ಕೂಚಿಪೂಡಿ: ಶಾಸ್ತ್ರೀಯ ಭಾರತೀಯ ನೃತ್ಯಗಳಲ್ಲಿ ಒಂದು

ಕೂಚಿಪೂಡಿ (Kuchipudi) (ತೆಲುಗು : కూచిపూడి) ('Koochipoodi' ('ಕೂಚಿಪೂಡಿ') ಎಂದು ಉಚ್ಚಾರಿತ) ಭಾರತ ದೇಶದ ಆಂಧ್ರಪ್ರದೇಶ ರಾಜ್ಯದ ಭಾರತೀಯ ಶಾಸ್ತ್ರೀಯ ನೃತ್ಯರೂಪ.

ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯ. ಕೂಚಿಪೂಡಿ ಎಂಬುದು ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ತೀರದಲ್ಲಿರುವ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರ ಹೆಸರು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಮುದಾಯವು ಈ ನೃತ್ಯಕಲಾರೂಪವನ್ನು ಅಭ್ಯಸಿಸುತ್ತಿದ್ದ ರಿಂದ, ಇದಕ್ಕೆ 'ಕೂಚಿಪೂಡಿ ನೃತ್ಯ' ಎನ್ನುವುದು ರೂಢಿಯಾಯಿತು.

ಕೂಚಿಪೂಡಿ: ಇತಿವೃತ್ತ, ಶೈಲಿ, ಚಲನವಲನಗಳು ಮತ್ತು ಸಂಗೀತ
ಬೆಂಗಳೂರಿನ ಐಐಎಂನಲ್ಲಿ ಕೂಚಿಪೂಡಿ ನೃತ್ಯ ಪ್ರದರ್ಶನ ನೀಡುತ್ತಿರುವ ಉಮಾ ಮುರಳಿಕೃಷ್ಣ
ಕೂಚಿಪೂಡಿ: ಇತಿವೃತ್ತ, ಶೈಲಿ, ಚಲನವಲನಗಳು ಮತ್ತು ಸಂಗೀತ
ರಾಜಮಹೇಂದ್ರಿ ಮೂಲದ ಕೂಚಿಪೂಡಿ ನೃತ್ಯಕಲಾವಿದೆ ಹಾಗೂ ಭಾರತದ ಐಸಿಎಐ 'ಐಸಿಡಬ್ಲ್ಯೂಎಐ ಸಂಸ್ಥಾನದ ಸಿಎ-ಸಿಪಿಟಿಯಲ್ಲಿ ರಾಷ್ಟ್ರ ಮಟ್ಟದ ಮೊದಲ ಶ್ರೇಯಾಂಕ' ಪಡೆದ ಅಪರ್ಣಾ ಕ್ರೊವ್ವಿಡಿ
ಕೂಚಿಪೂಡಿ: ಇತಿವೃತ್ತ, ಶೈಲಿ, ಚಲನವಲನಗಳು ಮತ್ತು ಸಂಗೀತ
ಸಾಹಿತಿ ರವಳಿ, ಕೂಚಿಪೂಡಿ ನೃತ್ಯ ಕಲಾಕಾರಿನಿ, ವಿಸಾಖಪಟ್ನಂ
ಕೂಚಿಪೂಡಿ: ಇತಿವೃತ್ತ, ಶೈಲಿ, ಚಲನವಲನಗಳು ಮತ್ತು ಸಂಗೀತ
ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವ ಕೂಚಿಪೂಡಿ ನೃತ್ಯಕಲಾವಿದೆ ವಿ ಅಂಜನಾ ದೇವಿ

ಇತಿವೃತ್ತ

  • ನೃತ್ಯ ಪ್ರದರ್ಶನವು ಸಾಮಾನ್ಯವಾಗಿ ವೇದಿಕೆಯ ಕೆಲವು ಆಚರಣೆಗಳೊಂದಿಗೆ ಆರಂಭವಾಗುವುದು. ಆಚರಣೆಗಳ ನಂತರ ಪ್ರತಿಯೊಬ್ಬ ಪಾತ್ರಧಾರಿಯೂ ಸಹ ವೇದಿಕೆಯ ಮೇಲೆ ಬಂದು,(ಹಾಡು-ನೃತ್ಯಗಳ ಕಿರು ಸಂಯೋಜನೆಯ ಮೂಲಕ) ತಮ್ಮನ್ನು ತಾವು ಪರಿಚಯಿಸಿಕೊಳ್ಳುವರು. ಇದರಿಂದಾಗಿ, ನಾಟಕದಲ್ಲಿರುವ ಪಾತ್ರದ ಗುರುತು ಮತ್ತು ಹಾವಭಾವಗಳ ಸನ್ನಿವೇಶಗಳನ್ನು ಸಿದ್ಧಪಡಿಸಲಾಗುವುದು. ಆಗ ನಾಟಕವು ಆರಂಭವಾಗುವುದು.
  • ನೃತ್ಯಕ್ಕೆ ಹಿನ್ನೆಲೆಯಲ್ಲಿ ಮಾದರಿಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಲಾಗುತ್ತದೆ. ಹಾಡುವವರಿಗೆ 'ಮೃದಂಗ' ಎಂಬ ದಕ್ಷಿಣ ಭಾರತದ ಶಾಸ್ತ್ರೀಯ ತಾಳವಾದ್ಯ, ಪಿಟೀಲು, ಕೊಳಲು ಹಾಗೂ ತಂಬೂರಿ ಮಂದ್ರತಂತಿ ವಾದ್ಯ - ಈ ವಾದ್ಯಗಳ ಬೆಂಬಲವಿರುತ್ತದೆ. ಕಲಾವಿದರು ಧರಿಸುವ ಒಡವೆಗಳು 'ಬೂರುಗು ಎಂಬ, ಸಾಮಾನ್ಯವಾಗಿ ಕಡಿಮೆ-ತೂಕದ ಮರದ ವಸ್ತುಗಳಾಗಿರುತ್ತವೆ.

ಶೈಲಿ

  • ಕೂಚಿಪೂಡಿ ನೃತ್ಯಗಳಲ್ಲಿ ಚಲನವಲನಗಳು ವೇಗದ ಗತಿಯಲ್ಲಿರುತ್ತವೆ. ಹಿನ್ನೆಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಾದ್ಯದ ಸಹಯೋಗದಿಂದ ನಡೆಯವ ಈ ನೃತ್ಯವು ಭರತನಾಟ್ಯದೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡಿದೆ. ಇದರ ಏಕ-ಪ್ರದರ್ಶನದಲ್ಲಿ, ಕೂಚಿಪೂಡಿ ಹಾಡುಗಳಲ್ಲಿ ಜತಿಸ್ವರಮ್‌ ಮತ್ತು ತಿಲ್ಲಾನ ಸೇರಿರುತ್ತವೆ, ನೃತ್ಯಗಳಲ್ಲಿ, ಭಕ್ತರೊಬ್ಬರು ದೇವರೊಂದಿಗೆ ಒಂದಾಗುವ ಹಂಬಲವನ್ನು ನಿರೂಪಿಸುವ ಹಲವು ಗೀತರಚನೆಗಳಿರುತ್ತವೆ.
  • ಕೂಚಿಪೂಡಿ ಮತ್ತು ಭರತನಾಟ್ಯ ಹೆಜ್ಜೆಗಳ ನಡುವಿನ ಬೇರೆ-ಬೇರೆ ಶೈಲಿಗಳಲ್ಲದೆ, ಕೂಚಿಪೂಡಿಯಲ್ಲಿಯೇ ಅಪೂರ್ವವಾದ ಹಲವು ವಿಶಿಷ್ಟ ನೃತ್ಯರೂಪಗಳಿವೆ. ವಿಶಿಷ್ಟವಾಗಿ, ಕೂಚಿಪೂಡಿಯಲ್ಲಿ 'ತರಂಗಂ' ಎಂಬುದಿದೆ. ಇದರಲ್ಲಿ ನರ್ತಿಸುವವರು ಹಿತ್ತಾಳೆಯ ತಟ್ಟೆಯ ಎತ್ತರದ ಅಂಚುಗಳ ಮೇಲೆ ಕಾಲಿಟ್ಟುಕೊಂಡು ನರ್ತಿಸಬೇಕಿದೆ. ನರ್ತಿಸುವವರು ಆಯ ತಪ್ಪದೆ ಬಹಳ ಕುಶಲತೆಯಿಂದ ತಟ್ಟೆಯನ್ನು ಚಲಿಸುವಂತೆ ಮಾಡುವರು.
  • ಇಂತಹ ನೃತ್ಯ ಮಾಡುವಾಗ ಅವರ ಹಸ್ತಗಳಲ್ಲಿ ತೈಲ-ದೀಪ ಹಚ್ಚಿದ ಎರಡು ಹಣತೆಗಳು ಹಾಗೂ, ತಲೆಯ ಮೇಲೆ ನೀರು ತುಂಬಿರುವ ಚಿಕ್ಕ ಪಾತ್ರೆಯನ್ನು ಹೊತ್ತಿರುತ್ತಾರೆ. ನೃತ್ಯದ ಅಂತ್ಯದಲ್ಲಿ, ಮಾದರಿಯಾಗಿ, ನೃತ್ಯಕಲಾವಿದರು ತೈಲ ದೀಪಗಳನ್ನು ಆರಿಸಿ, ತಲೆಯ ಮೇಲಿದ್ದ ಪಾತ್ರೆಯ ನೀರಿನಿಂದಲೇ ತಮ್ಮ ಕೈ ತೊಳೆದುಕೊಳ್ಳುವರು. ಎರಡೂ ತರಹದ ನೃತ್ಯಗಳಿಗೆ ಸಂಬಂಧಿತ ವಸ್ತ್ರವಿನ್ಯಾಸಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ, ಭರತನಾಟ್ಯಂ ಉಡುಪುಗಳಿಗೆ ವಿವಿಧ ಉದ್ದನೆಯ ಮೂರು ಮಡಿಕೆಗಳಿರುತ್ತವೆ.
  • ಸೀರೆಯ ಮಡಿಕೆಗಳು ಹರಡಿರುವಂತೆ ಕಾಣಿಸುತ್ತವೆ. ಆದರೆ, ಕೂಚಿಪೂಡಿ ನೃತ್ಯದಲ್ಲಿ, ಕೇವಲ ಒಂದೇ ಮಡಿಕೆಯಿದ್ದು, ಭರತನಾಟ್ಯ ಉಡುಪಿನ ಮೂರು ಮಡಿಕೆಗಳಲ್ಲಿ ಅತಿಯುದ್ದದ ಮಡಿಕೆಗಿಂತಲೂ ಉದ್ದವಾಗಿರುತ್ತದೆ. ಆಗಾಗ್ಗೆ ಕೂಚಿಪೂಡಿ ನೃತ್ಯದಲ್ಲಿ 20ನೆಯ ಕರಣವನ್ನು ಬಳಸ ಲಾಗುತ್ತದೆ. ಆರು ಪದಭೇದಗಳಲ್ಲದೆ, ಈ ಶಿಕ್ಷಣಶಾಲೆಗೆ ಪರಂಪರಾಗತವಾಗಿರುವ ಕೆಲವು 'ಆಡುಗುಲು' ಅಥವಾ ಅಡವುಗಳನ್ನು ಬಳಸುವರು: 'ಚೌಕ', 'ಕಟ್ಟರನಟು', 'ಕುಪ್ಪಿ ಅಡಗು', 'ಒಂಟಡುವು', 'ಜರಡುವು', 'ಪಕ್ಕನಾಟು'ಗಳನ್ನು ಕೂಚಿಪೂಡಿ ನೃತ್ಯಕಲಾವಿದರು ಬಳಸು ವುದುಂಟು.

ಚಲನವಲನಗಳು ಮತ್ತು ಸಂಗೀತ

  • ಕೂಚಿಪೂಡಿಯ ಹಾಡುಗಳನ್ನು ನೃತ್ಯಕಲಾವಿದರು ಆಕರ್ಷಿಸುವಂತಹ ಹಾವಭಾವಗಳು, ತ್ವರಿತ ನೋಟಗಳು ಮತ್ತು ಮುಖದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ತತ್ ಕ್ಷಣವೇ ವಿವಿಧ ಭಾವುಕತೆ-ರಸಗಳನ್ನು ನಿರೂಪಿಸುತ್ತಾರೆ. ತರಂಗಂನಲ್ಲಿ, ಕೆಲವೊಮ್ಮೆ, ನೃತ್ಯಕಲಾವಿದರು ನೀರು ತುಂಬಿದ ಬಿಂದಿಗೆಯನ್ನು ತಲೆಯ ಮೇಲಿಟ್ಟುಕೊಂಡು, ಹಿತ್ತಾಳೆ ತಟ್ಟೆಯ ಅಂಚುಗಳ ಮೇಲೆ ನರ್ತಿಸುತ್ತಾರೆ. ಈ ನೃತ್ಯದ ಹಿನ್ನೆಲೆಯ ಹಾಡು ಚಿರಪರಿಚಿತ ಕೃಷ್ಣ ಲೀಲಾ ತರಂಗಿಣಿಯಿಂದ ಆಯ್ದುಕೊಳ್ಳಲಾಗಿದೆ. ಈ ಪಠ್ಯವು ಶ್ರೀಕೃಷ್ಣನ ಅವತಾರ ಮತ್ತು ಜೀವನ-ಸಾಧನೆಗಳನ್ನು ತಿಳಿಸುತ್ತದೆ.
  • ಹಾವಭಾವಗಳುಳ್ಳ ನೃತ್ಯಗಳಲ್ಲಿ, ಭಾಮ ಕಲಾಪಂ ನೃತ್ಯ-ನಾಟಕದಲ್ಲಿ ಕೃಷ್ಣನ ರಾಣಿ ಸತ್ಯಭಾಮಾಳ ಪಾತ್ರವನ್ನು ನೃತ್ಯಕಲಾವಿದರು ಕೆಲವೊಮ್ಮೆ ನಿರೂಪಿಸುತ್ತಾರೆ. ಸತ್ಯಭಾಮಾ ಪ್ರೀತಿ-ಪ್ರೇಮದ ವಿವಿಧ ಹಂತಗಳಲ್ಲಿ ಹಾದುಹೋಗುತ್ತಾಳೆ. ಶ್ರೀಕೃಷ್ಣನಿಂದ ಅಗಲಿದಾಗ, ಆಕೆ ಆತನೊಂದಿಗಿನ ಆನಂದದ ದಿನಗಳನ್ನು ನೆನಪು ಮಾಡಿಕೊಂಡು ಅವನಿಗಾಗಿ ಹಂಬಲಿಸುತ್ತಾಳೆ.
  • ಕಡೆಗೆ, ಆಕೆಯು ಕೃಷ್ಣನಿಗೆ ಪತ್ರವೊಂದನ್ನು ಕಳುಹಿಸಿದಾಗ ಕೃಷ್ಣ-ಸತ್ಯಭಾಮರು ಒಂದಾಗುತ್ತಾರೆ. ಕೂಚಿಪೂಡಿ ಪರಿಚತ ಕಲಾಸಂಗ್ರಹದಿಂದ ಕೃಷ್ಣ ಶಬ್ದಂ ಎಂಬ ಇನ್ನೊಂದು ಹಾಡು ಉಲ್ಲೇಖನೀಯ. ಇದರಲ್ಲಿ ಹಾಲು ಮಾರುವ ಮಹಿಳೆಯು ಕೃಷ್ಣನನ್ನು ವಿವಿಧ ರೀತ್ಯಾ ಆಮಂತ್ರಿಸುತ್ತಾಳೆ. ಇದರಲ್ಲಿ ನೃತ್ಯಕಲಾವಿದರು ಮಹಿಳೆಯ ಆಕರ್ಷಣೆಯನ್ನು ನಿರೂಪಿಸುತ್ತಾರೆ.

ಈ ನಾಟ್ಯಶೈಲಿಯಲ್ಲಿ ಪರಿಣತರು

  • ಅನುರಾಗ್‌ ದೇಬ್‌ (ಆಯುಷ್‌ - ಪಾಗ್ಲೂ ಛಾಗ್ಲು ಮಹಾರಾಜ್‌) ಕೋಲ್ಕತಾ, ಪಶ್ಚಿಮ ಬಂಗಾಳ [೪][ಶಾಶ್ವತವಾಗಿ ಮಡಿದ ಕೊಂಡಿ]
  • ದೇವಶೀಷ್‌ ಪ್ರಧಾನ್‌ (ಬೋಟು ಮಹಾರಾಜ್‌) ಕೋಲ್ಕತ್ತಾ, ಪಶ್ಚಿಮ ಬಂಗಾಳ [೫][ಶಾಶ್ವತವಾಗಿ ಮಡಿದ ಕೊಂಡಿ]
  • ಗುರು ಜಯರಾಮ ರಾವ್‌ ಮತ್ತು ವನಶ್ರೀ ರಾವ್‌
  • ಶ್ರೀನಿವಾಸ ರಾವ್‌ ರವಿ
  • ವೇದಾಂತಂ ಲಕ್ಷ್ಮಿನಾರಾಯಣ
  • ಡಾ. ಉಮಾ ರಾಮರಾವ್‌
  • ತಡೆಪಲ್ಲಿ ಪೇರಯ್ಯ
  • ಚಿಂತಾ ಕೃಷ್ಣಮೂರ್ತಿ
  • ವೇದಾಂತಮ್‌ ಸತ್ಯನಾರಾಯಣ ಶರ್ಮ
  • ಡಾ: ಕೋರದ ನರಸಿಂಹ ರಾವ್‌ ಗುರು ಸಿ ಆರ್‌ ಆಚಾರ್ಯುಲೂ ಅವರನ್ನೂ ಸಹ ಸ್ಮರಿಸಬೇಕು. ಇವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಮೃಣಾಲಿನಿ ಸಾರಾಭಾಯಿ ಅಹ್ಮದಾಬಾದ್‌ನಲ್ಲಿ ಸ್ಥಾಪಿಸಿದ ದರ್ಪಣಾ ನೃತ್ಯ ಅಕಾಡೆಮಿಯಲ್ಲಿ ದೀರ್ಘಕಾಲಿಕ ಸೇವೆ ಸಲ್ಲಿಸಿದರು. ಆಶಾ ಪಾರಿಖ್‌ ಸೇರಿದಂತೆ, ಹಲವು ಕಲಾವಿದರಿಗೆ ಮೃಣಾಲಿನಿ ತರಬೇತಿ ನೀಡಿದ್ದರು.
  • ಗುರು ಬಾಲ ಕೊಂಡಲ ರಾವ್‌
  • ಪಿ. ಬಿ. ಕೃಷ್ಣ ಭಾರತಿ
  • ಪಸುಮರ್ಥಿ ವೇಣುಗೋಪಾಲ ಕೃಷ್ಣ ಶರ್ಮ
  • ಡಾ. ರಾಜಾ ರಾಧಾ ರೆಡ್ಡಿ
  • ಸ್ವಾಗತ್‌ ಕೂಚಿಪೂಡಿ
  • ಶೋಭಾ ನಾಯುಡು,
  • ಮಹಾಂಕಾಲಿ ಸೂರ್ಯನಾರಾಯಣ ಶರ್ಮ,
  • ಡಾ. ಯಶೋಧ ಠಾಕೋರ್‌
  • ವಿಜಯಪಾಲ್‌ ಪತಲೋಥ್‌
  • ವಂಶಿ ಕೃಷ್ಣ ವರ್ಮ
  • ಮಲ್ಲಿಕಾ ರಾಮಪ್ರಸಾದ್‌
  • ಇಂದಿರಾ ಶ್ರೀರಾಮ್‌ ದೀಕ್ಷಿತ್‌

ರವಿ ವೇಂಪತಿ, ಶಶಿಕಲಾ ಪೆನುಮರ್ತಿ, ಕಮಲಾ ರೆಡ್ಡಿ, ವನಜಾ ಅಯ್ಯಲರಾಜು ದಾಸಿಕ, ಸಂಧ್ಯಶ್ರೀ ಆತ್ಮಕೂರಿ, ಶಾರದಾ ಜಮ್ಮಿ, ಅನುರಾಧಾ ನೆಹರು, ಹಿಮಬಿಂದು ಚಲ್ಲಾ, ಯಾಮಿನಿ ಸಾರಿಪಲ್ಲಿ

ಕೂಚಿಪೂಡಿ ನೃತ್ಯರೂಪವು ಭಾರತವೊಂದಕ್ಕೇ ಸೀಮಿತವಾಗಿಲ್ಲ. ಉತ್ತರ ಅಮೆರಿಕಾ, ಯುನೈಟೆಡ್‌ ಕಿಂಗ್ಡಮ್‌, ಆಸ್ಟ್ರೇಲಿಯಾ ಮತ್ತು ವಿಶ್ವದೆಲ್ಲೆಡೆ ಹಲವು ಚಿರಪರಿಚಿತ ಕೂಚಿಪೂಡಿ ನೃತ್ಯ ತರಬೇತುದಾರರು, ನೃತ್ಯನಿರ್ದೇಶಕರು ಮತ್ತು ನೃತ್ಯಕಲಾವಿದರಿದ್ದಾರೆ.

ವಿಶ್ವ ಗಿನ್ನೆಸ್‌ ದಾಖಲೆ ನಿರ್ಮಿಸಿದ ಕೂಚಿಪೂಡಿ ನೃತ್ಯಕಲಾವಿದರು

ಕೂಚಿಪೂಡಿ: ಇತಿವೃತ್ತ, ಶೈಲಿ, ಚಲನವಲನಗಳು ಮತ್ತು ಸಂಗೀತ 
ವಿಶ್ವದೆಲ್ಲೆಡೆಯಿಂದ ಬಂದು ಕೂಚಿಪೂಡಿ ನೃತ್ಯ ಪ್ರದರ್ಶನ ನೀಡುತ್ತಿರುವ ನೃತ್ಯಕಲಾವಿದರು
  • ಸುಮಾರು 200ಕ್ಕೂ ಹೆಚ್ಚು ನಾಟ್ಯಗುರುಗಳು ಸೇರಿದಂತೆ, 2,800ಕ್ಕೂ ಹೆಚ್ಚು ಕೂಚಿಪೂಡಿ ನೃತ್ಯಕಲಾವಿದರು, 2010ರ ಡಿಸೆಂಬರ್‌ 26ರಂದು ಹೈದರಾಬಾದಿನ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಹಿಂದೊಲಂ ತಿಲ್ಲಾನಾ ನೃತ್ಯ ಪ್ರದರ್ಶನ ನೀಡಿ ವಿಶ್ವ ಗಿನ್ನೆಸ್‌ ದಾಖಲೆ ಸೃಷ್ಟಿಸಿದರು. ಭಾರತದ ಪ್ರತಿ ರಾಜ್ಯ ಹಾಗೂ ಹಾಗೂ 15 ದೇಶಗಳಿಂದ ಆಗಮಿಸಿದ ನೃತ್ಯಕಲಾವಿದರು ಭಾಗವಹಿಸಿದ ಈ ನೃತ್ಯಪ್ರದರ್ಶನವು, ಕೂಚಿಪೂಡಿ ನೃತ್ಯನಿರ್ದೇಶಕ ಸಿದ್ಧೇಂದ್ರ ಯೋಗಿಯವರ ಪ್ರಶಂಸನೀಯ ಕಾರ್ಯಗಳಿಗಾಗಿ ನಡೆಸಲಾಯಿತು.
  • ಮೂರು ದಿನಗಳು ನಡೆದ ಎರಡನೆಯ ಅಂತರರಾಷ್ಟ್ರೀಯ ಕೂಚಿಪೂಡಿ ನೃತ್ಯ ಮಹಾಸಮ್ಮೇಳನದ ಅಂಗವಾಗಿ, 11 ನಿಮಿಷಗಳ ಕಾಲದ ಈ ನೃತ್ಯ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿ ಭಾರತದ ರಾಷ್ಟಪತಿ ಪ್ರತಿಭಾ ಪಾಟೀಲ್‌, ಆಂಧ್ರ ಪ್ರದೇಶ ರಾಜ್ಯಪಾಲ ಇ ಎಸ್‌ ಎಲ್‌ ನರಸಿಂಹನ್‌ ಹಾಗೂ ರಾಜ್ಯದ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ, ಭಾಗವಹಿಸಿದವರೆಲ್ಲರನ್ನೂ ಅಭಿನಂದಿಸಿದರು.
  • ಕಾರ್ಯಕ್ರಮವು ಅಂತ್ಯಗೊಂಡೊಡನೆ, ಗಿನೆಸ್‌ ವಿಶ್ವದಾಖಲೆಗಳ ಗ್ರಂಥದ ಪ್ರತಿನಿಧಿಯೊಬ್ಬರು ಎದ್ದು ನಿಂತು, 'ಈ ಕಾರ್ಯಕ್ರಮದ ಅಗಾಧತೆಯನ್ನು ನೋಡಿ ನಾನು ಮೂಕನಾದೆ' ಎಂದು ಘೋಷಿಸಿದಾಗ ಕರತಾಡನಗಳ ಸದ್ದು ತುಂಬಿಕೊಂಡಿತು. ಕೂಚಿಪೂಡಿ ಪರಿಣತರಾದ ವೇಂಪತಿ ಚಿನ್ನಸತ್ಯಂ, ಯಾಮಿನಿ ಕೃಷ್ಣಮೂರ್ತಿ, ರಾಜಾ ರೆಡ್ಡಿ ರಾಧಾ ರೆಡ್ಡಿ ಹಾಗೂ ಶೋಭಾ ನಾಯುಡು, ರಾಷ್ಟ್ರಪತಿಗಳಿಂದ ಪುರಸ್ಕೃತರಾದರು.
  • ಆನಂತರ, ರಾಜಾ ರೆಡ್ಡಿ ರಾಧಾ ರೆಡ್ಡಿಯವರ ಶಿಷ್ಯವೃಂದವು, ಲೋಕಕಲ್ಯಾಣವಾಗಲೆಂದು ದೇವಿಸ್ಮೃತಿಯ ನೃತ್ಯ ನಮನ ಸಲ್ಲಿಸಿತು. ಸಮಾರಂಭದ ಮೊದಲ ದಿನ, ಸರ್ಕಾರವು 25 ಲಕ್ಷ ರೂಪಾಯಿಗಳ ನೆರವು ನೀಡುವುದೆಂದು ಮುಖ್ಯಮಂತ್ರಿ ಕಿರಣ್‌ ರೆಡ್ಡಿ ಘೋಷಿಸಿದ್ದರು.ಕೊನೆಯ ದಿನ, ಅವರು ಈ ಮೊತ್ತದ ಚೆಕ್ಕನ್ನು ಮಾನವ ಸಂಪನ್ಮೂಲ ಖಾತೆಯ ಕೇಂದ್ರೀಯ ರಾಜ್ಯ ಸಚಿವೆ ದಗ್ಗುಬಟಿ ಪುರಂದೇಶ್ವರಿಯವರಿಗೆ ಹಸ್ತಾಂತರಿಸಿದರು.

ಇವನ್ನೂ ನೋಡಿ

  • ಘುಂಗುರೂ

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಕೂಚಿಪೂಡಿ ಇತಿವೃತ್ತಕೂಚಿಪೂಡಿ ಶೈಲಿಕೂಚಿಪೂಡಿ ಚಲನವಲನಗಳು ಮತ್ತು ಸಂಗೀತಕೂಚಿಪೂಡಿ ಈ ನಾಟ್ಯಶೈಲಿಯಲ್ಲಿ ಪರಿಣತರುಕೂಚಿಪೂಡಿ ವಿಶ್ವ ಗಿನ್ನೆಸ್‌ ದಾಖಲೆ ನಿರ್ಮಿಸಿದ ನೃತ್ಯಕಲಾವಿದರುಕೂಚಿಪೂಡಿ ಇವನ್ನೂ ನೋಡಿಕೂಚಿಪೂಡಿ ಉಲ್ಲೇಖಗಳುಕೂಚಿಪೂಡಿ ಹೊರಗಿನ ಕೊಂಡಿಗಳುಕೂಚಿಪೂಡಿಆಂಧ್ರ ಪ್ರದೇಶಬಂಗಾಳ ಕೊಲ್ಲಿಭಾರತ

🔥 Trending searches on Wiki ಕನ್ನಡ:

ದ್ರಾವಿಡ ಭಾಷೆಗಳುವಿನಾಯಕ ಕೃಷ್ಣ ಗೋಕಾಕವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಡಿ.ವಿ.ಗುಂಡಪ್ಪಪಕ್ಷಿಬೆಂಡೆಧರ್ಮ (ಭಾರತೀಯ ಪರಿಕಲ್ಪನೆ)ಕವಿಗಳ ಕಾವ್ಯನಾಮಸೂರ್ಯವಂಶ (ಚಲನಚಿತ್ರ)ಅಕ್ಕಮಹಾದೇವಿಭಾರತದ ಉಪ ರಾಷ್ಟ್ರಪತಿಕನ್ನಡ ಚಿತ್ರರಂಗಅಜವಾನಆಣೆಕಲಿಯುಗಹಸ್ತಪ್ರತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮಾನವ ಸಂಪನ್ಮೂಲಗಳುಶಾತವಾಹನರುಡಿ.ಎಲ್.ನರಸಿಂಹಾಚಾರ್ನ್ಯೂಟನ್‍ನ ಚಲನೆಯ ನಿಯಮಗಳುಪ್ಲೇಟೊಸರ್ವೆಪಲ್ಲಿ ರಾಧಾಕೃಷ್ಣನ್ಮಲಬದ್ಧತೆರಾಮ್ ಮೋಹನ್ ರಾಯ್ಭಾರತೀಯ ಭಾಷೆಗಳುಆಸ್ಪತ್ರೆಗೋಕಾಕ್ ಚಳುವಳಿಮೇಲುಮುಸುಕುಅಶೋಕನ ಶಾಸನಗಳುಸಂಸ್ಕೃತ ಸಂಧಿರಾಘವಾಂಕಯುಗಾದಿನರೇಂದ್ರ ಮೋದಿರಾಗಿಭಾರತದಲ್ಲಿ ಮೀಸಲಾತಿದೇವಸ್ಥಾನಕೂಡಲ ಸಂಗಮಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತುಮಕೂರುಮುಟ್ಟುಕಾವೇರಿ ನದಿಕರ್ನಾಟಕ ರತ್ನಕುವೆಂಪುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಹಾಕಾವ್ಯಅಕ್ಷಾಂಶ ಮತ್ತು ರೇಖಾಂಶಸಚಿನ್ ತೆಂಡೂಲ್ಕರ್ಕರ್ನಾಟಕದ ಜಿಲ್ಲೆಗಳುಸಮಾಜ ವಿಜ್ಞಾನಶಿವಕುಮಾರ ಸ್ವಾಮಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಸಾಕ್ಷಾತ್ಕಾರನಾಗರೀಕತೆಕಲ್ಪನಾಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಹನುಮ ಜಯಂತಿಮಾನವನ ನರವ್ಯೂಹಭಾರತದ ಮುಖ್ಯಮಂತ್ರಿಗಳುಚಂದ್ರಶೇಖರ ಕಂಬಾರಕೊರೋನಾವೈರಸ್ಭಾಷಾಂತರಹಂಪೆಚನ್ನಬಸವೇಶ್ವರವಡ್ಡಾರಾಧನೆಕರ್ನಾಟಕ ಹೈ ಕೋರ್ಟ್ಇಮ್ಮಡಿ ಪುಲಿಕೇಶಿಅಭಿಮನ್ಯುಬಂಗಾರದ ಮನುಷ್ಯ (ಚಲನಚಿತ್ರ)ಬಾಬು ರಾಮ್ತ್ರಿದೋಷ🡆 More