ಗಲಾಪಗಸ್ ದ್ವೀಪಗಳು

ಗಲಾಪಗಸ್ ದ್ವೀಪಗಳು - ಸಮಭಾಜಕೀಯ ಪೆಸಿಫಿಕ್ ಸಾಗರದಲ್ಲಿ, ಈಕ್ವಡಾರಿನ ಪಶ್ಚಿಮಕ್ಕೆ 800 ಕಿಮೀಗಳಿಂದ 1320ಕಿಮೀಗಳ ವರೆಗೆ 57500ಚ.ಕಿಮೀ ಗಳಲ್ಲಿ ಹರಡಿರುವ 14 ದೊಡ್ಡ ಮತ್ತು ಹಲವಾರು ಸಣ್ಣ ದ್ವೀಪಗಳ ಗುಂಪು.

ಇವುಗಳ ಒಟ್ಟು ವಿಸ್ತೀರ್ಣ 7570 ಚ.ಕಿಮೀ. ಇವುಗಳಲ್ಲಿ ಅತ್ಯಂತ ದೊಡ್ಡದೂ ಎತ್ತರವಾದದ್ದೂ ಆದ ದ್ವೀಪ ಆಲ್ಬೆಮಾರ್ಲ್.

ಗಲಾಪಗಸ್ ದ್ವೀಪಗಳು
ಉಪಗ್ರಹದ ಚಿತ್ರ-2002

ಮೀನುಗಾರಿಕೆ ಮತ್ತು ಚರ್ಮ ಹದಮಾಡುವುದು ಇಲ್ಲಿಯ ಮುಖ್ಯ ಕಸುಬುಗಳು. ಚರ್ಮ, ವಸ್ತ್ರ, ಗಂಧಕ ಮತ್ತು ಮೀನು ಇಲ್ಲಿಯ ಮುಖ್ಯ ನಿರ್ಯಾತಗಳು.

ಉಗಮ

ಈ ದ್ವೀಪಗಳ ಉಗಮ ಹೇಗಾಯಿತೆಂಬುದು ನಿರ್ವಿವಾದವಾಗಿ ಇನ್ನೂ ಸ್ಥಾಪಿತವಾಗಿಲ್ಲ. ಇವು ಅಮೆರಿಕ ಖಂಡದೊಂದಿಗೆ ಎಂದಿಗೂ ಸೇರಿರಲಿಲ್ಲವೆಂದು ಕಾಣುತ್ತದೆ. ಈಗ ಜೀವಂತವಾಗಿಲ್ಲದ ಅಗ್ನಿ ಪರ್ವತಗಳ ಲಾವದಿಂದ ಇವು ಬಹಳಮಟ್ಟಿಗೆ ಕೂಡಿವೆ. ಆಲ್ಬೆಮಾರ್ಲ್ನ ಒಂದು ಜ್ವಾಲಾಮುಖಿ 1948ರಿಂದ ಈಚೆಗೆ ಮೂರು ಬಾರಿ ಜ್ವಾಲೆ ಉಗುಳಿತ್ತು.

ವಾಯುಗುಣ

ಈ ದ್ವೀಪಸ್ತೋಮ ಉಷ್ಣವಲಯದಲ್ಲಿದ್ದರೂ ಇಲ್ಲಿಯ ವಾಯುಗುಣ ಅನೇಕ ವ್ಯತಿಕ್ರಮಗಳಿಂದ ಕೂಡಿದ್ದು, ತೀರಪ್ರದೇಶದಲ್ಲಿ ಮಳೆ ಬಹಳ ಕಡಿಮೆ. ಗಾಳಿಯ ಉಷ್ಣತೆ 70°-85°ಫ್ಯಾ. ಸಮುದ್ರದ ನೀರಿನ ಮೇಲ್ಭಾಗದ ಉಷ್ಣತೆಯೂ ಕಡಿಮೆ (63°-86°ಫ್ಯಾ.). ಇದಕ್ಕೆ ಕಾರಣವೆಂದರೆ, ಈ ದ್ವೀಪಸ್ತೋಮದ ಸುತ್ತ ಬುದ್ಬುದಿಸುವ ಶೀತೋದಕ ಪ್ರವಾಹ.

ಸಸ್ಯ ಮತ್ತು ಪ್ರಾಣಿವರ್ಗ

ಭಾರಿ ಮೊಂಡುಗಳ್ಳಿ, ಕುರುಚಲು ಮತ್ತು ಕುಳ್ಳಾದ ಪರ್ಣಪಾತಿ ವೃಕ್ಷಗಳು ಕರಾವಳಿಯಲ್ಲಿ ವಿಶೇಷವಾಗಿವೆ. ಒಳನಾಡಿನಲ್ಲಿ ಪೇರಲ ಮತ್ತು ಸೂರ್ಯಕಾಂತಿ ಬೆಳೆಯುತ್ತವೆ.

ಇಲ್ಲಿ ನಾನಾ ಜಾತಿಯ ಪಕ್ಷಿಗಳು ಮತ್ತು ಉರಗಗಳು ಉಂಟು. ರಾಕ್ಷಸಾಕಾರದ ಆಮೆ ಮತ್ತು ಇಗ್ವಾನ ಇಲ್ಲಿಯ ಮುಖ್ಯ ಪ್ರಾಣಿಗಳು. ಈ ದ್ವೀಪಗಳ ಪ್ರಾಣಿಗಳ ಸಂರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಇತಿಹಾಸ

ಗಲಾಪಗಸ್ ದ್ವೀಪಸ್ತೋಮವನ್ನು 1535ರಲ್ಲಿ ಪನಾಮಾದ ಬಿಷಪ್ ಟಾಮಸ್ ಡಿ ಬೆರ್ಲಾಂಗ್ ಕಂಡುಹಿಡಿದ. ಪ್ರಸಿದ್ಧ ಕಾದಂಬರಿಕಾರ ಹೆರ್ಮನ್ ಮೆಲ್ವಿಲ್ 1841ರಲ್ಲಿ ಈ ದ್ವೀಪಸ್ತೋಮವನ್ನು ಸಂದರ್ಶಿಸಿದ್ದ.

1835ರಲ್ಲಿ ಚಾರಲ್ಸ್ ಡಾರ್ವಿನ್ ಈ ದ್ವೀಪಗಳಿಗೆ ಭೇಟಿ ಕೊಟ್ಟು ಇಲ್ಲಿಯ ಅಸಾಧಾರಣ ಜೀವಿಗಳನ್ನು ಅಭ್ಯಸಿಸಿ ತನ್ನ ಸಿದ್ಧಾಂತಗಳಿಗೆ ಅನೇಕ ವಿವರಗಳನ್ನು ಪಡೆದುಕೊಂಡ. ಈತನ ಭೇಟಿಯ ಅನಂತರ ಈ ದ್ವೀಪಸ್ತೋಮ ವಿಜ್ಞಾನಿಗಳ ಗಮನ ಸೆಳೆಯಿತು.

1832ರಲ್ಲಿ ಈ ದ್ವೀಪಸ್ತೋಮವನ್ನು ಈಕ್ವಡಾರ್ ಅಧಿಕೃತವಾಗಿ ವಶಪಡಿಸಿ ಕೊಂಡಿತು. ಚಾರಲ್ಸ್ ದ್ವೀಪದಲ್ಲಿ ವಸತಿ ಆರಂಭವಾಯಿತು. 1920 ರಿಂದ ಕೆಲವು ಐರೋಪ್ಯರೂ ಇಲ್ಲಿ ಬಂದು ನೆಲೆಸಿದರು. ಎರಡನೆಯ ಮಹಾಯುದ್ಧ ಕಾಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಇಲ್ಲೊಂದು ವಿಮಾನ ನೆಲೆ ಸ್ಥಾಪಿಸಿತ್ತು. ಈಚೆಗೆ ಈಕ್ವಡಾರ್ ಜನ ಅಧಿಕ ಸಂಖ್ಯೆಯಲ್ಲಿ ಇಲ್ಲಿ ನೀರಿನ ಸೌಕರ್ಯ ಇರುವೆಡೆಗಳಲ್ಲಿ ನೆಲಸುತ್ತಿದ್ದಾರೆ.

ಗಲಾಪಗಸ್ ದ್ವೀಪಗಳು 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಗಲಾಪಗಸ್ ದ್ವೀಪಗಳು ಉಗಮಗಲಾಪಗಸ್ ದ್ವೀಪಗಳು ವಾಯುಗುಣಗಲಾಪಗಸ್ ದ್ವೀಪಗಳು ಸಸ್ಯ ಮತ್ತು ಪ್ರಾಣಿವರ್ಗಗಲಾಪಗಸ್ ದ್ವೀಪಗಳು ಇತಿಹಾಸಗಲಾಪಗಸ್ ದ್ವೀಪಗಳುಸಾಗರ

🔥 Trending searches on Wiki ಕನ್ನಡ:

ಸಿದ್ದಪ್ಪ ಕಂಬಳಿತಾಪಮಾನಮೊದಲನೆಯ ಕೆಂಪೇಗೌಡಕುಮಾರವ್ಯಾಸಭಾರತದ ಸರ್ವೋಚ್ಛ ನ್ಯಾಯಾಲಯಮೆಕ್ಕೆ ಜೋಳಎ.ಪಿ.ಜೆ.ಅಬ್ದುಲ್ ಕಲಾಂಗೋಲ ಗುಮ್ಮಟಸಂಭೋಗಮಜ್ಜಿಗೆಮುರುಡೇಶ್ವರಕೃಷಿಗಂಗ (ರಾಜಮನೆತನ)ಸಚಿನ್ ತೆಂಡೂಲ್ಕರ್ಲಸಿಕೆಶ್ಯೆಕ್ಷಣಿಕ ತಂತ್ರಜ್ಞಾನತ. ರಾ. ಸುಬ್ಬರಾಯಶಿವರಾಜ್‍ಕುಮಾರ್ (ನಟ)ಅಯೋಧ್ಯೆಕುತುಬ್ ಮಿನಾರ್ಚಿಕ್ಕಮಗಳೂರುರಂಗಭೂಮಿಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಲಕ್ಷ್ಮೀಶಕರ್ನಾಟಕದಲ್ಲಿ ಪಂಚಾಯತ್ ರಾಜ್ಗೋತ್ರ ಮತ್ತು ಪ್ರವರಸಮಾಜ ವಿಜ್ಞಾನವಾಲಿಬಾಲ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಎರಡನೇ ಮಹಾಯುದ್ಧಕೋಟ ಶ್ರೀನಿವಾಸ ಪೂಜಾರಿಒಂದನೆಯ ಮಹಾಯುದ್ಧನುಗ್ಗೆಕಾಯಿಶ್ರೀಧರ ಸ್ವಾಮಿಗಳುಇಂದಿರಾ ಗಾಂಧಿಕರ್ನಾಟಕದ ಜಾನಪದ ಕಲೆಗಳುಸಿದ್ದರಾಮಯ್ಯಮಣ್ಣುರಾಜ್ಯಸಭೆರೋಸ್‌ಮರಿಪ್ಯಾರಾಸಿಟಮಾಲ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನಿರುದ್ಯೋಗಸಂಖ್ಯೆವ್ಯಾಪಾರ ಸಂಸ್ಥೆಅಶ್ವತ್ಥಮರಸಂಗ್ಯಾ ಬಾಳ್ಯಾ(ನಾಟಕ)ಭಾರತದ ರಾಷ್ಟ್ರಪತಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಗಾಂಧಿ- ಇರ್ವಿನ್ ಒಪ್ಪಂದಭಾರತದ ಸಂವಿಧಾನ ರಚನಾ ಸಭೆರೇಡಿಯೋಪಠ್ಯಪುಸ್ತಕಮಾವುಸುಗ್ಗಿ ಕುಣಿತಹನುಮ ಜಯಂತಿಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀಕೃಷ್ಣದೇವರಾಯಚದುರಂಗ (ಆಟ)ಚಂದ್ರಶೇಖರ ಕಂಬಾರಕೃತಕ ಬುದ್ಧಿಮತ್ತೆರಮ್ಯಾವಿಕ್ರಮಾರ್ಜುನ ವಿಜಯಅಲಂಕಾರಬಸವ ಜಯಂತಿವಿರಾಟ್ ಕೊಹ್ಲಿಚಿತ್ರಲೇಖಅರಿಸ್ಟಾಟಲ್‌ಹೆಚ್.ಡಿ.ದೇವೇಗೌಡಶಾತವಾಹನರುಹಾರೆಮಹಾಭಾರತಪರೀಕ್ಷೆಭಾರತದ ಸಂಸತ್ತುದಿಕ್ಕುಚೋಮನ ದುಡಿ🡆 More