ಎಂ. ಎಸ್. ಪ್ರಭಾಕರ

ಎಂ.

ಎಸ್. ಪ್ರಭಾಕರ ಅವರು ತಮ್ಮ ಕಾವ್ಯನಾಮ "ಕಾಮರೂಪಿ" ಯಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ (ಎಂ.ಎಸ್. ಪ್ರಭಾಕರ). ಇವರು ಹುಟ್ಟಿದ್ದು ೧೯೩೬ ನೇ ಇಸವಿಯಲ್ಲಿ.

ಎಂ. ಎಸ್. ಪ್ರಭಾಕರ
ಎಂ. ಎಸ್. ಪ್ರಭಾಕರ
ಎಂ. ಎಸ್. ಪ್ರಭಾಕರ
ಜನನ೧೯೩೬
ವೃತ್ತಿಲೇಖಕರು
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ

ವಿದ್ಯಾಭ್ಯಾಸ ಹಾಗು ವೃತ್ತಿ

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ೧೯೬೨ ರಿಂದ ೧೯೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿದ್ದ ಇವರು, ೧೯೭೫ ರಿಂದ ೧೯೮೩ ರವರೆಗೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ` ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ `ದಿ ಹಿಂದೂ` ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾದರು. ಪ್ರಸ್ತುತ ಕೋಲಾರದಲ್ಲಿ ನೆಲೆಸಿರುವ ಇವರು ,"ಕಾಮರೂಪಿ" ಬ್ಲಾಗ್ ಮೂಲಕ ತಮ್ಮ ಬರವಣಿಗೆ ಕೃಷಿ ಮಾಡುತ್ತಿದ್ದಾರೆ.

ಕೃತಿಗಳು

  • `ಒಂದು ತೊಲ ಪುನುಗು ಮತ್ತು ಇತರ ಕತೆಗಳು'
  • `ಕುದುರೆ ಮೊಟ್ಟೆ' ' - ಕಿರು ಕಾದಂಬರಿ
  • `ಅಂಜಿಕಿನ್ಯಾತಕಯ್ಯೊ' - ಕಿರು ಕಾದಂಬರಿ
  • ಕಾಮರೂಪಿ ಸಮಗ್ರ - ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ (ಸಂಚಯ ಪುಸ್ತಕದವರಿಂದ ಪ್ರಕಟ)

ಅವರ ಸಾಹಿತ್ಯದ ವಿಮರ್ಶೆ

"ಕಾಮರೂಪಿಯವರು `ಏಲಿಯನೇಷನ್' ಎಂಬ ಮಾರ್ಕ್ಸ್‌ವಾದೀ ಪರಿಕಲ್ಪನೆಯಿಂದ ಪ್ರಭಾವಿತರಾಗಿ ವ್ಯಕ್ತಿವಿಶಿಷ್ಟತೆಗೆ ಒತ್ತುಕೊಡದ, ಮನೋವಿಶ್ಲೇಷಣೆಯನ್ನು ತ್ಯಜಿಸುವ ಹೊಸ ಬಗೆಯ ಕತೆ, ಕಾದಂಬರಿಗಳನ್ನು ಬರೆದರು. ಕಾಮರೂಪಿ ಎಂ.ಎಸ್. ಪ್ರಭಾಕರರ ಕಾವ್ಯನಾಮವಷ್ಟೆ. ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಇಂದು ಕೂಡ ಆ ರಾಜ್ಯದಲ್ಲಿ ಕಾಮರೂಪ ಎಂಬ ಜಿಲ್ಲೆಯೊಂದಿದೆ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು.ಪ್ರಭಾಕರರು ಬರೆದದ್ದು ಅತ್ಯಲ್ಪ. `ಒಂದು ತೊಲ ಪುನುಗು ಮತ್ತು ಇತರ ಕತೆಗಳು', ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ' ಮತ್ತು `ಅಂಜಿಕಿನ್ಯಾತಕಯ್ಯೊ', ಇಷ್ಟೇ ಅವರ ಸಮಗ್ರ ಸಾಹಿತ್ಯ. ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ಸ್ಕೂಲು ಕಾಲೇಜಿನಲ್ಲಿ ಓದುತ್ತಿದ್ದ ಕೋಲಾರದ ಒರಟು ದಿನಗಳಿಂದಲೇ ಓದುವ ಹವ್ಯಾಸ, ಅಭ್ಯಾಸ ಹಚ್ಚಿಕೊಂಡಿದ್ದರೂ, ಬರೆಯುವ ಅಭ್ಯಾಸ ಹಚ್ಚಿಕೊಳ್ಳಲಿಲ್ಲ. ನಾನು ಪುಸ್ತಕಗಳನ್ನು ಬರೆಯುತ್ತೇನೆ, ಆ ಪುಸ್ತಕಗಳು ಪ್ರಕಟಗೊಳ್ಳುತ್ತವೆ ಎಂತಲೂ ಎಂದೂ ಅಂದುಕೊಂಡಿರಲಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೆಜಿನಲ್ಲಿ ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಸಣ್ಣಪುಟ್ಟ ರೀತಿಯಲ್ಲಿ ಬರೆಯಲು ಯತ್ನ ಮಾಡಿದ್ದರೂ ಆ ದಿನಗಳಲ್ಲಿ ಬರೆದ ಚೂರುಪಾರುಗಳೆಲ್ಲಾ ಅಣಕ, ಹುಡುಗಾಟ, ಬರಹಗಾರರಾಗಬೇಕೆಂದು ಹಂಬಲ ಹೊಂದಿದ್ದ ಗೆಳೆಯರಿಗೆ ಕಾಟ ಕೊಡುವ ವ್ಯಂಗ್ಯ ತುಂಟತನದ ಬರವಣಿಗೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆ ಮೊದಲಾದುವುಗಳಿಂದಾಗಿ ಮುಖ್ಯವಾಗುತ್ತವೆ". ಇದು ಕನ್ನಡ ಹಿರಿಯ ಕಥೆಗಾರ, ವಿಮರ್ಶಕ ಶ್ರೀ ಎಸ್.ದಿವಾಕರ ಕಾಮರೂಪಿಯವರ ಬಗ್ಗೆ ಹೇಳಿರುವ ಮಾತುಗಳು. `ಕಾಮರೂಪಿ ಅವರ ಪುಸ್ತಕದಲ್ಲಿ ಪ್ರಾಮಾಣಿಕತೆ ಶೇ 80ರಷ್ಟು ಇದೆ. ಇಲ್ಲಿರುವ ಪ್ರತಿ ವಾಕ್ಯ ಕಲಾಕೃತಿಯಂತೆ ಇದೆ. ಇಲ್ಲಿನ ವಿಷಯ ಹಾಗೂ ಭಾಷೆ ಅದ್ಭುತವಾಗಿದೆ. ಕಡಿಮೆ ಬರೆಯುವವರು ಚೆನ್ನಾಗಿ ಬರೆಯುತ್ತಾರೆ. ಕೆಲವು ಪ್ರಾಧ್ಯಾಪಕರು ೧೫೦-೧೬೦ ಪುಸ್ತಕಗಳನ್ನು ಬರೆಯುತ್ತಾರೆ. ಈ ಪುಸ್ತಕಗಳ ಪ್ರಮಾಣ ಅದ್ಭುತವಾದುದು. ಆದರೆ, ಈ ಪುಸ್ತಕಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಕಾಮರೂಪಿ ಅವರು ಕಡಿಮೆ ಬರೆದ ಕಾರಣ ಅವರ ಕೃತಿಗಳೆಲ್ಲ ಚೆನ್ನಾಗಿವೆ`. ಇದು ಹಿರಿಯ ಇತಿಹಾಸಕಾರ ಶ್ರೀ ಷ.ಶೆಟ್ಟರ್ ಅವರ ಮಾತುಗಳು. ಕನ್ನಡದ ಮತ್ತೊಬ್ಬ ವಿಮರ್ಶಕರಾದ ಶ್ರೀ ರಹಮತ್ ತರೀಕೆರೆ ಅವರು ಕಾಮರೂಪಿಯವರ ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತಾರೆ. `ಕಾಮರೂಪಿ ಬರಹಗಳಲ್ಲಿ ತಾಜಾತನ ಇದೆ. ಅವರ ಜೀವನದೃಷ್ಟಿ ಮತ್ತೆ ಮತ್ತೆ ಹುಡುಕುವುದು ಹಾಗೂ ಪ್ರಯಾಣ. ಕಿಲಾಡಿತನ ಹಾಗೂ ಜಗಳಗಂಟತನ ಅವರ ಬರಹದ ವೈಶಿಷ್ಟ್ಯ. ಮಾತುಕತೆಗಳ ಮೂಲಕವೇ ಅವರು ಕಥೆಗಳನ್ನು ಬೆಳೆಸುತ್ತಾರೆ. ವ್ಯಂಗ್ಯ ಹಾಗೂ ತಮಾಷೆಯ ಮೂಲಕವೇ ಜೀವನವನ್ನು ನೋಡುವ ದೃಷ್ಟಿಕೋನದಿಂದ ಈ ಬರಹಕ್ಕೆ ವಿಶೇಷ ಶಕ್ತಿ ತಂದುಕೊಟ್ಟಿದೆ. ಕಾಮರೂಪಿ ಅವರು ಬರಹದ ಮೂಲಕ ವ್ಯಕ್ತಿಯ ಕೃತ್ರಿಮತೆ, ಆಷಾಢಭೂತಿತನ ವಿರುದ್ಧ ಯಾವಾಗಲೂ ದಾಳಿ ಮಾಡುತ್ತಾರೆ. ಅವರ ಬರಹಗಳಲ್ಲಿ ಐಡೆಂಟಿಟಿಗಾಗಿ ಹುಡುಕಾಟವನ್ನು ಕಾಣಬಹುದು'.

ಚಿತ್ರ ಶಾಲೆ

ಉಲ್ಲೇಖ

ಬಾಹ್ಯ ಕೊಂಡಿಗಳು

Tags:

ಎಂ. ಎಸ್. ಪ್ರಭಾಕರ ವಿದ್ಯಾಭ್ಯಾಸ ಹಾಗು ವೃತ್ತಿಎಂ. ಎಸ್. ಪ್ರಭಾಕರ ಕೃತಿಗಳುಎಂ. ಎಸ್. ಪ್ರಭಾಕರ ಅವರ ಸಾಹಿತ್ಯದ ವಿಮರ್ಶೆಎಂ. ಎಸ್. ಪ್ರಭಾಕರ ಚಿತ್ರ ಶಾಲೆಎಂ. ಎಸ್. ಪ್ರಭಾಕರ ಉಲ್ಲೇಖಎಂ. ಎಸ್. ಪ್ರಭಾಕರ ಬಾಹ್ಯ ಕೊಂಡಿಗಳುಎಂ. ಎಸ್. ಪ್ರಭಾಕರ

🔥 Trending searches on Wiki ಕನ್ನಡ:

ಡೊಳ್ಳು ಕುಣಿತವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನರಾಘವಾಂಕಬಿ.ಎಚ್.ಶ್ರೀಧರನಾಮಪದಭರತ-ಬಾಹುಬಲಿಕಲಿಯುಗವ್ಯಂಜನವಿಷ್ಣುಸಿದ್ಧರಾಮರಾಜಧಾನಿಗಳ ಪಟ್ಟಿಆದೇಶ ಸಂಧಿಸೂರ್ಯ (ದೇವ)ಜಿ.ಪಿ.ರಾಜರತ್ನಂಕನ್ನಡ ಸಾಹಿತ್ಯಭೀಷ್ಮಇತಿಹಾಸಮಣ್ಣುತ್ಯಾಜ್ಯ ನಿರ್ವಹಣೆಶಾಂತಲಾ ದೇವಿಶಕ್ತಿರಾಜ್ಯಸಭೆಅಶೋಕನ ಶಾಸನಗಳುಕೂಡಲ ಸಂಗಮಮಹಾಕವಿ ರನ್ನನ ಗದಾಯುದ್ಧಮಹಾವೀರಕರ್ನಾಟಕ ಲೋಕಸೇವಾ ಆಯೋಗಪಂಚತಂತ್ರಸಂಗೀತಮಲ್ಲಿಕಾರ್ಜುನ್ ಖರ್ಗೆಗುಣ ಸಂಧಿವಿಜ್ಞಾನರಾಹುಲ್ ಗಾಂಧಿಮಾನವ ಹಕ್ಕುಗಳುಟೊಮೇಟೊಕರ್ನಾಟಕದ ಇತಿಹಾಸಪಂಚಾಂಗಭಕ್ತಿ ಚಳುವಳಿಪಿತ್ತಕೋಶಭಾಷೆಕನ್ನಡ ಜಾನಪದಹೆಚ್.ಡಿ.ಕುಮಾರಸ್ವಾಮಿಸಿ.ಎಮ್.ಪೂಣಚ್ಚಶಿವರಾಜ್‍ಕುಮಾರ್ (ನಟ)ಸ್ಮಾರ್ಟ್ ಫೋನ್ಕರ್ನಾಟಕ ವಿಧಾನ ಪರಿಷತ್ಅನುನಾಸಿಕ ಸಂಧಿಆಳಂದ (ಕರ್ನಾಟಕ)ಭಾರತದ ರೂಪಾಯಿಬೆಂಡೆದಾಸ ಸಾಹಿತ್ಯಭಾರತದಲ್ಲಿ ತುರ್ತು ಪರಿಸ್ಥಿತಿಲೋಪಸಂಧಿಕ್ರೈಸ್ತ ಧರ್ಮಸಾಕ್ಷಾತ್ಕಾರಶಿವಚಿನ್ನನೀತಿ ಆಯೋಗಅಸಹಕಾರ ಚಳುವಳಿಜೈನ ಧರ್ಮಚಂದ್ರಯಾನ-೩ರಕ್ತದೊತ್ತಡಆಮ್ಲಥಿಯೊಸೊಫಿಕಲ್ ಸೊಸೈಟಿಶಿವರಾಮ ಕಾರಂತಮಾನವ ಸಂಪನ್ಮೂಲಗಳುಗುರುರಾಜ ಕರಜಗಿವ್ಯವಸಾಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೃಷ್ಣದೇವರಾಯಕರ್ನಾಟಕದ ನದಿಗಳುಇನ್ಸ್ಟಾಗ್ರಾಮ್ರೈತವಾರಿ ಪದ್ಧತಿಕಲಿಕೆಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕೃಷ್ಣ🡆 More