ಉತ್ತರ ಮೀಮಾಂಸಾ

ಉತ್ತರ ಮೀಮಾಂಸಾ -ವೇದಾಂತ ದರ್ಶನ : ಬ್ರಹ್ಮ ಮೀಮಾಂಸೆ

ಪೀಠಿಕೆ

    ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠೆಯ ಸ್ಥಾನವನ್ನು ಪಡೆದಿರುವ ತತ್ವ ಮಾರ್ಗವೇ ವೇದಾಂತ. ವೇದಾಂತ ವೆಂದರೆ ಅದು ಕೇವಲ ಅದ್ವೈತವಲ್ಲ; ಅಥವಾ ದ್ವೈತವಲ್ಲ; ;ರಾಮಾನುಜರ ಕೇವಲ ವಿಶಿಷ್ಟಾದ್ವೈತವೂ ಅಲ್ಲ;; ಇದುಅದ್ವೈತ,ದ್ವೈತ, ವಿಶಿಷ್ಟಾದ್ವೈತವೂ, ಸೇರಿ,ಇತರೆ ತತ್ವ ಸಿದ್ಧಾಂತಗಳ, ಉಪನಿಷತ್ ಗಳ ಆಧಾರಿತ ದರ್ಶನ; ಇದು ಬಾದರಾಯಣರ ಬ್ರಹ್ಮ ಸೂತ್ರಗಳಿಗೆ ಆಧಾರ, ಭಗವದ್ಗೀತೆ ಇದರ ವಿಸ್ತಾರ ವಿವೇಚನೆ, ಇವೆಲ್ಲದರ ಆಧಾರದ ಮೇಲೆ ಆಧುನಿಕ ಯುಗದಲ್ಲಿ ಬೇಧಾಬೇಧ, ಶುದ್ಧಾದ್ವೈತ, ದ್ವೈತಾದ್ವೈತ, ಅಚಿಂತ್ಯ ಬೇಧಾಬೇಧ , ಮೊದಲಾದ ನಾನಾ ಸಿದ್ಧಾಂತಗಳು , ಚಂತನೆಗಳು , ಉದಯಿಸಿದವು. ಅದು ವೇದಕಾಲದಿಂದ ಈ ವರೆಗೆ ಬೆಳೆದುಬಂದ ವಿಶ್ವದ ಮೂಲ ತತ್ವದ-ತತ್ವಗಳ, ಆತ್ಮ-ಜೀವಗಳ, ಜಗತ್ತಿನ- ಮಾನವನ ಅಂತರಂಗದ ಸತ್ಯಗಳ ಹುಡುಕಾಟದ ಇತಿಹಾಸ. ಅದರಲ್ಲಿ ಅನೇಕ ಸಿದ್ಧಾಂತಗಳ ಸಮೂಹವೇ ಇದೆ. ಈಗಲೂ ಅದರ ಚರ್ಚೆ ಹೊಸ ಹೊಸ ಸಿದ್ದಾಂತಗಳು ಹೊಸ ಅರ್ಥಗಳೊಂದಿಗೆ ಸೇರ್ಪಡೆ ಆಗುತ್ತಿದೆ.
    ವೇದಾಂತವೆಂದರೆ ವೇದದ ಕೊನೆಯ ಭಾಗ ;ಎಂದರೆ ಉಪನಿಷತ್ತು . ಅವುಗಳನ್ನು ಆಧಾರವಾಗಿಟ್ಟುಕೊಂಡು ತಾತ್ವಿಕ ಸಿದ್ಧಾಂತ ಮಾಡಿರುವುದು ವೇದಾಂತ ದರ್ಶನ. ವೇದದ ಕೊನೆಯ ಭಾಗದ ವ್ಯಾಖ್ಯಾನ : 'ಮೀಮಾಂಸ' ವೆಂದರೆ ಆಳವಾದ ವಿಚಾರ . ವೇದದ ಉತ್ತರ ಭಾಗದ ಎಂದರೆ ಕೊನೆಯ ಭಾಗವಾದ ಉಪನಿಷತ್ತಿನ ಆಳವಾದ ವಿಚಾರ ವಿಮರ್ಶೆಯೇ ಉತ್ತರ ಮೀಮಾಂಸೆ. ಇದಕ್ಕೆ "ಬ್ರಹ್ಮ ಮೀಮಾಂಸೆ" ಎಂದೂ ಹೆಸರಿದೆ. ಉಪನಿಷತ್ತಿನಲ್ಲಿ ಹೇಳಿದ ಎಲ್ಲದಕ್ಕೂ ಮೂಲವಾದ ಚೈತನ್ಯ -ಬ್ರಹ್ಮದ ವಿಚಾರ ಮಾಡುವುದರಿಂದ ಇದು "ಬ್ರಹ್ಮ ಮೀಮಾಂಸೆ" ಎಂದೂ ಹೆಸರು ಪಡೆದಿದೆ. (ಓಂ ತತ್ಸತ್)

ವೇದ ವಿಭಾಗ :

    ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂದು ನಾಲ್ಕು ವೇದಗಳು
    ಪ್ರತಿಯೊಂದಕ್ಕೂ, ಮಂತ್ರ , ಬ್ರಾಹ್ಮಣ , ಅರಣ್ಯಕ , ಉಪನಿಷತ್ತೆಂದು ನಾಲ್ಕು ವಿಭಾಗಗಳಿವೆ ಮಂತ್ರಗಳೆಂದರೆ ಮುಖ್ಯವಾಗಿ ದೇವತಾ ಸ್ತುತಿಗಳು ; ಬ್ರಾಹ್ಮಣ ಗ್ರಂಥಗಳು ಆ ಮಂತ್ರಗಳನ್ನು ಉಪಯೋಗಿಸುವ, ಯಜ್ಞ ಯಾಗಾದಿಗಳ ವಿವೇಚನೆಯನ್ನು ಮಾಡುತ್ತವೆ . ಅರಣ್ಯಕಗಳಲ್ಲಿ , ಬ್ರಾಹ್ಮಣಗಳು ಹೇಳದೇ ಬಿಟ್ಟರುವ, ಶ್ರೌತ (ಶೃತಿ -ಅಲ್ಲ; ಶ್ರುತಿ=ವೇದ-ಶ್ರೌತ-ವೇದಕ್ಕೆ ಸಂಬಂಧಪಟ್ಟ) ವಿಧಿ, ಯಜ್ಞ ಯಾಗಾದಿಗಳ ವಿವೇಚನೆ ಇದೆ. ಉಪನಿಷತ್ತುಗಳಲ್ಲಿ ಯಜ್ಞ ಯಾಗಗಳ ವಿಷಯಗಳಿವೆಯಾದರೂ, ಬ್ರಹ್ಮ ಜ್ಞಾನಕ್ಕೆ ಸಂಬಂಧಿಸಿದ ವಿಷಯಕ್ಕೇ ಪ್ರಾಧಾನ್ಯತೆ ಇದೆ. ಬ್ರಹ್ಮಚರ್ಯ, ಗೃಹಸ್ತ , ವಾನಪ್ರಸ್ಥ , ಸಂನ್ಯಾಸ- ಈ, ನಾಲ್ಕು ಆಶ್ರಮಗಳಲ್ಲಿ ನಾಲ್ಕು ವಿಭಾಗಗಳ ಅಧ್ಯಯನ , ಅನುಷ್ಠಾನಗಳೆಂದು ಹೇಳುತ್ತಾರೆ .
    ಮೀಮಾಂಸಕರು ವೇದ ವೆಂದರೆ, ಮಂತ್ರ ಬ್ರಾಹ್ಮಣಗಳು ಮಾತ್ರವೆಂದು ಹೇಳುತ್ತಾರೆ. (ಮಂತ್ರ ಬ್ರಾಹ್ಮಣಯೋರ್ವೇದಃ) . ಅವರಿಗೆ ಅದೇ ಪ್ರಧಾನವಾದರೆ, ವೇದಾಂತಿಗಳಿಗೆ ಉಪನಿಷತ್ತುಗಳೇ ಪ್ರಧಾನವಾದುದು . ವೇದ ಮಂತ್ರ ಮತ್ತು ಬ್ರಾಹ್ಮಣಗಳಲ್ಲೂ ಉನ್ನತ ದಾರ್ಶನಿಕ ವಿಚಾರಗಳು ಬರುತ್ತವೆ. ಅದರ ಜೊತೆಯಲ್ಲಿ ಬಹಳಷ್ಟು ಮಂತ್ರಗಳು ದೇವತಾ ಸ್ತುತಿ , ಯಜ್ಞ ಯಾಗ , ಲೌಕಿಕ ವಿಚಾರಗಳಿಗೆ ಸಂಬಂಧಪಟ್ಟವು ಇವೆ.
    ವೇದ ಮತ್ತು ವೇದಾಂತ ಯಜ್ಞ ಯಾಗಗಳಿಗೆ ಪ್ರಾಮುಖ್ಯತೆ ಕೊಟ್ಟವರು, ಬ್ರಾಹ್ಮಣರು . ಉಪನಿಷತ್ತುಗಳನ್ನು ಕಂಡುಕೊಂಡವರು ಮೊದಲು ಕ್ಷತ್ರಿಯರು . ಕ್ಷತ್ರಿಯರಾದ ಜನಕನೇ ಮೊದಲಾದವರಿಂದ ಬ್ರಾಹ್ಮಣರು ಬ್ರಹ್ಮ ಜ್ಞಾನದ ಉಪದೇಶ ಪಡೆದುಕೊಂಡರು . ಆದರೆ ಬ್ರಹ್ಮ ವಿದ್ಯೆ ಕ್ಷತ್ರಿಯರಿಗೇ ಮೀಸಲಾಗಿರಲಿಲ್ಲ. ಅಲ್ಲದೆ ಯಜ್ಞ ಯಾಗಾದಿಗಳಿಗೆ ಕೂಡ ಕ್ಷತ್ರಿಯರೇ ಆಧಾರವಾಗಿದ್ದರು . ಹೀಗೆ ಅವೆರಡೂ ಜೊತೆ ಜೊತೆಯಾಗಿಯೇ ಸಾಗಿ ಬಂದವು .
    ಕರ್ಮಮಾರ್ಗಿಗಳು ಅಥವಾ ಮೀಮಾಂಸಕರು ಯಜ್ಞ ಯಾಗಗಳಿಗೆ ಪ್ರಾಮುಖ್ಯತೆ ಕೊಟ್ಟರು. ಜ್ಞಾನ ಮಾರ್ಗಿಗಳು ಉಪನಿಷತ್ತು ಮತ್ತು ಬ್ರಹ್ಮ ವಿಚಾರಕ್ಕೆ ಪ್ರಾಶಸ್ತ್ಯ ಕೊಟ್ಟರು. ಈ ಸ್ಪರ್ಧೆಯಲ್ಲಿ ಕರ್ಮಕ್ಕೆ ಸ್ವರ್ಗ; ಜ್ಞಾನಕ್ಕೆ ಮೋಕ್ಷವೆಂದಾಯಿತು . ಆದರೂ ಕರ್ಮವನ್ನು ಬಿಡದೆ, ಅದನ್ನೂಮಾಡಿ ಈಶ್ವರಾರ್ಪಣ ಮಾಡಿದರೆ, ಮೋಕ್ಷವೆಂದು ರೂಢಿಯೊಳಗೆ ಬಂದು, ಭಕ್ತಿ ಮಾರ್ಗ ಹುಟ್ಟಿಕೊಂಡಿತು.

ಪ್ರಾಚೀನ ಉಪನಿಷತ್ತುಗಳು :

    ಉಪನಿಷತ್ತುಗಳು, ೨೫೦ರ ವರೆಗೂ ಇರಬಹುದು, ಇದರಲ್ಲಿ ಅಲ್ಲೋಪನಿಷತ್(ಮುಸ್ಲಿಮರ ಅಲ್ಲಾನ ಕುರಿತದ್ದು) ಮನ್ಮಥೋಪನಿಷತ್ ಗಳೂಸೇರಿವೆ. ಆದರೆ ಪ್ರಾಚೀನ ಪರಂಪರೆಯವು ೧೦೮ ಉಪನಿಷತ್ತುಗಳು ಮಾತ್ರವೆಂದು ಹೇಳುತ್ತಾರೆ.
    ಋಗ್ವೇದಕ್ಕೆ ಸಂಬಂಧಿಸಿದುದು, ಐತರೇಯ, ಕೌಷೀತಕೀ ;
    ಯಜುರ್ವೇದಕ್ಕೆ ಸಂಬಂಧಪಟ್ಟುದು, -ತೈತ್ತರೀಯ, ಮಹಾನಾರಾಯಣ, ಕಠ, ಶ್ವೇತಾಶ್ವೇತರ , ಮೈತ್ರಾಯಣೀ , ಈಶಾವಾಸ್ಯ, ಮತ್ತು ಬೃಹದಾರಣ್ಯಕ .
    ಸಾಮವೇದದ್ದು, ಕೇನ , ಛಾಂದೋಗ್ಯ ,
    ಅಥರ್ವವೇದಉಪನಿಷತ್ತುಗಳು , ಪ್ರಶ್ನ , ಮುಂಡಕ , ಮಾಂಡೂಕ್ಯ ಉಪನಿಷತ್ತುಗಳು.
    ಇವುಗಳಲ್ಲಿ ಈಶ, ಕಠ , ಕೇನ , ಮುಂಡಕ , ಮಾಂಡೂಕ್ಯ , ಬೃಹದಾರಣ್ಯಕ , ಛಾಂದೋಗ್ಯ , ತೈತ್ತರೀಯ, ಪ್ರಶ್ನ , ಮತ್ತು ಶ್ವೇತಾಶ್ವೇತರ ಗಳನ್ನು ದಶೋಪನಿಷತ್ತೆಂದು ಕರೆಯಲಾಗಿದೆ. ಇದರಲ್ಲಿ ಛಾಂದೋಗ್ಯವು ಅತ್ಯಂತ ಪ್ರಾಚೀನವೆನ್ನುತ್ತಾರೆ .

ಉಪನಿಷತ್ತುಗಳ ದರ್ಶನ :

    ಉಪನಿಷತ್ ಎಂದರೆ ರಹಸ್ಯ ವಿದ್ಯೆ . ಬ್ರಹ್ಮ ತತ್ವದ ವಿದ್ಯೆ . ಜರಾ ಮರಣ ರಹಿತ ಆನಂದ ಗಳಿಸುವ ರಹಸ್ಯ ವಿದ್ಯೆ . ಆತ್ಮ , ಬ್ರಹ್ಮ , ಜಗತ್ತು -ಇವುಗಳ ಪರಸ್ಪರ ಸಂಬಂಧ - ಮತ್ತು ಜ್ಞಾನವನ್ನು ಅರಸುವ ವಿಚಾರ.

ಇವುಗಳೆಲ್ಲಾ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆಯವರಿಂದ ರಚಿಸಲ್ಪಟ್ಟವು . (ದರ್ಶನ ಪಡೆದವುಗಳು -ಗೋಚರಿಸಿದ್ದು) . ಆಗಿದ್ದು ಒಂದೇ ದರ್ಶನ(ಸಿದ್ಧಾಂತ) ವನ್ನು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ . ಇವುಗಳಲ್ಲಿ ಸಮನ್ವಯ ಕಷ್ಟ . ಆದರೆ ಅದರಲ್ಲಿ ಅನೇಕ ದಾರ್ಶನಿಕ ಪಂಥದ ಬೀಜಗಳಿವೆ. ವೈದಿಕ -ಅವೈದಿಕ (ಜೈನ ,ಬೌದ್ಧ) ದರ್ಶನಗಳೂ ಈ ಉಪನಿಷತ್ ಗಳಿಂದ ಪ್ರಭಾವಿತವಾಗಿವೆ . ಆದ್ದರಿಂದ ವೈದಿಕ ದರ್ಶನಗಳಲ್ಲಿ ಯೂ ಪರಸ್ಪರ ಭಿನ್ನಾಭಿಪ್ರಾಯಗಳು ಇವೆ.

ಪ್ರಸ್ಥಾನ ತ್ರಯೀ - ಬ್ರಹ್ಮ ಸೂತ್ರ

    ಈ ಉಪನಿಷತ್ತುಗಳನ್ನೆಲ್ಲಾ ಸಮನ್ವಯಗೊಳಿಸಿ ಒಂದೇ ದರ್ಶನ ಮಾಡುವ ಯತ್ನವೇ 'ಬ್ರಹ್ಮ ಸೂತ್ರ,' ಅಥವ ವೇದಾಂತ ಸೂತ್ರ,.
    ಈ ಬ್ರಹ್ಮ ಸೂತ್ರವನ್ನು ಬಾದರಾಯಣರು (ವ್ಯಾಸ ಮಹರ್ಷಿಗಳು ) ರಚಿಸಿದರೆಂದು ಹೇಳುತ್ತಾರೆ. ಇದರ ಕಾಲ ಸುಮಾರು ಕ್ರಿ.ಪೂ. ೫೦೦ ರಿಂದ ೩೦೦ . ಬ್ರಹ್ಮ ಸೂತ್ರ , ಉಪನಿಷತ್ , ಭಗವದ್ಗೀತೆ ಇವು ಮೂರನ್ನೂ ಪ್ರಸ್ಥಾನ ತ್ರಯೀ ಎನ್ನುತ್ತಾರೆ.
    ಬ್ರಹ್ಮ ಸೂತ್ರ ಒಂದು ಚಿಕ್ಕ ಗ್ರಂಥ. ಇದರಲ್ಲಿ ೫೫೫ ಸೂತ್ರಗಳಿವೆ . ನಾಲ್ಕು ಅಧ್ಯಾಯಗಳು - ಪ್ರತಿ ಅಧ್ಯಾಯವೂ ಅಧಿಕರಣಗಳಾಗಿ ವಿಂಗಡಣೆ ಗೊಂಡಿದೆ. ಅತ್ಯಂತ ಸಣ್ಣ ಸೂತ್ರ , ಅಣುಶ್ಚ . ಆದರೆ ಅದೇ ಆಧಾರಗಳಿಂದ ಅನೇಕ ಭಿನ್ನ ವ್ಯಾಖ್ಯಾನಗಳು ಹುಟ್ಟಿಕೊಂಡವು . ಆದರೆ ಅವು ಅಸಾಧಾರಣ ಸೂತ್ರಗಳೆಂಬುದರಲ್ಲಿ ಸಂಶಯವಿಲ್ಲ .

ಭಗವದ್ಗೀತೆ .

    ಅರ್ಜುನನ ಪ್ರಶ್ನೆಗಳಿಗೆ ಶ್ರೀ ಕೃಷ್ಣನು ನೀಡಿದ ಉತ್ತರ ರೂಪದಲ್ಲಿ ದಾರ್ಶನಿಕ ಸಮಸ್ಯೆಗಳನ್ನು ವಿವೇಚಿಸಿದೆ. ಇದನ್ನು ಉಪನಿಷತ್ತುಗಳ ಸಾರವೆಂದು ತಿಳಿಯಲಾಗುತ್ತದೆ . ಕಠ , ಮುಂಡಕ , ಬೃಹದಾಣ್ಯಕ . ಕೌಷೀತಕೀ , ಬ್ರಾಹ್ಮಣ , ಇವು ಗೀತೆಯ ಆಕರಗಳು. ಸಾಂಖ್ಯ ಯೋಗ , ಬ್ರಹ್ಮ ವಾದ , ಭಕ್ತಿ ಮಾರ್ಗ , ಅವತಾರ ವಾದಗಳನ್ನು ಭಗವದ್ಗೀತೆ (ಗೀತೆ) ಒಗ್ಗೂಡಿಸಿದೆ . ಇಂದು ಗೀತೆ ಅತ್ಯಂತ ಜನಪ್ರಿಯ ಗ್ರಂಥ .
    ಮೂರು ದಾರಿಗಳು : ಭಗವದ್ಗೀತೆ , ಉಪನಿಷತ್ , ಬ್ರಹ್ಮ ಸೂತ್ರಗಳನ್ನು ಆಧರಿಸಿ ಮೂರು ಮುಖ್ಯವಾದ , ಅಭಿಪ್ರಾಯ / ಪಂಥಗಳು ಹೊರಟಿವೆ. ಇವು ವೇದಾಂತವೆಂಬ ಒಂದೇ ದರ್ಶನದ ಒಳ-ವಿವಾದ.
    ಅದ್ವೈತ :
    ವೇದಾಂತದ ಬಹು ಮುಖ್ಯ ಪ್ರಶ್ನೆ - ಕಾಣುವ ಜಗತ್ತು - ಅದರಲ್ಲಿ ಪ್ರವರ್ತಿಸುತ್ತಿರುವ ಜೀವಾತ್ಮ , ಮತ್ತು ಕಾರಣರೂಪವಾದ ಬ್ರಹ್ಮ (ಜೀವ -ಜಗತ್ತು - ದೇವರು ) ಈ ಮೂರರ ಸಂಬಂಧ ಕುರಿತದ್ದು. ವೇದಾಂತದಲ್ಲಿ ಈ ಮೂರರ ಸಂಬಂಧವು ಬೇಧವಿಲ್ಲದ ಏಕತ್ವ (ಅದ್ವೈತ )ವಿದೆ ಎಂಬುದು ಅದ್ವೈತ ವೇದಾಂತ .
    ದ್ವೈತ :
    ಈ ಮೇಲೆ ಹೇಳಿದ ಮೂರರಲ್ಲಿ ಅದರಲ್ಲೂ ಚೈತನ್ಯವಾದ ಜೀವ - ಬ್ರಹ್ಮ ಗಳಲ್ಲಿ ಯಾವಾಗಲೂ ಬೇಧವಿರುತ್ತದೆ , ಜೀವ - ಜೀವ, ಜೀವ- ಬ್ರಹ್ಮ ,ಜಗತ್ತು ಇವುಗಳು ಬೇರೆ ಬೇರೆಯಾದದ್ದು ಎಂಬುದು ದ್ವೈತ ವೇದಾಂತ.
    ವಿಶಿಷ್ಟಾದ್ವೈತ :
    ಜೀವ , ಜಗತ್ತು , ಬ್ರಹ್ಮ , ಇವು ಪ್ರತ್ಯೇಕವಾಗಿದ್ದರೂ, ಒಂದಾಗಿರುತ್ತವೆ -ಎಂಬುದು ಭೇದಾ ಭೇದ - ವಿಶಿಷ್ಟಾದ್ವೈತ.
    ವಿವಾದ:
    ಬ್ರಹ್ಮ ತತ್ವ : ಭ್ರಹ್ಮ ವೆಂಬುದು ಒಂದು ವ್ಯಾಪಕವಾದ ತತ್ವ (ಓ)ವೋ , ಅಥವಾ ಶಿವ , ವಿಷ್ಣು , ಮುಂತಾಗಿ ಒಂದು ವ್ಯಕ್ತಿಯಾದ ದೇವರೋ -ಪೌರಾಣೀಕ ರು ಕಂಡಂತೆ ;- ಇವೆಲ್ಲವೂ ಸೇರಿ ವೇದಾಂತ ಗೋಜಲಾಗಿದೆ.
    ವಿವಾದ ಮತ್ತು ಪಂಥಗಳು : ಬ್ರಹ್ಮ ಸೂತ್ರಗಳನ್ನು ಆಧರಿಸಿ ಸುಮಾರು ಹತ್ತು ಪಂಥಗಳಿವೆ. ಉಪನಿಷತ್ , ಬ್ರಹ್ಮಸೂತ್ರ , ಗೀತೆಗಳಲ್ಲಿ ಅದ್ವೈತ ಪರ ಹಾಗೂ , ದ್ವೈತ ಪರ ವಾಕ್ಯಗಳಿವೆ . ಒಂದೇ ವಾಕ್ಯವು ಬೇರೆ ಬೇರೆ ಅರ್ಥ ಕೊಡುವಂತಿದ್ದು ಅವರವರು ಬೇಕಾದಂತೆ ಅರ್ಥಮಾಡಿಕೊಳ್ಳಬಹುದು

ಉದಾಹರಣೆಗೆ :-

    ತತ್ವಮಸಿ - ತತ್ -ತ್ವಂ - ಅಸಿ ;ವಿಗ್ರಹ ವಾಕ್ಯ -ಅದು (ಬ್ರಹ್ಮ) ನೀನು ಆಗಿದ್ದೀಯೆ. -ಅದ್ವೈತ ಪರ ;.
    ತತ್ವಮಸಿ- ತಸ್ಯ , ತ್ವಂ , ಅಸಿ
    ನೀನು ಅವನವನು ಆಗಿದ್ದೀಯೆ - ವಿಶಿಷ್ಟಾದ್ವೈತ ಪರ ;
    ತತ್ವಮಸಿ- ಅತತ್ -ತ್ವಂ-ಅಸಿ
    (ಅಕಾರ ಅಧ್ಯಾಹಾರವಾಗಿದೆ ಎಂದು ಭಾವಿಸಿದೆ ) ನೀನು ಅವನಲ್ಲ : ದ್ವೈತ ಪರ,
    ಸೂತ್ರಗಳನ್ನೂ , ಶ್ಲೋಕಗಳನ್ನೂ ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಜಗ್ಗಾಡಿದ್ದಾರೆ.
    ಶ್ರೀ ಶಂಕರರ ಪ್ರಕಾರ ಅಬೇಧವನ್ನು ಹೇಳುವ ವಾಕ್ಯಗಳು ಮುಖ್ಯ , ಬೇಧವನ್ನು ಹೇಳುವ ವಾಕ್ಯಗಳು ಸಾಧಕರ ಉಪಾಸನೆಗಾಗಿ.
    ಮಧ್ವರ ಪ್ರಕಾರ , ಬೇಧವನ್ನು ಹೇಳುವ ವಾಕ್ಯಗಳು ಮುಖ್ಯ , ಅಬೇಧ ವಾಕ್ಯಗಳು ಅಲಂಕಾರ.
    ರಾಮಾನುಜಾಚಾರ್ಯ ಅಂತವರಿಗೆ - ಭೇದವೂ ನಿಜ ; ಅಭೇದವೂ ನಿಜ .
    ಭಾಷ್ಯಕಾರರು : ಉಪನಿಷತ್ತು , ಬ್ರಹ್ಮಸೂತ್ರ , ಗೀತೆಗಳಿಗೆ ಅನೇಕ ಭಾಷ್ಯಕಾರರು ಭಾಷ್ಯಗಳನ್ನು ಬರೆದಿದ್ದಾರೆ . ಅವರೆಲ್ಲರ ಅಭಿಪ್ರಾಯ ಬೇರೆ ಬೇರೆ . ಒಟ್ಟಿನಲ್ಲಿ ಮೇಲಿನ ಮೂರರಲ್ಲಿ ಯಾವುದಾದರೂ ಒಂದಕ್ಕೆ ಹೋಲಿಕೆಯಾಗುವುದು.

ಶ್ರೀ ಶಂಕರ ಭಾಷ್ಯ.

    ಪ್ರಸ್ಥಾನತ್ರಯಕ್ಕೆ ಶ್ರೀ ಶಂಕರರ ಭಾಷ್ಯವೇ ಅತ್ಯಂತ ಪ್ರಾಚೀನವಾದುದು. ;ಅದಕ್ಕೂ ಹಿಂದಿನವು ಲಭ್ಯವಿಲ್ಲ.
    ಶ್ರೀ ಶಂಕರರ ಅದ್ವೈತಕ್ಕೆ ಮಾಯಾ ವಾದವೆಂದೂ ಹೇಳುತ್ತಾರೆ . ಅದರ ಪ್ರಕಾರ ಬ್ರಹ್ಮ ವೆಂಬ ಚೈತನ್ಯ ಶಕ್ತಿಯೋಂದೇ ಸತ್ಯ. ; ಅದೇ ಚಿತ್, ಆನಂದ , ಪ್ರಪಂಚವು ಬ್ರಹ್ಮದ ವಿಶಿಷ್ಟ ತೋರಿಕೆ ಮಾತ್ರಾ (ಕನಸಿನಂತೆ)

ಉಳಿದವರಿಗೆ , ಬ್ರಹ್ಮವು ಪ್ರಧಾನ ತತ್ವ . .ಜಗತ್ತು ,ಜೀವ ಸತ್ಯವಾದದ್ದು .(ಪಾಶ್ಚಿಮಾತ್ಯರು ಈ ಅಭಿಪ್ರಾಯವೇ ಸೂತ್ರಗಳಿಗೆ ಹತ್ತಿರವಾದುದು ಎಂದು ಭಾವಿಸುತ್ತಾರೆ.)

ಆಗಮಗಳು

    ಪ್ರಾಚೀನವಾದ ಆಗಮಗಳು ವೇದಗಳ ಯಜ್ಞ ಸಂ ಸ್ಕೃ ತಿ ಯ ಬದಲಾಗಿ ಮೂರ್ತಿಪೂಜೆ ಸಂಸ್ಕೃತಿಯನ್ನು ನೆಲೆಗೊಳಿಸಿದವು. ಪೂಜೆಗಳು ಆಗಮೋಕ್ತ ನೆಲೆಗಳಲ್ಲಿ /ವಿಧಾನದಲ್ಲಿ ನೆಡೆಯುತ್ತವೆ.
    ಆಗಮಗಳು ನಾಲ್ಕು ಬಗೆ. ವೈಷ್ಣವ, ಶೈವ , ಶಾಕ್ತ , ಮತ್ತು ತಂತ್ರ.
    ವೈಷ್ಣವಾಗಮಗಳು ಪಂಚರಾತ್ರಾಗಮಗಳೆಂದು ಪ್ರಸಿದ್ಧವಾಗಿವೆ. ಐದು ರಾತ್ರಿಗಳಲ್ಲಿ ಅನಂತ , ಗರುಡ , ವಿಶ್ವಕ್ ಸೆನ , ಬ್ರಹ್ಮ ರುದ್ರರು ಕೇಶವನಿಂದ , ಕೇಳಿದ್ದರಿಂದ ಪಂಚರಾತ್ರವೆಂದು ಹೆಸರು ಬಂದಿದೆ. ತತ್ವ , ಮುಕ್ತಿಪ್ರದ, ಭಕ್ತಿ ಪ್ರದ, ಯೌಗಿಕ , ವೈಶೇಷಿಕಗಳೆಂಬ ಐದು ಜ್ಞಾನ ತಂತ್ರ ತಿಳಿಸುವುದರಿಂದ ಈ ಹೆಸರೆಂದು ನಾರದ ಸಂಹಿತೆ ಹೇಳುತ್ತದೆ. ಆಗಮಗಳು ಭಕ್ತಿ ಪ್ರಧಾನವಾಗಿದ್ದು , ಭಗವಂತನ ಅನುಗ್ರಹವೇ ಮುಕ್ತಿಗೆ ಕಾರಣವೆಂದು ಅವುಗಳ ಸಿದ್ಧಾಂತ . ಅವುಗಳ ಆರಾಧ್ಯ ದೈವವನ್ನೇ ಪರಬ್ರಹ್ಮವೆಂದು ಹೇಳುತ್ತದೆ. ವೈಷ್ಟವಾಗಮಕ್ಕೆ -ವಿಷ್ಣು , ಶೈವಾಗಮಕ್ಕೆ - ಶಿವ. ಶಾಕ್ತಕ್ಕೆ - ಶಕ್ತಿ (ಅಂಬಿಕೆ) . ಇತ್ಯಾದಿ.

ಆಗಮವು ದೇವಾಲಯ ನಿರ್ಮಾಣತಂತ್ರ ವಾಗಿದೆ. ಮೂರ್ತಿ ಪ್ರತಿಷ್ಠಾಪನೆ , ಪೂಜಾವಿಧಾನಗಳನ್ನು ವಿವರಿಸುತ್ತವೆ. ವೇದಗಳಂತೆ ಆಗಮಗಳೂ ಪ್ರಮಾಣ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿವೆ. ವೇದಾಂತವು ನಿಗಮಾಗಮಗಳನ್ನು (ನಿಗಮ=ವೇದ) ಪ್ರಮಾಣವೆಂದು ಒಪ್ಪುತ್ತವೆ

ಆಧುನಿಕ ಯುಗ :

    ವೇದಾಂತದ ಮುಂದೆ ಇತರ ದರ್ಶನಗಳು ಸೋಲೊಪ್ಪಿಕೊಂಡಿವೆ..
    ವೇದಾಂತಕ್ಕೆ ಹೊಸ ಹೊಸ ವ್ಯಾಖ್ಯಾನಗಳು ಬರುತ್ತಿವೆ . ಉಪನಿಷತ್ತಿನಲ್ಲಿರುವುದು ತಾರ್ಕಿಕ ಚಿಂತನವಲ್ಲ. ಅನುಭಾವಿ ಸ್ಪಂದನ (ಇಂದ್ರಿಯಾತೀತ ಅನುಭವ) ಆದರೆ ವೇದಾಂತವು ಬ್ರಹ್ಮ ಮೋಕ್ಷಗಳಿಗೆ ಅತಿಯಾದ ಪ್ರಾಧಾನ್ಯತೆಯನ್ನು ನೀಡಿ ಜೀವನ ವಿರೋಧಿಯಾಯಿತು ಎಂಬುದು ಅದರ ಟೀಕಾಕಾರರ ಅಭಿಪ್ರಾಯ . ಇದರಲ್ಲಿ ಸತ್ಯಾಂಶವೂ ಇದೆ ಎಂಬುದು ಪ್ರಾಜ್ಞರ ಮತ. ಆಧುನಿಕ ವೇದಾಂತಿಗಳು ಅದನ್ನು ಒಪ್ಪಿ ( ಈ ಟೀಕೆಯನ್ನು) ಅದಕ್ಕೆ ಪರಿಹಾರಗಳನ್ನು ವೇದಾಂತದಲ್ಲಿಯೇ ತೋರಿಸಲು ಪ್ರಯತ್ನಿಸಿದ್ದಾರೆ.
    ಓಂ ತತ್ಸತ್.
    (ಮುಂದುವರೆಯುವುದು- ಎಡಿಟಿಂಗ್ +ವಿಷಯ ಸೇರಿಸುವಿಕೆ / ಮುಂದುವರೆದಿದೆ.)

ನೋಡಿ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಆಧಾರ

    ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.

Tags:

ಉತ್ತರ ಮೀಮಾಂಸಾ ಪೀಠಿಕೆಉತ್ತರ ಮೀಮಾಂಸಾ ವೇದ ವಿಭಾಗ :ಉತ್ತರ ಮೀಮಾಂಸಾ ಪ್ರಾಚೀನ ಉಪನಿಷತ್ತುಗಳು :ಉತ್ತರ ಮೀಮಾಂಸಾ ಉಪನಿಷತ್ತುಗಳ ದರ್ಶನ :ಉತ್ತರ ಮೀಮಾಂಸಾ ಪ್ರಸ್ಥಾನ ತ್ರಯೀ - ಬ್ರಹ್ಮ ಸೂತ್ರಉತ್ತರ ಮೀಮಾಂಸಾ ಶ್ರೀ ಶಂಕರ ಭಾಷ್ಯ.ಉತ್ತರ ಮೀಮಾಂಸಾ ಆಗಮಗಳುಉತ್ತರ ಮೀಮಾಂಸಾ ಆಧುನಿಕ ಯುಗ :ಉತ್ತರ ಮೀಮಾಂಸಾ ನೋಡಿಉತ್ತರ ಮೀಮಾಂಸಾ ಆಧಾರಉತ್ತರ ಮೀಮಾಂಸಾ

🔥 Trending searches on Wiki ಕನ್ನಡ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸೌರಮಂಡಲಭಾರತದಲ್ಲಿನ ಚುನಾವಣೆಗಳುಓಂ (ಚಲನಚಿತ್ರ)ಆಂಡಯ್ಯಮೂಲಧಾತುಗಳ ಪಟ್ಟಿಬೇಲೂರುಗೋಕಾಕ್ ಚಳುವಳಿನವರತ್ನಗಳುಔಡಲಭಾರತದ ಮುಖ್ಯಮಂತ್ರಿಗಳುಊಳಿಗಮಾನ ಪದ್ಧತಿಲೋಕಸಭೆಜೇನುಸಮಾಜಶಾಸ್ತ್ರಪುನೀತ್ ರಾಜ್‍ಕುಮಾರ್ಡಿ.ಎಲ್.ನರಸಿಂಹಾಚಾರ್ಸಿದ್ಧರಾಮಸವದತ್ತಿಸಹಾಯಧನದೇವತಾರ್ಚನ ವಿಧಿಅಲಾವುದ್ದೀನ್ ಖಿಲ್ಜಿಭಾರತದ ಸಂಸತ್ತುಪಂಚ ವಾರ್ಷಿಕ ಯೋಜನೆಗಳುಚಂದ್ರಯಾನ-೩ವಡ್ಡಾರಾಧನೆಆಂಧ್ರ ಪ್ರದೇಶಭಾವನಾ(ನಟಿ-ಭಾವನಾ ರಾಮಣ್ಣ)ದ.ರಾ.ಬೇಂದ್ರೆಶನಿಹೊಯ್ಸಳೇಶ್ವರ ದೇವಸ್ಥಾನಅಜಯ್ ಜಡೇಜಾಚೋಳ ವಂಶಅಮರೇಶ ನುಗಡೋಣಿದಯಾನಂದ ಸರಸ್ವತಿದ್ರೌಪದಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶಿವಕುಮಾರ ಸ್ವಾಮಿಕರ್ನಾಟಕದ ಜಿಲ್ಲೆಗಳುಬಯಲಾಟತ್ರಿದೋಷಗ್ರಾಮಗಳುಬಬ್ರುವಾಹನಭೂಮಿ ದಿನಹನುಮಾನ್ ಚಾಲೀಸಸಾವಿತ್ರಿಬಾಯಿ ಫುಲೆಸೆಸ್ (ಮೇಲ್ತೆರಿಗೆ)ಶಾಂತಕವಿಕಾರ್ಮಿಕರ ದಿನಾಚರಣೆರಾಷ್ಟ್ರೀಯ ಶಿಕ್ಷಣ ನೀತಿಸ್ವಚ್ಛ ಭಾರತ ಅಭಿಯಾನಹವಾಮಾನಬುಡಕಟ್ಟುನಾಟಕತ್ರಿಕೋನಮಿತಿಯ ಇತಿಹಾಸಸ್ಟಾರ್‌ಬಕ್ಸ್‌‌ಬಾಗಲಕೋಟೆಭಾರತದ ವಿಜ್ಞಾನಿಗಳುಆರ್ಥಿಕ ಬೆಳೆವಣಿಗೆಬಾಲ್ಯ ವಿವಾಹಐಸಿಐಸಿಐ ಬ್ಯಾಂಕ್ಒಂದನೆಯ ಮಹಾಯುದ್ಧಅದ್ವೈತಸಂಸ್ಕೃತಿಉತ್ತರ ಕರ್ನಾಟಕರಾಹುಲ್ ಗಾಂಧಿರಾಷ್ಟ್ರಕೂಟಭಾರತೀಯ ಜನತಾ ಪಕ್ಷಶಿವರಾಜ್‍ಕುಮಾರ್ (ನಟ)ಭಾರತದ ಸ್ವಾತಂತ್ರ್ಯ ಚಳುವಳಿಶಂಕರ್ ನಾಗ್ಬಡತನಭಾರತೀಯ ಮೂಲಭೂತ ಹಕ್ಕುಗಳು🡆 More