ಆರ್ಥ್ರಾಲ್ಜಿಯಾ

ಆರ್ಥ್ರಾಲ್ಜಿಯಾ (ಗ್ರೀಸ್‌ನ ಭಾಷೆಯಿಂದ ಆರ್ಥ್ರೋ-, ಕೀಲು + -ಆಲ್ಗಾಸ್, ನೋವು) ಅಕ್ಷರಶಃ ಕೀಲು ನೋವು ಎಂಬ ಅರ್ಥ ನೀಡುತ್ತದೆ; ಅದು ಗಾಯ, ಸೋಂಕು, ಕಾಯಿಲೆಗಳು (ವಿಶೇಷವಾಗಿ ಸಂಧಿವಾತ) ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ಉಂಟಾಗುವ ಅಸಹಿಷ್ಣುವಾದ ಪ್ರತಿಕ್ರಿಯೆಯ ಒಂದು ಲಕ್ಷಣ.

ಎಮ್ಇಎಸ್ಎಚ್ ಪ್ರಕಾರ, ಪರಿಸ್ಥಿತಿಯು ಅನುದ್ರೇಕಕಾರಿಯಾಗಿದ್ದಾಗ ಮಾತ್ರ "ಆರ್ಥ್ರಾಲ್ಜಿಯಾ" ಪದವನ್ನು ಬಳಸಬೇಕು, ಮತ್ತು ಪರಿಸ್ಥಿತಿಯು ಉದ್ರೇಕಕಾರಿಯಾಗಿದ್ದಾಗ "ಆರ್ಥ್ರೈಟಿಸ್" (ಸಂಧಿವಾತ) ಪದವನ್ನು ಬಳಸಬೇಕು. ರೋಗ ನಿದಾನವು ರೋಗಿಯನ್ನು ಸಂದರ್ಶಿಸುವುದು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಳ್ಳುತ್ತದೆ.

ಕಾರಣಗಳು

ಆರ್ಥ್ರಾಲ್ಜಿಯಾದ ಕಾರಣಗಳು ವಿಭಿನ್ನವಾಗಿವೆ ಮತ್ತು ಕೀಲುಗಳ ದೃಷ್ಟಿಕೋನದಿಂದ, ಅಸ್ಥಿಸಂಧಿವಾತ ಮತ್ತು ಕ್ರೀಡಾ ಗಾಯಗಳಂತಹ ಕ್ಷೀಣಗೊಳಿಸುವ ಮತ್ತು ವಿನಾಶಕಾರಿ ಪ್ರಕ್ರಿಯೆಗಳಿಂದ ಹಿಡಿದು, ಬರ್ಸೈಟಿಸ್‍ನಂತಹ ಕೀಲುಗಳನ್ನು ಸುತ್ತವರಿದ ಅಂಗಾಂಶಗಳ ಊತದವರೆಗೆ ವ್ಯಾಪಿಸಿವೆ. ಇವು ಸೋಂಕುಗಳು ಅಥವಾ ಲಸಿಕೆ ಹಾಕುವಿಕೆಯಂತಹ ಇತರ ಸ್ಥಿತಿಗಳಿಂದ ಪ್ರಚೋದಿತವಾಗಿರಬಹುದು.

ರೋಗನಿರ್ಣಯ

ರೋಗನಿರ್ಣಯವು ರೋಗಿಯನ್ನು ಸಂದರ್ಶಿಸುವುದು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಂಡಿದೆ. ಆರ್ಥ್ರಾಲ್ಜಿಯಾದ ಕಾರಣವನ್ನು ದೃಢಪಡಿಸಲು ಪ್ರಯತ್ನಿಸುವಾಗ, ಸಂದರ್ಶನದ ಮೇಲೆ ಪ್ರಾಶಸ್ತ್ಯವಿರುತ್ತದೆ. ರೋಗಿಗೆ ಸಂಭಾವ್ಯ ಕಾರಣಗಳ ಸಂಖ್ಯೆಯನ್ನು ಸಂಕುಚಿತಗೊಳಿಸುವ ಉದ್ದೇಶಹೊಂದಿರುವ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಸಂಭವನೀಯ ಕಾರಣಗಳ ವೈವಿಧ್ಯಮಯ ಸ್ವರೂಪದ ಹಿನ್ನೆಲೆಯಲ್ಲಿ, ಕೆಲವು ಪ್ರಶ್ನೆಗಳು ಅಸಂಬದ್ದವಾಗಿ ಕಾಣಿಸಬಹುದು. ಉದಾಹರಣೆಗೆ, ರೋಗಿಗೆ ಬಾಯಿ ಒಣಗುವುದು, ಬೆಳಕಿನ ಸಂವೇದನೆ, ಗಂದೆಗಳು ಅಥವಾ ನಡುಕಗಳ ಇತಿಹಾಸವನ್ನು ಕೇಳಬಹುದು. ಈ ಪ್ರಶ್ನೆಗಳಿಗೆ ಯಾವುದಕ್ಕಾದರೂ ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ಸಂಭವನಿಯ ಕಾರಣಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತದೆ ಮತ್ತು ವೈದ್ಯನಿಗೆ ಸರಿಯಾದ ಪರೀಕ್ಷೆಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳ ಕಡೆಗೆ ಮಾರ್ಗದರ್ಶಿಸುತ್ತದೆ.

ಚಿಕಿತ್ಸೆ

ಚಿಕಿತ್ಸೆಯು ನಿರ್ದಿಷ್ಟ ಅಂತರ್ನಿಹಿತ ಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಅಂತರ್ನಿಹಿತ ಕಾರಣವನ್ನು ಮೊದಲು ಮತ್ತು ಅಗ್ರಗಣ್ಯವಾಗಿ ಇಲಾಜು ಮಾಡಲಾಗುತ್ತದೆ. ಚಿಕಿತ್ಸೆಗಳು ತೀವ್ರವಾಗಿ ಹಾನಿಗೊಳಗಾದ ಕೀಲುಗಳಿಗೆ ಕೀಲು ಬದಲಿ ಶಸ್ತ್ರಚಿಕಿತ್ಸೆ, ಪ್ರತಿರಕ್ಷಣಾ ವ್ಯವಸ್ಥೆಯ ಅಪಸಾಮಾನ್ಯ ಕ್ರಿಯೆಗಾಗಿ ಪ್ರತಿರಕ್ಷಣಾ ದಮನಕಾರಿ ಮದ್ದುಗಳು, ಸೋಂಕು ಕಾರಣವಾದಾಗ ಪ್ರತಿಜೀವಿಕಗಳು, ಮತ್ತು ಅಲರ್ಜಿಯ ಪ್ರತಿಕ್ರಿಯೆ ಕಾರಣವಾದಾಗ ಔಷಧಿಗಳನ್ನು ನಿಲ್ಲಿಸುವುದನ್ನು ಒಳಗೊಂಡಿರಬಹುದು. ಪ್ರಾಥಮಿಕ ಕಾರಣವನ್ನು ಇಲಾಜು ಮಾಡುವಾಗ, ನೋವು ನಿರ್ವಹಣೆಯು ಚಿಕಿತ್ಸೆಯಲ್ಲಿ ಪಾತ್ರವಹಿಸಬಹುದು. ಆರ್ಥ್ರಾಲ್ಜಿಯಾದ ನಿರ್ದಿಷ್ಟ ಕಾರಣವನ್ನು ಅವಲಂಬಿಸಿ, ಅದರ ಪಾತ್ರದ ವ್ಯಾಪ್ತಿ ಬದಲಾಗುತ್ತದೆ. ನೋವು ನಿರ್ವಹಣೆಯು ಚಾಚುವ ವ್ಯಾಯಾಮಗಳು, ವೈದ್ಯರ ಔಷಧ ಚೀಟಿ ಬೇಕಾಗದ ನೋವಿನ ಔಷಧಿಗಳು, ಶಿಫಾರಸು ಮಾಡಲಾಗಿರುವ ನೋವಿನ ಔಷಧಿಗಳು, ಅಥವಾ ಲಕ್ಷಣಗಳಿಗೆ ಸೂಕ್ತವೆಂದು ಪರಿಗಣಿತವಾದ ಇತರ ಚಿಕಿತ್ಸೆಗಳನ್ನು ಒಳಗೊಂಡಿರಬಹುದು. ಮೆಣಸಿನಕಾಯಿಯಲ್ಲಿ ಕಂಡುಬರುವ ಒಂದು ಪದಾರ್ಥವಾದ ಕ್ಯಾಪ್ಸಿಸಿನ್, ಸಂಧಿವಾತ ಮತ್ತು ಇತರ ಸ್ಥಿತಿಗಳಿಂದ ಕೀಲು ನೋವನ್ನು ನಿವಾರಿಸಬಹುದು. ಕ್ಯಾಪ್ಸೈಸಿನ್ ದೇಹದಲ್ಲಿ ಎಂಡೋರ್ಫಿನ್ ಎಂಬ ನೋವು ತಡೆಗಟ್ಟುವಂತಹ ರಾಸಾಯನಿಕಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಕ್ಯಾಪ್ಸೈಸಿನ್ ಕ್ರೀಮ್‍ನ ಅಡ್ಡಪರಿಣಾಮಗಳು ಲೇಪಿತ ಪ್ರದೇಶದಲ್ಲಿ ಉರಿ ಅಥವಾ ಕುಟುಕುವಿಕೆಯನ್ನು ಒಳಗೊಂಡಿವೆ. ಮತ್ತೊಂದು ಬಾಹ್ಯ ಆಯ್ಕೆ ಮಿಥೈಲ್ ಸ್ಯಾಲಿಸಿಲೇಟ್ ಘಟಕಾಂಶವನ್ನು ಹೊಂದಿರುವ ಒಂದು ಸಂಧಿವಾತ ಕ್ರೀಂ.

ಆರ್ಥ್ರಾಲ್ಜಿಯಾ 
ಆರ್ಥ್ರಾಲ್ಜಿಯಾದ ಮಿಂಗ್ ಔಷಧಿ.

ಉಲ್ಲೇಖಗಳು

Tags:

ಆರ್ಥ್ರಾಲ್ಜಿಯಾ ಕಾರಣಗಳುಆರ್ಥ್ರಾಲ್ಜಿಯಾ ರೋಗನಿರ್ಣಯಆರ್ಥ್ರಾಲ್ಜಿಯಾ ಚಿಕಿತ್ಸೆಆರ್ಥ್ರಾಲ್ಜಿಯಾ ಉಲ್ಲೇಖಗಳುಆರ್ಥ್ರಾಲ್ಜಿಯಾ

🔥 Trending searches on Wiki ಕನ್ನಡ:

ವಾಲಿಬಾಲ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಉಡುಪಿ ಜಿಲ್ಲೆಬೀಚಿಮಹಮದ್ ಬಿನ್ ತುಘಲಕ್ಅನುಶ್ರೀಪರಿಸರ ವ್ಯವಸ್ಥೆಅಜವಾನಅರ್ಥಶಾಸ್ತ್ರವಾಣಿಜ್ಯ(ವ್ಯಾಪಾರ)ನವೋದಯಜನಮೇಜಯಆರ್ಯರುಪುಸ್ತಕಈಸೂರುಡಾ ಬ್ರೋಭಗವದ್ಗೀತೆಮತದಾನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಜವಾಹರ‌ಲಾಲ್ ನೆಹರುಸುದೀಪ್ಜನ್ನಔಡಲಮಲೇರಿಯಾಕರ್ನಾಟಕದ ಜಾನಪದ ಕಲೆಗಳುನಯಸೇನಹಣಕಾಸುಪದಬಂಧದಾವಣಗೆರೆಕನಕದಾಸರುರಾಣಿ ಅಬ್ಬಕ್ಕಭಾರತದ ನದಿಗಳುಕಲ್ಪನಾಮೌರ್ಯ ಸಾಮ್ರಾಜ್ಯಹರಿಹರ (ಕವಿ)ಹನುಮಾನ್ ಚಾಲೀಸಆದಿವಾಸಿಗಳುಮಲೈ ಮಹದೇಶ್ವರ ಬೆಟ್ಟಕರ್ಕಾಟಕ ರಾಶಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಫಿರೋಝ್ ಗಾಂಧಿಯುಧಿಷ್ಠಿರಎಸ್.ಎಲ್. ಭೈರಪ್ಪಪುಟ್ಟರಾಜ ಗವಾಯಿಕುವೆಂಪುಕೇಶಿರಾಜಮಂಡ್ಯತಲಕಾಡುರಾಷ್ಟ್ರೀಯ ಉತ್ಪನ್ನಸಂವಹನಕರ್ನಾಟಕದ ಮುಖ್ಯಮಂತ್ರಿಗಳುವಡ್ಡಾರಾಧನೆಜರಾಸಂಧಕ್ರಿಕೆಟ್ಸೀಬೆಮಹಾಕವಿ ರನ್ನನ ಗದಾಯುದ್ಧಕನ್ನಡ ಚಿತ್ರರಂಗಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗಿಡಮೂಲಿಕೆಗಳ ಔಷಧಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೂಫಿಪಂಥಹಲ್ಮಿಡಿ ಶಾಸನಭಕ್ತಿ ಚಳುವಳಿಸಹಕಾರಿ ಸಂಘಗಳುನೀನಾದೆ ನಾ (ಕನ್ನಡ ಧಾರಾವಾಹಿ)ಹೊಂಗೆ ಮರಶಿವಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಷ್ಟ್ರಕವಿಬಿ.ಎಫ್. ಸ್ಕಿನ್ನರ್ಅರವಿಂದ ಘೋಷ್ಕಾರ್ಮಿಕರ ದಿನಾಚರಣೆಪೊನ್ನಸಂಗೊಳ್ಳಿ ರಾಯಣ್ಣಕರ್ನಾಟಕದ ಶಾಸನಗಳುಪುರಂದರದಾಸಅಂತಿಮ ಸಂಸ್ಕಾರವಿಕ್ರಮಾರ್ಜುನ ವಿಜಯ🡆 More