ಅಸೀಮಾ ಚಟರ್ಜಿ

ಅಸೀಮಾ ಚಟರ್ಜಿ (೨೩ ಸೆಪ್ಟೆಂಬರ್ ೧೯೧೭-೨೨ ನವೆಂಬರ್ ೨೦೦೬) ಭಾರತೀಯ ರಸಾಯನ ಶಾಸ್ತ್ರಜ್ಞೆ.

ಆರ್ಗಾನಿಕ್ ರಸಾಯನ ಶಾಸ್ತ್ರ ಮತ್ತು ಫೈಟೋ ಮೆಡಿಸಿನ್ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ವಿಂಕಾ ಆಲ್ಕಲಾಇಡ್ಸ್ ಎಂಬ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಇವರು ಮೂರ್ಛೆ ರೋಗ ವಿರೋಧಕ ಮತ್ತು ಮಲೇರಿಯಾ ವಿರೋಧಕ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟು ದುಡಿದಿದ್ದಾರೆ. ಭರತ ಖಂಡದ ಔಷಧೀಯ ಸಸ್ಯಗಳ ಬಗ್ಗೆ ಸಂಪುಟಗಳನ್ನು ರಚಿಸಿದ್ದಾರೆ.

ಅಸಿಮಾ ಚಟರ್ಜಿ
অসীমা চট্টোপাধ্যায়
ಅಸೀಮಾ ಚಟರ್ಜಿ
ಅಸೀಮಾ ಚಟರ್ಜಿ
ಜನನ(೧೯೧೭-೦೯-೨೩)೨೩ ಸೆಪ್ಟೆಂಬರ್ ೧೯೧೭
ಕೊಲ್ಕತ್ತಾ, ಬಂಗಾಳ, ಬ್ರಿಟಿಷ್ ಭಾರತ
ಮರಣError: Need valid birth date (second date): year, month, day
ಕೋಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಜೈವಿಕ ರಸಾಯನಶಾಸ್ತ್ರ, ಫೈಟೊಮೆಡಿಸಿನ್
ಸಂಸ್ಥೆಗಳುಕಲ್ಕತ್ತಾ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಕಲ್ಕತ್ತಾ ವಿಶ್ವವಿದ್ಯಾಲಯ

ಜೀವನ ಮತ್ತು ವಿದ್ಯಾಭ್ಯಾಸ

ಅಸೀಮಾ ಚಟರ್ಜಿಯವರು ಪಶ್ಚಿಮ ಬಂಗಾಳದಲ್ಲಿ ೨೩ ಸೆಪ್ಟೆಂಬರ್ ೧೯೧೭ ರಂದು ಜನಿಸಿದರು. ಕೊಲ್ಕತ್ತಾದಲ್ಲಿ ಬೆಳೆದ ಇವರು ಬಹಳ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಶಾಲೆಯನ್ನು ಮುಗಿಸಿ, ಕಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಆನರ್ಸ್ ಪದವಿ ಪಡೆದರು.

ವೃತ್ತಿ

ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಲೇಡಿ ಬ್ರಬೋರ್ನ್ ಕಾಲೇಜಿನಲ್ಲಿ ಸೇರಿಕೊಂಡರು ಮತ್ತು ಅಲ್ಲಿ ರಸಾಯನಶಾಸ್ತ್ರ ವಿಭಾಗವನ್ನು ಸ್ಥಾಪಿಸಿದರು. ೧೯೫೪ ರಲ್ಲಿ, ಅಸಿಮಾ ಚಟರ್ಜಿ ಕಲ್ಕತ್ತಾ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ಗೆ ಸೇರಿದರು, ಶುದ್ಧ ರಸಾಯನಶಾಸ್ತ್ರದಲ್ಲಿ ಓದುಗರಾಗಿ.

ಶೈಕ್ಷಣಿಕ ಚಟುವಟಿಕೆಗಳು

೧೯೩೮ರಲ್ಲಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರೆಯಾದ ಅಸೀಮಾರವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡಲು ಪ್ರಾರಂಭಿಸಿ, ಸಸ್ಯಗಳಿಂದ ಉತ್ಪಾದಿಸಲ್ಪಡುವ ರಾಸಾಯನಿಕಗಳು ಮತ್ತು ಸಿಂಥೆಟಿಕ್ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗಗಳಲ್ಲಿ ಕೆಲಸಮಾಡಿದರು. ಅವರ ಮಾರ್ಗದರ್ಶಕರಾಗಿ ರಸಾಯನ ಶಾಸ್ತ್ರದ ಆಗಿನ ದಿಗ್ಗಜರಾದ ಪ್ರಫುಲ್ಲ ಚಂದ್ರ ರೇ ಮತ್ತು ಸತ್ಯೇಂದ್ರನಾಥ್ ಬೋಸ್ ಇದ್ದರು. ಆನಂತರ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಲೇಡಿ ಬ್ರಾಬೋರ್ನ್ ಕಾಲೇಜಿಗೆ ಸೇರಿದ ಅವರು ರಸಾಯಶಾಸ್ತ್ರ ವಿಭಾಗದ ಆರಂಭಿಕ ಮುಖ್ಯಸ್ಥರಾಗಿ ೧೯೪೦ ರಲ್ಲಿ ಕೆಲಸಕ್ಕೆ ಸೇರಿದರು. ಭಾರತೀಯ ವಿಶ್ವವಿದ್ಯಾಲಯ ನೀಡುವ ಪಿ.ಎಚ್.ಡಿ ಪದವಿಗೆ ಭಾಜನರಾದ ಪ್ರಪ್ರಥಮ ಭಾರತೀಯ ಮಹಿಳೆ ಅಸೀಮಾ ಚಟರ್ಜಿ.ಅವರಿಗೆ ಪಿ.ಎಚ್.ಡಿ ಪದವಿ ೧೯೪೪ ರಲ್ಲಿ ದೊರೆಯಿತು. ೧೯೫೪ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ನಲ್ಲಿ ರೀಡರ್ ಹುದ್ದೆಗೆ ಸೇರಿದರು. ೧೯೬೨ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿಷ್ಟಿತ ಖೈರಾ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿ, ೧೯೮೨ ರ ವರೆಗೂ ಆ ಸ್ಥಾನದಲ್ಲಿದ್ದರು.

ಪ್ರಶಸ್ತಿ-ಪುರಸ್ಕಾರಗಳು

  • ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರೇಮ್ ಚಂದ್ ರಾಯ್ ಚಂದ್ ಸ್ಕಾಲರ್
  • ಯಾವುದೇ ಭಾರತೀಯ ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ ಪದವಿಯ ಪಡೆದ ಮೊಟ್ಟ ಮೊದಲ ಮಹಿಳೆ.
  • ೧೯೬೨-೧೯೮೨ ರ ವರೆಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಖೈರಾ ಪ್ರೊಫೆಸರ್ ಸ್ಥಾನ.
  • ೧೯೭೨ ರಲ್ಲಿ ಯು.ಜಿ.ಸಿ. ಪ್ರಾಯೋಜಿತ ನೈಸರ್ಗಿಕ ರಸಾಯನ ಶಾಸ್ತ್ರದ ಶಿಕ್ಷಣ ಮತ್ತು ಪ್ರಶಿಕ್ಷಣ ಕಾರ್ಯಕ್ರಮದ ಗೌರವಾನ್ವಿತ ಸಂಚಾಲಕಿಯಾಗಿ ನೇಮಕ.
  • ೧೯೬೦ ರಲ್ಲಿ ಇಂಡಿಯನ್ ನ್ಯ್ಯಾಷನಲ್ ಸೈನ್ಸ್ ಅಕಾಡೆಮಿಯ "ಫೆಲೋ"ಆಗಿ ನೇಮಕ.
  • ೧೯೬೧ ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದು ಈ ಪ್ರಶಸ್ತಿ ಪಡೆದ ಪ್ರಪ್ರಥಮ ಮಹಿಳೆ ಎನಿಸಿಕೊಂಡರು.
  • ೧೯೭೫ ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದರು. ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪ್ರಪ್ರಥಮ ಮಹಿಳೆ.
  • ಹಲವಾರು ವಿಶ್ವವಿದ್ಯಾಲಯಗಳಿಂದ ಡಿ.ಎಸ್ಸಿ ಪದವಿ ಪ್ರದಾನ.
  • ೧೯೮೨-೧೯೯೦ ರ ವರೆಗೆ ಭಾರತದ ರಾಷ್ಟ್ರಪತಿಗಳಿಂದ ರಾಜ್ಯಸಭಾ ಸದಸ್ಯರಾಗಿ ನಾಮಾಂಕಿತಗೊಂಡರು.
  • ೨೩ ಸೆಪ್ಟೆಂಬರ್ ೨೦೧೭ರಂದು ಚಟರ್ಜಿಯವರ ಜನ್ಮಶತಮಾನೋತ್ಸವಾದ ಗೌರವಾರ್ಥ ಗೂಗಲ್ 24 ಗಂಟೆಗಳ ಗೂಗಲ್ ಡೂಡಲ್ ಅನ್ನು ನಿಯೋಜಿಸಿತು.

ಗೂಗಲ್ ಗೌರವ

ಗೂಗಲ್ ಡೂಡಲ್, ೨೩ ಸೆಪ್ಟೆಂಬರ್ ೨೦೧೭ ರಂದು ಅಸಿಮಾ ಚಟರ್ಜಿಯ ೧೦೦ ನೇ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಥೆಯಿಂದ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಆಚರಿಸಿತು.

ಬಾಹ್ಯ ಕೊಂಡಿಗಳು

ಉಲ್ಲೇಖ

ಹೆಚ್ಚಿನ ಓದಿಗಾಗಿ

Tags:

ಅಸೀಮಾ ಚಟರ್ಜಿ ಜೀವನ ಮತ್ತು ವಿದ್ಯಾಭ್ಯಾಸಅಸೀಮಾ ಚಟರ್ಜಿ ವೃತ್ತಿಅಸೀಮಾ ಚಟರ್ಜಿ ಶೈಕ್ಷಣಿಕ ಚಟುವಟಿಕೆಗಳುಅಸೀಮಾ ಚಟರ್ಜಿ ಪ್ರಶಸ್ತಿ-ಪುರಸ್ಕಾರಗಳುಅಸೀಮಾ ಚಟರ್ಜಿ ಗೂಗಲ್ ಗೌರವಅಸೀಮಾ ಚಟರ್ಜಿ ಬಾಹ್ಯ ಕೊಂಡಿಗಳುಅಸೀಮಾ ಚಟರ್ಜಿ ಉಲ್ಲೇಖಅಸೀಮಾ ಚಟರ್ಜಿ ಹೆಚ್ಚಿನ ಓದಿಗಾಗಿಅಸೀಮಾ ಚಟರ್ಜಿಮಲೇರಿಯಾ

🔥 Trending searches on Wiki ಕನ್ನಡ:

ಷಟ್ಪದಿವಿದ್ಯಾರಣ್ಯಭಾರತದ ಪ್ರಧಾನ ಮಂತ್ರಿಮೈಸೂರುಹತ್ತಿಅವ್ಯಯಭಾರತದ ಸ್ವಾತಂತ್ರ್ಯ ಚಳುವಳಿಕೊಪ್ಪಳಸ್ಟಾರ್‌ಬಕ್ಸ್‌‌ತ. ರಾ. ಸುಬ್ಬರಾಯಆದಿವಾಸಿಗಳುಸಲಿಂಗ ಕಾಮಉಪೇಂದ್ರ (ಚಲನಚಿತ್ರ)ರಾಷ್ಟ್ರಕವಿಸೆಸ್ (ಮೇಲ್ತೆರಿಗೆ)ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶ್ಯೆಕ್ಷಣಿಕ ತಂತ್ರಜ್ಞಾನಮಹಾಕವಿ ರನ್ನನ ಗದಾಯುದ್ಧಬಿ. ಶ್ರೀರಾಮುಲುಎಸ್.ಎಲ್. ಭೈರಪ್ಪಹೈದರಾಲಿಬಿಳಿ ರಕ್ತ ಕಣಗಳುವಿಜಯಪುರವಿವಾಹಶ್ರೀವಿಜಯಕನ್ನಡ ಗುಣಿತಾಕ್ಷರಗಳುಯು. ಆರ್. ಅನಂತಮೂರ್ತಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಕೃಷ್ಣರಾಜನಗರವಿನಾಯಕ ಕೃಷ್ಣ ಗೋಕಾಕಮತದಾನರಾಹುಲ್ ಗಾಂಧಿಗೋಪಾಲಕೃಷ್ಣ ಅಡಿಗಮಂಗಳೂರುಟೊಮೇಟೊಶ್ರೀಕೃಷ್ಣದೇವರಾಯಜವಾಹರ‌ಲಾಲ್ ನೆಹರುಭಾರತದ ಸಂವಿಧಾನ ರಚನಾ ಸಭೆವಿಷ್ಣುಬಳ್ಳಾರಿನೀರಿನ ಸಂರಕ್ಷಣೆಸುಭಾಷ್ ಚಂದ್ರ ಬೋಸ್ಪಿತ್ತಕೋಶನರೇಂದ್ರ ಮೋದಿಜಾಗತೀಕರಣಕನ್ನಡದಲ್ಲಿ ವಚನ ಸಾಹಿತ್ಯಕಲ್ಪನಾಕರ್ನಾಟಕ ಸ್ವಾತಂತ್ರ್ಯ ಚಳವಳಿಗುರುರಾಜ ಕರಜಗಿದಿಯಾ (ಚಲನಚಿತ್ರ)ಆಂಧ್ರ ಪ್ರದೇಶತಲಕಾಡುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅನುರಾಧಾ ಧಾರೇಶ್ವರಶಿವರೋಮನ್ ಸಾಮ್ರಾಜ್ಯವಲ್ಲಭ್‌ಭಾಯಿ ಪಟೇಲ್ಹುಲಿಜ್ವರಬ್ಯಾಡ್ಮಿಂಟನ್‌ಯುರೋಪ್ನವರತ್ನಗಳುಅರಬ್ಬೀ ಸಾಹಿತ್ಯಪ್ರಬಂಧಗೋಕಾಕ್ ಚಳುವಳಿಜಾಹೀರಾತುಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಸಿಂಧನೂರುಮಲ್ಟಿಮೀಡಿಯಾಅಯೋಧ್ಯೆಶಿವರಾಜ್‍ಕುಮಾರ್ (ನಟ)ಸೂಫಿಪಂಥಜಯಪ್ರಕಾಶ ನಾರಾಯಣಕಳಸಬುಧಪಶ್ಚಿಮ ಘಟ್ಟಗಳು🡆 More