ಆವಿಷ್ಕರಣ

ಆವಿಷ್ಕರಣ ಎಂದರೆ ಒಂದು ಅನನ್ಯ ಅಥವಾ ನವೀನ ಉಪಕರಣ, ವಿಧಾನ, ರಚನೆ ಅಥವಾ ಪ್ರಕ್ರಿಯೆ.

ಆವಿಷ್ಕರಣದ ಪ್ರಕ್ರಿಯೆಯು ಒಟ್ಟಾರೆ ಶಿಲ್ಪಶಾಸ್ತ್ರ ಮತ್ತು ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯೊಳಗಿನ ಪ್ರಕ್ರಿಯೆ. ಅದು ಒಂದು ಯಂತ್ರ ಅಥವಾ ಉತ್ಪನ್ನದಲ್ಲಿ ಸುಧಾರಣೆಯಾಗಿರಬಹುದು ಅಥವಾ ಒಂದು ವಸ್ತುವನ್ನು ಸೃಷ್ಟಿಸಲು ಹೊಸ ವಿಧಾನವಾಗಿರಬಹುದು ಅಥವಾ ಒಂದು ಫಲಿತಾಂಶವಾಗಿರಬಹುದು. ಸಂಪೂರ್ಣವಾಗಿ ಅನನ್ಯ ಕಾರ್ಯ ಅಥವಾ ಫಲಿತಾಂಶವನ್ನು ಸಾಧಿಸುವ ಆವಿಷ್ಕರಣವು ಆಮೂಲಾಗ್ರ ಬೆಳವಣಿಗೆಯಾಗಿರಬಹುದು. ಅಂತಹ ಕಾರ್ಯಗಳು ನವೀನವಾಗಿರುತ್ತವೆ ಮತ್ತು ಅದೇ ಕ್ಷೇತ್ರದಲ್ಲಿ ಪರಿಣತಿ ಪಡೆದ ಇತರರಿಗೆ ಸುವ್ಯಕ್ತವಾಗಿರುವುದಿಲ್ಲ. ಆವಿಷ್ಕಾರಕನು ಯಶಸ್ಸು ಅಥವಾ ವೈಫಲ್ಯದಲ್ಲಿ ದೊಡ್ಡ ಹೆಜ್ಜೆಯನ್ನು ಇಡುತ್ತಿರಬಹುದು.

ಕೆಲವು ಆವಿಷ್ಕರಣಗಳಿಗೆ ಪೇಟೆಂಟ್ ಪಡೆಯಬಹುದು. ಸ್ವಾಮ್ಯಪ್ರಮಾಣವು ಆವಿಷ್ಕಾರಕನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತದೆ ಮತ್ತು ಸಾಧಿಸಲಾದ ಆವಿಷ್ಕರಣವು ವಾಸ್ತವವಾಗಿ ಒಂದು ಆವಿಷ್ಕರಣ ಎಂದು ಕಾನೂನಾತ್ಮಕವಾಗಿ ಗುರುತಿಸುತ್ತದೆ. ಒಂದು ಆವಿಷ್ಕರಣಕ್ಕೆ ಸ್ವಾಮ್ಯಪತ್ರ ಪಡೆಯಲು ಬೇಕಾದ ನಿಯಮಗಳು ಹಾಗೂ ಅಗತ್ಯಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ ಮತ್ತು ಹಲವುವೇಳೆ ಸ್ವಾಮ್ಯಪತ್ರ ಪಡೆಯುವ ಪ್ರಕ್ರಿಯೆಯು ದುಬಾರಿಯಾಗಿರುತ್ತದೆ.

ಸಾಂಸ್ಕೃತಿಕ ಆವಿಷ್ಕರಣವು ಆವಿಷ್ಕರಣದ ಮತ್ತೊಂದು ಅರ್ಥವಾಗಿದೆ, ಇದರರ್ಥ ಜನರಿಂದ ಅಳವಡಿಸಿಕೊಳ್ಳಲಾದ ಮತ್ತು ಬೇರೆಯವರಿಗೆ ಸಾಗಿಸಲಾದ ಉಪಯುಕ್ತ ಸಾಮಾಜಿಕ ವರ್ತನೆಗಳ ನವೀನ ಸಮೂಹ. ಸಾಮಾಜಿಕ ಆವಿಷ್ಕರಣಗಳ ಸಂಸ್ಥೆಯು ಮ್ಯಾಗಜ಼ೀನ್‍ಗಳು ಮತ್ತು ಪುಸ್ತಕಗಳಲ್ಲಿನ ಅನೇಕ ಅಂತಹ ವಿಚಾರಗಳನ್ನು ಸಂಗ್ರಹಿಸಿತು. ಆವಿಷ್ಕರಣವು ಕಲಾತ್ಮಕ ಹಾಗೂ ವಿನ್ಯಾಸದ ಸೃಜನಾತ್ಮಕತೆಯ ಪ್ರಮುಖ ಅಂಶವೂ ಆಗಿದೆ. ಆವಿಷ್ಕರಣಗಳು ಹಲವುವೇಳೆ ಮಾನವ ಜ್ಞಾನ, ಅನುಭವ ಅಥವಾ ಸಾಮರ್ಥ್ಯದ ಎಲ್ಲೆಗಳನ್ನು ವಿಸ್ತರಿಸುತ್ತವೆ.

ಆವಿಷ್ಕರಣಗಳು ಮೂರು ಬಗೆಯದ್ದಾಗಿವೆ: ವೈಜ್ಞಾನಿಕ-ತಂತ್ರಜ್ಞಾನ ಸಂಬಂಧಿ (ವೈದ್ಯಶಾಸ್ತ್ರ ಸೇರಿದಂತೆ), ಸಮಾಜ ರಾಜಕೀಯ (ಅರ್ಥಶಾಸ್ತ್ರ ಮತ್ತು ನ್ಯಾಯಶಾಸ್ತ್ರ ಸೇರಿದಂತೆ), ಮತ್ತು ಮಾನವಿಕ, ಅಥವಾ ಸಾಂಸ್ಕೃತಿಕ.

ವೈಜ್ಞಾನಿಕ-ತಂತ್ರಜ್ಞಾನ ಸಂಬಂಧಿ ಆವಿಷ್ಕರಣಗಳಲ್ಲಿ ರೈಲುಮಾರ್ಗಗಳು, ವಾಯುಯಾನ, ಲಸಿಕೆ ಹಾಕುವಿಕೆ, ಬೆರಕೆತನ, ಪ್ರತಿಜೀವಿಕ, ಅಂತರಿಕ್ಷಯಾನ, ಪ್ರಕಾಶ ವಿಜ್ಞಾನ, ಪರಮಾಣು ಬಾಂಬ್, ಗಣಕ ಬಳಕೆ, ಅಂತರಜಾಲ, ಮತ್ತು ಸ್ಮಾರ್ಟ್‌ಫ಼ೋನ್ ಸೇರಿವೆ.

ಸಮಾಜ ರಾಜಕೀಯ ಆವಿಷ್ಕರಣಗಳಲ್ಲಿ ಸಾಮಾಜಿಕ ವರ್ತನೆಯ ರೀತಿಯನ್ನು ಬದಲಾಯಿಸುವ ಮತ್ತು ಮಾನವ ಪರಸ್ಪರ ಸಂವಹನ ಮತ್ತು ಸಂಘಟನೆಯ ಹೊಸ ರೂಪಗಳನ್ನು ಸ್ಥಾಪಿಸುವ ಹೊಸ ಕಾನೂನುಗಳು, ಸಂಸ್ಥೆಗಳು, ಮತ್ತು ಕಾರ್ಯವಿಧಾನಗಳು ಸೇರಿವೆ.

ಸಹ ನೋಡಿ

ಐತಿಹಾಸಿಕ ಆವಿಷ್ಕಾರಗಳ ಕಾಲರೇಖೆ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅವಿಭಾಜ್ಯ ಸಂಖ್ಯೆಬಿಳಿಗಿರಿರಂಗನ ಬೆಟ್ಟಇತಿಹಾಸಅಹಲ್ಯೆಕ್ರೀಡೆಗಳುಇಂಡಿಯನ್‌ ಎಕ್ಸ್‌ಪ್ರೆಸ್‌ನಕ್ಷತ್ರಮುಂಗಾರು ಮಳೆಉತ್ತರ ಕರ್ನಾಟಕಕಾಮಧೇನು1935ರ ಭಾರತ ಸರ್ಕಾರ ಕಾಯಿದೆಇನ್ಸಾಟ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮತುಂಗಭದ್ರಾ ಅಣೆಕಟ್ಟುಎಚ್‌.ಐ.ವಿ.ಶಿವಕುಮಾರ ಸ್ವಾಮಿಚಂದ್ರ (ದೇವತೆ)ಕೊಪ್ಪಳಗುಬ್ಬಚ್ಚಿಕರ್ನಾಟಕ ವಿಧಾನ ಸಭೆತಿಪಟೂರುಕರ್ನಲ್‌ ಕಾಲಿನ್‌ ಮೆಕೆಂಜಿದೂರದರ್ಶನವಿಶ್ವ ಕಾರ್ಮಿಕರ ದಿನಾಚರಣೆಸಾರಜನಕರಾಷ್ಟ್ರಕವಿವೈದೇಹಿನೊಬೆಲ್ ಪ್ರಶಸ್ತಿಸಂವಹನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಧರ್ಮಸಮಾಜ ಸೇವೆಯೂಟ್ಯೂಬ್‌ಹೊರನಾಡುಕರ್ನಾಟಕ ಸರ್ಕಾರಕನ್ನಡ ಪತ್ರಿಕೆಗಳುಚಾಲುಕ್ಯಸ್ವರಶಿಕ್ಷೆಕೇಂದ್ರಾಡಳಿತ ಪ್ರದೇಶಗಳುಭೋವಿಎಲೆಕ್ಟ್ರಾನಿಕ್ ಮತದಾನಭಾರತದ ಚುನಾವಣಾ ಆಯೋಗಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪ್ರಿಯಾಂಕ ಗಾಂಧಿರಾಣೇಬೆನ್ನೂರುಕನ್ನಡ ಸಂಧಿದಿಕ್ಸೂಚಿಮಲ್ಲಿಕಾರ್ಜುನ ಜ್ಯೋತಿರ್ಲಿಂಗಪದಬಂಧಕರ್ನಾಟಕ ವಿಧಾನ ಪರಿಷತ್ವ್ಯಕ್ತಿತ್ವಗಿರೀಶ್ ಕಾರ್ನಾಡ್ಅಮೆರಿಕನಾಗಚಂದ್ರಶಿರ್ಡಿ ಸಾಯಿ ಬಾಬಾಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಭಾರತದ ಇತಿಹಾಸಕನ್ನಡಅದ್ವೈತಒಡೆಯರ್ಶಿವಮೊಗ್ಗಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜೂಜುಜೋಡು ನುಡಿಗಟ್ಟುಕುಮಾರವ್ಯಾಸಚರ್ಚ್ಲಕ್ಷ್ಮಣಸ್ವಚ್ಛ ಭಾರತ ಅಭಿಯಾನಭಾರತದ ಬುಡಕಟ್ಟು ಜನಾಂಗಗಳುಕುರು ವಂಶಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸ್ಮೃತಿ ಇರಾನಿರಚಿತಾ ರಾಮ್ಮಹಾವೀರಮಂಗಳೂರುಸಿಂಧೂತಟದ ನಾಗರೀಕತೆ🡆 More