ಪರಿಕಲ್ಪನೆ ರಾಜಾಧಿರಾಜ

ರಾಜಾಧಿರಾಜ ಅಥವಾ ಅರಸರ ಅರಸ ಅಥವಾ ದೊರೆಯರ ದೊರೆ ಅಥವಾ ರಾಜರ ರಾಜ, (ಸಂಸ್ಕೃತ: राजाधिराज), (ಕನ್ನಡದಲ್ಲಿ: ರಾಜಾಧಿರಾಜ) ಪ್ರಾಥಮಿಕವಾಗಿ ಮಧ್ಯಪ್ರಾಚ್ಯದ ದೊರೆಗಳಿಂದ ನೇಮಕಗೊಂಡ ಆಡಳಿತ ಶೀರ್ಷಿಕೆ.

ಸಾಮಾನ್ಯವಾಗಿ ಇರಾನೊಂದಿಗೆ (ಐತಿಹಾಸಿಕವಾಗಿ ಪಾಶ್ಚಾತ್ಯರು ಪರ್ಷಿಯ ಎಂದು ಕರೆಯತ್ತಾರೆ ), ವಿಶೇಷವಾಗಿ ಅಕೆಮೆನಿಡ್ ಮತ್ತು ಸಸಾನಿಯನ್ ಸಾಮ್ರಾಜ್ಯಗಳೊಂದಿಗೆ ಸಂಬಂಧ ಹೊಂದಿದ್ದರೂ, ಶೀರ್ಷಿಕೆಯನ್ನು ಮೂಲತಃ ಮಧ್ಯ ಅಸಿರಿಯದ ಸಾಮ್ರಾಜ್ಯದ ಸಮಯದಲ್ಲಿ ರಾಜ ತುಕುಲ್ತಿ-ನಿನುರ್ತ I (1233-1197 BC ಆಳ್ವಿಕೆ) ಮತ್ತು ಪರಿಚಯಿಸಿದರು. ಮೇಲೆ ತಿಳಿಸಿದ ಪರ್ಷಿಯ, ವಿವಿಧ ಯವನ ಸಾಮ್ರಾಜ್ಯಗಳು, ಅರ್ಮೇನಿಯ, ಜಾರ್ಜಿಯ ಮತ್ತು ಇಥಿಯೋಪಿಯ ಸೇರಿದಂತೆ ಹಲವಾರು ವಿಭಿನ್ನ ರಾಜ್ಯಗಳು ಮತ್ತು ಸಾಮ್ರಾಜ್ಯಗಳಲ್ಲಿ ನಂತರ ಬಳಸಲಾಯಿತು.

ಪರಿಕಲ್ಪನೆ ರಾಜಾಧಿರಾಜ
ಅರಸರ ಅರಸ ಎಂಬ ಬಿರುದನ್ನು ಪಾರಸಿ ರಾಜರುಗಳಾದ ಮೊದಲನೆ ದಾರಿಯುಸ್ (ಮೇಲಿನ ಚಿತ್ರದಲ್ಲಿರುವವರು) ಪ್ರಮುಖವಾಗಿ ಬಳಸಿದ್ದಾರೆ. ಡೇರಿಯಸ್‌ನ ಪೂರ್ಣ ಪಟ್ಟವು ಮಹರಾಜ, ರಾಜರ ರಾಜ, ಫಾರ್ಸ್‌ ಪ್ರಾಂತ್ಯದಲ್ಲಿ ರಾಜ, ದೇಶಗಳ ರಾಜ, ಗುಶ್ತಾಶ್ಪ ಮಗ, ಅರ್ಶಾಮನ ಮೊಮ್ಮಗ, ಒಬ್ಬ ಅಕೆಮೆನಿಡ್.

ಬಿರುದನ್ನು ಸಾಮಾನ್ಯವಾಗಿ ಚಕ್ರವರ್ತಿಗೆ ಸಮನಾಗಿರುತ್ತದೆಂದು ನೋಡಲಾಗುತ್ತದೆ, ಎರಡೂ ಬಿರುದುಗಳು ಪ್ರತಿಷ್ಠೆಯಲ್ಲಿ ಅರಸನು ಅಥವಾ ರಾಜನನ್ನು ಮೀರಿಸುತ್ತದೆ, ಸಸಾನಿಯನ್ ಸಾಮ್ರಾಜ್ಯದ ಶೆಹನ್ಶಹರನ್ನು ತಮ್ಮ ಸಮಾನರಾಗಿ ಕಂಡ ಪ್ರಾಚೀನ ರೋಮನ್ ಮತ್ತು ಪೂರ್ವ ರೋಮನ್ ಚಕ್ರವರ್ತಿಗಳಿಂದ, ಈ ಬಿರುದನ್ನು ಚಕ್ರವರ್ತಿಯ ಸಮಾನವೆಂದು ಅರ್ಥೈಸಲಾಗುತ್ತದೆ. ಇರಾನ್‌ನಲ್ಲಿನ ಪಹ್ಲವಿ ರಾಜವಂಶದ (1925-1979) ಶಹನಶಾಹ ಎಂಬ ಬಿರುದನ್ನು ಬಳಸಿದ ಕೊನೆಯ ಆಳ್ವಿಕೆಯ ದೊರೆಗಳು ಕೂಡ ಈ ಬಿರುದನ್ನು "ಚಕ್ರವರ್ತಿ" ಎಂದು ಸಮೀಕರಿಸಿದರು. ಇಥಿಯೋಪಿಯನ್ ಸಾಮ್ರಾಜ್ಯದ ಅರಸರು Nəgusä Nägäst (ಅಕ್ಷರಶಃ "ರಾಜರ ರಾಜನು") ಎಂಬ ಶೀರ್ಷಿಕೆಯನ್ನು ಬಳಸಿದರು, ಇದನ್ನು ಅಧಿಕೃತವಾಗಿ "ಚಕ್ರವರ್ತಿ" ಎಂದು ಅನುವಾದಿಸಲಾಗಿದೆ. ಸುಲ್ತಾನರ ಸುಲ್ತಾನವು ಅರಸರ ಅರಸ ಬಿರುದಿನ ಸುಲ್ತಾನೀಯ ಸಮಾನವಾದ ಪದ.

ಯಹೂದಿಧರ್ಮದಲ್ಲಿ, ಮೆಲೆಚ್ ಮಲ್ಚೆಯಿ ಹಮೆಲಾಚೀಮ್ ಬರುದು, ("ರಾಜರ ರಾಜನ ರಾಜರು") ದೇವರ ಹೆಸರಾಗಿ ಬಳಸಲಾಗುತ್ತದೆ. "ಅರಸರ ಅರಸ"ವು (βασιλεὺς τῶν βασιλευόντων) ಅನ್ನು ಬೈಬಲ್‌ನಲ್ಲಿ ಹಲವಾರು ಬಾರಿ ಯೇಸು ಕ್ರಿಸ್ತನನ್ನು ಉಲ್ಲೇಖಿಸಲು ಬಳಸಲಾಗಿದೆ, ವಿಶೇಷವಾಗಿ ತಮೋಥಿಗೆ ಮೊದಲ ಪತ್ರದಲ್ಲಿ ಮತ್ತು ಎರಡು ಬಾರಿ ಬಹಿರಂಗದ ಪುಸ್ತಕದಲ್ಲಿ . ಇಸ್ಲಾಮಿನಲ್ಲಿ, ರಾಜಾಧಿರಾಜ ಮತ್ತು ಪರ್ಷಿಯನ್ ರೂಪಾಂತರವಾದ ಶೆಹನ್ಶಾಹ ಎಂಬ ಪದಗಳನ್ನುಖಂಡಿಸಲಾಗುತ್ತದೆ, ಸ್ಪಷ್ಟವಾಗಿ ಸುನ್ನಿ ಹದೀಸ್ನಲ್ಲಿ ಖಂಡಿಸಲಾಗುತ್ತದೆ.

Tags:

ಇರಾನಿನ ಇತಿಹಾಸಮಧ್ಯ ಪ್ರಾಚ್ಯ

🔥 Trending searches on Wiki ಕನ್ನಡ:

ನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಮದ್ ಬಿನ್ ತುಘಲಕ್ಚಂಡಮಾರುತಸ್ಟಾರ್‌ಬಕ್ಸ್‌‌ವಾಸ್ತುಶಾಸ್ತ್ರಮಾತೃಭಾಷೆವಿಜಯಪುರಬಿಳಿ ರಕ್ತ ಕಣಗಳುಗೋಕಾಕ್ ಚಳುವಳಿರೇಡಿಯೋಕನ್ನಡ ಕಾಗುಣಿತಮುಹಮ್ಮದ್ಅಂಟುನೈಸರ್ಗಿಕ ಸಂಪನ್ಮೂಲರಗಳೆತ್ರಿವೇಣಿಜ್ವರಚಿತ್ರಲೇಖಮಿಥುನರಾಶಿ (ಕನ್ನಡ ಧಾರಾವಾಹಿ)ಮಾಹಿತಿ ತಂತ್ರಜ್ಞಾನಉಪನಯನಮಾವುಚಿಲ್ಲರೆ ವ್ಯಾಪಾರಕಂಪ್ಯೂಟರ್ಉಪ್ಪಿನ ಸತ್ಯಾಗ್ರಹಸಮಾಜಶಾಸ್ತ್ರನಾಡ ಗೀತೆಪಿತ್ತಕೋಶಸಂಖ್ಯಾಶಾಸ್ತ್ರಕನ್ನಡ ರಾಜ್ಯೋತ್ಸವಯೋಗಕುತುಬ್ ಮಿನಾರ್ಭಾರತದ ಸ್ವಾತಂತ್ರ್ಯ ಚಳುವಳಿಕಲ್ಯಾಣ ಕರ್ನಾಟಕಮಹಾಭಾರತಬಹಮನಿ ಸುಲ್ತಾನರುಕೈವಾರ ತಾತಯ್ಯ ಯೋಗಿನಾರೇಯಣರುಭಾರತದ ಸಂವಿಧಾನ ರಚನಾ ಸಭೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಾಹಿತ್ಯಶಿವರಾಮ ಕಾರಂತಕರ್ಣಪಂಚಾಂಗಮಾಸ್ಕೋನಿರುದ್ಯೋಗಭಕ್ತಿ ಚಳುವಳಿಪುಟ್ಟರಾಜ ಗವಾಯಿಬಾರ್ಲಿಬಿ. ಶ್ರೀರಾಮುಲುಕನ್ನಡ ಅಕ್ಷರಮಾಲೆವಾದಿರಾಜರುಸುದೀಪ್ಅಭಿಮನ್ಯುನಚಿಕೇತಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದಾಸ ಸಾಹಿತ್ಯಸುಧಾ ಮೂರ್ತಿಭಾರತದಲ್ಲಿನ ಚುನಾವಣೆಗಳುಶಿಕ್ಷಣಕನ್ನಡ ಸಾಹಿತ್ಯ ಪ್ರಕಾರಗಳುಮಾರ್ಕ್ಸ್‌ವಾದಒಡೆಯರ್ಮೂಲಭೂತ ಕರ್ತವ್ಯಗಳುಜ್ಞಾನಪೀಠ ಪ್ರಶಸ್ತಿರಾಧೆಉಡಬಿ. ಆರ್. ಅಂಬೇಡ್ಕರ್ಗೋಪಾಲಕೃಷ್ಣ ಅಡಿಗಗುರು (ಗ್ರಹ)ತುಮಕೂರುಮಾನವ ಅಭಿವೃದ್ಧಿ ಸೂಚ್ಯಂಕವಿಷ್ಣುವರ್ಧನ್ (ನಟ)ಮೊದಲನೇ ಅಮೋಘವರ್ಷಸಮಾಸಕರ್ನಾಟಕದ ಮುಖ್ಯಮಂತ್ರಿಗಳುಬಯಲಾಟ🡆 More