ಮೋಗುಬಾಯಿ ಕುರ್ಡಿಕರ್

ಮೋಗುಬಾಯಿ ಕುರ್ಡೀಕರ್ (೧೫ ಜುಲೈ ೧೯೦೪ – ೧೦ ಫ಼ೆಬ್ರವರಿ ೨೦೦೧) ಇವರು ಜೈಪುರ್-ಅತ್ರೌಲಿ ಘರಾಣೆಯ ಸುಪ್ರಸಿದ್ಧ ಗಾಯಕಿ.

ಇವರು ಗಾಯನಾಚಾರ್ಯ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರ ಶಿಷ್ಯೆ.

ಸಂಗೀತ ಸೇವೆ

೧೯೪೦ರಿಂದ ಮೋಗುಬಾಯಿಯವರು ಭಾರತದ ಎಲ್ಲೆಡೆ ತಮ್ಮ ಗಾಯನವನ್ನು ಪ್ರಸ್ತುತ ಪಡಿಸಿದರು. ಆರಂಭಿಕ ದಿನಗಳಲ್ಲಿ ಅವರು ಸಂಗೀತ ಕಚೇರಿ ಸಂಘಟಕರಿಂದ ಸಾಕಷ್ಟು ಅಪಮಾನಗಳನ್ನು ಎದುರಿಸಿದರು, ಆ ದಿನಗಳಲ್ಲಿ ಮಹಿಳೆಯರಿಗೆ ಗಾಯನ ಸಂಗೀತದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರದ ಕಾರಣ ಹೆಚ್ಚಿನ ಸಂಭಾವನೆಯೂ ಸಿಗುತ್ತಿರಲಿಲ್ಲ. ಅವರ ಗಾಯನದ ಉನ್ನತ ಅಭ್ಯಾಸ, ಅವರ ಶಿಸ್ತು, ತಮ್ಮ ಗುರುಗಳ ಘರಾಣೆಯ ಮೂಲಭೂತ ತತ್ವಗಳಿಗೆ ಎಂದೂ ತಿಲಾಂಜಲಿ ನೀಡದೆ ಅಗ್ರಪಂಕ್ತಿಯ ಗಾಯಕಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಅವರು ತಮ್ಮ ಗಾಯನ ಕಚೇರಿಗಳಲ್ಲಿ ಠುಮ್ರಿ ಮತ್ತು ನಾಟ್ಯ ಸಂಗೀತವನ್ನು ಹಾಡಲಿಲ್ಲ.

ಶಿಷ್ಯ ಬಳಗ

ಮೋಗುಬಾಯಿಯವರು ತಮ್ಮ ಶಿಷ್ಯರೆಲ್ಲರಿಗೂ ಮಾಯಿ ಎಂದೆ ಪರಿಚಿತರಾಗಿದ್ದರು. ಅವರು ತಮ್ಮ ಸಂಗೀತ ಜ್ಞಾನವನ್ನು ತಮ್ಮ ಮಗಳಾದ ಕಿಶೋರಿ ಅಮೋನ್‍ಕರ್ ಅಲ್ಲದೇ ಇನ್ನೂ ಅನೇಕ ಶಿಷ್ಯರಿಗೆ ಹಂಚಿದ್ದಾರೆ. ಮೋಗುಬಾಯಿಯವರ ಇತರ ಪ್ರಮುಖ ಶಿಷ್ಯರೆಂದರೆ ಕೌಶಲ್ಯಾ ಮಂಜೇಶ್ವರ್, ಪದ್ಮಾ ತಳವಳಕರ್, ಕಮಲ್ ತಾಂಬೆ, ಬಬನ್ ರಾವ್ ಹಲ್ದನಕರ್, ಸುಹಾಸಿನಿ ಮೂಲ್ಗಾಂವಕರ್ ಮತ್ತು ಅರುಣ್ ದ್ರಾವಿಡ್.

ಪ್ರಶಸ್ತಿ ಮತ್ತು ಬಿರುದುಗಳು

  • ಗಾನ ತಪಸ್ವಿನಿ ಬಿರುದು
  • ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ - ೧೯೬೮
  • ಪದ್ಮಭೂಷಣ - ೧೯೭೪

ಪ್ರತಿವರ್ಷ ಗೋವಾ ರಾಜ್ಯದ ಮಡಗಾಂವ್ ನಗರದಲ್ಲಿ ಸ್ವರಮಂಚ್ ಸಂಸ್ಥೆಯು ಗಾನತಪಸ್ವಿನಿ ಮೋಗುಬಾಯಿ ಕುರ್ಡೀಕರ್ ಸ್ಮೃತಿ ಸಂಗೀತ ಸಮ್ಮೇಳನವನ್ನು ನಡೆಸುತ್ತದೆ.


Tags:

ಅಲ್ಲಾದಿಯಾ ಖಾನ್

🔥 Trending searches on Wiki ಕನ್ನಡ:

ಕೀರ್ತನೆಶೂದ್ರ ತಪಸ್ವಿಇಂದಿರಾ ಗಾಂಧಿಚೌರಿ ಚೌರಾ ಘಟನೆಮೈಸೂರುವರ್ಗೀಯ ವ್ಯಂಜನಎಸ್.ಎಲ್. ಭೈರಪ್ಪಪುಟ್ಟರಾಜ ಗವಾಯಿಎಚ್‌.ಐ.ವಿ.ಟೊಮೇಟೊತಲಕಾಡುರಜಪೂತಬೀದರ್ಕಲೆಶ್ರವಣಬೆಳಗೊಳಸೋನು ಗೌಡಕನ್ನಡದಲ್ಲಿ ಸಣ್ಣ ಕಥೆಗಳುಪ್ರಬಂಧಸ್ವರಹೆಣ್ಣು ಬ್ರೂಣ ಹತ್ಯೆಗಣೇಶ್ (ನಟ)ರಾಜಧಾನಿಗಳ ಪಟ್ಟಿಗಣೇಶಸೇತುವೆಕಿರುಧಾನ್ಯಗಳುದೇವರ ದಾಸಿಮಯ್ಯಹಾ.ಮಾ.ನಾಯಕಕಳಿಂಗ ಯುದ್ದ ಕ್ರಿ.ಪೂ.261ತಾಳೀಕೋಟೆಯ ಯುದ್ಧವ್ಯಾಪಾರಪು. ತಿ. ನರಸಿಂಹಾಚಾರ್ಕರ್ನಾಟಕದ ಅಣೆಕಟ್ಟುಗಳುಗಾಂಧಿ ಮತ್ತು ಅಹಿಂಸೆಒಟ್ಟೊ ವಾನ್ ಬಿಸ್ಮಾರ್ಕ್ಕಬಡ್ಡಿಕನ್ನಡದಲ್ಲಿ ಪ್ರವಾಸ ಸಾಹಿತ್ಯಗಣೇಶ ಚತುರ್ಥಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದಲ್ಲಿ ತುರ್ತು ಪರಿಸ್ಥಿತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶಬ್ದಮಣಿದರ್ಪಣಭಾರತದ ರಾಷ್ಟ್ರೀಯ ಚಿನ್ಹೆಗಳುಜೀವನಚರಿತ್ರೆಮಂಡಲ ಹಾವುಗೋಪಾಲಕೃಷ್ಣ ಅಡಿಗಗೌತಮ ಬುದ್ಧಕಂದಅಲಾವುದ್ದೀನ್ ಖಿಲ್ಜಿನಾಲ್ವಡಿ ಕೃಷ್ಣರಾಜ ಒಡೆಯರುಶಾಸಕಾಂಗಹುಲಿದಾಸ ಸಾಹಿತ್ಯಭಾರತದ ಸಂವಿಧಾನ ರಚನಾ ಸಭೆಮಂಕುತಿಮ್ಮನ ಕಗ್ಗಕಳಿಂಗ ಯುದ್ಧಕಾರ್ಖಾನೆ ವ್ಯವಸ್ಥೆಭಾರತದ ಮುಖ್ಯಮಂತ್ರಿಗಳುಸಿದ್ದಲಿಂಗಯ್ಯ (ಕವಿ)ಸಿದ್ದರಾಮಯ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಗೋಲ ಗುಮ್ಮಟಮಾನವನಲ್ಲಿ ರಕ್ತ ಪರಿಚಲನೆಕಲ್ಯಾಣ ಕರ್ನಾಟಕಧ್ವನಿಶಾಸ್ತ್ರಯಶವಂತರಾಯಗೌಡ ಪಾಟೀಲಅಸ್ಪೃಶ್ಯತೆವಿಜಯನಗರಮುಖ್ಯ ಪುಟಏಕಲವ್ಯಮಡಿವಾಳ ಮಾಚಿದೇವಖೊ ಖೋ ಆಟಮ್ಯಾಂಚೆಸ್ಟರ್ಕನ್ನಡ ಸಾಹಿತ್ಯಮೈಸೂರು ಅರಮನೆಭರತೇಶ ವೈಭವಶ್ರೀಕೃಷ್ಣದೇವರಾಯಅಕ್ಬರ್ಮೊಗಳ್ಳಿ ಗಣೇಶಆಮ್ಲಜನಕ🡆 More