ಸೃಜನ್ ಲೋಕೇಶ್

ಸೃಜನ್ ಲೋಕೇಶ್ (ಜನನ ಜೂನ್ ೨೮, ೧೯೮೦) ಕನ್ನಡ ಚಲನಚಿತ್ರ ನಟ , ದೂರದರ್ಶನ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು.

ಅವರ ತಂದೆ ಲೋಕೇಶ್ ಅವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಅವರು ದೂರದರ್ಶನದ ನಟಿ. ಅವರ ಅಜ್ಜ ಸುಬ್ಬಯ್ಯ ನಾಯ್ಡು ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು.

ಸೃಜನ್ ಲೋಕೇಶ್
ಸೃಜನ್ ಲೋಕೇಶ್
Born (1980-06-28) ೨೮ ಜೂನ್ ೧೯೮೦ (ವಯಸ್ಸು ೪೩)
Nationalityಭಾರತೀಯ
Occupation(s)ನಟ, ರೇಡಿಯೋ ರೇಡಿಯೋ, ದೂರದರ್ಶನ ನಿರೂಪಕ
Years active2002–
Televisionಮಜಾ ಟಾಕೀಸ್ (2011)
ಸೈ
ಮಜಾ ಟಾಕೀಸ್(2015)
Spouseಗ್ರೀಷ್ಮ
Children2
Parent(s)ಲೋಕೇಶ್
ಗಿರಿಜಾ ಲೋಕೇಶ್
Relativesಸುಬ್ಬಯ್ಯ ನಾಯ್ಡು (ಅಜ್ಜ)
ಪೂಜಾ ಲೋಕೇಶ್ (ತಂಗಿ)

ಕುಟುಂಬ

ಸೃಜನ್ ರವರು ಬೆಂಗಳೂರಿನಲ್ಲಿ ಜನಿಸಿದರು. ೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರ ತಂಗಿ ಪೂಜಾ ಲೋಕೇಶ್ ಕನ್ನಡ ಹಾಗು ತಮಿಳಿನ ಕಲಾವಿದೆ. ಅವರ ಪತ್ನಿ ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .

ನಟನಾವೃತ್ತಿ

ಸೃಜನ್ ಲೋಕೇಶ್ ಆರಂಭದಲ್ಲಿ ನಟಿಸಿದ ಚಲನಚಿತ್ರದಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನ ಕಾರ್ಯಕ್ರಮ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಪ್ರಸಿದ್ದಿ ಪಡೆಯಿತು.

ಬಾಲ ನಟನಾಗಿ

ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು. ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು.

ಪಾತ್ರಗಳಲ್ಲಿ

ಸೃಜನ್ ಅವರು ರಾಧಿಕಾ ಕುಮಾರಸ್ವಾಮಿ ಜೊರೆ ನಟಿಸಿದ ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು. ಅವರು ನಟನಾಗಿ ಯಶಸ್ಸನ್ನು ಕಾಣಲಿಲ್ಲ. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .

ನಿರ್ಮಾಣ

೨೦೧೩ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ನಿಭಾಯಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರು ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ . ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ .

ಪ್ರಶಸ್ತಿಗಳು ಮತ್ತು ಗೌರವಗಳು

*೨೦೧೧ರಲ್ಲಿ ಸುವರ್ಣ ಚಾನೆಲ್ ಅವರು ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ನೀಡಿದ್ದಾರೆ .

*೨೦೧೧ರಲ್ಲಿ ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್ ನಲ್ಲಿ ಅತ್ಯಂತ ಜನಪ್ರಿಯ ವರ್ಗದಲ್ಲಿ ಅತ್ಯುತ್ತಮ ನಿರೂಪಕ ಎನ್ನುವ ಪ್ರಶಸ್ತಿ ಲಭಿಸಿದೆ.

*೨೦೧೨ & ೨೦೧೩ರ ಮಾಧ್ಯಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ.

ಚಲನಚಿತ್ರಗಳ ಪಟ್ಟಿ

ವರ್ಷ ಸಿನಿಮಾಗಳು ಪಾತ್ರ ಇತರೆ ಟಿಪ್ಪಣಿಗಳು
1991 ವೀರಪ್ಪನ್ ಬಾಲ ನಟ
1990 ಬುಜಂಗಯ್ಯನ ದಶಾವಾತಾರ ಬಾಲ ನಟ
2002 ನೀಲ ಮೇಘ ಶ್ಯಾಮ ಶ್ಯಾಮ ಮುಖ್ಯ ಪಾತ್ರ
2005 ಲಾರ್ಟಿ ಚಾರ್ಜ್
2007 ಪ್ರೀತಿಗಾಗಿ
2008 ನವಗ್ರಹ ಘೆಂಡೆ ನಾಯಕ
2009 ಐಪಿಸಿ ಸೆಕ್ಷನ್ ೩೦೦
2010 ಪೊರ್ಕಿ ನಾಯಕನ ಸ್ನೇಹಿತ
2012 ಚಿಂಗಾರಿ
2012 ಸ್ನೇಹಿತರು ಪರಶುರಾಮ ನಾಯಕ
2012 ಎದೆಗಾರಿಕೆ ಬಚ್ಚನ್
2013 ಅಂದರ್ ಬಾಹರ್
2013 ಆನೆ ಪಟಾಕಿ ಬೀರೇಗೌಡ ಮುಖ್ಯ ಪಾತ್ರ
2014 ಟಿಪಿಕಲ್ ಕೈಲಾಸ್ ಕೈಲಾಸ್ ಮುಖ್ಯ ಪಾತ್ರ
2014 ಪರಮಶಿವ
2015 ಸಪ್ನೊಂ ಕಿ ರಾಣಿ ಮುಖ್ಯ ಪಾತ್ರ
2015 ಲವ್ ಯು ಆಲಿಯಾ ಅತಿಥಿ ಪಾತ್ರ ʼʼಕಾಮಾಕ್ಷಿ ಕಾಮಾಕ್ಷಿʼʼ ಹಾಡಿನಲ್ಲಿ ಅತಿಥಿ ಪಾತ್ರ
2016 ಜಗ್ಗು ದಾದ ಮಂಜು
2017 ಚಕ್ರವರ್ತಿ ಕಿಟಪ್ಪ
2017 ಹ್ಯಾಪಿ ಜರ್ನಿ ಆರ್ಯ ಮುಖ್ಯ ಪಾತ್ರ
2018 ಭೂತಯ್ಯನ ಮೊಮ್ಮಗ ಆಯ್ಯು ನಿರೂಪಕ ನಿರೂಪಕ ಧ್ವನಿ
2019 ಎಲ್ಲಿದ್ದೆ ಇಲ್ಲಿತನಕ ಸೂರ್ಯ ಮುಖ್ಯ ಪಾತ್ರ
2022 ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸೂರ್ಯ

ಟಿವಿ ಕಾರ್ಯಕ್ರಮಗಳ ಪಟ್ಟಿ

ವರ್ಷ ಶೀರ್ಷಿಕೆ ಪಾತ್ರ ವಾಹಿನಿ Ref.
2011 ‌ಮಜಾ ವಿತ್ ಸೃಜಾ ನಿರೂಪಕ ಸುವರ್ಣ
ಸೈ ನಿರೂಪಕ ಸುವರ್ಣ
2012 ಕಿಚನ್‌ ಕಿಲಾಡಿಗಳೂ ಸಹ-ನಿರೂಪಕ ಸುವರ್ಣ
ಸ್ಟಾರ್‌ ಸಿಂಗರ್‌ ಗ್ರಾಂಡ್‌ ಫಿನಾಲೆ ನಿರೂಪಕ ಸುವರ್ಣ
ಸ್ಟಾರ್‌ ಸುವರ್ಣ ಆವಾರ್ಡ್ಸ್ ನಿರೂಪಕ ಸುವರ್ಣ
ಸೈ 2 ನಿರೂಪಕ ಸುವರ್ಣ
ಮಮ್ಮಿ ನಂ. 1 ನಿರೂಪಕ ಸುವರ್ಣ
2013 ಕಾಸ್‌ ಗೆ ಟಾಸ್ ನಿರೂಪಕ ಝೀ ಕನ್ನಡ
ಛೋಟಾ ಚಾಂಪಿಯನ್ ನಿರೂಪಕ ಝೀ ಕನ್ನಡ
2014 ಛೋಟಾ ಚಾಂಪಿಯನ್ 2 ನಿರೂಪಕ ಝೀ ಕನ್ನಡ
ಬಿಗ್‌ ಬಾಸ್‌ ಕನ್ನಡ 2 ಸ್ಪರ್ಧಿ ಸುವರ್ಣ
2015–2017 ಮಜಾ ಟಾಕೀಸ್ ನಿರೂಪಕ ಕಲರ್ಸ್ ಕನ್ನಡ (ಈ ಟವಿ ಕನ್ನಡ)
2018– 2019 ಮಜಾ ಟಾಕೀಸ್ ನಿರೂಪಕ ಕಲರ್ಸ ಕನ್ನಡ
2019 ಕಾಮಿಡಿ ಟಾಕೀಸ್‌ ಜಡ್ಜ್ ಕಲರ್ಸ ಕನ್ನಡ ಸೂಪರ್‌
2020 ಮಜಾ ಟಾಕೀಸ್ ನಿರೂಪಕ ಕಲರ್ಸ್ ಕನ್ನಡ
2021 ರಾಜ ರಾಣಿ ಜಡ್ಜ್ ಕಲರ್ಸ್ ಕನ್ನಡ
2021 - ನನ್ನಮ್ಮ ಸೂಪರ್‌ ಸ್ಟಾರ್ ಜಡ್ಜ್ ಕಲರ್ಸ್ ಕನ್ನಡ
2022 - ಗಿಚಿಗಿಲಿಗಿಲಿ ಜಡ್ಜ್ ಕಲರ್ಸ್ ಕನ್ನಡ
2023 - ಪ್ರಸ್ತುತ ಫ್ಯಾಮಿಲಿ ಗ್ಯಾಂಗ್‌ಸ್ಟರ್ ನಿರೂಪಕ ಕಲರ್ಸ್ ಕನ್ನಡ

ಉಲ್ಲೇಖಗಳು

Tags:

ಸೃಜನ್ ಲೋಕೇಶ್ ಕುಟುಂಬಸೃಜನ್ ಲೋಕೇಶ್ ನಟನಾವೃತ್ತಿಸೃಜನ್ ಲೋಕೇಶ್ ನಿರ್ಮಾಣಸೃಜನ್ ಲೋಕೇಶ್ ಪ್ರಶಸ್ತಿಗಳು ಮತ್ತು ಗೌರವಗಳುಸೃಜನ್ ಲೋಕೇಶ್ ಚಲನಚಿತ್ರಗಳ ಪಟ್ಟಿಸೃಜನ್ ಲೋಕೇಶ್ ಟಿವಿ ಕಾರ್ಯಕ್ರಮಗಳ ಪಟ್ಟಿಸೃಜನ್ ಲೋಕೇಶ್ ಉಲ್ಲೇಖಗಳುಸೃಜನ್ ಲೋಕೇಶ್ಗಿರಿಜಾ ಲೋಕೇಶ್ಚಲನಚಿತ್ರರೇಡಿಯೋಲೋಕೇಶ್ಸುಬ್ಬಯ್ಯ ನಾಯ್ಡು

🔥 Trending searches on Wiki ಕನ್ನಡ:

ವಾದಿರಾಜರುಯು.ಆರ್.ಅನಂತಮೂರ್ತಿಅಳತೆ, ತೂಕ, ಎಣಿಕೆಭಾರತೀಯ ಅಂಚೆ ಸೇವೆಬೃಹದೀಶ್ವರ ದೇವಾಲಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಆಸ್ಪತ್ರೆಗೋತ್ರ ಮತ್ತು ಪ್ರವರರಗಳೆಶಂಕರ್ ನಾಗ್ವಚನ ಸಾಹಿತ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಟೊಮೇಟೊತಿರುಪತಿನಳಂದಕರ್ನಾಟಕ ವಿಧಾನ ಪರಿಷತ್ಮೈಸೂರು ಅರಮನೆತ್ರಿಪದಿಆಲದ ಮರಸಮುದ್ರಶಾಸ್ತ್ರಡಿ.ಎಲ್.ನರಸಿಂಹಾಚಾರ್ತಾಜ್ ಮಹಲ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹಲಸುಮೈಸೂರು ಸಂಸ್ಥಾನಕುರುಬಸಾಮಾಜಿಕ ತಾಣಭಾರತದ ಮುಖ್ಯಮಂತ್ರಿಗಳುಪತ್ರಹೂವುದಯಾನಂದ ಸರಸ್ವತಿಭಾರತದ ಆರ್ಥಿಕ ವ್ಯವಸ್ಥೆಕರ್ಣಕನ್ನಡ ಚಿತ್ರರಂಗಮಹಾವೀರಕನ್ನಡ ಅಕ್ಷರಮಾಲೆಕ್ರಿಶನ್ ಕಾಂತ್ ಸೈನಿಅಯೋಧ್ಯೆಕಲಿಕೆಷಟ್ಪದಿಬಾದಾಮಿಹಿಂದೂ ಕೋಡ್ ಬಿಲ್ಕನ್ನಡ ಪತ್ರಿಕೆಗಳುಜೈಮಿನಿ ಭಾರತಆಯುರ್ವೇದವಾಟ್ಸ್ ಆಪ್ ಮೆಸ್ಸೆಂಜರ್ಗೋಲ ಗುಮ್ಮಟಛಂದಸ್ಸುಮಧ್ವಾಚಾರ್ಯತಲಕಾಡುಒಂದು ಮುತ್ತಿನ ಕಥೆಅನುಶ್ರೀಮುಟ್ಟುಡಾಪ್ಲರ್ ಪರಿಣಾಮವಿಜಯನಗರ ಸಾಮ್ರಾಜ್ಯಸಿ.ಎಮ್.ಪೂಣಚ್ಚಆಂಧ್ರ ಪ್ರದೇಶಕವಿಗಳ ಕಾವ್ಯನಾಮನಾಗೇಶ ಹೆಗಡೆಭಾರತದ ನದಿಗಳುವಿಜಯದಾಸರುಋತುಚಕ್ರಸ್ವದೇಶಿ ಚಳುವಳಿಗೂಬೆಕಲ್ಯಾಣ ಕರ್ನಾಟಕಆಸ್ಟ್ರೇಲಿಯಾ ಕ್ರಿಕೆಟ್ ತಂಡಹನುಮಂತಮಾಧ್ಯಮಭಾರತೀಯ ಜ್ಞಾನಪೀಠಚದುರಂಗದ ನಿಯಮಗಳುಹೆಚ್.ಡಿ.ದೇವೇಗೌಡಶನಿಉತ್ತರ ಪ್ರದೇಶಸೂರ್ಯವಂಶ (ಚಲನಚಿತ್ರ)ಜಾನಪದ🡆 More