Lasik ಲಸಿಕ್

LASIK ಅಥವಾ Lasik(ಲಸಿಕ್) (ಲೇಸರ್-ಅಸ್ಸಿಸ್ಟೆಡ್ ಇನ್ ಸಿತು ಕೆರಾಟೊಮೈಲೂಸಿಸ್ ), ಸಮೀಪದೃಷ್ಟಿ(ಮೈಓಪಿಅ), ದೂರದೃಷ್ಟಿ(ಹೈಪರೋಪಿಅ), ಹಾಗು ಅಸಮದೃಷ್ಟಿ(ಅಸ್ಟಿಗ್ಮಟಿಸಂ) ಸರಿಪಡಿಸುವ ಒಂದು ಬಗೆಯ ವಕ್ರೀಕಾರಕ ಶಸ್ತ್ರಚಿಕಿತ್ಸೆ.

ಲಸಿಕ್ ಶಸ್ತ್ರಚಿಕಿತ್ಸೆಯನ್ನು ನೇತ್ರತಜ್ಞ ರು ಲೇಸರ್ ಬಳಕೆಮಾಡಿಕೊಂಡು ನಡೆಸುತ್ತಾರೆ. ಲಸಿಕ್, ಇತರ ಶಸ್ತ್ರಚಿಕಿತ್ಸಾ ವಿಧಾನಗಳಾದ ಫೋಟೋರಿಫ್ರ್ಯಾಕಟಿವ್ ಕೆರಾಟೆಕ್ಟಮಿ, PRK, (ASA, ಅಡ್ವಾನ್ಸ್ಡ್ ಸರ್ಫೇಸ್ ಅಬ್ಲೇಶನ್ ಎಂಬ ಹೆಸರಿನಿಂದಲೂ ಪರಿಚಿತ) ಮಾದರಿಗಳನ್ನು ಹೋಲುತ್ತದೆ. ಈ ಶಸ್ತ್ರಚಿಕಿತ್ಸೆಯಿಂದ ರೋಗಿಯು ಬೇಗನೆ ಚೇತರಿಸಿಕೊಳ್ಳುತ್ತಾನೆ. LASIK(ಲಸಿಕ್) ಹಾಗು PRK ಎರಡೂ, ದೃಷ್ಟಿದೋಷ ಸರಿಪಡಿಸುವ ಚಿಕಿತ್ಸೆಯಲ್ಲಿ ರೇಡಿಯಲ್ ಕೆರಾಟೋಟಮಿ ಗಿಂತ ಮುಂದುವರೆದಿದೆ. ಹೀಗಾಗಿ ಇದು ಹಲವು ರೋಗಿಗಳಿಗೆ ಪರ್ಯಾಯವಾಗಿ, ಸರಿಪಡಿಸಿದ ಕನ್ನಡಕಗಳು ಅಥವಾ ಕಾಂಟಾಕ್ಟ್ ಲೆನ್ಸೆಸ್ ಧರಿಸಲು ಸಹಾಯಕವಾಗಿದೆ.

ತಂತ್ರಜ್ಞಾನ

LASIK(ಲಸಿಕ್)ವಿಧಾನವನ್ನು ಕೊಲಂಬಿಯದಲ್ಲಿ ನೆಲೆಯೂರಿದ್ದ ಸ್ಪಾನಿಶ್ ನೇತ್ರತಜ್ಞ ಜೋಸ್ ಬ್ಯಾರ್ರಕುಎರ್, 1950ರ ಸುಮಾರಿನಲ್ಲಿ ಬೊಗೋಟ, ಕೊಲಂಬಿಯಾದಲ್ಲಿರುವ ತಮ್ಮ ಚಿಕಿತ್ಸಾಲಯದಲ್ಲಿ ಮೊದಲ ಬಾರಿಗೆ ಮೈಕ್ರೋ ಕೆರಟೋಮ್ ಶಸ್ತ್ರಚಿಕಿತ್ಸೆಯ ಪ್ರಯೋಗ ಮಾಡಿದರು. ಜೊತೆಗೆ ಕಾರ್ನಿಯ ದಲ್ಲಿ ಬೆಳವಣಿಗೆಯಾದ ಒಂದು ತೆಳು ಪೊರೆಯನ್ನು ಕತ್ತರಿಸುವುದರ ಜೊತೆಗೆ ಅದರ ರೂಪವನ್ನು ಮಾರ್ಪಾಡು ಮಾಡುವ ವಿಧಾನವನ್ನು ಅವರು ಕೆರಟೋಮೈಲೂಸಿಸ್ ಎಂದು ಕರೆದರು. ಬ್ಯಾರ್ರಕುಎರ್, ಕಾರ್ನಿಯವನ್ನು ಮಾರ್ಪಾಡು ಮಾಡದೆ ಹೇಗೆ ಒಂದು ಸ್ಥಿರ ಹಾಗು ದೀರ್ಘಾವಧಿಯ ಫಲಿತಾಂಶ ಪಡೆಯಬಹುದೆಂಬ ಪ್ರಶ್ನೆಯ ಬಗೆಗೂ ಸಂಶೋಧನೆ ನಡೆಸಿದರು. ಥಿಯೋಡೋರ್ H. ಮೈಮನ್ ಲೇಸರ್ ನ ಸೃಷ್ಟಿಕರ್ತ.

ನಂತರದ ತಾಂತ್ರಿಕ ಹಾಗು ಕಾರ್ಯವಿಧಾನದ ಬೆಳವಣಿಗೆಗಳು RK (ರೇಡಿಯಲ್ ಕೆರಟೋಟಮಿ) ಒಳಗೊಂಡಿತು. ಇದನ್ನು 1970ರ ಸುಮಾರಿನಲ್ಲಿ ರಷ್ಯಾದ ಸ್ವ್ಯಾತೋಸ್ಲಾವ್ ಫ್ಯೋಡೋರೋವ್ ಅಭಿವೃದ್ದಿ ಪಡಿಸಿದರು. 1983ರಲ್ಲಿ, Dr. ಸ್ಟೀವೆನ್ ಟ್ರೋಕೆಲ್, ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ PRK (ಫೋಟೋರಿಫ್ರ್ಯಾಕ್ಟಿವ್ ಕೆರಾಟೆಕ್ಟಮಿ)ಯನ್ನು ಅಭಿವೃದ್ಧಿ ಪಡಿಸಿದರು. ಇದರ ಜೊತೆಗೆ ಅವರು 1983ರಲ್ಲಿ, ಅಮೇರಿಕನ್ ಜರ್ನಲ್ ಆಫ್ ಆಫ್ತ್ಯಲ್ಮೊಲೋಜಿ ಯಲ್ಲಿ ತಮ್ಮ ಒಂದು ಲೇಖನವನ್ನು ಪ್ರಕಟಿಸಿದರು. ಈ ಲೇಖನ ಎಕ್ಸಿಮರ್ ಲೇಸರ್ ಶಸ್ತ್ರಚಿಕಿತ್ಸೆಯಿಂದಾಗುವ ಸಂಭಾವ್ಯ ಅನುಕೂಲಗಳ ಬಗ್ಗೆ ವಿವರಣೆ ನೀಡಿತು. ಇದನ್ನು 1973ರಲ್ಲಿ ಮಣಿ ಲಾಲ್ ಭೌಮಿಕ್, ವಕ್ರೀಕಾರಕ ಶಸ್ತ್ರಚಿಕಿತ್ಸೆಗಳಲ್ಲಿ ಬಳಕೆಮಾಡಲು ಹಕ್ಕುಸ್ವಾಮ್ಯ ಪಡೆದಿದ್ದರು. (RK ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಒಂದು ಮೈಕ್ರೋಮಾಪಕ ವಜ್ರದ ಕತ್ತಿಯನ್ನು ಬಳಸಿಕೊಂಡು ಕಿರಣಗಳನ್ನು ಹಾಯಿಸಿ ಕಾರ್ನಿಯಾ(ಪಾರದರ್ಶಕ ಪಟಲ)ವನ್ನು ಕತ್ತರಿಸಲಾಗುತ್ತದೆ. ಇದು ಲಸಿಕ್ ಗಿಂತ ಸಂಪೂರ್ಣವಾಗಿ ಬೇರೆ ವಿಧಾನ).

ಕಳೆದ 1968ರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ದ ನಾರ್ತ್ ರೋಪ್ ಕಾರ್ಪೋರೇಶನ್ ಸಂಶೋಧನಾ ಹಾಗು ತಂತ್ರಜ್ಞಾನ ಕೇಂದ್ರದಲ್ಲಿ, ಮಣಿ ಲಾಲ್ ಭೌಮಿಕ್ ಹಾಗು ಒಂದು ವಿಜ್ಞಾನಿಗಳ ಗುಂಪು ಕಾರ್ಬನ್ ಡೈ ಆಕ್ಸೈಡ್ ಲೇಸರ್ ನ ಅಭಿವೃದ್ಧಿಗೆ ತಯಾರಿ ನಡೆಸಿದರು. ಅವರ ಈ ಸಂಶೋಧನೆಯು ಎಕ್ಸಿಮರ್ ಲೇಸರ್ ನ ಹುಟ್ಟಿಗೆ ಕಾರಣವಾಯಿತು. ಈ ಮಾದರಿಯ ಲೇಸರ್, ವಕ್ರೀಕಾರಕ ಶಸ್ತ್ರಚಿಕಿತ್ಸೆಯ ಒಂದು ಅತ್ಯವಶ್ಯ ಭಾಗವಾಯಿತು. Dr. ಭೌಮಿಕ್, ತಮ್ಮ ತಂಡದ ಸಂಶೋಧನೆಯನ್ನು ಮೇ 1973ರಲ್ಲಿ ಡೆನ್ವರ್, ಕೊಲೋರಾಡೋ ದಲ್ಲಿ ನಡೆದ ಡೆನ್ವರ್ ಆಪ್ಟಿಕಲ್ ಸೊಸೈಟಿ ಆಫ್ ಅಮೇರಿಕದ ಒಂದು ಸಭೆಯಲ್ಲಿ ಘೋಷಣೆ ಮಾಡಿದರು. ಅವರು ನಂತರ ತಮ್ಮ ಆವಿಷ್ಕಾರಕ್ಕೆ ಹಕ್ಕುಸ್ವಾಮ್ಯ ಪಡೆಯುವವರಿದ್ದರು.


ರೋಗಿಯ ದೃಷ್ಟಿಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ವಕ್ರೀಕಾರಕ ಶಸ್ತ್ರಚಿಕಿತ್ಸೆ ಎಂಬ ಹೆಸರಿನಿಂದ ಪ್ರಚಲಿತವಾಗಿದೆ.

ವಕ್ರೀಕಾರಕ ಶಸ್ತ್ರಚಿಕಿತ್ಸೆಗಳಲ್ಲಿ ಲೇಸರ್ ನ ಬಳಕೆಯು ರಂಗಸ್ವಾಮಿ ಶ್ರೀನಿವಾಸನ್ ರ ಸಂಶೋಧನೆ ಆಧರಿಸಿದೆ. ಕಳೆದ 1980ರಲ್ಲಿ, ಶ್ರೀನಿವಾಸನ್, IBM ಸಂಶೋಧನಾ ಪ್ರಯೋಗಶಾಲೆಯಲ್ಲಿ ಕೆಲಸಮಾಡುತ್ತಿದ್ದಾಗ, ಒಂದು ನೇರಳಾತೀತ ಎಕ್ಸಿಮರ್ ಲೇಸರ್, ಒಂದು ಸರಿಯಾದ ರೀತಿಯಲ್ಲಿ ಅಂಗಾಂಶಗಳನ್ನು ಕತ್ತರಿಸುವುದರ ಜೊತೆಗೆ - ಅದರ ಸುತ್ತಮುತ್ತಲಿನ ಜಾಗಕ್ಕೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲವೆಂಬ ಅಂಶವನ್ನು ಪತ್ತೆ ಮಾಡಿದರು. ಅವರು ಈ ವೈಜ್ಞಾನಿಕ ಸಂಗತಿಯನ್ನು ಅಬ್ಲೆಟೀವ್ ಫೋಟೋಡಿಕಾಮ್ಪೋಸಿಶನ್ (APD) ಎಂದು ಹೆಸರಿಸುತ್ತಾರೆ. ಎಕ್ಸಿಮರ್ ಲೇಸರ್ ನ ಬಳಸಿ ಕಾರ್ನಿಯದ ಕೋಶಗಳನ್ನು ವಿಚ್ಚೇದಿಸುವ ಮೂಲಕ ಕಣ್ಣಿನ ದೋಷಗಳಾದ ಸಮೀಪದೃಷ್ಟಿ(ಮೈಓಪಿಅ),ದೂರದೃಷ್ಟಿ(ಹೈಪರೋಪಿಅ) ಹಾಗು ಅಸಮದೃಷ್ಟಿ(ಅಸ್ಟಿಗ್ಮಟಿಸಂ) ಸರಿಪಡಿಸಲು ಬಳಕೆಮಾಡಬಹುದೆಂದು ಮೊದಲ ಬಾರಿಗೆ ನ್ಯೂ ಯಾರ್ಕ್, NY ನಲ್ಲಿರುವ ಕೊಲಂಬಿಯ ವಿಶ್ವವಿದ್ಯಾಲಯದ, ಎಡ್ವರ್ಡ್ ಸ್. ಹಾರ್ಕ್ನೆಸ್ಸ್ ಐ ಇನ್ಸ್ಟಿಟ್ಯೂಟ್ ನ MD, ಸ್ಟೀಫೆನ್ ಟ್ರೋಕೆಲ್ ಸೂಚಿಸಿದರು. Dr. ಟ್ರೋಕೆಲ್, Dr. ಚಾರ್ಲೆಸ್ ಮುನ್ನೆರ್ಲಿನ್ ಹಾಗು ಟೆರ್ರಿ ಕ್ಲಾಫಂ ಜೊತೆಗೂಡಿ VISX, ಸಂಘಟಿತ ಸಂಸ್ಥೆಯನ್ನು ಹುಟ್ಟುಹಾಕಿದರು. VISX ಲೇಸರ್ ಮಾದರಿಯನ್ನು ಬಳಸಿ ಮೊದಲ ಬಾರಿಗೆ ಮಾನವ ಕಣ್ಣಿಗೆ Dr. ಮರ್ಗುಎರಿಟೆ B. ಮ್ಯಾಕ್ಡೊನಾಲ್ಡ್, MD 1989ರಲ್ಲಿ ಚಿಕಿತ್ಸೆ ನೀಡಿದರು.

(LASIK(ಲಸಿಕ್) ಗೆ ಮೊದಲ ಹಕ್ಕನ್ನು Dr. ಗ್ಹೊಲಂ A. ಪೆಯ್ಮನ್ ಗೆ ಜೂನ್ 20, 1989ರಲ್ಲಿ U.S. ನ ಪೇಟೆಂಟ್ ಆಫೀಸ್ ನೀಡಿತು. U.S. ಪೇಟೆಂಟ್ #4,840,175, "ಕಾರ್ನಿಯದ ವಕ್ರತೆಯನ್ನು ಬದಲಾಯಿಸುವ ವಿಧಾನ,". ಈ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಕಾರ್ನಿಯದ ಒಂದು ರಕ್ಷಣಾ ಕವಚವನ್ನು ಕತ್ತರಿಸಿ ಕಾರ್ನಿಯದ ಮರು ರಚನೆ ಮಾಡಲಾಗುತ್ತದೆ. ಈ ಹೊರತಲವನ್ನು ನಂತರ ಎಕ್ಸಿಮರ್ ಲೇಸರ್ ನ ಸಹಾಯದಿಂದ ಬೇಕಾದ ಆಕಾರಕ್ಕೆ ವಿಚ್ಚೇದಿಸಿ ಇದಕ್ಕೆ ರಕ್ಷಣಾ ಕವಚವನ್ನು ಹೊಂದಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

LASIK(ಲಸಿಕ್) ವಿಧಾನವು ಯುನೈಟೆಡ್ ಸ್ಟೇಟ್ಸ್ ಗೆ ಕಾಲಿಡುವ ಮುಂಚೆ ಇತರ ದೇಶಗಳಲ್ಲಿ ಯಶಸ್ವಿಯಾಗಿ ಬಳಕೆಯಲ್ಲಿತ್ತು. U.S. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಸ್ಟ್ರೆಶನ್ (FDA) ಮೊದಲ ಬಾರಿಗೆ ಎಕ್ಸಿಮರ್ ಲೇಸರ್ ನ ಪ್ರಯೋಗವನ್ನು 1989ರಲ್ಲಿ ಪ್ರಾರಂಭಿಸಿತು. ಲೇಸರ್ ಅನ್ನು ಮೊದಲ ಬಾರಿಗೆ ಕಾರ್ನಿಯದ ಹೊರತಲದ ರೂಪ ಬದಲಾಯಿಸಲು ಬಳಸಿಕೊಳ್ಳಲಾಯಿತು. ಇದನ್ನು PRK ಎಂದು ಹೆಸರಿಸಲಾಯಿತು. Dr. ಜೋಸೆಫ್ ಡೆಲ್ಲೋ ರುಸ್ಸೋ, ಹತ್ತು ಜನ ಮೂಲ FDA ಸಂಶೋಧಕರೊಂದಿಗೆ ಪರೀಕ್ಷಿಸಿ VISX ಲೇಸರ್ ನ ಬಳಕೆಗೆ ಅನುಮತಿ ನೀಡಿದರು. LASIK(ಲಸಿಕ್) ಎಂಬ ಹೊಸ ಕಲ್ಪನೆಯನ್ನು ಮೊದಲ ಬಾರಿಗೆ 1992ರಲ್ಲಿ Dr. ಪಲ್ಲಿಕರಿಸ್, U.S.ನ ಹತ್ತು ಕೇಂದ್ರಗಳಲ್ಲಿ VISX ಲೇಸರ್ ಅನ್ನು ಪರೀಕ್ಷಿಸಲು FDAಯಿಂದ ಆಯ್ಕೆಯಾದ ಹತ್ತು ಮಂದಿ ಶಸ್ತ್ರಚಿಕಿತ್ಸಕರಿಗೆ ಪರಿಚಯಿಸಿದರು.

Dr. ಪಲ್ಲಿಕರಿಸ್, PRK ಶಸ್ತ್ರಚಿಕಿತ್ಸೆಯಿಂದಾಗುವ ಅನುಕೂಲಗಳನ್ನು ಬಗ್ಗೆ ಸಿದ್ದಾಂತ ರೂಪಿಸಿದರು. ನಂತರ ಕಣ್ಣಿನ ಹೊರತಲದಲ್ಲಿ ಬೆಳವಣಿಗೆಯಾಗುವ ಪದರವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗುತ್ತದೆ. ಇದನ್ನು ರಕ್ಷಣಾ ಕವಚ ಎಂದು ಕರೆಯಲಾಗುತ್ತದೆ. 1950ರಲ್ಲಿ ಬ್ಯಾರ್ರಕುಎರ್ ಮೈಕ್ರೋಕೆರಟೋಮ್ ಶಸ್ತ್ರಚಿಕಿತ್ಸೆಯನ್ನು ಅಭಿವೃದ್ದಿಪಡಿಸಿದರು. ಒಂದು ರಕ್ಷಣಾ ಕವಚ ಹಾಗು PRKಯ ಸಂಯೋಜನೆಯು LASIK (ಲಸಿಕ್) ಎಂದು ಪ್ರಚಲಿತವಾಗಿದೆ. LASIK ಎನ್ನುವುದು ಪ್ರಥಮಾಕ್ಷರ. ಇದು ಬೇಗನೆ ಜನಪ್ರಿಯತೆ ಪಡೆಯಿತು. ಏಕೆಂದರೆ ಇದು ಶಸ್ತ್ರಚಿಕಿತ್ಸೆಯ ನಂತರ ತಕ್ಷಣವೇ ದೃಷ್ಟಿಯಲ್ಲಿ ಸುಧಾರಣೆಯನ್ನು ಒದಗಿಸುತ್ತದೆ. PRKಗಿಂತ ಕಡಿಮೆ ನೋವು ಹಾಗು ಅನನುಕೂಲತೆಯನ್ನು ಕಡಿಮೆ ಮಾಡುತ್ತದೆ.

ಇಂದು, ಮುಂದುವರಿದ ಲೇಸರ್ ಗಳು, ದೊಡ್ಡ......., ಉಪಕರಣಗಳನ್ನು ಬಳಸದೆ ರಕ್ಷಣಾಕವಚದ ಅಳವಡಿಕೆ, ಶಸ್ತ್ರಚಿಕಿತ್ಸೆಯ ಭಾಗವಾದ ಪಾಕಿಮೆಟ್ರಿ(ಕಾರ್ನಿಯದ ದಪ್ಪವನ್ನು ಅಳೆಯುವಿಕೆ), ಹಾಗು ತರಂಗಮುಖ ಶಸ್ತ್ರಚಿಕಿತ್ಸೆಯ-ಪ್ರಯೋಜನ ಹಾಗು- ವಿಧಾನದ ಮಾರ್ಗದರ್ಶನ ಇವೆಲ್ಲವೂ 1991ಕ್ಕೆ ಹೋಲಿಸಿದರೆ ಈ ಶಸ್ತ್ರಚಿಕಿತ್ಸಾ ವಿಧಾನದ ಬಗ್ಗೆ ಗಮನಾರ್ಹವಾಗಿ ವಿಶ್ವಾಸವನ್ನು ಹೆಚ್ಚಿಸಿದವು. ಅದೇನೇ ಇದ್ದರೂ, ಎಕ್ಸಿಮರ್ ಲೆಅಸರ್ ನ ಮೂಲಭೂತ ಮಿತಿ ಹಾಗು ಕಣ್ಣಿನ ನರಗಳ ಅನಪೇಕ್ಷಿತ ನಾಶ, ಸಂಶೋಧನೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ "ಸಾಧಾರಣ" ಲಸಿಕ್ ನ ಹಲವು ಪರ್ಯಾಯಗಳಿಗೆ ದಾರಿಯಾಗಿದೆ. ಇದರಲ್ಲಿ LASEK, ಎಪಿ-LASIK, ಸಬ್-ಬೌಮನ್ ರ ಕೆರಟೋಮೈಲೋಸಿಸ್ ಅಥವಾ ತೆಳು-ರಕ್ಷಣಾ ಕವಚದ ಲಸಿಕ್, ವೇವ್ ಫ್ರಂಟ್-ಆಧಾರಿತ PRK ಹಾಗು ನೂತನ ಇಂಟ್ರಆಕ್ಯುಲರ್ ಲೆನ್ಸ್ ಗಳು ಒಳಗೊಂಡಿದೆ.

ಇಂಟ್ರಸ್ಟ್ರೋಮಲ್ ಅಂಗಚ್ಚೇದನ ಮುಂದೊಂದು ದಿನ LASIK(ಲಸಿಕ್)ನ ಸ್ಥಾನವನ್ನು ಆಕ್ರಮಿಸಬಹುದು. ಇದು ಎಲ್ಲ-ಫೆಮ್ಟೊಸೆಕೆಂಡ್ ನಿಂದ ಸರಿಪಡಿಸಬಹುದಾದ (ಉದಾಹರಣೆ ಫೆಮ್ಟೊಸೆಕೆಂಡ್ ಲೇನ್ಟಿಕ್ಯೂಲ್ ಎಕ್ಸ್ಟ್ರ್ಯಾಕ್ಶನ್, FLIVC, ಅಥವಾ ಇಂಟ್ರಾCOR), ಅಥವಾ ಇತರ ವಿಧಾನಗಳಿಂದ ಕಾರ್ನಿಯ ದೊಡ್ಡ ಶಸ್ತ್ರಚಿಕಿತ್ಸೆಗಳಿಂದ ದುರ್ಬಲಗೊಳ್ಳುವುದನ್ನು ತಡೆಗಟ್ಟಬಹುದು. ಜೊತೆಗೆ ಸುತ್ತಮುತ್ತಲಿನ ಅಂಗಾಂಶಗಳಿಗೆ ಕಡಿಮೆ ಒತ್ತಡ ಹಾಕಿ ಸರಿಪಡಿಸಬಹುದು. 20/10 (ಈಗ ಟೆಕ್ನೋಲಾಸ್) FEMTEC ಲೇಸರ್ ಅನ್ನು ಇತ್ತೀಚಿಗೆ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುತ್ತದೆ- ಕಡಿಮೆ IntraCOR ವಿಚ್ಚೇದನವನ್ನು ನೂರಾರು ಮಾನವ ಕಣ್ಣುಗಳ ಮೇಲೆ ಪ್ರಯೋಗಿಸಲಾಯಿತು. ಜೊತೆಗೆ ಪ್ರಿಸ್ಬಓಪಿಅ(ದೂರ ದೃಷ್ಟಿ)ವನ್ನು ಗುಣಪಡಿಸುವಲ್ಲಿ ಯಶಸ್ವಿಯಾಯಿತು. ಈ ವಿಧಾನವನ್ನು ಮೈಓಪಿಅ(ಸಮೀಪದೃಷ್ಟಿ) ಹಾಗು ಇತರ ರೋಗಗಳಿಗೆ ಬಳಕೆ ಮಾಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.

ಕಾರ್ಯವಿಧಾನ

ಶಸ್ತ್ರಚಿಕಿತ್ಸೆಗೆ ಮುಂಚಿನ ಅವಧಿಯಲ್ಲಿ ಹಲವಾರು ಅವಶ್ಯಕ ತಯಾರಿಗಳನ್ನು ಕೈಗೊಳ್ಳಬೇಕು. ಈ ಶಸ್ತ್ರಚಿಕಿತ್ಸೆ ಒಂದು ತೆಳು ಕವಚವನ್ನು ಕಣ್ಣಿನಲ್ಲಿ ಸೃಷ್ಟಿಸುವುದನ್ನು ಒಳಗೊಂಡಿದೆ, ಇದನ್ನು ಜೀವಕೋಶಗಳ ಹೊಸರಚನೆಗೆ ಅನುಕೂಲವಾಗುವಂತೆ ಲೇಸರ್ ನ ಮೂಲಕ ಕೆಳಭಾಗದಲ್ಲಿ ಮಡಿಸಲಾಗುತ್ತದೆ. ಈ ಪದರದ ಸ್ಥಾನವನ್ನು ಸರಿಪಡಿಸಿದ ನಂತರ ಶಸ್ತ್ರಚಿಕಿತ್ಸೆಯ ನಂತರದ ಅವಧಿಯಲ್ಲಿ ಕಣ್ಣು ಮಾಯಲು ಬಿಡಲಾಗುತ್ತದೆ.

ಶಸ್ತ್ರಚಿಕಿತ್ಸೆಗೆ ಮುಂಚೆ

ಮೆದು ಕಾಂಟಾಕ್ಟ್ ಲೆನ್ಸೆಸ್ ಅನ್ನು ಬಳಕೆ ಮಾಡುವ ರೋಗಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಗೆ 5 ರಿಂದ 21 ದಿನಗಳ ಮುಂಚೆ ಇದನ್ನು ಧರಿಸುವುದನ್ನು ನಿಲ್ಲಿಸಲು ಸೂಚಿಸಲಾಗುತ್ತದೆ. ಒಂದು ಲೆನ್ಸ್ ತಯಾರಿಕಾ ಸಂಸ್ಥೆಯು, ಗಟ್ಟಿ ಕಾಂಟಾಕ್ಟ್ ಲೆನ್ಸ್ ಗಳನ್ನು ಧರಿಸುವ ರೋಗಿಗಳು ಕಡಿಮೆಯೆಂದರೆ ಶಸ್ತ್ರಚಿಕಿತ್ಸೆಗೆ ಆರು ವಾರಗಳ ಮುಂಚೆ ಇದರ ಧಾರಣ ನಿಲ್ಲಿಸಬೇಕು. ಜೊತೆಗೆ ಇದನ್ನು ಧರಿಸಿದ ಪ್ರತಿ ಮೂರು ವರ್ಷಗಳಿಗೊಮ್ಮೆ ಆರು ವಾರಗಳ ಕಾಲ ಧಾರಣವನ್ನು ನಿಲ್ಲಿಸಬೇಕು. ಶಸ್ತ್ರಚಿಕಿತ್ಸೆಗೆ ಪೂರ್ವಭಾವಿಯಾಗಿ, ರೋಗಿಯ ಕಾರ್ನಿಯ ವನ್ನು ಪಾಕಿಮೀಟರ್ ಮೂಲಕ ಪರೀಕ್ಷಿಸಿ ಅದರ ದಪ್ಪವನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಒಬ್ಬ ಅಂಗವಿನ್ಯಾಸ ತಜ್ಞ ಅದರ ಹೊರತಲದ ಆಕಾರ ಪರೀಕ್ಷಿಸುತ್ತಾನೆ. ಕಡಿಮೆ-ಶಕ್ತಿಯ ಲೇಸರ್ ನ ಬಳಕೆಮಾಡಿ, ಒಬ್ಬ ಅಂಗವಿನ್ಯಾಸ ತಜ್ಞ ಒಂದು ಕಾರ್ನಿಯಾ(ಪಾರದರ್ಶಕ ಪಟಲ)ವಿನ್ಯಾಸ ನಕ್ಷೆಯನ್ನು ರಚಿಸುತ್ತಾನೆ. ಈ ಪ್ರಕ್ರಿಯೆಯು ಅಸಮದೃಷ್ಟಿ (ಅಸ್ಟಿಗ್ಮಟಿಸಂ)ಯನ್ನು ಹಾಗು ಕಾರ್ನಿಯಾದ ರೂಪದಲ್ಲಿರುವ ಅಸಹಜತೆಯನ್ನೂ ಸಹ ಪತ್ತೆ ಹಚ್ಚುತ್ತದೆ. ಈ ಮಾಹಿತಿಯ ಆಧಾರದ ಮೇಲೆ, ಶಸ್ತ್ರಚಿಕಿತ್ಸಕರಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತೆಗೆಯಬೇಕಾದ ಕಾರ್ನಿಯಾ(ಪಾರದರ್ಶಕ ಪಟಲ)ಕೋಶಗಳು, ಅದರ ಸ್ಥಾನ ಹಾಗು ಅದರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಗುರುತಿಸುವಲ್ಲಿ ಸಹಾಯಕವಾಗಿದೆ. ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಉಂಟಾಗಬಹುದಾದ ಸೋಂಕನ್ನು ಕಡಿಮೆ ಮಾಡಲು ವಿಶೇಷವಾಗಿ ಒಂದು ಆಂಟಿಬಯೋಟಿಕ್ ಅನ್ನು ಮುಂಚಿತವಾಗಿ ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆಯನ್ನು ರೋಗಿಯು ಎಚ್ಚರದಿಂದಿರುವಾಗ ಹಾಗು ಚಲನೆಯಲ್ಲಿರುವಾಗ ನಡೆಸಲಾಗುತ್ತದೆ; ಆದರೂ, ಕೆಲವೊಂದು ಬಾರಿ ರೋಗಿಗೆ ಒಂದು ಸಣ್ಣ ಪ್ರಮಾಣದ ನಿದ್ರಾಜನಕ (ಉದಾಹರಣೆಗೆ ವೇಲಿಯಂ) ಹಾಗು ಕಣ್ಣಿನ ಡ್ರಾಪ್ಸ್ ನ್ನು ಅರವಳಿಕೆಯಾಗಿ ನೀಡಲಾಗುತ್ತದೆ.

LASIK(ಲಸಿಕ್) ಶಸ್ತ್ರಚಿಕಿತ್ಸೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಕಾರ್ನಿಯಾದ ಕೋಶಗಳಿಗೆ ಒಂದು ರಕ್ಷಣಾ ಕವಚವನ್ನು ಸೃಷ್ಟಿಸಲಾಗುತ್ತದೆ. ಎರಡನೇ ಹಂತವು ಲೇಸರ್ ನ ಸಹಾಯದಿಂದ ರಕ್ಷಣಾ ಕವಚದ ಅಡಿಯಲ್ಲಿ ಕಾರ್ನಿಯಾದ ಹೊಸ ರೂಪ ಸೃಷ್ಟಿ ಮಾಡುವುದನ್ನು ಒಳಗೊಂಡಿದೆ. ಅಂತಿಮವಾಗಿ, ರಕ್ಷಣಾ ಕವಚದ ಸ್ಥಾನವನ್ನು ಬದಲಿಸಲಾಗುತ್ತದೆ.

ರಕ್ಷಣಾ ಕವಚದ ಸೃಷ್ಟಿ

ಕಣ್ಣನ್ನು ಸೂಕ್ತಭಾಗದಲ್ಲಿ ಚಲಿಸುವಂತೆ ಮಾಡಲು ಕಾರ್ನಿಯಲ್ ಹೀರುವಿಕೆಯ ಚಿಕ್ಕ ಬಳೆಯೊಂದನ್ನು ಇಲ್ಲಿ ಅಳವಡಿಸಲಾಗುತ್ತದೆ.


ಶಸ್ತ್ರಚಿಕಿತ್ಸೆಯ ಈ ವಿಧಾನದಲ್ಲಿ ಕೆಲವೊಂದು ಬಾರಿ ಸಣ್ಣ ರಕ್ತನಾಳಗಳು ಒಡೆದುಹೋಗಬಹುದು. ಇದು ಕಣ್ಣಿನ ಬಿಳಿ ಭಾಗ(ಸ್ಕಲೆರ)ದಲ್ಲಿ ರಕ್ತಸ್ರಾವ ಅಥವಾ ಸಬ್ ಕಾಂಜನ್ಟೈವಲ್ ಹೆಮೊರೆಜ್ ಗೆ ಕಾರಣವಾಗಬಹುದು. ಈ ಅಪಾಯ ಉಂಟುಮಾಡದ ಪರಿಣಾಮವು ಹಲವು ವಾರಗಳಲ್ಲಿ ಉಪಶಮನಗೊಳ್ಳುತ್ತದೆ. ಅಧಿಕ ಹೀರಿಕೆಯು ವಿಶೇಷವಾಗಿ ಸರಿಪಡಿಸಿದ ಕಣ್ಣಿನ ದೃಷ್ಟಿಯಲ್ಲಿ ಸ್ವಲ್ಪ ಕಾಲದ ಮಟ್ಟಿಗೆ ಅಸ್ಪಷ್ಟತೆ ಉಂಟುಮಾಡಬಹುದು. ಕಣ್ಣನ್ನು ಒಮ್ಮೆ ಕದಲದಂತೆ ಮಾಡಿ, ರಕ್ಷಣಾ ಕವಚವನ್ನು ಅಳವಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಒಂದು ಸ್ವಚಾಲಿತ ಮೈಕ್ರೋಕೆರಟೋಮ್ ನ ಸಹಾಯದಿಂದ ಲೋಹದ ಕತ್ತಿಯನ್ನು ಬಳಸಿ ಅಥವಾ ಒಂದು ಫೆಮ್ಟೊಸೆಕೆಂಡ್ ಲೇಸರ್ ಮೈಕ್ರೋಕೆರಟೋಮ್ (ಇಂಟ್ರLASIK ಎಂಬ ವಿಧಾನ) ನಿಂದ ನೆರವೇರಿಸಲಾಗುತ್ತದೆ. ಇದು ಕಾರ್ನಿಯದ ಒಳಗೆ ಬಹಳ ಚಿಕ್ಕದಾಗಿ ಅಣಿಯಾದ ಗುಳ್ಳೆಗಳ ಒಂದು ಸರಣಿ ಸೃಷ್ಟಿಸುತ್ತದೆ. ಈ ರಕ್ಷಣಾ ಕವಚದ ತುದಿಯಲ್ಲಿ ಒಂದು ಜೋಡಣೆಯನ್ನು ಉಳಿಸಿಕೊಳ್ಳಲಾಗುತ್ತದೆ.

ರಕ್ಷಣಾ ಕವಚವನ್ನು ಹಿಂಭಾಗಕ್ಕೆ ಮಡಿಸಿ, ಕಾರ್ನಿಯಾದ ಮಧ್ಯ ಭಾಗವಾದ ಸ್ಟ್ರೋಮ(ಜೀವಕೋಶದ ಹಂದರ) ಗೋಚರಿಸುವಂತೆ ಮಾಡಲಾಗುತ್ತದೆ. ರಕ್ಷಣಾ ಕವಚವನ್ನು ಮೇಲೆತ್ತುವುದು ಹಾಗು ಮಡಿಸುವ ಪ್ರಕ್ರಿಯೆಯು ಕೆಲವೊಂದು ಬಾರಿ ಅನಾನುಕೂಲ ಉಂಟುಮಾಡಬಹುದು.


ಲೇಸರ್ ನ ಹೊಸರೂಪ.

ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಎರಡನೇ ಹಂತದಲ್ಲಿ ಎಕ್ಸಿಮರ್ ಲೇಸರ್(193 nm) ನ ಸಹಾಯದಿಂದ ಕಾರ್ನಿಯಾದ ಜೀವಕೋಶ ಹಂದರಕ್ಕೆ ಮರು ರೂಪ ಕೊಡಲಾಗುತ್ತದೆ. ಲೇಸರ್, ಅಂಗಾಂಶಗಳನ್ನು ಆವೀಕರಿಸಿ ಒಂದು ಸಮರ್ಪಕ ರೀತಿಯಲ್ಲಿ ನಿಯಂತ್ರಿಸುವುದರ ಜೊತೆಗೆ ಪಕ್ಕದಲ್ಲಿರುವ ಇತರ ಅಂಗಾಂಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ಅಂಗಾಂಶಗಳನ್ನು ಶಸ್ತ್ರ ಚಿಕಿತ್ಸೆಯಿಂದ ವಿಚ್ಚೇದಿಸಲು ಶಾಖವಾಗಲಿ ಅಥವಾ ಕತ್ತರಿಸುವಿಕೆಯ ಅಗತ್ಯವಿರುವುದಿಲ್ಲ. ಹೀಗೆ ವಿಚ್ಚೇದಿಸಲ್ಪಟ್ಟ ಅಂಗಾಂಶದ ಪದರವು ಮೈಕ್ರೋಮಾಪಕ ದಲ್ಲಿ ಅಳೆಯಬಹುದಾದ ಅತಿಸೂಕ್ಷ್ಮ ಕಣಗಳಿಗಿಂತ ಹತ್ತು ಪಟ್ಟು ದಪ್ಪನಾಗಿರುತ್ತವೆ. ಕಾರ್ನಿಯಾ(ಪಾರದರ್ಶಕ ಪಟಲ)ಜೀವಕೋಶ ಹಂದರದ ಆಳದಲ್ಲಿ ನಡೆಸಲಾದ ಲೇಸರ್ ಶಸ್ತ್ರಚಿಕಿತ್ಸೆಯು ವಿಶೇಷವಾಗಿ ಕಣ್ಣಿನ ದೃಷ್ಟಿಗೆ ಬೇಗನೆ ಚೇತರಿಕೆ ನೀಡುವುದರ ಜೊತೆಗೆ ಮುಂಚಿನ ಶಸ್ತ್ರಚಿಕಿತ್ಸಾ ಮಾದರಿ ಫೋಟೋರಿಫ್ರ್ಯಾಕ್ಟಿವ್ ಕೆರಾಟೆಕ್ಟಮಿ (PRK) ಗಿಂತ ಕಡಿಮೆ ನೋವನ್ನು ರೋಗಿಯು ಅನುಭವಿಸುತ್ತಾನೆ.

ಶಸ್ತ್ರಚಿಕಿತ್ಸೆಯ ಎರಡನೇ ಹಂತದಲ್ಲಿ, ರಕ್ಷಣಾ ಕವಚವನ್ನು ಮೇಲಕ್ಕೆತ್ತಿದಾಗ ರೋಗಿಯ ದೃಷ್ಟಿಯು ತುಂಬಾ ಮಂಜಾಗಿರುತ್ತದೆ. ಅವರು, ಲೇಸರ್ ನ ಕಿತ್ತಳೆ ವರ್ಣದ ಬೆಳಕನ್ನು ಸುತ್ತುವರಿದ ಬಿಳಿ ಬೆಳಕನ್ನು ಮಾತ್ರ ನೋಡಬಲ್ಲವರಾಗಿರುತ್ತಾರೆ, ಇದು ಅವರಲ್ಲಿ ಸ್ವಲ್ಪಮಟ್ಟಿಗಿನ ದಿಗ್ಬ್ರಮೆ ಉಂಟುಮಾಡುತ್ತದೆ.

ಹಾಲಿಯಲ್ಲಿ, ತಯಾರಾದ ಎಕ್ಸಿಮರ್ ಲೇಸರ್ ಗಳು ರೋಗಿಯ ಕಣ್ಣಿನ ಸ್ಥಿತಿಗತಿಯನ್ನು ಸೆಕೆಂಡ್ ಗೆ 4,000 ಬಾರಿ ಪತ್ತೆಹಚ್ಚುವ ವಿಧಾನ ಬಳಸುತ್ತವೆ. ಇದು ಲೇಸರ್ ಪಲ್ಸಸ್ ಗಳನ್ನು ಚಿಕಿತ್ಸಾ ವಲಯದ ಒಳಗೆ ನಿಖರವಾದ ಸ್ಥಾನದಲ್ಲಿರುವಂತೆ ಮರುನಿರ್ದೇಶಿಸುತ್ತದೆ. ವಿಶೇಷವಾಗಿ ಪಲ್ಸಸ್ ಗಳು ಪಲ್ಸ್ ನ ಕಾರ್ಯಾಚರಣೆಯಲ್ಲಿ 10 ರಿಂದ 20 ನ್ಯಾನೋಸೆಕೆಂಡ್ ನಲ್ಲಿ 1 ಮಿಲ್ಲಿಜೌಲ್ (mJ) ನಷ್ಟಿರುತ್ತದೆ.

ರಕ್ಷಣಾ ಕವಚದ ಬದಲಾವಣೆ

ಲೇಸರ್ ನ ಶಸ್ತ್ರಚಿಕಿತ್ಸೆಯ ನಂತರ ಜೀವಕೋಶದ ಪದರವು ಮರು ರೂಪುಗೊಳ್ಳುತ್ತದೆ. ಲಸಿಕ್ ನ ರಕ್ಷಣಾ ಕವಚವನ್ನು ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ಮಾಡಿದ ಜಾಗಕ್ಕೆ ತಜ್ಞರು ಅಳವಡಿಸುತ್ತಾರಲ್ಲದೆ ಗಾಳಿಯ ಗುಳ್ಳೆಗಳು, ಚೂರುಗಳ ಬಗ್ಗೆ ಪರಿಶೀಲಿಸುತ್ತಾರೆ. ಅಲ್ಲದೇ ಅದು ಕಣ್ಣೊಳಗೆ ಸರಿಯಾಗಿ ಹೊಂದಿಕೊಂಡಿದೆಯೇ ಎಂಬುದನ್ನು ಸಹ ಪರೀಕ್ಷಿಸುತ್ತಾರೆ. ಸಂಪೂರ್ಣವಾಗಿ ಗುಣವಾಗುವ ತನಕವೂ ರಕ್ಷಣಾ ಕವಚವು ಸ್ವಾಭಾವಿಕವಾಗಿ ಅಂಟಿಕೊಂಡಿರುತ್ತದೆ.

ಶಸ್ತ್ರಚಿಕಿತ್ಸಾ ನಂತರ ಕಾಳಜಿ

ರೋಗಿಗಳಿಗೆ ಸಾಮಾನ್ಯವಾಗಿ ಆಂಟಿಬಯೋಟಿಕ್ ಒಂದು ಅನುಕ್ರಮವನ್ನು ತೆಗೆದುಕೊಳ್ಳುಲು ಸೂಚಿಸುವುದರ ಜೊತೆಗೆ ಕಣ್ಣಿಗೆ ಉರಿ-ನಿರೋಧಕ ಡ್ರಾಪ್ಸ್ ಗಳನ್ನೂ ನೀಡಲಾಗುತ್ತದೆ. ಇವುಗಳನ್ನು ಶಸ್ತ್ರಚಿಕಿತ್ಸೆಯ ನಂತರದ ವಾರಗಳಲ್ಲೂ ಮುಂದುವರಿಸಲಾಗುತ್ತದೆ. ರೋಗಿಗಳಿಗೆ ಸಾಮಾನ್ಯವಾಗಿ ಹೆಚ್ಚಾಗಿ ನಿದ್ರಿಸಲು ಸೂಚಿಸಲಾಗುತ್ತದೆ. ಜೊತೆಗೆ ತಮ್ಮ ಕಣ್ಣುಗಳನ್ನು ಅಧಿಕ ಬೆಳಕಿನಿಂದ ರಕ್ಷಿಸಿಕೊಳ್ಳಲು ಕಪ್ಪು ಕನ್ನಡಕಗಳನ್ನು ನೀಡಲಾಗುತ್ತದೆ. ಅದಲ್ಲದೆ ನಿದ್ರಿಸುವಾಗ ಕಣ್ಣನ್ನು ಉಜ್ಜಿಕೊಳ್ಳದ ಹಾಗೆ ಹಾಗು ಕಣ್ಣಿನ ಆರ್ದ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ ರಕ್ಷಣಾ ಕನ್ನಡಕಗಳನ್ನೂ ಸಹ ನೀಡಲಾಗುತ್ತದೆ. ಅವರು ತಮ್ಮ ಕಣ್ಣಿನ ತೇವವನ್ನು ಸಂರಕ್ಷಣಾ-ರಹಿತ ದ್ರವದ ತೊಟ್ಟಿನಿಂದ ಉಳಿಸಿಕೊಳ್ಳುವುದರ ಜೊತೆಗೆ ವೈದ್ಯರು ಸಲಹೆ ನೀಡಿದ ಡ್ರಾಪ್ಸ್ ಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳಿಗೆ ಶಸ್ತ್ರಚಿಕಿತ್ಸಾ ನಂತರ ಎದುರಾಗಬಹುದಾದ ತೊಂದರೆ ಕಡಿಮೆ ಮಾಡಲು ತಜ್ಞರು ಸಾಕಷ್ಟು ಮಾಹಿತಿಯನ್ನು ನೀಡಬೇಕಾಗುತ್ತದೆ.

ಅಧಿಕಪ್ರಮಾಣದಲ್ಲಿ ಅಕ್ಷಿಪಟಲದ ಏರಿಳಿತ

ಅಧಿಕಪ್ರಮಾಣದ ಅಕ್ಷಿಪಟಲದ ಏರಿಳಿತ ಗಳು ಸಹ ದೃಷ್ಟಿ ಸಮಸ್ಯೆಯ ಒಂದು ಭಾಗ. ಇದನ್ನು ಸಾಂಪ್ರದಾಯಿಕ ಕಣ್ಣಿನ ಪರೀಕ್ಷಾ ವಿಧಾನದಿಂದ ತಿಳಿಯಲು ಸಾಧ್ಯವಿಲ್ಲ. ಈ ರೀತಿಯ ಪರೀಕ್ಷಾ ವಿಧಾನವು ದೃಷ್ಟಿಯ ತೀಕ್ಷ್ಣತೆಯ ಬಗ್ಗೆ ಮಾತ್ರ ಪರೀಶೀಲಿಸುತ್ತದೆ. ತೀವ್ರತರವಾದ ಅಕ್ಷಿಪಟಲದ ಏರಿಳಿತವು ಗಮನಾರ್ಹವಾಗಿ ದೃಷ್ಟಿಯನ್ನು ದುರ್ಬಲಗೊಳಿಸಬಹುದು. ಈ ಅಕ್ಷಿಪಟಲದ ಏರಿಳಿತಗಳಲ್ಲಿ ಸ್ಟಾರ್ಬರ್ಸ್ಟ್ಸ್, ಭೂತಾಕೃತಿ ಹಾಲೋಸ್(ಸಣ್ಣಪ್ರಮಾಣದ ಕಿಡಿಯ ಗೋಚರ), ದೃಷ್ಟಿ ಎರಡಾಗಿ ಕಾಣುವುದು, ಹಾಗು ಹಲವಾರು ಶಸ್ತ್ರಚಿಕಿತ್ಸಾ ನಂತರದ ತೊಡಕುಗಳನ್ನು ಒಳಗೊಂಡಿದೆ.

ಲಸಿಕ್ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವಾಗಲೂ ಜನರಲ್ಲಿ ಆತಂಕ ತುಂಬಿದೆ, ಏಕೆಂದರೆ ಅದು ಅಧಿಕಪ್ರಮಾಣದಲ್ಲಿ ಅಕ್ಷಿಪಟಲದ ಏರಿಳಿತಗಳನ್ನು ಉಂಟುಮಾಡುತ್ತದೆ. ಲಸಿಕ್ ವಿಧಾನದ ಅಭಿವೃದ್ದಿಯು, ಶಸ್ತ್ರಚಿಕಿತ್ಸೆಯ ನಂತರ ವೈದ್ಯಕೀಯವಾಗಿ ಮಹತ್ವ ಪಡೆದುಕೊಂಡಿರುವ ದೃಷ್ಟಿ ದುರ್ಬಲತೆಯ ಅಪಾಯ ಕಡಿಮೆ ಮಾಡಬಹುದು. ಪಾಪೆಯ ಗಾತ್ರ ಹಾಗು ಅಕ್ಷಿಪಟಲದ ಏರಿಳಿತಗಳ ನಡುವೆ, ಪರಸ್ಪರ ಸಂಬಂಧ ಹೊಂದಿದೆ. ಇದರ ಪರಿಣಾಮವಾಗಿ, ಪಾಪೆಯ ಗಾತ್ರ ಹೆಚ್ಚಿದ್ದಷ್ಟೂ, ಅಕ್ಷಿಪಟಲದ ಏರಿಳಿತದ ಅಪಾಯವೂ ಸಹ ಅಧಿಕವಾಗಿರುತ್ತದೆ. ಈ ಪರಸ್ಪರ ಸಂಬಂಧವು ಕಾರ್ನಿಯಾದ ಹಾನಿ ಉಂಟಾಗದ ಭಾಗ ಹಾಗು ಮರುರೂಪುಗೊಂಡ ಭಾಗದ ನಡುವಿನ ಅವ್ಯವಸ್ಥೆಯ ಪರಿಣಾಮವಾಗಿದೆ. ಬೆಳಗಿನ ಸಮಯದಲ್ಲಿ ಲಸಿಕ್ ಶಸ್ತ್ರಚಿಕಿತ್ಸಾ ನಂತರದ ದೃಷ್ಟಿಯು ಅತ್ಯುತ್ತಮವಾಗಿರುತ್ತದೆ, ಏಕೆಂದರೆ ಪಾಪೆಯು ಲಸಿಕ್ ನ ರಕ್ಷಣಾ ಕವಚಕ್ಕಿಂತ ಸಣ್ಣದಾಗಿರುತ್ತದೆ. ಆದರೆ ರಾತ್ರಿಯಲ್ಲಿ, ಪಾಪೆಯು ಹಿಗ್ಗುವುದರಿಂದ ಬೆಳಕು ಲಸಿಕ್ ನ ರಕ್ಷಣಾ ಕವಚದ ತುದಿಯನ್ನು ಹಾದು ಹೋಗುತ್ತದೆ. ಇದು ಹಲವು ಏರಿಳಿತಗಳಿಗೆ ದಾರಿಯಾಗುತ್ತದೆ. ಇದರಲ್ಲಿ ಬೆಳಕನ್ನು ಸುತ್ತುವರಿದ ಹಾಲೋಸ್(ಸಣ್ಣ ಪ್ರಮಾಣದ ಕಿಡಿಯ ಗೋಚರ) ನ ಗೋಚರವಾಗುವುದು ಸಹ ಸೇರಿದೆ. ಪಾಪೆಯ ಗಾತ್ರದ ಜೊತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪತ್ತೆಯಾಗದ ಅಂಶಗಳು ಸಹ ಅಧಿಕ ಪ್ರಮಾಣದ ಅಕ್ಷಿಪಟಲದ ಏರಿಳಿತಗಳಿಗೆ ಕಾರಣವಾಗಬಹುದು.

ನೇತ್ರತಜ್ಞರು ಅನುಸರಿಸದ ಮಾದರಿ ವಿಧಾನಗಳ ಅಪರೂಪದ ನಿದರ್ಶನಗಳಲ್ಲಿ, ಹಾಗು ಶಸ್ತ್ರಚಿಕಿತ್ಸೆಗಳಲ್ಲಿ ಅಭಿವೃದ್ದಿಯಾಗುವ ಮುಂಚೆ, ಕೆಲವರು ದೃಷ್ಟಿಯು ಮಂದವಾಗುವ ಚಿಹ್ನೆಗಳಾದ ದೃಷ್ಟಿಯ ಸೂಕ್ಷ್ಮತೆಯನ್ನು ಮಂದ ಬೆಳಕಿನ ಪರಿಸರಗಳಲ್ಲಿ ಎದುರಿಸಿದರು.

ಕಾಲಾನುಕ್ರಮದಲ್ಲಿ, ಅಕ್ಷಿಪಟಲದ ಏರಿಳಿತಗಳ ಮೇಲಿನ ಗಮನವು ಬದಲಾವಣೆಯಾಗಿ ಗೋಳವಿಪಥನ ದ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಲಸಿಕ್ ಹಾಗು PRK ಗೋಳವಿಪಥನವನ್ನು ಉಂಟುಮಾಡುವ ಪ್ರವೃತ್ತಿ ಹೊಂದಿದೆ, ಏಕೆಂದರೆ ಲೇಸರ್ ದೋಷ ಸರಿಪಡಿಸುವಿಕೆಯನ್ನು ಪೂರ್ಣವಾಗಿ ಮಾಡುವುದಿಲ್ಲ. ಲೇಸರ್ ನ ಚಿಕಿತ್ಸಾ ವಿಧಾನದಲ್ಲಿ ಅದು ಮಧ್ಯದಿಂದ ಹೊರಭಾಗಕ್ಕೆ ಚಲಿಸುತ್ತದೆ. ಪ್ರಮುಖ ದೋಷಗಳನ್ನು ಸರಿಪಡಿಸುವಲ್ಲಿ ಇದು ಒಂದು ಪ್ರಾಥಮಿಕ ಸಮಸ್ಯೆಯಾಗಿ ತಲೆದೋರಿದೆ. ಲೇಸರ್ ಗಳು ಸುಮ್ಮನೆ ಈ ಪ್ರವೃತ್ತಿಗೆ ಹೊಂದಿಕೊಳ್ಳುವಂತೆ ರೂಪುಗೊಂಡಿದ್ದರೆ, ಯಾವುದೇ ಮಹತ್ವದ ಗೋಳವಿಪಥನವು ಸಂಭವಿಸುವುದಿಲ್ಲವೆಂಬ ಸಿದ್ಧಾಂತಗಳು ರೂಢಿಯಾಗಿದೆ. ಕಡಿಮೆ ಪ್ರಮಾಣದ ಅಕ್ಷಿಪಟಲದ ಏರಿಳಿತಗಳನ್ನು ಹೊಂದಿರುವ ಕಣ್ಣುಗಳಿಗೆ,(ತರಂಗಮುಖ-ಆಧಾರಿತ ಲಸಿಕ್ ಗಿಂತ) ತರಂಗಮುಖ ಲಸಿಕ್ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ಅತ್ಯಂತ ಪ್ರಯೋಜನವನ್ನು ಉಂಟುಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅಧಿಕಪ್ರಮಾಣದ ಅಕ್ಷಿಪಟಲದ ಏರಿಳಿತವನ್ನು ಶಸ್ತ್ರಚಿಕಿತ್ಸೆಗೆ ಮುಂಚೆ ವೇವ್ ಸ್ಕ್ಯಾನ್ ನಲ್ಲಿ ಮೈಕ್ರೋಮೀಟರ್ಸ್(µm)ನಲ್ಲಿ ಮಾಪನ ಮಾಡಲಾಗುತ್ತದೆ. U.S. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ಅನುಮತಿಸಿರುವ ಲೇಸರ್ ನ ಸಣ್ಣ ಕಿರಣವು 0.65 mm ಗಿಂತ 1000 ಪಟ್ಟು ದೊಡ್ಡದಾಗಿದೆ. ಹೀಗಾಗಿ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ದೋಷಯುಕ್ತತೆಯು ಅಂತರ್ಗತವಾಗಿದೆ. ಜೊತೆಗೆ ಈ ಕಾರಣದಿಂದ ರೋಗಿಗಳು ಹಾಲೋ(ಸಣ್ಣ ಪ್ರಮಾಣದ ಕಿಡಿಯ ಗೋಚರ), ಗ್ಲೆರ್(ತೀಕ್ಷ್ಣ ಪ್ರಕಾಶ), ಹಾಗು ಸ್ಟಾರ್ ಬರ್ಸ್ಟ್ ಗಳನ್ನು ಮಂದ ಬೆಳಕಿನಲ್ಲಿ ಪಾಪೆಯ ಸಣ್ಣ ಸ್ವಾಭಾವಿಕ-ಹಿಗ್ಗುವಿಕೆಯಿಂದಲೂ ಅನುಭವಿಸುತ್ತಾರೆ.

ತರಂಗಮುಖ-ಆಧಾರಿತ ಲಸಿಕ್

ತರಂಗಮುಖ-ಆಧಾರಿತ ಲಸಿಕ್, ಲಸಿಕ್ ಶಸ್ತ್ರಚಿಕಿತ್ಸೆಯ ಒಂದು ಮಾದರಿ, ಇದರಲ್ಲಿ ಕಾರ್ನಿಯಾಕ್ಕೆ ಶಕ್ತಿ ಕೇಂದ್ರಿಕರಿಸುವ ಒಂದು ಸಾಧಾರಣ ತಿದ್ದುಪಡಿಯನ್ನು ಬಳಸುವ ಬದಲಾಗಿ (ಸಾಂಪ್ರದಾಯಿಕ ಲಸಿಕ್ ನ ಮಾದರಿ), ನೇತ್ರತಜ್ಞ ರು ದೈಶಿಕವಾದ ಭಿನ್ನ ತಿದ್ದುಪಡಿಯನ್ನು ಮಾಡುತ್ತಾರೆ. ಅವರು ಕಂಪ್ಯೂಟರ್-ಆಧಾರಿತ ಎಕ್ಸಿಮರ್ ಲೇಸರ್ ನ ಜೊತೆಗೆ ತರಂಗಮುಖ ಸಂವೇದಕಗಳಿಂದ ಮಾಪನ ಮಾಡಿ ದೋಷ ಸರಿಪಡಿಸುತ್ತಾರೆ. ಇದು ಪರಿಪೂರ್ಣ ದೃಷ್ಟಿ ಹೊಂದಿರುವ ಕಣ್ಣನ್ನು ಪಡೆಯುವ ಗುರಿ ಹೊಂದಿದೆ. ಹಾಗಿದ್ದರೂ ಅಂತಿಮ ಪರಿಣಾಮವು, ಗಾಯ ಮಾಯುವ ಸಮಯದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದರಲ್ಲಿ ವೈದ್ಯರು ಎಷ್ಟು ಯಶ್ಸಸ್ವಿಯಾಗಿದ್ದಾರೆ, ಎಂಬುದರ ಮೇಲೆ ಅವಲಂಬಿತವಾಗಿದೆ. ಅಂತಿದ್ದರೂ, ವಯಸ್ಸಾದ ರೋಗಿಗಳಲ್ಲಿ ಅತಿ ಸೂಕ್ಷ್ಮವಾದ ಕಣಗಳು ಚೆದುರಿಹೋಗುತ್ತವೆ. ಇದು ಒಂದು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತರಂಗಮುಖದ ಮೂಲಕ ದೋಷಸರಿಪಡಿಸುವಿಕೆಯಿಂದ ಉಂಟಾದ ಪ್ರಯೋಜನಕ್ಕೆ ಯಾವುದೇ ಪ್ರಾಮುಖ್ಯತೆ ಇರುವುದಿಲ್ಲ. ಆದ್ದರಿಂದ, "ಪರಿಪೂರ್ಣ ದೃಷ್ಟಿ" ಯ ನಿರೀಕ್ಷೆಯಲ್ಲಿರುವ ರೋಗಿಗಳಿಗೆ ಈ ಶಸ್ತ್ರಚಿಕಿತ್ಸಾ ವಿಧಾನದಿಂದ ನಿರಾಶೆಯಾಗಬಹುದು. ಆದರೂ, ಶಸ್ತ್ರಚಿಕಿತ್ಸಕರು, ರೋಗಿಗಳು ಮುಂಚಿನ ವಿಧಾನಗಳಿಗಿಂತ ಈ ವಿಧಾನದಿಂದ ಸಂತೃಪ್ತಿ ಹೊಂದಿದ್ದಾರೆಂದು ಸಮರ್ಥಿಸುತ್ತಾರೆ. ವಿಶೇಷವಾಗಿ, ಈ ವಿಧಾನದಿಂದ "ಹಾಲೋಸ್"(ಸಣ್ಣ ಪ್ರಮಾಣದ ಕಿಡಿ)ನ ಪ್ರಮಾಣವು ಕಡಿಮೆಯಾಗಿದೆ. ಇದು ಮುಂಚಿನ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ನಡೆಸಲಾಗುತ್ತಿದ್ದ ಗೋಳವಿಪಥನ ದಿಂದ ಕಣ್ಣಿಗೆ ಉಂಟಾಗುವ ದೃಷ್ಟಿ ದೋಷ. ಅವರ ಅನುಭವಗಳನ್ನು ಆಧರಿಸಿ, ಯುನೈಟೆಡ್ ಸ್ಟೇಟ್ಸ್ ನ ವಾಯು ಪಡೆಯು WFG-ಲಸಿಕ್ "ಪರಿಪೂರ್ಣ ದೃಷ್ಟಿಯ ಫಲಿತಾಂಶ" ನೀಡುತ್ತದೆ ಎಂದು ವಿವರಿಸಿದೆ.

ಲಸಿಕ್ ಶಸ್ತ್ರಚಿಕಿತ್ಸೆ ಫಲಿತಾಂಶ

ಲಸಿಕ್ ನಿಂದ ಪರಿಹಾರ ಕಂಡುಕೊಂಡಿರುವ ರೋಗಿಗಳ ಸಮೀಕ್ಷೆಯಲ್ಲಿ ಹೆಚ್ಚಿನ ರೋಗಿಗಳು ಇದರಿಂದ ತೃಪ್ತಿಹೊಂದಿರುವುದು ದೃಢಪಟ್ಟಿದೆ. ಇದರಿಂದ ತೃಪ್ತಿಹೊಂದಿರುವ ರೋಗಿಗಳ ಸಂಖ್ಯಾಶ್ರೇಣಿಯು ಶೇಕಡಾ 92-98ರಷ್ಟಿದೆ. ಮಾರ್ಚ್ 2008ರಲ್ಲಿ, ಅಮೇರಿಕನ್ ಸೊಸೈಟಿ ಆಫ್ ಕ್ಯಾಟರಾಕ್ಟ್ ಅಂಡ್ ರಿಫ್ರಾಕ್ಟಿವ್ ಸರ್ಜರಿ, ಜಗತ್ತಿನಾದ್ಯಂತ ಕಳೆದ 10 ವರ್ಷಗಳಲ್ಲಿ ವೈದ್ಯಕೀಯ ನಿಯತಕಾಲಿಕಗಳಲ್ಲಿ ಪ್ರಕಟವಾದ, ವರಿಷ್ಟರು-ವಿಮರ್ಶೆಮಾಡುವ 3,000ಕ್ಕೂ ಹೆಚ್ಚಿನ ಲೇಖನಗಳ ಆಧಾರದ ಮೇಲೆ ಒಂದು ಬೃಹತ್-ವಿಶ್ಲೇಷಣೆಯನ್ನು ನಡೆಸಲಾಯಿತು. ಇದರಲ್ಲಿ 2,200 ರೋಗಿಗಳನ್ನು ಆಧರಿಸಿದ 19 ಸಂಶೋಧನೆಗಳು, ರೋಗಿಗಳು ಇದರಿಂದ ತೃಪ್ತಿಹೊಂದಿದ್ದರೆಂದು ಪ್ರಕಟಿಸಲಾಯಿತು. ಈ ಸಂಶೋಧನೆಯು ಜಗತ್ತಿನಾದ್ಯಂತ ಲಸಿಕ್ ನಿಂದ ಪರಿಹಾರ ಕಂಡುಕೊಂಡ ರೋಗಿಗಳು ಶೇಕಡಾ 95.4ರಷ್ಟು ತೃಪ್ತಿಹೊಂದಿದ್ದಾರೆಂದು ಪ್ರಕಟಿಸಿತು.

ಸುರಕ್ಷತೆ ಹಾಗು ಸಫಲತೆ

ಸುರಕ್ಷತೆ ಹಾಗು ಸಫಲತೆಯ ಬಗ್ಗೆ ವರದಿಯಾದ ಚಿತ್ರಣವು ಚರ್ಚೆಗೆ ಮುಕ್ತವಾಗಿದೆ. ಕಳೆದ 2003ರಲ್ಲಿ, ಅತ್ಯಂತ ಹೆಚ್ಚಿನ ವೈದ್ಯಕೀಯ ವಿಮೆಯನ್ನು ಹೊಂದಿರುವ ಯುನೈಟೆಡ್ ಕಿಂಗ್ಡಂನ ಮೆಡಿಕಲ್ ಡಿಫೆನ್ಸ್ ಯೂನಿಯನ್ (MDU), ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ಶೇಖಡ 166ರಷ್ಟು ಅಧಿಕವಾದ ಹಕ್ಕಿನ ಕೋರಿಕೆಯನ್ನು ಒಳಗೊಂಡಿದ್ದರ ಬಗ್ಗೆ ವರದಿಮಾಡಿತು; ಆದರೆ, ಕೆಲವು ಹಕ್ಕು ಕೋರಿಕೆಗಳು ಪ್ರಾಥಮಿಕವಾಗಿ ಲಸಿಕ್ ಶಸ್ತ್ರಚಿಕಿತ್ಸೆಯ ಬಗ್ಗೆ ರೋಗಿಗಳ ಅವಾಸ್ತವಿಕ ನಿರೀಕ್ಷೆಗಳೇ ಹೊರತು ಶಸ್ತ್ರಚಿಕಿತ್ಸೆಯ ದೋಷವಲ್ಲವೆಂದು MDU ದೃಢಪಡಿಸಿತು. ಕಳೆದ 2003ರಲ್ಲಿ, ವೈದ್ಯಕೀಯ ನಿಯತಕಾಲಿಕ ಆಪ್ತಲ್ಮಾಲಜಿ ಯಲ್ಲಿ ವರದಿಯಾದ ಒಂದು ಅಧ್ಯಯನವು, ಶೇಖಡ 18ರಷ್ಟು ರೋಗಿಗಳು ಚಿಕಿತ್ಸೆಗೆ ಒಳಪಟ್ಟಿದ್ದಾರೆ, ಅದರಲ್ಲಿ ಶೇಖಡ 12ರಷ್ಟು ರೋಗಿಗಳ ಕಣ್ಣಿಗೆ ಮರುಚಿಕಿತ್ಸೆಯ ಅಗತ್ಯವಿದೆ, ಎಂಬುದನ್ನು ಗುರುತಿಸಿತು. ಲೇಖಕರು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ದೋಷಸರಿಪಡಿಸುವಿಕೆ, ಅಸಮದೃಷ್ಟಿ, ಹಾಗು ಹೆಚ್ಚಿದ ವಯಸ್ಸು-ಇವೆಲ್ಲವೂ ಲಸಿಕ್ ನ ಮರುಚಿಕಿತ್ಸೆಗೆ ಎದುರಾಗಬಹುದಾದ ಅಪಾಯದ ಅಂಶಗಳೆಂದು ತೀರ್ಮಾನಿಸಿದರು.

ಕಳೆದ 2004ರಲ್ಲಿ, ಬ್ರಿಟೀಷ್ ನ್ಯಾಷನಲ್ ಹೆಲ್ತ್ ಸರ್ವಿಸ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕ್ಲಿನಿಕಲ್ ಎಕ್ಸಲನ್ಸ್(NICE), NHS ಒಳಗೆ ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಡುವ ಹಾಗು ಮಾರ್ಗದರ್ಶಿಸೂಚಿಯನ್ನು ಬಿಡುಗಡೆ ಮಾಡುವ ಮುಂಚೆ ನಾಲ್ಕು ವ್ಯವಸ್ಥೆಯಿಲ್ಲದ ನಿಯಂತ್ರಿತ ಪರೀಕ್ಷಾ-ಪ್ರಕ್ರಿಯೆಯ ವ್ಯವಸ್ಥಿತ ವಿಮರ್ಶೆ ಯನ್ನು ನಡೆಸುವ ಬಗ್ಗೆ ಚಿಂತನೆ ನಡೆಸಿತು. ಶಸ್ತ್ರಚಿಕಿತ್ಸಾ ವಿಧಾನದ ಫಲದಾಯಕತೆಗೆ ಸಂಬಂಧಿಸಿದಂತೆ, NICE, "ಚಾಲ್ತಿಯಲ್ಲಿರುವ ವಾಸ್ತವಾಂಶಗಳ ಪ್ರಕಾರ ವಕ್ರೀಕಾರಕ ದೋಷಗಳನ್ನು ಸರಿಪಡಿಸುವ ಲಸಿಕ್ ಶಸ್ತ್ರಚಿಕಿತ್ಸೆಯು, ತೀವ್ರವಲ್ಲದ ಅಥವಾ ಮಧ್ಯಮಟ್ಟದಲ್ಲಿ ಸಮೀಪದೃಷ್ಟಿಯ ದೋಷವನ್ನು ಎದುರಿಸುತ್ತಿರುವ ರೋಗಿಗಳಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ," ಆದರೆ "ಈ ವಾಸ್ತವಾಂಶವು ತೀವ್ರತರದ ಸಮೀಪದೃಷ್ಟಿ ಹಾಗು ದೂರದೃಷ್ಟಿಗೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ." ಶಸ್ತ್ರಚಿಕಿತ್ಸಾ ವಿಧಾನದ ಸುರಕ್ಷತೆಗೆ ಸಂಬಂಧಿಸಿದಂತೆ, NICE, "ಶಸ್ತ್ರಚಿಕಿತ್ಸೆಯ ದೀರ್ಘಾವಧಿ ಸುರಕ್ಷತೆಯ ಬಗೆಗೆ ಗಮನವಹಿಸುವುದರ ಜೊತೆಗೆ ಹಾಲಿ ವಾಸ್ತವಾಂಶವು NHS ನ ಒಳಗೆ ಬಳಕೆಮಾಡಲು ಹೆಚ್ಚಿಗೆ ಸಹಕಾರಿಯಾಗಿಲ್ಲ. ಇದರ ಸೂಕ್ಷ್ಮ ವಿಚಾರಣೆ ಹಾಗು ಸಂಶೋಧನೆಯ ಅನುಮತಿ ಪಡೆಯಲು ವಿಶೇಷ ವ್ಯವಸ್ಥೆ ಮಾಡಬೇಕಾಗುತ್ತದೆ."

ಯುನೈಟೆಡ್ ಕಿಂಗ್ಡಂ ಹಾಗು ಯುನೈಟೆಡ್ ಸ್ಟೇಟ್ಸ್ ನ ಪ್ರಸಿದ್ದ ವಕ್ರೀಕಾರಕ ಶಸ್ತ್ರಚಿಕಿತ್ಸಕರು ಹಾಗು ಕಡೇಪಕ್ಷ ಅಧ್ಯಯನವನ್ನು ವರದಿಮಾಡಿದ ಒಬ್ಬ ಲೇಖಕರು, NICE ಪ್ರತಿದಿನ ಹಾಗು ವಾರ-ವಾರ ನಡೆಸಿದ ಸಂಶೋಧನೆಯನ್ನು ಆಧರಿಸಿದೆ, ಎಂದು ಬಲವಾಗಿ ನಂಬಿದ್ದಾರೆ.

ಅಕ್ಟೋಬರ್ 10, 2006ರಲ್ಲಿ, WebMD ನಡೆಸಿದ ಸಂಖ್ಯಾಶಾಸ್ತ್ರದ ವಿಶ್ಲೇಷಣೆಯು ಕಾಂಟಾಕ್ಟ್ ಲೆನ್ಸ್ ಧಾರಣೆಯಿಂದ ಉಂಟಾಗುವ ಸೋಂಕು ಲಸಿಕ್ ಶಸ್ತ್ರಚಿಕಿತ್ಸೆಯಿಂದ ಉಂಟಾಗು ಸೊಂಕಿಗಿಂತ ಅಪಾಯವೆಂಬುದನ್ನು ಬಯಲುಮಾಡಿತು. ಪ್ರತಿದಿನ ಕಾಂಟಾಕ್ಟ್ ಲೆನ್ಸ್ ಧರಿಸುವವರು, 30 ವರ್ಷಗಳ ಅದರ ಸತತ ಬಳಕೆಯಿಂದ ಉಂಟಾಗುವ ಕಣ್ಣಿನ ಸೋಂಕಿನಿಂದ 100 ರಲ್ಲಿ 1 ಭಾಗದಷ್ಟು ಅಪಾಯವನ್ನು ಎದುರಿಸುತ್ತಾರೆ ಜೊತೆಗೆ ಸೋಂಕಿನಿಂದ ಉಂಟಾಗುವ ದೃಷ್ಟಿಹೀನತೆಯಿಂದ ಬಳಲುವ ಸಾದ್ಯತೆ 2,000 ದಲ್ಲಿ 1 ರಷ್ಟಿದೆ. ಸಂಶೋಧಕರು ಲಸಿಕ್ ಶಸ್ತ್ರಚಿಕಿತ್ಸೆಯ ಪರಿಣಾಮವನ್ನು ದೃಷ್ಟಿಹೀನತೆಯ ಅಪಾಯಕ್ಕೆ ಹೋಲಿಸಿದರೆ ಅದು 10,000 ಕ್ಕೆ 1 ರಷ್ಟಿದೆ ಎಂದು ಅಂದಾಜಿಸಿದರು.

ರೋಗಿಯ ಅಸಂತೃಪ್ತಿ

ಕೆಲವು ರೋಗಿಗಳು ಲಸಿಕ್ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಿಂದ ತಮ್ಮ ಜೀವನ ಶೈಲಿಯು ಮಹತ್ತರವಾಗಿ ಇಳಿಕೆಯಾಗಿರುವುದನ್ನು ವರದಿ ಮಾಡುತ್ತಾರೆ. ಏಕೆಂದರೆ ದೃಷ್ಟಿ ಸಮಸ್ಯೆ ಅಥವಾ ಶಸ್ತ್ರಚಿಕಿತ್ಸೆಯಿಂದ ಉಂಟಾದ ದೈಹಿಕ ನೋವು ಅವರನ್ನು ಭಾದಿಸುತ್ತದೆ. ಲಸಿಕ್ ಶಸ್ತ್ರಚಿಕಿತ್ಸೆಯಿಂದ ಉಂಟಾದ ತೊಡಕಿನಿಂದ ಅನುಭವಿಸಿದ ರೋಗಿಗಳು, ಅಂತರ್ಜಾಲ ಹಾಗು ಚರ್ಚಾ ವೇದಿಕೆಗಳನ್ನು ಸೃಷ್ಟಿಸಿ ಇದರ ಅನನುಕೂಲತೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ರೋಗಿಗಳ ಜೊತೆ ಹಾಗು ಶಸ್ತ್ರಚಿಕಿತ್ಸೆಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಬಹುದು. ಕಳೆದ 1999ರಲ್ಲಿ, RK ಯ ರೋಗಿ ರೋನ್ ಲಿಂಕ್ ನ್ಯೂಯಾರ್ಕ್ ನಗರದಲ್ಲಿ ಸರ್ಜಿಕಲ್ ಐಸ್ ನ ಸ್ಥಾಪನೆ ಮಾಡಿದ. ಇದು ರೋಗಿಗಳಿಗೆ ಲಸಿಕ್ ನಿಂದ ಹಾಗು ಇತರ ವಕ್ರೀಕಾರಕ ಶಸ್ತ್ರಚಿಕಿತ್ಸೆಗಳಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಸಂಸ್ಥೆಯಾಗಿ ಬೆಳೆದಿದೆ. ಹೆಚ್ಚಿನ ಅನುಭವಿ ಹಾಗು ಪ್ರಸಿದ್ದ ನೇತ್ರಾಲಯಗಳು ಶಸ್ತ್ರಚಿಕಿತ್ಸೆಗೆ ಮುನ್ನ ಪೂರ್ಣ-ಪ್ರಮಾಣದ ಕಣ್ಣಿನ ಪರೀಕ್ಷೆ ಮಾಡಿ ರೋಗಿಗೆ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಚಿಕಿತ್ಸಾ ನಂತರದ ಕಾಳಜಿಯ ಬಗ್ಗೆ ಅರಿವು ಮೂಡಿಸುತ್ತವೆ. ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನಕಾರಾತ್ಮಕ ಅಂಶಗಳನ್ನು ಕಡಿಮೆ ಮಾಡುವಲ್ಲಿ ಸಹಾಯಮಾಡುತ್ತವೆ.

ಉತ್ತಮ ಫಲಿತಾಂಶಗಳಿಗಾಗಿ, ನೇತ್ರತಜ್ಞ, ಸ್ಟೀವೆನ್ C. ಸ್ಚಲ್ ಹಾರ್ನ್, US ನೌಕಾದಳ ದ ವಕ್ರೀಕಾರಕ ಶಸ್ತ್ರಚಿಕಿತ್ಸೆ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದಾಗ ಹಾಗು ಅವರ ಸಂಶೋಧನೆಯು ಪಾರ್ಶ್ವವಾಗಿ ನೌಕಾದಳದ ನಿರ್ಧಾರದಂತೆ ಹಡಗು ಚಾಲಕರಿಗೆ ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಡುವುದನ್ನು ಸಮ್ಮತಿಸಿತು. ಅವರು "ತರಂಗಮುಖ-ಆಧಾರಿತ" ಸಾಫ್ಟ್ ವೇರ್ ನ ಸಂಯೋಜನೆಯೊಂದಿಗೆ "ಆಲ್-ಲೇಸರ್ ಲಸಿಕ್" ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿತು.

ಲಸಿಕ್ ಬಗೆಗಿನ FDA ಅಂತರ್ಜಾಲವು ಸ್ಪಷ್ಟವಾಗಿ: "ವಕ್ರೀಕಾರಕ ಶಸ್ತ್ರಚಿಕಿತ್ಸೆಗೆ ಒಳಪಡುವ ಮುಂಚೆ, ಅದರ ತೊಡಕುಗಳು ಹಾಗು ಪ್ರಯೋಜನಗಳನ್ನು ವೈಯುಕ್ತಿಕ ಆಧಾರದ ಮೇಲೆ ನೀವು ಎಚ್ಚರಿಕೆಯಿಂದ ಅಳೆದುನೋಡಬೇಕಾಗುತ್ತದೆ, ಜೊತೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸ್ನೇಹಿತರ ಪ್ರಭಾವದಿಂದ ದೂರವಿರಿ. ವೈದ್ಯರು ಸಹ ನಿಮಗೆ ಹೀಗೆ ಮಾಡಲು ಪ್ರೋತ್ಸಾಹಿಸುತ್ತಾರೆಂದು" ಅಭಿಪ್ರಾಯ ವ್ಯಕ್ತಪಡಿಸಿತು. ಪರಿಣಾಮವಾಗಿ, ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳು ಎಲ್ಲ ಸಂಭಾವ್ಯ ಪರಿಣಾಮಗಳನ್ನು ಹಾಗು ತೊಡಕುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಸಂತೃಪ್ತಿಯು ನೇರವಾಗಿ ನಿರೀಕ್ಷೆಗೆ ಸಂಬಂಧಿಸಿದೆ.

FDA 140 "ಲಸಿಕ್ ಗೆ ಸಂಬಂಧಿಸಿದ ನಕಾರಾತ್ಮಕ ವರದಿಗಳನ್ನು" 1998-2006ರ ಅವಧಿಯಲ್ಲಿ ಸ್ವೀಕರಿಸಿತು.

ಸಂಭಾವ್ಯ ತೊಡಕುಗಳು

Lasik ಲಸಿಕ್ 
ಕಣ್ಣಿನ ಲಘು ಆರ್ದ್ರ ಚರ್ಮದ್ರವದ ಕೆಳಭಾಗದಲ್ಲಿನ ರಕ್ತಸ್ರಾವ, ಲಸಿಕ್ ಶಸ್ತ್ರಚಿಕಿತ್ಸೆಯ ನಂತರ ಉಂಟಾಗಬಹುದಾದ ಒಂದು ಸಾಮಾನ್ಯ ಹಾಗು ಚಿಕ್ಕ ತೊಡಕು.

ವಕ್ರೀಕಾರಕ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ಅತ್ಯಂತ ಸಾಮಾನ್ಯ ತೊಡಕೆಂದರೆ "ಕಣ್ಣಿನ ಶುಷ್ಕತೆ." ಮಾರ್ಚ್ 2006ರ ಅಮೆರಿಕನ್ ಜರ್ನಲ್ ಆಫ್ ಆಫ್ತಲ್ಮಾಲಜಿಯ ಒಂದು ಅಧ್ಯಯನದ ಪ್ರಕಾರ, ಶಸ್ತ್ರಚಿಕಿತ್ಸೆಯ ನಂತರ ಆರು ತಿಂಗಳ ಗುಣವಾಗುವ ಅವಧಿಯಲ್ಲಿ ಕಣ್ಣಿನ ಶುಷ್ಕತೆಯ ಪ್ರಮಾಣವು ಶೇಖಡ 36% ರಷ್ಟಿದೆ. FDA(ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಅಂತರ್ಜಾಲವು "ಕಣ್ಣಿನ ಶುಷ್ಕತೆ" ಯು ಕಾಯಂ ಉಳಿಯಬಹುದೆಂಬ ಅಂಶವನ್ನು ವ್ಯಕ್ತಪಡಿಸುತ್ತದೆ.

ಕಣ್ಣಿನ ಶುಷ್ಕತೆಯಲ್ಲಿ ಹೆಚ್ಚಿದ ಪ್ರಮಾಣಕ್ಕೆ ಶಸ್ತ್ರಚಿಕಿತ್ಸೆಗೆ ಮುಂಚೆ ಹಾಗು ನಂತರ ಒಂದು ಸರಿಯಾದ ಮಾಪನದ ಅಗತ್ಯದ ಜೊತೆಗೆ ಕಣ್ಣಿನ ಶುಷ್ಕತೆಗೆ ಚಿಕಿತ್ಸೆಯ ಅಗತ್ಯವಿದೆ. ಕಣ್ಣಿನ ಶುಷ್ಕತೆಗೆ ಹಲವಾರು ಯಶಸ್ವೀ ಚಿಕಿತ್ಸೆಗಳಿವೆ. ಇದರಲ್ಲಿ ಕೃತಕವಾಗಿ ಕಣ್ಣೀರು ತರಿಸುವ ವಿಧಾನ,ಸಾಂದರ್ಭಿಕವಾಗಿ ಬರುವ ಕಣ್ಣೀರು ಹಾಗು ಪಂಕ್ಟಲ್ ಅಕ್ಲೂಷನ್ ಗಳು ಸೇರಿವೆ. ಒಂದು ಜೋಡಣಾ ಅಂಗಾಂಶಗಳ ಬಿರಡೆಯನ್ನು ಕಣ್ಣಿನ ಸ್ವಾಭಾವಿಕ ನಾಳದಲ್ಲಿ ಕೂಡಿಸಿ ಪಂಕ್ಟಲ್ ಅಕ್ಲೂಷನ್ ನನ್ನು ನಿರ್ವಹಿಸಲಾಗುತ್ತದೆ. ಕಣ್ಣಿನ ಶುಷ್ಕತೆಯನ್ನು ಚಿಕಿತ್ಸೆ ಮಾಡದೆ ಹಾಗೆ ಬಿಟ್ಟರೆ ಅದು ದೃಷ್ಟಿಹೀನತೆಯನ್ನು ಹಾಗು ಲಸಿಕ್ ಅಥವಾ PRK ಶಸ್ತ್ರಚಿಕಿತ್ಸೆಯ ಫಲಿತಾಂಶದಲ್ಲಿ ಇಳಿಮುಖವಾಗುತ್ತದೆ. ಅಥವಾ ತೀವ್ರವಾದ ಪರಿಸ್ಥಿತಿಗಳಲ್ಲಿ "ದೀರ್ಘಕಾಲದ ಕಣ್ಣಿನ ಶುಷ್ಕತೆಗೆ" ಒಳಗಾಗಬೇಕಾಗುತ್ತದೆ. ಇದರ ಪರಿಣಾಮವಾಗಿ ದೀರ್ಘಕಾಲದ ನೋವು ಹಾಗು ದೃಷ್ಟಿಹೀನತೆಯಿಂದ ಶಾಶ್ವತವಾಗಿ ಬಳಲಬಹುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೆಲವೊಂದು ಪರಿಸ್ಥಿತಿಗಳಲ್ಲಿ ಮೇಲೆ ಉಲ್ಲೇಖಿಸಿದ ವಿಧಾನಗಳನ್ನು ಬಳಸಿ ಕಣ್ಣಿನ ಶುಷ್ಕತೆಯನ್ನು ಯಶಸ್ವಿಯಾಗಿ ಶಮನಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಡುವ ಒಬ್ಬ ರೋಗಿಯು ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ಶುಷ್ಕತೆಯು ಒಂದು ಶಾಶ್ವತವಾಗಿ ಎದುರಿಸಬೇಕಾದ ಪರಿಣಾಮ ಹಾಗು ಇದನ್ನು ಸರಿಪಡಿಸಲು ಸಾಧ್ಯವಿಲ್ಲವೆಂಬ ಅಂಶವನ್ನುಅರಿತುಕೊಳ್ಳಬೇಕಾಗುತ್ತದೆ.

ಲಸಿಕ್ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಎದುರಿಸುವ ದೃಷ್ಟಿಯ ಅಡ್ಡ ಪರಿಣಾಮಗಳಾದ ಹಾಲೋಸ್(ಸಣ್ಣ ಪ್ರಮಾಣದ ಕಿಡಿಯ ಗೋಚರ), ಡಬಲ್ ವಿಷನ್(ಒಂದೇ ವಸ್ತು ಜೋಡಿಯಾಗಿ ಗೋಚರವಾಗುವುದು)(ಭೂತಾಕೃತಿ), ವೈದೃಶ್ಯ ಸೂಕ್ಷ್ಮತೆಯ ನಷ್ಟ(ದೃಷ್ಟಿ ಮಂಜಾಗುವಿಕೆ) ಹಾಗು ಗ್ಲೆರ್ (ಅತೀ ತೀಕ್ಷ್ಣ ಪ್ರಭೆ) ಇವೆಲ್ಲವೂ ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಮುಂಚಿನ ಅಮೆಟ್ರೋಪಿಅ (ದೂರದ ವಸ್ತುಗಳನ್ನು ವೀಕ್ಷಿಸುವಲ್ಲಿ ಕಣ್ಣಿಗೆ ಎದುರಾಗುವ ವಕ್ರೀಕಾರಕ ದೋಷ) ದ ಹಂತ ಹಾಗು ಇತರ ಅಪಾಯದ ಅಂಶಗಳ ಮೇಲೆ ಅವಲಂಬಿತವಾಗಿದೆ.


ಈ ಕಾರಣದಿಂದಾಗಿ, ರೋಗಿಯ ವೈಯುಕ್ತಿಕ ಅಪಾಯದ ಸಂಭಾವ್ಯವನ್ನು ಪರಿಗಣಿಸಬೇಕೆ ಹೊರತು ಕೇವಲ ಎಲ್ಲ ರೋಗಿಗಳ ಸರಾಸರಿ ಸಂಭವನೀಯತೆಯನ್ನು ಅಲ್ಲ. LASIKನಿಂದ ಸಾಧಾರಣವಾಗಿ ವರದಿಯಾದ ತೊಡಕುಗಳು ಈ ಕೆಳಕಂಡಂತಿವೆ:

  • ಶಸ್ತ್ರಚಿಕಿತ್ಸೆಯು ಕಣ್ಣಿನ ಶುಷ್ಕತೆಯನ್ನು ಉಂಟುಮಾಡುತ್ತದೆ.
  • ಅಧಿಕವಾಗಿ ದೋಷಸರಿಪಡಿಸುವಿಕೆ ಅಥವಾ ದೋಷಸರಿಪಡಿಸುವಿಕೆಯಲ್ಲಿನ ಕೊರತೆ
  • ಅತ್ಯಂತ ಕಡಿಮೆ ಮಟ್ಟದ ವಿಟಮಿನ್ D- ಸೂರ್ಯನ ಬೆಳಕಿಗೆ ಸೂಕ್ಷ್ಮವಾಗುವಿಕೆ
  • ದೃಷ್ಟಿ ತೀಕ್ಷ್ಣತೆ ಯಲ್ಲಿ ಏರುಪೇರಾಗುವುದು
  • ರಾತ್ರಿಯಲ್ಲಿ ಹಾಲೋಸ್(ಸಣ್ಣ ಪ್ರಮಾಣದಲ್ಲಿ ಕಿಡಿಯ ಗೋಚರ) ಅಥವಾ ಸ್ಟಾರ್ಬರ್ಸ್ಟ್ಸ್ ಗಳು ವಿಕಿರಣಕಾಯದ ಸುತ್ತ ಕಂಡುಬರುತ್ತದೆ
  • ಬೆಳಕಿಗೆ ಸೂಕ್ಷ್ಮವಾಗುವುದು
  • ಭೂತಾಕೃತಿಗಳು ಅಥವಾ ದೃಷ್ಟಿ ಎರಡಾಗಿ ಕಾಣುವುದು
  • ರಕ್ಷಣಾ ಕವಚದಲ್ಲಿ ಮಡಿಕೆ (ಸ್ಟ್ರೈಈ)
  • ಅಂಗಚ್ಚೇದನದ ವಿಕೇಂದ್ರೀಕರಣ
  • ರಕ್ಷಣಾ ಕವಚದ ಕೆಳಗಿನ ಚೂರುಗಳು ಅಥವಾ ಬೆಳವಣಿಗೆ
  • ತೆಳುವಾದ ಅಥವಾ ಗುಂಡಿರಂಧ್ರದ ರಕ್ಷಣಾ ಕವಚ
  • ಅಸಮದೃಷ್ಟಿ(ಅಸ್ಟಿಗ್ಮಟಿಸಂ)ಯ ಪ್ರಭಾವ
  • ಕಾರ್ನಿಯಲ್(ಪಾರದರ್ಶಕ ಪಟಲದ)ನ ಹಿಗ್ಗುವಿಕೆ
  • ಫ್ಲೋಟರ್ಸ್
  • ಎಪಿತೀಲಿಯಮ್ ನ ಸವೆತ
  • ಕಾಚದ್ರವವು ಬೇರ್ಪಟ್ಟ ತರುವಾಯ
  • ಅಕ್ಷಿಪಟಲದ ರಂಧ್ರ

ಲಸಿಕ್ ನಿಂದ, ಶಸ್ತ್ರಚಿಕಿತ್ಸೆಗೆ ಮುಂಚೆ,ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಶಸ್ತ್ರಚಿಕಿತ್ಸೆ ನಡೆದ ಸ್ವಲ್ಪ ಸಮಯದ ನಂತರ, ಅಥವಾ ಶಸ್ತ್ರಚಿಕಿತ್ಸೆ ನಡೆದ ನಂತರ ತಡವಾಗಿ ತೊಡಕುಗಳು ಉಂಟಾಗಬಹುದು:

ಶಸ್ತ್ರಚಿಕಿತ್ಸಾ ಸಮಯದಲ್ಲಿ ಉಂಟಾಗಬಹುದಾದ ತೊಡಕುಗಳು

  • ರಕ್ಷಣಾ ಕವಚದ ತೊಡಕಿನ ಪ್ರಮಾಣವನ್ನು 0.244% ಎಂದು ಅಂದಾಜಿಸಲಾಗಿದೆ.

ರಕ್ಷಣಾ ಕವಚದ ತೊಡಕುಗಳು (ಉದಾಹರಣೆಗೆ ರಕ್ಷಣಾ ಕವಚದ ಸ್ಥಾನಪಲ್ಲಟ ಅಥವಾ ರಕ್ಷಣಾ ಕವಚದ ಮಡಿಕೆಗೆ ಸ್ಥಾನಬದಲಾವಣೆಯ ಅಗತ್ಯವಿರುತ್ತದೆ, ಲಮೆಲ್ಲರ್ ಕೆರಟಿಟಿಸ್ ನ ಚದರುವಿಕೆ, ಹಾಗು ಎಪಿಥೀಲಿಯಲ್ ನ ಒಳಬೆಳವಣಿಗೆ) ಲಮೆಲ್ಲರ್ ಕಾರ್ನಿಯಲ್ (ಪಾರದರ್ಶಕ ಪಟಲ)ನ ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿದೆ. ಆದರೆ ತೀರ ವಿರಳವಾಗಿ ಶಾಶ್ವತವಾದ ದೃಷ್ಟಿ ತೀಕ್ಷ್ಣತೆಯ ನಷ್ಟಕ್ಕೆ ದಾರಿಮಾಡಿಕೊಡುತ್ತದೆ; ಈ ರೀತಿಯಾದ ಮೈಕ್ರೋಕೆರಟೋಮ್-ಸಂಬಂಧಿತ ತೊಡಕುಗಳು ವೈದ್ಯರ ಅನುಭವದ ಆಧಾರದ ಮೇಲೆ ಇಳಿಕೆಯಾಗಬಹುದು. ಈ ತಂತ್ರಜ್ಞಾನ ಪ್ರತಿಪಾದಿಸುವವರ ಪ್ರಕಾರ, ಈ ರೀತಿಯಾದ ಅಪಾಯಗಳು [[ಇಂಟ್ರಾಲಸಿಕ್ ನ ಬಳಕೆಯಿಂದ ಮತ್ತಷ್ಟು ಕಡಿಮೆ ಮಾಡಬಹುದು.ಜೊತೆಗೆ ಇತರ ಮೈಕ್ರೋಕೆರಟೋಮ್ ಗೆ ಸಂಬಂಧಿಸದ ಮಾರ್ಗಗಳಿಂದಲೂ ಕಡಿಮೆ ಮಾಡಬಹುದು. ಆದಾಗ್ಯೂ ಇದು ಸಾಬೀತುಗೊಂಡಿಲ್ಲ; ಜೊತೆಗೆ ಇಂಟ್ರಾಲಸಿಕ್|ಇಂಟ್ರಾಲಸಿಕ್ [[ನ ಬಳಕೆಯಿಂದ ಮತ್ತಷ್ಟು ಕಡಿಮೆ ಮಾಡಬಹುದು.ಜೊತೆಗೆ ಇತರ ಮೈಕ್ರೋಕೆರಟೋಮ್ ಗೆ ಸಂಬಂಧಿಸದ ಮಾರ್ಗಗಳಿಂದಲೂ ಕಡಿಮೆ ಮಾಡಬಹುದು. ಆದಾಗ್ಯೂ ಇದು ಸಾಬೀತುಗೊಂಡಿಲ್ಲ; ಜೊತೆಗೆ ಇಂಟ್ರಾಲಸಿಕ್]]]] ಶಸ್ತ್ರಚಿಕಿತ್ಸಾ ವಿಧಾನವು ತನ್ನದೇ ಆದ ತೊಡಕುಗಳನ್ನು ಹೊಂದಿದೆ.

  • ರಕ್ಷಣಾ ಕವಚದ ಜಾರುವಿಕೆ (ಕಾರ್ನಿಯಾದ(ಪಾರದರ್ಶಕ ಪಟಲ)ರಕ್ಷಣಾ ಕವಚ ಉಳಿದ ಕಾರ್ನಿಯಾದ ಭಾಗದಿಂದ ಪ್ರತ್ಯೇಕಗೊಂಡಿರುತ್ತದೆ) ಕೂಡ ಒಂದು ಅತೀ ಹೆಚ್ಚಿನ ಸಾಮಾನ್ಯ ತೊಡಕು. ಈ ತೊಡಕು ಶಸ್ತ್ರಚಿಕಿತ್ಸೆ ನಂತರ ತಕ್ಷಣವೇ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರೋಗಿಗಳಿಗೆ ಮನೆಗೆ ಮರಳಿ ರಕ್ಷಣಾ ಕವಚವು ಮಾಯುವ ತನಕ ವಿಶ್ರಾಂತಿ ಪಡೆಯಲು ಸೂಚಿಸಲಾಗುತ್ತದೆ. ರೋಗಿಗಳಿಗೆ ಸಾಮಾನ್ಯವಾಗಿ ನಿದ್ರಿಸುವಾಗ ಧರಿಸಲು ಕನ್ನಡಕಗಳನ್ನು ಅಥವಾ ಕಣ್ಣಿಗೆ ರಕ್ಷಕಗಳನ್ನು ನೀಡಲಾಗುತ್ತದೆ. ಇದನ್ನು ಅವರು ತಮ್ಮ ನಿದ್ರಾವಸ್ಥೆಯಲ್ಲಿ ರಕ್ಷಣಾ ಕವಚದ ಸ್ಥಾನಪಲ್ಲಟ ಮಾಡಿಕೊಳ್ಳದಂತೆ ಹಲವು ರಾತ್ರಿಗಳ ವರೆಗೆ ಧರಿಸಬೇಕಾಗುತ್ತದೆ. ಒಂದು ತ್ವರಿತ ಶಸ್ತ್ರಚಿಕಿತ್ಸೆಯು ಈ ತೊಡಕಿಗೆ ಅವಕಾಶವನ್ನು ಕಡಿಮೆ ಮಾಡಬಹುದು. ಏಕೆಂದರೆ ರಕ್ಷಣಾ ಕವಚವು ಒಣಗುವುದಕ್ಕೆ ಕಡಿಮೆ ಸಮಯ ಹಿಡಿಯುತ್ತದೆ.
  • ರಕ್ಷಣಾ ಕವಚದಲ್ಲಿ ಕಂಡುಬರುವ ಅಂತರ ವಸ್ತುಗಳು ಮತ್ತೊಂದು ಕಾರಣ. ಇದರ ವೈದ್ಯಕೀಯ ಮಹತ್ವವು ಅನಿರ್ಧಾರಿತವಾಗಿದೆ. ಒಂದು ಫಿನ್ನಿಶ್ (ಜನಾಂಗದವರ) ಅಧ್ಯಯನವು ವಿವಿಧ ಗಾತ್ರದ ವಸ್ತುಗಳನ್ನು ಪತ್ತೆ ಮಾಡಿತು. ಜೊತೆಗೆ ಪ್ರತಿಫಲಿತವು 38.7% ಕಣ್ಣುಗಳಲ್ಲಿ ಪ್ರಾಯೋಗಿಕವಾಗಿ ಇದು ಗೋಚರವಾಯಿತು. ಇದನ್ನು ಸ್ಲಿಟ್ ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಯ ಮೂಲಕ ಪರೀಕ್ಷಿಸಲಾಯಿತು. ಆದರೆ ಕಾನ್ ಫೋಕಲ್ ಮೈಕ್ರೋಸ್ಕೋಪಿ ಯನ್ನು ಬಳಸಿದಾಗ 100% ರಷ್ಟು ಗೋಚರವಾಯಿತು.

ಶಸ್ತ್ರಚಿಕಿತ್ಸೆಯ ನಂತರ ಸ್ವಲ್ಪ ಸಮಯದಲ್ಲೇ ಉಂಟಾಗಬಹುದಾದ ತೊಡಕುಗಳು

  • ಸಂಶೋಧನೆಗಳ ಆಧಾರದ ಮೇಲೆ ಕಣ್ಣಿನ ಶುಷ್ಕತೆಯ ಪ್ರಮಾಣವು ವ್ಯಾಪಕವಾಗಿ ವ್ಯತ್ಯಾಸವಾಗುತ್ತದೆ.

ಹೊವನೆಸಿಯನ್ et al. ನಡೆಸಿದ ಅಧ್ಯಯನವು 50% ರೋಗಿಗಳು ಶಸ್ತ್ರಚಿಕಿತ್ಸೆಯ ಮೊದಲ ಆರು ತಿಂಗಳ ಅವಧಿಯಲ್ಲೇ ಕಣ್ಣಿನ ಶುಷ್ಕತೆಯನ್ನು ಅನುಭವಿಸಿದ್ದರ ಬಗ್ಗೆ ವರದಿ ಮಾಡಿತು.

  • ಲಮೆಲ್ಲರ್ ಕೆರಟಿಟಿಸ್(DLK) ನ ಚದರುವಿಕೆಯ ಪ್ರಮಾಣವನ್ನು ಸ್ಯಾಂಡ್ಸ್ ಆಫ್ ಸಹಾರ ಸಿನ್ಡ್ರೋಮ್ ಎಂದೂ ಕರೆಯುತ್ತಾರೆ. ಇದು 2.3% ನಷ್ಟಿದೆಯೆಂದು ಅಂದಾಜಿಸಲಾಗಿದೆ. DLK ಒಂದು ಉರಿಯೂತ ಉಂಟುಮಾಡುವ ಪ್ರಕ್ರಿಯೆ. ಇದು ಬಿಳಿ ರಕ್ತ ಕಣದ ಸಂಗ್ರಹವನ್ನು ಲಸಿಕ್ ರಕ್ಷಣಾ ಕವಚ ಹಾಗು ಕಾರ್ನಿಯಾದ ಜೀವಕೋಶದ ಹಂದರದ ನಡುವಿನ ಅಂತರದಲ್ಲಿ ಒಳಗೊಂಡಿದೆ. ಇದನ್ನು ಸಾಮಾನ್ಯವಾಗಿ ಸ್ಟೇರಾಯ್ಡ್ ಕಣ್ಣಿನ ಡ್ರಾಪ್ಸ್ ನೀಡಿ ಗುಣಪಡಿಸಲಾಗುತ್ತದೆ, ಜೊತೆಗೆ ಕೆಲವೊಂದು ಬಾರಿ ನೇತ್ರತಜ್ಞರು ರಕ್ಷಣಾ ಕವಚವನ್ನು ಮೇಲೆತ್ತಿ ಸಂಗ್ರಹಗೊಂಡಿರುವ ಕೋಶವನ್ನು ಕೈಯಿಂದ ತೆಗೆದುಹಾಕಬೇಕಾಗುತ್ತದೆ.
  • ಚಿಕಿತ್ಸೆಯಿಂದ ಉಂಟಾಗುವ ಸೋಂಕಿನ ಪರಿಣಾಮವನ್ನು 0.4% ಎಂದು ಅಂದಾಜಿಸಲಾಗಿದೆ. ಕಾರ್ನಿಯಾದ(ಪಾರದರ್ಶಕ ಪಟಲ)ರಕ್ಷಣಾ ಕವಚಕ್ಕೆ ಸೋಂಕು ತಗಲುವ ಸಾಧ್ಯತೆಯಿದೆ. ರೋಗಿಯು ಕೆರಟೋಕೊನುಸ್ (ಕಣ್ಣಿನಲ್ಲಿ ಅಸಹಜವಾಗಿ ಬೆಳೆದ ಭಾಗ)ಎಂಬ ಆನುವಂಶಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಶಸ್ತ್ರಚಿಕಿತ್ಸೆಯ ನಂತರ ಅವರ ಕಾರ್ನಿಯಾ(ಪಾರದರ್ಶಕ ಪಟಲ) ತೆಳುವಾಗುತ್ತ ಹೋಗುತ್ತದೆ. ಆದಾಗ್ಯೂ, ಈ ಪರಿಸ್ಥಿತಿಯನ್ನು ಶಸ್ತ್ರಚಿಕಿತ್ಸಾ ಪೂರ್ವದಲ್ಲಿ ಪರಿಶೀಲಿಸಲಾಗುತ್ತದೆಯಾದರೂ, ಕೆಲವೊಂದು ಅಪರೂಪದ ಘಟನೆಗಳಲ್ಲಿ (5,000 ದಲ್ಲಿ ಒಬ್ಬರಿಗೆ) ಈ ಪರಿಸ್ಥಿತಿಯು ಅವರ ಜೀವನದ ಎರಡನೇ ಭಾಗದಲ್ಲಿ ಸುಪ್ತವಾಗಿ ಉಳಿದುಬಿಡುವ ಸಾಧ್ಯತೆಗಳಿವೆ.(40ರ ಮಧ್ಯಭಾಗದಲ್ಲಿ). ಈ ಪರಿಸ್ಥಿತಿಯು ಎದುರಾದರೆ, ರೋಗಿಯು ಬಳುಕದ, ಅನಿಲ ಒಳಗೆ ಪ್ರವೇಶಿಸಬಲ್ಲ ಕಾಂಟಾಕ್ಟ್ ಲೆನ್ಸ್ ನ ಬಳಕೆ ಮಾಡಬೇಕಾಗುತ್ತದೆ, ಜೊತೆಗೆ ಇಂಟ್ರಾಸ್ಟ್ರೋಮಲ್ ಕಾರ್ನಿಯಲ್ ರಿಂಗ್ ಸೆಗ್ಮೆಂಟ್ಸ್(Intacs), ಕಾರ್ನಿಯಲ್ ಕೊಲ್ಲಾಜೆನ್ ಕ್ರಾಸ್ ಲಿಂಕಿಂಗ್ ವಿಥ್ ರಿಬೋಫ್ಲಾವಿನ್ ಅಥವಾ ಕಾರ್ನಿಯಾ (ಪಾರದರ್ಶಕ ಪಟಲ) ದ ಕಸಿಯ ಅಗತ್ಯವಿದೆ.
  • ಸತತವಾದ ಕಣ್ಣಿನ ಶುಷ್ಕತೆಯ ಪ್ರಮಾಣವು 28%ನಷ್ಟು ಅಧಿಕ ಏಷಿಯಾದವರಲ್ಲಿ ಹಾಗು 5%ನಷ್ಟು ಕಾಕೇಸಿಅನ್(ಶ್ವೇತವರ್ಣದವರು)ಜನರಲ್ಲಿ ಇದೆಯೆಂದು ಅಂದಾಜಿಸಲಾಗಿದೆ. ಕಾರ್ನಿಯಾದ(ಪಾರದರ್ಶಕ ಪಟಲ)ನರ ತಂತುಗಳು, ಕಣ್ಣೀರು ತರಿಸುವಲ್ಲಿ ಉತ್ತೇಜಿಸುತ್ತವೆ. ಲಸಿಕ್ ಶಸ್ತ್ರಚಿಕಿತ್ಸೆಯ ಒಂದು ವರ್ಷದ ನಂತರ, ಸಬ್ ಬೇಸಲ್ ನರ ತಂತುಗಳ ಗೊಂಚಲಿನಲ್ಲಿ ಅರ್ಧದಷ್ಟು ಇಳಿಕೆಯಾಗುತ್ತವೆ. ಕೆಲವು ರೋಗಿಗಳು ಕಣ್ಣೀರಿನ ಉತ್ಪಾದನೆಯು ದೀರ್ಘಕಾಲದಲ್ಲಿ ಇಳಿಕೆಯಾಗಿರುವುದಕ್ಕೆ ಬದಲಾಗಿ ಪ್ರತಿಕ್ರಿಯಾತ್ಮಕ ಕಣ್ಣೀರನ್ನು ಅನುಭವಿಸುತ್ತಾರೆ.
  • ಕಣ್ಣಿನ ಆರ್ದ್ರಚರ್ಮದ್ರವದ ಕೆಳಭಾಗದ ರಕ್ತಸ್ರಾವದ ಪ್ರಮಾಣವು 10.5% ರಷ್ಟಿದೆಯೆಂದು ಅಂದಾಜಿಸಲಾಗಿದೆ(ಚೀನಾದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ; ಈ ರೀತಿ, ಪರಿಣಾಮಗಳು ಸಾಮಾನ್ಯವಾಗಿ ಜನಾಂಗ ಅಥವಾ ಭೌಗೋಳಿಕ ಆಧಾರದ ಮೇಲೆ ಅನ್ವಯಿಸಬೇಕೆಂದೇನೂ ಇಲ್ಲ).

ಶಸ್ತ್ರಚಿತ್ಸೆಯ ನಂತರ ತಡವಾಗಿ ಉಂಟಾಗುವ ತೊಡಕುಗಳು

  • ಎಪಿತೀಲಿಯಲ್ ಒಳಬೆಳವಣಿಗೆಯ ಪ್ರಮಾಣವು 0.1% ನಷ್ಟಿದೆಯೆಂದು ಅಂದಾಜಿಸಲಾಗಿದೆ.
  • ಗ್ಲೆರ್(ತೀಕ್ಷ್ಣ ಪ್ರಕಾಶ), ಲಸಿಕ್ ಶಸ್ತ್ರಚಿಕಿತ್ಸೆಯಿಂದ ವರದಿಯಾದ ಮತ್ತೊಂದು ಸಾಮಾನ್ಯ ತೊಡಕು.
  • ರಾತ್ರಿಯಲ್ಲಿ ತೀಕ್ಷ್ಣವಾದ ಬೆಳಕಿನ ಸುತ್ತ ಕಾಣುವ ಹಾಲೋಸ್(ಸಣ್ಣ ಪ್ರಮಾಣದ ಕಿಡಿಯ ಗೋಚರ) ಅಥವಾ ಸ್ಟಾರ್ ಬರ್ಸ್ಟ್ಸ್ ಗಳು, ಲೇಸರ್ ನಿಂದ ಚಿಕಿತ್ಸೆಗೆ ಒಳಪಟ್ಟ ಭಾಗ ಹಾಗು ಒಳಪಡದ ಭಾಗದ ನಡುವಿನ ಅವ್ಯವಸ್ಥೆ ಇದಕ್ಕೆ ಕಾರಣವಾಗಿದೆ.

ಶಸ್ತ್ರಚಿಕಿತ್ಸೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಹೀಗಾಗಿ ರಾತ್ರಿ ಸಮಯದಲ್ಲಿ ಕಣ್ಣಿನ ಪಾಪೆಯು ಸಂಪೂರ್ಣವಾಗಿ ಹಿಗ್ಗಿರುತ್ತದೆ. ಜೊತೆಗೆ ಪಾಪೆಯು ಇನ್ನಷ್ಟು ಹಿಗ್ಗುವುದರಿಂದ ಬೆಳಕು ರಕ್ಷಣಾ ಕವಚದ ತುದಿಯಿಂದ ಪಾಪೆಯೊಳಗೆ ಹಾದು ಹೋಗಬಹುದು. ಬೆಳಗಿನ ಸಮಯದಲ್ಲಿ, ಪಾಪೆಯು ತುದಿಗಿಂತ ಸಣ್ಣದಾಗಿರುತ್ತದೆ. ದೊಡ್ಡ ಪಾಪೆಗಳನ್ನು ಹೊಂದಿರುವವರಿಗೆ ನೂತನ ಉಪಕರಣಗಳಿಂದ ನೀಡುವ ಚಿಕಿತ್ಸೆಯು ಸೂಕ್ತವಾಗಿದೆ. ಜೊತೆಗೆ ಜವಾಬ್ದಾರಿಯುತ ವೈದ್ಯರು ಕಣ್ಣನ್ನು ಪರೀಕ್ಷಿಸುವ ಸಮಯದಲ್ಲಿ ಇದನ್ನು ಪರಿಶೀಲಿಸುತ್ತಾರೆ.

  • ರಕ್ಷಣಾ ಕವಚದ ಸ್ಥಾನಪಲ್ಲಟದ ಹಾನಿಯು ತಡವಾಗಿ ಲಸಿಕ್ ಶಸ್ತ್ರಚಿಕಿತ್ಸೆಯ ನಂತರ 1-7 ವರ್ಷಗಳ ಅವಧಿಯಲ್ಲಿ ಸಂಭವಿಸಿರುವುದು ವರದಿಯಾಗಿದೆ.


  • ಕಣ್ಣಿನ ಶುಷ್ಕತೆ ಅಥವಾ ತೀವ್ರತರ ಪರಿಸ್ಥಿತಿಗಳಲ್ಲಿ ಉಂಟಾಗುವ ದೀರ್ಘಕಾಲದ ಕಣ್ಣಿನಲ್ಲಿನ ಶುಷ್ಕತೆ. ಲಸಿಕ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಣ್ಣಿನ ನರಗಳಿಗೆ ಹೆಚ್ಚಿನ ಹಾನಿಯಾಗುವುದರಿಂದ (70%ನಷ್ಟು ಪಾರದರ್ಶಕ ಪಟಲದ ನರಗಳು ಹಾನಿಗೊಳಗಾಗುತ್ತವೆ), ಕಣ್ಣಿನ ನುಣುಪಾದ ಪದರಿನ ವ್ಯವಸ್ಥೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಶಸ್ತ್ರಚಿಕಿತ್ಸೆಗೆ ಪೂರ್ವದ ಸ್ಥಿತಿಗೆ ನರಗಳು ಮತ್ತೆ ಮರಳುವುದಿಲ್ಲ. ಇದು ರೋಗಿಗಳಲ್ಲಿ ಸಂಭವನೀಯವಾಗಿ ಶಾಶ್ವತ ಕಣ್ಣಿನ ಶುಷ್ಕತೆಗೆ ಗುರಿ ಮಾಡಬಹುದು.

ಇತರೆ

ಲಸಿಕ್ ಹಾಗು ಇತರ ಲೇಸರ್ ವಕ್ರೀಕಾರಕ ಶಸ್ತ್ರಚಿಕಿತ್ಸಾ ವಿಧಾನಗಳು (ಉದಾಹರಣೆಗೆ PRK, LASEK ಹಾಗು ಎಪಿ-LASEK) ಕಾರ್ನಿಯಾದ ಮಾದರಿಯನ್ನೇ ಬದಲಾಯಿಸಿಬಿಡುತ್ತವೆ. ಈ ಬದಲಾವಣೆಗಳು ದೃಷ್ಟಿಮಾಪನಕಾರ ಹಾಗು ನೇತ್ರತಜ್ಞರಿಗೆ, ಕಣ್ಣಿನ ಒಳಗಿನ ತೊಂದರೆಯನ್ನು ನಿಖರವಾಗಿ ಮಾಪನ ಮಾಡಲು ತೊಂದರೆಯಾಗುತ್ತದೆ. ಈ ಮಾಪನವು ಗ್ಲೌಕೋಮ ಪರೀಕ್ಷಿಸಲು ಹಾಗು ಅದಕ್ಕೆ ಚಿಕಿತ್ಸೆ ನೀಡಲು ಅಗತ್ಯವಾಗಿದೆ. ಈ ಬದಲಾವಣೆಗಳು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯ ನಂತರ ಕಣ್ಣಿನ ಒಳಗೆ ಲೆನ್ಸ್ ಗಳನ್ನು ಸರಿಯಾಗಿ ಕೂಡಿಸುವುದಕ್ಕೆ ಮಾಡುವ ಮಾಪನಕ್ಕೂ ತೊಂದರೆಯಾಗಬಹುದು. ಇದನ್ನು ನೇತ್ರತಜ್ಞರು "ವಕ್ರೀಕಾರಕ ವಿಸ್ಮಯ" ಎಂದು ಕರೆಯುತ್ತಾರೆ. ವೃತ್ತಿಪರ ಕಣ್ಣಿನ ತಜ್ಞರಿಗೆ ನಿಮ್ಮ ಶಸ್ತ್ರಚಿಕಿತ್ಸೆಗೆ ಮುಂಚಿನ, ಶಸ್ತ್ರಚಿಕಿತ್ಸಾ ಅವಧಿಯ ಹಾಗು ಶಸ್ತ್ರಚಿಕಿತ್ಸಾ ನಂತರದ ಕಣ್ಣಿನ ಮಾಪನಗಳನ್ನು ಒದಗಿಸಿದರೆ ಕಣ್ಣುಗುಡ್ಡೆಯ ಒತ್ತಡ ಹಾಗು ಕಣ್ಣುಗುಡ್ಡೆಯ ಲೆನ್ಸ್ ನ ಸಾಮರ್ಥ್ಯವನ್ನು ಸರಿಯಾಗಿ ಗುರ್ತಿಸಬಹುದು.

ಆದಾಗ್ಯೂ, ಲಸಿಕ್ ತಂತ್ರಜ್ಞಾನದಲ್ಲಿ ಅಭಿವೃದ್ದಿಯಾಗಿದ್ದರೂ, ದೀರ್ಘಾವಧಿಯ ತೊಡಕಿನ ಬಗ್ಗೆ ದೀರ್ಘ ಕಾಲಿಕ ಪರಿಹಾರದ ನಿರ್ಣಾಯಕಗಳು ಇನ್ನೂ ದೃಢಪಟ್ಟಿಲ್ಲ. ಅಲ್ಲದೆ, ಒಂದು ಸಣ್ಣ ಮಟ್ಟದ ತೊಡಕುಗಳು ಸಹ ಉಂಟಾಗಬಹುದು, ಉದಾಹರಣೆಗೆ ದೃಷ್ಟಿಯಲ್ಲಿ ಅಸ್ಪಷ್ಟತೆ, ಹಾಲೋ(ಸಣ್ಣ ಪ್ರಮಾಣದ ಕಿಡಿಯ ಗೋಚರ), ಅಥವಾ ಗ್ಲೆರ್(ತೀಕ್ಷ್ಣ ಪ್ರಕಾಶ). ಇದರಲ್ಲಿ ಕೆಲವನ್ನು ಬದಲಾಯಿಸಲಾಗುವುದಿಲ್ಲ; ಏಕೆಂದರೆ ಲಸಿಕ್ ಕಣ್ಣಿನ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನೂ ಸಹ ಬದಲಾಯಿಸಲಾಗುವುದಿಲ್ಲ.

ಅಕ್ಷಿಪಟಲದ ರಂಧ್ರದ ಪ್ರಮಾಣವು ಶೇಕಡಾ 0.2 ರಿಂದ ಶೇಕಡಾ 0.3ರಷ್ಟಿದೆಯೆಂದು ಅಂದಾಜಿಸಲಾಗಿದೆ. ಅಕ್ಷಿಪಟದ ಬೇರ್ಪಡುವಿಕೆ ಯ ಪ್ರಮಾಣ ಶೇಕಡಾ 0.36ರಷ್ಟಿದೆಯೆಂದು ಅಂದಾಜಿಸಲಾಗಿದೆ. ಕೋರೈಡಲ್ ನಿಯೋವ್ಯಾಸ್ಕುಲರೈಸೆಶನ್ (ಕಣ್ಣುಗುಡ್ಡೆಯ ಕವಚದಲ್ಲಿನ ನಡುಪೊರೆಯ ರೂಪುಗೊಳ್ಳುವ ಹೊಸ ರಕ್ತ ಕಣಗಳು) ನ ಪ್ರಮಾಣವನ್ನು ಶೇಕಡಾ 0.33ರಷ್ಟಿದೆಯೆಂದು ಅಂದಾಜಿಸಲಾಗಿದೆ. ಯುವೆಟಿಸ್(ಕಣ್ಣಿನ ಮಧ್ಯ ಪದರದಲ್ಲಿ ಉಂಟಾಗುವ ಉರಿಯೂತ) ನ ಪ್ರಮಾಣವು ಶೇಕಡಾ 0.18ರಷ್ಟಿದೆಯೆಂದು ಅಂದಾಜಿಸಲಾಗಿದೆ.

ಜೀವಕೋಶದ ಹಂದರದ ಭಾಗವನ್ನು ತೆಗೆದುಹಾಕುವುದರಿಂದ, ಲಸಿಕ್ ನಂತರ ಕಾರ್ನಿಯಾ ಸಾಮಾನ್ಯವಾಗಿ ತೆಳುವಾಗುತ್ತದೆ.ಆದರೆ ವಕ್ರೀಕಾರಕ ಶಸ್ತ್ರಚಿಕಿತ್ಸಾ ತಜ್ಞರು ಕಾರ್ನಿಯಾ ರಚನೆಯಲ್ಲಿ ದುರ್ಬಲಗೊಳ್ಳುವುದನ್ನು ತಡೆಯಲು ಕನಿಷ್ಠ ದಪ್ಪವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಲಸಿಕ್ ರೋಗಿಗಳ ಕಣ್ಣಿಗೆ ಎತ್ತರದ ಪ್ರದೇಶದಲ್ಲಿನ ಕಡಿಮೆ ಒತ್ತಡದ ವಾತಾವರಣ ತುಂಬಾ ಅಪಾಯಕಾರಿಯಾಗಿಲ್ಲ, ಎಂಬುದನ್ನು ಇನ್ನೂ ಪ್ರಮಾಣಿಕರಿಸಿಲ್ಲ. ಆದಾಗ್ಯೂ, ಕೆಲವು ಪರ್ವತಾರೋಹಿಗಳು ಅತ್ಯಂತ ಎತ್ತರ ಪ್ರದೇಶಗಳಲ್ಲಿ ಸಮೀಪದೃಷ್ಟಿಯಲ್ಲಿ ಕೆಲವು ಸಾರಿ ಬದಲಾವಣೆಯನ್ನು ಅನುಭವಿಸಿದ್ದಾರೆ.

ಸುಮಾರು 40ವರ್ಷದ ನಂತರ ಬರುವ ಸಿತು ಕೆರಾಟೊಮೈಲೂಸಿಸ್ ಕಾರ್ನಿಯಾದಲ್ಲಿ ಅಕ್ಷಿಪಟಲದ ಏರಿಳಿತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಧಿಕ ಅಕ್ಷಿಪಟಲದ ಏರಿಳಿತವನ್ನು ಸಾಂಪ್ರದಾಯಿಕ ಕನ್ನಡಕಗಳು ಹೊಂದಾಣಿಕೆಯೊಂದಿಗೆ ಸರಿಪಡಿಸುವುದಿಲ್ಲ.

ಮೈಕ್ರೋಫೋಲ್ಡಿಂಗ್ ಅನ್ನು "ಲಸಿಕ್ ನಿಂದ ಬಹುಮಟ್ಟಿಗೆ ತಡೆಯಲಾಗದ ತೊಡಕು" ಎಂದು ವರದಿ ಮಾಡಲಾಗಿದೆ. ಇದರ "ವೈದ್ಯಕೀಯ ಮಹತ್ವವು ನಗಣ್ಯವಾಗುತ್ತದೆ ."

ಬ್ಲೇಫರಿಟಿಸ್, ಅಥವಾ ಕಣ್ರೆಪ್ಪೆಗಳು ಗಡುಸಾಗುವುದರಿಂದ ರೆಪ್ಪೆಗಳಲ್ಲಿ ಉಂಟಾಗುವ ಉರಿಯು, ಲಸಿಕ್ ಶಸ್ತ್ರಚಿಕಿತ್ಸೆಯ ನಂತರ ಕಾರ್ನಿಯಾದಲ್ಲಿ ಉರಿ ಅಥವಾ ಸೋಂಕು ತಗಲುವ ಹೆಚ್ಚಿನ ಸಾಧ್ಯತೆಗಳಿವೆ.[ಸೂಕ್ತ ಉಲ್ಲೇಖನ ಬೇಕು]

ಮೈಓಪಿಕ್ (ಸಮೀಪದೃಷ್ಟಿ) ಹೊಂದಿರುವ ಜನರಿಗೆ (ನಲವತ್ತರ ಮಧ್ಯಭಾಗದ ವಯಸ್ಸಿನ ಜನ) ಓದುವ ಕನ್ನಡಕಗಳು ಅಥವಾ ಬೈಫೋಕಲ್ ಕನ್ನಡಕಗಳ ಅವಶ್ಯಕತೆಯಿರುತ್ತದೆ. ಅವರು ವಕ್ರೀಕಾರಕ ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರೂ ಸಹ ಓದಲು ಕನ್ನಡಕದ ಸಹಾಯ ತೆಗೆದುಕೊಳ್ಳುತ್ತಾರೆ. ಎಮ್ಮೆಟ್ರೋಪಿಕ್ (ಕನ್ನಡಕದ ಸಹಾಯವಿಲ್ಲದೆ ನೋಡುವ ಜನ) ಹೊಂದಿರುವ ಜನರಿಗಿಂತ ಸಮೀಪದೃಷ್ಟಿ ಹೊಂದಿರುವ ಜನರಿಗೆ 40ರ ನಂತರ ಸಾಮಾನ್ಯವಾಗಿ ಓದುವ ಕನ್ನಡಕಗಳು ಅಥವಾ ಬೈಫೋಕಲ್ ಕನ್ನಡಕಗಳ ಅವಶ್ಯಕತೆಯಿರುತ್ತದೆ. ಆದರೆ ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟರೆ ಈ ಅನುಕೂಲದಿಂದ ವಂಚಿತರಾಗುತ್ತಾರೆ. ಇದು ಒಂದು ತೊಡಕಲ್ಲದಿದ್ದರೂ, ದೃಗ್ವಿಜ್ಞಾನದ ನಿಯಮದ ಪ್ರಕಾರ ಇದೊಂದು ನಿರೀಕ್ಷಿತ ಪರಿಣಾಮ. ಆದಾಗ್ಯೂ, ಈ ಗುಂಪಿಗೆ ಓದುವ ಕನ್ನಡಕಗಳ ಅವಶ್ಯಕತೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಯಾವುದೇ ವಿಧಾನವಿಲ್ಲ. ಆದರೆ ಲಸಿಕ್ ನ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಒಂದು ಮಾದರಿಯಾದ "ಸ್ಲೈಟ್ ಮೋನೋವಿಷನ್" ಶಸ್ತ್ರಕ್ರಿಯೆ ನಡೆಸಿ ಇದನ್ನು ತಗ್ಗಿಸಬಹುದು. ಈ ಪ್ರಕ್ರಿಯೆಯು, ದೂರದೃಷ್ಟಿ ದೋಷ ಸರಿಪಡಿಸುವ ಲಸಿಕ್ ಶಸ್ತ್ರಚಿಕಿತ್ಸೆಯಂತೆ ನಡೆಸಲಾಗುತ್ತದೆ. ಹೆಚ್ಚಿನ ದೃಷ್ಟಿ ಸಾಮರ್ಥ್ಯ ಹೊಂದಿರುವ ಕಣ್ಣನ್ನು ದೂರದೃಷ್ಟಿಯ ವೀಕ್ಷಣೆಗೆ ಹೊಂದಿಸಲಾಗುತ್ತದೆ, ಈ ನಡುವೆ ಕಡಿಮೆ ದೃಷ್ಟಿ ಸಾಮರ್ಥ್ಯ ಹೊಂದಿರುವ ಕಣ್ಣನ್ನು ರೋಗಿಯ ಓದುವ ಕನ್ನಡಕಗಳಿಗೆ ವೈದ್ಯರು ನೀಡಿದ ಲಿಖಿತ ಸೂಚಿಯ ಆಧಾರದ ಮೇಲೆ ಹೊಂದಿಸಲಾಗುತ್ತದೆ. ಇದು ರೋಗಿಗಳಿಗೆ ಬೈಫೋಕಲ್ ಧರಿಸಿದಾಗ ಅನುಭವಕ್ಕೆ ಬರುವ ಸದೃಶ ಅನುಭವ ನೀಡುತ್ತದೆ. ರೋಗಿಗಳಲ್ಲಿ ಹೆಚ್ಚಿನವರು ಈ ಪ್ರಕ್ರಿಯೆಯನ್ನು ತುಂಬಾ ಚೆನ್ನಾಗಿ ಎದುರಿಸುವುದರ ಜೊತೆಗೆ ಸಮೀಪ ಹಾಗು ದೂರ ದೃಷ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಗುರುತಿಸುವುದಿಲ್ಲ. ಆದಾಗ್ಯೂ ಕೆಲವರು ಮೋನೋವಿಷನ್ ಪರಿಣಾಮಕ್ಕೆ ಹೊಂದಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಇದನ್ನು ಶಸ್ತ್ರಚಿಕಿತ್ಸೆಗೆ ಹಲವಾರು ದಿನಗಳ ಮುಂಚಿತವಾಗಿ ಕಾಂಟಾಕ್ಟ್ ಲೆನ್ಸ್ ಧರಿಸಿ ಮೋನೋವಿಷನ್ ಪರಿಣಾಮವನ್ನು ಕೃತಕವಾಗಿ ಅನುಭವಿಸಬಹುದು. ಇತ್ತೀಚಿಗೆ, ಲೇಸರ್ ಶಸ್ತ್ರಚಿಕಿತ್ಸೆಯ ಒಂದು ಮಾದರಿಯಾದ ಪ್ರೆಸ್ಬಿಲಸಿಕ್ಎಂಬ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ದೂರ ದೃಷ್ಟಿಯನ್ನು ಉಳಿಸಿಕೊಂಡು ಓದುವ ಕನ್ನಡಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಅಥವಾ ಉಪೇಕ್ಷಿಸುತ್ತದೆ.

ಲಸಿಕ್ ಶಸ್ತ್ರಚಿಕಿತ್ಸೆಯ ನಂತರ ಕಾರ್ನಿಯಲ್ ಕೆರಟೋಸೈಟ್ ಸ್ (ಫೈಬ್ರೋಬ್ಲಾಸ್ಟ್ಸ್) ನ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ವರದಿಯಾಗಿದೆ.

ಶಸ್ತ್ರಚಿಕಿತ್ಸೆಗೆ ಎದುರಾಗುವ ಅಂಶಗಳು

ವಿಶಿಷ್ಟವಾಗಿ, ಕಾರ್ನಿಯಾ(ಪಾರದರ್ಶಕ ಪಟಲ)ನಾಳಗಳನ್ನು ಹೊಂದಿರುವುದಿಲ್ಲ ಏಕೆಂದರೆ ಅವುಗಳು ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಪಾರದರ್ಶಕವಾಗಿರಬೇಕು, ಜೊತೆಗೆ ಅದರ ಕೋಶಗಳು ಕಣ್ಣೀರ ಪದರ ದಿಂದ ಆಮ್ಲಜನಕವನ್ನು ಹೀರುತ್ತವೆ.

ಹೀಗಾಗಿ, ಕಡಿಮೆ-ಆಮ್ಲಜನಕ-ಒಳಹೋಗಬಲ್ಲ ಕಾಂಟಾಕ್ಟ್ ಲೆನ್ಸ್ ಗಳು ಕಾರ್ನಿಯಾ ಆಮ್ಲಜನಕವನ್ನು ಹೀರುವುದನ್ನು ಕಡಿಮೆ ಮಾಡುತ್ತವೆ. ಕೆಲವೊಂದು ಬಾರಿ ಕಾರ್ನಿಯಲ್ ನಿಯೋ ವ್ಯಾಸ್ಕುಲರೈಸೆಶನ್ ಗೆ ಕಾರಣವಾಗುತ್ತದೆ-ಕಾರ್ನಿಯಾದ ಒಳಗೆ ರಕ್ತನಾಳಗಳ ಬೆಳವಣಿಗೆ. ಇದು ಉರಿಯೂತದ ಅವಧಿಯನ್ನು ಹಾಗು ಗುಣವಾಗುವ ಸಮಯವನ್ನು ಸ್ವಲ್ಪಮಟ್ಟಿಗೆ ದೀರ್ಘವಾಗುವಂತೆ ಮಾಡುತ್ತದೆ ಜೊತೆಗೆ ಹೆಚ್ಚಿನ ರಕ್ತಸ್ರಾವದಿಂದಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವುಂಟಾಗುತ್ತದೆ.

ಆದಾಗ್ಯೂ ಕೆಲವು ಕಾಂಟಾಕ್ಟ್ ಲೆನ್ಸ್ ಗಳನ್ನು (ವಿಶೇಷವಾಗಿ ನೂತನ RGP ಹಾಗು ಮೆದು ಸಿಲಿಕಾನ್ ಹೈಡ್ರೋಜೆಲ್ ಲೆನ್ಸ್ ಗಳು) ಹೆಚ್ಚಿನ ಆಮ್ಲಜನಕ ಒಳಗೊಳ್ಳುವ ವಸ್ತುಗಳಿಂದ ತಯಾರು ಮಾಡಲಾಗುತ್ತದೆ. ಇದು ಕಾರ್ನಿಯಾದ ನಿಯೋ ವ್ಯಾಸ್ಕ್ಯುಲರೈಸೆಶನ್ ನ ಅಪಾಯವನ್ನು ಕಡಿಮೆ ಮಾಡುತ್ತದೆ. ಲಸಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ರೋಗಿಗಳಿಗೆ ಕಾಂಟಾಕ್ಟ್ ಲೆನ್ಸ್ ಗಳನ್ನು ಜಾಸ್ತಿ ಧರಿಸುವುದನ್ನು ತಡೆಗಟ್ಟಲು ಸೂಚಿಸಲಾಗುತ್ತದೆ. ಸಾಮಾನ್ಯವಾಗಿ, ಲಸಿಕ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವ ಕೆಲವು ದಿನಗಳ ಅಥವಾ ಕೆಲವು ವಾರಗಳ ಮುಂಚೆ ಕಾಂಟಾಕ್ಟ್ ಲೆನ್ಸ್ ಧರಿಸುವುದನ್ನು ನಿಲ್ಲಿಸಲು ಶಿಫಾರಸು ಮಾಡಲಾಗುತ್ತದೆ.

ವಯಸ್ಸಿನ ಪರಿಗಣನೆ

ಕಣ್ಣಿನ ದೋಷ ಸರಿಪಡಿಸುವ ಶಸ್ತ್ರಚಿಕಿತ್ಸೆಯ ಹೊಸ ಆವಿಷ್ಕಾರಗಳು ರೋಗಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತಿದೆ. ತಮ್ಮ ದೃಷ್ಟಿದೋಷವನ್ನು LASIK ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳಲು ಇಚ್ಚಿಸುವ 40 ರಿಂದ 50 ವರ್ಷದೊಳಗಿನ ರೋಗಿಗಳು ಕಣ್ಣಿನೊಳಗೆ ಸೇರಿಸಬಹುದಾದ ಲೆನ್ಸ್ ಗಳ ಬಗೆಗೂ ಯೋಚಿಸಬಹುದು. "ಕಣ್ಣಿನ ಪೊರೆಯ ಮೊದಲ ಚಿಹ್ನೆಯು ಶಸ್ತ್ರಚಿಕಿತ್ಸೆಯನ್ನು ಸೂಚಿಸುವುದರ ಜೊತೆಗೆ ಪರ್ಯಾಯವಾಗಿ ಮಲ್ಟಿಫೋಕಲ್ ಲೆನ್ಸ್ ಗಳ ಒಳಜೋಡಣೆಯನ್ನು ಸೂಚಿಸುತ್ತದೆ."

FDA lasik(ಲಸಿಕ್)ಶಸ್ತ್ರಚಿಕಿತ್ಸೆಯನ್ನು 18 ವರ್ಷ ಹಾಗು ಅದಕ್ಕೂ ಮೇಲ್ಪಟ್ಟವರಿಗೆ ನಡೆಸಲು ಅಂಗೀಕರಿಸಿದೆ. ಮುಖ್ಯವಾಗಿ, ಕಡೆ ಪಕ್ಷ ಶಸ್ತ್ರಚಿಕಿತ್ಸೆಗೆ ಒಂದು ವರ್ಷ ಮುಂಚಿತವಾಗಿ ವೈದ್ಯರಿಂದ ದೊರೆತ ರೋಗಿಯ ಕಣ್ಣಿನ ವಿವರ ಲಿಖಿತ ಸೂಚಿ ಸ್ಥಿರವಾಗಿರಬೇಕು.

ಇವನ್ನೂ ನೋಡಿ

  • ಆಟೋಮೇಟೆಡ್ ಲಮೆಲ್ಲೆರ್ ಕೆರಟೋಪ್ಲಾಸ್ಟಿ
  • ಕಣ್ಣಿನ ಶಸ್ತ್ರಚಿಕಿತ್ಸೆ
  • LASEK(ಲೇಸರ್-ಅಸ್ಸಿಸ್ಟೆಡ್ ಸಬ್-ಎಪಿ ಥೆಲಿಯಲ್ ಕೆರಾಟೆಕ್ಟಮಿ) ಅಥವಾ PRK (ಫೋಟೋರಿಫ್ರಾಕ್ಟಿವ್ ಕೆರಾಟೆಕ್ಟಮಿ)
  • ರೇಡಿಯಲ್ ಕೆರಟೋಟಮಿ
  • ವಕ್ರೀಕಾರಕ ದೋಷ
  • ವಕ್ರೀಕಾರಕ ಶಸ್ತ್ರಚಿಕಿತ್ಸೆ
  • ತರಂಗಮುಖ

ಆಕರಗಳು

    Dolores Ortiz, Carlos Illueca, Jorge L. Alió (1 January 2008). "PresbyLASIK versus multifocal refractive IOLs". Ophthalmology Times Europe. Retrieved 2008-10-24.{{cite web}}: CS1 maint: multiple names: authors list (link)
      Epstein RL, Gurgos MA (2009). "Presbyopia treatment by monocular peripheral presbyLASIK". J Refract Surg. 25 (6): 516–23. PMID 19603619. ;

ಬಾಹ್ಯ ಕೊಂಡಿಗಳು

  1. REDIRECT Template:Eye procedures

Tags:

Lasik ಲಸಿಕ್ ತಂತ್ರಜ್ಞಾನLasik ಲಸಿಕ್ ಕಾರ್ಯವಿಧಾನLasik ಲಸಿಕ್ ಅಧಿಕಪ್ರಮಾಣದಲ್ಲಿ ಅಕ್ಷಿಪಟಲದ ಏರಿಳಿತLasik ಲಸಿಕ್ ಲಸಿಕ್ ಶಸ್ತ್ರಚಿಕಿತ್ಸೆ ಫಲಿತಾಂಶLasik ಲಸಿಕ್ ಸುರಕ್ಷತೆ ಹಾಗು ಸಫಲತೆLasik ಲಸಿಕ್ ರೋಗಿಯ ಅಸಂತೃಪ್ತಿLasik ಲಸಿಕ್ ಸಂಭಾವ್ಯ ತೊಡಕುಗಳುLasik ಲಸಿಕ್ ಇವನ್ನೂ ನೋಡಿLasik ಲಸಿಕ್ ಆಕರಗಳುLasik ಲಸಿಕ್ ಬಾಹ್ಯ ಕೊಂಡಿಗಳುLasik ಲಸಿಕ್ಲೇಸರ್

🔥 Trending searches on Wiki ಕನ್ನಡ:

ಯಜಮಾನ (ಚಲನಚಿತ್ರ)ವಿವಾಹಸಮಾಜ ವಿಜ್ಞಾನತ್ರಯಂಬಕಂ (ಚಲನಚಿತ್ರ)ಪರಿಸರ ಕಾನೂನುಕರ್ನಾಟಕದ ಮುಖ್ಯಮಂತ್ರಿಗಳುಕಲ್ಯಾಣಿಬಬ್ರುವಾಹನಐಹೊಳೆಜೋಡು ನುಡಿಗಟ್ಟುಕಿತ್ತೂರು ಚೆನ್ನಮ್ಮದೇವತಾರ್ಚನ ವಿಧಿಕೆ. ಎಸ್. ನಿಸಾರ್ ಅಹಮದ್ಸೀತೆವಿಜಯಾ ದಬ್ಬೆಭೋವಿಆಗಮ ಸಂಧಿಅಮೃತಬಳ್ಳಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹಣಭಾರತೀಯ ಸ್ಟೇಟ್ ಬ್ಯಾಂಕ್ಮೇಲುಮುಸುಕುಭೂಮಿ ದಿನಮಣ್ಣುಮುಕ್ತಾಯಕ್ಕಭಾರತದ ಇತಿಹಾಸಶಿವಮೊಗ್ಗವಿಲಿಯಂ ಷೇಕ್ಸ್‌ಪಿಯರ್ಪ್ರಬಂಧ ರಚನೆಭಾರತದಲ್ಲಿ ಪಂಚಾಯತ್ ರಾಜ್ಕರ್ನಾಟಕ ಸಂಗೀತವಿಜಯನಗರ ಸಾಮ್ರಾಜ್ಯಆಳಂದ (ಕರ್ನಾಟಕ)ಆಸ್ಪತ್ರೆಆದೇಶ ಸಂಧಿಶನಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕೃಷ್ಣಬೆಂಡೆನವಿಲಗೋಣು1935ರ ಭಾರತ ಸರ್ಕಾರ ಕಾಯಿದೆಜೇನುಚಾಲುಕ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಾಗಲಕೋಟೆ ಲೋಕಸಭಾ ಕ್ಷೇತ್ರನ್ಯೂಟನ್‍ನ ಚಲನೆಯ ನಿಯಮಗಳುಸ್ವಾಮಿ ವಿವೇಕಾನಂದದ್ವಾರಕೀಶ್ನೀಲಾಂಬಿಕೆನರೇಂದ್ರ ಮೋದಿದಲಿತಲೋಲಿತಾ ರಾಯ್ಲೋಪಸಂಧಿಜಲ ಮಾಲಿನ್ಯಜಾಗತಿಕ ತಾಪಮಾನ ಏರಿಕೆಕಲಿಯುಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಭಾರತದ ಮುಖ್ಯಮಂತ್ರಿಗಳುಮೈಸೂರು ಸಂಸ್ಥಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಲೆನಾಡುಕೈಮಗ್ಗಗೂಬೆಮದುವೆಪ್ರಬಂಧಸ್ವಚ್ಛ ಭಾರತ ಅಭಿಯಾನಬಾಳೆ ಹಣ್ಣುವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಮಾನವನ ವಿಕಾಸದೇವರ/ಜೇಡರ ದಾಸಿಮಯ್ಯಕಾಳಿದಾಸಚುನಾವಣೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಕ್ಯಾರಿಕೇಚರುಗಳು, ಕಾರ್ಟೂನುಗಳುತ್ರಿಕೋನಮಿತಿಯ ಇತಿಹಾಸಹಿಂದೂ ಧರ್ಮಚಾಮುಂಡರಾಯ🡆 More