ಅಮಾವಾಸ್ಯೆ

ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ.

ಪ್ರಾಚೀನ ಭಾರತೀಯ ಪಂಚಾಂಗಗಳು ೩೦ ಚಾಂದ್ರಹಂತಗಳನ್ನು ಬಳಸುತ್ತಿದ್ದವು. ಇವನ್ನು ತಿಥಿಗಳೆಂದು ಕರೆಯಲಾಗುತ್ತದೆ. ಯುತಿಯ ಮೊದಲಿನ ಸೂರ್ಯ ಮತ್ತು ಚಂದ್ರರ ನಡುವಿನ ಕೋನೀಯ ದೂರದ ೧೨ ಕೋನಮಾನಗಳೊಳಗೆ ಚಂದ್ರನು ಇರುವಾಗ ಅಮಾವಾಸ್ಯೆ ತಿಥಿಯು ಸಂಭವಿಸುತ್ತದೆ. ಅನೇಕ ಹಬ್ಬಗಳನ್ನು ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇವುಗಳಲ್ಲಿ ದೀಪಾವಳಿಯು ಅತ್ಯಂತ ಪ್ರಸಿದ್ಧವಾಗಿದೆ. ಅನೇಕ ಹಿಂದೂಗಳು ಅಮಾವಾಸ್ಯೆಯಂದು ಉಪವಾಸ ಮಾಡುತ್ತಾರೆ. ಪ್ರತಿ ತಿಂಗಳು, ಪೂರ್ವಜರ ಪೂಜೆಗಾಗಿ ಅಮಾವಾಸ್ಯೆ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧರ್ಮನಿಷ್ಠ ಜನರು ಪ್ರಯಾಣ ಅಥವಾ ಕೆಲಸ ಮಾಡುವಂತಿಲ್ಲ, ಬದಲಾಗಿ ಅಮಾವಾಸ್ಯೆಗಳ ಕ್ರಿಯಾವಿಧಿಗಳ ಮೇಲೆ ಗಮನಹರಿಸಬೇಕು, ಸಾಮಾನ್ಯವಾಗಿ ಮನೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ. ಪೂರ್ವಜರಿಗೆ ತರ್ಪಣ ನೀಡಲು ವಿಶೇಷವಾಗಿ ಪವಿತ್ರವಾದ ಪಿತೃ ಪಕ್ಷದ ಕೊನೆಯ ದಿನವು ಮಹಾಲಯ ಅಮಾವಾಸ್ಯೆಯಾಗಿದೆ. ವರ್ಷದಲ್ಲಿ, ಈ ದಿನವನ್ನು ಅಪರಕರ್ಮಗಳು ಮತ್ತು ಕ್ರಿಯಾವಿಧಿಗಳನ್ನು ಮಾಡಲು ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ.

ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಭಾರತೀಯ ಉಪಖಂಡದ ಬಹುತೇಕ ಭಾಗಗಳಲ್ಲಿ ಹಿಂದೂ ಚಾಂದ್ರಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಚಾಂದ್ರಮಾನ ಮಾಸವು ಹುಣ್ಣಿಮೆಯ ಅಥವಾ ಪೂರ್ಣಿಮಾದಿಂದ ಆರಂಭವಾಗುತ್ತದೆ, ಆದ್ದರಿಂದ ಅಮಾವಾಸ್ಯೆ ಯಾವಾಗಲೂ ತಿಂಗಳ ಮಧ್ಯದಲ್ಲಿ ಬೀಳುತ್ತದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಅಮಾಂತಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಗೆ ಚಂದ್ರನ ಆಕಾರ ಬದಲಾಗುತ್ತದೆ ಶುಕ್ಲ ಪಕ್ಷವನ್ನು ಪ್ರಕಾಶಮಾನವಾದ ಅರ್ಧಭಾಗವೆಂದು ಕರೆಯಲಾಗುತ್ತದೆ. ಆದ್ದರಿಂದ ಅದೇ ಅಮಾವಾಸ್ಯೆಯಂದು ದೇಶದ ಎಲ್ಲಾ ಕಡೆ ಅದೇ ಉತ್ಸವ ಇರುವುದನ್ನು ಕಾಣಬಹುದು. ಉಜ್ಜೈನಿ, ಅಲಹಾಬಾದ್, ಓರಿಸ್ಸಾ, ಬಿಹಾರ್‌ನ ಬ್ರಾಹ್ಮಣರಂತಹ ಕೆಲವು ಪಂಚ-ಗೌಡ ಬ್ರಾಹ್ಮಣರ ತಿಂಗಳು ಪೂರ್ಣಿಮೆಯ 1 ದಿನ ನಂತರ ಶುರುವಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್, ಕೇರಳ ಮತ್ತು ಆಂಧ್ರ ಪ್ರದೇಶದ ಜನರು ಅಂದರೆ ಪಂಚ-ದ್ರಾವಿಡರ ತಿಂಗಳು ಅಮಾವಾಸ್ಯೆಯ ಒಂದು ದಿನದ ನಂತರದಿಂದ ಆರಂಭವಾಗುತ್ತದೆ. ಆದಿ ಶಂಕರರು ವಾಸಿಸಿದ್ದ ಕಾಂಚೀಪುರಂ ಮಠಕ್ಕೆ ಎಲ್ಲ ಪಂಚ-ಗೌಡ, ಪಂಚ-ದ್ರಾವಿಡರು ಭೇಟಿಕೊಡುತ್ತಿದ್ದರಿಂದ ತಮಿಳುನಾಡು ಪಂಚಾಂಗ ಮತ್ತು ಶಕ ಪಂಚಾಂಗದ ಮಿಶ್ರಣವನ್ನು ಅಭಿವೃದ್ಧಿಮಾಡಿಕೊಂಡಿತು. ಹಾಗೆಯೇ ಪಂಚ-ಗೌಡ ಮತ್ತು ಪಂಚ-ದ್ರಾವಿಡರು ಒಟ್ಟಿಗೆಯಿರುವ ಸ್ಥಳಗಳಾದ ರಾಜಸ್ಥಾನ, ಮಧ್ಯಪ್ರದೇಶ, ದಕ್ಷಿಣ ಉತ್ತರ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಸಹ ಇದೇ ಮಿಶ್ರಣಗಳನ್ನು ಬಳಸಲಾಗುತ್ತದೆ. ಜೈನ್ ಧರ್ಮದ ಜನರು ಸಹ ಪಂಚ-ದ್ರಾವಿಡ ಪಂಚಾಂಗವನ್ನು ಅನುಸರಿಸುತ್ತಿದ್ದಾರೆ.

ಸೂರ್ಯನಿಗೆ ಚಂದ್ರನ ಕೋನಾಂತರ ಮತ್ತು ತಿಥಿಗಳು

ಅಮಾವಾಸ್ಯೆ
ಕಪ್ಪುಗೋಳ ಚಂದ್ರ: :ಭೂಮಿಯಿಂದ ಸೂರ್ಯನ ಕೇಂದ್ರಕ್ಕೆ ರೇಖೆ ಎಳೆದಾಗ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಕೋನವನ್ನು ತೋರಿಸಿದೆ: ಚತುರ್ದಶಿ - ಅಮವಾಸ್ಯೆ - ಪ್ರಥಮಾ ಮತ್ತು ದ್ವಿತೀಯಾ ತಿಥಿ

ಉಲ್ಲೇಖಗಳು

Tags:

ದೀಪಾವಳಿಪಿತೃ ಪಕ್ಷ

🔥 Trending searches on Wiki ಕನ್ನಡ:

ಗ್ರಾಮ ಪಂಚಾಯತಿಮಂಗಳಮುಖಿಕೊಡಗಿನ ಗೌರಮ್ಮರೇಷ್ಮೆವಿರಾಟ್ ಕೊಹ್ಲಿಪಂಜೆ ಮಂಗೇಶರಾಯ್ವೃತ್ತಪತ್ರಿಕೆಮುಪ್ಪಿನ ಷಡಕ್ಷರಿಓಂ ನಮಃ ಶಿವಾಯಆದಿವಾಸಿಗಳುಶುಕ್ರಸಾವಿರಾರು ನದಿಗಳುದ್ವಿಗು ಸಮಾಸಸಂಸ್ಕಾರಮೈಲಾರಲಿಂಗಎಂ ಚಿನ್ನಸ್ವಾಮಿ ಕ್ರೀಡಾಂಗಣಕಾದಂಬರಿಹೃದಯಾಘಾತಟಿ.ಪಿ.ಕೈಲಾಸಂಜಿಲ್ಲೆವಿಜಯನಗರಗಾಂಧಿ ಜಯಂತಿದಕ್ಷಿಣ ಕನ್ನಡಭಾರತೀಯ ರಿಸರ್ವ್ ಬ್ಯಾಂಕ್ರನ್ನಎರಡನೇ ಮಹಾಯುದ್ಧಸಾಲುಮರದ ತಿಮ್ಮಕ್ಕಶತಭಿಷ (ನಕ್ಷತ್ರ)ಗಾದೆಜ್ಞಾನಪೀಠ ಪ್ರಶಸ್ತಿಭಾರತದಲ್ಲಿ ಮೀಸಲಾತಿಕನ್ನಡ ವಿಕಿಪೀಡಿಯರಮ್ಯಾದಾಸ ಸಾಹಿತ್ಯಚಿರತೆಅಶ್ವಮೇಧವೆಂಕಟೇಶ್ವರವಚನ ಸಾಹಿತ್ಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅರಳಿಮರಹಣಪೂರ್ಣಚಂದ್ರ ತೇಜಸ್ವಿಶ್ರೀ ರಾಮಾಯಣ ದರ್ಶನಂಗೌತಮಿಪುತ್ರ ಶಾತಕರ್ಣಿಶುಭ ಶುಕ್ರವಾರವಡ್ಡಾರಾಧನೆಬಹುಸಾಂಸ್ಕೃತಿಕತೆಕನ್ನಡಪ್ರಭವಿಭಕ್ತಿ ಪ್ರತ್ಯಯಗಳುಹಂಪೆಕೆ. ಎಸ್. ನಿಸಾರ್ ಅಹಮದ್ಕಾರ್ಮಿಕರ ದಿನಾಚರಣೆರಾಷ್ಟ್ರೀಯ ಉತ್ಪನ್ನಬೆಟ್ಟಭಾರತದ ಚುನಾವಣಾ ಆಯೋಗಭಾರತದ ನದಿಗಳುಕಿರುಧಾನ್ಯಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಚಿಗುರಿದ ಕನಸುನವರತ್ನಗಳುಭಾರತದ ಆರ್ಥಿಕ ವ್ಯವಸ್ಥೆರಾಘವಾಂಕಎಳ್ಳೆಣ್ಣೆಬಹಮನಿ ಸುಲ್ತಾನರುಅಲಾವುದ್ದೀನ್ ಖಿಲ್ಜಿಉಮರ್ನೀಲಿ ಚಿತ್ರಗೌತಮ ಬುದ್ಧವರ್ಗೀಯ ವ್ಯಂಜನವಿನಾಯಕ ಕೃಷ್ಣ ಗೋಕಾಕಜಿಂಕೆಮೂಲಧಾತುಗಳ ಪಟ್ಟಿಸೂರ್ಯಕನ್ನಡ ಸಂಧಿಸೆಸ್ (ಮೇಲ್ತೆರಿಗೆ)ಗಿರೀಶ್ ಕಾರ್ನಾಡ್🡆 More