ಆಜಿಬಾಯಿ ಬನಾರಸೆ

  ಆಜಿಬಾಯಿ ಬನಾರಸೆ (೧೯೧೦ - ೩ ಡಿಸೆಂಬರ್ ೧೯೮೩), ಲಂಡನ್‌ನಲ್ಲಿ ಭಾರತೀಯ ಸಮುದಾಯದ ನಾಯಕರಾಗಿದ್ದರು.

( ಮರಾಠಿ ಸಮುದಾಯದಲ್ಲಿ ಅವಳನ್ನು "ಲಂಡನ್‌ಚಾ ಆಜಿಬಾಯಿ" ಅಥವಾ "ಲಂಡನ್‌ನ ಅಜ್ಜಿ" ಎಂದೂ ಕರೆಯುತ್ತಾರೆ).

ಆಜಿಬಾಯಿ ಬನಾರಸೆ
Born
ರಾಧಾಬಾಯಿ ದಾಹಕೆ

೧೯೧೦
ಚೌಂಡಿ, ಯವತ್ಮಾಲ್, ಮಹಾರಾಷ್ಟ್ರ
Died೩ ಡಿಸೆಂಬರ್ ೧೯೮೩
ಲಂಡನ್
Other namesಲಂಡನ್‌ಚಾ ಆಜಿಬಾಯಿ, ಆಜಿಬಾಯಿ ಬನಾರಸೆ
Occupation(s)ಸಮುದಾಯದ ನಾಯಕಿ, ಉದ್ಯಮಿ

ಆರಂಭಿಕ ಜೀವನ

ರಾಧಾಬಾಯಿ ದಾಹಕೆ ( ಆಜಿಬಾಯಿ ಬನಾರಸೆ) ಅವರು ಮಹಾರಾಷ್ಟ್ರದ ಯವತ್ಮಾಲ್‌ನ ಚೌಂಡಿಯಲ್ಲಿ ಜನಿಸಿದರು. ಅವರು ಚಿಕ್ಕವಯಸ್ಸಿನಲ್ಲಿ ತುಲ್ಶಿಹರ್ ದೇಹೇಂಕರ್ ಅವರನ್ನು ವಿವಾಹವಾಗಿ, ಐದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅವರು ೩೩ನೇ ವಯಸ್ಸಿನಲ್ಲಿ ವಿಧವೆಯಾದರು. ಅವರು ೧೯೪೫ರಲ್ಲಿ ಸೀತಾರಾಮಪಂತ್ ಬನಾರಸ್ ಅವರನ್ನು ಮರುವಿವಾಹವಾದರು.

ಲಂಡನ್‌ನಲ್ಲಿ

ಬನಾರಸೆ ಅವರು ತನ್ನ ಎರಡನೇ ಪತಿಯೊಂದಿಗೆ ಲಂಡನ್‌ಗೆ ತೆರಳಿ ಅಲ್ಲಿ ಅವರ ಪುತ್ರರ ವಸತಿಗೃಹಗಳಲ್ಲಿ ಕೆಲಸ ಮಾಡಿದರು. ೧೯೫೦ರಲ್ಲಿ ಮತ್ತೆ ವಿಧವೆಯಾದರು. ೧೯೫೩ರರಲ್ಲಿ, ತನ್ನ ಪತಿಯ ಕುಟುಂಬದಿಂದ ತಿರಸ್ಕರಿಸಲ್ಪಟ್ಟ ಬನಾರಸೆ ಸಾಲ ಮಾಡಿ ಲಂಡನ್‌ನ ಹೂಪ್ ಲೇನ್‌ನಲ್ಲಿ ಮನೆಯನ್ನು ಖರೀದಿಸಿದರು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಿದರು. ಅವರು ಅಡುಗೆ ವ್ಯಾಪಾರವನ್ನೂ ಮಾಡುತ್ತಿದ್ದರು. ಆಕೆಯ ಭಾರತೀಯ ಅಡುಗೆಯನ್ನು ಯುವ ಭಾರತೀಯರು ಮೆಚ್ಚಿದರು. ಕಾಲಾನಂತರದಲ್ಲಿ, ಅವರು ಹನ್ನೆರಡು ಮನೆಗಳು ಮತ್ತು ಕಾರುಗಳ ಸಮೂಹವನ್ನು ಹೊಂದಿದರು ಮತ್ತು ೧೯೬೫ ರ ಹೊತ್ತಿಗೆ ಅವರು ಗೋಲ್ಡರ್ಸ್ ಗ್ರೀನ್‌ನಲ್ಲಿರುವ ತಮ್ಮ ಮನೆಯಲ್ಲಿ ಹಿಂದೂ ದೇವಾಲಯವನ್ನು ತೆರೆದರು. ಅವರು ತಮ್ಮ ಹುಟ್ಟೂರಾದ ಚೌಂಡಿಯಲ್ಲಿ ಒಂದು ಬಾವಿ ಮತ್ತು ದೇವಸ್ಥಾನಕ್ಕೆ ಧನಸಹಾಯ ಮಾಡಿದರು.

ಲಂಡನ್‌ನಲ್ಲಿ ಅವರು ಮಹಾರಾಷ್ಟ್ರ ಮಂಡಲ ಲಂಡನ್‌ನ ಅಧ್ಯಕ್ಷರಾಗಿದ್ದರು. ಅವರ ಮೊಮ್ಮಗಳು, ಶ್ಯಾಮಲ್ ಪಿತಲೆ, ೨೦೧೯ ರಲ್ಲಿ ಮಹಾರಾಷ್ಟ್ರ ಮಂಡಲದ ಅಧ್ಯಕ್ಷರಾಗಿದ್ದರು

ವೈಯಕ್ತಿಕ ಜೀವನ

ಬನಾರಸೆ ಅವರು ೧೯೮೩ ರರಲ್ಲಿ ( ತಮ್ಮ ೭೩ ನೇ ವಯಸ್ಸಿನಲ್ಲಿ, ಲಂಡನ್‌ನಲ್ಲಿ) ನಿಧನರಾದರು. ಲಂಡನ್‌ನ ಮೇಯರ್ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ೧೯೯೮ರಲ್ಲಿ ಸರೋಜಿನಿ ವೈದ್ಯ ಅವರ, ಕಹಾನಿ ಲಂಡನ್‌ಚಾ ಆಜಿಬೈಂಚಿ, ಒಂದು ಜೀವನಚರಿತ್ರೆ, ಮರಾಠಿಯಲ್ಲಿ ಪ್ರಕಟವಾಯಿತು. ಜೀವನಚರಿತ್ರೆಯನ್ನು ರಾಜೀವ್ ಜೋಶಿಯವರು ಲಂಡನ್‌ಚಾರ್ಯ ಆಜಿಬಾಯಿ ಎಂಬ ನಾಟಕಕ್ಕೆ ಅಳವಡಿಸಿಕೊಂಡರು. ಹಿರಿಯ ನಟಿ ಉಷಾ ನಾಡ್‌ಕರ್ಣಿ ಬನಾರಸೆ ಪಾತ್ರವನ್ನು ನಿರ್ವಹಿಸಿದರು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  • "ಲಂಡನ್‌ನ ಅಜ್ಜಿ" (2015), ಆಜಿಬಾಯಿ ಬನಾರಸೆ ಕುರಿತ ವಿದ್ಯಾರ್ಥಿ ಚಲನಚಿತ್ರ, ಇಂಗ್ಲಿಷ್‌ನಲ್ಲಿ, ಯೂಟ್ಯೂಬ್‌ನಲ್ಲಿ.

Tags:

ಆಜಿಬಾಯಿ ಬನಾರಸೆ ಆರಂಭಿಕ ಜೀವನಆಜಿಬಾಯಿ ಬನಾರಸೆ ಲಂಡನ್‌ನಲ್ಲಿಆಜಿಬಾಯಿ ಬನಾರಸೆ ವೈಯಕ್ತಿಕ ಜೀವನಆಜಿಬಾಯಿ ಬನಾರಸೆ ಉಲ್ಲೇಖಗಳುಆಜಿಬಾಯಿ ಬನಾರಸೆ ಬಾಹ್ಯ ಕೊಂಡಿಗಳುಆಜಿಬಾಯಿ ಬನಾರಸೆ

🔥 Trending searches on Wiki ಕನ್ನಡ:

ವಿಮೆಆದಿ ಶಂಕರಶಂಕರ್ ನಾಗ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ರಂಗಭೂಮಿಆತ್ಮಚರಿತ್ರೆಗ್ರಹಕನ್ನಡ ವಿಶ್ವವಿದ್ಯಾಲಯಯು.ಆರ್.ಅನಂತಮೂರ್ತಿಭಾರತದ ರಾಜಕೀಯ ಪಕ್ಷಗಳುವೇದ (2022 ಚಲನಚಿತ್ರ)ಜನಪದ ಕ್ರೀಡೆಗಳುಪೊನ್ನಶಬರಿಕೋಶಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಾಲುಮರದ ತಿಮ್ಮಕ್ಕಹರಿಶ್ಚಂದ್ರಆದಿಪುರಾಣಶ್ರೀವಿಜಯಹರಪ್ಪಶಿವರಾಮ ಕಾರಂತಕೇಶಿರಾಜರಾಷ್ಟ್ರೀಯತೆಟಾಮ್ ಹ್ಯಾಂಕ್ಸ್ಕಮಲದಹೂಕನ್ನಡ ಸಾಹಿತ್ಯ ಪರಿಷತ್ತುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಾಲ ಗಂಗಾಧರ ತಿಲಕಸಂಗೊಳ್ಳಿ ರಾಯಣ್ಣನಿಜಗುಣ ಶಿವಯೋಗಿಬೆಳವಡಿ ಮಲ್ಲಮ್ಮಪ್ರವಾಹಕರ್ನಾಟಕದ ಇತಿಹಾಸಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತೀಯ ಜನತಾ ಪಕ್ಷಜಯದೇವಿತಾಯಿ ಲಿಗಾಡೆಮೂಲಭೂತ ಕರ್ತವ್ಯಗಳುಹಳೆಗನ್ನಡರಾಜ್ಯಸಭೆಜೀವನಶ್ರೀಶೈಲತೆಂಗಿನಕಾಯಿ ಮರಹದಿಬದೆಯ ಧರ್ಮರಾಷ್ಟ್ರಕವಿಮಾನವನಲ್ಲಿ ರಕ್ತ ಪರಿಚಲನೆಜಲ ಮಾಲಿನ್ಯಕನ್ನಡ ಸಂಧಿವಿಜಯನಗರ ಸಾಮ್ರಾಜ್ಯಕಬಡ್ಡಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾವಣಛಂದಸ್ಸುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕೃಷ್ಣಜಾತ್ರೆಸಂಶೋಧನೆಭಾರತದಲ್ಲಿ ತುರ್ತು ಪರಿಸ್ಥಿತಿಕೊರೋನಾವೈರಸ್ಗೋತ್ರ ಮತ್ತು ಪ್ರವರಅರ್ಜುನದೊಡ್ಡರಂಗೇಗೌಡಕಿವಿಬಿ. ಆರ್. ಅಂಬೇಡ್ಕರ್ಬಹುವ್ರೀಹಿ ಸಮಾಸಚನ್ನಬಸವೇಶ್ವರಉಡ್ಡಯನ (ಪ್ರಾಣಿಗಳಲ್ಲಿ)ರಸ(ಕಾವ್ಯಮೀಮಾಂಸೆ)ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಹೈದರಾಲಿಅಂಗವಿಕಲತೆಕರ್ನಾಟಕ ವಿಧಾನ ಪರಿಷತ್ಭಾರತೀಯ ಸಶಸ್ತ್ರ ಪಡೆಮಹಾಭಾರತಸಂಭೋಗಭಗತ್ ಸಿಂಗ್🡆 More