ಕರುಹಾಲೆ

ಕರುಹಾಲೆ: ಅಲ್ಮೇಸೀ ಕುಟುಂಬಕ್ಕೆ ಸೇರಿದ ಸಣ್ಣಗಾತ್ರದ ಮರ.

ಕರುಹಾಲೆ
ಕರುಹಾಲೆ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Rosales
ಕುಟುಂಬ:
Cannabaceae
ಕುಲ:
Trema
ಪ್ರಜಾತಿ:
T. orientalis
Binomial name
Trema orientalis
(L.) Blume
Synonyms
  • Celtis discolor Brongn.
  • C. guineensis Schum. & Thonn.
  • C. madagascariensis Bojer
  • C. orientalis L. (basionym)
  • C. rigida Blume
  • Sponia andaresa Comm. ex Lam.
  • S. argentea Planch.
  • S. commersonii Decne. ex Planch.
  • S. glomerata Hochst.
  • S. orientalis (L.) Decne.
  • S. wightii Planch.
  • Trema affinis (Planch.) Blume
  • T. africana Blume
  • T. commersonii (Decne. ex Planch.) Blume
  • T. grevei Baill.
  • T. grisea Baker
  • T. guineensis (Schum. & Thonn.) Ficalho
  • T. hochstetteri Engl.
  • T. nitens Blume
  • T. polygama Z.M.Wu & J.Y.Lin
  • T. velutina (Planch.) Blume
  • T. wightii Blume

ಇದರ ಶಾಸ್ತ್ರೀಯನಾಮ ಟ್ರೀಮ ಓರಿಯಂಟ್ಯಾಲಿಸ್. ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ತೇವಮಯ ಹಾಗೂ ಒಣಹವೆಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಲಕ್ಷಣಗಳು

ಪರ್ಯಾಯವಾಗಿ ಜೋಡಣೆಗೊಂಡಿರುವ ಹಾಗೂ ಗರಗಸದ ಹಲ್ಲಿನಂಥ ಅಂಚುಳ್ಳ ಎಲೆಗಳಿವೆ. ಎಲೆಗಳ ಬುಡ ಕೊಂಚ ಅಸಮವಾಗಿದೆ. ಎಲೆಯ ಅಲಗಿನ ಬುಡಭಾಗದಲ್ಲಿ ಪ್ರಮುಖವಾದ ಮೂರು ನಾಳಗಳಿವೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ಎಲೆಗಳ ಕಂಕುಳಲ್ಲಿ ಹುಟ್ಟುತ್ತದೆ. ಹೂಗಳು ಏಕಲಿಂಗಿಗಳು; ಹೆಣ್ಣು ಗಂಡು ಹೂಗಳು ಒಂದೇ ಮರದಲ್ಲಿರಬಹುದು ಅಥವಾ ಬೇರೆ ಬೇರೆ ಮರಗಳಲ್ಲಿರಬಹುದು. ಪುಷ್ಟಪತ್ರಗಳು ಹೂದಳಗಳು ಬೇರೆ ಬೇರೆಯಾಗಿಲ್ಲ; ಒಂದೇ ಬಗೆಯ ಪೆರಿಯಾಂತುಗಳಾಗಿ ರೂಪಿತವಾಗಿವೆ. ಇವುಗಳ ಸಂಖ್ಯೆ 4-5. ನೋಡಲು ಪುಷ್ಟಪತ್ರಗಳಂತಿವೆ. ಇವು ಗಂಡುಹೂಗಳಲ್ಲಿ ಬಹಳ ಪುಟ್ಟಗಾತ್ರದವಾಗಿವೆ. ಗಂಡುಹೂಗಳಲ್ಲಿ 4-5 ಕೇಸರಗಳೂ ಒಂದು ಬರಡು ಅಂಡಾಶಯವೂ (ಪಿಸ್ಪಿಲೋಡ್) ಇವೆ. ಹೆಣ್ಣುಹೂವಿನಲ್ಲಿ ಎರಡು ಕಾರ್ಪೆಲುಗಳಿಂದಾದ ಉಚ್ಚ ಸ್ಥಾನದ ಅಂಡಾಶಯವಿದೆ. ಶಲಾಕೆ ಎರಡು ಭಾಗವಾಗಿ ಕವಲೊಡೆದಿದೆ. ಅಂಡಕೋಶದಲ್ಲಿ ಒಂದೇ ಕೋಣೆಯೂ ಅದರೊಳಗೆ ಒಂದೇ ಅಂಡಕವೂ ಇವೆ. ಕಾಯಿ ಒಂದೇ ಬೀಜವನ್ನುಳ್ಳ ಅಷ್ಟಿಫಲ ಮಾದರಿಯದು.

ಉಪಯೋಗಗಳು

ಕರುಹಾಲೆ ಮರದ ಚೌಬೀನೆ ಕೆಂಪು ಮಿಶ್ರಿತ ಬೂದುಬಣ್ಣದ್ದಾಗಿದ್ದು ಬಹಳ ನಯವಾಗಿದೆ. ಬಂದೂಕಿನ ಮದ್ದಿನ ತಯಾರಿಕೆಗೆ ಬೇಕಾಗುವಂಥ ಇದ್ದಲನ್ನು ತಯಾರಿಸಲು ಇದು ಉತ್ತಮ ದರ್ಜೆಯ ಮರವೆಂದು ಹೆಸರಾಗಿದೆ. ಕೆಲವೆಡೆ ನೆರಳಿನ ಮರವಾಗಿಯೂ ಬೆಳೆಸುತ್ತಾರೆ.

ಛಾಯಾಂಕಣ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಕರುಹಾಲೆ ಲಕ್ಷಣಗಳುಕರುಹಾಲೆ ಉಪಯೋಗಗಳುಕರುಹಾಲೆ ಛಾಯಾಂಕಣಕರುಹಾಲೆ ಉಲ್ಲೇಖಗಳುಕರುಹಾಲೆ ಬಾಹ್ಯ ಸಂಪರ್ಕಗಳುಕರುಹಾಲೆಉತ್ತರ ಕನ್ನಡಜಿಲ್ಲೆಮರಶಿವಮೊಗ್ಗ

🔥 Trending searches on Wiki ಕನ್ನಡ:

ರಾಜಾ ರವಿ ವರ್ಮದಿಕ್ಕುಸಂಗೊಳ್ಳಿ ರಾಯಣ್ಣತುಮಕೂರುಹಲ್ಮಿಡಿಮೂಲಭೂತ ಕರ್ತವ್ಯಗಳುಬಂಗಾರದ ಮನುಷ್ಯ (ಚಲನಚಿತ್ರ)ರಾಮಾನುಜಕೆಳದಿ ನಾಯಕರುಕ್ರೀಡೆಗಳುಚಂಪೂಸರ್ಪ ಸುತ್ತುಉಪ್ಪಿನ ಸತ್ಯಾಗ್ರಹಜಿ.ಎಸ್.ಶಿವರುದ್ರಪ್ಪವೆಂಕಟೇಶ್ವರ ದೇವಸ್ಥಾನಹರ್ಯಂಕ ರಾಜವಂಶಚಂದ್ರಗುಪ್ತ ಮೌರ್ಯಗರುಡ ಪುರಾಣರತ್ನತ್ರಯರುಬೆರಳ್ಗೆ ಕೊರಳ್ಸಿದ್ದರಾಮಯ್ಯಭರತ-ಬಾಹುಬಲಿಚಂದ್ರಶೇಖರ ವೆಂಕಟರಾಮನ್ಈಡನ್ ಗಾರ್ಡನ್ಸ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಕರ ಸಂಕ್ರಾಂತಿಮಹಾಭಾರತಜ್ವಾಲಾಮುಖಿಕಾಲ್ಪನಿಕ ಕಥೆಛಂದಸ್ಸುಕನ್ನಡ ನ್ಯೂಸ್ ಟುಡೇಮಾಲ್ಡೀವ್ಸ್ಅಂತಿಮ ಸಂಸ್ಕಾರ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದ ಬುಡಕಟ್ಟು ಜನಾಂಗಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗೋಡಂಬಿವೇದವ್ಯಾಸತೀರ್ಥಹಳ್ಳಿಕೈಗಾರಿಕಾ ಕ್ರಾಂತಿನಿರುದ್ಯೋಗಸಂವತ್ಸರಗಳುಜಂಟಿ ಪ್ರವೇಶ ಪರೀಕ್ಷೆಗಾಂಡೀವಜಲ ಮಾಲಿನ್ಯಜೀವನ ಚೈತ್ರಗಸಗಸೆ ಹಣ್ಣಿನ ಮರಭಾರತದ ಸಂವಿಧಾನ ರಚನಾ ಸಭೆಬಿದಿರುಪೊನ್ನಗುಣ ಸಂಧಿಉತ್ತರ ಕರ್ನಾಟಕಎ.ಪಿ.ಜೆ.ಅಬ್ದುಲ್ ಕಲಾಂರೋಸ್‌ಮರಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆದೂರದರ್ಶನದ.ರಾ.ಬೇಂದ್ರೆಕಂದಮೈಸೂರು ಅರಮನೆಕಾನೂನುಗಾಳಿಪಟ (ಚಲನಚಿತ್ರ)ಜಾಗತೀಕರಣದೆಹಲಿಯ ಇತಿಹಾಸಮಾನವನ ಚರ್ಮಸಮುಚ್ಚಯ ಪದಗಳುತಲಕಾಡುಮೊರಾರ್ಜಿ ದೇಸಾಯಿಭಾರತದ ಪ್ರಧಾನ ಮಂತ್ರಿಕರ್ನಾಟಕ ಲೋಕಸೇವಾ ಆಯೋಗಕಾರ್ಮಿಕ ಕಾನೂನುಗಳುಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಬ್ರಾಹ್ಮಣಸೌರಮಂಡಲಆರೋಗ್ಯಮೈಗ್ರೇನ್‌ (ಅರೆತಲೆ ನೋವು)ಶಕ್ತಿಧರ್ಮಸ್ಥಳಕವಿರಾಜಮಾರ್ಗ🡆 More