ಮನ್ನಾರ್ಗುಡಿ: ಭಾರತದ ತಮಿಳುನಾಡಿನ ಪಟ್ಟಣ

ಮನ್ನಾರ್ಗುಡಿ ತಮಿಳುನಾಡಿನ ತಿರುವರೂರ್ ಜಿಲ್ಲೆಯ ಒಂದು ಪಟ್ಟಣ.

ಇದು ತಿರುವರೂರಿಂದ ೨೦ ಕಿ.ಮೀ ದೂರದಲ್ಲಿದೆ ಮತ್ತು ಚೆನ್ನೈಯಿಂದ ೩೧೦ ಕಿ.ಮೀ ದೂರದಲ್ಲಿದೆ. ಮನ್ನಾರ್ಗುಡಿ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೆಸರುವಾಗಿದೆ. ಈ ಪಟ್ಟಣವನ್ನು ಚೋಳರು, ವಿಜಯನಗರ ಸಾಮ್ರಾಜ್ಯ, ದೆಹಲಿ ಸುಲ್ತಾನರು, ತಂಜಾವೂರು ನಾಯಕರು ಮತ್ತು ಬ್ರಿಟೀಷರು ಆಳಿದ್ದಾರೆ. ಈ ಊರನ್ನು ತಲುಪಲು ರಸ್ತೆ ಮಾರ್ಗಗಳನ್ನು ಪ್ರಮುಖವಾಗಿ ಬಳಸುತ್ತಾರೆ. ರೈಲು ಸಂಪರ್ಕಗಳನ್ನು ಕೂಡ ಈ ನಗರ ಹೊಂದಿದೆ. ಹತ್ತಿರದ ನಾಗಪಟ್ಟಣಂ ಬಂದರು ಮನ್ನಾರ್ಗುಡಿಯಿಂದ ೫೨ಕಿ.ಮೀ ದೂರದಲ್ಲಿದೆ. ತಿರುಚಿರಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮನ್ನಾರ್ಗುಡಿಯಿಂದ ೯೭ಕಿ.ಮೀ ದೂರದಲ್ಲಿದೆ.

ಮನ್ನಾರ್ಗುಡಿ: ವ್ಯುತ್ಪತ್ತಿ, ಆರ್ಥಿಕತೆ, ಸಂಸ್ಕೃತಿ
ಮನ್ನಾರ್ಗುಡಿ ರಾಜಗೋಪಾಲಸ್ವಾಮಿ ದೇವಸ್ಥಾನ

ವ್ಯುತ್ಪತ್ತಿ

ಮನ್ನಾರ್ಗುಡಿ ಪದವು ಮನ್ನಾರ್ ಎಂಬ ತಮಿಳು ಪದದಿಂದ ಬಂದಿದೆ. ಮನ್ನಾರ್ ಎಂದರೆ ವಿಷ್ಣು ಎಂದು ಸೂಚಿಸುತ್ತದೆ ಮತ್ತು ಗುಡಿ ಒಂದು ಸ್ಥಳವನ್ನು ಸೂಚಿಸುತ್ತದೆ. ಆದ್ದರಿಂದ ಮನ್ನಾರ್ಗುಡಿ ಎಂದರೆ 'ವಿಷ್ಣುವಿನ ಸ್ಥಳ'. ಈ ಪಟ್ಟಣವನ್ನು ಮನ್ನರ್ಕೋವಿಲ್ ಅಥವಾ ರಾಜಮನ್ನರ್ಕೋಯಿಲ್ ಎಂದು ಕರೆಯಲಾಗುತ್ತಿತ್ತು. ಹಿಂದು ಧರ್ಮದವರು ಈ ಸ್ಥಳವನ್ನು ದಕ್ಷಿಣ ದ್ವಾರಕಾ ಎಂದು ಕರೆಯುತ್ತಿದ್ದರು.

ಆರ್ಥಿಕತೆ

ಕೃಷಿ ಇಲ್ಲಿನ ಪ್ರಮುಖ ಉದ್ಯೋಗವಾಗಿದೆ. ಮನ್ನಾರ್ಗುಡಿ ಬಟ್ಟೆ ನೇಯ್ಗೆ ಮತ್ತು ಲೋಹದ ಕೈಗಾರಿಕೆಗಳಿಗೂ ಕೂಡ ಹೆಸರುವಾಸಿಯಾಗಿದೆ. ಇದು ಕೃಷಿ ಪ್ರಧಾನ ಪಟ್ಟಣವಾಗಿರುವುದರಿಂದ, ಮನ್ನಾರ್ಗುಡಿಯ ಆರ್ಥಿಕತೆಯು ಹೆಚ್ಚಾಗಿ ಕೃಷಿ ಆದಾಯವನ್ನು ಅವಲಂಬಿಸಿದೆ. ಭತ್ತ, ಹತ್ತಿ, ಕಬ್ಬು ಮತ್ತು ದ್ವಿದಳ ಧಾನ್ಯಗಳಾದ ಉರಾದ್ ಹಾಗೂ ಮುಂಗ್ ಹುರುಳಿಯನ್ನು ಬೆಳೆಯುತ್ತಾರೆ. ಕೃಷಿ ಪ್ರದೇಶವು ಕೊರೈಯಾರು, ಮುಲ್ಲೈಯರ್, ಪಮಾನಿಯಾರ್ ನದಿಗಳ ಮೇಲೆ ಅವಲಂಬಿತವಾಗಿದೆ. ಪಟ್ಟಣದ ಸುತ್ತಮುತ್ತ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ, ಆದರೆ ಕಬ್ಬಿನ ಕಾರ್ಖಾನೆ, ರಸಗೊಬ್ಬರ ಉದ್ಯಮ, ಬಿಯರ್ ಕಾರ್ಖಾನೆ ಮತ್ತು ರಾಸಾಯನಿಕ ಕಾರ್ಖಾನೆಯಂತಹ ಕೆಲವು ಸಣ್ಣ ಪ್ರಮಾಣದ ಕೈಗಾರಿಕೆಗಳು ಪಟ್ಟಣದಲ್ಲಿ ಇವೆ.

ಸಂಸ್ಕೃತಿ

ಮನ್ನಾರ್ಗುಡಿ: ವ್ಯುತ್ಪತ್ತಿ, ಆರ್ಥಿಕತೆ, ಸಂಸ್ಕೃತಿ 
ಮನ್ನಾರ್ಗುಡಿ ಮಲ್ಲಿನಾಥ ದೇವಾಸ್ಥಾನ

ಮನ್ನಾರ್ಗುಡಿಯಲ್ಲಿ ಮುಖ್ಯವಾಗಿ ಮೂರು ದೇವಸ್ಥಾನಗಳಿವೆ, ಜಯಮ್ಗೊಂಡನಾಥ ದೇವಸ್ಥಾನ, ರಜತಿ ರಾಜೇಶ್ವರ ದೇವಸ್ಥಾನ, ರಾಜಗೋಪಾಲಸ್ವಾಮಿ ದೇವಸ್ಥಾನ. ರಾಜಗೋಪಾಲಸ್ವಾಮಿ ದೇವಸ್ಥಾನವು ಪಟ್ಟಣದ ಪ್ರಮುಖ ಹೆಗ್ಗುರುತಾಗಿದೆ. ಪಂಗುಣಿಯ ತಮಿಳು ತಿಂಗಳಲ್ಲಿ (ಮಾರ್ಚ್- ಎಪ್ರಿಲ್) ದೇವಾಲಯದ ಪ್ರಮುಖ ಹಬ್ಬವಾದ ಪಂಗುನಿತ್ ತಿರಿವುಝವನ್ನು ಆಚರಿಸಲಾಗುತ್ತದೆ. ತಮಿಳಿನ ಆನಿ ತಿಂಗಳಲ್ಲಿ (ಜೂನ್-ಜುಲೈ) ತೆಪ್ಪೋತ್ಸವಂ ಎಂಬ ಹಬ್ಬವನ್ನು ಆಚರಿಸುತ್ತಾರೆ. ತಮಿಳಿನ ಆದಿ ತಿಂಗಳಲ್ಲಿ (ಜುಲೈ- ಆಗಸ್ಟ್) ರಥ ಹಬ್ಬವಾದ ಆದಿಪೂರಂ ಅನ್ನು ಆಚರಿಸುತ್ತಾರೆ. ಈ ಹಬ್ಬಗಳು ದೇವಸ್ಥಾನದ ಪ್ರಮುಖ ಆಚರಣೆಗಳಾಗಿವೆ. ೧೫ನೇ ಶತಮಾನದಲ್ಲಿ ನಾಯಕ್ ರಾಜರು ದೇವಾಲಯಗಳಲ್ಲಿ ಸಂಗೀತವನ್ನು ಉತ್ತೇಜಿಸಿದರು. ಮುಖಾವಿನ, ದಾಂಡೆ, ಕೊಂಬು, ಚಂಧ್ರವಾಳಯ, ಭೇರಿ ಮತ್ತು ನಾಗಸ್ವರಂ, ಹೀಗೆ ಮುಂತಾದ ಸಾಧನಗಳನ್ನು ದೇವಾಲಯದ ಸೇವೆಗಳಿಗೆ ಬಳಸಲಾಗುತ್ತಿತ್ತು. ಮನ್ನಾರ್ಗುಡಿ ಯ ನಾಲ್ಕು ಮಸೀದಿಗಳು ಥೆರಾಡಿ, ಕೀಲಾ ರಾಜ ವೀತಿ, ಬಿಗ್ ಬಜಾರ್ ಸ್ಟ್ರೀಟ್ ಮತ್ತು ತಮರಿ ಕುಜ್ಲಂ ವಡ ಕರೈನಲ್ಲಿದೆ. ಮಲ್ಲಿನಾಥ ದೇವಾಸ್ಥಾನವು ಇಲ್ಲಿನ ಜೈನ ದೇವಸ್ಥಾನ. ಮಲ್ಲಿನಾಥರ್ ಜೈನ ಧರ್ಮದ ೧೯ನೇ ತೀರ್ಥಂಕರ. ಹನ್ನೆರಡನೆ ಶತಮಾನದಲ್ಲಿ ಚೋಳ ವಂಶದವರು ಆಳ್ವಿಕೆಯಲ್ಲಿ ಇರುವಾಗ ಈ ದೇವಸ್ಥಾನವನ್ನು ಕಟ್ಟಿದರು ಮತ್ತು ಈ ದೇವಾಸ್ಥಾನವು ರಾಜ್ಯದ ಪ್ರಮುಖ ಪ್ರಾಚೀನ ಜೈನ ದೇವಾಲಯಗಳಲ್ಲಿ ಒಂದಾಗಿದೆ. ಮಲ್ಲಿನಾಥರ್ ವಿಗ್ರಹದ ಹೊರತಾಗಿ ಇಲ್ಲಿ ಧರ್ಮದೇವಿ, ಸರಸ್ವತಿ ದೇವಿ,ಪದ್ಮಾವತಿ ದೇವಿ, ಜವಲವಳಿನಿ ಅಮ್ಮನ್ ವಿಗ್ರಹಗಳಿವೆ. ವಾಡುವೂರ್ ಪಕ್ಷಿಧಾಮವು ಮನ್ನಾರ್ಗುಡಿಯ ಆಕರ್ಷಿಣೀಯ ಸ್ಥಳವಾಗಿದೆ. ಮುತ್ತುಪೇಟ್ ಲಗೂನ್ ಮ್ಯಾಂಗ್ರೂವ್ ಅರಣ್ಯ ಪಟ್ಟಣದ ಮತ್ತೊಂದು ಆರ್ಷಣೀಯ ಸ್ಥಳವಾಗಿದೆ.

ಶಿಕ್ಷಣ ಸಂಸ್ಥೆಗಳು

ಮನ್ನಾರ್ಗುಡಿಯಲ್ಲಿ ೧೭ ಶಾಲೆಗಳು ಮತ್ತು ಮೂರು ಕಲಾ ಕಾಲೇಜುಗಳಿವೆ. ೧೮೪೫ರಲ್ಲಿ ವೆಸ್ಲಿಯನ್ ಮಿಷನ್ ಸ್ಥಾಪಿಸಿದ ಫೈಂಡ್ಲೇ ಹೈಯರ್ ಸೆಕೆಂಡರಿ ಶಾಲೆ, ಇಲ್ಲಿನ ಹಳೆಯ ಶಿಕ್ಷಣ ಸಂಸ್ಥೆಯಾಗಿದೆ. ಇದನ್ನು ೧೮೯೮ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಜೊತೆ ಸಂಯೋಜಿಸಲಾಗಿದೆ. ಮನ್ನೈ ರಾಜಗೋಪಾಲಸ್ವಾಮಿ ಸರ್ಕಾರಿ ಕಲಾ ಕಾಲೇಜು ಮತ್ತು ಸೆಂಗಮಾಲಾ ಥಾಯರ್ ಎಜುಕೇಶನಲ್ ಟ್ರಸ್ಟ್ ಮಹಿಳಾ ಕಾಳೇಜು ಮನ್ನಾರ್ಗುಡಿಯ ಎರಡು ಕಾಲೇಜುಗಳು.

ಉಲ್ಲೇಖಗಳು

Tags:

ಮನ್ನಾರ್ಗುಡಿ ವ್ಯುತ್ಪತ್ತಿಮನ್ನಾರ್ಗುಡಿ ಆರ್ಥಿಕತೆಮನ್ನಾರ್ಗುಡಿ ಸಂಸ್ಕೃತಿಮನ್ನಾರ್ಗುಡಿ ಶಿಕ್ಷಣ ಸಂಸ್ಥೆಗಳುಮನ್ನಾರ್ಗುಡಿ ಉಲ್ಲೇಖಗಳುಮನ್ನಾರ್ಗುಡಿಚೆನ್ನೈಚೋಳತಂಜಾವೂರುತಮಿಳುನಾಡುದೆಹಲಿ ಸುಲ್ತಾನರುಪಟ್ಟಣವಿಜಯನಗರ ಸಾಮ್ರಾಜ್ಯ

🔥 Trending searches on Wiki ಕನ್ನಡ:

ನಿರ್ವಹಣೆ ಪರಿಚಯಪಾಕಿಸ್ತಾನಅರಳಿಮರಸಾರಜನಕಅವರ್ಗೀಯ ವ್ಯಂಜನಸಂಚಿ ಹೊನ್ನಮ್ಮಮೊದಲನೆಯ ಕೆಂಪೇಗೌಡಮಲೆನಾಡುಶಿವಸಣ್ಣ ಸಿಡುಬುಜಕಣಾಚಾರಿರಾಷ್ಟ್ರೀಯತೆಡಾ ಬ್ರೋಹಬ್ಬಮಂಟೇಸ್ವಾಮಿಆದಿ ಶಂಕರಬೆಳಗಾವಿಜೀವಕೋಶಕನ್ನಡ ಸಾಹಿತ್ಯಸಂಯುಕ್ತ ರಾಷ್ಟ್ರ ಸಂಸ್ಥೆಪ್ರವಾಹವೇದಪಿತ್ತಕೋಶಭಾರತೀಯ ಶಾಸ್ತ್ರೀಯ ನೃತ್ಯಕಾಂತಾರ (ಚಲನಚಿತ್ರ)ಬರವಣಿಗೆಸೋಮನ ಕುಣಿತಪೂರ್ಣಚಂದ್ರ ತೇಜಸ್ವಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಉಡಅಲ್ಲಮ ಪ್ರಭುಜಯಂತ ಕಾಯ್ಕಿಣಿಕಂದಮೆಕ್ಕೆ ಜೋಳಅಜಂತಾನೀಲಿ ಚಿತ್ರಭಾಷೆಶಿಶುನಾಳ ಶರೀಫರುಬಹುವ್ರೀಹಿ ಸಮಾಸಭಾರತಬ್ಲಾಗ್ದ್ರೌಪದಿ ಮುರ್ಮುಅಕ್ಬರ್ದೇವತಾರ್ಚನ ವಿಧಿತಂತ್ರಜ್ಞಾನದ ಉಪಯೋಗಗಳುಗಣರಾಜ್ಯೋತ್ಸವ (ಭಾರತ)ಚಿಪ್ಕೊ ಚಳುವಳಿಪಠ್ಯಪುಸ್ತಕಮೌರ್ಯ ಸಾಮ್ರಾಜ್ಯಬಡ್ಡಿಮಳೆಗಾಲವ್ಯವಸಾಯರೈತಭಾರತದ ರಾಷ್ಟ್ರಪತಿರಾಮಮೈಸೂರುಕವಿರಾಜಮಾರ್ಗಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪ್ರಜ್ವಲ್ ರೇವಣ್ಣಉಪನಯನಆಭರಣಗಳುಶಬ್ದ ಮಾಲಿನ್ಯಮಸೂರ ಅವರೆಕರ್ನಾಟಕದ ಹಬ್ಬಗಳುಹೊಂಗೆ ಮರದಶಾವತಾರಬುದ್ಧಿಸ್ವಾಮಿ ವಿವೇಕಾನಂದಕಾಮಸೂತ್ರನೆಲ ಮಾಲಿನ್ಯನಾಟಕಸಂಭೋಗಮೌರ್ಯ (ಚಲನಚಿತ್ರ)ಸಮಾಸಹಣದುಬ್ಬರಹರ್ಬರ್ಟ್ ಸ್ಪೆನ್ಸರ್ಕೋವಿಡ್-೧೯🡆 More