ಶಿಕ್ಷೆ: ವಿದ

ಶಿಕ್ಷೆ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಮೇಲೆ ಮಕ್ಕಳ ಶಿಸ್ತಿನಿಂದ ಕ್ರಿಮಿನಲ್ ಕಾನೂನಿನವರೆಗಿನ ಸನ್ನಿವೇಶಗಳಲ್ಲಿ ಒಂದು ಪ್ರಾಧಿಕಾರದಿಂದ ವಿಧಿಸಲಾದ ಅನಪೇಕ್ಷಿತ ಅಥವಾ ಅಹಿತಕರ ನಿರ್ಣಯದ ಹೇರಿಕೆ.

ಶಿಕ್ಷೆಯನ್ನು ಅನಪೇಕ್ಷಿತ ಅಥವಾ ಅಸ್ವೀಕಾರ್ಯವೆಂದು ಪರಿಗಣಿಸಲಾದ ಒಂದು ನಿರ್ದಿಷ್ಟ ಕ್ರಿಯೆ ಅಥವಾ ವರ್ತನೆಗೆ ಪ್ರತಿಕ್ರಿಯೆ ಮತ್ತು ನಿರೋಧಕವಾಗಿ ನೀಡಲಾಗುತ್ತದೆ. ಸ್ವ ಅಪಾಯವನ್ನು ತಪ್ಪಿಸಲು ಮಗುವಿಗೆ ಷರತ್ತು ಹಾಕುವುದು, ಸಾಮಾಜಿಕ ಅನುಸರಣೆಯನ್ನು ಹೇರುವುದು (ವಿಶೇಷವಾಗಿ, ಕಡ್ಡಾಯ ಶಿಕ್ಷಣ ಅಥವಾ ಸೇನಾ ಶಿಸ್ತಿನ ಸನ್ನಿವೇಶಗಳಲ್ಲಿ), ರೂಢಿಗಳನ್ನು ಕಾಪಾಡುವುದು, ಭವಿಷ್ಯದ ಕೇಡುಗಳಿಂದ ರಕ್ಷಿಸುವುದು (ವಿಶೇಷವಾಗಿ, ಹಿಂಸಾತ್ಮಕ ಅಪರಾಧಗಳಿಂದ), ಕಾನೂನನ್ನು ಕಾಪಾಡುವುದು ಇದರ ಹಿಂದಿನ ವಾದವಾಗಿರಬಹುದು. ಶಿಕ್ಷೆಯು ಸ್ವಯಂವಿಹಿತವಾಗಿರಬಹುದು, ಉದಾ. ಧಾರ್ಮಿಕ ಹಿನ್ನೆಲೆಯಲ್ಲಿ ಸ್ವಯಂ ಕಶಾಪ್ರಹಾರ ಮತ್ತು ಸ್ವಯಂ ದಂಡನೆ, ಆದರೆ ಬಹುತೇಕ ವೇಳೆ ಸಾಮಾಜಿಕ ಒತ್ತಾಯದ ರೂಪವಾಗಿರುತ್ತದೆ.

ಅಹಿತಕರ ಹೇರಿಕೆಯು ದಂಡ, ನಿರ್ಬಂಧ, ಅಥವಾ ಸೆರೆವಾಸ, ಅಥವಾ ಏನಾದರೂ ಹಿತಕರ ಅಥವಾ ಅಪೇಕ್ಷಣೀಯವಾದದ್ದರ ನಿರಾಕರಣೆಯನ್ನು ಒಳಗೊಳ್ಳಬಹುದು. ಆ ಓರ್ವನು ವ್ಯಕ್ತಿ, ಅಥವಾ ಒಂದು ಪ್ರಾಣಿಯೂ ಆಗಿರಬಹುದು. ಪ್ರಾಧಿಕಾರವು ಒಂದು ಗುಂಪು ಅಥವಾ ಏಕ ವ್ಯಕ್ತಿಯಾಗಿರಬಹುದು, ಮತ್ತು ಶಿಕ್ಷೆಯನ್ನು ವಿಧ್ಯುಕ್ತವಾಗಿ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಅಥವಾ ಅನೌಪಚಾರಿಕವಾಗಿ ಇತರ ಬಗೆಯ ಸಾಮಾಜಿಕ ಹಿನ್ನೆಲೆಗಳಲ್ಲಿ, ಉದಾ. ಕುಟುಂಬದೊಳಗೆ ನೀಡಬಹುದು. ಅಪರಾಧಗಳ ಶಿಕ್ಷೆಯ ಅಧ್ಯಯನ ಮತ್ತು ಆಚರಣೆಯನ್ನು, ವಿಶೇಷವಾಗಿ ಸೆರೆವಾಸಕ್ಕೆ ಅನ್ವಯಿಸುವುದನ್ನು, ದಂಡನಶಾಸ್ತ್ರವೆಂದು ಕರೆಯಲಾಗುತ್ತದೆ; ಶಿಕ್ಷೆಯ ಪ್ರಕ್ರಿಯೆಯನ್ನು ಸೌಮ್ಯೋಕ್ತಿಯಾಗಿ "ತಿದ್ದುಪಡಿ ಪ್ರಕ್ರಿಯೆ" ಎಂದು ಕರೆಯಲಾಗುತ್ತದೆ. ಶಿಕ್ಷೆಯಲ್ಲಿನ ಸಂಶೋಧನೆ ಹಲವುವೇಳೆ ತಡೆಗಟ್ಟುವಿಕೆಯಲ್ಲಿನ ಹೋಲುವ ಸಂಶೋಧನೆಯನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

Tags:

ವರ್ತನೆ

🔥 Trending searches on Wiki ಕನ್ನಡ:

ಆಸ್ಟ್ರೇಲಿಯಾ ಕ್ರಿಕೆಟ್ ತಂಡಹಿಂದೂ ಮಾಸಗಳುನೇಮಿಚಂದ್ರ (ಲೇಖಕಿ)ಸಂಸ್ಕೃತಸಾರಾ ಅಬೂಬಕ್ಕರ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ನಿರುದ್ಯೋಗಗೋಪಾಲಕೃಷ್ಣ ಅಡಿಗರಾಮಬೃಹದೀಶ್ವರ ದೇವಾಲಯಶ್ರೀ ರಾಮಾಯಣ ದರ್ಶನಂಪು. ತಿ. ನರಸಿಂಹಾಚಾರ್ಮಂಗಳ (ಗ್ರಹ)ನಿರ್ವಹಣೆ ಪರಿಚಯಕರ್ನಾಟಕದ ಮಹಾನಗರಪಾಲಿಕೆಗಳುದ್ವಿಗು ಸಮಾಸಕರ್ನಾಟಕ ಐತಿಹಾಸಿಕ ಸ್ಥಳಗಳುಸತೀಶ್ ನಂಬಿಯಾರ್ವಿಜಯ ಕರ್ನಾಟಕಬೆಳಗಾವಿಸಂಧಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಹೊಂಗೆ ಮರಶಾಂತಲಾ ದೇವಿರಾಯಲ್ ಚಾಲೆಂಜರ್ಸ್ ಬೆಂಗಳೂರುಫೇಸ್‌ಬುಕ್‌ಭಾವನಾ(ನಟಿ-ಭಾವನಾ ರಾಮಣ್ಣ)ತತ್ಸಮ-ತದ್ಭವಲಸಿಕೆತುಳಸಿಮಾರ್ಕ್ಸ್‌ವಾದಅಂತಿಮ ಸಂಸ್ಕಾರಮೌರ್ಯ ಸಾಮ್ರಾಜ್ಯಕರ್ಣಾಟ ಭಾರತ ಕಥಾಮಂಜರಿನ್ಯೂಟನ್‍ನ ಚಲನೆಯ ನಿಯಮಗಳುಹಿಂದೂ ಧರ್ಮಅರ್ಥಶಾಸ್ತ್ರನಾಗೇಶ ಹೆಗಡೆಜ್ಯೋತಿ ಪ್ರಕಾಶ್ ನಿರಾಲಾಪಾಲಕ್ಇಂದಿರಾ ಗಾಂಧಿಕರ್ನಾಟಕದ ಸಂಸ್ಕೃತಿಹೊಯ್ಸಳದಲಿತ೧೮೬೨ಸಂವತ್ಸರಗಳುಅಕ್ಷಾಂಶ ಮತ್ತು ರೇಖಾಂಶಪ್ಲೇಟೊನೂಲುಸಿದ್ದಲಿಂಗಯ್ಯ (ಕವಿ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಅಡಿಕೆವಸಾಹತುಶಿವಕುಮಾರ ಸ್ವಾಮಿತಾಜ್ ಮಹಲ್ಕನಕದಾಸರುಎರಡನೇ ಮಹಾಯುದ್ಧಆಯ್ದಕ್ಕಿ ಲಕ್ಕಮ್ಮನಾಯಕ (ಜಾತಿ) ವಾಲ್ಮೀಕಿಭಾರತೀಯ ರಿಸರ್ವ್ ಬ್ಯಾಂಕ್ವಿಜಯನಗರರಾಜ್ಯಸಭೆಆಯುರ್ವೇದಬೆಂಗಳೂರುಕಲಿಯುಗಕರ್ನಾಟಕದ ನದಿಗಳುಚರಕಭಾಷಾ ವಿಜ್ಞಾನಕರ್ನಾಟಕ ರತ್ನಆದಿ ಶಂಕರಅಕ್ಕಮಹಾದೇವಿಕಂಪ್ಯೂಟರ್ಪಿ.ಲಂಕೇಶ್ಕಲಿಕೆ🡆 More