ವರರುಚಿ

ವರರುಚಿ ಪ್ರಾಚೀನ ಕವಿ ಹಾಗೂ ಶಾಸ್ತ್ರಕಾರ.

ಪಾಣಿನಿಯ ಆನಂತರದವ. ಪಾಣಿನಿ, ವರರುಚಿ ಮತ್ತು ಪತಂಜಲಿ (ಮಹಾಭಾಷ್ಯಕಾರ) ಎಂಬ ಮುನಿತ್ರಯದ ಫಲವಾಗಿ ಶಿಷ್ಟಭಾಷೆಗೊಂದು ಸಾರ್ವಕಾಲಿಕವಾದ ನಿಯತತ್ವ ಉಂಟಾಯಿತು, ಭಾರತಾದ್ಯಂತ ಸಂಸ್ಕøತ ಭಾಷೆ ಒಂದೇ ರೂಪದ್ದಾಯಿತು. ಇವನಿಗೆ ಕಾತ್ಯಾಯನ, ಕಾತ್ಯ ಎಂಬ ಹೆಸರುಗಳೂ ಇವೆ.

ಈತ ಪಾಣಿನಿಯ ಅಷ್ಟಾಧ್ಯಾಯಿಗೆ ಸೂತ್ರ ವೃತ್ತಿಗಳನ್ನು (ವಾರ್ತಿಕ) ಬರೆದಿದ್ದಾನೆ. ಇವನು ತನ್ನ ಕಾಲದ ಹೊತ್ತಿಗೆ ಶಿಷ್ಟಭಾಷೆಯಲ್ಲಿ ಉಂಟಾಗಿದ್ದ ಬೆಳೆವಣಿಗೆಯನ್ನು ಗಮನಿಸಿ ಪಾಣಿನಿಯ ಸೂತ್ರಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದಾನೆ. ಇದರಿಂದ ಅವನ ಕಾಲಕ್ಕೆ ಸಂಸ್ಕøತ ಜೀವಂತ ಭಾಷೆ ಆಗಿತ್ತೆಂಬುದು ಸ್ಪಷ್ಟ. ಅರ್ಥಾತ್ ಈ ಭಾಷೆ ಇನ್ನೂ ಬೆಳೆಯುತ್ತಿತ್ತು. ಈತ ಪಾಣಿನಿಯ ಶೈಲಿಯನ್ನೇ ಅಳವಡಿಸಿಕೊಂಡಿದ್ದಾನೆ.

ಈತ ವಾರರುಚಿಕಾವ್ಯ ಮತ್ತು ಉಭಯಾಭಿಸಾರಿಕಾಭಾಣ ಎಂಬ ಕೃತಿಗಳನ್ನೂ ರಚಿಸಿದುದಾಗಿ ತಿಳಿದು ಬರುತ್ತದೆ. ಈತ ಕೋಶವೊಂದನ್ನೂ ಬರೆದುದಾಗಿ ಹರ್ಷವರ್ಧನನಿಂದ ತಿಳಿದುಬರುತ್ತದೆ. ಇದು ಪೂರ್ಣವಾಗಿ ದೊರೆತಿಲ್ಲ. ಮದರಾಸು ಓರಿಯಂಟಲ್ ಲೈಬ್ರರಿಯಲ್ಲಿ ಉಪಲಬ್ಧವಿರುವ ಹಸ್ತಪ್ರತಿಯಲ್ಲಿ ಈತನ ಕೋಶದ ಕೇವಲ ಲಿಂಗಮಾತ್ರ ಉಕ್ತವಾಗಿದೆ. “ಆದರೆ ಕ್ಷೀರಸ್ವಾಮಿಯು ಅಲ್ಲಲ್ಲಿ ಉದಾಹರಿಸಿರುವ ಕಾತ್ಯನ ಕೋಶದ ವಾಕ್ಯಗಳನ್ನು ನೋಡಿದರೆ ಅದು ಎಷ್ಟು ಮಾತ್ರಕ್ಕೂ ಲಿಂಗಾನುಶಾಸನ ವಾಗಿರದೆ ನಾಮಗಳ ಅನುಶಾಸನವೆಂದೇ ತಿಳಿದುಬರುವುದು”. ಈ ನಿಘಂಟುವಿಗೆ “ನಾಮಮಾಲೆ” ಎಂಬ ಹೆಸರಿತ್ತೆಂದು ವಾಮನನ ಸೂತ್ರದಿಂದ ತಿಳಿದುಬರುತ್ತದೆ. ಕ್ಷೀರಸ್ವಾಮಿ ಕೆಲವೆಡೆಗಳಲ್ಲಿ ಪ್ರಮಾಣ ರೂಪದಲ್ಲೂ ಮತ್ತೆ ಕೆಲವೆಡೆ ಪೂರ್ವಪಕ್ಷರೂಪದಲ್ಲೂ ಉದಾಹರಿಸಿರುವ ವಾಕ್ಯಗಳನ್ನೆಲ್ಲ ಕ್ರೋಡೀಕರಿಸಿ ನೋಡಿದರೆ ಲಿಂಗಮಾತ್ರ ತಂತ್ರ ಹಾಗೂ ನಾಮಮಾತ್ರ ತಂತ್ರ ಎಂಬ ಏನೆಲ್ಲ ವಿಷಯಗಳನ್ನು ಕುರಿತ ಗ್ರಂಥವನ್ನು ಈತ ಬರೆದಿರಬಹುದು. ಕಾಲಕ್ರಮದಲ್ಲಿ ಅವು ಅಭ್ಯಾಸಿಗಳ ಇಷ್ಟದ ಅಭ್ಯಾಸಕ್ಕೆ ಬೇಕಾದಂತೆ ಬೇಕಾದಾಗ ಪ್ರತಿಗೊಂಡು ಬೇರೆ ಬೇರೆಯಾಗಿ ಮಾರ್ಪಟ್ಟು ಎರಡು ಗ್ರಂಥಗಳ ಸ್ವರೂಪವನ್ನು ಪಡೆದಿರಬಹುದು. ಈ ಸಂಗತಿಗಳು ಕ್ಷೀರಸ್ವಾಮಿಯ ಅಮರಕೋಶದ ವ್ಯಾಖ್ಯಾನದಲ್ಲಿ ಬಂದಿರುವುದರಿಂದ ವರರುಚಿಯ ಕೃತಿಯೂ ಅಮರಕೋಶದಂತಹ ಕೃತಿಯಾಗಿರಬಹುದು. ಆತನ ಸಮಗ್ರಕೋಶ ಲಭ್ಯವಾಗದಿರುವುದರಿಂದ ಈ ಕುರಿತು ಹೆಚ್ಚು ಹೇಳಲು ಸಾಧ್ಯವಿಲ್ಲ.

ಉಲ್ಲೇಖ

ವರರುಚಿ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಸಂಗೊಳ್ಳಿ ರಾಯಣ್ಣಕೇಂದ್ರಾಡಳಿತ ಪ್ರದೇಶಗಳುಶರಣಬಸವೇಶ್ವರ ದೇವಸ್ಥಾನ ಕಲಬುರಗಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮಳೆಗಾಲಸ್ವಚ್ಛ ಭಾರತ ಅಭಿಯಾನಪ್ರತಿಷ್ಠಾನ ಸರಣಿ ಕಾದಂಬರಿಗಳುಹುಚ್ಚೆಳ್ಳು ಎಣ್ಣೆಸಂಭೋಗಕ್ಷಯಚಂಪೂಬಿದಿರುಕಂಪ್ಯೂಟರ್ಸಜ್ಜೆವಸುಧೇಂದ್ರಭಾರತದ ರಾಷ್ಟ್ರಗೀತೆಮೆಕ್ಕೆ ಜೋಳದಾಳಿಂಬೆಚದುರಂಗ (ಆಟ)ರಾಮಜೂಜುಶಿವಮೊಗ್ಗಶ್ಯೆಕ್ಷಣಿಕ ತಂತ್ರಜ್ಞಾನಅಶ್ವತ್ಥಮರಸುಭಾಷ್ ಚಂದ್ರ ಬೋಸ್ಪಶ್ಚಿಮ ಬಂಗಾಳನಿರ್ವಹಣೆ ಪರಿಚಯಉತ್ತರಾಖಂಡಬಿ.ಎಲ್.ರೈಸ್ಶ್ರೀ ರಾಮಾಯಣ ದರ್ಶನಂಗ್ರಹದ್ರೌಪದಿ ಮುರ್ಮುಸ್ವರಕರ್ನಾಟಕ ಜನಪದ ನೃತ್ಯಕರ್ನಾಟಕ ಸರ್ಕಾರಚಂದ್ರಗ್ರೀಕ್ ಪುರಾಣ ಕಥೆಗೂಗಲ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅರ್ಥ ವ್ಯತ್ಯಾಸಕನ್ನಡದಲ್ಲಿ ಸಣ್ಣ ಕಥೆಗಳುಮರಾಠಾ ಸಾಮ್ರಾಜ್ಯವ್ಯಾಪಾರಚೆನ್ನಕೇಶವ ದೇವಾಲಯ, ಬೇಲೂರುಕೋಟಿ ಚೆನ್ನಯವಚನಕಾರರ ಅಂಕಿತ ನಾಮಗಳುಅನ್ವಿತಾ ಸಾಗರ್ (ನಟಿ)ಯಲಹಂಕದೇವತಾರ್ಚನ ವಿಧಿಯಕ್ಷಗಾನದೆಹಲಿಕರ್ಣಾಟ ಭಾರತ ಕಥಾಮಂಜರಿಷಟ್ಪದಿಪಟ್ಟದಕಲ್ಲುದಲಿತಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸ್ವಾಮಿ ವಿವೇಕಾನಂದವಿಧಾನ ಸಭೆಜಿ.ಎಸ್. ಘುರ್ಯೆಭಾರತ ರತ್ನಎಂ.ಬಿ.ಪಾಟೀಲವಿಜಯಪುರ ನಗರ ವಿಧಾನಸಭಾ ಕ್ಷೇತ್ರಚುನಾವಣೆಉಪನಿಷತ್ಕನ್ನಡ ಅಕ್ಷರಮಾಲೆಕರ್ನಾಟಕ ಹೈ ಕೋರ್ಟ್ಸವದತ್ತಿಕರ್ನಾಟಕ ವಿಧಾನಸಭೆ ಚುನಾವಣೆ, 2013ಕುರು ವಂಶಶೈಕ್ಷಣಿಕ ಮನೋವಿಜ್ಞಾನಅಮಿತ್ ಶಾಸಮಾಸಚದುರಂಗದ.ರಾ.ಬೇಂದ್ರೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕಾಮಾಲೆಬಲರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು🡆 More