ಹಗಲು ವೇಷಗಾರರು

ಮುಖಕ್ಕೆ ಬಣ್ಣ, ವೇಷ ಭೂಷಣದೊಂದಿಗೆ ರಾಮಾಯಣ ನಾಟಕದ ಮೂಲಕ ಮಕ್ಕಳು ಮತ್ತು ಜನರನ್ನು ರಂಜಿಸಿ, ತಮ್ಮ ಕಲೆ, ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಹಗಲು ವೇಷಗಾರರು ಇಂದಿನ ದಿನಗಳಲ್ಲಿ ಮರೆಯಾಗುತ್ತಿದ್ದಾರೆ.

ಹಗಲು ವೇಷಗಾರರು

ಕೊಪ್ಪಳ ಜಿಲ್ಲೆಯ ಸಿದ್ದಾಪುರ, ತಾವರಗೇರಾ ಕುದರಿಮೋತಿ, ನೂಲ್ವಿ ಹಾಗೂ (ರಾಯಚೂರು) ಜಿಲ್ಲೆಯ ಮಸ್ಕಿ, ಮಾನವಿಯಲ್ಲಿ ಹಗಲು ವೇಷಗಾರರು ಅಲ್ಲಲ್ಲಿ ಕಂಡು ಬರುತ್ತಿದ್ದು, ಶತಶತಮಾನಗಳ ಬಣ್ಣದ ಬದುಕು ಬಿಟ್ಟು ತಮ್ಮ ಮೂಲ ಕಲೆಯನ್ನು ಮರೆಯುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ 2 ವರ್ಷಕ್ಕೊಮ್ಮೆ 10-15 ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಮಾಯಣ, ಕುರುಕ್ಷೇತ್ರಗಳ ಬಗ್ಗೆ ಕಥೆಯ ನಾಟಕವಾಡಿ ಜನರನ್ನು ರಂಜಿಸುತ್ತಿದ್ದರು. 15 ದಿನಗಳ ನಂತರ ಕಾಸು ಪಡೆಯುತ್ತಿದ್ದರು. ಈಗ ಬಹುತೇಕ ಕಣ್ಮರೆಯಾಗುತ್ತಿದೆ.

ಕಾಯಕ ಹೀಗೆ

ಮಹಾರಾಷ್ಟ್ರದ ಪುಣೆ, ಮುಂಬಯಿ, ಕೊಲ್ಲಾಪುರ ನಗರಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉತ್ಸವ, ರಾಜ್ಯೋತ್ಸವ, ಪ್ರತಿಭಟನೆ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ವೇಷಗಾರರು ಅನೇಕ ಕುಟುಂಬದಿಂದ 10 ರಿಂದ 12 ಜನರ ತಂಡ ಸೀತೆ, ರಾಮ, ಲಕ್ಷ್ಮಣ, ಹನುಮಂತ, ನಕುಲ, ಸಹದೇವ, ದುರ್ಯೋಧನ, ಪಾಂಚಾಲಿ, ರಾಕ್ಷಸ ಸೇರಿದಂತೆ ನಾನಾ ವೇಷ ಧರಿಸಿ ರಾಮಾಯಣದ ಗೀತೆ, ಭಾವಗೀತೆ, ಭಕ್ತಿ ಗೀತೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಿದ್ದರು.

ಪರ್ಯಾಯ ಕೆಲಸ

ಹಗಲುವೇಷ ಧರಿಸಿ ರಾಮ, ರಾವಣರ ಕಥೆ ಹೇಳುವ ಮೂಲಕ ಹಣ ಸಂಪಾದಿಸಿ ಕೆಲ ವೇಷಗಾರರು ಸ್ವಂತ ಮನೆ ನಿರ್ಮಿಸಿಕೊಂಡು ಗದ್ದೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೆಲ ವೇಷಗಾರರು ಗೋಡೆ ಭಾವಚಿತ್ರ, ಪ್ಲ್ಯಾಸ್ಟಿಕ್ ತಂಬಿಗೆ, ದಿನದರ್ಶಿನಿ ಸೇರಿದಂತೆ ನಾನಾ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈಗ ಬೆರಳಣಿಕೆಯಷ್ಟು ವೇಷಗಾರರು ನೆನಪಾದಾಗ ಇಲ್ಲವೇ, ಕಾಟಾಚಾರಕ್ಕೆ ಎನ್ನುವಂತೆ ಭಕ್ತಿಗೀತೆ, ಸಂಸ್ಕೃತಿ ಮೂಲಕ ಕಾಸು ಪಡೆಯುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಈಗಲೂ ವೇಷಗಾರರ ಹಿಂದೆ ಮಕ್ಕಳ ದಂಡೇ ಬರುತ್ತಿದೆ.

ಉಲ್ಲೇಖಗಳು

Tags:

ಹಗಲು ವೇಷಗಾರರು ಹಗಲು ವೇಷಗಾರರು ಕಾಯಕ ಹೀಗೆಹಗಲು ವೇಷಗಾರರು ಪರ್ಯಾಯ ಕೆಲಸಹಗಲು ವೇಷಗಾರರು ಉಲ್ಲೇಖಗಳುಹಗಲು ವೇಷಗಾರರುಬಣ್ಣ

🔥 Trending searches on Wiki ಕನ್ನಡ:

ಕ್ಯಾನ್ಸರ್ವೇಗರಕ್ತಚಂದನಕರ್ನಾಟಕದಲ್ಲಿ ಸಹಕಾರ ಚಳವಳಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಆಯುರ್ವೇದಪಾಂಡವರುನೀತಿ ಆಯೋಗಕನ್ನಡ ರಂಗಭೂಮಿರಜನೀಕಾಂತ್ಮೀನುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ದಿಯಾ (ಚಲನಚಿತ್ರ)ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾರಾ ಅಬೂಬಕ್ಕರ್ರಾವಣಚಂದ್ರಶೇಖರ ಕಂಬಾರತಂಬಾಕು ಸೇವನೆ(ಧೂಮಪಾನ)ಚಂಪೂತೂಕಭಾರತದಲ್ಲಿ ನಿರುದ್ಯೋಗಪೊನ್ನದ್ರವ್ಯ ಸ್ಥಿತಿಭಾರತದ ಆರ್ಥಿಕ ವ್ಯವಸ್ಥೆಕನ್ನಡ ಸಾಹಿತ್ಯ ಪ್ರಕಾರಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವೇಗೋತ್ಕರ್ಷಅನುಭೋಗವಿಜಯದಾಸರುಪು. ತಿ. ನರಸಿಂಹಾಚಾರ್ನೀರಿನ ಸಂರಕ್ಷಣೆಸ್ವಾಮಿ ವಿವೇಕಾನಂದಹಂಪೆಅಷ್ಟಾವಕ್ರಸಿಂಗಾಪುರಭಾರತದ ಗವರ್ನರ್ ಜನರಲ್ಯೋನಿಭಾರತೀಯ ನೌಕಾಪಡೆಭಾರತೀಯ ರೈಲ್ವೆನಾಗರಹೊಳೆ ರಾಷ್ಟ್ರೀಯ ಉದ್ಯಾನವನಹಜ್ಗೂಗಲ್ಭಾರತದ ಸ್ವಾತಂತ್ರ್ಯ ಚಳುವಳಿಬೇಡಿಕೆಅಲ್ಲಮ ಪ್ರಭುಭಾರತದಲ್ಲಿನ ಶಿಕ್ಷಣಭಾರತೀಯ ರಿಸರ್ವ್ ಬ್ಯಾಂಕ್ದೆಹಲಿಹನುಮಂತಕರಗಛತ್ರಪತಿ ಶಿವಾಜಿಸ್ವರ್ಣಯುಗಭತ್ತಟೊಮೇಟೊಸಲಗ (ಚಲನಚಿತ್ರ)ದ.ರಾ.ಬೇಂದ್ರೆಉತ್ಕರ್ಷಣ - ಅಪಕರ್ಷಣ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಕರ್ನಾಟಕ ಯುದ್ಧಗಳುಕಬೀರ್ಆಮದು ಮತ್ತು ರಫ್ತುಐಹೊಳೆದಕ್ಷಿಣ ಭಾರತಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮತೆಲುಗುಮಹೇಂದ್ರ ಸಿಂಗ್ ಧೋನಿಮಳೆನೀರು ಕೊಯ್ಲುಫ್ರೆಂಚ್ ಕ್ರಾಂತಿಕರ್ನಾಟಕಭಗವದ್ಗೀತೆಬಹಮನಿ ಸುಲ್ತಾನರುವಿಧಾನ ಪರಿಷತ್ತುಅರವಿಂದ ಘೋಷ್ಯುವರತ್ನ (ಚಲನಚಿತ್ರ)ವೃಕ್ಷಗಳ ಪಟ್ಟೆದೇವರ/ಜೇಡರ ದಾಸಿಮಯ್ಯಹಾಗಲಕಾಯಿಆರ್ಥಿಕ ಬೆಳೆವಣಿಗೆ🡆 More