ಗ್ವಾಲಿಯರ್

ಗ್ವಾಲಿಯರ್ ಭಾರತದ ಮಧ್ಯ ಪ್ರದೇಶ ರಾಜ್ಯದ ಒಂದು ಪ್ರಮುಖ ನಗರವಾಗಿದೆ ಮತ್ತು ಪ್ರತಿಚುಂಬಕ ನಗರಗಳಲ್ಲಿ ಒಂದಾಗಿದೆ.

ಇದು ರಾಜ್ಯದ ರಾಜಧಾನಿ ಭೋಪಾಲ್‍ನಿಂದ ೪೧೪ ಕಿಲೋಮೀಟರ್ ದೂರವಿದೆ. ಗ್ವಾಲಿಯರ್ ಭಾರತದ ಗಿರ್ದ್ ಪ್ರದೇಶದಲ್ಲಿ ಒಂದು ಯೋಜಿತ ಸ್ಥಳವನ್ನು ಹೊಂದಿದೆ. ಈ ಐತಿಹಾಸಿಕ ನಗರ ಮತ್ತು ಅದರ ಕೋಟೆಯನ್ನು ಹಲವಾರು ಐತಿಹಾಸಿಕ್ ಉತ್ತರ ಭಾರತೀಯ ರಾಜ್ಯಗಳು ಆಳಿವೆ. ೧೦ನೇ ಶತಮಾನದಲ್ಲಿ ಕಚ್ಛಪಘಾತರು, ೧೩ನೇ ಶತಮಾನದಲ್ಲಿ ತೋಮರ್‌ರಿಂದ ಇದು ಮೊಘಲ್ ಸಾಮ್ರಾಜ್ಯಕ್ಕೆ ಹೋಯಿತು, ನಂತರ ೧೭೫೪ರಲ್ಲಿ ಮರಾಠರಿಗೆ ಹೋಯಿತು. ೧೮ನೇ ಶತಮಾನದಲ್ಲಿ ಸಿಂದಿಯಾರಿಗೆ ಹೋಯಿತು.

ಪ್ರವಾಸಿ ತಾಣಗಳು

ಗ್ವಾಲಿಯರ್ ಕೋಟೆ

ಗ್ವಾಲಿಯರ್ 
ಗ್ವಾಲಿಯರ್ ಕೋಟೆಯ ಮುಂಬದಿಯ ನೋಟ
ಗ್ವಾಲಿಯರ್ 
ಶಿಲೆಯಲ್ಲಿ ಕೆತ್ತಿದ ತೀರ್ಥಂಕರರ ವಿಗ್ರಹಗಳು.
ಗ್ವಾಲಿಯರ್ 
ಕೋಟೆಯಿಂದ ಸಿಂದಿಯಾ ಅರಮನೆಯ ನೋಟ

ಗ್ವಾಲಿಯರ್‌ನ ಹೃದಯಭಾಗದಲ್ಲಿ ತೋಮರ ರಾಜವಂಶದ ಗ್ವಾಲಿಯರ್ ಕೋಟೆಯಿದೆ. ಇದು ಒಂದು ವಿವಿಕ್ತ ಬಂಡೆ ಹೊರಚಾಚಿನ ಮೇಲೆ ನಿಂತಿದೆ. ಗ್ವಾಲಿಯರ್‌ನ ಹಳೆ ಪಟ್ಟಣವು ಕೋಟೆಯ ಪೂರ್ವ ತಳಪಾಯದ ಪಕ್ಕವಿದೆ.

ಗ್ವಾಲಿಯರ್ 
ಗ್ವಾಲಿಯರ್ ಕೋಟೆಯಿಂದ ಗುಜರಿ ಮೆಹೆಲ್ ಮತ್ತು ಹತ್ತಿರದ ಪ್ರದೇಶಗಳ ನೋಟ
  • ಗೋಪಾಚಲ ಪರ್ವತವು ಗ್ವಾಲಿಯರ ಕೋಟೆಯ ಇಳಿಜಾರು ಪ್ರದೇಶದಲ್ಲಿ ಪರ್ವತೀಯ ವಲಯದಲ್ಲಿ ಸ್ಥಿತವಾಗಿದೆ. ಗೋಪಾಚಲ ಪರ್ವತವು ಜೈನ ತೀರ್ಥಂಕರರ ಅನನ್ಯ ವಿಗ್ರಹಗಳನ್ನು ಹೊಂದಿದೆ.
  • ಮುನಿಸಿಪಾಲಿಟಿ ವಸ್ತುಸಂಗ್ರಹಾಲಯವು ರಾಣಿ ಲಕ್ಷ್ಮೀಬಾಯಿಯ ಸಮಾಧಿಯಿಂದ ಸ್ವಲ್ಪ ದೂರದಲ್ಲಿ ಸ್ಥಿತವಾಗಿದೆ.
    ಗ್ವಾಲಿಯರ್ 
    ಗ್ವಾಲಿಯರ್ ಪುರಸಭೆಯ ವಸ್ತುಸಂಗ್ರಹಾಲಯ
  • ಮಾಡರ್ನ್ 5ಡಿ ಮಧ್ಯ ಪ್ರದೇಶದ ಮೊದಲ ಬಹು ಆಯಾಮದ ರಂಗಮಂದಿರವಾಗಿದೆ.
  • ಒಂದು ಔತಣಕೂಟದ ಸಭಾಂಗಣವಾದ ಶ್ಯಾಮ್ ವಾಟಿಕಾ ವಿಶ್ವದ ಅತಿ ದೊಡ್ಡ ಒಳಾಂಗಣ ಭಿತ್ತಿಚಿತ್ರವನ್ನು ಹೊಂದಿದೆ.
  • ೧೫ನೇ ಶತಮನಾದ ಗುಜರಿ ಮೆಹೆಲ್ ರಾಜ ಮಾನ್‍ಸಿಂಗ್ ಟೊಮರ್ ಮತ್ತು ಅವನ ರಾಣಿ ಮೃಗ್‍ನಯನಿಯ ಪ್ರೀತಿಯ ಸ್ಮಾರಕವಾಗಿದೆ.
  • ೯ನೇ ಶತಮಾನದ ಸಾಸ್-ಬಹು ದೇವಾಲಯವು ತನ್ನ ಕಲಾತ್ಮಕ ಮೌಲ್ಯದಿಂದ ಭಕ್ತರ ಜೊತೆಗೆ ಪ್ರವಾಸಿಗಳನ್ನೂ ಆಕರ್ಷಿಸುತ್ತದೆ.
ಗ್ವಾಲಿಯರ್ 
ತೇಲಿ ಕಾ ಮಂದಿರ್
  • ತೇಲಿ ಕಾ ಮಂದಿರ್ (ತೆಲಂಗಾಣ ಮಂದಿರ್) - ಸುಮಾರು ೧೦೦ ಅಡಿ ಎತ್ತರದ ರಚನೆಯಾದ ಇದು ತನ್ನ ಅನನ್ಯವಾದ ವಾಸ್ತುಕಲೆಯ ಕಾರಣ ಭಿನ್ನವಾಗಿದೆ.
  • ಕಲ್ಲಿನಲ್ಲಿ ಕೆತ್ತಿದ ಜೈನ ಶಿಲ್ಪಗಳು - ಗ್ವಾಲಿಯರ್ ಕೋಟೆಯಲ್ಲಿ ಗುಹೆಗಳ ಅಥವಾ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳ ಸರಣಿಯಿದೆ. ಇವುಗಳ ಸಂಖ್ಯೆ ಸುಮಾರು ನೂರರಷ್ಟಿದೆ.
  • ಗುರುದ್ವಾರ ದತ್ತ ಬಂದಿ ಚೂಢ್- ಈ ಗುರುದ್ವಾರಾವನ್ನು ಆರನೇ ಸಿಖ್ ಗುರು ಗುರು ಹರ್ ಗೋಬಿಂದ್‍ರ ನೆನಪಿನಲ್ಲಿ ನಿರ್ಮಿಸಲಾಗಿದೆ.

ಜೈ ವಿಲಾಸ್ ಮೆಹೆಲ್

ಇದು ಗ್ವಾಲಿಯರ್‌ನ ಮರಾಠಾ ಅರಸರರಾದ ಸಿಂದಿಯಾಗಳ ವಾಸದ ಅರಮನೆಯಾಗಿದ್ದು ಈಗ ವಸ್ತುಸಂಗ್ರಹಾಲಯವಾಗಿದೆ.

ಐತಿಹಾಸಿಕ ಮಹತ್ವದ ಸಮಾಧಿಗಳು ಮತ್ತು ಛತ್ರಿಗಳು

ಗ್ವಾಲಿಯರ್ 
ಗೌಸ್ ಮೊಹಮ್ಮದ್ ಸಮಾಧಿ
  • ಸಿಂದಿಯಾಗಳ ಛತ್ರಿಗಳು ನಗರವನ್ನು ಆಳಿದ ಸಿಂದಿಯಾಗಳ ಹೂಳಿದ ಸ್ಥಳವಾಗಿದೆ.
  • ತಾನ್‍ಸೇನ್‍ನ ಸಮಾಧಿ: ಅಕ್ಬರ್‌ನ ನವರತ್ನಗಳಲ್ಲಿ ಒಬ್ಬನಾದ ಸಂಗೀತಗಾರ ತಾನ್‍ಸೇನ್‍ನ ಸಮಾಧಿಯಿದು.
  • ಘೌಸ್ ಮೊಹಮ್ಮದ್‍ನ ಗೋರಿ.
  • ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸಮಾಧಿ: ಇದು ಫೂಲ್‍ಬಾಗ್ ಪ್ರದೇಶದಲ್ಲಿದೆ.
ಗ್ವಾಲಿಯರ್ 
ಸೂರ್ಯ ದೇವಾಲಯ

ಸೂರ್ಯ ದೇವಾಲಯ

ಮೋರಾರ್ ಕಂಟೋನ್ಮೆಂಟ್‌ನಲ್ಲಿ ಸ್ಥಿತವಾಗಿರುವ, ಸೂರ್ಯ ದೇವನಿಗೆ ಸಮರ್ಪಿತವಾದ ಸೂರ್ಯ ದೇವಾಲಯವನ್ನು ಕೊನಾರ್ಕ್‌ನ ಸೂರ್ಯ ದೇವಾಲಯದ ಯಥಾಪ್ರತಿಯಾಗಿ ವಿನ್ಯಾಸಗೊಳಿಸಲಾಗಿದೆ.

ಛಾಯಾಂಕಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಗ್ವಾಲಿಯರ್ ಪ್ರವಾಸಿ ತಾಣಗಳುಗ್ವಾಲಿಯರ್ ಛಾಯಾಂಕಣಗ್ವಾಲಿಯರ್ ಉಲ್ಲೇಖಗಳುಗ್ವಾಲಿಯರ್ ಹೊರಗಿನ ಕೊಂಡಿಗಳುಗ್ವಾಲಿಯರ್ಮಧ್ಯ ಪ್ರದೇಶಮೊಘಲ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಮೂಢನಂಬಿಕೆಗಳುಕರ್ನಾಟಕರನ್ನ೧೮೬೨ಪ್ರೀತಿಗೋವಿಂದ ಪೈಕೊರೋನಾವೈರಸ್ನದಿಕೈಗಾರಿಕೆಗಳುಕೃತಕ ಬುದ್ಧಿಮತ್ತೆಜಯಮಾಲಾಕರ್ನಾಟಕ ಲೋಕಾಯುಕ್ತಭಾರತೀಯ ನದಿಗಳ ಪಟ್ಟಿಬೆಳಗಾವಿಕವಿರಾಜಮಾರ್ಗಪಂಡಿತನವರಾತ್ರಿಬೌದ್ಧ ಧರ್ಮಚಾಣಕ್ಯಉಡಮೈಸೂರುಜ್ಞಾನಪೀಠ ಪ್ರಶಸ್ತಿದ್ರೌಪದಿ ಮುರ್ಮುಬನವಾಸಿಶಬ್ದವೇಧಿ (ಚಲನಚಿತ್ರ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಂಧನೂರುಗಣೇಶ ಚತುರ್ಥಿಆರೋಗ್ಯಸೀತೆಮಿಥುನರಾಶಿ (ಕನ್ನಡ ಧಾರಾವಾಹಿ)ತ್ರಿಪದಿಕರ್ಮಬೆಂಗಳೂರು ಕೋಟೆಬೆಟ್ಟದಾವರೆಪಂಚ ವಾರ್ಷಿಕ ಯೋಜನೆಗಳುನಿರ್ಮಲಾ ಸೀತಾರಾಮನ್ರಾಜಕೀಯ ವಿಜ್ಞಾನಅಶ್ವತ್ಥಾಮಚುನಾವಣೆಅಯೋಧ್ಯೆರಮ್ಯಾಸಮಾಜ ವಿಜ್ಞಾನರಾಜ್‌ಕುಮಾರ್ಖಂಡಕಾವ್ಯಅಲಾವುದ್ದೀನ್ ಖಿಲ್ಜಿಮಾರುಕಟ್ಟೆಕನ್ನಡಛತ್ರಪತಿ ಶಿವಾಜಿಉಡುಪಿ ಜಿಲ್ಲೆರಾಹುಲ್ ದ್ರಾವಿಡ್ಕರ್ನಾಟಕದ ಇತಿಹಾಸಹರಿಹರ (ಕವಿ)ಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ರಾಷ್ಟ್ರ ಸಮಿತಿಬೇಲೂರುಬೃಂದಾವನ (ಕನ್ನಡ ಧಾರಾವಾಹಿ)ಉತ್ತರ ಕನ್ನಡಪ್ರದೀಪ್ ಈಶ್ವರ್ಬಸವೇಶ್ವರಒಡೆಯರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿನ ಚುನಾವಣೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸೌರಮಂಡಲಕೃಷ್ಣಾ ನದಿಭಾರತದ ಸ್ವಾತಂತ್ರ್ಯ ದಿನಾಚರಣೆತಂತಿವಾದ್ಯತಿರುಪತಿಕರ್ನಾಟಕದ ಸಂಸ್ಕೃತಿಗ್ರಾಮ ಪಂಚಾಯತಿಅಕ್ಬರ್ಜಿ.ಪಿ.ರಾಜರತ್ನಂಐಹೊಳೆಯೂಟ್ಯೂಬ್‌🡆 More