ಕೂಡಗಿ ಉಷ್ಣ ವಿದ್ಯುತ್ ಸ್ಥಾವರ

ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು ೧೫,೦೦೦ ಕೋಟಿ ರೂಪಾಯಿಯ ಬಂಡವಾಳ ಹೊಡಿದೆ.

೨೪೦೦ ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ.

ಕೂಡಗಿ-ಸ್ಥಳ

ಕೂಡಗಿ ಉಷ್ಣ ವಿದ್ಯುತ್ ಸ್ಥಾವರ
ಕೂಡಗಿ
village
Population
 (೨೦೧೨)
 • Total೧೫೦೦
  • ಇಲ್ಲಿ ಎನ್ಟಿಪಿಸಿ ಉಷ್ಣ ಸೂಪರ್ಕ್ರಿಟಿಕಲ್ ವಿದ್ಯುತ್ ಯೋಜನೆಯನ್ನು ಆರಂಭಿಸಿದೆ.(NTPC Limited (previously known as National Thermal Power Corporation Limited. ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್'.Indian Central Public Sector Undertaking (CPSU);ಇದು ಭಾರತದ ಸರ್ಕಾರದ ಅಧೀನದ ಕಂಪನಿ. ಕೇಂದ್ರ ಇಂಧನ ಮಂತ್ರಿಯವರ ಅಧೀನದಲ್ಲಿರುವುದು. ಭಾರತದ ಅತಿ ದೊಡ್ಡ ಕಂಪನಿಗಳಲ್ಲಿ ಒಂದು.)

ಎನ್ಟಿಪಿಸಿಯ (NTPC) ಯೋಜನೆ

  • ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿ ಈ ಕಂಪನಿ ದೊಡ್ಡ ವಿದ್ಯುತ್ ಸ್ಥಾವರ ಯೋಜನೆ ಹಮ್ಮಿಕೊಂಡಿದೆ. ಕೂಡಗಿಯಲ್ಲಿ ಎನ್ಟಿಪಿಸಿಯ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್'ನ ಮೊದಲ ಹಂತದ 3Χ 800 ಮೆವ್ಯಾ ವಿದ್ಯುತ್ ಉತ್ಪಾದನೆಯ ಕಾರ್ಯಾಗಾರಕ್ಕೆ 2012 ಜೂನ್ 2 ರಂದು,ಕೇಂದ್ರ ವಿದ್ಯುತ್ ಸಚಿವ ಶ್ರೀ ಸುಶೀಲ್ ಕುಮಾರ್ ಶಿಂಧೆಯವರು ಶಂಕುಸ್ಥಾಪನೆಯನ್ನು ಮಾದಿದ್ದಾರೆ.
  • ಎನ್ಟಿಪಿಸಿ ಲಿಮಿಟೆಡ್, ಭಾರತ ಸರ್ಕಾರದ ಸಾರ್ವಜನಿಕ ಕಂಪೆನಿಯಾಗಿದೆ. 1975 ರಲ್ಲಿ ಸ್ಥಾಪಿಸಲ್ಪಟ್ಟಿರುವ ಸಂಪೂರ್ಣ ಸ್ವಾಮ್ಯದ ಉದ್ಯಮ. 45,548ಮೆ.ವ್ಯಾ.ವಿದ್ಯುತ್ ಸಾಮರ್ಥ್ಯಕ್ಕೂ ಮೇಲೆ ಉಷ್ಣ ವಿದ್ಯುತ್ ಉತ್ಪಾದಿಸುವ ದೇಶದ ದೊಡ್ಡ ಕಂಪನಿಯಾಗಿದೆ. ಈ ಕೂಡಲಗಿ ವಿದ್ಯುತ್ ಯೋಜನೆಯಲ್ಲಿ "ಜನರೇಶನ್ ಉನ್ನತಮಟ್ಟದ್ದು , ಗ್ರೀನ್ ಹೌಸ್ ಗ್ಯಾಸ್ ತೀವ್ರತೆ ಕಡಿಮೆ" ನೀತಿಯನ್ನು ಹೊಂದಿದೆ. 'ನಮ್ಮ ಪರಿಸರದ ಸಮತೋಲನವು ನಮ್ಮ ದೃಷ್ಟಿ' ಎಂದು ಹೇಳಿಕೆ ಕೊಟ್ಟಿದೆ. ,'ನಮ್ಮಎಲ್ಲಾ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳು ಪರಿಸರ ನಿಯಮಗಳಿಂದ ನಿರ್ದೇಶಿಸಲ್ಪಡುತ್ತವೆ’’ ಎಂದು ಎನ್ಟಿಪಿಸಿ ಕಂಪೆನಿಯು ವ್ಯಾಖ್ಯಾನಿಸುತ್ತದೆ. 'ಇದು ಸುಸ್ಥಿರ ಬೆಳವಣಿಗೆಗೆ ಬದ್ಧವಾಗಿದೆ'. 'ನಮಗೆ ಮತ್ತು ಮುಂದಿನ ಪೀಳಿಗೆಗಳಿಗೆ ಎಲ್ಲಾ ಸ್ವಚ್ಛ ಪರಿಸರ ಖಚಿತಪಡಿಸುವುದರ ಬಗ್ಗೆ ಕಂಪನಿ ಕಾಳಜಿ ಹೊಂದಿದೆ’ ಎನ್ನುತ್ತಾರೆ ಕಂಪನಿಯ ಮುಖ್ಯಸ್ಥರು.
  • ಕೂಡಲಗಿ ಗುತ್ತಿಗೆಯನ್ನು 470ಮಿ.ಡಾಲರ್'ಗೆ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‍ಗೆ ಫೆಬ್ರವರಿ 2012 ರಲ್ಲಿ ತೋಷಿಬಾ ಜೆಎಸ್ಡಬ್ಲುಗೆ ಮೂರು ಹಂತದಲ್ಲಿ 800ಮೆ.ವ್ಯಾ.ಸೂಪರ್ಕ್ರಿಟಿಕಲ್ ಉಗಿ ಪೂರೈಕೆ ಮತ್ತು ಉತ್ಪಾದಕಗಳನ್ನು ಸರಬರಾಜು ಮಾಡಲು ಗುತ್ತಿಗೆ ನೀಡಲಾಯಿತು.

ಗುತ್ತಿಗೆ ಮತ್ತು ಬಂಡವಾಳ ಹೂಡಿಕೆ

  • ಕೂಡಗಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ 4000 ಮೆವ್ಯಾ (3*800 ಮೆವ್ಯಾ ಮೊದಲ ಹಂತದಲ್ಲಿ ಮತ್ತು 2* 800 ಎರಡನೇ ಹಂತದಲ್ಲಿ) ಸಾಮರ್ಥ್ಯ ಹೊಂದಿರುತ್ತದೆ. ಈ ಸ್ಥಾವರಕ್ಕೆ ದೂಸಾನ್ (DOOSAN) ಪವರ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜನರೇಟರ್ ಪೂರೈಸಲಿದೆ. ತೋಷಿಬಾ ಜೆಎಸ್ಡಬ್ಲು ಪವರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸೂಪರ್ ಕ್ರಿಟಿಕಲ್’ ಸ್ಟೀಮ್ ಟರ್ಬೈನ್ & ಜನರೇಟರ್'ಗಳನ್ನು ಎನ್ಟಿಪಿಸಿಗೆ ಸರಬರಾಜು ಮಾಡುವುದು.
  • ಈ ವಿದ್ಯುತ್ ಸ್ಥಾವರ ಸಂಗ್ರಹವಾಗುವ ವಿದ್ಯುತ್ ನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾರತದ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ. "ನಿರ್ಮಾಣ ಸ್ಥಾವರ 2012 ರಲ್ಲಿ ಪ್ರಾರಂಭವಾಗಿದ್ದು ಸಿ 2015-2016 ರಲ್ಲಿ ಸಿದ್ಧಪಡಿಸಲು ನಿರೀಕ್ಷಿಸಲಾಗಿತ್ತು ಯೋಜನೆಗೆ ಅಗತ್ಯವಾದ ಒಟ್ಟು ಹೂಡಿಕೆಯು 2012 ಜನವರಿಯಷ್ಟರೊಳಗೆ ರೂಪಾಯಿ132.05 ಬಿಲಿಯನ್(ರೂ.13205 ಕೋಟಿ) (ಸುಮಾರು 2.91ಬಿಲಿಯನ್ ಡಾ.) ಅಂತರರಾಷ್ಟ್ರೀಯ ಸಹಕಾರ (JBIC-ಜೆಬಿಐಸಿ) ಜಪಾನ್ ಬ್ಯಾಂಕ್ ಜನವರಿ 2014 ರಲ್ಲಿ ಯೋಜನೆಯ ಪ್ರಥಮ ಹಂತವು ಒಂದು $ 350m ಅವಧಿಯ ಸಾಲವನ್ನು ಒದಗಿಸಲಾಗುವುದು ಎಂದು ಅಂದಾಜಿಸಲಾಗಿತ್ತು.

ಕೂಡಗಿ ಸೂಪರ್ ಉಷ್ಣ ವಿದ್ಯುತ್ ಸ್ಥಾವರ ವಿವರಗಳು ಮತ್ತು ಹೊಂದಾಣಿಕೆ

  • ಕರ್ನಾಟಕ ಮತ್ತು ಎನ್ಟಿಪಿಸಿ, ಪವರ್ ಕಂಪನಿ-ಕರ್ನಾಟಕ ಲಿಮಿಟೆಡ್ (PCKL), ಮತ್ತು ಕರ್ನಾಟಕ ಇಂಧನ ಇಲಾಖೆಗಳು,ಕೂಡಗಿ ಸೂಪರ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಜನವರಿ 2009 ರಲ್ಲಿ ಸೇರಿ ಒಂದು ಕರಾರು ಮಾಡಿಕೊಂಡರು. ಯೋಜನೆಯ ಹೆಚ್ಚಾಗಿ ಬರಡು ಮತ್ತು ಕಲ್ಲಿನ ಭೂಮಿ ಒಳಗೊಂಡಿದೆ. ಏಕ ಅಥವಾ ವಾಣಿಜ್ಯ ಕೃಷಿ ಬೆಳೆಗಳೊಂದಿಗೆ ಭಾಗಶಃ ಸುಮಾರು 4,100 ಎಕರೆ ಪ್ರದೇಶದಲ್ಲಿ ಕಟ್ಟಲಾಗುತ್ತಿದೆ. ಯೋಜನೆಯ ಉದ್ದೇಶಕ್ಕಾಗಿ ಸೆಪ್ಟೆಂಬರ್ 2010 ರಲ್ಲಿ ಅರಣ್ಯ ತೆರವು ಪಡೆದರು.
  • ಮೊದಲ ಹಂತದ ಸ್ಥಾವರ ಮೂರು ಸೂಪರ್ಕ್ರಿಟಿಕಲ್ ಕಲ್ಲಿದ್ದಲು-ಉರಿಯ ಬಾಯ್ಲರ್ಗಳು ಮತ್ತು ಮೂರು 800ಮೆಗಾವಾಟ್’ಗಳು ಆವಿ-ಚಕ್ರಗಳಿಂದ ಕೂಡಿದ ಟರ್ಬೈನ್’ಗಳು-ಇವುಗಳ ಸ್ಥಾಪನೆ. ಮೂರು ಬಾಯ್ಲರ್’ಗಳಲ್ಲಿ ಎರಡನ್ನು ,ಡೋಸಾನ್ ಸರಬರಾಜು ಮಾಡುವುದು. ಅದು ಗಂಟೆಗೆ 2,550 ಟಿ.(ಟನ್)ನಷ್ಟು ಉನ್ನತ ಉಗಿ-ಒತ್ತಡ 271 ಕೆ.ಜಿ./ಘನ ಸಂ.ಮೀ.ಗಳಿಗೆ ತಲುಪಿವ ಒತ್ತಡ ಮತ್ತು (ಶಾಖ) 569 ಸೆಂ. ಮಟ್ಟದ ತಾಪ, ಉತ್ಪಾದಿಸುತ್ತದೆ.
    ನೀರು
  • ಯೋಜನೆಗೆ ಕೃಷ್ಣ ನದಿಯ ಆಲಮಟ್ಟಿ ಅಣೆಕಟ್ಟಿನಿಂದ ಗಂಟೆಗೆ 7,380 ಘನ ಮೀಟರ್ ನಂತೆ ಒಂದು ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ. ನೀರಿನ, ಯೋಜನೆಯ ಸೈಟ್ 18 ಕಿಲೋಮೀಟರ್ ದೂರದಲ್ಲಿದೆ. ನೀರಿನ್ನು ಯೋಜನೆಯ ಸೈಟ್ ಹತ್ತಿರ ಒಂದು/ಎರಡು ಕೆರಯಲ್ಲಿ ಸಂಗ್ರಹಿಸಲಾಗುವುದು.
    ಬೂದಿ ಸಮಸ್ಯೆ
  • ಸುಮಾರು 8,000 ಟಿಪಿಡಿ (ಟನ್/ದಿನಕ್ಕೆ) ಯಷ್ಟು (೮೦,೦೦೦ಕ್ವಿಂಟಾಲ್) ಹಾರುವ ಬೂದಿ ಮತ್ತು 2,000 ಟಿಪಿಡಿ (ಟನ್/ದಿನಕ್ಕೆ) ಕೆಳಗೆ ಬೀಳುವ ಬೂದಿಯನ್ನು ವಿಲೇವಾರಿ ಕೆಲಸ ನಡೆಯಲಿದೆ. ಘಟಕದಲ್ಲಿ ಅಗತ್ಯವಿರುವ ಹೆಚ್ಚಿನ ಮಟ್ಟದ ಸಿಮೆಂಟು ಉತ್ಪಾದಿಸಲು ಈ ತ್ಯಾಜ್ಯನ್ನು ವಿಲೇವಾರಿ ( HDSD-ಎಚ್’ಡಿಎಸ್ಡಿ) ವ್ಯವಸ್ಥೆಯನ್ನು ಮಾಡುವ ಯೋಜನೆ ಹೊಂದಿದೆ.
    ಕೂಡಗಿ ವಿದ್ಯುತ್ ಸ್ಥಾವರಕ್ಕೆ ಇಂಧನ ಪೂರೈಕೆ
  • ಕೂಡಗಿ ಸೂಪರ್ಕ್ರಿಟಿಕಲ್ ವಿದ್ಯುತ್ ಸ್ಥಾವರದಲ್ಲಿ ಆರಂಭದಲ್ಲಿ ದೇಶೀಯ ಇದ್ದಿಲು ಬಳಸುವುದು, ಭವಿಷ್ಯದಲ್ಲಿ ಶಕ್ತಿ ಮಿಶ್ರಿತ ಕಲ್ಲಿದ್ದಲು ಬಳಸಬಹುದೆಂದು ನಿರೀಕ್ಷಿಸಲಾಗಿದೆ. ಮಾಡುವಾಗ, ಈ ಯೋಜನೆಗೆ ಜಾರ್ಖಂಡ್’ನಲ್ಲಿರುವ ಎನ್ಟಿಪಿಸಿಯು ಅದರ ಪಕ್ರಿ ಬವಾದಿಹ್ ಕಲ್ಲಿದ್ದಲು ಬ್ಲಾಕ್ ನಿಂದ ಕಲ್ಲಿದ್ದಲು ಒದಗಿಸಲಾಗುವುದು. ವರ್ಷಕ್ಕೆ 12ಮಿಲಿಯನ್ ಟನ್ ಕಲ್ಲಿದ್ದಲು(1ಕೋಟಿ 20ಲಕ್ಷ) ಅವಶ್ಯಕತೆಯಿದೆಯೆಂದು ಅಂದಾಜಿಸಲಾಗಿದೆ.
    ಅಂದರೆ (ಒಂದು ತಿಂಗಳಲ್ಲಿ 10 ಲಕ್ಷ ಟನ್ ಕಲ್ಲಿದ್ದಲು ಉರಿದು ಬೂದಿಯಾಗುವುದು. ಎಂದರೆ ಪ್ರತಿದಿನ 8೦,ಸಾವಿರ ಟನ್ (83ಸಾವಿರ)ಅಥವಾ 8 ಲಕ್ಷ ಟ್ವಿಂಟಾಲ್ ಕಲ್ಲಿದ್ದಲು ಉರಿದು ಬೂದಿಯಾಗುವುದು. ಅದೇ ಪ್ರಮಾಣದಲ್ಲಿ ಹೊಗೆ ಉಗಳುವುದು?)
    ಆರಂಭದಲ್ಲಿ ಯೋಜನೆಗೆ ವಿದ್ಯುತ್ ಪೂರೈಕೆ
  • ಪವರ್ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಬೇಕಾದ ಇಂಧನ ಕೆಪಿಟಿಸಿಎಲ್ ನ ಬಸವನ ಬಾಗೇವಾಡಿ ಸಬ್ಸ್ಟೇಷನ್ ಮೂಲದಿಂದ ಒದಗಲಿದೆ. ಆ ಸ್ಥಳ (ಸೈಟ್) ಕೂಡಲಗಿಯಿಂದ ಸುಮಾರು 20ಕಿಮೀ. ದೂರದಲ್ಲಿದೆ.

2016 ರ ಬೆಳವಣಿಗೆ

    ಮಾರ್ಚಿ 2016
  • ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಇಲ್ಲಿ ನಿರ್ಮಿಸಿರುವ ಸೂಪರ್‌ ಥರ್ಮಲ್‌ ವಿದ್ಯುತ್‌ ಸ್ಥಾವರದ 800 ಮೆಗಾವಾಟ್‌ ಸಾಮರ್ಥ್ಯದ 1ನೇ ಘಟಕ ಈ ತಿಂಗಳಲ್ಲೇ ಪರೀಕ್ಷಾರ್ಥವಾಗಿ ವಿದ್ಯುತ್‌ ಉತ್ಪಾದಿಸಲು ಸಜ್ಜಾಗಿದೆ. ರಾತ್ರಿ ಹಗಲೆನ್ನದೆ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮತ್ತು 250ಕ್ಕೂ ಹೆಚ್ಚು ತಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
  • ಬಾಯ್ಲರ್‌, ಟರ್ಬೈನ್‌, ಸ್ವಿಚ್‌ಯಾರ್ಡ್‌ ಸೇರಿದಂತೆ ವಿವಿಧ ಕಾರ್ಯಗಳು ಬಹುಪಾಲು ಪೂರ್ಣಗೊಂಡಿವೆ. ‘ತಲಾ 800 ಮೆಗಾವಾಟ್‌ ಸಾಮರ್ಥ್ಯದ ಮೂರು ಘಟಕಗಳು (2,400 ಮೆಗಾವಾಟ್‌) ಮೊದಲ ಹಂತದಲ್ಲಿ ತಲೆ ಎತ್ತಲಿವೆ. ಒಂದನೇ ಘಟಕದ ಬಾಯ್ಲರ್‌, ಟರ್ಬೈನ್‌ ಮತ್ತು ಕೊಳವೆ ಸ್ವಚ್ಛತೆ ಕೆಲಸ ನಡೆಯುತ್ತಿದೆ. ಇದಕ್ಕೆ ಒತ್ತಡದ ಗಾಳಿ ಮತ್ತು ಆವಿ ಬಳಸುತ್ತಿದ್ಧಾರೆ. ಇನ್ನೂ ಒಂದು ವಾರ ಈ ಕೆಲಸ ನಡೆಯುತ್ತದೆ. ನಂತರ ಡೀಸೆಲ್‌ ಬಳಸಿ ಮೊದಲು ಪರೀಕ್ಷಾರ್ಥವಾಗಿ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆ ಇದೆ. ನಿರಂತರ ವಿದ್ಯುತ್‌ ಉತ್ಪಾದನೆಗೆ ಬೇಕಾಗುವ ಕಲ್ಲಿದ್ದಲು ಸರಬರಾಜು, ನೀರು ಇತ್ಯಾದಿ ಮೂಲಸೌಲಭ್ಯಗಳನ್ನು ಹೊಂದಿಸಿಕೊಳ್ಳಲು ಸಮಯ ಬೇಕಾಗುತ್ತದೆ. ರಾಜ್ಯ ತನ್ನ ಪಾಲಿನ ವಿದ್ಯುತ್‌ ಪಡೆಯಲು ಕನಿಷ್ಠ 2016 ಸೆಪ್ಟೆಂಬರ್‌ ತಿಂಗಳವರೆಗೆ ಕಾಯಬೇಕಾಗುತ್ತದೆ.ಕೂಡಗಿ ನಿಲ್ದಾಣದಿಂದ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಜೋಡಿ ರೈಲ್ವೆ ಮಾರ್ಗಕ್ಕೆ, ಈ ತಿಂಗಳ ಒಳಗೆ ಜಮೀನು ಹಸ್ತಾಂತರ ಆಗಬಹುದು.(ಎನ್‌ಟಿಪಿಸಿಯ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ (ಪಶ್ಚಿಮ–1) ಸುಭಾಸಿಸ್‌ ಘೋಷ್‌)
  • ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆ ಆರಂಭವಾದರೆ ದಿನಕ್ಕೆ ಕನಿಷ್ಠ 8 ರಿಂದ 9 ರೈಲುಗಳಲ್ಲಿ ಕಲ್ಲಿದ್ದಲು ಕೂಡಗಿಗೆ ಬರಬೇಕಾಗುತ್ತದೆ. ಇದಕ್ಕೆ ಯಾರ್ಡ್‌ನಲ್ಲಿ ಜೋಡಿ ರೈಲ್ವೆ ಮಾರ್ಗದ ಅಗತ್ಯ ಇದೆ. ಹೀಗಾಗಿ ರೈಲು ಮಾರ್ಗ ನಿರ್ಮಾಣದ ನಂತರವೇ ಉತ್ಪಾದನೆ ಸಾಧ್ಯವಾಗಬಹುದು. ಸೆಪ್ಟೆಂಬರ್‌ ವೇಳೆಗೆ ಎಲ್ಲ ಸಮಸ್ಯೆಗಳು ಬಗೆಹರಿದು 1ನೇ ಘಟಕ ಪೂರ್ಣವಾಗಿ ಕಾರ್ಯಾರಂಭ ಮಾಡಿ, ರಾಜ್ಯಕ್ಕೆ 400 ಮೆಗಾವಾಟ್‌ ವಿದ್ಯುತ್ ಸಿಗಬಹುದು.ಒಪ್ಪಂದದ ಪ್ರಕಾರ ಕೂಡಗಿ ಘಟಕದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ 50ನ್ನು ರಾಜ್ಯಕ್ಕೆ ನೀಡಬೇಕಾಗುತ್ತದೆ. 1ನೇ ಘಟಕದಲ್ಲಿ ಗರಿಷ್ಠ 800 ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಆದರೆ, ಅದರಲ್ಲಿ 400 ಮೆಗಾವಾಟ್‌ ಕರ್ನಾಟಕ ರಾಜ್ಯಕ್ಕೆ ಸಿಗುವುದು. ಉಳಿದದ್ದನ್ನು ದಕ್ಷಿಣದ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ.
  • 1ನೇ ಘಟಕ ಆರಂಭದ ನಂತರದ ಪ್ರತಿ ಆರು ತಿಂಗಳ ಅಂತರದಲ್ಲಿ ಇನ್ನೆರಡು ಘಟಕಗಳು ಕಾರ್ಯಾರಂಭ ಮಾಡಲಿವೆ. ಒಟ್ಟಿನಲ್ಲಿ 2017ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ 2,400 ಮೆಗಾವಾಟ್‌ ಉತ್ಪಾದನೆ ಆಗಲಿದೆ. ಇದರಿಂದ ರಾಜ್ಯಕ್ಕೆ ಒಟ್ಟು 1,200 ಮೆಗಾವಾಟ್‌ ಲಭ್ಯ ಆಗಲಿದೆ. ರಾಜ್ಯದ ವಿದ್ಯುತ್‌ ಕ್ಷಾಮವೂ ಸ್ವಲ್ಪ ನೀಗಲಿದೆ. ಜಮೀನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳ ಮಕ್ಕಳು ಮತ್ತು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಇರುವುದು.(ಕೂಡಗಿ ಯೋಜನೆಯ ಸಮೂಹ ಪ್ರಧಾನ ವ್ಯವಸ್ಥಾಪಕ ಬಾಲಾಜಿ ಅಯ್ಯಂಗಾರ್‌)

ಭೂಮಿಯ ಬಳಕೆಯ ಯೋಜನೆ

  • ಯೋಜನೆ ಸಲುವಾಗಿ 3,500 ಎಕರೆ ಸ್ವಾಧೀನ. ಇದರಲ್ಲಿ ವಿದ್ಯುತ್‌ ಉತ್ಪಾದನಾ ಘಟಕಕ್ಕೆ 1,950 ಎಕರೆ ಮೀಸಲು. ಕಲ್ಲಿದ್ದಲು, ಹಾರು ಬೂದಿ ನಿರ್ವಹಣೆಗೆ ಸಾವಿರ ಎಕರೆ.
  • ಸಿಬ್ಬಂದಿ ಮತ್ತು ಅವರ ಕುಟುಂಬಕ್ಕಾಗಿ 199 ಎಕರೆಯಲ್ಲಿ ಟೌನ್‌ಶಿಪ್‌ ನಿರ್ಮಾಣ. ಭೂಮಿ ಕೊರತೆ ಇರುವ ಕಾರಣಕ್ಕೆ 800 ಅಪಾರ್ಟ್‌ಮೆಂಟ್‌ ನಿರ್ಮಾಣ. ಶಾಲೆ, ಆಟದ ಮೈದಾನ, ಆಸ್ಪತ್ರೆ, ಶಾಪಿಂಗ್‌ ಕಾಂಪ್ಲೆಕ್ಸ್‌ ಇದರಲ್ಲಿ ಸೇರಿದೆ.
  • ಎರಡು ಬೃಹತ್‌ ಜಲಾಶಯಗಳು: ಯೋಜನೆಗೆ ಆಲಮಟ್ಟಿ ಜಲಾಶಯದಿಂದ ವರ್ಷಕ್ಕೆ 5.2 ಟಿಎಂಸಿ ಅಡಿ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಎನ್ನುವ ಕಾರಣಕ್ಕೆ ಏಪ್ರಿಲ್‌ನಲ್ಲಿ ನೀರು ಪಡೆಯಲು ಅನುಮತಿ ಇಲ್ಲ. ಹೀಗಾಗಿ 45 ದಿನಕ್ಕೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಡಲು 360 ಎಕರೆ ವಿಸ್ತಾರದ ಒಂದು ಜಲಾಶಯ ಸಿದ್ಧವಾಗಿದೆ. ಇನ್ನೊಂದು ಆಗಬೆಕು.ನೀರು ಇಂಗದಂತೆ ಜಲಾಶಯದ ತಳಭಾಗದಲ್ಲಿ ದಪ್ಪನೆಯ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿದೆ.

ವಿಶೇಷ ತಂತ್ರಜ್ಞಾನ

  • ಕಡಿಮೆ ನೀರು, ಕಲ್ಲಿದ್ದಲು ಬಳಕೆ: ಕೂಡಗಿಯದು ಸೂಪರ್‌ ಥರ್ಮಲ್‌ ವಿದ್ಯುತ್‌ ಯೋಜನೆ. ಇಲ್ಲಿ ಕಡಿಮೆ ನೀರು ಮತ್ತು ಕಲ್ಲಿದ್ದಲು ಬಳಸಿ, ಸಾಮಾನ್ಯ ಶಾಖೋತ್ಪನ್ನ ಘಟಕಗಳಿಗಿಂತ ಶೇ 5ರಷ್ಟು ಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಇದೊಂದು ಹೊಸ ತಂತ್ರಜ್ಞಾನ. ಹಾರು ಬೂದಿ ಗಾಳಿಗೆ ಸೇರುವ ಪ್ರಮಾಣ ಕಡಿಮೆ. ಪೇಸ್ಟ್‌ ಮಾದರಿಯಲ್ಲಿ ಅದು ಹೊರಬರುವ ವ್ಯವಸ್ಥೆ ಇದೆ. ಅದನ್ನು ಸಿಮೆಂಟ್‌, ಇಟ್ಟಿಗೆ ಮತ್ತು ರಸ್ತೆ ನಿರ್ಮಾಣ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತದೆ.

2016 ರಲ್ಲಿ ಹಂತ/ಘಟಕಗ ವಿವರ

ಹಂತ ಘಟಕ ಸಂಖ್ಯೆ ವಿದ್ಯತ್ (ಮೆವ್ಯಾ) ಆರಂಭ ದಿನಾಂಕ ಸ್ಥಾಪನೆ ಸ್ಥಿತಿ
1st 1 800 ಜೂನ್ 2016 ರಲ್ಲಿ 1800 ನಿರೀಕ್ಷಿತ ಸಿದ್ಧಪಡಿಸುವ ನಿರೀಕ್ಷೆ ಇದೆ.

ಟಿಜಿ ಘಟಕ-1- 11-03.-2015 ರಲ್ಲಿ (ಬಾಕ್ಸಡ್’ ಅಪ್‍)ಆರಂಭ ಮಾಡಲಾಗಿದೆ.

2 800 ಇನ್ನೂ ಕಾರ್ಯಾರಂಭ ಮಾಡಿಲ್ಲ
3 800 ಇನ್ನೂ ಕಾರ್ಯಾರಂಭ ಮಾಡಿಲ್ಲ
2nd 4 800 ನಿರ್ಮಾಣ ಇನ್ನೂ ಆರಂಭಿಸಬೇಕು
5 800 ನಿರ್ಮಾಣ ಇನ್ನೂ ಆರಂಭಿಸಬೇಕು
- ಒಟ್ಟು 4000 - ದಕ್ಷಿಣ ರಾಜ್ಯಗಳಿಗಾಗಿ ಒಟ್ಟು 4೦೦೦ಮ್ಯಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿ.

ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸಮಸ್ಯೆ

ವಿಜಯಪುರ ಜಿಲ್ಲೆಯ ನಿಡಗುಂದಿಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಎರಡನೇ ಘಟಕದ ಬಾಯ್ಲರ್‌ ಪರೀಕ್ಷೆ 13-11-2016 ಭಾನುವಾರ ಆರಂಭವಾಗಿದ್ದು, 45 ದಿನಗಳ ಕಾಲ ನಡೆಯಲಿದೆ. ‘ಮೊದಲನೇ ಘಟಕದ ಪರೀಕ್ಷೆ 2015ರಲ್ಲಿಯೇ ನಡೆದಿತ್ತು. ಈ ಘಟಕ ಈ ವರ್ಷದ ಮಾರ್ಚ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಬೇಕಿತ್ತು. ಆದರೆ ಜಾರ್ಖಂಡ್‌ನಿಂದ ಕಲ್ಲಿದ್ದಲು ಪೂರೈಕೆಗೆ ವಿಶೇಷ ರೈಲು ಮಾರ್ಗ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲದ ಕಾರಣ ಕಲ್ಲಿದ್ದಲು ತರಿಸಿಕೊಳ್ಳಲು ಆಗಿಲ್ಲ. ಎರಡನೇ ಘಟಕದ ಬಾಯ್ಲರ್‌ ಪರೀಕ್ಷೆಯ ಬಳಿಕ ಎರಡೂ ಘಟಕಗಳು ಒಟ್ಟಿಗೇ 2017 ಮಾರ್ಚ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ’ ಎಂದು ಎನ್‌ಟಿಪಿಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿ. ಕುಮಾರ ತಿಳಿಸಿದ್ದಾರೆ. ಬಾಯ್ಲರ್‌ ಪರೀಕ್ಷೆ ಸಂದರ್ಭದಲ್ಲಿ ಆಗಾಗ್ಗೆ ಭಾರಿ ಪ್ರಮಾಣದಲ್ಲಿ ಶಬ್ದ ಬರುತ್ತದೆ. ಸ್ಥಾವರದ ಸುತ್ತಮುತ್ತಲಿನ ಪ್ರದೇಶದ ಜನರು ಆತಂಕ ಪಡಬಾರದು ಎಂದೂ ಅವರು ಎಚ್ಚರಿಸಿದ್ದಾರೆ

ನೋಡಿ

ಹೆಚ್ಚಿನ ಮಾಹಿತಿಗಾಗಿ

ಕೂಡಗಿ ಉಷ್ಣ ವಿದ್ಯುತ್ ಸ್ಥಾವರ Archived 2015-01-07 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

೧.http://www.ntpc.co.in/index.php?option=com_content&view=article&id=597&Itemid=83&lang=en

Tags:

ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಕೂಡಗಿ-ಸ್ಥಳಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಎನ್ಟಿಪಿಸಿಯ (NTPC) ಯೋಜನೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಗುತ್ತಿಗೆ ಮತ್ತು ಬಂಡವಾಳ ಹೂಡಿಕೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಕೂಡಗಿ ಸೂಪರ್ ಉಷ್ಣ ವಿದ್ಯುತ್ ಸ್ಥಾವರ ವಿವರಗಳು ಮತ್ತು ಹೊಂದಾಣಿಕೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ 2016 ರ ಬೆಳವಣಿಗೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಭೂಮಿಯ ಬಳಕೆಯ ಯೋಜನೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವಿಶೇಷ ತಂತ್ರಜ್ಞಾನಕೂಡಗಿ ಉಷ್ಣ ವಿದ್ಯುತ್ ಸ್ಥಾವರ 2016 ರಲ್ಲಿ ಹಂತಘಟಕಗ ವಿವರಕೂಡಗಿ ಉಷ್ಣ ವಿದ್ಯುತ್ ಸ್ಥಾವರ ದ ಸಮಸ್ಯೆಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನೋಡಿಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಹೆಚ್ಚಿನ ಮಾಹಿತಿಗಾಗಿಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಉಲ್ಲೇಖಕೂಡಗಿ ಉಷ್ಣ ವಿದ್ಯುತ್ ಸ್ಥಾವರ

🔥 Trending searches on Wiki ಕನ್ನಡ:

ವಿಕ್ರಮಾರ್ಜುನ ವಿಜಯಲಿಂಗಾಯತ ಧರ್ಮಬ್ರಾಟಿಸ್ಲಾವಾಮಡಿವಾಳ ಮಾಚಿದೇವಛತ್ರಪತಿ ಶಿವಾಜಿವಚನಕಾರರ ಅಂಕಿತ ನಾಮಗಳುರಾವಣಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಸಹಕಾರಿ ಸಂಘಗಳುಏಡ್ಸ್ ರೋಗಮಹಾವೀರಸ್ತ್ರೀಆರ್ಥಿಕ ಬೆಳೆವಣಿಗೆಇಂಡಿಯನ್ ಪ್ರೀಮಿಯರ್ ಲೀಗ್ಆಹಾರ ಸಂರಕ್ಷಣೆಕರ್ನಾಟಕ ಸಂಗೀತಶಿಕ್ಷಕಕನ್ನಡ ಕಾವ್ಯವಿರಾಟ್ ಕೊಹ್ಲಿಭಾರತದ ಸಂಸತ್ತುರನ್ನಮಧುಮೇಹಗೌತಮಿಪುತ್ರ ಶಾತಕರ್ಣಿಹೃದಯಪೆಟ್ರೋಲಿಯಮ್ಧರ್ಮಗರ್ಭಧಾರಣೆಕಾಂತಾರ (ಚಲನಚಿತ್ರ)ಹರಿಹರ (ಕವಿ)ನಾಲ್ವಡಿ ಕೃಷ್ಣರಾಜ ಒಡೆಯರುಸಿಂಧನೂರುಪು. ತಿ. ನರಸಿಂಹಾಚಾರ್ರಾಘವಾಂಕಶಿಕ್ಷಣಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಮೀನಾ (ನಟಿ)ಕಲ್ಯಾಣ ಕರ್ನಾಟಕಗೊರೂರು ರಾಮಸ್ವಾಮಿ ಅಯ್ಯಂಗಾರ್ಕಳಿಂಗ ಯುದ್ದ ಕ್ರಿ.ಪೂ.261ವಿಷುವತ್ ಸಂಕ್ರಾಂತಿನಾಗರಹೊಳೆ ರಾಷ್ಟ್ರೀಯ ಉದ್ಯಾನವನಆಲೂರು ವೆಂಕಟರಾಯರುಪಂಜಾಬಿನ ಇತಿಹಾಸಪ್ರೀತಿಎಸ್.ಎಲ್. ಭೈರಪ್ಪವಿಭಕ್ತಿ ಪ್ರತ್ಯಯಗಳುಮಿನ್ನಿಯಾಪೋಲಿಸ್ಕಬೀರ್ಮಾನವನ ನರವ್ಯೂಹಹಸ್ತ ಮೈಥುನಕರ್ಣಾಟ ಭಾರತ ಕಥಾಮಂಜರಿಸಸ್ಯಬಾಲ್ಯ ವಿವಾಹಗುರುಲಿಂಗ ಕಾಪಸೆಮಯೂರವರ್ಮಭಾರತೀಯ ನೌಕಾಪಡೆವ್ಯಕ್ತಿತ್ವದುಂಡು ಮೇಜಿನ ಸಭೆ(ಭಾರತ)ಹಸಿರು ಕ್ರಾಂತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವ್ಯವಸಾಯಶ್ರೀನಿವಾಸ ರಾಮಾನುಜನ್ಭಾರತದ ತ್ರಿವರ್ಣ ಧ್ವಜಅ.ನ.ಕೃಷ್ಣರಾಯಭಾರತದಲ್ಲಿ ತುರ್ತು ಪರಿಸ್ಥಿತಿಕೃಷಿ ಸಸ್ಯಶಾಸ್ತ್ರಅರ್ಥಶಾಸ್ತ್ರಮಳೆನೀರು ಕೊಯ್ಲುಜಯಮಾಲಾಬ್ರಿಟೀಷ್ ಸಾಮ್ರಾಜ್ಯಶ್ರೀಕೃಷ್ಣದೇವರಾಯಆರ್.ಟಿ.ಐಸಾವಯವ ಬೇಸಾಯಪರಮಾಣು ಸಂಖ್ಯೆಕ್ಯಾನ್ಸರ್ಸುರಪುರದ ವೆಂಕಟಪ್ಪನಾಯಕಆಮ್ಲ🡆 More