ಗಿರಿಜಾ ಲೋಕೇಶ್

ಗಿರಿಜಾ ಲೋಕೇಶ್ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟಿ.

ಕಾಕನ ಕೋಟೆ(೧೯೭೭), ದಾಹ(೧೯೭೯), ಭುಜಂಗಯ್ಯನ ದಶಾವತಾರ(೧೯೯೧) ಮತ್ತು ಯಾರಿಗೂ ಹೇಳ್ಬೇಡಿ(೧೯೯೪) ಮುಂತಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಮರಣೀಯ ಅಭಿನಯ ನೀಡಿದ ಗಿರಿಜಾ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಪ್ರಭಾತ್ ಶಿಶುವಿಹಾರ, ರಂಗಸಂಪದ, ನಟರಂಗ ಮುಂತಾದ ಜನಪ್ರಿಯ ತಂಡಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡವಲ್ಲದೇ ಉರ್ದು, ತಮಿಳು, ತೆಲುಗು, ಮಲಯಾಳಂ ನಾಟಕಗಳಲ್ಲೂ ನಟಿಸಿದ್ದಾರೆ. ಗಿರಿಜಾ ಅಭಿನಯದ ಕಿರುತೆರೆ ಧಾರಾವಾಹಿಗಳ ಸಂಖ್ಯೆ ೩೦೦ ದಾಟುತ್ತದೆ. ವೈಶಾಲಿ ಕಾಸರವಳ್ಳಿ ನಿರ್ದೇಶನದ ಮುತ್ತಿನ ತೋರಣ ಗಿರಿಜಾ ಅವರ ಪ್ರತಿಭೆಯನ್ನು ಒರೆಗೆ ಹಚ್ಚಿದ ಧಾರಾವಾಹಿ. ಭುಜಂಗಯ್ಯನ ದಶಾವತಾರ ಮತ್ತು ಸಿದ್ಲಿಂಗು ಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಗಿರಿಜಾ ಅವರ ಪತಿ ಕನ್ನಡದ ಮೇರುನಟ ದಿವಂಗತ ಲೋಕೇಶ್. ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಟ ಸೃಜನ್ ಲೋಕೇಶ್ ಮತ್ತು ನಟಿ ಪೂಜಾ ಲೋಕೇಶ್ ಈ ದಂಪತಿಯ ಮಕ್ಕಳು.

ಉಲ್ಲೇಖಗಳು

Tags:

ಕಾಕನ ಕೋಟೆದಾಹಭುಜಂಗಯ್ಯನ ದಶಾವತಾರವೈಶಾಲಿ ಕಾಸರವಳ್ಳಿ

🔥 Trending searches on Wiki ಕನ್ನಡ:

ಕೇಂದ್ರ ಲೋಕ ಸೇವಾ ಆಯೋಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುರಾಯಚೂರು ಜಿಲ್ಲೆಸಂಭೋಗದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಧೃತರಾಷ್ಟ್ರಎಮ್.ಎ. ಚಿದಂಬರಂ ಕ್ರೀಡಾಂಗಣಸೌರಮಂಡಲಕೈಕೇಯಿಯೂಟ್ಯೂಬ್‌ಭಾರತದ ಬುಡಕಟ್ಟು ಜನಾಂಗಗಳುಶಬ್ದಕನ್ನಡ ಸಾಹಿತ್ಯರಾಮ ಮನೋಹರ ಲೋಹಿಯಾರಾಮಾಯಣಉತ್ತರ ಕನ್ನಡಸಿದ್ದರಾಮಯ್ಯಭಾರತದ ಜನಸಂಖ್ಯೆಯ ಬೆಳವಣಿಗೆವ್ಯಂಜನಪ್ರಾಥಮಿಕ ಶಿಕ್ಷಣಅಲ್-ಬಿರುನಿಸಂಖ್ಯಾಶಾಸ್ತ್ರಹರಿಹರ (ಕವಿ)ಚಂದ್ರಪು. ತಿ. ನರಸಿಂಹಾಚಾರ್ಆಸ್ಟ್ರೇಲಿಯಹೈದರಾಲಿಮಂಡಲ ಹಾವುಕರ್ನಾಟಕಕನ್ನಡ ಸಂಧಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಲೆತತ್ತ್ವಶಾಸ್ತ್ರಧರ್ಮ (ಭಾರತೀಯ ಪರಿಕಲ್ಪನೆ)ಕೃಷಿಸಮುದ್ರಗುಪ್ತಕೈಗಾರಿಕೆಗಳುಅರಿಸ್ಟಾಟಲ್‌ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ತೆಂಗಿನಕಾಯಿ ಮರಕೈವಾರ ತಾತಯ್ಯ ಯೋಗಿನಾರೇಯಣರುಚಂದ್ರಯಾನ-೩ಲೆಕ್ಕ ಪರಿಶೋಧನೆಭಗವದ್ಗೀತೆಮೆಂತೆವಿವಾಹಈರುಳ್ಳಿನೇಮಿಚಂದ್ರ (ಲೇಖಕಿ)ಯಕೃತ್ತುವಿಜಯದಾಸರುನವೋದಯಅಗಸ್ತ್ಯದಲಿತಟೊಮೇಟೊಹೊಂಗೆ ಮರಮಾರುತಿ ಸುಜುಕಿವಾಟ್ಸ್ ಆಪ್ ಮೆಸ್ಸೆಂಜರ್ಕಾವೇರಿ ನದಿಪರಿಸರ ಕಾನೂನುಬಿಜು ಜನತಾ ದಳಮರಅಲ್ಲಮ ಪ್ರಭುನದಿಕರ್ನಾಟಕದ ಜಾನಪದ ಕಲೆಗಳುಕರ್ನಾಟಕದ ನದಿಗಳುಬಿ. ಎಂ. ಶ್ರೀಕಂಠಯ್ಯಬುಧಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ಸಂವಿಧಾನಮಸೂರ ಅವರೆಮಹಾಜನಪದಗಳುಪುಸ್ತಕಪ್ರಬಂಧಕೇಂದ್ರಾಡಳಿತ ಪ್ರದೇಶಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬ್ಯಾಂಕಿಂಗ್ ವ್ಯವಸ್ಥೆಹಸಿರುಮನೆ ಪರಿಣಾಮಲಕ್ಷ್ಮಿ🡆 More