ಕಾರ್ತಿಕೇಯನು ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ ಹಿಂದೂ ದೇವತೆ, ಮತ್ತು ವಿಶೇಷವಾಗಿ ದಕ್ಷಿಣ ಭಾರತ , ಸಿಂಗಾಪೂರ್, ಶ್ರೀಲಂಕಾ, ಮಲೇಷ್ಯಾ ಹಾಗೂ ಮಾರೀಷಸ್ಗಳಲ್ಲಿ ಪ್ರಸಿದ್ಧವಾದ ದೇವರು.
ಆದರೆ ಶ್ರೀಲಂಕಾದಲ್ಲಿ, ಹಿಂದೂಗಳು ಮತ್ತು ಬೌದ್ಧ ಧರ್ಮೀಯರು ಇಬ್ಬರೂ ಕಾರ್ತಿಕೇಯನಿಗೆ ಮುಡುಪಾಗಿರುವ ಮತ್ತು ದೇಶದ ದಕ್ಷಿಣದಲ್ಲಿರುವ ಒಂದು ಅತ್ಯಂತ ಪವಿತ್ರ ಬೌದ್ಧ ಮತ್ತು ಹಿಂದೂ ಕ್ಷೇತ್ರವಾದ ಕತರಗಾಮಾ ದೇವಸ್ಥಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಹಾಗೆಯೆ ಮಲೇಷ್ಯಾದ ಪಿನಾಂಗ್, ಕ್ವಾಲಾಲಂಪೂರ್ನ ಚೀನೀ ಜನರೂ ಸಹ ಮುರುಗನ್ನನ್ನು ತಾಯ್ಪೂಸಾಮ್ನ ಅವಧಿಯಲ್ಲಿ ಪೂಜಿಸುತ್ತಾರೆ.
ಸುಬ್ರಹ್ಮಣ್ಯ ಸ್ವಾಮಿ | |
---|---|
ಯುದ್ಧ ಮತ್ತು ವಿಜಯದ ದೇವತೆ (ದೇವತೆಗಳ ಸೇನಾಧಿಪತಿ) | |
ಸಂಲಗ್ನತೆ | ದೇವ |
ನೆಲೆ | ಆರುಮುಖದಸ್ವಾಮಿ |
ಮಂತ್ರ | ಓಂ ಶರವಣ ಭವಾಯ ನಮಃ: |
ಆಯುಧ | ವೇಲಾಯುಧ |
ಸಂಗಾತಿ | ಶ್ರೀವಲ್ಲಿ and ದೇವಸೇನಾ |
ವಾಹನ | ನವೀಲು |
ಪಾರ್ವತಿಪುತ್ರನಾದ ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.
ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಕುರುಂಜಿಯಾಂಡವನ್, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು ಅತ್ಯುಚ್ಚಸ್ಥಾನ, ಪೂಜೆ ಸಲ್ಲುತ್ತದೆ. ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸನ ಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯಕ್ಷೆತ್ರ ಕೂಡಾ ಬಹಳ ಪ್ರಸಿದ್ದಿ ಪಡೆದಿದೆ.
This article uses material from the Wikipedia ಕನ್ನಡ article ಸುಬ್ರಹ್ಮಣ್ಯ ಸ್ವಾಮಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.