾರ ನಿವ೯ಹಣೆಹದ್ದುಚನ್ನವೀರ ಕಣವಿರೈತವಾರಿ ಪದ್ಧತಿಕಲ್ಯಾಣ ಕರ್ನಾಟಕಛಂದಸ್ಸುಹಟ್ಟಿ ಚಿನ್ನದ ಗಣಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿದರ್ಶನ್ ತೂಗುದೀಪ್ಹರಿಹರ (ಕವಿ)ಯಕೃತ್ತುವ್ಯವಸಾಯಉತ್ತರ ಕನ್ನಡವಿಶ್ವ ಮಹಿಳೆಯರ ದಿನಅಂಜನಿ ಪುತ್ರಕಲಬುರಗಿಕರ್ಣಾಟಕ ಬ್ಯಾಂಕ್ಟಿಪ್ಪು ಸುಲ್ತಾನ್ಆದಿಪುರಾಣಇಮ್ಮಡಿ ಬಿಜ್ಜಳಯೋನಿಜಾರ್ಜ್‌ ಆರ್ವೆಲ್‌ರಜಪೂತಶ್ರೀಸಿಂಧೂತಟದ ನಾಗರೀಕತೆರಾಮಾನುಜಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಸಮಾಜಶಾಸ್ತ್ರಅಕ್ಷಾಂಶ ಮತ್ತು ರೇಖಾಂಶಕನ್ನಡ ಪತ್ರಿಕೆಗಳುಭಾರತೀಯ ರಿಸರ್ವ್ ಬ್ಯಾಂಕ್ಪ್ರಬಂಧ ರಚನೆಜ್ಞಾನಪೀಠ ಪ್ರಶಸ್ತಿಐಹೊಳೆಚಿನ್ನದ ಗಣಿಗಾರಿಕೆಅಭಿ (ಚಲನಚಿತ್ರ)ಮಾನವನ ಪಚನ ವ್ಯವಸ್ಥೆಶ್ರವಣಬೆಳಗೊಳಮಹೇಶ್ವರ (ಚಲನಚಿತ್ರ)ಅಮೃತಧಾರೆ (ಕನ್ನಡ ಧಾರಾವಾಹಿ)ಮೋಕ್ಷಗುಂಡಂ ವಿಶ್ವೇಶ್ವರಯ್ಯಅರ್ಜುನವಿಕಿಪೀಡಿಯರೋಸ್‌ಮರಿಅಷ್ಟಾಂಗ ಯೋಗ🡆 More