ಜಾರ್ಜ್ ಥಾಮಸ್‌: ಭಾರತೀಯ ಬ್ಯಾಡ್ಮಿಂಟನ್ ಆಟಗಾರ

ಜಾರ್ಜ್ ಥಾಮಸ್‌ರವರು (ಹುಟ್ಟಿದ್ದು ಏಪ್ರಿಲ್ ೧೫, ೧೯೬೬) ಭಾರತದ ಕೇರಳ ರಾಜ್ಯದ ಮಾಜಿ ಬ್ಯಾಡ್ಮಿಂಟನ್ ಆಟಗಾರ.

ಜಾರ್ಜ್ ಥಾಮಸ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟುಏಪ್ರಿಲ್ ೧೫, ೧೯೬೬ ಕೇರಳ, ಭಾರತ
ದೇಶಭಾರತ
ಪುರುಷರ ಸಿಂಗಲ್, ಪುರುಷರ ಡಬಲ್, ಮಿಕ್ಸಡ್ ಡಬಲ್
ಸದ್ಯದ ಸ್ಥಾನನಿವೃತ್ತ
ಜಾರ್ಜ್ ಥಾಮಸ್‌: ಬಾಲ್ಯ ಜೀವನ, ವೃತ್ತಿಪರ ಜೀವನ, ವೈಯಕ್ತಿಕ ಜೀವನ
ಎಮ್. ಟಿ. ವಾಸುದೇವನ್ ನಾಯರ್

ಬಾಲ್ಯ ಜೀವನ

ಬ್ಯಾಡ್ಮಿಂಟನ್ನಲ್ಲಿ ಅವರಿಗಿದ್ದ ಉತ್ಸಾಹವನ್ನು ಹೋಲುವ ಇನ್ನೊಂದು ವಿಚಾರವೆಂದರೆ ಅದು ಎಮ್. ಟಿ. ವಾಸುದೇವನ್ ನಾಯರ್‌ರವರ ಕಥೆಗಳು, ಕಾದಂಬರಿಗಳು, ಚಿತ್ರಕಥೆಗಳು ಹಾಗು ಚಲನಚಿತ್ರಗಳು. ಇವರಿಗೆ ಬಾಲ್ಯದಿಂದಲೂ ಬ್ಯಾಡ್ಮಿಂಟನ್ ಆಟದಲ್ಲಿ ಬಹಳ ಆಸಕ್ತಿ ಇತ್ತು. ಇವರ ತಂದೆ ಹಾಗೂ ಅಣ್ಣ ಇಬ್ಬರೂ ಕ್ರೀಡಾಪಟುಗಳಾದ ಕಾರಣ, ಜಾರ್ಜ್‌ರವರಿಗೆ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು. ೧೦೦ ಮೀಟರ್ ದೂರದ ಓಟವನ್ನು ೧೨ ಸೆಕೆಂಡುಗಳಲ್ಲಿ ಓಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದ ಜಾರ್ಜ್‌ರವರ ಒಲವು ಬ್ಯಾಡ್ಮಿಂಟನ್‍ನತ್ತ ತಿರುಗಿ, ತಿರುವನಂತಪುರದಲ್ಲಿರುವ ಜಿ.ವಿ. ರಾಜ ಕ್ರೀಡಾಶಾಲೆಗೆ ಸೇರಿದರು.

ವೃತ್ತಿಪರ ಜೀವನ

ಜಾರ್ಜ್ ಥಾಮಸ್‌: ಬಾಲ್ಯ ಜೀವನ, ವೃತ್ತಿಪರ ಜೀವನ, ವೈಯಕ್ತಿಕ ಜೀವನ 
ಏಷಿಯನ್ ಕ್ರೀಡಕೂಟ

ತಿರುವನಂತಪುರದ ಜಿ.ವಿ.ರಾಜ ಕ್ರೀಡಾಶಾಲೆಯಲ್ಲಿ ಬಾಲಗೋಪಾಲನ್ ಥಂಪಿ ಮತ್ತು ಶಿವರಾಮಕೃಷ್ಣನ್‍ರವರ ಬಳಿ ತಗೆದುಕೊಂಡ ತರಬೇತಿ, ಅವರ ಮುಂದಿನ ಬ್ಯಾಡ್ಮಿಂಟನ್ ವೃತ್ತಿಜೀವನಕ್ಕೆ ಅಡಿಪಾಯವಾಯಿತು. ಕ್ರೀಡಾಶಾಲೆಯಿಂದ ಹೊರಬಂದ ನಂತರ, ಅವರು ಥ್ರೀಸೂರ್ನಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ಆದರೆ ಅವರಿಗೆ ಬ್ಯಾಡ್ಮಿಂಟನ್‍ನಲ್ಲಿ ಇದ್ದ ಆಸಕ್ತಿ ಕಡಿಮೆಯಾಗಲ್ಲಿಲ್ಲ. ಕಿರಿಯ ವಿಭಾಗದ ಏಷ್ಯನ್ ಚಾಂಪಿಯನ್‍ಷಿಪ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಅವರು ಸೌಲ್‍ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್ನಲ್ಲಿ ಆಡಲು ಹಿರಿಯ ತಂಡಕ್ಕೆ ಆಯ್ಕೆಯಾದರು. ಆದರೆ ಹಣಕಾಸಿನ ಸಮಸ್ಯೆಯಾದ ಕಾರಣದಿಂದ ಅವರಿಗೆ ಹೋಗಲು ಸಾಧ್ಯವಾಗಲ್ಲಿಲ್ಲ. ಅಂದು ಭಾರತ ದೇಶದಲ್ಲಿ ಬ್ಯಾಡ್ಮಿಂಟನ್ ಆಟವನ್ನು ಹೆಚ್ಚಾಗಿ ಆಡದ ಕಾರಣದಿಂದ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಆದರೂ ತಮ್ಮ ಛಲವನ್ನು ಬಿಡದೆ ಪ್ರತಿದಿನ ಶ್ರಮಿಸಿದರು. ಅವರ ಈ ಛಲಕ್ಕೆ ಹುರಿದುಂಬಿಸಿದ್ದು ಪ್ರಕಾಶ್ ಪಡುಕೋಣೆರವರ ಮಾತ. ಅದೇನೆಂದರೆ, ಓರ್ವ ಆಟಗಾರನ ಕುಸಿತಕ್ಕೆ ಪ್ರಮುಖ ಕಾರಣವೇ ಅವನ ಅಸಮಾಧಾನ. ಅವರ ನಿರಂತರ ಪ್ರಯತ್ನ ಮತ್ತು ಶ್ರಮ ವ್ಯರ್ಥವಾಗಲಿಲ್ಲ. ಸತತ ೧೧ ವರ್ಷಗಳವರೆಗೆ ಇವರು ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಇವರು ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಶಿಬಿರಕ್ಕೆ ಸೇರಿದರು. ನಂತರ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ರಾಷ್ಟ್ರೀಯ ಹಿರಿಯ ಸಿಂಗಲ್ ಟೈಟಲ್ಸ್, ಟೌಲೌಸ್ ಓಪನ್‍ನಲ್ಲಿ ದಬಲ್ ಟೈಟಲ್ಸ್ ಮುಂತಾದ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಜಯಭೇರಿ ಬಾರಿಸಿದರು. ೧೯೮೯ರಿಂದ ೨೦೦೦ದವರೆಗೆ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಿದರು. ನಂತರ ಇವರು ಹಿರಿಯ ವ್ಯವಸ್ಥಾಪಕರಾಗಿ(ಸಾರ್ವಜನಿಕ ಸಂಪರ್ಕ) ಭಾರತ್ ಪೆಟ್ರೋಲಿಯಂ ನಿಗಮ ಲಿಮಿಟೆಡ್‍ನಲ್ಲಿ ಕೆಲಸ ನಿರ್ವಹಿಸಿದರು. ಕೊಚ್ಚಿಯ ಪ್ರಾದೇಶಿಕ ಕ್ರೀಡೆ ಕೇಂದ್ರ (ಆರ್.ಎಸ್.ಎಸ್) ನಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು. ಇವರಡಿಯಲ್ಲಿ ೩೦ ರಾಜ್ಯ ಮಟ್ಟದ ಹಾಗು ೪೦ ರಾಷ್ಟ್ರ ಮಟ್ಟದ ಆಟಗಾರರು ಹೊರಹೊಮ್ಮಿದರು.

ಜಾರ್ಜ್ ಥಾಮಸ್‌: ಬಾಲ್ಯ ಜೀವನ, ವೃತ್ತಿಪರ ಜೀವನ, ವೈಯಕ್ತಿಕ ಜೀವನ 
ಪ್ರಕಾಶ್ ಪಡುಕೋಣೆ

ವೈಯಕ್ತಿಕ ಜೀವನ

ಅಂದಿನ ಕಾಲದಲ್ಲಿ ಕ್ರೀಡೆಯನ್ನೇ ವೃತ್ತಿಜೀವನವನ್ನಾಗಿಸುಕೊಳ್ಳುವುದು ಮಧ್ಯಮ ವರ್ಗದ ಕುಟುಂಬದಿಂದ ಬಂದವರಿಗೆ ಬಹಳ ಕಷ್ಟಕರ. ಆದ್ದರಿಂದ ಇಂಜಿನಿಯರಿಂಗ್ ಓದಬೇಕಾಗಿ ಬಂದಿತು ಎಂದು ಸ್ವತಃ ಜಾರ್ಜ್‌ರವರೇ ಈ ಹಿಂದೆ ಹೇಳಿದ್ದರು. ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಪ್ರೀತಾರವರನ್ನು ವಿವಾಹವಾದರು. ಅವರ ಇಬ್ಬರು ಮಕ್ಕಳಾದ ಅರುಣ್ ಮತ್ತು ಕಿರಣ್ ರಾಜ್ಯ ಮಟ್ಟದ ಆಟಗಾರರಾಗಿದ್ದಾರೆ.

ಪ್ರಶಸ್ತಿಗಳು

  • ೧೯೯೦ರ ರಾಷ್ಟ್ರೀಯ ಸಿಂಗಲ್ ಟೈಟಲ್ಸ್ ಪ್ರಶಸ್ತಿ
  • ೧೯೯೨ರ ಡಬಲ್ ಟೈಟಲ್ಸ್ ಅನ್ನು ಜಸೀಲ್ ಪಿ ಇಸ್ಮೈಲ್‍ರವರ ಜೊತೆಗೆ ಗೆದ್ದಿದ್ದಾರೆ
  • ೧೯೯೮ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು
  • ಭಾರತ ಸರ್ಕಾರ ೨೦೦೨ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಉಲ್ಲೇಖಗಳು

Tags:

ಜಾರ್ಜ್ ಥಾಮಸ್‌ ಬಾಲ್ಯ ಜೀವನಜಾರ್ಜ್ ಥಾಮಸ್‌ ವೃತ್ತಿಪರ ಜೀವನಜಾರ್ಜ್ ಥಾಮಸ್‌ ವೈಯಕ್ತಿಕ ಜೀವನಜಾರ್ಜ್ ಥಾಮಸ್‌ ಪ್ರಶಸ್ತಿಗಳುಜಾರ್ಜ್ ಥಾಮಸ್‌ ಉಲ್ಲೇಖಗಳುಜಾರ್ಜ್ ಥಾಮಸ್‌ಕೇರಳಬ್ಯಾಡ್ಮಿಂಟನ್‌

🔥 Trending searches on Wiki ಕನ್ನಡ:

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣತತ್ಪುರುಷ ಸಮಾಸಮದುವೆಸಂಭೋಗಶಿವಭಾರತದ ಸಂವಿಧಾನ ರಚನಾ ಸಭೆಅಲ್ಲಮ ಪ್ರಭುಯೇಸು ಕ್ರಿಸ್ತಹೊನ್ನಾವರಇಮ್ಮಡಿ ಪುಲಕೇಶಿಭಾರತದಲ್ಲಿನ ಜಾತಿ ಪದ್ದತಿಮಾಹಿತಿ ತಂತ್ರಜ್ಞಾನವ್ಯಂಜನಹೈದರಾಲಿಕನ್ನಡ ಚಿತ್ರರಂಗಕನ್ನಡದಲ್ಲಿ ಸಣ್ಣ ಕಥೆಗಳುರಗಳೆತೆಂಗಿನಕಾಯಿ ಮರಸಂವಹನಗೌತಮ ಬುದ್ಧಜಾಗತೀಕರಣವಿನಾಯಕ ಕೃಷ್ಣ ಗೋಕಾಕನಾಟಕನಾಲ್ವಡಿ ಕೃಷ್ಣರಾಜ ಒಡೆಯರುಮಾನಸಿಕ ಆರೋಗ್ಯಒಡೆಯರ್ಕಳಸಜಯಪ್ರಕಾಶ ನಾರಾಯಣಪೆಟ್ರೋಮ್ಯಾಕ್ಸ್ (ಚಲನಚಿತ್ರ)೧೮೬೨ವಿಜಯವಾಣಿಹೈದರಾಬಾದ್‌, ತೆಲಂಗಾಣಬಂಜಾರಕನ್ನಡ ಗುಣಿತಾಕ್ಷರಗಳುತ್ಯಾಜ್ಯ ನಿರ್ವಹಣೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬೌದ್ಧ ಧರ್ಮಜನ್ನಸ್ಟಾರ್‌ಬಕ್ಸ್‌‌ಟಿಪ್ಪು ಸುಲ್ತಾನ್ಜಗನ್ನಾಥದಾಸರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕನ್ನಡ ಸಾಹಿತ್ಯಮಾನವ ಹಕ್ಕುಗಳುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಪ್ರಜಾವಾಣಿಲಕ್ಷ್ಮೀಶಸುಗ್ಗಿ ಕುಣಿತಪರಿಣಾಮಶಬರಿತಂತ್ರಜ್ಞಾನದ ಉಪಯೋಗಗಳುಸ್ವರಮೂಲಧಾತುಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದ.ರಾ.ಬೇಂದ್ರೆಭಾರತದಲ್ಲಿ ಬಡತನಆಂಧ್ರ ಪ್ರದೇಶಹಲ್ಮಿಡಿ ಶಾಸನಭಾರತದ ಸ್ವಾತಂತ್ರ್ಯ ಚಳುವಳಿರಮ್ಯಾಕರ್ನಾಟಕದ ಜಿಲ್ಲೆಗಳುಹೊಯ್ಸಳಬ್ಯಾಡ್ಮಿಂಟನ್‌ಕಮಲರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕಾವ್ಯಮೀಮಾಂಸೆಬ್ರಹ್ಮಉಪ್ಪಿನ ಸತ್ಯಾಗ್ರಹಕರ್ನಾಟಕ ವಿಧಾನ ಸಭೆಭಾರತೀಯ ಅಂಚೆ ಸೇವೆವರ್ಗೀಯ ವ್ಯಂಜನಮಾನವನಲ್ಲಿ ನಿರ್ನಾಳ ಗ್ರಂಥಿಗಳುಜಿ.ಪಿ.ರಾಜರತ್ನಂವ್ಯಾಸರಾಯರುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಟೊಮೇಟೊಜಾಗತಿಕ ತಾಪಮಾನ ಏರಿಕೆಅಂತಿಮ ಸಂಸ್ಕಾರಭಾರತದಲ್ಲಿ ಪಂಚಾಯತ್ ರಾಜ್🡆 More