ಸಂಗೀತಾ ಈಶ್ವರನ್

ಸಂಗೀತಾ ಈಶ್ವರನ್ ಅವರು ಭಾರತೀಯ ಭರತನಾಟ್ಯ ನೃತ್ಯಗಾರ್ತಿ, ಸಂಶೋಧನಾ ವಿದ್ವಾಂಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ.

ಅವರಿಗೆ, ಯುವ ನೃತ್ಯಗಾರರಿಗೆ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.

ಸಂಗೀತಾ ಈಶ್ವರನ್
ಸಂಗೀತಾ ಈಶ್ವರನ್ ಅವರು ೨೦೧೨ ರಲ್ಲಿ ಬ್ರೆಜಿಲ್‌ನ ಕಾಸಾ ಫೊರಾ ಡೊ ಇಕ್ಸೊಗೆ ಭೇಟಿ ನೀಡಿದ ಸಂದರ್ಭ

ಆರಂಭಿಕ ಜೀವನ ಮತ್ತು ಶಿಕ್ಷಣ

ಈಶ್ವರನ್ ಭಾರತದ ಚೆನ್ನೈನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ (ಎಮ್.ಸಿ .ಸಿ) ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಐದನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಔಪಚಾರಿಕ ತರಬೇತಿಯನ್ನು ಪಡೆದರು. ಕಲಾನಿಧಿ ನಾರಾಯಣನ್ ಅವರು ಸ್ಥಾಪಿಸಿದ ನೃತ್ಯ ಶಾಲೆಯಾದ ಅಭಿಯಾನ ಸುಧಾರದ ಮೊದಲ ವಿದ್ಯಾರ್ಥಿಗಳಲ್ಲಿ ಒಬ್ಬರಾದರು. ಅವರು ನೃತ್ಯ, ಅಭಿನಯ, ಕಲರಿಪಯಟ್ಟು, ಕೂಚಿಪುಡಿ, ಕರ್ನಾಟಕ ಸಂಗೀತ ಮತ್ತು ನಟ್ಟುವಂಗಂ ವಾದ್ಯದಂತಹ ಲಲಿತಕಲೆಗಳಲ್ಲಿ ತರಬೇತಿ ಪಡೆದಿದ್ದರು.

ವೃತ್ತಿ

ಈಶ್ವರನ ಅವರು ಕತ್ರಾಡಿ ಎನ್‌ಜಿಒ‌ದ ಸ್ಥಾಪಕರಾಗಿದ್ದರು. ಇವರು ಸಂಘರ್ಷ ಪರಿಹಾರದ ಉದ್ದೇಶಕ್ಕಾಗಿ ಲಲಿತಕಲೆಗಳನ್ನು ಬಳಸಿಕೊಳ್ಳುವ ಕತ್ರಾಡಿ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಶಿಕ್ಷಣ ನೀಡುವ ಮೂಲಕ ಅಂಚಿನಲ್ಲಿರುವ ಮತ್ತು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಾರೆ. ಈಶ್ವರನ್ ಅವರು ದೌರ್ಜನ್ಯಕ್ಕೊಳಗಾದ ಮಕ್ಕಳು, ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬೀದಿ ಮಕ್ಕಳು, ಮಾದಕ ವ್ಯಸನಿಗಳು ಮತ್ತು ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡಿದ್ದಾರೆ. ಸಾಮಾಜಿಕ ಸುಧಾರಣೆಯನ್ನು ತರುವ ಪ್ರಯತ್ನದಲ್ಲಿ ನೃತ್ಯ ಮತ್ತು ರಂಗಭೂಮಿಯನ್ನು ಬಳಸುತ್ತಾರೆ. ಕತ್ರಾಡಿ ಅವರು ಅಮೇರಿಕನ್ ಹಣಕಾಸು ವಿಶ್ಲೇಷಕರಾಗಿ ಸಾಮಾಜಿಕ ಕಾರ್ಯಕರ್ತೆ ಲಿಜ್ ಹೇನ್ಸ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ವಿಂಡ್ ಡ್ಯಾನ್ಸರ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ಮಕ್ಕಳ ಶಿಕ್ಷಣಕ್ಕಾಗಿ ಜಾನಪದ ಕಲೆಗಳನ್ನು ಬಳಸಿಕೊಳ್ಳುತ್ತದೆ. ಕೂತು ಕಲಾವಿದ ತಿಲಗಾವತಿಯವರ ಸಹಯೋಗದೊಂದಿಗೆ ಈ ಟ್ರಸ್ಟ್ ಕೆಲಸ ಮಾಡುತ್ತದೆ.

ಈಶ್ವರನ್ ತಮ್ಮ ಯೋಜನೆಗಳಲ್ಲಿ ಚಿಕಿತ್ಸಿಕ ಮತ್ತು ಜಾಗೃತಿ ವೇದಿಕೆಗಳೊಂದಿಗೆ ಸಹಕರಿಸುತ್ತಾರೆ. ಈ ಕಾರಣದಿಂದಾಗಿ ಅವರನ್ನು "ಚಿಂತನಾ ನರ್ತಕಿ" ಎಂದು ವಿವರಿಸಲಾಗಿದೆ ಮತ್ತು ಸೌಂದರ್ಯದ ಆಕರ್ಷಣೆಯ ಸೀಮಿತ ವ್ಯಾಪ್ತಿಯನ್ನು ಮೀರಿ ಶಾಸ್ತ್ರೀಯ ನೃತ್ಯವನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಯೂತ್ ಫಾರ್ ಪೀಸ್ ಎಂಬ ಯುನೆಸ್ಕೋ ಉಪಕ್ರಮದ ಸಂಯೋಜಕರಾಗಿದ್ದರು ಮತ್ತು ಮೆಕ್ಸಿಕೋ, ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದರು. ಇವರು ಹ್ಯಾಂಡಿಕ್ಯಾಪ್ ಇಂಟರ್‌ನ್ಯಾಶನಲ್ ವರ್ಲ್ಡ್ ವಿಷನ್ ಇಂಟರ್‌ನ್ಯಾಷನಲ್ ಮತ್ತು ಆಕ್ಸ್‌ಫ್ಯಾಮ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಸಹಕರಿಸಿದ್ದಾರೆ. ಅವರು ದೇಶ್ ಎಂಬ ಎನ.ಜಿ ಒ ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಎಚ್‌ಐ‌ವಿ/ಏಡ್ಸ್ ರೋಗಿಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಕೆಲಸ ಮಾಡಿದರು. ಇವರು ಭಾರತದಲ್ಲಿ ಕೋವಿಡ್ - ೧೯ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ಚೆನ್ನೈ ವಲಸೆ ಕಾರ್ಯಪಡೆಯೊಂದಿಗೆ ಸ್ವಯಂಸೇವಕರಾಗಿದ್ದರು.

ಅವರು ೨೦೦೮ ರಿಂದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. ಮತ್ತು ಏಷ್ಯಾ ಫೌಂಡೇಶನ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. ಇದಕ್ಕಾಗಿ ಅವರು ಕಾರ್ಯಕ್ರಮದ ಭಾಗವಾಗಿ ಥೈಲ್ಯಾಂಡ್, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾದಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಉಲ್ಲೇಖಗಳು

Tags:

ಭರತನಾಟ್ಯ

🔥 Trending searches on Wiki ಕನ್ನಡ:

ವಿದುರಾಶ್ವತ್ಥಅರ್ಥ ವ್ಯವಸ್ಥೆಸೂಳೆಕೆರೆ (ಶಾಂತಿ ಸಾಗರ)ಭಾರತೀಯ ರೈಲ್ವೆಭಾರತೀಯ ನೌಕಾಪಡೆಗೋವಿಂದ ಪೈದೆಹಲಿಕಾರ್ಲ್ ಮಾರ್ಕ್ಸ್ಆಡಮ್ ಸ್ಮಿತ್ಲಕ್ಷ್ಮಿಪ್ರೀತಿಹೈನುಗಾರಿಕೆಗೋಳಮಯೂರವರ್ಮಧೀರೂಭಾಯಿ ಅಂಬಾನಿಆರ್ಯ ಸಮಾಜವಿರಾಟ್ ಕೊಹ್ಲಿಛತ್ರಪತಿ ಶಿವಾಜಿಶ್ರೀಲಂಕಾವಾಟ್ಸ್ ಆಪ್ ಮೆಸ್ಸೆಂಜರ್ಮಾರಾಟ ಪ್ರಕ್ರಿಯೆದಶಾವತಾರಎನ್ ಸಿ ಸಿಮೋಡಇಸ್ಲಾಂಕನ್ನಡ ಬರಹಗಾರ್ತಿಯರುರಾಜ್‌ಕುಮಾರ್ಎರಡನೇ ಎಲಿಜಬೆಥ್ಭಾರತೀಯ ಅಂಚೆ ಸೇವೆಹಾಸನ ಜಿಲ್ಲೆಚಿನ್ನದ ಗಣಿಗಾರಿಕೆಸಂಕಷ್ಟ ಚತುರ್ಥಿರನ್ನರಾಮಾಯಣಭಾರತದ ಮುಖ್ಯಮಂತ್ರಿಗಳುಕಿತ್ತೂರು ಚೆನ್ನಮ್ಮಮಹಿಳೆ ಮತ್ತು ಭಾರತಪೊನ್ನಪು. ತಿ. ನರಸಿಂಹಾಚಾರ್ಆಂಧ್ರ ಪ್ರದೇಶರಗಳೆಟಿ.ಪಿ.ಕೈಲಾಸಂಜೀವನಹಿಂದೂ ಧರ್ಮಅಮೇರಿಕ ಸಂಯುಕ್ತ ಸಂಸ್ಥಾನಕನ್ನಡ ವ್ಯಾಕರಣಕೊಪ್ಪಳಟೈಗರ್ ಪ್ರಭಾಕರ್ಹಣಕಾಸುಆ ನಲುಗುರು (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಶಿಶುನಾಳ ಶರೀಫರುಪಂಜಾಬ್ಭಾರತದ ಸ್ವಾತಂತ್ರ್ಯ ಚಳುವಳಿಶ್ರೀ ರಾಮಾಯಣ ದರ್ಶನಂಋತುಚಕ್ರಶ್ರೀಆಲೂರು ವೆಂಕಟರಾಯರುಅರ್ಥಶಾಸ್ತ್ರಬ್ಯಾಸ್ಕೆಟ್‌ಬಾಲ್‌ಅಂತರಜಾಲದೇವನೂರು ಮಹಾದೇವಹಿಮಭೂಕಂಪಓಂ (ಚಲನಚಿತ್ರ)ಉತ್ತರ ಕರ್ನಾಟಕಆಂಗ್ಲಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಚೋಳ ವಂಶನೀರುಮಧ್ವಾಚಾರ್ಯಶೈವ ಪಂಥಅರ್ಜುನಹಗ್ಗಬುದ್ಧನರ್ಮದಾ ನದಿ🡆 More