ಶ್ರೀನಿವಾಸಪುರ

ಶ್ರೀನಿವಾಸಪುರ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ.

ಶ್ರೀನಿವಾಸಪುರ
ಶ್ರೀನಿವಾಸಪುರ
ಶ್ರೀನಿವಾಸಪುರ
ಶ್ರೀನಿವಾಸಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೋಲಾರ
ನಿರ್ದೇಶಾಂಕಗಳು 13.1333° N 78.1333° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.

ಭೌಗೋಳಿಕ

ಪೂರ್ವ ಮತ್ತು ಉತ್ತರದಲ್ಲಿ ಆಂಧ್ರಪ್ರದೇಶ, ಪಶ್ಚಿಮ ಮತ್ತು ವಾಯುವ್ಯದಲ್ಲಿ ಚಿಂತಾಮಣಿ, ನೈಋತ್ಯ ಮತ್ತು ದಕ್ಷಿಣಕ್ಕೆ ಕೋಲಾರ, ಆಗ್ನೇಯಕ್ಕೆ ಮುಳಬಾಗಲು ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರಿದಿವೆ. ಯಲದೂರು, ನೆಲವಂಕಿ, ರೋಣೂರು, ರಾಯಲಪಾಡು ಮತ್ತು ಶ್ರೀನಿವಾಸಪುರ 5 ಹೋಬಳಿಗಳಿದ್ದು 347 ಗ್ರಾಮಗಳಿವೆ. ವಿಸ್ತೀರ್ಣ 855.6 ಚ.ಕಿ.ಮೀ.. ಜನಸಂಖ್ಯೆ 1,84,612.

ತಾಲ್ಲೂಕಿನ ಬಹುಭಾಗ ಬಯಲು ಪ್ರದೇಶವಾಗಿದ್ದು ಕೆಲವೆಡೆ ಚಪ್ಪಟೆ ಆಕಾರದ ಲ್ಯಾಟರೈಟ್ ಶಿಲೆಗಳಿಂದ ಕೂಡಿದ ಬೆಟ್ಟಗಳು ಕಂಡುಬರುತ್ತವೆ. ಈ ತಾಲ್ಲೂಕಿನ ಮುಖ್ಯ ಕಸಬು ವ್ಯವಸಾಯ. ಸಣ್ಣಕಲ್ಲು ಮಿಶ್ರಿತ ಕೆಂಪುಮಣ್ಣುಳ್ಳ ಪ್ರದೇಶಗಳಲ್ಲಿ ನೆಲಗಡಲೆ ಹೆಚ್ಚಾಗಿ ಬೆಳೆಯುತ್ತಾರೆ. ಮಾವು, ಹುಣಿಸೆ ಪ್ರಮುಖ ಆರ್ಥಿಕ ಬೆಳೆಗಳು. ಸಜ್ಜೆ, ರಾಗಿ, ಬತ್ತ, ದ್ವಿದಳಧಾನ್ಯಗಳು, ಮೆಕ್ಕೆಜೋಳ-ಇವು ಈ ತಾಲ್ಲೂಕಿನಲ್ಲಿ ಕಂಡುಬರುವ ಇತರ ಬೆಳೆಗಳು. ನದಿ, ತೊರೆ, ನಾಲೆ ಯಾವುದೂ ಇಲ್ಲದ ಈ ತಾಲ್ಲೂಕಿನ ವ್ಯವಸಾಯ ಹೆಚ್ಚಾಗಿ ಬಾವಿ, ಕೆರೆಗಳ ಮತ್ತು ಮಳೆಯ ಆಶ್ರಯದಿಂದ ನಡೆಯುತ್ತದೆ. ತಾಲ್ಲೂಕಿನ ವಾರ್ಷಿಕ ಮಳೆ 660.13 ಮಿಮೀ.

ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.

ಇತಿಹಾಸ

ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂರ್ತಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.

ಇದನ್ನೂ ನೋಡಿ

ಉಲ್ಲೇಖಗಳು

Tags:

ಶ್ರೀನಿವಾಸಪುರ ಭೌಗೋಳಿಕಶ್ರೀನಿವಾಸಪುರ ಇತಿಹಾಸಶ್ರೀನಿವಾಸಪುರ ಇದನ್ನೂ ನೋಡಿಶ್ರೀನಿವಾಸಪುರ ಉಲ್ಲೇಖಗಳುಶ್ರೀನಿವಾಸಪುರಕರ್ನಾಟಕಕೋಲಾರ

🔥 Trending searches on Wiki ಕನ್ನಡ:

ಮುದ್ದಣತಂತ್ರಜ್ಞಾನಮಾದಕ ವ್ಯಸನಕರ್ನಾಟಕ ಜನಪದ ನೃತ್ಯತುಳುಮಲೈ ಮಹದೇಶ್ವರ ಬೆಟ್ಟಕಾರ್ಮಿಕರ ದಿನಾಚರಣೆಗುರುರಾಜ ಕರಜಗಿವಿಭಕ್ತಿ ಪ್ರತ್ಯಯಗಳುನಾಗರೀಕತೆತೀ. ನಂ. ಶ್ರೀಕಂಠಯ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತೀಯ ರೈಲ್ವೆಎಚ್.ಎಸ್.ಶಿವಪ್ರಕಾಶ್ಜಿಡ್ಡು ಕೃಷ್ಣಮೂರ್ತಿರೇಡಿಯೋಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಪುನೀತ್ ರಾಜ್‍ಕುಮಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಹಕಾರಿ ಸಂಘಗಳುಕವಿಗಳ ಕಾವ್ಯನಾಮಶಿಶುಪಾಲಸಂಗ್ಯಾ ಬಾಳ್ಯಕೋಟ ಶ್ರೀನಿವಾಸ ಪೂಜಾರಿಕರ್ನಾಟಕ ಹೈ ಕೋರ್ಟ್ಸುಮಲತಾಇಮ್ಮಡಿ ಪುಲಿಕೇಶಿಜೀವನಕ್ರೀಡೆಗಳುಜೀವವೈವಿಧ್ಯರನ್ನಕರ್ನಾಟಕದ ತಾಲೂಕುಗಳುವ್ಯಂಜನಇಸ್ಲಾಂ ಧರ್ಮಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸ್ವಾಮಿ ವಿವೇಕಾನಂದಜರಾಸಂಧಸಾದರ ಲಿಂಗಾಯತಗೀತಾ (ನಟಿ)ರಾಹುಲ್ ಗಾಂಧಿದ.ರಾ.ಬೇಂದ್ರೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿನಾಯಕ ದಾಮೋದರ ಸಾವರ್ಕರ್ಜಾಗತಿಕ ತಾಪಮಾನಮಾಹಿತಿ ತಂತ್ರಜ್ಞಾನಲಕ್ಷ್ಮೀಶಪರೀಕ್ಷೆಭಾಷಾ ವಿಜ್ಞಾನಕರ್ನಾಟಕದ ಕಲೆ ಮತ್ತು ಸಂಸ್ಕೃತಿಕುಮಾರವ್ಯಾಸಬೌದ್ಧ ಧರ್ಮಶಾಸನಗಳುದಾಸ ಸಾಹಿತ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಎಸ್.ಜಿ.ಸಿದ್ದರಾಮಯ್ಯವಿವಾಹಕರಗಜೋಗಶಿಕ್ಷಕಲೋಪಸಂಧಿಕೃಷ್ಣರಾಜನಗರಅಳಿಲುಸೂಫಿಪಂಥಸೆಸ್ (ಮೇಲ್ತೆರಿಗೆ)ಋಗ್ವೇದಬೇಲೂರುಕಂಪ್ಯೂಟರ್ಸೂರ್ಯವ್ಯೂಹದ ಗ್ರಹಗಳುಗ್ರಹಹೊಯ್ಸಳ ವಾಸ್ತುಶಿಲ್ಪಮಾರೀಚಹಣಕಾಸುಆಂಧ್ರ ಪ್ರದೇಶಚಂಡಮಾರುತಸ್ವಚ್ಛ ಭಾರತ ಅಭಿಯಾನದೇವರ ದಾಸಿಮಯ್ಯ🡆 More