ವಾರಾಣಸಿ

ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ.

ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.

ವಾರಾಣಸಿ
ಕಾಶಿಯ ಮಣಿಕರ್ಣಿಕಾ ಘಾಟ್
ವಾರಾಣಸಿ
ವಾರಣಾಸಿ
वाराणसी
وارانسی
Government
 • ಮೇಯರ್ಕೌಶಲೇಂದ್ರ ಸಿಂಗ್
Population
 (2001)
 • Total೩೧,೪೭,೯೨೭ (ಜಿಲ್ಲೆ)

ಸ್ಕಂದ ಪುರಾಣ,ಉಪನಿಷತ್, ಹಾಗು ತಮಿಳಿನ 'ತೇವರಂ'ನಲ್ಲಿ ಇದರ ಉಲ್ಲೇಖ ಬರುತ್ತದೆ. ವಾರಣಾಸಿ ಪಾಲಿ ಆಡು ಭಾಷೆಯಲ್ಲಿ ಬಾರಣಾಸಿ ಆಗಿ ಮುಂದೆ ಬ್ರಟಿಷರ ನಾಲಗೆಯಲ್ಲಿ ಬನಾರಸ್ ಆಯಿತು. ಭಾರತದ ೧೨ ಜ್ಯೋತಿರ್ಲಿಂಗಗಳ ಪೈಕಿ ಇದು ಒಂದು. ಇಲ್ಲಿ ಮರಣಿಸಿದರೆ ಮುಕ್ತಿ ಎಂಬ ನಂಬಿಕೆಯಿದೆ. ವಿದೇಶಿ ಪ್ರವಾಸಿ ಹಗುಯಾನ್ ತ್ಸ್ಯಾಂಗನ ಪ್ರಕಾರ ಪಟ್ಟಣದ ನಡಡುವೆ ನೂರು ಅಡಿ ಎತ್ತರದ ಕಂಚಿನ ಶಿವ ವಿಗ್ರಹವಿತ್ತು. 1033ರಿಂದ 1669ವರರೆಗೆ ಈ ನಗರದ ಮೇಲೆ ಸತತ ದಾಳಿಗಳು ನಡೆದವು. ಸರಿ ಸುಮಾರು ಎಲ್ಲ ಮೊಘಲ ದೊರೆಗಳು ಈ ನಗರದ ಮೇಲೆ ಅನೇಕ ಬಾರಿ ದಾಳಿ ಮಾಡಿದರು.

  • 3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾಗಿದೆ.
  • ರಾಜಾ ಹರಿಶ್ಚಂದ್ರನು ತನ್ನ ಸಂಪೂರ್ಣ ರಾಜ್ಯವನ್ನು ವಿಶ್ವಾಮಿತ್ರರಿಗೆ ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು
  • ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು
  • ಮಧ್ಯಯುಗದಲ್ಲಿ ಸಮನ್ವಯದ ಸಂದೇಶವನ್ನು ಸಾರಿ, ಡಂಭಾಚಾರವನ್ನು ಖಂಡಿಸಿದ ರಾಮಭಕ್ತ ಸಂತ ಕಬೀರರು ಈ ನಗರದವರು
  • ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಆಚಾರ್ಯ ಮದನ ಮೋಹನ ಮಾಳವೀಯರು ಕಾಶಿಯಲ್ಲಿ ಮಾಡಿದರು
  • ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದಳು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.
  • ಪ್ರಸಿದ್ಧ ಬಿಂದು ಮಾಧವ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು.
  • ಕಾಶಿಯಲ್ಲಿರುವ ಪ್ರಸಿದ್ಧ ದೇವತೆಯರು ವಿಶಾಲಾಕ್ಷಿ ಮತ್ತು ಅನ್ನಪೂರ್ಣೆಯರು
  • ಕಾಶಿಯ ರೇಶ್ಮೆ ಸೀರೆಗಳು ಪ್ರಸಿದ್ಧ. ಕಬೀರರು ಇಂತಹ ನೇಕಾರರ ಮನೆಯಲ್ಲಿ ಬೆಳೆದರು.
  • ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ.
  • ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ
  • ’ಮಹಾ ಸ್ಮಶಾನ’ವೆಂಬ ಹೆಸರಿನಿಂದ ಕರೆಯಲ್ಪಡುವ ಈ ನಗರದಲ್ಲಿ ಮಣಿಕರ್ಣಿಕಾ ಘಟ್ಟ, ಹರಿಶ್ಚಂದ್ರ ಘಟ್ಟ ಮುಂತಾದ ಪ್ರಸಿದ್ಧ ಸ್ನಾನಘಟ್ಟ ಮತ್ತು ಸ್ಮಶಾನಘಟ್ಟಗಳಿವೆ.
ವಾರಾಣಸಿ
ಗಂಗಾ ನದಿಯ ತಟದ ಸ್ನಾನಘಟ್ಟದ ವಿಹಂಗಮ ನೋಟ

ನೋಡಿ

ಹೆಚ್ಚಿನ ಮಾಹಿತಿ

  • ಡಯಾನಾ ಎಕ್ ರ ಪಾಂಡಿತ್ಯ ಪೂರ್ಣಗ್ರಂಥ ’ಬನಾರಸ: ಸಿಟಿ ಆಫ್ ಲಾಯಿಟ್’
  • ಎಸ್. ಎಲ್. ಭೈರಪ್ಪನವರ ’ಆವರಣ’
  • ಶ್ರೀಮಧ್ವೀರಶೈವ ಪಂಚಪಿಠಗಳಲ್ಲಿ ಒಂದಾದ ಜ್ಞಾನಪಿಠ ಜಂಗಮವಾವಡಿವೇಂದು ಪ್ರಸಿದ್ಧವಾಗಿದೆ.(ಜಗದ್ಗುರು ವಿಶ್ವಾರಾಧ್ಯ್ ಸಿಂಹಾಸನ )

Tags:

ಗಂಗಾ

🔥 Trending searches on Wiki ಕನ್ನಡ:

ವ್ಯಾಸರಾಯರುವ್ಯಂಜನಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಭಾರತೀಯ ನದಿಗಳ ಪಟ್ಟಿಹಣದುಬ್ಬರಚಿನ್ನದ ಗಣಿಗಾರಿಕೆನುಡಿಗಟ್ಟುಆದಿ ಶಂಕರಕರ್ನಾಟಕ ಸಂಗೀತಜವಾಹರ‌ಲಾಲ್ ನೆಹರುಅಂತಿಮ ಸಂಸ್ಕಾರಬಿ.ಎಫ್. ಸ್ಕಿನ್ನರ್ಗೋದಾವರಿರೊಸಾಲಿನ್ ಸುಸ್ಮಾನ್ ಯಲೋವ್ರಾಷ್ಟ್ರೀಯ ಶಿಕ್ಷಣ ನೀತಿಫೆಬ್ರವರಿಸಂಸ್ಕೃತ ಸಂಧಿಗುಪ್ತ ಸಾಮ್ರಾಜ್ಯಲೆಕ್ಕ ಪರಿಶೋಧನೆಭಾರತ ರತ್ನಭಾರತದ ರಾಷ್ಟ್ರೀಯ ಚಿಹ್ನೆಪಿತ್ತಕೋಶವ್ಯಕ್ತಿತ್ವ ವಿಕಸನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಉತ್ತರ ಕನ್ನಡಕರ್ನಾಟಕದ ವಾಸ್ತುಶಿಲ್ಪಹರಿದಾಸಭಾರತದ ಮುಖ್ಯಮಂತ್ರಿಗಳುಆಡಮ್ ಸ್ಮಿತ್ಭಾರತದ ನಿರ್ದಿಷ್ಟ ಕಾಲಮಾನಕರ್ನಾಟಕದ ಜಾನಪದ ಕಲೆಗಳುಅರಿಸ್ಟಾಟಲ್‌ಬೌದ್ಧ ಧರ್ಮಗಣೇಶತಾಜ್ ಮಹಲ್ಲಕ್ಷ್ಮಿಲಂಚ ಲಂಚ ಲಂಚದಾಕ್ಷಾಯಿಣಿ ಭಟ್ಶನಿಐಹೊಳೆಹನುಮಂತಹೊಯ್ಸಳ ವಾಸ್ತುಶಿಲ್ಪರಾಮ ಮಂದಿರ, ಅಯೋಧ್ಯೆಸಾವಿತ್ರಿಬಾಯಿ ಫುಲೆಮಾಧ್ಯಮತ್ಯಾಜ್ಯ ನಿರ್ವಹಣೆವಿಜಯಪುರ ಜಿಲ್ಲೆಅರಬ್ಬೀ ಸಮುದ್ರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಯಕೃತ್ತುಕನ್ನಡ ಕಾವ್ಯಚದುರಂಗ (ಆಟ)ಚಂದ್ರಾ ನಾಯ್ಡುಎ.ಪಿ.ಜೆ.ಅಬ್ದುಲ್ ಕಲಾಂಆಸ್ಟ್ರೇಲಿಯರಾಘವಾಂಕವಚನಕಾರರ ಅಂಕಿತ ನಾಮಗಳುಯುವರತ್ನ (ಚಲನಚಿತ್ರ)ಪುತ್ತೂರುಗರುಡ (ಹಕ್ಕಿ)ಅಡೋಲ್ಫ್ ಹಿಟ್ಲರ್ರವಿಚಂದ್ರನ್ಜಿ.ಪಿ.ರಾಜರತ್ನಂಶಾಸನಗಳುರಾವಣಕರ್ನಾಟಕ ವಿಧಾನ ಪರಿಷತ್ಯಶ್(ನಟ)ಅಡಿಕೆರಸ(ಕಾವ್ಯಮೀಮಾಂಸೆ)ಜಾರ್ಜ್‌ ಆರ್ವೆಲ್‌ಪೂರ್ಣಚಂದ್ರ ತೇಜಸ್ವಿಶಿರ್ಡಿ ಸಾಯಿ ಬಾಬಾನುಗ್ಗೆಕಾಯಿನಾ. ಡಿಸೋಜಬಾಲಕಾರ್ಮಿಕಭಾರತೀಯ ಸಂವಿಧಾನದ ತಿದ್ದುಪಡಿನಿರ್ಮಲಾ ಸೀತಾರಾಮನ್ಕೊಡವರು🡆 More