ಸತ್ಯವತಿ ದೇವಿ

ಸತ್ಯವತಿ ದೇವಿ (೨೬ಜನವರಿ ೧೯೦೬ - ೨೧ಅಕ್ಟೋಬರ್ ೧೯೪೫) ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು.

ಇವರನ್ನು ಜೋನ್ ಆಫ್ ಆರ್ಕ್ ಆಫ್ ಇಂಡಿಯಾ ಎಂದು ಪರಿಗಣಿಸಲಾಗಿತ್ತು.

ಸತ್ಯವತಿ ದೇವಿ
Born೨೬ ಜನವರಿ ೧೯೦೬
ಜುಲುಂದೂರ್, ಪಂಜಾಬ್ ಪ್ರಾಂತ್ಯ, ಬ್ರಿಟಿಷ್ ಭಾರತ
Died೨೧ ಅಕ್ಟೋಬರ್ ೧೯೪೫ (೩೯ ವರ್ಷ)
ದೆಹಲಿ, ಬ್ರಿಟಿಷ್ ರಾಜ್
Nationalityಭಾರತೀಯರು
Known forಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಿಕೆ

ಕುಟುಂಬ :

ಅವರು ಸ್ವಾಮಿ ಶ್ರದ್ಧಾನಂದರ ಮೊಮ್ಮಗಳು ಮತ್ತು ವಕೀಲ ಧನಿ ರಾಮ್ ಮತ್ತು ವೇದ್ ಕುಮಾರಿ ಅವರ ಮಗಳು. ಅವರು ದೆಹಲಿಯ ಬಟ್ಟೆ ಗಿರಣಿಗಳ ಫ್ಯಾಕ್ಟರಿಯ ಅಧಿಕಾರಿಯನ್ನು ವಿವಾಹ ಆಗಿದ್ದರು.

ಕ್ರಿಯಾಶೀಲತೆ

ದೆಹಲಿಯ ರಾಷ್ಟ್ರೀಯವಾದಿ ಮಹಿಳೆಯರಲ್ಲಿ, ಸತ್ಯವತಿ ನಾಯಕಿಯ ಪಾತ್ರವನ್ನು ವಹಿಸಿದರು. ಅರುಣಾ ಅಸಫ್ ಅಲಿ ಅವರು ಸತ್ಯವತಿ ಅವರನ್ನು ರಾಷ್ಟ್ರೀಯವಾದಿ ಚಳವಳಿಗೆ ಸೇರಲು ಪ್ರೇರೇಪಿಸಿದರು. ಸತ್ಯವತಿ ಅವರು ಗ್ವಾಲಿಯರ್ ಮತ್ತು ದೆಹಲಿಯ ಜವಳಿ ಗಿರಣಿಗಳಲ್ಲಿ ಗಿರಣಿ ಕಾರ್ಮಿಕರಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಂಡರು. ಅವರು ಕಾಂಗ್ರೆಸ್ ಮಹಿಳಾ ಸಮಾಜ ಮತ್ತು ಕಾಂಗ್ರೆಸ್ ದೇಶ ಸೇವಿಕಾ ದಳವನ್ನು ಸ್ಥಾಪಿಸಿದರು ಮತ್ತು ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸಹ-ಸ್ಥಾಪಿಸಿದರು. ಇವರು ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನಾಗರಿಕ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಅವರು ದೆಹಲಿಯ ಕಾಂಗ್ರೆಸ್‌ನ ಮಹಿಳಾ ವಿಭಾಗದ ನಾಯಕಿಯಾದರು. ಅವರು ದೆಹಲಿಯಲ್ಲಿ ಉಪ್ಪಿನ ಕಾನೂನನ್ನು ಮುರಿಯಲು ಸಂಘಟಿಸಿದರು, ಅಲ್ಲಿ ಇವರು ಮತ್ತು ಸ್ವಯಂಸೇವಕರ ಗುಂಪು ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ ಉಪ್ಪಿನ ಪ್ಯಾಕೆಟ್‌ಗಳನ್ನು ತಯಾರಿಸಿ ವಿತರಿಸಿದರು. ಅವರನ್ನು ಪೊಲೀಸರು ಬಂಧಿಸಿದರು ಮತ್ತು ೧೯೩೨ ರಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು ಜೈಲಿನಲ್ಲಿದ್ದಾಗ ಅವರಿಗೆ ಪ್ಲೆರೈಸಿ ಮತ್ತು ಕ್ಷಯರೋಗ ತಗುಲಿತು. ಜೈಲಿನಲ್ಲಿದ್ದಾಗ, ರಾಜಕೀಯ ಚಟುವಟಿಕೆಯಿಂದ ದೂರವಿರುವುದಾಗಿ ಭರವಸೆ ನೀಡಿದರು. ಅವರು ೧೯೪೫ ರಲ್ಲಿ ತಮ್ಮ ೩೯ನೇ ವಯಸ್ಸಿನಲ್ಲಿ ಕ್ಷಯರೋಗದಿಂದ ನಿಧನರಾದರು.

ಬರಹಗಳು :

ಇವರು ಜೈಲಿನಲ್ಲಿರುವ ಮಹಿಳಾ ರಾಜಕೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕವನಗಳು ಮತ್ತು ರಾಷ್ಟ್ರೀಯತಾವಾದಿ ಕರಕುಶಲಗಳನ್ನು ರಚಿಸಿದರು. ಅವುಗಳನ್ನು ಕಳ್ಳಸಾಗಣೆ ಮಾಡಿ ಪ್ರಕಟಿಸಲಾಯಿತು. ಸತ್ಯವತಿ ದೇವಿಯವರು ಬರೆದಿರುವ ಬರಹದ ಒಂದು ತುಣುಕು, 'ಬಹಿನ್ ಸತ್ಯವತಿ ಕಾ ಜೈಲ್ ಸಂದೇಶ' (ಸಹೋದರಿ ಸತ್ಯವತಿಯ ಜೈಲು ಸಂದೇಶ) ಈ ಕೆಳಗಿನಂತಿರುತ್ತದೆ:

This is a message from your jailed sister
Sister Satyavati appeals to you
Do not slacken from your work
Jump, if required, into the burning flames
The sacred battle should be full of strength
Once you have stepped forward, never retreat
Die before the men in the battlefield
Do not fear bullets or sticks
Put your head forward before the men
Once lit, the fire should never go out
I have full faith now
Because the women have prepared themselves

ಇದು ಮತ್ತು ಅವರ ಇತರ ಬರಹಗಳು ಮತ್ತು ಜೈಲಿನಲ್ಲಿ ಬರೆದ ಹಾಡುಗಳು ಭಾರತದ ಸ್ವಾತಂತ್ರ್ಯ ಚಳವಳಿಗೆ ಪ್ರವೇಶಿಸಲು ಮಹಿಳೆಯರನ್ನು ಪ್ರೇರೇಪಿಸುವ ಮತ್ತು ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದವು.

ಗುರುತಿಸುವಿಕೆ

ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕಿ ಎಂದು ನಂಬಲಾಗಿದೆ. ೧೯೭೨ ರಲ್ಲಿ ದೆಹಲಿ ಸರ್ಕಾರವು ಸ್ಥಾಪಿಸಿದ ಕಾಲೇಜಿಗೆ ಸತ್ಯವತಿ ( ದೆಹಲಿ ವಿಶ್ವವಿದ್ಯಾಲಯ ) ಅವರ ಹೆಸರನ್ನು ಇಡಲಾಗಿದೆ.


ಉಲ್ಲೇಖಗಳು

Tags:

ಸತ್ಯವತಿ ದೇವಿ ಕುಟುಂಬ :ಸತ್ಯವತಿ ದೇವಿ ಕ್ರಿಯಾಶೀಲತೆಸತ್ಯವತಿ ದೇವಿ ಬರಹಗಳು :ಸತ್ಯವತಿ ದೇವಿ ಗುರುತಿಸುವಿಕೆಸತ್ಯವತಿ ದೇವಿ ಉಲ್ಲೇಖಗಳುಸತ್ಯವತಿ ದೇವಿಭಾರತದ ಸ್ವಾತಂತ್ರ್ಯ ಚಳುವಳಿ

🔥 Trending searches on Wiki ಕನ್ನಡ:

ಮಲೆಗಳಲ್ಲಿ ಮದುಮಗಳುಆದಿವಾಸಿಗಳುಅನುರಾಗ ಅರಳಿತು (ಚಲನಚಿತ್ರ)ಶ್ರೀವಿಜಯರಮ್ಯಾದೇವನೂರು ಮಹಾದೇವಫೇಸ್‌ಬುಕ್‌ಸುಧಾ ಮೂರ್ತಿಸೂರ್ಯ ಗ್ರಹಣಸಂಭೋಗರಾಜಕೀಯ ವಿಜ್ಞಾನಶಿಶುನಾಳ ಶರೀಫರುಸಹಕಾರಿ ಸಂಘಗಳುಇಂದಿರಾ ಗಾಂಧಿಪರಿಣಾಮಬಿ.ಎಸ್. ಯಡಿಯೂರಪ್ಪಕೃತಕ ಬುದ್ಧಿಮತ್ತೆಹವಾಮಾನಧರ್ಮಸನ್ನಿ ಲಿಯೋನ್ವಿಜಯದಾಸರುಕರ್ನಾಟಕದ ಹಬ್ಬಗಳುಯಕ್ಷಗಾನಗುಡಿಸಲು ಕೈಗಾರಿಕೆಗಳುಈಸೂರುಚನ್ನಬಸವೇಶ್ವರವಿಧಾನಸೌಧಬೆಳ್ಳುಳ್ಳಿಕಾಂತಾರ (ಚಲನಚಿತ್ರ)ನವರತ್ನಗಳುಇತಿಹಾಸಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಜೋಗಿ (ಚಲನಚಿತ್ರ)ಕನ್ನಡದಲ್ಲಿ ವಚನ ಸಾಹಿತ್ಯಮೊದಲನೇ ಅಮೋಘವರ್ಷಕ್ಯಾರಿಕೇಚರುಗಳು, ಕಾರ್ಟೂನುಗಳುಜಾಹೀರಾತುಗುಣ ಸಂಧಿಕಾದಂಬರಿಶನಿಮದುವೆಅಮೇರಿಕ ಸಂಯುಕ್ತ ಸಂಸ್ಥಾನಅಂತರ್ಜಲಕರ್ನಾಟಕದ ಅಣೆಕಟ್ಟುಗಳುಕರಗ (ಹಬ್ಬ)ಶಿಶುಪಾಲರಾಮಆಂಧ್ರ ಪ್ರದೇಶರಂಗಭೂಮಿಕೈಗಾರಿಕೆಗಳುಗಿರೀಶ್ ಕಾರ್ನಾಡ್ವಿನಾಯಕ ದಾಮೋದರ ಸಾವರ್ಕರ್ಹೊನ್ನಾವರಸಚಿನ್ ತೆಂಡೂಲ್ಕರ್ಅಕ್ಬರ್ಚಿಲ್ಲರೆ ವ್ಯಾಪಾರಮತದಾನಕಾಗೋಡು ಸತ್ಯಾಗ್ರಹಸುಭಾಷ್ ಚಂದ್ರ ಬೋಸ್ಬಸವೇಶ್ವರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುತಾಳಗುಂದ ಶಾಸನಕನ್ನಡ ಸಾಹಿತ್ಯ ಸಮ್ಮೇಳನಸುದೀಪ್ಗೀತಾ (ನಟಿ)ಕನ್ನಡ ಚಳುವಳಿಗಳುಮಾನವ ಅಭಿವೃದ್ಧಿ ಸೂಚ್ಯಂಕಮೈಸೂರು ಮಲ್ಲಿಗೆಗೂಗಲ್ಸರ್ವೆಪಲ್ಲಿ ರಾಧಾಕೃಷ್ಣನ್ಸಂಜಯ್ ಚೌಹಾಣ್ (ಸೈನಿಕ)ಜಪಾನ್ಪ್ರಬಂಧಎ.ಎನ್.ಮೂರ್ತಿರಾವ್ಹಾಗಲಕಾಯಿ🡆 More