ಬೇಡರ ವೇಷ

ಬೇಡರ ವೇಷ ಆಚರಣೆಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ.

ಬೇಡರ ವೇಷ

ಬೇಡರ ವೇಷ 
ಬೇಡರ ವೇಷ

ಬೇಡರ ವೇಷ ಹಾಕುವ ನಿಯಮ

ಬೇಡರ ವೇಷ ಹಾಕಿಕೊಳ್ಳುವವರಿಗೆ ತಿಂಗಳುಗಳ ಕಾಲ ಕುಣಿತದ ತಾಲೀಮು ನಡೆಯುತ್ತದೆ. ಕುಣಿತದ ದಿನ ನವಿಲು ಗರಿಬಣ್ಣ, ಗೆಜ್ಜೆ , ಮೀಸೆ, ಹತ್ತಿ, ಕೆಂಪುಬಟ್ಟೆ, ಕತ್ತಿ, ಡಾಲು, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ಬರುತ್ತಾರೆ. ನಗರದ ಬೀದಿಗಳಲ್ಲಿ ಢಣ್ ಢಣಕು ಶಬ್ಧ ಕೇಳುತ್ತದೆ. ಪ್ರೇಕ್ಷಕರ ಮಧ್ಯೆ ಕತ್ತಿಬೀಸುತ್ತಾ ವೇಷ ತೊಟ್ಟಿಕೊಂಡ ವ್ಯಕ್ತಿಯೊರ್ವ ವಿಶಿಷ್ಟವಾಗಿ ಕುಣಿಯುತ್ತಿದ್ದರೆ, ಹಿಂಬದಿಯಿಂದ ಇಬ್ಬರು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ. ತಮಟೆ ಬಡಿಯುತ್ತ, ಕುಣಿಯುತ್ತಿದ್ದ ವ್ಯಕ್ತಿಗೆ ಹುರುಪು ನೀಡುತ್ತಾನೆ. ಬೇಡರ ವೇಷಧಾರಿಯಾಗಿ ಕುಣಿಯೋದನ್ನ ನಗರದ ಜನ ರಾತ್ರಿಯಿಡೀ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಸಂಜೆಯಿಂದಲೇ ಬಣ್ಣ ಬಳಿದುಕೊಂಡು ನವಿಲು ಗರಿ ಸಿಕ್ಕಿಸಿಕೊಂಡು ಕತ್ತಿಹಿಡಿದು ರಾತ್ರಿ ೯ರ ಬಳಿಕ ಊರಿನ ಬೀದಿಗಳಲ್ಲಿ ಬೇಡರ ವೇಷ ಧಾರಿಯಾಗಿ ನಗರದಾದ್ಯಂತ ಕುಣಿಯುತ್ತಾನೆ. ತಡರಾತ್ರಿ ೧೨ ಗಂಟೆ ಮಾತ್ರವಲ್ಲ ಮುಂಜಾನೆಯ ತನಕವೂ ನಗರದ ಪ್ರಮುಖ ಬೀದಿಗಳಲ್ಲಿ ಬೇಡರ ವೇಷ ಗಮನ ಸೆಳೆಯುತ್ತದೆ. ವಿವಿಧ ಹರಕೆ ಹೊತ್ತುಕೊಂಡು ಈಡೇರಿದವರು ಹಗಲು ಹುಲಿ ವೇಷ ಹಾಕುತ್ತಾರೆ.

ಬೇಡರ ವೇಷದ ತಾಲೀಮು

ಸಿರ್ಸಿ, ಸುತ್ತಲಿನ ಕೆಲ ಕಡೆಗಳಲ್ಲಿ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಸಿರ್ಸಿ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ. ೨೦-೨೨ ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗುತ್ತೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸರ್ವೇ ಸಾಮಾನ್ಯವಾಗಿರುತ್ತದೆ. ಬೇಡರ ವೇಷ ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ ೧೫-೨೦ ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡ್ತಾರೆ.

ರಾಜ್ಯದಲ್ಲಿ ಮತ್ತೆಲ್ಲೂ ಇಲ್ಲ ಇಂಥ ಆಚರಣೆ

ಈ ವಿಶಿಷ್ಟ ಆಚರಣೆ ನಡೆಸೋದು ಇಡೀ ರಾಜ್ಯದಲ್ಲಿ ಸಿರ್ಸಿಯಲ್ಲಿ ಮಾತ್ರ ಅನ್ನೋದು ವಿಶೇಷ. ಸಿರ್ಸಿ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ.

ಉಲ್ಲೇಖ

  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.

Tags:

ಬೇಡರ ವೇಷ ಬೇಡರ ವೇಷ ಹಾಕುವ ನಿಯಮಬೇಡರ ವೇಷ ದ ತಾಲೀಮುಬೇಡರ ವೇಷ ರಾಜ್ಯದಲ್ಲಿ ಮತ್ತೆಲ್ಲೂ ಇಲ್ಲ ಇಂಥ ಆಚರಣೆಬೇಡರ ವೇಷ ಉಲ್ಲೇಖಬೇಡರ ವೇಷಆಚರಣೆಇತಿಹಾಸ

🔥 Trending searches on Wiki ಕನ್ನಡ:

ಜಾತ್ಯತೀತತೆಮಹಾಭಾರತಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕೃತಕ ಬುದ್ಧಿಮತ್ತೆಗುರು (ಗ್ರಹ)ಕೊಡಗುಉಪೇಂದ್ರ (ಚಲನಚಿತ್ರ)ನಾಲ್ವಡಿ ಕೃಷ್ಣರಾಜ ಒಡೆಯರುಚದುರಂಗ (ಆಟ)ಮಲಬದ್ಧತೆಗಾದೆಕಂಸಾಳೆಅಂಡವಾಯುಬಂಜಾರನಿಯತಕಾಲಿಕಪಾರ್ವತಿಜೀವವೈವಿಧ್ಯರಾಜಕುಮಾರ (ಚಲನಚಿತ್ರ)ಒಂದನೆಯ ಮಹಾಯುದ್ಧಕನ್ನಡ ಚಳುವಳಿಗಳುರಂಗಭೂಮಿಸಂಜಯ್ ಚೌಹಾಣ್ (ಸೈನಿಕ)ಕನ್ನಡ ಸಾಹಿತ್ಯ ಪರಿಷತ್ತುಗುರುರಾಜ ಕರಜಗಿವ್ಯಾಪಾರವಿಭಕ್ತಿ ಪ್ರತ್ಯಯಗಳುಪ್ರಾಥಮಿಕ ಶಾಲೆಕರ್ನಾಟಕದ ಮುಖ್ಯಮಂತ್ರಿಗಳುಭಾರತೀಯ ಜನತಾ ಪಕ್ಷಸ್ಯಾಮ್ ಪಿತ್ರೋಡಾಅಕ್ಬರ್ಕರ್ನಾಟಕ ವಿಧಾನ ಪರಿಷತ್ನೀರುಕರ್ನಾಟಕದ ಸಂಸ್ಕೃತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮುಹಮ್ಮದ್ಜೀನುತತ್ಪುರುಷ ಸಮಾಸನಾಗಸ್ವರಭಾರತೀಯ ಸ್ಟೇಟ್ ಬ್ಯಾಂಕ್ನಾಟಕಆದಿಚುಂಚನಗಿರಿಭಾರತದ ಮಾನವ ಹಕ್ಕುಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಲ್ಯಾಣಿಮಜ್ಜಿಗೆಇಂಡಿಯನ್ ಪ್ರೀಮಿಯರ್ ಲೀಗ್ದೇವರ ದಾಸಿಮಯ್ಯಹಲ್ಮಿಡಿಭಾರತದ ರಾಷ್ಟ್ರಗೀತೆಬಾರ್ಲಿಸಾರ್ವಜನಿಕ ಆಡಳಿತಕರ್ನಾಟಕದ ತಾಲೂಕುಗಳುಸಮಾಸಮಾನಸಿಕ ಆರೋಗ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮನಿರ್ವಹಣೆ ಪರಿಚಯಸ್ಕೌಟ್ಸ್ ಮತ್ತು ಗೈಡ್ಸ್ವಿಧಾನಸೌಧಮಾನವ ಅಸ್ಥಿಪಂಜರಸ್ತ್ರೀಕರ್ಣಭಾರತದ ರಾಜಕೀಯ ಪಕ್ಷಗಳುವಿಚ್ಛೇದನತಾಳೀಕೋಟೆಯ ಯುದ್ಧಜವಹರ್ ನವೋದಯ ವಿದ್ಯಾಲಯದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಹಣಕಾಸುಛಂದಸ್ಸುಸೂಫಿಪಂಥಎ.ಪಿ.ಜೆ.ಅಬ್ದುಲ್ ಕಲಾಂಅಳತೆ, ತೂಕ, ಎಣಿಕೆಅಮೇರಿಕ ಸಂಯುಕ್ತ ಸಂಸ್ಥಾನವಿಕಿಪೀಡಿಯಮಹೇಂದ್ರ ಸಿಂಗ್ ಧೋನಿರಾಮ್ ಮೋಹನ್ ರಾಯ್ವಿಜಯನಗರ ಸಾಮ್ರಾಜ್ಯಭಾರತೀಯ ರೈಲ್ವೆಆದಿವಾಸಿಗಳು🡆 More