ಲಗೋರಿ: ದ್ವಂದ್ವ ನಿವಾರಣೆ

ಲಗೋರಿ ಎಂಬುದು ಭಾರತದ ಒಂದು ಜಾನಪದ ಕ್ರೀಡೆಯಾಗಿದೆ.

ಇದನ್ನು ಲಿಂಗೋಚ ಎಂದೂ ಕರೆಯುತ್ತಾರೆ. ಮತ್ತೆ ಪಿತ್ತೋ (ರಾಜಸ್ಥಾನದಲ್ಲಿ) ಹಾಗೂ ಸಟೋಲಿಯ (ಮಧ್ಯಪ್ರದೇಶದಲ್ಲಿ) ಎನ್ನುತ್ತಾರೆ. ಇದು ಹೊರಾಂಗಣ ಆಟವಾಗಿದೆ. ಇದು ನಾಲ್ಕು ಮತ್ತು ಹೆಚ್ಚು ಜನ ಆಡುವ ಆಟ. ಇದಕ್ಕೆ ಬೇಕಾದ ಪರಿಕರಗಳೆಂದರೆ, ಚೆಂಡು, ಚಪ್ಪಟೆ ಕಲ್ಲುಗಳು ಇತ್ಯಾದಿ. ಸರಳವಾದ ಆಟವನ್ನು ಸಮಯದ ಮಿತಿ ಇಲ್ಲದೆ ಆಡಬಹುದು.

ಲಗೋರಿ
ಲಗೋರಿ: ವಿವಿಧ ಹೆಸರು, ಆಡುವ ಕ್ರಮ, ಲಗೋರಿ ಆಟದ ನಿಯಮಗಳು
ಇದು ಕೇರಳದಲ್ಲಿ ಆಡುವ ಡಬ್ಬಾಕಲಿ ಆಟ
ಆಟಗಾರರು೪ ಅಥವಾ ಹೆಚ್ಚು ಜನ
ವಯಸ್ಸಿನ ವ್ಯಾಪ್ತಿಯಾವುದೇ ವಯಸ್ಸು
ಪ್ರಾರಂಭಕ್ಕೆ ಬೇಕಾದ ಕಾಲನಿಮಿಷಕ್ಕಿಂತ ಕಡಿಮೆ
ಆಟದ ಸಮಯಮಿತಿ ಇಲ್ಲ
ಯಾದೃಚ್ಛಿಕ ಅವಕಾಶಅಲ್ಪ
ಬೇಕಾದ ನೈಪುಣ್ಯತೆ(ಗಳು)ಓಟ, ವೀಕ್ಷಣೆ,ವೇಗ,ಬಲ,ಎಸೆತ
ಬೆಂಗಳೂರಿನ ಬೀದಿಯಲ್ಲಿ ಲಗೋರಿ ಆಡುತ್ತಿರುವ ಮಕ್ಕಳು
ಲಗೋರಿ: ವಿವಿಧ ಹೆಸರು, ಆಡುವ ಕ್ರಮ, ಲಗೋರಿ ಆಟದ ನಿಯಮಗಳು
ಡಬ್ಬಾಕಲಿ


ವಿವಿಧ ಹೆಸರು

ದೇಶದ ಇತರ ಭಾಗಗಳಲ್ಲಿ, ಇದೇ ಆಟವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ:

  • ಲಗೋರಿ (ಕರ್ನಾಟಕ)
  • ಲಿಂಗೋರ್ಚ, ಲಗೋರಿ (ಮಹಾರಾಷ್ಟ್ರ)
  • ಪಿತ್ತು (ಹರ್ಯಾಣ, ಪಂಜಾಬ್, ಚಂಡೀಘಢ ಹಾಗೂ ಉತ್ತರ ರಾಜಸ್ತಾನ)
  • ಸೈಟೋಲಿಯ (ರಾಜಸ್ಥಾನ, ಬಿಹಾರ)
  • ಸಾತೋಡಿಯು (ಗುಜರಾತ್)
  • ಪಿತ್ತು (ಪಶ್ಚಿಮ ಬಂಗಾಳ, ಬಿಹಾರ)
  • ಬಮ್ ಪಿತ್ತೋ (ಬಿಹಾರ)
  • ಎಡು ಪೆಂಕುಳತ, ಡಿಕೋರಿ ಅಥವಾ ಪಿತ್ತು (ಆಂಧ್ರಪ್ರದೇಶ)
  • ಡಬ್ಬಾ ಕಲಿ (ಕೇರಳ, ತೆಂಗಿನ ಎಲೆಗಳು ಮಾಡಿದ್ದ ಚೆಂಡನ್ನು ಬಳಸಿ ಆಡಲಾಗುತ್ತದೆ)
  • ಎಜ್ಹು ಕಲ್ಲು (ತಮಿಳುನಾಡು)
  • ಗರ್ಮಾನ್ (ಕಾಶ್ಮೀರ)

ಆಡುವ ಕ್ರಮ

ಮನೆಯಂಗಳದಲ್ಲೋ, ಗದ್ದೆ ಬಯಲುಗಳಲ್ಲೋ ಹತ್ತಾರು ಮಕ್ಕಳು ಒಟ್ಟು ಸೇರಿದಾಗ ಹೆಂಚು ತುಂಡು, ಗೆರಟೆ, ಅಥವಾ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೆ ಒಂದು ಇಟ್ಟು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ರಬ್ಬರ್ ಚೆಂಡು ,ಅಲ್ಲದಿದ್ದರೆ ಹುಲ್ಲನ್ನು ಮುದ್ದೆಯಾಗಿ ಮಾಡಿ ಮೇಲೆ ಕಾಗದ ಸುತ್ತಿ ಬಾಳೆಗಿಡದ ಒಣಗಿದ ಹಗ್ಗವನ್ನು ನೀರಿನಲ್ಲಿ ಮುಳುಗಿಸಿ, ತೇವ ಮಾಡಿ ಅದನ್ನು ಗಟ್ಟಿಯಾಗಿ ಸುತ್ತಿ ಚೆಂಡು ಮಾಡಿ ಲಗೋರಿ ಪ್ರಾರಂಭವಾಗುತ್ತಿತ್ತು. ಹೀಗೆ ಮಾನವ ತನ್ನ ಬೌದ್ಧಿಕ ಶಕ್ತಿಯಿಂದ ಅದಕ್ಕೂಂದು ರೂಪಕೊಟ್ಟು ಆಡುವ ಆಟಗಳೇ ಜಾನಪದ ಕ್ರೀಡೆಗಳಾಗಿ ಬೆಳದು ಬಂದವು ಹಳ್ಳಿಹೈದರ ಆಟದ ವಿಶೇಷತೆಗಳ ಬಗ್ಗೆ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಟಗಳನ್ನು ಆಡುವುದನ್ನು ನೋಡಿತ್ತೇವೆ ಕಣ್ಣು ಮುಚ್ಚಾಲೆ,ಮರಕೋತಿ,ಕುಂಟಾಟ,ಗೋಲಿ, ಚಿನ್ನಿದಾಂಡು,ಗಾಳಿಪಟ, ನೀರಿನಲ್ಲಿ ಆಡುವ ಪೀಂಕ ಆಟ ಮುಂತಾದ ಇನ್ನು ನುರಾರೂ ಆಟಗಳು ಆದರೆ ಈ ಎಲ್ಲಾ ಆಟಗಳು ಜನಪದದಿಂದ ಮರೆಯಾಗುತ್ತಿದೆ. ಈ ದೃಷ್ಟಿಯಿಂದ ಜನಪದದಿಂದ ಮರೆಯಾಗುತ್ತಿರುವ ಆಟಗಳಲ್ಲಿ ಒಂದು.

ಲಗೋರಿ ಆಟದ ನಿಯಮಗಳು

ನಿಯಮಗಳನ್ನು ಪಾಲಿಸಿ ಆಡಬೇಕಾಗುತ್ತದೆ ಅದರಲ್ಲಿ ಕೆಲವುಗಳು ಯಾವುದೆಂದರೇ ಆಟದಅಂಗಣ,ಅಂಗಣವನ್ನು ಅಥೀಕಾರಿಗಳು ಪರಿಶೀಲಿಸುವುದು ಅದಕ್ಕೆ ಉಪಹೋಗಿಸುವ ಸೂಕ್ತವಾದ ಸಲಕರಣೆಗಳು ಮತ್ತು ಅಂಗಣರಚಿಸುವುದು. ವಿವಿಧ ನಿಯಮಗಳು ಬಿಲ್ಡರ್ಸ್ ಹಾಗೂ ಫೀಲ್ಡರ್ಸ್ ನಿಯಮಗಳು ಆಟಗಾರರ ಬದಲಾವಣೆ ಪೌಲ್ಸ್(ತಪ್ಪುಗಳು), ದಂಡನೆ, ಟೈ(ಅಂಕ ಸಮವಾದಾಗ) ನಿಯಮಗಳನ್ನು ಲಗೋರಿ ಒಳಗೊಂಡಿದೆ.

  1. ಮೈದಾನದಲ್ಲಿ ಆಡುವ ಆಟ.
  2. ಎರಡು ತಂಡಗಳಿರುತ್ತವೆ.
  3. ಎರಡೂ ಗುಂಪಿನವರು ಕ್ರಿಕೆಟ್ ರಬ್ಬರ್ ಚೆಂಡನ್ನು ಹೆಚ್ಚಾಗಿ ಆಟಕ್ಕೆ ಬಳಸುತ್ತಾರೆ.

ಈ ಆಟವಾಡಲು ನಾ‌ಲ್ಕು ಅಥವಾ ಹೆಚ್ಚು ಜನ ಇರಬೇಕು

ಕ್ರೀಡೆಯ ಮಹತ್ವ

ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ ಭಾರತೀಯರ ಒಂದೊಂದು ಆಚರಣೆಯ ಹಿಂದೆ ತನ್ನದ್ದೇ ಆದ ಒಂದು ಇತಿಹಾಸವಿದೆ. ನದಿ ಕಣಿವೆಗಳಲ್ಲಿ ಮಾನವ ಸಂಸ್ಕೃತಿ ಅರಳಿದಾಗ ಕ್ರೀಡೆಗೂ ಪ್ರಾಧ್ಯಾನತೆ ದೊರೆಯಿತು. ಇಂದು ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಕ್ರೀಡೆ ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಔಷಧಿಯೂ ಕೂಡ. ಮಕ್ಕಳ ಜಾಣ್ಮೆ,ಚಾತುರ್ಯ,ಧೈರ್ಯಶಕ್ತಿ ಹಾಗೂ ಕುತೂಹಲ ದೃಷ್ಟಿಗೆ ಅನುಗುಣವಾಗಿ ವಿವಿಧ ಆಟಗಳು ಬೆಳಕಿಗೆ ಬಂದಿದೆ.

ಬಾಹ್ಯ ಸಂಪರ್ಕಗಳು

  1. https://www.google.co.in/search?q=lagori+game&biw=1366&bih=633&tbm=isch&tbo=u&source=univ&sa=X&ved=0ahUKEwj1i9fIwdPQAhUIRY8KHVYDCI8QsAQIOg
  2. https://www.youtube.com/watch?v=CifWcTKJA7A

ಉಲ್ಲೇಖ

Tags:

ಲಗೋರಿ ವಿವಿಧ ಹೆಸರುಲಗೋರಿ ಆಡುವ ಕ್ರಮಲಗೋರಿ ಆಟದ ನಿಯಮಗಳುಲಗೋರಿ ಕ್ರೀಡೆಯ ಮಹತ್ವಲಗೋರಿ ಬಾಹ್ಯ ಸಂಪರ್ಕಗಳುಲಗೋರಿ ಉಲ್ಲೇಖಲಗೋರಿ

🔥 Trending searches on Wiki ಕನ್ನಡ:

ರಾಜಕೀಯ ಪಕ್ಷಸಂಚಿ ಹೊನ್ನಮ್ಮಕಾವ್ಯಮೀಮಾಂಸೆಕೊಪ್ಪಳಸಂಖ್ಯೆಕನಕದಾಸರುಗೋಲ ಗುಮ್ಮಟಋಗ್ವೇದಗಿಡಮೂಲಿಕೆಗಳ ಔಷಧಿಸರ್ವಜ್ಞಜನಪದ ಕಲೆಗಳುಸ್ವಾಮಿ ವಿವೇಕಾನಂದವಾಯು ಮಾಲಿನ್ಯಭೋವಿಕುದುರೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುರಾಹುಲ್ ಗಾಂಧಿರೇಡಿಯೋಸರಾಸರಿರಾಷ್ಟ್ರಕೂಟಖೊಖೊ೧೮೬೨ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸುಮಲತಾವಾಲಿಬಾಲ್ತೆನಾಲಿ ರಾಮ (ಟಿವಿ ಸರಣಿ)ನ್ಯೂಟನ್‍ನ ಚಲನೆಯ ನಿಯಮಗಳುಪಂಚಾಂಗಮುರುಡೇಶ್ವರನಿರುದ್ಯೋಗಮಂಡಲ ಹಾವುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಷ್ಟ್ರೀಯ ಸೇವಾ ಯೋಜನೆಸುಗ್ಗಿ ಕುಣಿತಇಂಡಿಯನ್ ಪ್ರೀಮಿಯರ್ ಲೀಗ್ಭಾಷಾ ವಿಜ್ಞಾನಅಳಿಲುಭಾರತದ ರಾಜಕೀಯ ಪಕ್ಷಗಳುಸಿದ್ದಪ್ಪ ಕಂಬಳಿವಿಷ್ಣುವಿಭಕ್ತಿ ಪ್ರತ್ಯಯಗಳುಇಮ್ಮಡಿ ಪುಲಿಕೇಶಿವಾಲ್ಮೀಕಿದ್ಯುತಿಸಂಶ್ಲೇಷಣೆತ. ರಾ. ಸುಬ್ಬರಾಯಚಾಲುಕ್ಯರಾಷ್ಟ್ರಕವಿಭಾರತಇಂಡೋನೇಷ್ಯಾಕೋಟ ಶ್ರೀನಿವಾಸ ಪೂಜಾರಿಸುದೀಪ್ಕೃಷ್ಣಾ ನದಿಸಂಧಿರಾಶಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಜಯದಾಸರುವ್ಯಾಪಾರ ಸಂಸ್ಥೆಪರಿಣಾಮಬೀಚಿಆರೋಗ್ಯಸೌರಮಂಡಲಪೊನ್ನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭೂಮಿಕನ್ನಡದಲ್ಲಿ ಗಾದೆಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಶುಕ್ರದೆಹಲಿ ಸುಲ್ತಾನರುಸ್ವರಾಜ್ಯನಾರುಕರ್ನಾಟಕ ವಿಧಾನ ಪರಿಷತ್ಮಂಗಳ (ಗ್ರಹ)ಕೆ.ಎಲ್.ರಾಹುಲ್ಬಿ. ಆರ್. ಅಂಬೇಡ್ಕರ್ಕೃಷಿಸೆಸ್ (ಮೇಲ್ತೆರಿಗೆ)ಭಾರತದ ಪ್ರಧಾನ ಮಂತ್ರಿಜಾತಿ🡆 More