ಓ. ಪಿ. ನಯ್ಯರ್

(೧೬ ಜನವರಿ, ೧೯೨೬-೨೮ ಜನವರಿ, ೨೦೦೭)

ಚಿತ್ರ:OPNayyar.jpg
'ಓಂಕಾರ ಪ್ರಸಾದ್‌ ನಯ್ಯರ್‌‎'

'ಓಂಕಾರ ಪ್ರಸಾದ್ ನಯ್ಯರ್', ಪ್ರಸಿದ್ಧ ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್‌ ಎಂದೇ ಪ್ರಸಿದ್ಧರು. ಮತ್ತೆ ಕೆಲವರು ಅವರನ್ನು ಒಪಿಎಂದು ಸಂಬೋಧಿಸುತ್ತಿದ್ದರು. ಬೊಂಬಾಯಿನ ಚಿತ್ರರಂಗದ ಮರೆಯಲಾರದ ಗೀತೆ, 'ಬಾಂಬೆ ಮೆರಿ ಜಾನ್' ಒ.ಪಿ.ನಯ್ಯರ್‌, ರವರ ಕೊಡುಗೆ. ಸೂಟು ಬೂಟಿನ, ಫೆಲ್ಟ್ ಹ್ಯಾಟ್, ಜೊತೆ ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ ವಾಕಿಂಗ್ ಸ್ಟಿಕ್ ಹಿಡಿದಿರುತ್ತಿದ್ದ, ಖ್ಯಾತ ಸಂಗೀತಜ್ಞ ಒ.ಪಿ.ನಯ್ಯರ್. 'ರಾಣೀ ನಖ್ವಿ 'ಯವರ ಮನೆಯಲ್ಲಿ ಶನಿವಾರ ೨೭ ಜನವರಿ, ೨೦೦೭ ಮಧ್ಯರಾತ್ರಿ , ೩-೩೦ ಕ್ಕೆ ಬಾತ್ ರೂಮ್ ಒಳಗೆ ಹೊದಾಗ, ಕುಸಿದು ಬಿದ್ದರು. ಡಾಕ್ಟರು ಬರುವುದರೊಳಗೆ, ಅವರ ಪ್ರಾಣಪಕ್ಷಿ ಹೊರಟುಹೋಗಿತ್ತು. ೨೮ ರ ಆದಿತ್ಯವಾರ ಬೆಳಿಗ್ಯೆ ೧೦-೩೦ ಕ್ಕೆ ಅವರ ಅಂತಿಮ ದರ್ಶನಕ್ಕಾಗಿ ಬಾಲೀವುಡ್ಡಿನ ಪ್ರಮುಖರಲ್ಲದೆ, ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೇಂದ್ರ ಕೃಷಿ ಮಂತ್ರಿ, ಶರದ್ ಪವಾರ್, ಅನುಕಪೂರ್ ಮತ್ತು ಅನೇಕ ಹಿತೈಷಿಗಳು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಂದಿದ್ದರು. ಜನವರಿ ತಿಂಗಳ ೧೬ ರಂದು, ಅವರು ತಮ್ಮ ೮೧ ನೆಯ, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ೧೫ ವರ್ಷಗಳ ಹಿಂದೆ, ತಮ್ಮ ಚರ್ಚ್ ಗೇಟ್ನ ನಿವಾಸದಿಂದ, ಪರಿವಾರದಿಂದ ಅಗಲಿ, ನೇರವಾಗಿ ವಸೈಗೆ ಹೊದರು. ಮತ್ತೆ ಇತ್ತೀಚೆಗೆ, ಅಲ್ಲಿಂದ ಥಾನೆಯ ಪವಾರ್ ನಗರದಲ್ಲಿ ವಾಸ್ತವ್ಯ ಹೂಡಿದ್ದರು. 'Time pass' ಗೊಸ್ಕರ ಅವರು ಬಾಲ್ಯದಲ್ಲಿ ಕಲಿತಿದ್ದು, ಪ್ರಾಕ್ಟೀಸ್ ಮಾಡಲು ಪುರುಸೊತ್ತಿಲ್ಲದೆ ಬಿಟ್ಟಿದ್ದ ಹೊಮಿಯೊಪತಿಪ್ರಾಕ್ಟೀಸ್ , ಅವರಿಗೆ ಕೊನೆಯ ದಿನಗಳಲ್ಲಿ ಉಪಯೋಗಕ್ಕೆ ಬಂದಿತ್ತಂತೆ.

ಜನನ, ಹಾಗೂ ಬಾಲ್ಯದ ದಿನಗಳು

ಓಂಕಾರ ಪ್ರಸಾದ್ ನಯ್ಯರ್ ಜನಿಸಿದ್ದು ಅವಿಭಾಜ್ಯ ಭಾರತದ ಅಂಗವಾಗಿದ್ದ, ಈಗ ಪಾಕಿಸ್ತಾನದಲ್ಲಿರುವ ಲಾಹೋರ್‌ನಲ್ಲಿ ೧೬, ಜನವರಿ, ೧೯೨೬ರಂದು. ಭಾರತ ವಿಭಜನೆಗೊಂಡ ನಂತರ ಅಮೃತಸರಕ್ಕೆ ಅವರ ಕುಟುಂಬ ವಲಸೆ ಬಂತು. ಆಗಿನಕಾಲದ ಲಾಹೋರಿನ ಚಲನಚಿತ್ರೊದ್ಯಮದ ದಿಗ್ಗಜ ಎಂದು ಪ್ರಖ್ಯಾತರಾದ, 'ದಲ್ ಸುಖ್ ಪಂಚೊಲಿ' ಅವರಿಗೆ ಮೊಟ್ಟಮೊದಲ ಅವಕಾಶ ಕೊಟ್ಟರು. ೧೯೪೯ ರಲ್ಲಿ ನಯ್ಯರ್‌ ಮುಂಬೈಗೆ ಬಂದರು.ಇದಕ್ಕೂ ಮುನ್ನ ಅವರು 'ಅಮೃತಸರದ ಆಕಾಶವಾಣಿ'ಯಲ್ಲಿ ಉದ್ಯೋಗಿಯಾಗಿದ್ದರು

ಅಪರೂಪದ ಸಂಗೀತಕಾರ

ಕನೀಜ್‌ ಚಿತ್ರಕ್ಕೆ ೧೯೪೯ರಲ್ಲಿ ಸಂಗೀತ ನೀಡುವ ಮೂಲಕ ಇವರ ಸಂಗೀತ ವೃತ್ತಿ ಜೀವನ ಆರಂಭವಾಯಿತು. ಸುಮಾರು ಎರಡೂವರೆ ದಶಕಗಳಲ್ಲಿ ೬೯ ಚಿತ್ರಗಳಿಗೆ ಸಂಗೀತ ನೀಡಿ, ಚಿತ್ರರಸಿಕರ ಹೃದಯವನ್ನು ಸೂರೆಗೊಂಡರು.ಕೆ.ಕೆ.ಕಪೂರ್ ಎಂಬ 'ಡಿಸ್ಟ್ರಿಬ್ಯೂಟರ್', ಅವರನ್ನು ಆಗಿನಕಾಲ ಪ್ರಖ್ಯಾತ ಚಲನಚಿತ್ರ ನಟ, ನಿರ್ದೇಶಕ, ಗುರುದತ್ ಗೆ ಪರಿಚಯಿಸಿದರು. ಗುರುದತ್ ಮತ್ತು ಅವರ ಪತ್ನಿ ಗೀತಾ, ತಮ್ಮ 'ಆರ್ ಪಾರ್,' ಚಿತ್ರದ ತಯಾರಿಕೆಯಲ್ಲಿ ಗಡಿಬಿಡಿಯಾಗಿದ್ದರು. ೨೫ ವರ್ಶದ ತೆಳ್ಳಗೆ, ಉದ್ದಕ್ಕಿದ್ದ ನಯ್ಯರ್, ಗುರುದತ್ತರ ಮೇಲೆ ಹೆಚ್ಚಿನ ಪರಿಣಾಮ ಮಾಡಲಿಲ್ಲ. ಆದರೆ ಗೀತಾರವರಿಗೆ ಅವರ ಮೇಲೆ ನಂಬಿಕೆ ಇತ್ತು. ಒ. ಪಿ.ನಯ್ಯರ್, ಗೀತಾದತ್, ಮತ್ತು ಗುರುದತ್, 'ತ್ರಯರು', ಒಟ್ಟಿಗೆ ಶ್ರಮಿಸಿ, ಸಿ.ಐ.ಡಿ, ಆರ್ ಪಾರ್ ಮತ್ತು ಮಿಸ್ಟರ್ ಅಂಡ್ ಮಿಸೆಸ್- ೫೫ ಚಿತ್ರಗಳಿಗೆ ಸಂಗೀತ ಒದಗಿಸಿದರು. ಜನಪ್ರಿಯ ಗಾನಗಳಾದ, 'ಕಹಿಪೆ ನಿಗಾಹೆ ಕಹಿ ಪೆ ನಿಶಾನ, 'ಬೂಝ್ ಮೆರ ಕ್ಯಾ ಗಾಂವ್ ರೆ', 'ಏಲೊ ಮೈ ಹಾರಿ ಪಿಯ', ಮತ್ತೆ 'ಬಾಂಬೆ ಮೇರಿ ಜಾನ್', 'ಶಂಶಾದ್ ಬೇಗಮ್, ಗೀತಾದತ್ ಜೊತೆಗೂಡಿ, 'ಮಧುರ ಸಂಗೀತ ಛಾಪ' ನ್ನೇ ಮೂಡಿಸಿದರು. 'ಹೌರಾ ಬ್ರಿಡ್ಜ್' ನ 'ಮೇರಾ ನಾಮ್ ಛಿ ಛಿನ್ ಛೂಗಾನವನ್ನು ಅಂದಿನ ಹೊಸ ಗಾಯಕಿ ಗೀತಾದತ್ ಹಾಡಿ ಜನಪ್ರಿಯರಾದರು.

ಹೊಸ ಪ್ರತಿಭೆಗಳನ್ನು ಗುರುತಿಸಿ, ಬೆಳೆಸಿದರು

ನಯ್ಯರ್ ಹದ್ದಿನ ಕಣ್ಣಿಗೆ, ಶ್ರೇಶ್ಟ ಪ್ರತಿಭೆಗಳು ಕ್ಷಣಾರ್ಧದಲ್ಲಿ ದೊರೆಯುತ್ತಿದ್ದರು. ಇಂದಿನ ಪ್ರಖ್ಯಾತ ಹೆಸರುಗಳಾದ ಆಶಾ ಭೋಂಸ್ಲೆ, ಮಹಮದ್‌ ರಫಿ,ಗೀತಾದತ್‌ ಮುಂತಾದವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಅವರದು. 'ನ್ಯೂ ಥಿಯೆಟರ್'ನ, ರಾಯ್ಚಂದ್ ಬೊರಾಲಾಲ್ ನನ್ನು ಗಮನಿಸಿ ತಮ್ಮ ಗೀತೆಗಳಿಗೆ ಒದಗಿಸಿದ 'ಘೋಡಾ ಗಾಡಿ' ಶಬ್ದದ ಮ್ಯುಸಿಕ್, ಎಲ್ಲರ ಮನವನ್ನು ತಣಿಸಿತು. ಅವರ ತಲೆಯಲ್ಲಿ ಒಂದು ಹೊಸ ಗರಿ ಮೂಡಿಸಿತು. ಮುಂದೆ ಅವರಿಗೆ ಸಿಕ್ಕ 'ಆಫರ್' ಗಳು ಅನೇಕ. ೧. ಭಾಗಂಭಾಗ್ ೨. ಮಿಸ್ಟರ್ ಲಂಬೂ ೩. ಜಾನಿವಾಕರ್ ೪. ಕರ್ಟೂನಿಸ್ಟ್ ಎಮ್. ಎ ; ೫. ಕಲ್ಪನ, ೬. ರಾಗಿಣಿ.

ನಯಾದೌರ್, ಅತ್ಯಂತ ಹೆಸರುಮಾಡಿದ ಚಿತ್ರಗಳಲ್ಲೊಂದು

೧೯೫೪ ರಲ್ಲಿ 'ಬಿ. ಆರ್ ಚೋಪ್ರ' ಲಾಂಛನದಡಿಯಲ್ಲಿ ಮಾಡಿದ 'ನಯಾದೌರ್' ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಹೊಸ ಗಾಯಕಿ, 'ಅಶಾ' ಮಾಡಿದ ಮೋಡಿ, ಲತಾಮಂಗೇಶ್ಕರ್ ಕೋಕಿಲ ಕಂಠವಿಲ್ಲದೆ, ತಯಾರಾದ ಚಿತ್ರಗಳು, ಜಯಭೇರಿಹೊಡೆದು 'Box office hit' ಅದವು. 'ಯಹಿ ಒಹ್ ಜಗಾಹ್ ಹೈ', 'ಬಲಮ ಖುಲಿ ಖುಲಿ ಹವಾಮೆ', 'ಛೋಟಾಸ ಬಾಲಮ', 'ರಾತೋಂ ಕೊ ಚೋರಿ ಚೋರಿ', 'ಜಲೆ ಮೇರಾ ಜಿಯಾರ', 'ಜರ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', 'ಜಾಯಿಯೇ ಆಪ್ ಕಹಾಂ ಜಾಯೇಂಗೆ', 'ಚೈನ್ಸ್ ಸೆ ಹಮಕೊ ಕಭಿ, ಆಪ್ ನೆ ಜೀನಾ ನ ದಿಯ', ಇತ್ಯಾದಿ. ಇವರ ಗುಂಪಿಗೆ ರಫಿಯವರು ಸೇರಿ ಅನೇಕ ಹಿಟ್ ಹಾಡುಗಳನ್ನು ಹಾಡಿದರು.

ಶಮ್ಮಿ ಕಪೂರ್, ನಟನಿಗಾಗಿ, ವಿಶೇಷ ಕಾಳಜಿವಹಿಸುತ್ತಿದ್ದರು

ಸ್ವಲ್ಪ ಕಾಲ ಸುಮ್ಮನಿದ್ದ ನಯ್ಯರ್, ನಟ ಚತುರ ಶಮ್ಮೀ ಕಪೂರ್, ಚಿತ್ರಗಳಿಗೆ ಹೇಳಿಮಾಡಿಸಿದಂತಹ, ಸಂಗೀತ ನೀಡಿ ಒಂದು ವಿಕ್ರಮವನ್ನೇ ಸಾಧಿಸಿದರು. ಉದಾಹರಣೆಗೆ 'ತುಮ್ಸಾ ನಹಿ ದೇಖ', 'ಕಾಶ್ಮೀರ್ ಕಿ ಕಲಿ' 'ದೀವಾನ ಹುವ ಬಾದಲ್' ಇತ್ಯಾದಿ. ವಿಶೇಷವೆಂದರೆ ನಯ್ಯರ್ Big banner ನಿರ್ಮಾಪಕರನ್ನು ಅರಸಿಕೊಂಡು ಹೊಗಲಿಲ್ಲ. ಬಿ. ಆರ್. ಚೋಪ್ರರವರು ಅವರನ್ನು ಪುನಃ ಆಹ್ವಾನಿಸಲಿಲ್ಲ. 'ಎಹ್ ರಾತ್ ಫಿರ್ ನ ಆಯೆಗಿ', 'ಮೆರೆ ಸನಮ್', 'ಏಕ್ ಮುಸಾಫಿರ್ ಏಕ್ ಹಸೀನ', 'ಬಹಾರೆ ಫಿರ್ ಭೀ ಆಯೆಗಿ' ಕೇವಲ ಸಂಗೀತದಿಂದ ಜನರನ್ನು ರಂಜಿಸಿದವು. ಆಗ ನಯ್ಯರ್ ರವರೂ ಸ್ವಲ್ಪ ಮೂಡಿ, 'ಘಮಂಡಿ'ಗಳಗಿದ್ದರು. ಚಿತ್ರನಿರ್ಮಾಪಕರ ಬಳಿ ಏರಿದ ಮಾತಿನಲ್ಲಿ ಜಗಳವಾಡಿದ್ದೂ ಉಂಟು.

ದೇವಾನಂದ್, ಅವರ ಪ್ರಿಯನಟ ರಲ್ಲೊಬ್ಬರು

೧೯೫೯-೬೦ ರಲ್ಲಿ ರಾಜ್ ಕಪೂರರ 'ದೊ ಉಸ್ತಾದ್' ಮತ್ತು ದೇವ್ ಆನಂದರ 'ಜಾಲೀನೋಟ್'ಗೆ ಸಂಗೀತ ಕೊಟ್ಟಿದ್ದು "ಬಾಕ್ಸ ಆಫೀಸ್" ಮೇಲೆ ಹೆಚ್ಚಿನ Impact ಆಗಲಿಲ್ಲ. ರಫಿಯವರು ಸಿಗುವುದು ಕಷ್ಟವಾಗಿದ್ದರಿಂದ ಅವರು ಮಹೇಂದ್ರ ಕಪೂರ್ ರವರನ್ನು ತೆಗೆದುಕೊಂಡು 'ಲಾಖೊಂನ್ ಹೈ ಯಹಾಂ ದಿಲ್ ವಾಲೆ', ಕಿಶೋರ್ ಕುಮಾರ್ ರವರಿಂದ 'ತು ಔರೋನ್ ಕಿ ಕ್ಯೊಂ ಹೊ ಗಯಿ.' ಗೀತೆಗಳನ್ನು ಹಾಡಿಸಿದರು.

ಆರ್.ಡಿ.ಬರ್ಮನ್, ಪಾದಾರ್ಪಣೆಯ ನಂತರ, ಒಪಿ ರವರ ಸಂಗೀತದಲ್ಲಿ ಇಳಿಮುಖ

೨೦ ವರ್ಷಗಳಕಾಲ 'ಅನಭಿಶಕ್ತದೊರೆ'ಯಂತೆ ಮೆರೆದು, ತಮ್ಮ ಅಮೋಘ ಸಂಗೀತದ ಸುಧೆಯನ್ನು ಕೊಟ್ಟು ಅಭಿಮಾನಿಗಳನ್ನು ತಣಿಸಿದ್ದರು. ಆರ್.ಡಿ.ಬರ್ಮನ್, ಆದರೆ, ೧೯೭೦ ರಲ್ಲಿ ಬಿರುಗಾಳಿಯಂತೆ ನುಗ್ಗಿ, ಸಿನಿಮಾ ಸಂಗೀತದಲ್ಲಿ ಮತ್ತೊಂದು ಹೊಸ ತಿರುವನ್ನು ತಂದರು. ೧೯೯೦ ನಲ್ಲಿ 'ಅಂದಾಝ್ ಅಪ್ನ ಅಪ್ನ,' ದಿಂದ ಮತ್ತೆ ಮೇಲೆ ಬರಲು ಯತ್ನಿಸಿದರು. ಆಗಲಿಲ್ಲ. ಕ್ರಮೇಣ ಅವರು ಮೂಲೆ ಸೇರಬೇಕಾಯಿತು. ೧೯೯೨ ರಲ್ಲಿ 'ನಿಸ್ಚಯ್' ಎಂಬ ಚಿತ್ರಕ್ಕೆ ಸಂಗೀತ, 'ಬಾಕ್ಸ್ ಆಫೀಸ್' ಮೇಲೆ ಅವರ ಒ.ಪಿ 'ಛಾಪ'ನ್ನು ಮೂಡಿಸಲು ಅಸಮರ್ಥವಾಯಿತು. ಇದರಲ್ಲಿ ಸಲ್ಮಾನ್ ಖಾನ್, ಕರೀಷ್ಮ ಕಪೂರ್, ನಟಿಸಿದ್ದರು.

ಅಂತಿಮ ದಿನಗಳು

ಜನವರಿ ೨೬ ರಂದು ಮುಂಬೈನ ಮಾಟುಂಗಾ ದಲ್ಲಿನ, ಮೈಸೂರು ಅಸೋಸಿಯೇಷನ್ನ ಭವ್ಯ ಸಭಾಂಗಣದಲ್ಲಿ, [City N.G.O] 'ದೇಶ ಸೇವಾ ಸಮಿತಿ'ಯವರು ನಯ್ಯರ್ ಅವರ ಗೀತೆಗಳನ್ನು ಮೆಲುಕುಹಾಕಲು 'ಫಿರ್ ವಹಿ ದಿಲ್ ಲಾಯಾ ಹೂಂ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಸ್ವಸ್ಥರಾಗಿದ್ದರೂ ನಯ್ಯರ್ ಥಾಣೆಯಿಂದ ಬಂದು ಪಾಲ್ಗೊಂಡರು. 'ಥಂಡಿ ಹವ ಕಾಲಿಘಟ' ಎಂಬ ಹಾಡನ್ನು 'ಬಿನಾ ದೇಸಾಯ್' ರವರು ಹೇಳಿದಾಗ, 'ನಯ್ಯರ್' ಎದ್ದು ನಿಂತು, "ನಿಮ್ಮ ಹಾಡಿನಲ್ಲಿ ಸ್ವಲ್ಪ 'Punch' ತುಂಬಿ ಹಾಡಿ" ಎಂದು ಸಲಹೆ ಮಾಡಿದರು. 'Autograph' ಕೇಳಿದ ಅಭಿಮಾನಿಗಳಿಗೆ ಅವರು ಸಹಕರಿಸಲಿಲ್ಲ. ಅವರನ್ನು ಹೊರಗೆ ಕರೆದುಕೊಂಡುಬಂದ ವರದಿಗಾರನಿಗೆಅವರು "ಒಂದು ಪೆಗ್, ಸ್ಕಾಚ್ ವಿಸ್ಕಿ ಸಿಗುತ್ತದೆಯೆ" ? ಎಂದು ವಿಚಾರಿಸಿದರು. ಕೊಡಲು ಸಧ್ಯವಾಗದಿದ್ದಾಗ, ಅ ಬಗ್ಗೆ ತಿಳಿಸಿ ಹೇಳಿದಾಗ, ಅವರು, "May be some other time " ಎಂದರು. ಅದರೆ ಆ ದಿನ ಬರವುದೆಂದು ? ಸನ್ಮಾನ ಮಾಡಿದಾಗ, 'ನಾನು ಸ- ರೆ- ಗ- ಮ-ಕೂಡ ಕಲಿತಿರಲಿಲ್ಲ. ನನ್ನದೇನಿದೆ ? ' ಎಲ್ಲಾ ಭಗವಾನ್ ಕಿ ಮೆಹರ್ ಬಾನಿ' ಎಂದು ಮಾತಿನ ಸುರುಳಿಯನ್ನು ತಳ್ಳಿಹಾಕಿದರು.

ಮನೆಯಲ್ಲಿ ಮಾನಸಿಕ ಶಾಂತಿಯಿರಲಿಲ್ಲ

ದಕ್ಷಿಣಭಾರತದ ತೆಲುಗು 'ನೀರಾಜನಂ' ಚಿತ್ರಕ್ಕೆ ಅವರು ಹಾಡುಗಳಿಗೆ ಸಂಗೀತ ಸಂಯೋಜಿಸಿದರು. ಅವರ ಇನ್ನೊಂದು ಚಿತ್ರ ೧೯೯೪ ರಲ್ಲಿ ಪ್ರಭಾವ ಕಳೆದುಕೊಂಡಿದ್ದನ್ನು ಮನಗಂಡು, ತಮ್ಮ ಪ್ರಯತ್ನಗಳಿಗೆ ಮಂಗಳ ಹಾಡಿದರು. ಅವರ ಕಾರ್ಯಕ್ಷೇತ್ರ ಏನಿದ್ದರು ಎಳೆಯ ಗಾಯಕರಿಗೆ ಚಿತ್ರಸಂಗೀತದಲ್ಲಿ Talent shows, TV shows,ಗಳಲ್ಲಿ ಬಹುಮಾನ ವಿತರಣೆ ಮಾಡುವ ಕೆಲಸಕ್ಕೆ ಮಾತ್ರ ಸೀಮಿತವಾಗಿತ್ತು. ಅವರ ಜೀವನ ದುಃಖಾಂತ್ಯದಲ್ಲೇ ಕೊನೆಗೊಳ್ಳುತ್ತಿರುವುದನ್ನು ಗಮನಿಸಿ ಬಹಳ ನೊಂದರು. ನನ್ನ ಮರಣ ವಾರ್ತೆಯನ್ನು ನನ್ನ ಪರಿವಾರದವರಿಗೆ ದಯಮಾಡಿ ತಿಳಿಸಬೇಡಿ' ಎಂದು ತಮ್ಮ ಆಪ್ತಸ್ನೇಹಿತರನ್ನು ಕೇಳಿಕೊಂಡಿದ್ದರು. ಇದರಿಂದ ಅವರ ಮಾನಸಿಕ ಸ್ಥಿತಿ, ತುಮುಲಗಳು ತಿಳಿದು ಬರುತ್ತವೆ. ( ಹೆಂಡತಿ, ೩ ಹೆಣ್ಣುಮಕ್ಕಳು, ಒಬ್ಬ ಮಗ) ತಮ್ಮ ಈ ಅಂತಿಮ ಇಚ್ಛೆಯನ್ನು ಗೆಳೆಯರಿಗೆ ತಿಳಿಸಿದಾಗ ಅವರಿಗೆ shock ಆಯಿತು.

ಚಲನಚಿತ್ರ ಸಂಗೀತದ ವಿವರಗಳು

ಒಟ್ಟು ೬೯ ಚಲನಚಿತ್ರಗಳಲ್ಲಿ ಅವರು ಸಂಗೀತ ಹೊಂದಿಸಿದ್ದಾರೆ.ಅವುಗಳ ಸಂಖ್ಯೆ ಹೀಗಿದೆ :

  • ೧೯೪೯ ನಲ್ಲಿ- ೧,
  • ೧೯೫೨ ನಲ್ಲಿ- ೨,
  • ೧೯೫೩ ನಲ್ಲಿ- ೧,
  • ೧೯೫೪ ರಲ್ಲಿ- ೩,
  • ೧೯೫೫ ನಲ್ಲಿ- ೬,
  • ೧೯೫೭ ರಲ್ಲಿ -೭,
  • ೧೯೫೮ ರಲ್ಲಿ- ೯,
  • ೧೯೫೯ ರಲ್ಲಿ- ೧,
  • ೧೯೬೦ ರಲ್ಲಿ-, ೪,
  • ೧೯೬೧ ನಲ್ಲಿ- ೨,
  • ೧೯೬೩, ೧೯೬೪ ೧೯೬೫ ರಲ್ಲಿ ಒಂದೊಂದು.
  • ೧೬೬- ೪,
  • ೧೯೬೭- ೨,
  • ೧೯೬೮- ೫,
  • ೧೯೬೯- ೨,
  • ೧೯೭೧-೧,
  • ೧೯೭೨-೦,
  • ೧೯೭೩ ಹಾಗೂ ೧೯೭೪ ರಲ್ಲಿ-೧,
  • ೧೯೭೮, ೧೯೭೯, ೧೯೮೦, ೧೯೯೨, ೧೯೯೪, ೨೦೦೦ ಒಂದೊಂದು.
  • ಒಟ್ಟು : ೬೯ ಚಿತ್ರಗಳು.

'ಲತಾ'ರವರು ಹೇಳಿದಂತೆ 'ಒ.ಪಿ ನಯ್ಯರ್' ರವರ ಹಾಡುಗಳನ್ನು ಕೆಲವೇ ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದು. ಚೈತನ್ಯಮಯ, ಕಿವಿಗೆ ಇಂಪು, ಮನಸ್ಸಿಗೆ ತಂಪು ; ಎಷ್ಟು ಕೇಳಿದರೂ ಬೇಸರವಾಗದ ಅಬ್ಬರವಿಲ್ಲದ ಹಿತವಾದ ಸಂಗೀತ.

ಒ.ಪಿ.ನಯ್ಯರ್ ರವರ ಚಿತ್ರದಲ್ಲಿ ಅಳವಡಿಸಲಾಗಿದ್ದ ಕೆಲವು ಅತ್ಯಂತ ಜನಪ್ರಿಯ ಚಿತ್ರಗೀತೆಗಳು

೧. ೧೯೫೪, 'ಜಾನೆ ಕಹಾ ಮೇರಾ, ಜಿಗರ್ ಗಯಾ ಜಿ', ಮತ್ತು 'ಯೆ ಲೊ ಮೈನೆ ಹಾರಿ, ಪಿಯ', 'ಆರ್ ಪಾರ್'-ಗೀತಾದತ್, 'ಬಾಬೂಜಿ ಧೀರೆ ಚಲ್ನ'- ಗೀತಾದತ್ 6, 'ಥಂಡಿ ಹವ', ಗೀತಾದತ್.

೨. ೧೯೫೫, 'ಬೂಝ್ ಮೆರಾ ಕ್ಯಾ ಗಾವ್ ರೆ', ಗೀತಾದತ್.

೩. ೧೯೫೭, 'ಮಾಂಗ ಕೆ ಸಾಥ ತುಮ್ಹಾರಾ', 'ಉದೆ ಜಬ್ ಜಬ್ ಝುಲ್ಫೆ ತೆರಿ', 'ಯಹ್ ದೇಶ್ ಹೈ ವೀರ್ಜವಾನೋ ಕಾ', ['ನಯಾ ದೌರ್'] ರಫಿ/ಆಶ .[೩]

೪. ೧೯೫೮, 'ಮೇರಾ ನಾಮ್, ಛೀನ್ ಛೀನ್ ಛೂ',('ಹೌರಾ ಬ್ರಿಡ್ಜ್') / ಗೀತಾದತ್.

೫. ೧೯೬೦, 'ದೇಖೊ ಕಸಮ್ ಸೆ, ದೇಖೊ ಕಸಮ್ ಸೆ' ('ತುಮ್ ಸಾ ನಹಿ ದೇಖ') 'ತುಮ್ಸಾ ನಹಿ ದೇಖ' -ರಫಿ.

೬. ೧೯೬೪, 'ಯೆಹ್ ಚಾಂದ್ ಸ ರೊಶನ್ ಚೆಹರಾ' ('ಕಾಶ್ಮೀರ್ ಕಿ ಕಲಿ') / ರಫಿ .

೭. ೧೯೬೮, 'ಆವೋ, ಹುಝೂರು ತುಮಕೊ', ('ಕಿಸ್ಮತ್') / ಆಶ.

೮. ೧೯೭೩, 'ಚೈನ್ ಸೆ ಹಮಕೊ ಕಭಿ', 'ಆಪ್ ನೆ ಜೀನೆ ನ ದಿಯ', ('ಪ್ರಾಣ್ ಜಾಯೆ ಪರ್ ವಚನ್ ನ ಜಾಯೆ'), ಆಶ.

೯. 'ಯೆಹ್ ಬಾಂಬೆ ಮೆರಿ ಜಾನ್' - ರಫಿ/ ಗೀತಾದತ್.

೧೦. 'ಬಹುತ್ ಶುಕರಿಯ ಬಡಿ ಮೆಹರಬಾನಿ'- 'ಎಕ್ ಮುಸಾಫಿರ್, ಏಕ್ ಹಸೀನ' - ರಫಿ/ಅಶ

೧೧. 'ಇಶಾರೊಂ ಸೆ ಇಶಾರೊಂ ಮೆ'- ರಫಿ/ಅಶ.

೧೨. 'ಏಕ್ ಪರದೇಶಿ ಮೇರ ದಿಲ್ ಲೆಗಯಾ'- 'ಫಾಗುನ್' -ರಫಿ/ ಆಶ.

Tags:

ಓ. ಪಿ. ನಯ್ಯರ್ ಜನನ, ಹಾಗೂ ಬಾಲ್ಯದ ದಿನಗಳುಓ. ಪಿ. ನಯ್ಯರ್ ಅಪರೂಪದ ಸಂಗೀತಕಾರಓ. ಪಿ. ನಯ್ಯರ್ ಹೊಸ ಪ್ರತಿಭೆಗಳನ್ನು ಗುರುತಿಸಿ, ಬೆಳೆಸಿದರುಓ. ಪಿ. ನಯ್ಯರ್ ನಯಾದೌರ್, ಅತ್ಯಂತ ಹೆಸರುಮಾಡಿದ ಚಿತ್ರಗಳಲ್ಲೊಂದುಓ. ಪಿ. ನಯ್ಯರ್ ಶಮ್ಮಿ ಕಪೂರ್, ನಟನಿಗಾಗಿ, ವಿಶೇಷ ಕಾಳಜಿವಹಿಸುತ್ತಿದ್ದರುಓ. ಪಿ. ನಯ್ಯರ್ ದೇವಾನಂದ್, ಅವರ ಪ್ರಿಯನಟ ರಲ್ಲೊಬ್ಬರುಓ. ಪಿ. ನಯ್ಯರ್ ಆರ್.ಡಿ.ಬರ್ಮನ್, ಪಾದಾರ್ಪಣೆಯ ನಂತರ, ಒಪಿ ರವರ ಸಂಗೀತದಲ್ಲಿ ಇಳಿಮುಖಓ. ಪಿ. ನಯ್ಯರ್ ಅಂತಿಮ ದಿನಗಳುಓ. ಪಿ. ನಯ್ಯರ್ ಮನೆಯಲ್ಲಿ ಮಾನಸಿಕ ಶಾಂತಿಯಿರಲಿಲ್ಲಓ. ಪಿ. ನಯ್ಯರ್ ಚಲನಚಿತ್ರ ಸಂಗೀತದ ವಿವರಗಳುಓ. ಪಿ. ನಯ್ಯರ್ ಒ.ಪಿ.ನಯ್ಯರ್ ರವರ ಚಿತ್ರದಲ್ಲಿ ಅಳವಡಿಸಲಾಗಿದ್ದ ಕೆಲವು ಅತ್ಯಂತ ಜನಪ್ರಿಯ ಚಿತ್ರಗೀತೆಗಳುಓ. ಪಿ. ನಯ್ಯರ್

🔥 Trending searches on Wiki ಕನ್ನಡ:

ಕರ್ನಾಟಕ ಐತಿಹಾಸಿಕ ಸ್ಥಳಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಶ್ರೀವಿಜಯಪ್ರತಿಫಲನಪತ್ರರಂಧ್ರಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಆದಿಪುರಾಣವಿದ್ಯುಲ್ಲೇಪಿಸುವಿಕೆಸ್ವಾತಂತ್ರ್ಯಸೂರ್ಯ ಗ್ರಹಣಕರ್ಣಆಮದು ಮತ್ತು ರಫ್ತುಸಲಗ (ಚಲನಚಿತ್ರ)ಧೂಮಕೇತುಕರ್ನಾಟಕದಲ್ಲಿ ಪಂಚಾಯತ್ ರಾಜ್21ನೇ ಶತಮಾನದ ಕೌಶಲ್ಯಗಳುಯಮಕನ್ನಡ ಅಕ್ಷರಮಾಲೆಕರ್ಣಾಟ ಭಾರತ ಕಥಾಮಂಜರಿಬ್ಯಾಡ್ಮಿಂಟನ್‌ಆದಿ ಕರ್ನಾಟಕಹಸ್ತಪ್ರತಿಭಾರತದ ಸಂಸತ್ತುಕೇಂದ್ರಾಡಳಿತ ಪ್ರದೇಶಗಳುಅಯಾನುರಷ್ಯಾಚಿಕ್ಕಮಗಳೂರುಯುರೇನಿಯಮ್ಯಕ್ಷಗಾನಕೃಷಿ ಅರ್ಥಶಾಸ್ತ್ರಮಾಸ್ತಿ ವೆಂಕಟೇಶ ಅಯ್ಯಂಗಾರ್ಮೌರ್ಯ ಸಾಮ್ರಾಜ್ಯಯೋಗಐಹೊಳೆಪಾಲಕ್ಕೃತಕ ಬುದ್ಧಿಮತ್ತೆಹರ್ಡೇಕರ ಮಂಜಪ್ಪಸಂಯುಕ್ತ ರಾಷ್ಟ್ರ ಸಂಸ್ಥೆಮಾನ್ಸೂನ್ಬಸವೇಶ್ವರರಾಮ್ ಮೋಹನ್ ರಾಯ್ಕಲಬುರಗಿಮಹಾವೀರಬೇಡಿಕೆಆರೋಗ್ಯಪ್ರಬಂಧ ರಚನೆಅಷ್ಟಾವಕ್ರಕಾಲಾಯ ತಸ್ಮೈ ನಮಃ (ಚಲನಚಿತ್ರ)ಸ್ವಾಮಿ ವಿವೇಕಾನಂದಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕೃಷ್ಣಸಂಸ್ಕೃತಿಇಮ್ಮಡಿ ಪುಲಿಕೇಶಿಶುಭ ಶುಕ್ರವಾರಪಂಜಾಬಿನ ಇತಿಹಾಸವಿಷ್ಣುಎಮಿನೆಮ್ಅಮೇರಿಕ ಸಂಯುಕ್ತ ಸಂಸ್ಥಾನಹೈಡ್ರೊಜನ್ ಕ್ಲೋರೈಡ್ಅಗ್ನಿ(ಹಿಂದೂ ದೇವತೆ)ಕರ್ನಾಟಕದ ಏಕೀಕರಣಮೀನಾ (ನಟಿ)ಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಶ್ರವಣಾತೀತ ತರಂಗಶಿವರಾಮ ಕಾರಂತಭಾರತೀಯ ರಿಸರ್ವ್ ಬ್ಯಾಂಕ್ಡಾ ಬ್ರೋಭಾರತದ ರಾಷ್ಟ್ರೀಯ ಚಿಹ್ನೆಜಲ ಮಾಲಿನ್ಯನಿರುದ್ಯೋಗಮೈಸೂರು ದಸರಾಭಾರತೀಯ ನದಿಗಳ ಪಟ್ಟಿಗುಣ ಸಂಧಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಸಾಯನಿಕ ಗೊಬ್ಬರಹದಿಹರೆಯಬುಡಕಟ್ಟು🡆 More