ಶ್ರೀ ಚಾಮರಾಜೇಂದ್ರ ಮೃಗಾಲಯ

ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ.

೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು. ೧೮೯೨ ರಾಜವಂಶದ ಆಶ್ರಯದಲ್ಲಿ ಸ್ಥಾಪಿತವಾದ ಕಾರಣ, ವಿಶ್ವದ ಪ್ರಾಚೀನ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲೂ ಸಹ ಇದು ಸೇರುತ್ತದೆ. ಕೇವಲ ಪ್ರವೇಶ ಶುಲ್ಕದ ಆಧಾರದ ಮೇಲೆ ನಡೆಯುತ್ತಿದ್ದ ಈ ಮೃಗಾಲಯ ಸಂಸ್ಥೆ ೨೦೦೦ರಲ್ಲಿ  ದತ್ತು ಸ್ವೀಕಾರವನ್ನು ಪ್ರಾರಂಭಿಸಿದ್ದು, ಅಭಿವೃದ್ದಿಯ ಹಂತ ಹೊಂದಿದೆ.  ಸೆಲೆಬ್ರಿಟಿಗಳು,  ಸಂಸ್ಥೆಗಳು, ಪ್ರಾಣಿ ಪ್ರಿಯರು, ಮತ್ತು ಹಲವಾರು ಸ್ವಯಂಸೇವಕರು ಮೃಗಾಲಯದ ನಿವಾಸಿಗಳ ಒಳಿತಿಗಾಗಿ ಕೊಡುಗೆ ನೀಡಿದ್ದಾರೆ.

ಮೈಸೂರು ಮೃಗಾಲಯ
ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್
ಬಗೆಮೃಗಾಲಯ
ಸ್ಥಳಮೈಸೂರು, ಭಾರತ
ನಿರ್ದೇಶಾಂಕಗಳು12°18′03″N 76°40′04″E / 12.3008°N 76.6677°E / 12.3008; 76.6677
ವಿಸ್ತರಣೆ157 ಎಕರೆ + 113 ಎಕರೆ
Created1892
ಜಾಲತಾಣwww.mysorezoo.info
ಶ್ರೀ ಚಾಮರಾಜೇಂದ್ರ ಮೃಗಾಲಯ
ಮೃಗಾಲಯದಲ್ಲಿ ಆನೆ ತನ್ನ ಮರಿಯೊಂದಿಗೆ

ಇತಿಹಾಸ

ಈ ಮೃಗಾಲಯನ್ನು ೧೮೯೨ ರಲ್ಲಿ ಆಗಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಅವರು ೧೦.೪ ಎಕರೆಯ ಬೇಸಿಗೆ ಅರಮನೆಯಲ್ಲಿ ಪ್ರಾರಂಭಿಸಿದರು. ಮುಂದಿನ ೧೦ ವರ್ಷದಲ್ಲಿ, ೪೫ ಎಕರೆಯ ವಿಶಾಲವಾದ ಪ್ರದೇಶವಾಗಿ ವಿಸ್ತರಿಸಲಾಯಿತು.

ಮೂಲತಃ ಅರಮನೆ ಮೃಗಾಲಯ ಎಂದು ಕರೆಯಲ್ಪಡುತ್ತಿದ್ದು, ೧೯೦೯ ರಲ್ಲಿ ಶ್ರೀ ಚಾಮರಾಜೇಂದ್ರ ಪ್ರಾಣಿಶಾಸ್ತ್ರದ ಉದ್ಯಾನ ಎಂದು ಮರುಹೆಸರಿಸಲಾಯಿತು. ಮೃಗಾಲಯದ ಮೊದಲ ಅಧೀಕ್ಷಕರಾಗಿ ಸೌತ್ ವೇಲ್ಸ್ ಮೂಲದ ಅ.ಸಿ.ಹೂಗ್ಸ್ ೧೮೯೨  ರಿಂದ  ೧೯೨೪ ವರೆಗೂ ಸೇವೆ ನಿರ್ವಹಿಸಿದರು. ಹೂಗ್ಸ್, ಸರ್ ಮಿರ್ಜಾ ಇಸ್ಮಾಯಿಲ್, ಮತ್ತು ಜಿ.ಎಚ್. ಕ್ರುಎಂಬಿಎಗೆಲ್ ಮೃಗಾಲಯದ ಮರುವಿನ್ಯಾಸ ಮತ್ತು ಆಧುನಿಕ, ನೈಸರ್ಗಿಕ ಆವರಣದ ನವೀಕರಣದೆಡೆಗೆ ಗಮನ ಹರಿಸಿದರು. ಇದನ್ನು ೧೯೪೮ ರಲ್ಲಿ ಮೈಸೂರು ರಾಜ್ಯ ಸರ್ಕಾರದ ಉದ್ಯಾನ ಇಲಾಖೆಗೆ ನೀಡಲಾಯಿತು. ಕಾರಂಜಿ ಟ್ಯಾಂಕ್  ಸ್ವಾಧೀನದ ನಂತರ ಈ ಮೃಗಾಲಯವನ್ನು ೧೫೦ ಎಕರೆಗೆ ವಿಸ್ತರಿಸಿ, ಪಕ್ಷಿಗಳ ಅಭ್ಯರಣ್ಯವಾಗಿ ಕೃತಕ ದ್ವೀಪ ನಿರ್ಮಿಸಲಾಯಿತು. ಈ ಮೃಗಾಲಯವನ್ನು ೧೯೭೨ ರಲ್ಲಿ ಅರಣ್ಯ ಇಲಾಖೆಗೆ, ಮತ್ತು ೧೯೭೯ ರಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ವಹಿಸಲಾಯಿತು.

ಉದ್ದೇಶಗಳು

ಮೈಸೂರು ಮೃಗಾಲಯ ಉದ್ದೇಶಗಳು:

೧. ಸಂರಕ್ಷಣೆಯ ಮೌಲ್ಯವನ್ನು ಶಿಕ್ಷಣದ ಮೂಲಕ ತಿಳಿಸುವುದು.

೨. ಅಲ್ಲಿ ವಿವಿಧ ರೀತಿಯ ಜಾತಿಗಳ ಬಂಧಿತ ಸಂತಾನೋತ್ಪತ್ತಿ.

೩. ವನ್ಯಜೀವಿಗಳನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಆಚರಿಸಲು ಸ್ಥಳೀಯ ಮತ್ತು ಜಾಗತಿಕ ಸಮುದಾಯಗಳನ್ನು ಪ್ರೇರೇಪಿಸುವುದು.

೪. ನೈಸರ್ಗಿಕ ಪ್ರಪಂಚದ ಮೆಚ್ಚುಗೆ, ಜ್ಞಾನ ಮತ್ತು ಕಾಳಜಿಯನ್ನು ಬೆಳೆಸುವ ಮೋಜಿನ, ಅನನ್ಯ ಮತ್ತು ಸ್ಪೂರ್ತಿದಾಯಕ ಅನುಭವವನ್ನು ಒದಗಿಸುವುದು.

೫. ಪ್ರಧಾನ ಪ್ರಾಣಿಶಾಸ್ತ್ರೀಯ ಸಂಸ್ಥೆಯಾಗಿ ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಂಡು, ಜನರು, ಪ್ರಾಣಿಗಳು ಮತ್ತು ಪರಿಸರಕ್ಕೆ ಸೇವೆ ಸಲ್ಲಿಸುವ ಸಂಪೂರ್ಣ ಸಾಮರ್ಥ್ಯವನ್ನು ತಲುಪುವುದು.

ಛಾಯಾಂಕಣ

ಉಲ್ಲೇಖಗಳು




Tags:

ಶ್ರೀ ಚಾಮರಾಜೇಂದ್ರ ಮೃಗಾಲಯ ಇತಿಹಾಸಶ್ರೀ ಚಾಮರಾಜೇಂದ್ರ ಮೃಗಾಲಯ ಉದ್ದೇಶಗಳುಶ್ರೀ ಚಾಮರಾಜೇಂದ್ರ ಮೃಗಾಲಯ ಛಾಯಾಂಕಣಶ್ರೀ ಚಾಮರಾಜೇಂದ್ರ ಮೃಗಾಲಯ ಉಲ್ಲೇಖಗಳುಶ್ರೀ ಚಾಮರಾಜೇಂದ್ರ ಮೃಗಾಲಯಮೈಸೂರು

🔥 Trending searches on Wiki ಕನ್ನಡ:

ಪರಿಸರ ವ್ಯವಸ್ಥೆದೆಹಲಿ ಸುಲ್ತಾನರುಮಾರುತಿ ಸುಜುಕಿಗೋಪಾಲಕೃಷ್ಣ ಅಡಿಗಹೊಯ್ಸಳ ವಾಸ್ತುಶಿಲ್ಪಭೂತಾರಾಧನೆಕ್ರೀಡೆಗಳುಹಾಲುಕಿತ್ತೂರು ಚೆನ್ನಮ್ಮಕರಗ (ಹಬ್ಬ)ಕೈವಾರ ತಾತಯ್ಯ ಯೋಗಿನಾರೇಯಣರುಫಿರೋಝ್ ಗಾಂಧಿವೈದಿಕ ಯುಗಪರಿಸರ ಕಾನೂನುಮಹಮದ್ ಬಿನ್ ತುಘಲಕ್ಭಾರತದ ಇತಿಹಾಸಸಾಮ್ರಾಟ್ ಅಶೋಕಕಲ್ಕಿಭಾರತೀಯ ಸಂಸ್ಕೃತಿಕರ್ನಾಟಕ ಸ್ವಾತಂತ್ರ್ಯ ಚಳವಳಿಸಂವತ್ಸರಗಳುಬಿಳಿಗಿರಿರಂಗನಂಜನಗೂಡುದ್ವಿರುಕ್ತಿಯುವರತ್ನ (ಚಲನಚಿತ್ರ)ಗೌತಮ ಬುದ್ಧಊಳಿಗಮಾನ ಪದ್ಧತಿಅಕ್ಷಾಂಶ ಮತ್ತು ರೇಖಾಂಶವಿಜಯ ಕರ್ನಾಟಕಚಿಕ್ಕಬಳ್ಳಾಪುರನದಿನವೋದಯಎಳ್ಳೆಣ್ಣೆಭಾರತೀಯ ಧರ್ಮಗಳುನೀರುವೆಂಕಟೇಶ್ವರ ದೇವಸ್ಥಾನಭಾಮಿನೀ ಷಟ್ಪದಿಕನ್ನಡ ರಾಜ್ಯೋತ್ಸವಕರ್ನಾಟಕದ ಹಬ್ಬಗಳುಧರ್ಮರಾಯ ಸ್ವಾಮಿ ದೇವಸ್ಥಾನಪರಿಣಾಮಕುತುಬ್ ಮಿನಾರ್ಬಿ. ಆರ್. ಅಂಬೇಡ್ಕರ್ಉಪ್ಪು ನೇರಳೆಕನ್ನಡ ಸಾಹಿತ್ಯ ಪ್ರಕಾರಗಳುಪ್ರಬಂಧಎರಡನೇ ಮಹಾಯುದ್ಧಸರ್ಪ ಸುತ್ತುಅರಕೃಷಿಬಿಳಿಗಿರಿರಂಗನ ಬೆಟ್ಟಕರ್ನಾಟಕ ಐತಿಹಾಸಿಕ ಸ್ಥಳಗಳುಬಾಬರ್ಕವಿರಾಜಮಾರ್ಗಕಾಂಕ್ರೀಟ್ವಚನಕಾರರ ಅಂಕಿತ ನಾಮಗಳುಗಿಡಮೂಲಿಕೆಗಳ ಔಷಧಿಮಹಾಕವಿ ರನ್ನನ ಗದಾಯುದ್ಧತೆರಿಗೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರತ್ನತ್ರಯರುರೇಡಿಯೋಕನ್ನಡ ಸಂಧಿಅಜವಾನಕಾರಡಗಿವ್ಯಕ್ತಿತ್ವಮುಪ್ಪಿನ ಷಡಕ್ಷರಿಬಹಮನಿ ಸುಲ್ತಾನರುಜೇನು ಹುಳುಕೃಷ್ಣದೇವರಾಯಅದ್ವೈತಭಾರತದಲ್ಲಿ ಮೀಸಲಾತಿಡೊಳ್ಳು ಕುಣಿತಒಂದನೆಯ ಮಹಾಯುದ್ಧಆದಿ ಶಂಕರಕ್ರೈಸ್ತ ಧರ್ಮಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More