ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ

ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಇವರು ೧೮೭೦ರಲ್ಲಿ ಜನಿಸಿದರು.

೧೮೯೩ರಲ್ಲಿ ಪುಣೆಯಲ್ಲಿ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಗದಿಗೆಯ್ಯನವರ ತಂದೆ ಹುಚ್ಚಯ್ಯನವರು “ಚಂದ್ರೋದಯ” ಎನ್ನುವ ವಾರಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಗದಿಗೆಯ್ಯನವರು ಕೆಲಕಾಲ “ಚಂದ್ರೋದಯ”ವನ್ನು ಮುಂದುವರಿಸಿದರು ಹಾಗು “ವಾಗ್ದೇವಿ” ಎನ್ನುವ ಮಾಸಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ಇವೆರಡೂ ಪತ್ರಿಕೆಗಳು ಕೆಲಕಾಲದ ನಂತರ ವಿಲೀನಗೊಂಡವು.


ಗದಿಗೆಯ್ಯನವರು ರಾಷ್ಟ್ರೀಯ ಮನೋಭಾವದವರು. ಕನ್ನಡದ ಕಳಕಳಿ ಇದ್ದವರು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಾಮರಾವ ನರಗುಂದಕರ ಹಾಗು ಗದಿಗೆಯ್ಯ ಹೊನ್ನಾಪುರಮಠ ಇವರು ಜೊತೆಗೂಡಿ ಹುಟ್ಟುಹಾಕಿದ “ಕರ್ನಾಟಕ ಸಭೆ”ಯು ಮುಂದೆ ಕರ್ನಾಟಕ ಏಕೀಕರಣಕ್ಕೆ ನಾಂದಿಯಾಯಿತು.


೧೮೯೭ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಇವರು ಮುಂದಿನ ೧೬ ವರ್ಷಗಳ ಕಾಲ ಅದರ ಪ್ರಗತಿಗಾಗಿ ದುಡಿದರು. ಆಲೂರು ವೆಂಕಟರಾಯರು ಧಾರವಾಡದಲ್ಲಿ ನಡೆಯಿಸಿದ ಕನ್ನಡ ಗ್ರಂಥಕರ್ತರ ಪ್ರಥಮ ಪರಿಷತ್ತನ್ನು ಯಶಸ್ವಿಗೊಳಿಸಲು ಗದಿಗೆಯ್ಯನವರು ಪರಿಶ್ರಮಿಸಿದರು.


ಕೃತಿಗಳು

ಕಾದಂಬರಿ

  • ಅದ್ಭುತ ಪ್ರೇಮ

ಪ್ರಬಂಧ

  • ನೀತಿ ಮಂಜರಿ

ಮಕ್ಕಳ ಸಾಹಿತ್ಯ

  • ಪ್ರಹ್ಲಾದ ಚರಿತ್ರೆ
  • ಶ್ರೀಕೃಷ್ಣ ಚರಿತ್ರೆ
  • ಸಾವಿತ್ರಿ ಚರಿತ್ರೆ
  • ಸಚಿತ್ರ ಬಾಲಭಾಗವತ
  • ಸಚಿತ್ರ ಬಾಲರಾಮಾಯಣ

ಜೀವನ ಚರಿತ್ರೆ

  • ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರೆ
  • ಶ್ರೀ ರಾಮಕೃಷ್ಣ ಪರಮಹಂಸರ ಸತ್ಕಥೆಗಳು
  • ಶ್ರೀ ಬಸವೇಶ್ವರ ಚರಿತ್ರೆ

ನಾಟಕ

  • ಮೊಹಿನೀ ಅಥವಾ ನಿಂದಕರ ನಡುವಳಿ (‘ಶೆರಿಡನ್ನ’ರ ‘ಸ್ಕೂಲ್ ಫಾರ್ ಸ್ಕೌಂಡ್ರೆಲ್’ದ ರೂಪಾಂತರ)
  • ತ್ರಾಟಿಕಾ ಅಥವಾ ಮೊಂಡ ಗಂಡ ತುಂಟ ಹೆಂಡತಿ (ಶೇಕ್ಸ್ಪಿಯರನ ‘ಟೇಮಿಂಗ್ ಆಫ್ ದ ಶ್ರೂ’ದ ರೂಪಾಂತರ)

ಕಾನೂನು

  • ಗ್ರಾಮ ಪೋಲೀಸ್ ಎಕ್ಟ್
  • ಗ್ರಾಮ ಪಂಚಾಯತಿ ಎಕ್ಟ್
  • ಮಾಮ್ಲೇದಾರ ಕೋರ್ಟ್ ಎಕ್ಟ್
  • ದಿವಾಣಿ ಕಾಯಿದೆ ಬೋಧಿನಿ

ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಇವರು ೧೯೩೩ ಜನೆವರಿ ೭ರಂದು ನಿಧನರಾದರು.

Tags:

ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಕೃತಿಗಳುಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠಧಾರವಾಡಪುಣೆ೧೮೭೦೧೮೯೩

🔥 Trending searches on Wiki ಕನ್ನಡ:

ವಿಭಕ್ತಿ ಪ್ರತ್ಯಯಗಳುಸರ್ಪ ಸುತ್ತುಮಂಡಲ ಹಾವುಮದುವೆಕಬಡ್ಡಿಕರ್ನಾಟಕ ರಾಷ್ಟ್ರ ಸಮಿತಿಶಿವರಾಜ್‍ಕುಮಾರ್ (ನಟ)ಸಂಯುಕ್ತ ರಾಷ್ಟ್ರ ಸಂಸ್ಥೆಗೌತಮ ಬುದ್ಧಪಿ.ಲಂಕೇಶ್ಪಂಚ ವಾರ್ಷಿಕ ಯೋಜನೆಗಳುಒಗಟುದಿಕ್ಕುಪೆರಿಯಾರ್ ರಾಮಸ್ವಾಮಿಮತದಾನ ಯಂತ್ರಕಾದಂಬರಿನಾಗವರ್ಮ-೨ಕರ್ನಾಟಕದ ಏಕೀಕರಣಕೃಷ್ಣಾ ನದಿಪಟ್ಟದಕಲ್ಲುವಿಜಯದಾಸರುಗಿಡಮೂಲಿಕೆಗಳ ಔಷಧಿಎಚ್.ಎಸ್.ಶಿವಪ್ರಕಾಶ್ಖಂಡಕಾವ್ಯಕಮ್ಯೂನಿಸಮ್ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಪೊನ್ನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆರಾಷ್ಟ್ರೀಯ ಶಿಕ್ಷಣ ನೀತಿಕನ್ನಡ ಸಾಹಿತ್ಯ ಪ್ರಕಾರಗಳುಕ್ರೀಡೆಗಳುಜಾಗತಿಕ ತಾಪಮಾನಜಿ.ಪಿ.ರಾಜರತ್ನಂನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡವೃದ್ಧಿ ಸಂಧಿದುಂಡು ಮೇಜಿನ ಸಭೆ(ಭಾರತ)ಬಾದಾಮಿ ಗುಹಾಲಯಗಳುಶಬರಿಭಾರತದ ರಾಜ್ಯಗಳ ಜನಸಂಖ್ಯೆವೆಂಕಟೇಶ್ವರ ದೇವಸ್ಥಾನಶಿಕ್ಷಣ ಮಾಧ್ಯಮತರಕಾರಿಭಾರತದ ರೂಪಾಯಿಭಾರತೀಯ ಸಂವಿಧಾನದ ತಿದ್ದುಪಡಿಭಾರತದಲ್ಲಿನ ಶಿಕ್ಷಣಪಂಚಾಂಗಹೃದಯಾಘಾತಅಂಬಿಗರ ಚೌಡಯ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಕಾವೇರಿ ನದಿಬಿ.ಎಸ್. ಯಡಿಯೂರಪ್ಪವಿಶ್ವವಿದ್ಯಾಲಯ ಧನಸಹಾಯ ಆಯೋಗದೇವರ/ಜೇಡರ ದಾಸಿಮಯ್ಯತುಂಗಭದ್ರಾ ಅಣೆಕಟ್ಟು೧೬೦೮ಇಂಡಿಯನ್ ಪ್ರೀಮಿಯರ್ ಲೀಗ್ವೈದೇಹಿಮುದ್ದಣಹೊಯ್ಸಳಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿರಾಮ ಚಿಹ್ನೆನವರತ್ನಗಳುಮೈಗ್ರೇನ್‌ (ಅರೆತಲೆ ನೋವು)ಕ್ರಿಯಾಪದತೀ. ನಂ. ಶ್ರೀಕಂಠಯ್ಯಬೆಂಗಳೂರಿನ ಇತಿಹಾಸವೆಂಕಟೇಶ್ವರಸಂಭೋಗಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಭಾರತೀಯ ಜನತಾ ಪಕ್ಷರಾಮಆಯ್ದಕ್ಕಿ ಲಕ್ಕಮ್ಮನರೇಂದ್ರ ಮೋದಿಕಾಮಾಲೆಮಂತ್ರಾಲಯಸಂವಿಧಾನಕೆ. ಅಣ್ಣಾಮಲೈಪ್ರಜಾಪ್ರಭುತ್ವಫೇಸ್‌ಬುಕ್‌🡆 More