ಅನುರಾಧಾ ಪೌಡ್ವಾಲ್: ಭಾರತೀಯ ಹಿನ್ನೆಲೆಗಾಯಕಿ

ಅನುರಾಧಾ ಪೌಡ್ವಾಲ್ ಅಥವಾ ಅನುರಾಧಾ ಪೊಡ್ವಾಲ್ (ಹುಟ್ಟು: ೧೯೫೪), ಪ್ರಮುಖ ಭಾರತೀಯ ಹಿನ್ನೆಲೆ ಗಾಯಕಿ.

ಅನುರಾಧಾ ತಮ್ಮ ಹೆಚ್ಚಿನ ಹಾಡುಗಳನ್ನು ಒಡಿಯಾ ಭಾಷೆಯಲ್ಲಿ ಹಾಡಿದ್ದಾರೆ. ಅಲ್ಲದೇ ಹಿಂದಿ, ಮರಾಠಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಸಂಸ್ಕೃತ ಮುಂತಾದ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಇವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ೨೦೧೭ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ಮತ್ತು ನಾಲ್ಕು ಬಾರಿ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಇವರು ಚಲನಚಿತ್ರ ಗೀತೆಗಳಲ್ಲದೆ ಭಜನೆಗಳನ್ನೂ ಹಾಡುತ್ತಾರೆ.

ಅನುರಾಧಾ ಪೌಡ್ವಾಲ್
ಅನುರಾಧಾ ಪೌಡ್ವಾಲ್: ಜನನ, ವೈಯಕ್ತಿಕ ಜೀವನ, ಪ್ರಶಸ್ತಿ ಮತ್ತು ಮನ್ನಣೆಗಳು
೨೦೧೧ರ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅನುರಾಧ
Born೨೭-೧೦-೧೯೫೪
Nationalityಭಾರತೀಯ
Occupationಹಿನ್ನೆಲೆ ಗಾಯಕಿ
Political partyಭಾರತೀಯ ಜನತಾ ಪಕ್ಷ
Spouseಅರುಣ್ ಪೌಡ್ವಾಲ್‌
Childrenಆದಿತ್ಯ ಪೌಡ್ವಾಲ್‌ ಮತ್ತು ಕವಿತಾ ಪೌಡ್ವಾಲ್‌

ಜನನ

ಅನುರಾಧಾ ಅವರ ಹುಟ್ಟುಹೆಸರು ಅಲ್ಕಾ ನಾಡಕರ್ಣಿ. ೧೯೫೪ರ ಅಕ್ಟೋಬರ್ ೨೭ರಂದು ಕಾರವಾರದಲ್ಲಿ ಜನಿಸಿದರು.

ವೈಯಕ್ತಿಕ ಜೀವನ

ಇವರು ಅರುಣ್ ಪೌಡ್ವಾಲ್‌ರವರನ್ನು ವಿವಾಹವಾಗಿದ್ದಾರೆ. ಇವರ ಪುತ್ರ ಆದಿತ್ಯ ಪೌಡ್ವಾಲ್‌ ಮತ್ತು ಪುತ್ರಿ ಕವಿತಾ ಪೌಡ್ವಾಲ್‌. ಕವಿತಾರವರು ಸಂಗೀತಗಾರ್ತಿಯಾಗಿದ್ದಾರೆ.

ಪ್ರಶಸ್ತಿ ಮತ್ತು ಮನ್ನಣೆಗಳು

ಅನುರಾಧಾ ಪೌಡ್ವಾಲ್: ಜನನ, ವೈಯಕ್ತಿಕ ಜೀವನ, ಪ್ರಶಸ್ತಿ ಮತ್ತು ಮನ್ನಣೆಗಳು 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸುತ್ತಿರುವ ಅನುರಾಧಾ
  1. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.
  2. ೨೦೧೩ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮೊಹಮ್ಮದ್ ರಫಿ ಪ್ರಶಸ್ತಿ ಪಡೆದಿದ್ದಾರೆ.
  3. ೨೦೧೧ರಲ್ಲಿ ಜೀವಮಾನದ ಸಾಧನೆಗಾಗಿ ಮದರ್ ತೆರೆಸಾ ಪ್ರಶಸ್ತಿ ಪಡೆದಿದ್ದಾರೆ.
  4. ೨೦೧೦ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆದಿದ್ದಾರೆ.

ಫಿಲ್ಮ್‌ಫೇರ್ ಪ್ರಶಸ್ತಿಗಳು

ಗೆದ್ದ ಪ್ರಶಸ್ತಿಗಳು

ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೬ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೇರೆ ಮ್ಯಾನ್ ಬಜೋ ಮೃದಾಂಗ್ ಉತ್ಸವ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಜರ್ ಕೆ ಸಾಮ್ನೆ ಆಶಿಕಿ
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಿಲ್ ಹೈ ಕೆ ಮಾಂತಾ ನಹಿನ್ ದಿಲ್ ಹೈ ಕೆ ಮಾಂತಾ ನಹಿನ್
೧೯೯೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಕ್ ದಕ್ ಕರ್ನೆ ಲಗಾ ಬೇಟಾ

ನಾಮನಿರ್ದೇಶನಗೊಂಡ ಪ್ರಶಸ್ತಿಗಳು

ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೈನೆ ಏಕ್ ಗೀತ್ ಲಿಖಾ ಹೈ ಯೆಹ್ ನಜ್ಡೀಕಿಯನ್
೧೯೮೪ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತು ಮೇರಾ ಹೀರೋ ಹೈ ಹೀರೋ
೧೯೮೯ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಕೆಹ್ ದೋ ಕಿ ತುಮ್ ತೇಜಾಬ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತೇರಾ ನಾಮ್ ಲಿಯಾ ರಾಮ್ ಲಖನ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬೆಕಬಾರ್ ಬೆವಾಫಾ ರಾಮ್ ಲಖನ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮುಜೆ ನೀಂದ್ ನಾ ಆಯೆ ದಿಲ್
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬಹುತ್ ಪ್ಯಾರ್ ಕಾರ್ಟೆ ಹೈ ಸಾಜನ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಅನುರಾಧಾರವರಿಗೆ ೧೯೮೯ರಲ್ಲಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕಲಾಟ್ ನಕಲಾತ್ ಚಲನಚಿತ್ರದ ಹಿ ಏಕ್ ರೇಷಮಿ ಹಾಡಿಗೆ, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂದು ಪಡೆದರು.

ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ವರ್ಷ ಪ್ರಶಸ್ತಿ ಹಾಡು
೧೯೮೭ ಅತ್ಯುತ್ತಮ ಗಾಯಕಿ ತುಂಡಾ ಬೈಡಾ
೧೯೯೭ ಅತ್ಯುತ್ತಮ ಗಾಯಕಿ ಖಂಡೈ ಅಖಿ ರೆ ಲುಹಾ

ಗಿಲ್ಡ್ ಫಿಲ್ಮ್ ಅವಾರ್ಡ್ಸ್

೨೦೦೪ರಲ್ಲಿ ಅತ್ಯುತ್ತಮ ಗಾಯಕಿ ಎಂದು ಅಪ್ಸರಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇತರ ಪ್ರಶಸ್ತಿ

ಅನುರಾಧಾ ಪದ್ಮಶ್ರೀ ಡಾ ಡಿವೈ ಪಾಟೀಲ್ ವಿಶ್ವವಿದ್ಯಾಲಯವು ಡಿ ಲಿಟ್ ಪದವಿ ನೀಡಿ ಗೌರವಿಸಿತು.

ಕನ್ನಡ ಹಾಡುಗಳು

ಅನುರಾಧ ಮೊದಲು ಕನ್ನಡದಲ್ಲಿ ಹಾಡಿದ್ದು ಜೀವನದಿ ಚಿತ್ರಕ್ಕೆ. ಆ ಚಿತ್ರದ "ಕನ್ನಡ ನಾಡಿನ ಜೀವನದಿ" ಹಾಡು ಜನಪ್ರಿಯವಾಯಿತು. ಪ್ರೀತ್ಸೆ ಚಿತ್ರದ '"ಸೈ ಸೈ", "ಯಾರಿಟ್ಟರೀ ಚುಕ್ಕಿ", "ಹೋಳಿ ಹೋಳಿ" ಹಾಡುಗಳು ಕನ್ನಡದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು.

ಅನುರಾಧ ಅವರು ಹಾಡಿರುವ ಕನ್ನಡ ಚಿತ್ರಗೀತೆಗಳ ಪಟ್ಟಿ:

ವರ್ಷ ಹಾಡು ಚಿತ್ರ ಸಂಗೀತ ಸಂಯೋಜನೆ ಸಹಗಾಯಕರು
೧೯೯೬ "ಕನ್ನಡ ನಾಡಿನ ಜೀವನದಿ" ಜೀವನದಿ ಕೋಟಿ ಎಸ್.ಪಿ.ಬಾಲಸುಬ್ರಹ್ಮಣ್ಯಂ
"ನವಮಾಸ ನಿನ್ನನು" ರಾಜೇಶ್ ಕೃಷ್ಣನ್
೨೦೦೦ "ಹೋಳಿ ಹೋಳಿ" ಪ್ರೀತ್ಸೆ ಹಂಸಲೇಖ ಕೆ. ಎಸ್. ಚಿತ್ರಾ, ರಾಜೇಶ್ ಕೃಷ್ಣನ್, ಎಸ್. ಪಿ. ಬಾಲಸುಬ್ರಹ್ಮಣ್ಯಂ
"ಸೈ ಸೈ ಸೈ" ಹರಿಹರನ್
"ಯಾರಿಟ್ಟರೀ ಚುಕ್ಕಿ"
"ಬೆಂದಕಾಳೂರ ಪಕ್ಕ" ದೇವರ ಮಗ ಎಸ್. ಪಿ. ಬಾಲಸುಬ್ರಹ್ಮಣ್ಯಂ
"ವಸಂತ ಭೂಮಿಗೆ" ರಾಜೇಶ್ ಕೃಷ್ಣನ್
"ಗೋಕುಲದಲ್ಲಿ ಕೃಷ್ಣಲೀಲೆ" ಕೃಷ್ಣಲೀಲೆ ವಿ. ಮನೋಹರ್ ಅನಂತ ನಾಗ್, ಶಿವರಾಜಕುಮಾರ್
೨೦೦೧ "ಯಾರೋ ನೀನು" ನನ್ನ ಪ್ರೀತಿಯ ಹುಡುಗಿ ಮನೋಮೂರ್ತಿ ಹರಿಹರನ್
"ನನ್ನ ಪ್ರೀತಿಯ ಹುಡುಗಿ "
೨೦೦೩ "ಎಲ್ ಎಲ್ಲಿಂದವೋ" ಕರಿಯ ಗುರುಕಿರಣ್ ಗುರುಕಿರಣ್
೨೦೦೪ "ಕರುನಾಡಿನ ಕೊರವಂಜಿ" ಸಾರ್ವಭೌಮ ಹಂಸಲೇಖ ಹರಿಹರನ್
"ಸಾರೆ ಜಹಾ ಸೆ ಅಚ್ಛ" -
೨೦೧೩ "ನಾ ಇನ್ನು ಬದುಕಿರಲಾರೆ" ಅಗಮ್ಯ ಚಿನ್ಮಯ್ ಎಂ. ರಾವ್ -

ನೋಡಿ

ಅನುರಾಧಾ ಪೌಡ್ವಾಲ್ ರವರ ಧ್ವನಿಮುದ್ರಿಸಿದ ಹಾಡುಗಳ ಪಟ್ಟಿ.

ಉಲ್ಲೇಖಗಳು

Tags:

ಅನುರಾಧಾ ಪೌಡ್ವಾಲ್ ಜನನಅನುರಾಧಾ ಪೌಡ್ವಾಲ್ ವೈಯಕ್ತಿಕ ಜೀವನಅನುರಾಧಾ ಪೌಡ್ವಾಲ್ ಪ್ರಶಸ್ತಿ ಮತ್ತು ಮನ್ನಣೆಗಳುಅನುರಾಧಾ ಪೌಡ್ವಾಲ್ ಕನ್ನಡ ಹಾಡುಗಳುಅನುರಾಧಾ ಪೌಡ್ವಾಲ್ ನೋಡಿಅನುರಾಧಾ ಪೌಡ್ವಾಲ್ ಉಲ್ಲೇಖಗಳುಅನುರಾಧಾ ಪೌಡ್ವಾಲ್ಉರ್ದುಒಡಿಯಾಕನ್ನಡತಮಿಳುತೆಲುಗುಪದ್ಮಶ್ರೀಬಂಗಾಳಿಮರಾಠಿಮಲಯಾಳಂಸಂಸ್ಕೃತಹಿಂದಿ

🔥 Trending searches on Wiki ಕನ್ನಡ:

ಚುನಾವಣೆಪರಿಣಾಮಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಪು. ತಿ. ನರಸಿಂಹಾಚಾರ್ವಿವಾಹಬಿ.ಜಯಶ್ರೀಸರ್ವಜ್ಞಯೇಸು ಕ್ರಿಸ್ತಗೊರೂರು ರಾಮಸ್ವಾಮಿ ಅಯ್ಯಂಗಾರ್ಪಂಚಾಂಗಪ್ರಪಂಚದ ದೊಡ್ಡ ನದಿಗಳುಅಯೋಧ್ಯೆಮಾಸ್ಕೋರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕಂಸಾಳೆಕಪ್ಪೆ ಅರಭಟ್ಟಗೋಪಾಲಕೃಷ್ಣ ಅಡಿಗಕರ್ನಾಟಕ ಐತಿಹಾಸಿಕ ಸ್ಥಳಗಳುಕಬ್ಬುಹೆಚ್.ಡಿ.ದೇವೇಗೌಡತ್ಯಾಜ್ಯ ನಿರ್ವಹಣೆಡ್ರಾಮಾ (ಚಲನಚಿತ್ರ)ಹವಾಮಾನಊಳಿಗಮಾನ ಪದ್ಧತಿರಸ(ಕಾವ್ಯಮೀಮಾಂಸೆ)ಶಿವಮೊಗ್ಗವೆಬ್‌ಸೈಟ್‌ ಸೇವೆಯ ಬಳಕೆಕೃಷ್ಣಾ ನದಿಗುರುರಾಜ ಕರಜಗಿಮೊದಲನೆಯ ಕೆಂಪೇಗೌಡಫುಟ್ ಬಾಲ್ನಾಗಸ್ವರವ್ಯವಹಾರಹೃದಯಸಂಗ್ಯಾ ಬಾಳ್ಯಾ(ನಾಟಕ)ಚಂಡಮಾರುತನಿರುದ್ಯೋಗದ್ವಿರುಕ್ತಿಸಮುದ್ರಗುಪ್ತಷಟ್ಪದಿಹುಲಿಜೀವನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭೂಮಿಅಲ್ಲಮ ಪ್ರಭುಶಿವರಾಜ್‍ಕುಮಾರ್ (ನಟ)ಇಮ್ಮಡಿ ಪುಲಕೇಶಿಸಂಯುಕ್ತ ರಾಷ್ಟ್ರ ಸಂಸ್ಥೆಶಾಲೆಪಶ್ಚಿಮ ಘಟ್ಟಗಳುಚಿತ್ರದುರ್ಗಜಯಂತ ಕಾಯ್ಕಿಣಿವೇದವ್ಯಾಸಅಧಿಕ ವರ್ಷಮಂಗಳ (ಗ್ರಹ)ಜೀವವೈವಿಧ್ಯಮಲೆಗಳಲ್ಲಿ ಮದುಮಗಳುವಿನಾಯಕ ಕೃಷ್ಣ ಗೋಕಾಕಬಯಲಾಟಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುವಿಕಿರಣಹಾರೆಕನ್ನಡ ಸಾಹಿತ್ಯ ಪ್ರಕಾರಗಳುರೇಣುಕಮೊದಲನೇ ಅಮೋಘವರ್ಷಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತದ ಮಾನವ ಹಕ್ಕುಗಳುಬಹಮನಿ ಸುಲ್ತಾನರುಕನ್ನಡ ಚಿತ್ರರಂಗದಿವ್ಯಾಂಕಾ ತ್ರಿಪಾಠಿಉಚ್ಛಾರಣೆತೆಲಂಗಾಣಉತ್ತರ ಕರ್ನಾಟಕಕಳಸವೀರೇಂದ್ರ ಪಾಟೀಲ್ತುಮಕೂರುಭಾರತದ ಚುನಾವಣಾ ಆಯೋಗ🡆 More