ವೇಣೂರು: ಭಾರತ ದೇಶದ ಗ್ರಾಮಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವೇಣೂರು Venur ಪೇಟೆ ಮಧ್ಯದಲ್ಲೇ ತಾಲೂಕು ಕೇಂದ್ರವಾದ ಬೆಳ್ತಂಗಡಿ ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗುತ್ತದೆ.

ವೇಣೂರು:

ವೇಣೂರು: ಭಾರತ ದೇಶದ ಗ್ರಾಮಗಳು 
ವೇಣೂರು ಗೋಮಟೇಶ್ವರ ಮೂರ್ತಿ

ವೇಣೂರು ಏಳೂರು ಏನೂರಾಗಿ ಇದೀಗ ವೇಣೂರಾಯಿತು...ಇದು ವೇಣೂರ ಹೆಸರಿನ ಹಿಂದಿರುವ ಇತಿಹಾಸ.ಫಲ್ಗುಣೀ ನದೀ ದಂಡೆಯಲ್ಲಿ ಲಭಿಸಿದ ಶಿಲಾ ಲೇಖವೊಂದು ವೇಣೂರನ್ನು `ಏನೂರು' ಎಂದು ಕರೆದ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಏಳು ಊರುಗಳು ಕರಗಿ ಹೋಗಿ `ಏನೂರು' ಆಯಿತು.ಮುಂದೆ ವೇಣೂರು ಎಂದು ಕರೆಯಲ್ಪಟ್ಟಿತು ಎಂಬುದು ಇದರ ಹಿಂದಿರುವ ಕಥೆ.ಏಳು ಊರು ಮಾಗಣೆಯ ಊರು “ಏನೂರು ಪತ್ತನ” ಪಟ್ಟಣವಾಗಿದ್ದು, ಕ್ರಮೇಣ ವೇಣೂರು ಪಟ್ಟಣ ಆಗಿದೆ ಎನ್ನುವ ವಾದವೂ ಇದೆ.ವೇಣೂರು ಎಂದು ಕರೆಯಲ್ಪಡುವ ಈ ಊರಿನಲ್ಲಿ ೩೯೦ ವರುಷಗಳ ಹಿಂದೆ ೭೭೦ ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ `ಜೈನಾಚಾರ' ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಸೆಟ್ಟಿಗಾರರು, ಯೆಳಮೆಗಳು, ಹಲರು ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದ ವ್ಯಾಪಾರಿ ಸಂಘಗಳು ವೇಣೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದವು.

ಬಾಹುಬಲಿ ಮೂರ್ತಿ

ವೇಣೂರಿನ ವಿಶೇಷ ಆಕರ್ಷಣೆಯೆಂದರೆ ಬಾಹುಬಲಿ ಮೂರ್ತಿ . ಅಜಿಲ ಮನೆತನದ ತಿಮ್ಮರಾಜನು ಚಾರುಕೀರ್ತಿಗಳ ಉಪದೇಶದಿಂದ ೧೬೦೩ರಲ್ಲಿ ಸ್ಥಾಪಿಸಿದ ಎಂದು ಶಾಸನ ಹೇಳುತ್ತದೆ. ೩೫ ಅಡಿ ಎತ್ತರ.ವಿಗ್ರಹ ಬಲ ಬದಿಯಲ್ಲಿರುವ ಸಂಸ್ಕೃತ ಶಾಸನದಲ್ಲಿ ಚಾಮುಂಡವಂಶದ ತಿಮ್ಮರಾಜನು ಹಾಗೂ ಮೂಡುಬಿದಿರೆಯ ತನ್ನ ಗುರುಗಳಾದ ಚಾರುಕೀರ್ತಿ ಮಹಾ ಸ್ವಾಮೀಜಿ ಜೈನ ಮಠ ಮೂಡುಬಿದಿರೆ ಯವರ ಅಪ್ಪಣೆಯ ಪ್ರಕಾರ ಭುಜಬಲಿಯ ಪ್ರತಿಮೆಯನ್ನು ಶಾಲಿವಾಹನಶಕ ೧೫೨೫ ನೇ ಶೋಭಕೃತ್ಸಂವತ್ಸರ ಪಾಲ್ಗುಣಮಾಸ, ಶುಕ್ಲಪಕ್ಷ, ದಶಮೀತಿಥಿ, ಗುರುವಾರ, ಪುಷ್ಯಾನಕ್ಷತ್ರ, ಮಿಥುನಲಗ್ನ (ಬೆಳಗ್ಗೆ ೧೧.೩೦ರಿಂದ ಮಧ್ಯಾಹ್ನ ೧.೪೦ರಒಳಗೆ)’ (ಕ್ರಿ.ಶ. ೧೬೦೪ನೇ ಮಾರ್ಚ್ ೧ನೇ ತಾರೀಕು ಗುರುವಾರ) ಪ್ರತಿಷ್ಠಾಪಿಸಿದ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ವೇಣೂರಿನಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, ೨೪ ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ ೭ ಜಿನ ಚೈತ್ಯಾಲಯಗಳಿವೆ

ವೇಣೂರು: ಭಾರತ ದೇಶದ ಗ್ರಾಮಗಳು 

ಕಾರ್ಕಳ ದ ಗೋಮಟ ವಿಗ್ರಹಮಾಡಿದ "ವೀರ ಶಂಭು ಕಲ್ಕುಡ" ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದ (ಕಂಬಳ ನಡೆಯುವ ಸ್ತಳದ ಹತ್ತಿರ ) ಕಲ್ಯಾಣಿ ಎಂಬ ಸ್ಥಳದಲ್ಲಿ ಏಕಶಿಲೆಯಿಂದ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದನು.ತುಳುನಾಡಿನ ಶಿಲ್ಪಿ ವೀರ ಶಂಭು ಕಲ್ಕುಡನು ವೇಣೂರು ಬಾಹುಬಲಿ ಮೂರ್ತಿಯನ್ನು ಒಂದು ಕೈ,ಒಂದು ಕಾಲಿನಿಂದ,ಒಂದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿ ಸ್ಥಾಪಿಸಿದ ನೆಂದು ತುಳುನಾಡಿನ ಸಂದಿ,ಪಾಡ್ದನಗಳಲ್ಲಿ ಹೇಳಲ್ಪಡುತ್ತದೆ.

ವೇಣೂರು: ಭಾರತ ದೇಶದ ಗ್ರಾಮಗಳು 
ಗೋಮಟೇಶ್ವರ ಮೂರ್ತಿ

ಈ ಗೋಮಟೇಶ್ವರ ಮಹಾ ಮೂರ್ತಿಗೆ ೧೯೨೮,೧೯೫೬,೨೦೦೦ನೇ ಇಸವಿಯಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದು,ಇದೀಗ ೧೨ ವರ್ಷಗಳ ತರುವಾಯ ಮತ್ತೆ ಮಹಾ ಮಸ್ತಕಾಭಿಷೇಕದ ಸಂಭ್ರಮ. ೨೦೧೨ ಜ.೨೮ ರಿಂದ ಫೆಬ್ರವರಿ ೫ರ ವರೆಗೆ ನಡೆಯಲಿದೆ."ನಮನ"

Tags:

ಬೆಳ್ತಂಗಡಿ

🔥 Trending searches on Wiki ಕನ್ನಡ:

ದಕ್ಷಿಣ ಭಾರತದ ಇತಿಹಾಸಮೂಲಧಾತುಶ್ರೀ ರಾಮ ನವಮಿಏಡ್ಸ್ ರೋಗತಂತ್ರಜ್ಞಾನದ ಉಪಯೋಗಗಳುಉಗ್ರಾಣಕೆ. ಎಸ್. ನರಸಿಂಹಸ್ವಾಮಿಪರಿಸರ ವ್ಯವಸ್ಥೆದ್ಯುತಿಸಂಶ್ಲೇಷಣೆಋಗ್ವೇದಕರ್ಣದಾವಣಗೆರೆಶಿವರಾಜ್‍ಕುಮಾರ್ (ನಟ)ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಚನಕಾರರ ಅಂಕಿತ ನಾಮಗಳುಸಿಂಧನೂರುಏಕರೂಪ ನಾಗರಿಕ ನೀತಿಸಂಹಿತೆಹೈದರಾಲಿಕುಬೇರಸಂಯುಕ್ತ ಕರ್ನಾಟಕಕಲಬುರಗಿಪುನೀತ್ ರಾಜ್‍ಕುಮಾರ್ಕ್ಯಾರಿಕೇಚರುಗಳು, ಕಾರ್ಟೂನುಗಳುಹಣ್ಣುಬೆಂಗಳೂರು ಗ್ರಾಮಾಂತರ ಜಿಲ್ಲೆಸಚಿನ್ ತೆಂಡೂಲ್ಕರ್ಕರ್ನಾಟಕದ ಏಕೀಕರಣಜಾಗತಿಕ ತಾಪಮಾನರಾಮಭಾರತದ ಪಂಚಾಯತ್ ರಾಜ್ ವ್ಯವಸ್ಥೆಮೊಘಲ್ ಸಾಮ್ರಾಜ್ಯಮಹಾಜನಪದಗಳುಸೀಬೆಹರಿಹರ (ಕವಿ)ಜೈಪುರಅಮರೇಶ ನುಗಡೋಣಿಕುತುಬ್ ಮಿನಾರ್ಸಂಗೊಳ್ಳಿ ರಾಯಣ್ಣಕ್ರಿಕೆಟ್ಪ್ರೇಮಾಸೌರಮಂಡಲಮನಮೋಹನ್ ಸಿಂಗ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರವೀಂದ್ರನಾಥ ಠಾಗೋರ್ಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಭೂಮಿಕಲ್ಪನಾರಾಮಾಯಣದುಂಡು ಮೇಜಿನ ಸಭೆ(ಭಾರತ)ಚಾಮುಂಡರಾಯಅರವಿಂದ ಘೋಷ್ನಗರವಿಷ್ಣುವರ್ಧನ್ (ನಟ)ಲೋಕಸಭೆರಾಜ್ಯಪಾಲಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಾಂತಾರ (ಚಲನಚಿತ್ರ)ವೈದಿಕ ಯುಗಟೊಮೇಟೊದ.ರಾ.ಬೇಂದ್ರೆದಯಾನಂದ ಸರಸ್ವತಿಬಾಲಕೃಷ್ಣಭಾರತ ರತ್ನಹಲಸುವಿಕಿಪೀಡಿಯಗುಲಾಬಿದ್ರೌಪದಿ ಮುರ್ಮುರೈತಹಲ್ಮಿಡಿಕರ್ನಾಟಕ ರತ್ನಕರ್ನಾಟಕ ಸ್ವಾತಂತ್ರ್ಯ ಚಳವಳಿಝಾನ್ಸಿ ರಾಣಿ ಲಕ್ಷ್ಮೀಬಾಯಿಕಂಸಾಳೆಸೀತಾ ರಾಮಸಮುದ್ರಗುಪ್ತಗೋಪಾಲಕೃಷ್ಣ ಅಡಿಗ🡆 More