ಹೆನ್ರಿ ಫೋರ್ಡ್: ಅಮೇರಿಕದ ಕೈಗಾರಿಕೋದ್ಯಮಿ

ಹೆನ್ರಿ ಫೋರ್ಡ್ (ಜುಲೈ ೩೦, ೧೮೬೩ - ಏಪ್ರಿಲ್ ೭, ೧೯೪೭) ಅಮೇರಿಕದ ಕೈಗಾರಿಕೋದ್ಯಮಿ, ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕರು ಮತ್ತು ಸಾಮೂಹಿಕ ಉತ್ಪಾದನೆ ಜೋಡಣೆ ತಂತ್ರ ಅಭಿವೃದ್ಧಿಯ ಪ್ರಾಯೋಜಕರು.ಫೋರ್ಡ್ ಮೋಟಾರ್ ಕಂಪನಿ ಮಾಲೀಕರಾಗಿ, ಅವರು ವಿಶ್ವದ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಯಾದರು .

೧೯ ನೆಯ ಶತಮಾನದ ಕೊನೆಯಲ್ಲಿ ಜಾಗತಿಕ ಕೈಗಾರಿಕಾ ಬೆಳವಣೆಗೆ ರೈಲು ರಸ್ತೆ ಮತ್ತು ಕಬ್ಬಿಣದ ಮೇಲೆ ಕೇಂದ್ರಿಕೃತವಾಗಿತ್ತು. ೧೯೨೦ ರ ಹೊತ್ತಿಗೆ ಜನರಿಗೆ ಉಪಯುಕ್ತವಾದ ಮತ್ತು ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿಂದ ಈ ಬೆಳವಣೆಗೆ ಪ್ರಭಾವಗೊಂಡಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಸ್ವಚಾಲಿತ ವಾಹನಗಳ ತಯಾರಿಕೆ. ಈ ದಿಶೆಯಲ್ಲಿ ಮುಂದಾಳುತನ ಪ್ರದರ್ಶಿಸಿ ಪ್ರಪಂಚದ ಮುಖವನ್ನೇ ಬದಲಾಯಿಸಲು ಕಾರಣನಾದವರು ಹೆನ್ರಿ ಫೋರ್ಡ್.

ಹೆನ್ರಿ ಫೋರ್ಡ್
ಹೆನ್ರಿ ಫೋರ್ಡ್: ಆರಂಭಿಕ ಜೀವನ, ವೃತ್ತಿ ಜೀವನ, ಗೌರವಗಳು ಮತ್ತು ಮಾನ್ಯತೆ
Born೩೦ ಜುಲೈ ೧೮೬೩
Died೭ ಏಪ್ರಿಲ್ ೧೯೪೭
Nationalityಅಮೆರಿಕನ್
Occupation(s)ಎಂಜಿನಿಯರ್, ಕೈಗಾರಿಕೋದ್ಯಮಿ, ಲೋಕೋಪಕಾರಿ
Years active೧೮೯೧ -೧೯೪೫
Known forಫೋರ್ಡ್ ಮೋಟಾರ್ ಕಂಪನಿಯನ್ನು ಸ್ಥಾಪಿಸಿ ಮುನ್ನಡೆಸಿದ್ದಕ್ಕೆ
Titleಫೋರ್ಡ್ ಮೋಟಾರ್ ಕಂಪನಿಯ ಅಧ್ಯಕ್ಷ (೧೯೦೬-೧೯೧೯) (೧೯೪೩-೧೯೪೫)
Political partyಪ್ರಜಾಪ್ರಭುತ್ವ (1918 ರ ನಂತರ) ,ರಿಪಬ್ಲಿಕನ್ (1918 ಕ್ಕಿಂತ ಮೊದಲು)
Spouseಕ್ಲಾರಾ ಜೆನಿ ಬ್ರಯಾಂಟ್
Childrenಎಡ್ಸಲ್ ಫೋರ್ಡ್
Parentವಿಲಿಯಂ ಫೋರ್ಡ್ ಮೇರಿ ಫೋರ್ಡ್
Signature
ಹೆನ್ರಿ ಫೋರ್ಡ್: ಆರಂಭಿಕ ಜೀವನ, ವೃತ್ತಿ ಜೀವನ, ಗೌರವಗಳು ಮತ್ತು ಮಾನ್ಯತೆ

ಆರಂಭಿಕ ಜೀವನ

ಹೆನ್ರಿ ಫೋರ್ಡ್ ಗ್ರೀನ್ಫೀಲ್ಡ್ ಟೌನ್ಶಿಪ್ ಮಿಚಿಗನ್ನಲ್ಲಿ ಜುಲೈ ೩೦, ೧೮೬೩ ಜನಿಸಿದರು. ಅವನ ತಂದೆಯಾದ ವಿಲಿಯಂ ಫೋರ್ಡ್ (೧೮೨೬ - ೧೯೦೫) ಕೌಂಟಿ ಕಾರ್ಕ್, ಐರ್ಲೆಂಡಿನಲ್ಲಿ ಜನಿಸಿದರು, ಅವರು ಮೂಲತ ಇಂಗ್ಲೆಂಡಿನವರು. ಅವರ ತಾಯಿ, ಮೇರಿ ಫೋರ್ಡ್ (೧೮೩೯-೧೮೭೬), ಮಿಚಿಗನಲ್ಲಿ ಜನಿಸಿದರು. ಹೆನ್ರಿ ಫೋರ್ಡ್ ಒಡಹುಟ್ಟಿದವರು ಮಾರ್ಗರೆಟ್ ಫೋರ್ಡ್ (೧೮೬೭-೧೯೩೮); ಜೇನ್ ಫೋರ್ಡ್ (೧೮೬೮-೧೯೪೫); ವಿಲಿಯಂ ಫೋರ್ಡ್ (೧೮೭೧-೧೯೧೭) ಮತ್ತು ರಾಬರ್ಟ್ ಫೊರ್ಡ್ (೧೮೭೩-೧೯೩೪).ಅವನ್ನು ೧೫ ವರ್ಷದವನಾಗಿದ್ದಾಗ ಅವನ ತಂದೆ ಅವನಿಗೆ ಒಂದು ಪಾಕೆಟ್ ಗಡಿಯಾರ ನೀಡಿದರು. ಈ ವಯಸ್ಸಿನಲ್ಲೇ ಗಡಿಯಾರಗಳನ್ನು ರಿಪೇರಿ ಮಾಡುತ್ತಿದ್ದುದರಿಂದ ನೆರೆಹೊರೆಯರಲ್ಲಿ ಪ್ರಸಿದ್ದನಾಗಿದ್ದ.


ಮದುವೆ ಮತ್ತು ಕುಟುಂಬ

ಹೆನ್ರಿ ಫೋರ್ಡ್: ಆರಂಭಿಕ ಜೀವನ, ವೃತ್ತಿ ಜೀವನ, ಗೌರವಗಳು ಮತ್ತು ಮಾನ್ಯತೆ 
ಹೆನ್ರಿ ಫೋರ್ಡ್
(ವಯಸು ೨೫)

ಫೋರ್ಡ್, ಕ್ಲಾರಾ ಜೇನ್ ಬ್ರ್ಯಾಂಟ್‍ರವರನ್ನು (೧೮೬೬-೧೯೫೦) ಏಪ್ರಿಲ್ ೧೧, ೧೮೮೮ ರಂದು ಮದುವೆಯಾದರು. ಅವರ ಮಗನ ಹೆಸರು ಎಡ್‍ಸೆಲ್ ಫೋರ್ಡ್ (೧೮೯೩–೧೯೪೩).

ವೃತ್ತಿ ಜೀವನ

೧೮೯೧ ರಲ್ಲಿ, ಫೋರ್ಡ್ 'ಎಡಿಸನ್ ಇಲ್ಯುಮಿನೇಟಿಂಗ್ ಕಂಪೆನಿಯಲ್ಲಿ' ಎಂಜಿನಿಯರ್ ಆಗಿ ಸೇರಿಕೊಂಡರು. ೧೮೯೩ ರಲ್ಲಿ ಅವರು ಮುಖ್ಯ ಎಂಜಿನಿಯರ್‍ ಆಗಿ ನೇಮಕಗೊಂಡರು, ಇದರಿಂದಾಗಿ ಗ್ಯಾಸೋಲಿನ್ ಎಂಜಿನ್ ಮೇಲೆ ವೈಯಕ್ತಿಕ ಪ್ರಯೋಗಗಳನ್ನು ಮಾಡಲು ಅವರಿಗೆ ಸಮಯ ಮತ್ತು ಹಣ ಲಭಿಸಿತ್ತು. ಈ ಪ್ರಯೋಗಗಳಿಂದ ಅವರು ೧೮೯೬ ರಲ್ಲಿ ಸ್ವಯಂನೊಂದಿತ ವಾಹನವನ್ನು ತಯಾರಿಸಿದರು: 'ಫೋರ್ಡ್ ಕ್ವಡ್ರಿಸೈಕಲ್'. ಅವರು ಜೂನ್ ೪ ರಂದು ಪರೀಕ್ಷಾರ್ಥವಾಗಿ ಓಡಿಸಿದರು. ನಂತರದ ದಿನಗಳಲ್ಲಿ ಅದರಲ್ಲಿ ಹಲವು ಸುಧಾರನೆಗಳನ್ನು ತಂದರು. ೧೮೯೬ ರಲ್ಲಿ ಎಡಿಸನ್ ಅಧಿಕಾರಿಗಳು ಸಭೆಯಲ್ಲಿ ಫೋರ್ಡ್, ಥಾಮಸ್ ಎಡಿಸನ್‍ರನ್ನು ಭೇಟಿಯಾದರು. ಎಡಿಸನ್ ಫೋರ್ಡ್ ವಾಹನ ಪ್ರಯೋಗಕ್ಕೆ ಅನುಮೋದನೆ ನೀಡಿದರು. ಎಡಿಸನ್ ಪ್ರೋತ್ಸಾಹದಿಂದ, ಫೋರ್ಡ್ ೧೮೯೮ ರಲ್ಲಿ ಎರಡನೇ ವಾಹನವನ್ನು ತಯಾರಿಸಿದರು. ವಿಲಿಯಂ ಎಚ್ ಮರ್ಫಿ ಬೆಂಬಲದೊಂದಿಗೆ, ಫೋರ್ಡ್ ಎಡಿಸನ್ ಕಂಪನಿ ರಾಜಿನಾಮೆನೀಡಿ ಆಗಸ್ಟ್ ೫, ೧೮೯೯ ರಂದು ಡೆಟ್ರಾಯಿಟ್ ಆಟೋಮೊಬೈಲ್ ಕಂಪನಿ ಸ್ಥಾಪಿಸಿದರು.ಕಂಪನಿ ಯಶಸ್ವಿಯಾಗಲಿಲ್ಲ ಮತ್ತು ಜನವರಿ ೧೯೦೧ ರಲ್ಲಿ ವಿಸರ್ಜಿಸಲ್ಪಟ್ಟಿತು. ಫೋರ್ಡ್, ಅಂತರ್ನಿರ್ಮಿತ ವಿನ್ಯಾಸ ಮತ್ತು ಯಶಸ್ವಿಯಾಗಿ ಅಕ್ಟೋಬರ್ ೧೯೦೧ ರಲ್ಲಿ ಒಂದು ೨೬ ಅಶ್ವಶಕ್ತಿಯ ವಾಹನವನ್ನು ತಯಾರಿಸಿ ಸ್ಪರ್ದಿಸಿದರು. ಈ ಯಶಸ್ಸು, ಮರ್ಫಿ ಮತ್ತು ಡೆಟ್ರಾಯಿಟ್ ಆಟೋಮೊಬೈಲ್ ಕಂಪನಿ ಇತರ ಷೇರುದಾರರಿಂದ ಹೆನ್ರಿ ಫೋರ್ಡ್ ಕಂಪನಿಯನ್ನು ನವೆಂಬರ್ ೩೦, ೧೯೦೧ ರಂದು ಸ್ಥಾಪಿಸಿದರು, ಇದರಲ್ಲಿ ಫೋರ್ಡ್ ಮುಖ್ಯ ಎಂಜಿನಿಯರ್‍ರಾದರು. ೧೯೦೨ ರಲ್ಲಿ ಈ ಕಂಪನಿಯನ್ನು ಬಿಟ್ಟು ತಮ್ಮ ಸ್ವಂತ ಕಂಪನಿಯನ್ನು ಸ್ಥಾಪಿಸಿದರು, "ಫೋರ್ಡ್ ಮತ್ತು ಮಾಲ್ಕೊಮ್ಸನ್, ಲಿಮಿಟೆಡ್". ಜೂನ್ ೧೬, ೧೯೦೩ ರಂದು 'ಫೋರ್ಡ್ ಮೋಟಾರ್ ಕಂಪನಿ' ಎಂದು ಮರುನಾಮಕರಣ ಹೊಂದಿತು.


ಮಾಡೆಲ್ ಟಿ

ಹೆನ್ರಿ ಫೋರ್ಡ್: ಆರಂಭಿಕ ಜೀವನ, ವೃತ್ತಿ ಜೀವನ, ಗೌರವಗಳು ಮತ್ತು ಮಾನ್ಯತೆ 
ಫೋರ್ಡ್ ಉತ್ಪಾದನೆ ಜೋಡಣೆ ತಂತ್ರ

ಮಾಡೆಲ್ ಟಿ ಅಕ್ಟೋಬರ್ ೧ ರಂದು, ೧೯೦೮ ಪರಿಚಯಿಸಲಾಯಿತು. ಕಾರು ಓಡಿಸಲು ಬಹಳ ಸರಳ ಮತ್ತು ಸುಲಭ ಮತ್ತು ದುರಸ್ತಿಗೆ ಅಗ್ಗವಾಗಿ. ೧೯೦೮ ರಲ್ಲಿ ಇದರ ಬೆಲೆ $ ೮೨೫ ($ ೨೧,೭೩೦ ಇಂದು) ಇದರ ಬೆಲೆ ಪ್ರತಿ ವರ್ಷ ಕುಸಿಯಿತು, ೧೯೨೦ ರಲ್ಲಿ, ಬಹುತೇಕ ಅಮೆರಿಕನ್ ಚಾಲಕರು ಮಾಡೆಲ್ ಟಿ ಚಾಲನೆ ಕಲಿತ್ತಿದರು. ಮಾಡೆಲ್ ಟಿ ವಾಹನ ಪರಿಚಯದಿಂದ ಸಾರಿಗೆ ಮತ್ತು ಅಮೆರಿಕನ್ ಉದ್ಯಮದಲ್ಲಿ ಕ್ರಾಂತಿ ಕಂಡುಬಂದಿತು. ಮಾರಾಟದ ಸಂಖ್ಯೆ ೧೯೧೪ ರಲ್ಲಿ ೨೫೦೦,೦೦೦ ಮಿರಿತು. ೧೯೧೮ ರಲ್ಲಿ ಅಮೇರಿಕಾದ ಎಲ್ಲಾ ಕಾರುಗಳಲ್ಲಿ ಅರ್ಧ ಮಾಡೆಲ್ ಟಿ ಕಾರುಗಳಾಗಿತ್ತು. 1920 ರಲ್ಲಿ ಮಾಡೆಲ್ ಟಿ ಮಾರಾಟ ಕುಸಿಯಲಾರಂಭಿಸಿತು. ೧೯೨೬ ಆರಂಬಕ್ಕೆ ಮಾಡೆಲ್ ಟಿ ಮಾರಾಟ ಕುಸಿಯುತ್ತಿತ್ತು. ಇದರಿಂದಾಗಿ ಹೆನ್ರಿ ಹೊಸ ಮಾದರಿ ಮಾಡೆಲ್ ಮಾಡಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಫೋರ್ಡ್, ಡಿಸೆಂಬರ್ ೧೯೨೭ ರಲ್ಲಿ ಮಾಡೆಲ್ ಎ ಪರಿಚಯಿಸಿದರು. ಇದರಿಂದ ಅವರು ೪ ದಶಲಕ್ಷ ಅಮೆರಿಕನ್ ಡಾಲರ್ ಲಾಭ ಹೊಂದಿದರು.


ಕಾರ್ಮಿಕ ತತ್ವಶಾಸ್ತ್ರ

ಫೋರ್ಡ್ ವೇತನ ದಿನಕ್ಕೆ $ ೫ ($ ೧೨೦ ಇಂದು) ನೀಡುವ ಮೂಲಕ ೧೯೧೪ ರಲ್ಲಿ ವಿಶ್ವದವನ್ನು ಆಶ್ಚರ್ಯಚಕಿತಗೊಳ್ಳಿಸಿದರು, ಇದು ಹೆಚ್ಚು ಬಹುಪಾಲು ಕೆಲಸಗಾರರು ವೇತನದ ದುಪ್ಪಟ್ಟು. ಈ ಯೋಜನೆಯನ್ನು ಜನವರಿ ೫, ೧೯೧೪ ರಂದು ಅನುಷ್ಟಾನಕ್ಕೆ ತಂದರು. ಇದರಿಂದಾಗಿ ಅರ್ಹತಾ ಕಾರ್ಮಿಕರಿಗೆ $ ೨.೩೪ ರಿಂದ $ ೫ ವೇತನ ಏರಿಸಲಾಗಿತ್ತು. ಇದರಿಂದಾಗಿ ಸ್ಪರ್ಧಿಗಳು ಬಲವಂತವಾಗಿ ವೇತನ ಹೆಚ್ಚಿಸಬೇಕಾಗಿತ್ತು ಅಥವಾ ತಮ್ಮ ಅತ್ಯುತ್ತಮ ಕಾರ್ಮಿಕರನ್ನು ಕಳೆದುಕೊಳ್ಳುವಂತಾಯಿತು. ತನ್ನ ಕೆಲಸಗಾರರಿಗೆ ವೇತನವನ್ನು ಹೆಚ್ಚಿಸುವ ಜೊತೆಗೆ, ೧೯೨೬ ರಲ್ಲಿ ಫೋರ್ಡ್ ಕೆಲಸದ ದಿನಗಳನ್ನು ಕಡಿಮೆ ಮಾಡಿದರು. ೧೯೨೨ ರಲ್ಲಿ ಕೆಲಸಗಾರರು ಆರು ದಿನ ೮-ಗಂಟೆಗಳ ಕಾಲ ಕೆಲಸ, ಇದು ೧೯೨೬ ರಲ್ಲಿ ಐದು ದಿನ ೮-ಗಂಟೆಗಳ ಕಾಲ ಕೆಲಸವೆಂದು ಬದಲಾವಣೆ ಹೊಂದಿತು.


ಫೋರ್ಡ್ ಏರೋಪ್ಲೇನ್ ಕಂಪನಿ

ಹೆನ್ರಿ ಫೋರ್ಡ್: ಆರಂಭಿಕ ಜೀವನ, ವೃತ್ತಿ ಜೀವನ, ಗೌರವಗಳು ಮತ್ತು ಮಾನ್ಯತೆ 
ಫೋರ್ಡ್ ೪-ಎಟಿ-ಎಫ್

ಫೋರ್ಡ್, ಇತರ ವಾಹನ ಕಂಪನಿಗಳಂತೆ ಪ್ರಥಮ ಯುದ್ಧದ ಸಮಯದಲ್ಲಿ ವಾಯುಯಾನ ವ್ಯಾಪಾರ ಪ್ರವೇಶಿಸಿತು. ಇವರ ಲಿಬರ್ಟಿ ಎಂಜಿನ್‍ಗಳನ್ನು ತಯಾರಿಸುತ್ತಿದ್ದರು. ಯುದ್ಧದ ನಂತರ ಫೋರ್ಡ್ ಸ್ಟೌಟ್ ಮೆಟಲ್ ಏರೋಪ್ಲೇನ್ ಕಂಪನಿ ಸ್ವಾಧೀನಪಡಿಸಿಕೊಂಡಿತು. ಫೋರ್ಡ್ ಅತ್ಯಂತ ಯಶಸ್ವಿ ವಿಮಾನ ಫೋರ್ಡ್ ೪ಎಟಿ ಟ್ರ್ಐಮೋಟಾರ್, ಸಾಮಾನ್ಯವಾಗಿ ಟಿನ್ ಗೂಸ್ ಎಂದು ಕರೆಯಲಾಗುತ್ತದೆ.


ರೇಸಿಂಗ್‍

ಫೋರ್ಡ್ ೧೯೦೧ ರಿಂದ ೧೯೧೩ ರವರೆಗೆ ಆಟೋ ರೇಸಿಂಗ್‍ನಲ್ಲಿ ಆಸಕ್ತಿ ಹೊಂದಿದ್ದರು. ಫೋರ್ಡ್ ತನ್ನ ರೇಸಿಂಗ್ ವರ್ಷಗಳಲ್ಲಿ ಆಟೋ ರೇಸಿಂಗ್ ಮೇಲೆ ಸಾಕಷ್ಟು ಪರಿಣಾಮ ಮಾಡಿದರು ಮತ್ತು ಅವರು ೧೯೯೬ ರಲ್ಲಿ ಮೋಟಾರ್ ಹಾಲ್ ಆಫ್ ಫೇಮ್ ಅಮೇರಿಕದ ಗೌರವಕ್ಕೆ ಪಾತ್ರರಾದರು.


ಗೌರವಗಳು ಮತ್ತು ಮಾನ್ಯತೆ

  • ಡಿಸೆಂಬರ್ ೧೯೯೯ ರಲ್ಲಿ, 20 ನೇ ಶತಮಾನದ ವ್ಯಾಪಕವಾಗಿ ಮೆಚ್ಚತಕ್ಕ ಜನರ ಗ್ಯಾಲಪ್ ಪಟ್ಟಿಯಲ್ಲಿ ೧೮ ಜನರಲ್ಲಿ ಅವರ ಹೆಸರು ಇತ್ತು.
  • ೧೯೨೮ ರಲ್ಲಿ, ಫೋರ್ಡ್ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್ಸ್ ಎಲಿಯಟ್ ಕ್ರೀಸನ್ ಪದಕವನ್ನು ಪಡೆದರು.
  • ಅವರನ್ನು ೧೯೪೬ ರಲ್ಲಿ ಆಟೋಮೋಟಿವ್ ಹಾಲ್ ಆಫ್ ಫೇಮ್‍ಗೆ ಸೇರ್ಪಡೆ ಮಾಡಲಾಯಿತು.
  • ೧೯೩೮ ರಲ್ಲಿ, ಫೋರ್ಡ್ ಜರ್ಮನಿಯ ನಾಜಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಜರ್ಮನ್ ಈಗಲ್ ನೀಡಲಾಯಿತು.


ಉಲ್ಲೇಖನಗಳು

Tags:

ಹೆನ್ರಿ ಫೋರ್ಡ್ ಆರಂಭಿಕ ಜೀವನಹೆನ್ರಿ ಫೋರ್ಡ್ ವೃತ್ತಿ ಜೀವನಹೆನ್ರಿ ಫೋರ್ಡ್ ಗೌರವಗಳು ಮತ್ತು ಮಾನ್ಯತೆಹೆನ್ರಿ ಫೋರ್ಡ್ ಉಲ್ಲೇಖನಗಳುಹೆನ್ರಿ ಫೋರ್ಡ್

🔥 Trending searches on Wiki ಕನ್ನಡ:

ಓಂ ನಮಃ ಶಿವಾಯವಿಜಯನಗರ ಸಾಮ್ರಾಜ್ಯಕರ್ನಾಟಕದ ಕಲೆ ಮತ್ತು ಸಂಸ್ಕೃತಿಕನ್ನಡದಲ್ಲಿ ಕಾದಂಬರಿ ಸಾಹಿತ್ಯವ್ಯಾಪಾರ ಸಂಸ್ಥೆನಿರುದ್ಯೋಗವಾಲ್ಮೀಕಿಯಣ್ ಸಂಧಿಅರವಿಂದ ಘೋಷ್ಪೂರ್ಣಚಂದ್ರ ತೇಜಸ್ವಿಮಾನವ ಹಕ್ಕುಗಳುಖೊಖೊಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಹೊಂಗೆ ಮರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಂವಹನಕರ್ನಾಟಕದ ಜಿಲ್ಲೆಗಳುಭಾರತೀಯ ಧರ್ಮಗಳುವಿಶ್ವದ ಅದ್ಭುತಗಳುವಿಜಯದಾಸರುಸೌರಮಂಡಲಜಯಪ್ರಕಾಶ್ ಹೆಗ್ಡೆಅರ್ಜುನಮಹಾತ್ಮ ಗಾಂಧಿಅ.ನ.ಕೃಷ್ಣರಾಯಶಬರಿಮಂಡಲ ಹಾವುಕಲ್ಪನಾಕ್ರೈಸ್ತ ಧರ್ಮಮದುವೆಕಲಿಯುಗಭಾಷಾ ವಿಜ್ಞಾನಎರಡನೇ ಮಹಾಯುದ್ಧಬೆಳಗಾವಿಬೆಳ್ಳುಳ್ಳಿಭೂತಾರಾಧನೆಭಾರತದ ಚುನಾವಣಾ ಆಯೋಗಕೈವಾರ ತಾತಯ್ಯ ಯೋಗಿನಾರೇಯಣರುಗಣೇಶಕದಂಬ ರಾಜವಂಶಝಾನ್ಸಿ ರಾಣಿ ಲಕ್ಷ್ಮೀಬಾಯಿಹಣಅಶ್ವತ್ಥಮರಅಕ್ಷಾಂಶ ಮತ್ತು ರೇಖಾಂಶರಾಜ್ಯಸಭೆರಾಘವಾಂಕರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುವಚನಕಾರರ ಅಂಕಿತ ನಾಮಗಳುಭಾರತೀಯ ಭಾಷೆಗಳುಗಿಡಮೂಲಿಕೆಗಳ ಔಷಧಿಅಂಚೆ ವ್ಯವಸ್ಥೆಮಂತ್ರಾಲಯಸಾಲ್ಮನ್‌ಮಾಸ್ಕೋಜಶ್ತ್ವ ಸಂಧಿಕರ್ನಾಟಕದ ಹಬ್ಬಗಳುವ್ಯಂಜನಚೆನ್ನಕೇಶವ ದೇವಾಲಯ, ಬೇಲೂರುಒಡೆಯರ್ಅಳಿಲುಭಾಮಿನೀ ಷಟ್ಪದಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಬ್ಯಾಡ್ಮಿಂಟನ್‌ಮಾನಸಿಕ ಆರೋಗ್ಯವಿನಾಯಕ ಕೃಷ್ಣ ಗೋಕಾಕಯಕ್ಷಗಾನಮಂಟೇಸ್ವಾಮಿಕರ್ನಾಟಕದ ನದಿಗಳುವೆಂಕಟೇಶ್ವರ ದೇವಸ್ಥಾನಮೂಲಧಾತುಗಳ ಪಟ್ಟಿಬಹುವ್ರೀಹಿ ಸಮಾಸಭಾರತದಲ್ಲಿನ ಜಾತಿ ಪದ್ದತಿಮಾನವ ಸಂಪನ್ಮೂಲ ನಿರ್ವಹಣೆನಾಟಕಜರಾಸಂಧಮಣ್ಣುತ್ಯಾಜ್ಯ ನಿರ್ವಹಣೆಇತಿಹಾಸಕೃಷ್ಣರಾಜನಗರ🡆 More