ಆಕರ ಗ್ರಂಥ

ಆಕರ ಗ್ರಂಥ ಎಂದರೆ ಯಾವುದರಿಂದ ಮಾಹಿತಿ ಅಥವಾ ವಿಚಾರಗಳನ್ನು ಪಡೆಯಲಾಗುತ್ತದೊ ಆ ಒಂದು ಪಠ್ಯ (ಕೆಲವೊಮ್ಮೆ ವಾಚಿಕ).

ಇತಿಹಾಸ ಲೇಖನದಲ್ಲಿ, ಸಾಮಾನ್ಯವಾಗಿ ಮೂರು ಬಗೆಯ ಆಕರ ಗ್ರಂಥಗಳ ನಡುವೆ ವ್ಯತ್ಯಾಸ ಮಾಡಲಾಗುತ್ತದೆ:

ಪ್ರಾಥಮಿಕ ಮೂಲಗಳು ಘಟನೆಯ ವೇಳೆಯಲ್ಲಿ ಉಪಸ್ಥಿತರಿದ್ದ ಯಾರಿಂದಲೋ ಮಾಡಲ್ಪಟ್ಟ ಇತಿಹಾಸದ ನೇರವಾದ ಬರೆಯಲ್ಪಟ್ಟ ಸಾಕ್ಷ್ಯಾಧಾರಗಳು. ಇವನ್ನು ಅಧ್ಯಯನದಲ್ಲಿರುವ ಮಾಹಿತಿ ಅಥವಾ ವಿಚಾರದ ಮೂಲಕ್ಕೆ ಅತಿ ನಿಕಟವಾಗಿರುವ ಆಕರಗಳು ಎಂದು ವರ್ಣಿಸಲಾಗಿದೆ. ಈ ಬಗೆಯ ಆಕರಗಳು ಅಧ್ಯಯನದ ವಸ್ತುವಿನ ಬಗ್ಗೆ ಸಂಶೋಧಕರಿಗೆ ನೇರ, ಮಧ್ಯಸ್ತಿಕೆಯಿಲ್ಲದ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗಿದೆ. ಪ್ರಾಥಮಿಕ ಮೂಲಗಳು ಸಾಮಾನ್ಯವಾಗಿ ಘಟನೆಯಲ್ಲಿ ಭಾಗಿಯಾದ, ಅದನ್ನು ನೋಡಿದ ಅಥವಾ ಅದು ನಡೆದಾಗ ಜೀವಿಸಿದ್ದ ಯಾರಿಂದಾದರೂ ದಾಖಲಿಸಲಾದ ಮೂಲಗಳು. ಸಾಮಾನ್ಯವಾಗಿ ಪರಿಗಣನೆಯಲ್ಲಿರುವ ವಸ್ತುವಿಗೆ ಸಂಬಂಧಿಸಿದ ಅಧಿಕೃತ ಮತ್ತು ಮೂಲಭೂತ ದಸ್ತಾವೇಜುಗಳೂ ಇರುತ್ತವೆ. ಇದರಲ್ಲಿ ಪ್ರಕಟಿತ ಮೂಲ ವರದಿಗಳು, ಪ್ರಕಟಿತ ಮೂಲ ಕೃತಿಗಳು, ಅಥವಾ ಪ್ರಕಟಿತ ಮೂಲ ಸಂಶೋಧನೆ ಸೇರಿವೆ. ಅವು ಹಿಂದೆ ಬೇರೆ ಎಲ್ಲೂ ಪ್ರಕಟಿತವಾಗಿರದ ಮೂಲ ಸಂಶೋಧನೆ ಅಥವಾ ಹೊಸ ಮಾಹಿತಿಯನ್ನು ಹೊಂದಿರಬಹುದು. ಇವನ್ನು, ಹಲವುವೇಳೆ ಪ್ರಾಥಮಿಕ ಮೂಲಗಳನ್ನು ಉಲ್ಲೇಖಿಸುವ, ಅವುಗಳ ಮೇಲೆ ಟಿಪ್ಪಣಿ ಬರೆಯುವ, ಅಥವಾ ಅವುಗಳ ಮೇಲೆ ವಿಸ್ತರಿಸುವ ಮಾಧ್ಯಮಿಕ ಮೂಲಗಳಿಂದ ವ್ಯತ್ಯಾಸ ಮಾಡಲಾಗುತ್ತದೆ. ಆದರೆ, ಪ್ರಾಥಮಿಕ ಮತ್ತು ಮಾಧ್ಯಮಿಕ, ಇವು ಸಾಪೇಕ್ಷ ಪದಗಳಾಗಿವೆ, ಮತ್ತು ಯಾವುದೇ ನಿರ್ದಿಷ್ಟ ಮೂಲವನ್ನು, ಅದು ಹೇಗೆ ಬಳಸಲ್ಪಡುತ್ತದೆ ಎಂಬುದನ್ನು ಆಧರಿಸಿ, ಪ್ರಾಥಮಿಕ ಅಥವಾ ಮಾಧ್ಯಮಿಕ ಎಂದು ವರ್ಗೀಕರಿಸಬಹುದು. ಭೌತಿಕ ವಸ್ತುಗಳು ಪ್ರಾಥಮಿಕ ಮೂಲಗಳಾಗಬಲ್ಲವು.

ಮಾಧ್ಯಮಿಕ ಮೂಲಗಳು ಪ್ರಾಥಮಿಕ ಮೂಲಗಳಿಂದ ಪಡೆದ ಸಾಕ್ಷ್ಯಾಧಾರವನ್ನು ಆಧರಿಸಿದ ಇತಿಹಾಸದ ಲಿಖಿತ ವರದಿಗಳಾಗಿರುತ್ತವೆ. ಇವು ಸಾಮಾನ್ಯವಾಗಿ ಪ್ರಾಥಮಿಕ ಮೂಲಗಳನ್ನು ವಿಶ್ಲೇಷಿಸುವ, ಸಮೀಕರಿಸುವ, ಮೌಲ್ಯಮಾಪಿಸುವ, ಅರ್ಥೈಸುವ, ಮತ್ತು/ಅಥವಾ ಸಂಶ್ಲೇಷಿಸುವ ವರದಿಗಳು, ಕೃತಿಗಳು ಅಥವಾ ಸಂಶೋಧನೆಯಾಗಿರುವ ಮೂಲಗಳಾಗಿರುತ್ತವೆ. ಇವು ಅಷ್ಟು ವಿಶ್ವಾಸಾರ್ಹವಾಗಿರುವುದಿಲ್ಲ ಮತ್ತು ಪರಿಗಣನೆಯಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಪೂರಕ ದಸ್ತಾವೇಜುಗಳಾಗಿರುತ್ತವೆ.

ತೃತೀಯಕ ಮೂಲಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳನ್ನು ಆಧರಿಸಿದ ಸಂಕಲನಗಳಾಗಿರುತ್ತವೆ. ಅವು ಪರಿಗಣನೆಯಲ್ಲಿರುವ ಒಂದು ನಿರ್ದಿಷ್ಟ ವಿಷಯದ ಸಾಮಾನ್ಯೀಕೃತ ಸಂಶೋಧನೆಯನ್ನು ಹೊಂದಿರುತ್ತವೆ. ಉದಾ. ವಿಶ್ವಕೋಶಗಳು, ಪಠ್ಯಪುಸ್ತಕಗಳು.

ಉಲ್ಲೇಖಗಳು

Tags:

ಮಾಹಿತಿ

🔥 Trending searches on Wiki ಕನ್ನಡ:

ವೃತ್ತಪತ್ರಿಕೆಭಾರತೀಯ ಸಂವಿಧಾನದ ತಿದ್ದುಪಡಿಗಣೇಶ ಚತುರ್ಥಿಭಾಮಿನೀ ಷಟ್ಪದಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಾನವನ ವಿಕಾಸತತ್ತ್ವಶಾಸ್ತ್ರವಿಷ್ಣುವರ್ಧನ್ (ನಟ)ಮಾಸಕೆ. ಎಸ್. ನರಸಿಂಹಸ್ವಾಮಿಕನ್ನಡ ಚಿತ್ರರಂಗಧನಂಜಯ್ (ನಟ)ಕೈಗಾರಿಕಾ ನೀತಿಭಾರತದ ಸರ್ವೋಚ್ಛ ನ್ಯಾಯಾಲಯಶ್ರುತಿ (ನಟಿ)ಪರಿಸರ ಶಿಕ್ಷಣಹನುಮಾನ್ ಚಾಲೀಸಹಿಂದೂ ಧರ್ಮಮನರಂಜನೆಹಣಮಧುಮೇಹಜಾಗತೀಕರಣಪಪ್ಪಾಯಿಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಆಟರಾವಣರಜಪೂತಕೊಬ್ಬಿನ ಆಮ್ಲಆಧುನಿಕ ಕನ್ನಡ ಕಾವ್ಯದ ಬೆಳವಣಿಗೆರಾಜಕೀಯ ಪಕ್ಷಬೆಂಗಳೂರಿನ ಇತಿಹಾಸಭಾರತೀಯ ರೈಲ್ವೆಬಾಲಕಾರ್ಮಿಕಅಮೃತಧಾರೆ (ಕನ್ನಡ ಧಾರಾವಾಹಿ)೧೮೬೨ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕನ್ನಡರಶ್ಮಿಕಾ ಮಂದಣ್ಣಕೋಪಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಬುಡಕಟ್ಟುರಾಷ್ಟ್ರೀಯತೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಲ್ಟಿಮೀಡಿಯಾಭಾರತೀಯ ಅಂಚೆ ಸೇವೆಪಂಚಾಂಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಶ್ರೀ ರಾಘವೇಂದ್ರ ಸ್ವಾಮಿಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದ ಸಂಸತ್ತುಗುರುಭಾರತೀಯ ನದಿಗಳ ಪಟ್ಟಿಭಾರತದ ರಾಷ್ಟ್ರಪತಿಗಳ ಪಟ್ಟಿಗೋಕರ್ಣಕರ್ನಾಟಕದ ಮುಖ್ಯಮಂತ್ರಿಗಳುಸಂಸ್ಕೃತ ಸಂಧಿಗೋಲ ಗುಮ್ಮಟಸೀತೆಮಂತ್ರಾಲಯವಿಜಯನಗರ ಜಿಲ್ಲೆಉತ್ತರ ಕನ್ನಡಓಂ (ಚಲನಚಿತ್ರ)ಹೃದಯಾಘಾತಶೃಂಗೇರಿಕವಿರಾಜಮಾರ್ಗಹೈದರಾಬಾದ್‌, ತೆಲಂಗಾಣಅನುಭವ ಮಂಟಪವಾಲ್ಮೀಕಿಪರಶುರಾಮಪೆಟ್ರೋಮ್ಯಾಕ್ಸ್ (ಚಲನಚಿತ್ರ)ತೆಂಗಿನಕಾಯಿ ಮರವಿಕಿಪೀಡಿಯಕಲ್ಯಾಣ ಕರ್ನಾಟಕಚೆನ್ನಕೇಶವ ದೇವಾಲಯ, ಬೇಲೂರುಹಳೇಬೀಡುಆಮೆರಮ್ಯಾ🡆 More