ಅಪಸ್ಮಾರ

ಅಪಸ್ಮಾರ ಸೆಳವುಗಳ ಲಕ್ಷಣಗಳಿರುವ ನರವೈಜ್ಞಾನಿಕ ಅಸ್ವಸ್ಥತೆಗಳ ಒಂದು ಗುಂಪು.

ಅಪಸ್ಮಾರದ ಸೆಳವುಗಳು ಸಂಕ್ಷಿಪ್ತ ಹಾಗೂ ಸುಮಾರಾಗಿ ಗುರುತಿಸಲಾಗದಷ್ಟು ಅವಧಿಗಳಿಂದ ದೀರ್ಘಾವಧಿಗಳವರೆಗೆ ಬದಲಾಗಬಹುದಾದ ಜೋರಾದ ಅಲುಗಾಟದ ಘಟನೆಗಳು. ಈ ಘಟನೆಗಳು ಸಂದರ್ಭಾನುಸಾರ ಮೂಳೆಮುರಿತ ಸೇರಿದಂತೆ ದೈಹಿಕ ಗಾಯಗಳನ್ನು ಉಂಟುಮಾಡಬಹುದು. ಅಪಸ್ಮಾರದಲ್ಲಿ, ಸೆಳವುಗಳು ಪುನರಾವರ್ತಿಸುವ ಪ್ರವೃತ್ತಿ ಹೊಂದಿರುತ್ತವೆ ಮತ್ತು ನಿಯಮವಾಗಿ ತಕ್ಷಣದ ಆಧಾರವಾಗಿರುವ ಕಾರಣಗಳನ್ನು ಹೊಂದಿರುವುದಿಲ್ಲ. ವಿಷಸೇವನೆಯಂತಹ ಒಂದು ನಿರ್ದಿಷ್ಟ ಕಾರಣದಿಂದ ಪ್ರಚೋದಿತವಾದ ಪ್ರತ್ಯೇಕ ಸೆಳವುಗಳು ಅಪಸ್ಮಾರವನ್ನು ಪ್ರತಿನಿಧಿಸುತ್ತವೆಂದು ಪರಿಗಣಿಸಲಾಗುವುದಿಲ್ಲ. ವಿಶ್ವದ ಕೆಲವು ಪ್ರದೇಶಗಳಲ್ಲಿ, ಅಪಸ್ಮಾರವಿರುವವರು ಈ ಅಸ್ವಸ್ಥತೆಯ ಕಾರಣ ಕಳಂಕವನ್ನು ಅನುಭವಿಸುತ್ತಾರೆ.

ಅಪಸ್ಮಾರ
ಸಾಮಾನ್ಯ ಸೆಳವಿನ ಚಿತ್ರ

ಅಪಸ್ಮಾರದ ಬಹುತೇಕ ಪ್ರಕರಣಗಳ ಕಾರಣ ತಿಳಿಯದಾಗಿದೆ. ಕೆಲವು ಪ್ರಕರಣಗಳು ಮೆದುಳಿನ ಗಾಯ, ಲಕ್ವ, ಮೆದುಳಿನ ಗೆಡ್ಡೆಗಳು, ಮೆದುಳಿನ ಸೋಂಕುಗಳು ಮತ್ತು ಎಪಿಲೆಪ್ಟೋಜೆನೆಸಿಸ್ ಪ್ರಕ್ರಿಯೆ ಮೂಲಕ ಆದ ಜನ್ಮ ದೋಷಗಳ ಪರಿಣಾಮವಾಗಿ ಉಂಟಾಗುತ್ತವೆ. ಪರಿಚಿತವಿರುವ ಆನುವಂಶಿಕ ನವವಿಕೃತಿಗಳು ಸಣ್ಣ ಪ್ರಮಾಣದ ಪ್ರಕರಣಗಳಿಗೆ ನೇರವಾಗಿ ಸಂಪರ್ಕ ಹೊಂದಿವೆ. ಅಪಸ್ಮಾರದ ಸೆಳವುಗಳು ಮೆದುಳಿನಲ್ಲಿ ಕಾರ್ಟೆಕ್ಸ್‌ನಲ್ಲಿ ವಿಪರೀತ ಹಾಗೂ ಅಸಹಜ ನರಕೋಶ ಚಟುವಟಿಕೆಯ ಪರಿಣಾಮವಾಗಿವೆ. ರೋಗನಿದಾನದಲ್ಲಿ, ಮೂರ್ಛೆಯಂತಹ ಅದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡಬಹುದಾದ ಇತರ ಸ್ಥಿತಿಗಳನ್ನು ತಳ್ಳಿಹಾಕುವುದು, ಮದ್ಯ ನಿವರ್ತನೆ ಅಥವಾ ವಿದ್ಯುದ್ವಿಚ್ಛೇದ್ಯ ಸಮಸ್ಯೆಗಳಂತಹ ಸೆಳವುಗಳ ಮತ್ತೊಂದು ಕಾರಣವಿದೆಯೇ ಎಂದು ನಿರ್ಧರಿಸುವುದು ಸೇರಿವೆ. ಇದನ್ನು ಭಾಗಶಃ ಮೆದುಳಿನ ಚಿತ್ರಗಳನ್ನು ತೆಗೆದು ಮತ್ತು ರಕ್ತಪರೀಕ್ಷೆಗಳನ್ನು ನಡೆಸಿ ಮಾಡಬಹುದು. ಅಪಸ್ಮಾರವನ್ನು ಹಲವುವೇಳೆ ಇಲೆಕ್ಟ್ರೊಎನ್ಸೆಫ಼ೆಲೊಗ್ರಾಮ್‍ನಿಂದ ದೃಢಪಡಿಸಬಹುದು, ಆದರೆ ಸಾಧಾರಣ ಪರೀಕ್ಷೆಯು ಅಸ್ವಸ್ಥತೆಯನ್ನು ತಳ್ಳಿಹಾಕುವುದಿಲ್ಲ.

ಇತರ ಸಮಸ್ಯೆಗಳ ಪರಿಣಾಮವಾಗಿ ಉಂಟಾಗುವ ಅಪಸ್ಮಾರವನ್ನು ತಡೆಯಬಹುದಾಗಿದೆ. ಶೇಕಡ ೭೦ರಷ್ಟು ಪ್ರಕರಣಗಳಲ್ಲಿ ಸೆಳವುಗಳನ್ನು ಔಷಧಿಗಳಿಂದ ನಿಯಂತ್ರಿಸಬಹುದು. ಅಗ್ಗದ ಆಯ್ಕೆಗಳು ಹಲವುವೇಳೆ ಲಭ್ಯವಿರುತ್ತವೆ. ಔಷದಿಗಳಿಗೆ ಸೆಳವುಗಳು ಪ್ರತಿಕ್ರಿಯಿಸದಿರುವವರಲ್ಲಿ, ಶಸ್ತ್ರಚಿಕಿತ್ಸೆ, ನರೋತ್ತೇಜನ, ಅಥವಾ ಆಹಾರ ಬದಲಾವಣೆಗಳನ್ನು ಪರಿಗಣಿಸಬಹುದು. ಅಪಸ್ಮಾರದ ಎಲ್ಲ ಪ್ರಕರಣಗಳು ಆಜೀವ ಪರ್ಯಂತವಿರುವುದಿಲ್ಲ, ಮತ್ತು ಅನೇಕ ಜನರು ಮುಂದೆ ಚಿಕಿತ್ಸೆ ಬೇಡವಾದ ಹಂತದವರೆಗೆ ಸುಧಾರಿಸುತ್ತಾರೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕಿತ್ತೂರು ಚೆನ್ನಮ್ಮಮಾನವನ ವಿಕಾಸಅಧಿಕ ವರ್ಷಕವಿಅಶ್ವತ್ಥಮರಮಿಲಾನ್ಪು. ತಿ. ನರಸಿಂಹಾಚಾರ್ಕಲ್ಲಂಗಡಿಕವಿರಾಜಮಾರ್ಗಬಾಲ್ಯ ವಿವಾಹಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುವಿಜಯನಗರಕನ್ನಡತಿ (ಧಾರಾವಾಹಿ)ಮಣ್ಣುತುಳಸಿಭಾರತೀಯ ಮೂಲಭೂತ ಹಕ್ಕುಗಳುಅವ್ಯಯಜಾಗತಿಕ ತಾಪಮಾನ ಏರಿಕೆಮೈಸೂರುಎಸ್.ಎಲ್. ಭೈರಪ್ಪಬಳ್ಳಾರಿರನ್ನಬಂಜಾರನವೋದಯದ್ವಂದ್ವ ಸಮಾಸಉಪ್ಪಿನ ಸತ್ಯಾಗ್ರಹಚಿತ್ರದುರ್ಗ ಕೋಟೆಸಂಭೋಗಭಾರತದಲ್ಲಿನ ಜಾತಿ ಪದ್ದತಿಮಾರೀಚಆಂಧ್ರ ಪ್ರದೇಶಷಟ್ಪದಿಡ್ರಾಮಾ (ಚಲನಚಿತ್ರ)ಕರ್ಮವಿರಾಟಭಾರತೀಯ ರೈಲ್ವೆಕರ್ನಾಟಕ ಐತಿಹಾಸಿಕ ಸ್ಥಳಗಳುವಿರಾಮ ಚಿಹ್ನೆದಶಾವತಾರಹಿಂದೂ ಮಾಸಗಳುಶಿವರಾಮ ಕಾರಂತಮಲೇರಿಯಾವೆಬ್‌ಸೈಟ್‌ ಸೇವೆಯ ಬಳಕೆಭಾರತೀಯ ಜನತಾ ಪಕ್ಷಪ್ರಿನ್ಸ್ (ಚಲನಚಿತ್ರ)ಕುಟುಂಬರಾಷ್ಟ್ರೀಯ ಸೇವಾ ಯೋಜನೆಅಸ್ಪೃಶ್ಯತೆಸಾವಿತ್ರಿಬಾಯಿ ಫುಲೆಕಾರ್ಮಿಕರ ದಿನಾಚರಣೆಮಂಗಳೂರುವಿಷ್ಣುಮುದ್ದಣಅರಬ್ಬೀ ಸಾಹಿತ್ಯಗಾಳಿ/ವಾಯುಶನಿಚಿನ್ನನಾಡ ಗೀತೆಚಿತ್ರದುರ್ಗ ಜಿಲ್ಲೆಜಿಡ್ಡು ಕೃಷ್ಣಮೂರ್ತಿಮಾನ್ವಿತಾ ಕಾಮತ್ಬುಧದಯಾನಂದ ಸರಸ್ವತಿಮತದಾನ ಯಂತ್ರಕರ್ನಾಟಕದ ಏಕೀಕರಣಜಯಂತ ಕಾಯ್ಕಿಣಿಗಿರೀಶ್ ಕಾರ್ನಾಡ್ಭಾರತದ ಆರ್ಥಿಕ ವ್ಯವಸ್ಥೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಲಕ್ಷ್ಮೀಶಕರ್ನಾಟಕದ ಮಹಾನಗರಪಾಲಿಕೆಗಳುವಿಚ್ಛೇದನಮಾಸ್ಕೋಭಾರತದ ರಾಷ್ಟ್ರಪತಿಭಾರತದ ರಾಷ್ಟ್ರೀಯ ಉದ್ಯಾನಗಳುಕೃಷಿ🡆 More