ವ್ಯಾಕರಣಕಾರರು

ಕನ್ನಡವ್ಯಾಕರಣಕಾರರು ಮತ್ತು ಕೃತಿಗಳ ಸ್ಥೂಲ ಪರಿಚಯ :- ಬಹು ಶತಮಾನಗಳಿಂದ ಅನೇಕ ಪ್ರಯೋಗಕ್ಕೊಳಪಟ್ಟು ಕನ್ನಡ ಒಂದು ಹೊಸಗನ್ನಡ ರೂಪವನ್ನು ತಳೆದು ನಿಂತಿದೆ.

ಇದರ ಹಿಂದೆ ಇದ್ದ ರೂಪ ‘ನಡುಗನ್ನಡ’. ನಡುಗನ್ನಡಕ್ಕೆ ಹಿಂದಿನ ಕನ್ನಡ ರೂಪವೇ ಹಳಗನ್ನಡ. ಅದಕ್ಕೂ ಮೊದಲಿನ ಕನ್ನಡದ ರೂಪವೇ ‘ಪೂರ್ವದ ಹಳಗನ್ನಡ’ವಾಗಿದೆ. ಕನ್ನಡದ ವ್ಯಾಕರಣಕಾರರನ್ನು ‘ವೈಯಾಕರಣಕಾರ’ರು ಎಂದು ಕರೆಯುತ್ತಾರೆ. ಪ್ರಾಚೀನಕಾಲದ ಕನ್ನಡ ಸ್ವರೂಪವನ್ನು ಬೆಳೆಸುವ ಅನೇಕ ಕೃತಿಗಳನ್ನು ಕನ್ನಡದ ವಿದ್ವಾಂಸರು ರಚಿಸಿದ್ದಾರೆ.

ಕನ್ನಡ ವ್ಯಾಕರಣಕಾರು ಮತ್ತು ಕೃತಿಗಳು

ಕನ್ನಡ ವ್ಯಾಕರಣಕಾರರ ಕೃತಿಗಳ ಪರಿಚಯವನ್ನು ಈ ಕೆಳಗಿನಂತೆ ವಿವರಿಸಬಹುದು.

ಎರಡನೇ ನಾಗವರ್ಮ

ಕ್ರಿ. ಶ. 1150 ರಲ್ಲಿ ಎರಡನೇ ನಾಗವರ್ಮ ‘ಕರ್ನಾಟಕ ಭಾಷಾಭೂಷಣ’ ಮತ್ತು ‘ಕಾವ್ಯಾವಲೋಕನ’ ಎಂಬ ಎರಡು ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ವ್ಯಾಕರಣದ ಚರ್ಚೆಯಾಗಿದೆ. ಆತನ ಕಾವ್ಯಾವಲೋಕನವು ಅಲಂಕಾರ ಕೃತಿಯಾಗಿದ್ದು, ಇದರ ಮೊದಲನೆಯ ಭಾಗದಲ್ಲಿ ‘ಶಬ್ದಸ್ಮೃತಿ’ ವಿಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾನೆ. ಈ ಕೃತಿಯಲ್ಲಿ ಸಂಧಿ, ನಾಮಪದ, ಸಮಾಸ, ತದ್ಧಿತ, ಆಖ್ಯಾತ ಎಂಬ ಐದು ಭಾಗಗಳಿವೆ. ಸಂಕ್ಷಿಪ್ತ ರೂಪದ ಹಳೆಗನ್ನಡ ರೂಪದ ಚರ್ಚೆಯಾಗಿದೆ. ಕರ್ನಾಟಕ ಭಾಷಾಭೂಷಣ ಕೃತಿಯು ಕನ್ನಡ ವ್ಯಾಕರಣ ಗ್ರಂಥವಾಗಿದ್ದರೂ ಸಂಸ್ಕೃತ ಭಾಷೆಯಲ್ಲಿದೆ.

ಕೇಶಿರಾಜ

ಕೇಶಿರಾಜನ ‘ಶಬ್ದಮಣಿದರ್ಪಣ’ ಎಂಬ ಕೃತಿಯನ್ನು ರಚಿಸಿದ್ದಾನೆ. ನಾಗವರ್ಮನ ‘ಶಬ್ದಸ್ಮೃತಿ’ಯನ್ನು ಅನುಸರಿಸಿ ಸೂತ್ರಗಳನ್ನು ರಚಿಸಿ ವೃತ್ತಿಗಳನ್ನು ಗದ್ಯರೂಪದಲ್ಲಿ ಬರೆದಿದ್ದಾನೆ. ಈತನ ಕಾಲ ಕ್ರಿ.ಶ. 1260 (13ನೆಯ ಶತಮಾನ). ಈತನ ಜನನವು ವಿದ್ವಾಂಸ ಪರಂಪರೆಯಲ್ಲಿ ಆಗಿದೆ. ಈತನ ತಂದೆ ಮಲ್ಲಿಕಾರ್ಜುನ, ಸೋದರಮಾವ ಜನ್ನ ಮತ್ತು ಕವಿ ಸುಮನೋಭಾವ ಈತನ ತಾತ.

    ಈತನ ಗ್ರಂಥದಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಎಂಟು ಅಧ್ಯಾಯಗಳಿವೆ. ಗ್ರಂಥದ ಕೊನೆಯಲ್ಲಿ ಪ್ರಯೋಗ ಸಾರವೆಂಬ ಅಧ್ಯಾಯವು ಶಬ್ದಾರ್ಥ ನಿರ್ಣಯಮನ್ನು ತಿಳಿಯಲು ಉಪಯುಕ್ತವಾಗಿದೆ. ಈ ವ್ಯಾಕರಣ ಗ್ರಂಥದಲ್ಲಿರುವ ಸೂತ್ರಗಳೆಲ್ಲವೂ ಕಂದ ಪದ್ಯದಲ್ಲಿವೆ. ಶಬ್ದಮಣಿದರ್ಪಣದಲ್ಲಿ ಒಟ್ಟು 322 ಸೂತ್ರಗಳಿವೆ.

ಭಟ್ಟಾಕಳಂಕ ದೇವ

ಭಟ್ಟಾಕಳಂಕ ದೇವ ಕಾಲಘಟ್ಟ ಕ್ರಿ.ಶ. 1604. ಈತನು ‘ಶಬ್ದಾನುಶಾಸನ’ವೆಂಬ ವ್ಯಾಕರಣ ಕುರಿತಾದ ಗ್ರಂಥವನ್ನು ರಚಿಸಿದನು. ಇದು ವ್ಯಾಕರಣ ಗ್ರಂಥ ಆದರೂ ಸಂಸ್ಕೃತ ಭಾಷೆಯಲ್ಲಿದೆ. ಈತನು ಅಕಳಂಕದೇವ ಜೈನ ಗುರುಗಳ ಶಿಷ್ಯನಾಗಿದ್ದ. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳ ಮಹಾ ವಿದ್ವಾಂಸನಾಗಿದ್ದನು. ಈತನ ಕೃತಿಯಲ್ಲಿ ಸೂತ್ರವೃತ್ತಿಗಳು ಅಲ್ಲದೆ ಪ್ರೌಢ ವ್ಯಾಖ್ಯಾನಗಳು ಇರುವುದರಿಂದ ವ್ಯಾಕರಣ ಇತ್ಯಾದಿ ಗಮನಾರ್ಹ ಗ್ರಂಥವೂ ಆಗಿದೆ.

ನೋಡಿ


ಉಲ್ಲೇಖ

Tags:

ವ್ಯಾಕರಣಕಾರರು ಕನ್ನಡ ವ್ಯಾಕರಣಕಾರು ಮತ್ತು ಕೃತಿಗಳುವ್ಯಾಕರಣಕಾರರು ನೋಡಿವ್ಯಾಕರಣಕಾರರು ಉಲ್ಲೇಖವ್ಯಾಕರಣಕಾರರುಕನ್ನಡವ್ಯಾಕರಣಹಳಗನ್ನಡಹೊಸಗನ್ನಡ

🔥 Trending searches on Wiki ಕನ್ನಡ:

ಖ್ಯಾತ ಕರ್ನಾಟಕ ವೃತ್ತಉಡುಪಿ ಜಿಲ್ಲೆಕುದುರೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಗುಪ್ತ ಸಾಮ್ರಾಜ್ಯಶಿವರಾಮ ಕಾರಂತಬಿ. ಶ್ರೀರಾಮುಲುಮಲ್ಲಿಕಾರ್ಜುನ್ ಖರ್ಗೆಕನ್ನಡಪ್ರಭಕರ್ನಾಟಕ ಲೋಕಾಯುಕ್ತಕೃತಕ ಬುದ್ಧಿಮತ್ತೆವೇದಭಾರತದ ಚುನಾವಣಾ ಆಯೋಗಮಲಬದ್ಧತೆಕುತುಬ್ ಮಿನಾರ್ರತ್ನತ್ರಯರುಮಧುಮೇಹಹಾಗಲಕಾಯಿಭಾರತೀಯ ಕಾವ್ಯ ಮೀಮಾಂಸೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಾನ್ವಿತಾ ಕಾಮತ್ಹಿಂದೂ ಧರ್ಮಭೂತಕೋಲಮಲೇರಿಯಾಜಾಪತ್ರೆಕರ್ನಾಟಕ ಸ್ವಾತಂತ್ರ್ಯ ಚಳವಳಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮನೆತೆಲಂಗಾಣವ್ಯಂಜನಜಯಪ್ರಕಾಶ ನಾರಾಯಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವ್ಯಾಪಾರಸಂಖ್ಯೆಕಲ್ಪನಾವಿಜಯನಗರ ಸಾಮ್ರಾಜ್ಯಸ್ವರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸಹಕಾರಿ ಸಂಘಗಳುಲಗೋರಿನಾಮಪದಭತ್ತಪ್ರಿನ್ಸ್ (ಚಲನಚಿತ್ರ)ಕರ್ನಾಟಕದ ಏಕೀಕರಣರಾಷ್ಟ್ರೀಯ ಶಿಕ್ಷಣ ನೀತಿಪಾಕಿಸ್ತಾನಜೋಗಿ (ಚಲನಚಿತ್ರ)ಸುಗ್ಗಿ ಕುಣಿತಉಚ್ಛಾರಣೆಮಾವುದಾಳಿಂಬೆಶಿಕ್ಷಕಸಂಸ್ಕೃತ ಸಂಧಿಸಂಸ್ಕಾರಮೈಸೂರು ದಸರಾಗೊಮ್ಮಟೇಶ್ವರ ಪ್ರತಿಮೆತ್ಯಾಜ್ಯ ನಿರ್ವಹಣೆರಾಹುಲ್ ಗಾಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಂವಹನಶ್ರೀವಿಜಯಮೊದಲನೇ ಅಮೋಘವರ್ಷಆವಕಾಡೊವೆಬ್‌ಸೈಟ್‌ ಸೇವೆಯ ಬಳಕೆಭಾರತದಲ್ಲಿನ ಚುನಾವಣೆಗಳುವ್ಯವಹಾರಭಾರತದ ಉಪ ರಾಷ್ಟ್ರಪತಿಇನ್ಸ್ಟಾಗ್ರಾಮ್ಕಲ್ಯಾಣಿಭಾರತದ ಪ್ರಧಾನ ಮಂತ್ರಿಚಿಂತಾಮಣಿನದಿವ್ಯಾಪಾರ ಸಂಸ್ಥೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವೇದವ್ಯಾಸವಾಲಿಬಾಲ್🡆 More