ಹುನಾಲು

ಹುನಾಲು ಕಾಂಬ್ರಿಟೇಸೀ ಕುಟುಂಬದ ಟರ್ಮಿನೇಲಿಯ ಪ್ಯಾನಿಕುಲೇಟ ಪ್ರಭೇದದ ಪರ್ಣಪಾತಿ ಮರ.

Terminalia paniculata
ಹುನಾಲು
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮಿರ್ಟೇಲ್ಸ್
ಕುಟುಂಬ: ಕಾಂಬ್ರೆಟೇಸಿಯೇ
ಕುಲ: ಟರ್ಮಿನೇಲಿಯಾ
ಪ್ರಜಾತಿ:
T. paniculata
Binomial name
Terminalia paniculata
Roth
ಹುನಾಲು
ಹುನಾಲು ಮರದ ತೊಗಟೆ
ಹುನಾಲು
ಹೂವುಗಳು

ವಿವರಗಳು

ತೊಗಟೆ ಮಂದ, ಕಪ್ಪು ಮಿಶ್ರ ಕಂದುಬಣ್ಣ. ಉದ್ದುದ್ದನೆಯ ಸೀಳಿಕೆಗಳಿಂದ ಕೂಡಿರುತ್ತದೆ. ಕಾಂಡದ ಕೆಳಭಾಗ ಕೆಲವು ಬಾರಿ ಆನಿಕೆಗಳಿಂದ (ಬಟ್ರೆಸ್) ಕೂಡಿರುತ್ತದೆ. ಕರ್ನಾಟಕದ ಮಿಶ್ರ ಪರ್ಣಪಾತಿ ಕಾಡುಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಕಂದರಗಳಲ್ಲಿ ಇಳುಕಲಿನಲ್ಲಿ ತೇವಮಯ ಆದರೆ ಜೌಗಿಲ್ಲದ ಪ್ರದೇಶಗಳಲ್ಲಿ ಸು.30ಮೀ ಎತ್ತರದವರೆಗೂ ಬೆಳೆಯುವುದುಂಟು. ಅಪರೂಪಕ್ಕೆ ಜಂಬು ಮಣ್ಣು ನೆಲದಲ್ಲೂ ಕಂಡುಬರುತ್ತದೆ. ಸ್ವಾಭಾವಿಕ ಪುನರುತ್ಪತ್ತಿ ಸಮರ್ಪಕ.

ಚೌಬೀನೆಯ ಬಿಳಿಮರ ಬೂದುಬಣ್ಣ. ಕೆಚ್ಚು ಬೂದುಮಿಶ್ರ ಕಂದುಬಣ್ಣದಿಂದ ಅಚ್ಚ ಕಂದುಬಣ್ಣದವರೆಗೂ ಇರುವುದು. ಹದಮಾಡಲು ಕಷ್ಟ. ಜಾಗ್ರತೆ ಒಣಗಿದರೆ ಬಿರುಕು ಬಿಡುವುದು. ಹಸಿಯದರಲ್ಲಿ ಕೊಯ್ಸಿ ಅರೆವಾಸಿಗಿಟ್ಟರೆ ಉತ್ತಮ. ಕೊಯ್ತಕ್ಕೆ ಅಷ್ಟು ಕಷ್ಟವಿಲ್ಲ. ತಕ್ಕಮಟ್ಟಿಗೆ ಬಲಯುತವಾಗಿರುತ್ತದೆ. ಬಾಳಿಕೆ ಮಧ್ಯಮ.

ಉಪಯೋಗಗಳು

ರೈಲ್ವೆ ಕೋಚ್ ಹಾಗೂ ಸ್ಲೀಪರುಗಳ ತಯಾರಿಕೆಗೆ, ದೋಣಿಕಟ್ಟುವುದಕ್ಕೆ ಇದನ್ನು ಉಪಯೋಗಿಸುತ್ತಾರೆ. ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮನೆ ಕಟ್ಟಲು ಮತ್ತು ಇನ್ನಿತರ ಮರಗೆಲಸಗಳಿಗೆ ಉಪಯೋಗಿಸುವುದಿದೆ.

ಉಲ್ಲೇಖಗಳು

ಹುನಾಲು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುನಾಲು

Tags:

ಪರ್ಣಪಾತಿಮರ

🔥 Trending searches on Wiki ಕನ್ನಡ:

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗುಣ ಸಂಧಿರಾಹುಲ್ ಗಾಂಧಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಪರಿಸರ ವ್ಯವಸ್ಥೆಯೋಗಭಾರತದ ಮುಖ್ಯಮಂತ್ರಿಗಳುಆದಿವಾಸಿಗಳುಮಾಧ್ಯಮಭಾರತೀಯ ಶಾಸ್ತ್ರೀಯ ಸಂಗೀತರಾಜ್‌ಕುಮಾರ್ಕೆ ವಿ ನಾರಾಯಣಬಿದಿರುಉಪ್ಪಿನ ಸತ್ಯಾಗ್ರಹಜೀವನ ಚೈತ್ರಚಂದ್ರಕೊಪ್ಪಳಶ್ರೀ ಕೃಷ್ಣ ಪಾರಿಜಾತಟೆನಿಸ್ ಕೃಷ್ಣಭಾರತೀಯ ಸಂಸ್ಕೃತಿತುಮಕೂರುಗುರು (ಗ್ರಹ)ಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಾಟ್ಸ್ ಆಪ್ ಮೆಸ್ಸೆಂಜರ್ನಾಡ ಗೀತೆಶಿವನ ಸಮುದ್ರ ಜಲಪಾತಭಾರತದ ಸ್ವಾತಂತ್ರ್ಯ ದಿನಾಚರಣೆಸಂಸ್ಕೃತ ಸಂಧಿಗ್ರೀಕ್ ಪುರಾಣ ಕಥೆಕೃಷಿಸಿದ್ದರಾಮಯ್ಯಗಂಗ (ರಾಜಮನೆತನ)ಭಾರತದ ಆರ್ಥಿಕ ವ್ಯವಸ್ಥೆದಿಕ್ಕುಹಳೆಗನ್ನಡಸಾಯಿ ಪಲ್ಲವಿಸಾಮ್ರಾಟ್ ಅಶೋಕವಿ. ಕೃ. ಗೋಕಾಕಪ್ರಬಂಧಸುದೀಪ್ಕೃಷ್ಣರಾಜಸಾಗರಮದರ್‌ ತೆರೇಸಾಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹದ್ದುತೆಂಗಿನಕಾಯಿ ಮರಸ್ಫಿಂಕ್ಸ್‌ (ಸಿಂಹನಾರಿ)ಸಮಾಸದಾಸವಾಳಕೊಲ್ಲೂರು ಮೂಕಾಂಬಿಕಾ ದೇವಸ್ಥಾನಲಕ್ಷ್ಮೀಶಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಒಪ್ಪಂದದೇಶಗಳ ವಿಸ್ತೀರ್ಣ ಪಟ್ಟಿಮಹಾವೀರಹಾಗಲಕಾಯಿಹಿಂದೂ ಮದುವೆಬಾದಾಮಿ ಗುಹಾಲಯಗಳುಮಂಗಳ (ಗ್ರಹ)ಚೋಳ ವಂಶಮಾಟ - ಮಂತ್ರವಿಜ್ಞಾನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಿಜಯಪುರಕರ್ನಾಟಕದ ಜಾನಪದ ಕಲೆಗಳುಎಚ್. ತಿಪ್ಪೇರುದ್ರಸ್ವಾಮಿಸೂರ್ಯವ್ಯೂಹದ ಗ್ರಹಗಳುಸಂಯುಕ್ತ ಕರ್ನಾಟಕಕೃಷ್ಣದೇವರಾಯಭಾರತೀಯ ಭೂಸೇನೆಈಡನ್ ಗಾರ್ಡನ್ಸ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬೆರಳ್ಗೆ ಕೊರಳ್ಮರಾಠಾ ಸಾಮ್ರಾಜ್ಯಕೃತಕ ಬುದ್ಧಿಮತ್ತೆ🡆 More