ಅಸಂಗ

ಅಸಂಗ (೩೭೫-೪೫೦) - ಯೋಗಾಚಾರವೆಂಬ ಬೌದ್ಧಸಂಪ್ರದಾಯದ ಪ್ರವರ್ತಕ.

ಈತ ಭಾರತದ ವಾಯವ್ಯಪ್ರದೇಶದ ಪುರುಷಪುರ (ಇಂದಿನ ಪಾಕಿಸ್ತಾನದ ಪೇಷಾವರ್) ಎಂಬಲ್ಲಿನ ಕೌಶಿಕಗೋತ್ರದ ಬ್ರಾಹ್ಮಣ. ಇವನ ತಮ್ಮ ವಸುಬಂಧುವೂ ಪ್ರಖ್ಯಾತನಾದ ಯೋಗಾಚಾರ(ಇದನ್ನು ವಿಜ್ಞಾನವಾದ ಎಂದೂ ಕರೆಯುತ್ತಾರೆ)ದ ದಾರ್ಶನಿಕ. ಮೊದಲಿಗೆ ಸರ್ವಾಸ್ತಿವಾದ ಪಂಥದ ಅನುಯಾಯಿಯಾಗಿದ್ದು, ಮಹಾಯಾನದಲ್ಲಿದ್ದ ಶುಷ್ಕಬೌದ್ಧಿಕ ಪ್ರಾಮುಖ್ಯದಿಂದ ಬೇಸರಗೊಂಡು ಸಮಾಧಿ-ಯೋಗ-ಧ್ಯಾನಗಳಿಗೆ ಪ್ರಾಧಾನ್ಯಕೊಡುವ ಸಲುವಾಗಿ ಹೊಸದೊಂದು ಶಾಖೆಯನ್ನೇ ಆರಂಭಿಸಿದ. ತುಷಿತ ಸ್ವರ್ಗದಲ್ಲಿ ಭವಿಷ್ಯದ್ಬುದ್ಧನಾದ ಮೈತ್ರೇಯನೇ ಅಸಂಗನಿಗೆ ಹಲವಾರು ಆಗಮಗಳನ್ನೂ ಕಾಣಿಸಿದನೆಂಬ ಶ್ರದ್ಧೆ ೪ ಅಥವಾ ೫ ನೆಯ ಶತಮಾನಗಳಲ್ಲಿ ಬಲವಾಗಿತ್ತು. ವಾಸ್ತವವಾಗಿ ಅಸಂಗನು ಮೈತ್ರೇಯನಾಥನೆಂಬ ಐತಿಹಾಸಿಕ ಗುರುವಿನ ಶಿಷ್ಯನಾಗಿದ್ದ. ಈ ಗುರುವಿನ ವಿಚಾರ ಹೆಚ್ಚಾಗಿ ತಿಳಿದುಬಂದಿಲ್ಲ.

ಅಸಂಗ
ಜಪಾನ ದೇಶದ ಕ್ರಿ.ಶ ೧೨೦೮ ರ ಅಸಂಗನ ಕಟ್ಟಿಗೆಯ ಮೂರ್ತಿ
ಅಸಂಗ
ಅಸಂಗ ಮತ್ತು ಮೈತ್ರೇಯನ ಟಿಬೆಟಿಯನ್ ಚಿತ್ರಣ

ಗ್ರಂಥಗಳು

ಮೈತ್ರೇಯನಾಥನು ಅಸಂಗನಿಗೆ ಕಾಣಿಸಿದನೆಂದು ಹೇಳಲಾದ ಯೋಗಾಚಾರ ಭೂಮಿಶಾಸ್ತ್ರದ ಒಂದು ಪರಿಚ್ಛೇದವಾದ ಬೋಧಿಸತ್ವಭೂಮಿ ಮಾತ್ರ ಸಂಸ್ಕೃತದಲ್ಲಿ ಉಳಿದುಬಂದಿದೆ. ಈ ಗ್ರಂಥ ಅಸಂಗನದೇ ಎಂದು ಟಿಬೆಟ್ ಸಂಪ್ರದಾಯ ಹೇಳುತ್ತದೆ. ಅಸಂಗನ ಗ್ರಂಥಗಳೆಲ್ಲ ಚೀನಿ ಭಾಷೆಯ ಪರಿವರ್ತನೆಗಳಲ್ಲಿ, ಟಿಬೆಟ್ ದೇಶದ ತಾನ್‌ಜೂರ್‌ ಸಂಗ್ರಹದಲ್ಲಿ ಉಪಲಬ್ಧವಿವೆ. ಅವನ ಮಹಾಯಾನ ಸಂಪರಿಗ್ರಹವೆಂಬ ಗ್ರಂಥವನ್ನು ಸಂಸ್ಕೃತ ಭಾಷೆಯಿಂದ ಪರಮಾರ್ಥನು (೪೯೯-೫೬೯) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ; ಅವನ ಇನ್ನೊಂದು ಗ್ರಂಥವಾದ ಮಹಾಯಾನಾಭಿಧರ್ಮ ಸಂಗೀತಿಶಾಸ್ತ್ರವನ್ನು ಯುವಾನ್‌ಚಾಂಗ್ ೬ರಲ್ಲಿ ಚೀನಿಭಾಷೆಗೆ ಪರಿವರ್ತಿಸಿದ. ವಜ್ರಚ್ಛೇದಿಕಾ ಎಂಬ ಗ್ರಂಥಕ್ಕೆ ಅಸಂಗ ಬರೆದ ಭಾಷ್ಯವನ್ನು ಧರ್ಮಗುಪ್ತವೆಂಬ ಭಿಕ್ಷು (೫೯೦-೬೧೬) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ. ಆತ ಅಸಂಗನ ಪಾಂಡಿತ್ಯವನ್ನೂ ಹೊಗಳಿದ್ದಾನೆ; ಅದರಲ್ಲಿ ಅಸಂಗನ ಜೀವಿತಕ್ರಮವೂ ನಿರೂಪಿತವಾಗಿದೆ. ವಸುಬಂಧುವಿನ ಮತಪರಿವರ್ತನೆಗೆ ಅಸಂಗನೇ ಕಾರಣನೆಂದು ಈ ಗ್ರಂಥದಿಂದ ತಿಳಿಯುತ್ತದೆ.

ಅಸಂಗ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಪೇಷಾವರ್ಯೋಗವಸುಬಂಧುಶತಮಾನ

🔥 Trending searches on Wiki ಕನ್ನಡ:

ಭಾರತೀಯ ಸ್ಟೇಟ್ ಬ್ಯಾಂಕ್ಎಸ್.ಎಲ್. ಭೈರಪ್ಪಕ್ರೀಡೆಗಳುರಾಮಕೃಷ್ಣ ಪರಮಹಂಸಮಂಕುತಿಮ್ಮನ ಕಗ್ಗಕರ್ನಾಟಕ ಸಂಘಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಊಟಭಾರತೀಯ ಭೂಸೇನೆರಾಹುಲ್ ಗಾಂಧಿಶಿಕ್ಷಣ ಮಾಧ್ಯಮವಿಜಯನಗರ ಸಾಮ್ರಾಜ್ಯಭಾರತ ರತ್ನಮಹಾಕಾವ್ಯಕೊಡಗುಪಿ.ಲಂಕೇಶ್ಸತ್ಯ (ಕನ್ನಡ ಧಾರಾವಾಹಿ)ಚನ್ನಬಸವೇಶ್ವರಕರ್ನಾಟಕದ ಮಹಾನಗರಪಾಲಿಕೆಗಳುಕೃತಕ ಬುದ್ಧಿಮತ್ತೆಆಯ್ದಕ್ಕಿ ಲಕ್ಕಮ್ಮಇಸ್ಲಾಂ ಧರ್ಮಅನಂತ್ ನಾಗ್ಅಮೇರಿಕ ಸಂಯುಕ್ತ ಸಂಸ್ಥಾನಮಲೈ ಮಹದೇಶ್ವರ ಬೆಟ್ಟನವರತ್ನಗಳುಶ್ರೀಧರ ಸ್ವಾಮಿಗಳುಮಂಗಳೂರುಶಿಕ್ಷಣಸಮಾಜ ವಿಜ್ಞಾನಗೋವಿಂದ ಪೈಜೈನ ಧರ್ಮಯಲಹಂಕದ ಪಾಳೆಯಗಾರರುಭಾರತದ ರಾಷ್ಟ್ರಪತಿಗಳ ಪಟ್ಟಿಉದಯವಾಣಿಸ್ಟಾರ್‌ಬಕ್ಸ್‌‌ದಾಸ ಸಾಹಿತ್ಯಹಂಪೆನಾಮಪದಸಮಾಜಶಾಸ್ತ್ರಭಾರತದ ಆರ್ಥಿಕ ವ್ಯವಸ್ಥೆಕಲ್ಪನಾಗುರು (ಗ್ರಹ)ಪ್ರವಾಸೋದ್ಯಮಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕೊರೋನಾವೈರಸ್ಬಂಡಾಯ ಸಾಹಿತ್ಯಭಾರತದಲ್ಲಿನ ಚುನಾವಣೆಗಳುಚಕ್ರವ್ಯೂಹಗುಬ್ಬಚ್ಚಿಸಂಕಲ್ಪಕೂಡಲ ಸಂಗಮರಾಷ್ಟ್ರೀಯತೆದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿನ ಶಿಕ್ಷಣಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಇತಿಹಾಸಮುಟ್ಟು ನಿಲ್ಲುವಿಕೆಇಮ್ಮಡಿ ಪುಲಕೇಶಿಕರ್ನಾಟಕದ ಏಕೀಕರಣಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಝಾನ್ಸಿ ರಾಣಿ ಲಕ್ಷ್ಮೀಬಾಯಿನೀತಿ ಆಯೋಗಕನಕದಾಸರುರಾಜ್‌ಕುಮಾರ್ಹಳೇಬೀಡುಶಬ್ದ ಮಾಲಿನ್ಯಕನ್ನಡ ಗುಣಿತಾಕ್ಷರಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಇತಿಹಾಸಅರ್ಜುನವಿಜ್ಞಾನಕನ್ನಡಮಹಮ್ಮದ್ ಘಜ್ನಿಚಾಲುಕ್ಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)🡆 More