ಆರ್ಕ್ಟಿಕ್ ವೃತ್ತ ೬೬೦೩° ಉತ್ತರ ಅಕ್ಷಾಂಶ; ಅಥವಾ ಉತ್ತರ ಮೇರುಕೇಂದ್ರವಾಗಿ ೨೩೦೨೭° ತ್ರಿಜ್ಯವಾಗಿ ಎಳೆದ ವೃತ್ತ (ಉತ್ತರ ಮೇರುವೃತ್ತ).
ಇದೇ ರೀತಿ ದಕ್ಷಿಣದಲ್ಲಿ ಮೇರುವನ್ನು ಕುರಿತು ಅಂಟಾರ್ಕ್ಟಿಕ್ ವೃತ್ತವಿದೆ. ಭೂಮಿಯ ಅಕ್ಷ ಮತ್ತು ಕಕ್ಷಾತಲಗಳ (ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವ ಪಥದ ಹೆಸರು ಭೂಮಿಯ ಕಕ್ಷೆ) ನಡುವೆ ೬೬೦೩೩° ಬಾಗು ಇದೆ. ಈ ಕಾರಣದಿಂದ ಭೂಮಿವಾಸಿಗಳಿಗೆ ಒಂದು ವರ್ಷದಲ್ಲಿ (ಭೂಮಿಗೆ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ) ಸೂರ್ಯ ೨೩೦೨೭° (೯೦೦-೬೬೦ 33° = ೨೩೦ ೨೭°) ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ (ಇವುಗಳಿಗೆ ಸಂಕ್ರಾತಿ ವೃತ್ತಗಳೆಂದು ಹೆಸೆರು) ನಡುವೆ ಆಂದೋಲಿಸಿದಂತೆ ಭಾಸವಾಗುವುದು. ಅಂದರೆ, ಸೂರ್ಯ ಸಂಕ್ರಾತಿವೃತ್ತಗಳ ಗಡಿಯನ್ನು ಉತ್ತರಿಸಿ ಎಂದೂ ಸಾಗುವುದಿಲ್ಲ. ಇದರ ಪರಿಣಾಮವಾಗಿ ಗಡಿಗಳ ಒಳಗಿರುವವರಿಗೆ (ಉದಾ: ಮೈಸೂರಿನವರಿಗೆ) ವರ್ಷದಲ್ಲಿ ಎರಡು ಸಲ ಸೂರ್ಯ ನೆತ್ತಿಯ ಮೇಲೆ ಬರುವುದು (ಬೇರೆ ಗುಣಗಳೂ ಇವೆ.); ಗಡಿ ವೃತ್ತಗಳ ಮೇಲೆ ಇರುವುವವರಿಗೆ ಒಂದೇ ಸಲ ಬರುವುದು; ಗಡಿಗಳಿಂದ ಹೊರಗೆ ಇರುವವರಿಗೆ ಎಂದೂ ಬರುವುದಿಲ್ಲ-ಇಷ್ಟು ಮಾತ್ರವಲ್ಲ, ಇವರ ರಾತ್ರಿ ಹಗಲುಗಳ ಏರಿಳಿತಗಳ ವ್ಯತ್ಯಾಸ ತೀವ್ರವಾಗಿರುವುದು. ಆರ್ಕ್ಟಿಕ್ (ಅದರಂತೆ ಅಂಟಾರ್ಕ್ಟಿಕ್) ವೃತ್ತ ಇನ್ನೊಂದು ಗಡಿ. ಅಲ್ಲಿರುವವರಿಗೆ ವರ್ಷದಲ್ಲಿ ಒಂದು ದಿವಸ (೨೪ ಗಂಟೆ ಕಾಲ) ಸೂರ್ಯ ಮುಳುಗುವುದೇ ಇಲ್ಲ-ಸಂಪುರ್ಣ ಹಗಲು; ಮುಂದೆ ಒಂದು ದಿವಸ (೨೪ ಗಂಟೆ ಕಾಲ) ಸೂರ್ಯ ಮೂಡುವುದೇ ಇಲ್ಲ-ಪುರ್ಣ ರಾತ್ರಿ. ಈ ಕಾರಣದಿಂದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ವೃತ್ತಗಳಿಗೆ ಪ್ರಾಧಾನ್ಯ ಬಂದಿದೆ. ಈ ವೃತ್ತಗಳ ಒಳಗೆ (೬೬೦೩೩° ನಿಂದ ಆಯಾ ಮೇರುವರೆಗೆ) ಇರುವವರಿಗೆ ಹಗಲು, ರಾತ್ರಿಗಳ ವ್ಯತ್ಯಾಸ ಅತಿ ತೀವ್ರ ಮಾತ್ರವಲ್ಲ, ವರ್ಷದಲ್ಲಿ ಹಲವಾರು ದಿವಸ ನಿರಂತರ ಹಗಲು ನಿರಂತರ ರಾತ್ರಿಯೂ ಇರುತ್ತವೆ. ಮೇರುಬಿಂದುಗಳಲ್ಲಿಯೇ (೯೦೦ ಉ. ಮತ್ತು ದ.) ಇರುವವರಿಗೆ ೬ ತಿಂಗಳು ನಿರಂತರ ಹಗಲೂ ೬ ತಿಂಗಳು ನಿರಂತರ ರಾತ್ರಿಯೂ ಇರುತ್ತವೆ.
ಭೂಮಧ್ಯರೇಖೆಯಿಂದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ವೃತ್ತಗಳ ದೂರ ಸುಮಾರು ೧೧೮೨ ಕಿಮೀ. ಆರ್ಕ್ಟಿಕ್ ವೃತ್ತ ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯ ಖಂಡಗಳ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಈ ಎಲ್ಲ ಖಂಡಗಳ ವಾಯುಗುಣ, ಸಸ್ಯಜೀವನ ಜನಜೀವನಕ್ರಮ ಈ ವೃತ್ತದ ಭಾಗದಲ್ಲಿ ಸಾಮಾನ್ಯವಾಗಿ ಒಂದೇ ರೀತಿ ಇದೆ. ಅತಿ ಶೀತ ಪ್ರದೇಶಗಳಾದ್ದರಿಂದ ಇಲ್ಲಿನ ಜನ ಬೆಚ್ಚಗಿರಲು ವಿಶಿಷ್ಟ ನಮೂನೆಯ ಉಡುಪುಗಳನ್ನು ಧರಿಸುತ್ತಾರೆ. ಆರ್ಕ್ಟಿಕ್ ವೃತ್ತ ಹಾದುಹೋಗುವ ಕೆಲವು ಪ್ರಮುಖ ದೇಶ,ಭೂ ಪ್ರದೇಶ ಮತ್ತು ಸಮುದ್ರಗಳು ಇಂತಿವೆ.
This article uses material from the Wikipedia ಕನ್ನಡ article ಆರ್ಕ್ಟಿಕ್ ವೃತ್ತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.