ವಸುಮತಿ ಉಡುಪ

ವಸುಮತಿ ಉಡುಪ (ಏಪ್ರಿಲ್ ೧೮, ೧೯೪೮) ಕನ್ನಡದ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರು.

ವಸುಮತಿ ಉಡುಪ
ಜನನಏಪ್ರಿಲ್ ೧೮, ೧೯೪೮
ನಗರ ಗ್ರಾಮ, ಹೊಸನಗರ ತಾಲೂಕು, ಶಿವಮೊಗ್ಗ, ಕರ್ನಾಟಕ
ವೃತ್ತಿಕಥೆಗಾರ್ತಿ
ವಿಷಯಕನ್ನಡ ಸಾಹಿತ್ಯ

ವೈಯಕ್ತಿಕ ಜೀವನ

ವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭಟ್ಟ ಮತ್ತು ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿಯುಸಿವರೆಗೆ ಓದಿದ ವಸುಮತಿ ಮದುವೆಯಿಂದಾಗಿ ಮುಂದೆ ಓದಲಿಲ್ಲ.

ಕೃತಿಗಳು

ಉಡುಪ ಬರೆದ ಕಥೆಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚು. ಇವರ ಅನೇಕ ಕಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ. ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕೃತಿಗಳು ನಾಟಕಗಳಾಗಿ ಸಹ ಪರಿವರ್ತನೆಗೊಂಡಿವೆ.

ಕಥಾವಸ್ತು-ಶೈಲಿ

ಸರಳ ಭಾಷೆ, ನೇರ ನಿರೂಪಣೆ ವಸುಮತಿಯವರ ಶೈಲಿ. ಕಾದಂಬರಿ, ಕಥೆ, ಪ್ರಬಂಧ ಅವರ ನೆಚ್ಚಿನ ಪ್ರಕಾರಗಳು. ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ.

    ಕಾದಂಬರಿಗಳು
  1. ಪರಿವರ್ತನೆ
  2. ಸಂಬಂಧಗಳು
  3. ಅನವರತ
  4. ಅವ್ಯಕ್ತ

ಮುಂತಾದುವು

    ಕಥಾಸಂಕಲನಗಳು
  1. ಬಂದನಾ ಹುಲಿರಾಯನು
  2. ವಿಕಲ್ಪ
  3. ಶೇಷ ಪ್ರಶ್ನೆ
  4. ಸಂಕ್ರಮಣ
  5. ಅಂತರಂಗದ ಪಿಸುನುಡಿ
  6. ಬದುಕು ಮಾಯೆಯ ಮಾಟ

ಮುಂತಾದವು

    ಪ್ರಬಂಧ ಸಂಕಲನ
  1. ಸೀತಾಳದಂಡೆ

ಪ್ರಶಸ್ತಿ-ಗೌರವಗಳು

  • ಅಳಸಿಂಗ ಪ್ರಶಸ್ತಿ
  • ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ
  • ಮುಂಬಯಿ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ
  • ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ
  • ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ
  • 2019 - ಅಂಕಿತ ಪುಸ್ತಕ ಪುರಸ್ಕಾರ-ವರ್ಷದ ಲೇಖಕಿ

ಉಲ್ಲೇಖ

Tags:

ವಸುಮತಿ ಉಡುಪ ವೈಯಕ್ತಿಕ ಜೀವನವಸುಮತಿ ಉಡುಪ ಕೃತಿಗಳುವಸುಮತಿ ಉಡುಪ ಪ್ರಶಸ್ತಿ-ಗೌರವಗಳುವಸುಮತಿ ಉಡುಪ ಉಲ್ಲೇಖವಸುಮತಿ ಉಡುಪಏಪ್ರಿಲ್ ೧೮೧೯೪೮

🔥 Trending searches on Wiki ಕನ್ನಡ:

ಮುಹಮ್ಮದ್ಭಾರತದ ಚುನಾವಣಾ ಆಯೋಗನಾಮಪದತೆಲುಗುಭಾರತದ ರಾಜಕೀಯ ಪಕ್ಷಗಳುಗುಬ್ಬಚ್ಚಿಶಾಸನಗಳುಆಂಧ್ರ ಪ್ರದೇಶಕೆ. ಎಸ್. ನಿಸಾರ್ ಅಹಮದ್ಸಾಮಾಜಿಕ ಸಮಸ್ಯೆಗಳುನಾಗರೀಕತೆವಿಧಾನಸೌಧನೊಬೆಲ್ ಪ್ರಶಸ್ತಿಗೋವಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮದ್ಯದ ಗೀಳುಭಾರತದ ರಾಷ್ಟ್ರಪತಿಗಳ ಪಟ್ಟಿವಾಣಿವಿಲಾಸಸಾಗರ ಜಲಾಶಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕೃಷ್ಣರಾಜಸಾಗರನಾಗವರ್ಮ-೧ಪು. ತಿ. ನರಸಿಂಹಾಚಾರ್ವೇದವ್ಯಾಸಶಿಶುನಾಳ ಶರೀಫರುಬಿ. ಎಂ. ಶ್ರೀಕಂಠಯ್ಯಸಿದ್ದಲಿಂಗಯ್ಯ (ಕವಿ)ಅಲಾವುದ್ದೀನ್ ಖಿಲ್ಜಿಗುಡಿಸಲು ಕೈಗಾರಿಕೆಗಳುದುರ್ಯೋಧನಭಾರತೀಯ ಜನತಾ ಪಕ್ಷಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದ ಭೌಗೋಳಿಕತೆಯೋಗಗೋವಿಂದ ಪೈಕ್ರೀಡೆಗಳುರಾಘವಾಂಕಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅರಿಸ್ಟಾಟಲ್‌ಸಂಭೋಗಸ್ವಾಮಿ ರಮಾನಂದ ತೀರ್ಥವೃತ್ತಪತ್ರಿಕೆಹನುಮಾನ್ ಚಾಲೀಸರಾಜಾ ರವಿ ವರ್ಮವಿಶ್ವೇಶ್ವರ ಜ್ಯೋತಿರ್ಲಿಂಗಮೊರಾರ್ಜಿ ದೇಸಾಯಿಸಂಸ್ಕೃತ ಸಂಧಿಸ್ವರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಭಾರತದಲ್ಲಿನ ಜಾತಿ ಪದ್ದತಿಶೈಕ್ಷಣಿಕ ಮನೋವಿಜ್ಞಾನಹರಿಹರ (ಕವಿ)ಅಶ್ವತ್ಥಮರಹಾನಗಲ್ಶೃಂಗೇರಿತುಳಸಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುನಾಗಚಂದ್ರಚಿತ್ರದುರ್ಗ ಕೋಟೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜಾಹೀರಾತುವಾಯು ಮಾಲಿನ್ಯಋಗ್ವೇದರಾಮಾಯಣಭೂಮಿರಾಜಧಾನಿಗಳ ಪಟ್ಟಿಕರ್ನಾಟಕ ಐತಿಹಾಸಿಕ ಸ್ಥಳಗಳುಜೈನ ಧರ್ಮವೈದಿಕ ಯುಗಪರಶುರಾಮಗಣೇಶಶಬ್ದಮಣಿದರ್ಪಣಅಣ್ಣಯ್ಯ (ಚಲನಚಿತ್ರ)ಕನ್ನಡ ಅಕ್ಷರಮಾಲೆಕೈಲಾಸನಾಥವಿಮರ್ಶೆಭಾರತದ ರಾಷ್ಟ್ರಪತಿಸಮಾಜ ಸೇವೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಶ್ಯೆಕ್ಷಣಿಕ ತಂತ್ರಜ್ಞಾನ🡆 More