ಭರವಸೆ

ಭರವಸೆಯು ಒಬ್ಬರ ಜೀವನದಲ್ಲಿನ ಅಥವಾ ಸಾಮಾನ್ಯವಾಗಿ ವಿಶ್ವದಲ್ಲಿನ ಘಟನೆಗಳು ಮತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಫಲಿತಾಂಶಗಳ ನಿರೀಕ್ಷೆಯನ್ನು ಆಧರಿಸಿದ ಒಂದು ಆಶಾವಾದಿ ಮಾನಸಿಕ ಸ್ಥಿತಿ.

ಇದರ ವಿರುದ್ಧಾರ್ಥಕ ಪದಗಳಲ್ಲಿ ವಿಷಣ್ಣತೆ, ಆಶಾರಹಿತತೆ ಮತ್ತು ಹತಾಶೆ ಸೇರಿವೆ.

ಬಿಕ್ಕಟ್ಟು ಭಯ ಹುಟ್ಟಿಸುವಂತೆ ಕಾಣಿಸಿಕೊಂಡಾಗ ಭರವಸೆಯು ಸ್ವತಂತ್ರ ಮತ್ತು ಸಮರ್ಥವಾಗುತ್ತದೆ, ಮತ್ತು ನಮ್ಮನ್ನು ಹೊಸ ಸೃಜನಾತ್ಮಕ ಸಂಭಾವ್ಯತೆಗಳಿಗೆ ತೆರೆದಿಡುತ್ತದೆ ಎಂದು ಮನಃಶಾಸ್ತ್ರದ ಪ್ರಾಧ್ಯಾಪಕಿ ಫ಼್ರೆಡ್ರಿಕ್‍ಸನ್ ವಾದಿಸುತ್ತಾರೆ. ಭಾರಿ ಅಗತ್ಯದೊಂದಿಗೆ ಅಸಾಮಾನ್ಯವಾಗಿ ವಿಶಾಲ ವ್ಯಾಪ್ತಿಯ ವಿಚಾರಗಳು, ಜೊತೆಗೆ ಒಬ್ಬರ ವ್ಯಕ್ತಿತ್ವದ ನಾಲ್ಕು ವಿಭಿನ್ನ ಕ್ಷೇತ್ರಗಳಾದ ಅರಿವು ಸಂಬಂಧಿ, ಮನೋವೈಜ್ಞಾನಿಕ, ಸಾಮಾಜಿಕ, ಅಥವಾ ಭೌತಿಕ ದೃಷ್ಟಿಕೋನದಿಂದ ಸೆಳೆಯಲ್ಪಟ್ಟ ಸಂತೋಷ ಮತ್ತು ಹರ್ಷ, ಧೈರ್ಯ, ಮತ್ತು ಸಬಲೀಕರಣದಂತಹ ಸಕಾರಾತ್ಮಕ ಭಾವನೆಗಳು ಬರುತ್ತವೆ ಎಂದೂ ಇವರು ವಾದಿಸುತ್ತಾರೆ. ಆಶಾಭರಿತ ಜನರು ಕಾರ್ಯನಿರ್ವಹಿಸಬಲ್ಲ ಸಣ್ಣ ಬಿಣಿಗೆಯಂತೆ ಇರುತ್ತಾರೆ, ಏಕೆಂದರೆ "ನಾನು ಮಾಡಬಲ್ಲೆ ಎಂದು ಭಾವಿಸುತ್ತೇನೆ, ನಾನು ಮಾಡಬಲ್ಲೆ ಎಂದು ಭಾವಿಸುತ್ತೇನೆ" ಎಂದು ಅವರು ತಮಗೆ ತಾವೇ ಹೇಳಿಕೊಳ್ಳುತ್ತಿರುತ್ತಾರೆ. ಅಂತಹ ಸಕಾರಾತ್ಮಕ ಯೋಚನೆಯು ಮುಗ್ಧ ಹುಸಿ ಭರವಸೆಯ ಬದಲಾಗಿ ವಾಸ್ತವಿಕ ಆಶಾವಾದದ ಭಾವವನ್ನು ಆಧರಿಸಿದಾಗ ಫಲ ಕೊಡುತ್ತದೆ.

ಮನಃಶಾಸ್ತ್ರಜ್ಞ ಸ್ನೈಡರ್ ಭರವಸೆಯನ್ನು ಗುರಿಯ ಉಪಸ್ಥಿತಿಗೆ ಜೊತೆಗೆ ಆ ಗುರಿಯನ್ನು ಸಾಧಿಸಲು ಇರುವ ದೃಢಸಂಕಲ್ಪದ ಯೋಜನೆಗೆ ಸಂಬಂಧಿಸಿದರು. ಅದೇ ರೀತಿ ಆ್ಯಡ್ಲರ್ ಅವರು ಮಾನವ ಮನಃಶಾಸ್ತ್ರದಲ್ಲಿ ಗುರಿ ಅನ್ವೇಷಣೆಯ ಕೇಂದ್ರೀಯತೆಗಾಗಿ ವಾದಿಸಿದ್ದರು, ಜೊತೆಗೆ ಬ್ಲಾಚ್‍ನಂತಹ ತಾತ್ವಿಕ ಮಾನವಶಾಸ್ತ್ರಜ್ಞರು ಕೂಡ. ಸ್ನೈಡರ್ ಅವರು ಭರವಸೆ ಮತ್ತು ಮಾನಸಿಕ ಇಚ್ಛಾಶಕ್ತಿ ನಡುವಿನ ಸಂಬಂಧದ ಮೇಲೆ, ಜೊತೆಗೆ ಗುರಿಗಳ ವಾಸ್ತವಿಕ ಗ್ರಹಿಕೆಯ ಅಗತ್ಯದ ಮೇಲೆಯೂ ಒತ್ತನ್ನು ಕೊಟ್ಟರು, ಮತ್ತು ಭರವಸೆ ಹಾಗೂ ಆಶಾವಾದದ ನಡುವಿನ ವ್ಯತ್ಯಾಸವೆಂದರೆ ಭರವಸೆಯು ಸುಧಾರಿತ ಭವಿಷ್ಯಕ್ಕಾಗಿ ವ್ಯಾವಹಾರಿಕ ಮಾರ್ಗಗಳನ್ನು ಒಳಗೊಂಡಿರುತ್ತದೆ ಎಂದು ವಾದಿಸಿದರು. ನಿಕಟ ಕುಟುಂಬದೊಳಗೆ ನಿಯಂತ್ರಣವು ವಿಫಲವಾದಾಗ ಒಂದು ಮಗುವಿನ ಸಮಾಜವಿರೋಧಿ ವರ್ತನೆಯು ವಿಶಾಲ ಸಮಾಜದಿಂದ ನಿರ್ವಹಣೆಗಾಗಿ ಅರಿವಿಲ್ಲದ ಭರವಸೆಯನ್ನು ವ್ಯಕ್ತಮಾಡುತ್ತದೆ ಎಂದು ವಿನಿಕಾಟ್ ನೋಡಿದರು.

ಭರವಸೆಗೆ ಜನರಿಗೆ ಬೇಗನೆ ಮತ್ತು ಸುಲಭವಾಗಿ ಚೇತರಿಸಿಕೊಳ್ಳಲು ನೆರವಾಗುವ ಸಾಮರ್ಥ್ಯವಿದೆ. ಭರವಸೆಯನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳು, ವಿಶೇಷವಾಗಿ ಕಾಯಿಲೆಯೊಂದಿಗೆ ಹೋರಾಡುತ್ತಿರುವಾಗ, ಚೇತರಿಕೆಯ ತಮ್ಮ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಾರೆ. ಇದು ಮಹತ್ವದ್ದಾಗಿದೆ ಏಕೆಂದರೆ ದೀರ್ಘಕಾಲಿಕ, ದೈಹಿಕ, ಅಥವಾ ಮಾನಸಿಕ ಕಾಯಿಲೆಯಿರುವ ಅಸಂಖ್ಯಾತ ಜನರು ತಮ್ಮ ಸ್ಥಿತಿಯು ಸ್ಥಿರವಾಗಿದೆ ಮತ್ತು ತಮ್ಮ ಚೇತರಿಕೆಯ ಅಲ್ಪ ಸಾಧ್ಯತೆಯಿದೆ ಎಂದು ನಂಬುತ್ತಾರೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಹನಿ ನೀರಾವರಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಒಗಟುಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಅಂತರಜಾಲಕಂಪ್ಯೂಟರ್ಕಂಸಾಳೆಬನವಾಸಿಉಡಹಳೆಗನ್ನಡಪ್ರಜ್ವಲ್ ರೇವಣ್ಣಬಾಲಕಾರ್ಮಿಕಹೆಚ್.ಡಿ.ಕುಮಾರಸ್ವಾಮಿಆಗಮ ಸಂಧಿರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಭಾರತೀಯ ನದಿಗಳ ಪಟ್ಟಿಚಂದ್ರಯಾನ-೩ಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದ ಚುನಾವಣಾ ಆಯೋಗಎಚ್.ಎಸ್.ಶಿವಪ್ರಕಾಶ್ಉತ್ತರ ಕರ್ನಾಟಕಆರೋಗ್ಯಕಿತ್ತಳೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮೌರ್ಯ ಸಾಮ್ರಾಜ್ಯಕರ್ನಾಟಕದ ಮಹಾನಗರಪಾಲಿಕೆಗಳುಛತ್ರಪತಿ ಶಿವಾಜಿಆಸ್ಪತ್ರೆರನ್ನರಾಮಕೃಷ್ಣ ಪರಮಹಂಸಹಕ್ಕ-ಬುಕ್ಕಹಿಂದೂ ಮಾಸಗಳುಸಮಾಜಶಾಸ್ತ್ರಬಿ. ಎಂ. ಶ್ರೀಕಂಠಯ್ಯಗಣೇಶ ಚತುರ್ಥಿಚೋಳ ವಂಶದರ್ಶನ್ ತೂಗುದೀಪ್ಮಹಮ್ಮದ್ ಘಜ್ನಿರಶ್ಮಿಕಾ ಮಂದಣ್ಣರಾಷ್ತ್ರೀಯ ಐಕ್ಯತೆದಸರಾನಯನತಾರಮೈಸೂರು ಸಂಸ್ಥಾನಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಾಲ್ಯ ವಿವಾಹಚೋಮನ ದುಡಿ (ಸಿನೆಮಾ)ಲೋಕಸಭೆಕಮಲಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಜೇನು ಹುಳುಧಾರವಾಡಮಲೇರಿಯಾಕೊಡಗು ಜಿಲ್ಲೆದಿವ್ಯಾಂಕಾ ತ್ರಿಪಾಠಿಎಳ್ಳೆಣ್ಣೆತೆಲುಗುಮೈಸೂರು ದಸರಾಪ್ಲೇಟೊಕನ್ನಡ ಅಕ್ಷರಮಾಲೆಶ್ರೀ ರಾಘವೇಂದ್ರ ಸ್ವಾಮಿಗಳುಹೈದರಾಲಿಭಾರತದ ರಾಷ್ಟ್ರಪತಿಗಳ ಪಟ್ಟಿಒಂದನೆಯ ಮಹಾಯುದ್ಧಪಪ್ಪಾಯಿಶಿವರಾಮ ಕಾರಂತಕರ್ನಾಟಕ ಜನಪದ ನೃತ್ಯಅಡಿಕೆಭತ್ತಭಾರತದ ಜನಸಂಖ್ಯೆಯ ಬೆಳವಣಿಗೆಗುಣ ಸಂಧಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕ್ರಿಕೆಟ್ಅಮೃತಧಾರೆ (ಕನ್ನಡ ಧಾರಾವಾಹಿ)ಅಷ್ಟ ಮಠಗಳು🡆 More