ಪಂಜು

ಪಂಜು ಎಂದರೆ ಒಂದು ತುದಿಯಲ್ಲಿ ದಹನಶೀಲ ವಸ್ತುವನ್ನು ಹೊಂದಿರುವ ಕಡ್ಡಿ.

ಈ ತುದಿಗೆ ಬೆಂಕಿ ಹಚ್ಚಿ ಬೆಳಕಿನ ಮೂಲವಾಗಿ ಬಳಸಲಾಗುತ್ತದೆ. ಪಂಜುಗಳನ್ನು ಇತಿಹಾಸದಾದ್ಯಂತ ಬಳಸಲಾಗಿದೆ, ಮತ್ತು ಈಗಲೂ ಮೆರವಣಿಗೆಗಳು, ಸಾಂಕೇತಿಕ ಹಾಗೂ ಧಾರ್ಮಿಕ ಸಮಾರಂಭಗಳು, ಮತ್ತು ಜಗ್ಲಿಂಗ್ ಮನೊರಂಜನೆಯಲ್ಲಿ ಬಳಸಲಾಗುತ್ತದೆ.

ಪಂಜು

ಪಂಜಿನ ನಿರ್ಮಾಣವು ಪಂಜಿನ ಉದ್ದೇಶವನ್ನು ಅವಲಂಬಿಸಿ ಇತಿಹಾಸದುದ್ದಕ್ಕೆ ಬದಲಾಗಿದೆ. ಪಂಜುಗಳನ್ನು ಸಾಮಾನ್ಯವಾಗಿ ಕಟ್ಟಿಗೆಯ ಪಟ್ಟಿಯಿಂದ ನಿರ್ಮಿಸಲಾಗುತ್ತಿತ್ತು ಮತ್ತು ಒಂದು ತುದಿಯನ್ನು ದಹ್ಯ ಸಾಮಗ್ರಿಯಲ್ಲಿ ಅದ್ದಲಾದ ವಸ್ತುವಿನಿಂದ ಸುತ್ತಲಾಗುತ್ತಿತ್ತು. ಪ್ರಾಚೀನ ರೋಮ್‍ನಲ್ಲಿ ಕೆಲವು ಪಂಜುಗಳನ್ನು ಗಂಧಕವನ್ನು ಸುಣ್ಣದೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತಿತ್ತು. ಇದರಿಂದ ಪಂಜನ್ನು ನೀರಿನಲ್ಲಿ ಮುಳುಗಿಸಲಾದರೂ ಬೆಂಕಿಯು ಕಡಿಮೆಯಾಗುತ್ತಿರಲಿಲ್ಲ. ಆಧುನಿಕ ಮೆರವಣಿಗೆ ಪಂಜುಗಳನ್ನು ಒರಟಾದ ಸೆಣಬಿನ ಗಟ್ಟಿಬಟ್ಟೆಯನ್ನು ನಳಿಕೆಯಾಗಿ ಸುತ್ತಿ ಮೇಣದಲ್ಲಿ ನೆನೆಸಿ ತಯಾರಿಸಲಾಗುತ್ತದೆ. ಯಾವುದೇ ಮೇಣದ ಹನಿಗಳನ್ನು ಬೀಳದಂತೆ ತಪ್ಪಿಸಲು ಸಾಮಾನ್ಯವಾಗಿ ಕಟ್ಟಿಗೆಯ ಕೈಹಿಡಿ ಮತ್ತು ಕಾರ್ಡ್‌ಬೋರ್ಡ್ ಸುರುಳಿಪಟ್ಟಿ ಇರುತ್ತದೆ. ಪ್ರದರ್ಶನ/ಮೆರವಣಿಗೆಯಲ್ಲಿ ಜ್ವಾಲೆಯನ್ನು ಎತ್ತರದಲ್ಲಿ ಹಿಡಿದಿಡಲು, ಅಥವಾ ಯಾವುದೇ ಕತ್ತಲೆ ನಂತರದ ಆಚರಣೆಯಲ್ಲಿ ಪ್ರಕಾಶ ಒದಗಿಸಲು ಇವು ಸುಲಭ, ಸುರಕ್ಷಿತ ಮತ್ತು ತುಲನಾತ್ಮಕವಾಗಿ ಅಗ್ಗದ ರೀತಿಯಾಗಿವೆ.

ಜಗ್ಲಿಂಗ್‍ಗೆ ಸೂಕ್ತವಾದ ಆಧುನಿಕ ಪಂಜುಗಳನ್ನು ಕಟ್ಟಿಗೆ ಹಾಗೂ ಲೋಹ ಅಥವಾ ಕೇವಲ ಲೋಹದ ಪಟ್ಟಿಯಿಂದ ಮತ್ತು ಒಂದು ತುದಿಯನ್ನು ಕೆವ್ಲರ್ ಬತ್ತಿಯಿಂದ ಸುತ್ತಿ ತಯಾರಿಸಲಾಗುತ್ತದೆ. ಈ ಬತ್ತಿಯನ್ನು ಒಂದು ದಹ್ಯ ದ್ರವದಲ್ಲಿ ನೆನೆಸಲಾಗುತ್ತದೆ, ಸಾಮಾನ್ಯವಾಗಿ ಕಲ್ಲೆಣ್ಣೆ ಮೇಣ (ಸೀಮೆ ಎಣ್ಣೆ).

ಪಂಜು ಜ್ಞಾನೋದಯ ಮತ್ತು ಭರವಸೆ ಎರಡರದ್ದೂ ಸಾಮಾನ್ಯ ಲಾಂಛನವಾಗಿದೆ. ಹಾಗಾಗಿ ಅಮೇರಿಕದ ಸ್ವಾತಂತ್ರ್ಯದ ಪ್ರತಿಮೆಯು ತನ್ನ ಪಂಜನ್ನು ಮೇಲೆತ್ತುತ್ತಾಳೆ. ಅಡ್ಡಹಾಯ್ದ ತಿರುಗಿದ ಪಂಜುಗಳು ಶೋಕಾಚರಣೆಯ ಚಿಹ್ನೆಗಳಾಗಿದ್ದವು. ಇವು ಗ್ರೀಕ್ ಮತ್ತು ರೋಮನ್ ಅಂತ್ಯಸಂಸ್ಕಾರದ ಸ್ಮಾರಕಗಳ ಮೇಲೆ ಕಾಣುತ್ತವೆ. ಕೆಳಮುಖವಾಗಿರುವ ಪಂಜು ಮರಣವನ್ನು ಸಂಕೇತಿಸಿದರೆ, ಮೇಲ್ಮುಖವಾಗಿ ಹಿಡಿದಿರುವ ಪಂಜು ಜೀವನ, ಸತ್ಯ, ಮತ್ತು ಜ್ವಾಲೆಯ ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಸಂಕೇತಿಸುತ್ತದೆ. ರಾಜಕೀಯ ಪಕ್ಷಗಳು ಪಂಜನ್ನು ಚಿಹ್ನೆಯಾಗಿ ಕೂಡ ಬಳಸುತ್ತವೆ, ಉದಾಹರಣೆಗೆ ಯುನೈಟಡ್ ಕಿಂಗ್ಡಮ್‍ನಲ್ಲಿ ಲೇಬರ್ ಪಕ್ಷ ಮತ್ತು ಕನ್ಸರ್ವೇಟಿವ್ ಪಕ್ಷ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕಚಂಪೂಜನತಾ ದಳ (ಜಾತ್ಯಾತೀತ)ಜಂಟಿ ಪ್ರವೇಶ ಪರೀಕ್ಷೆಮೋಕ್ಷಗುಂಡಂ ವಿಶ್ವೇಶ್ವರಯ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪತೆರಿಗೆಗಾಂಜಾಗಿಡಉತ್ತರ ಪ್ರದೇಶ21ನೇ ಶತಮಾನದ ಕೌಶಲ್ಯಗಳುಬಿಳಿ ಎಕ್ಕಭಾರತೀಯ ಧರ್ಮಗಳುಮಾಲ್ಡೀವ್ಸ್ಸ್ಮೃತಿ ಇರಾನಿತ್ರಿಪದಿದ.ರಾ.ಬೇಂದ್ರೆಇಚ್ಛಿತ್ತ ವಿಕಲತೆಸುಭಾಷ್ ಚಂದ್ರ ಬೋಸ್ಹೃದಯಮಫ್ತಿ (ಚಲನಚಿತ್ರ)ಪುನೀತ್ ರಾಜ್‍ಕುಮಾರ್ಎಚ್.ಎಸ್.ವೆಂಕಟೇಶಮೂರ್ತಿಹಾನಗಲ್ಓಂ ನಮಃ ಶಿವಾಯಯೋಗಿ ಆದಿತ್ಯನಾಥ್‌ಕೃಷಿ ಉಪಕರಣಗಳುಅದ್ವೈತಶಿವಪ್ಪ ನಾಯಕಕರ್ನಾಟಕ ಜನಪದ ನೃತ್ಯಸರಸ್ವತಿಭಾರತದ ಆರ್ಥಿಕ ವ್ಯವಸ್ಥೆಭಾರತದ ರಾಷ್ಟ್ರಗೀತೆಹುಚ್ಚೆಳ್ಳು ಎಣ್ಣೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತದ ರಾಜಕೀಯ ಪಕ್ಷಗಳುಬನವಾಸಿಶಾಲೆಕಂದಸಿಂಧನೂರುರಾಷ್ಟ್ರೀಯ ಸ್ವಯಂಸೇವಕ ಸಂಘಯಶ್(ನಟ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬೆಂಗಳೂರುಹೊರನಾಡುಸಂಧಿಶಿರ್ಡಿ ಸಾಯಿ ಬಾಬಾಹಾವೇರಿಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಎಸ್.ಎಲ್. ಭೈರಪ್ಪಕನ್ನಡ ಪತ್ರಿಕೆಗಳುಚದುರಂಗದ ನಿಯಮಗಳುಶಾಮನೂರು ಶಿವಶಂಕರಪ್ಪಮಲ್ಲಿಕಾರ್ಜುನ್ ಖರ್ಗೆಬ್ರಾಹ್ಮಣಬಂಗಾರದ ಮನುಷ್ಯ (ಚಲನಚಿತ್ರ)ಷಟ್ಪದಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭಾರತೀಯ ಮೂಲಭೂತ ಹಕ್ಕುಗಳುಕೈಮೀರಪರಮಾತ್ಮ(ಚಲನಚಿತ್ರ)ಹಂಸಲೇಖವಿಜಯನಗರಕದಂಬ ರಾಜವಂಶಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ವ್ಯಾಕರಣಕೃಷಿವ್ಯಕ್ತಿತ್ವಇಮ್ಮಡಿ ಪುಲಕೇಶಿಮಂಗಳೂರುಕರ್ನಾಟಕ ವಿಧಾನ ಸಭೆಯು.ಆರ್.ಅನಂತಮೂರ್ತಿಚೋಳ ವಂಶಮೂಲಭೂತ ಕರ್ತವ್ಯಗಳುಮಾವುಭೌಗೋಳಿಕ ಲಕ್ಷಣಗಳುಜೈನ ಧರ್ಮಪ್ರಾಥಮಿಕ ಶಿಕ್ಷಣ🡆 More