ಪೃಥ್ವಿ ಅಂಬಾರ್: ಭಾರತೀಯ ನಟ

ಪೃಥ್ವಿ ಅಂಬಾರ್ ಇವರು ಭಾರತೀಯ ನಟ.

ಇವರು ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ, ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಇವರು ೨೦೧೪ ರಲ್ಲಿ ಬಿಡುಗಡೆಯಾದ ಬರ್ಕೆ ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ಪಿಲಿಬೈಲ್ ಯಮುನಕ್ಕ, ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನೆಮಾ "ದಿಯಾ"ದಲ್ಲಿ ಮುಖ್ಯ ಪಾತ್ರದಲ್ಲಿ ಹಾಗೂ ಕನ್ನಡ ಧಾರವಾಹಿ "ಜೊತೆ ಜೊತೆಯಲಿ"ಯಲ್ಲಿ 'ನೀಲ್' ಪಾತ್ರದಲ್ಲಿ ಇವರು ನಟಿಸಿದ್ದಾರೆ.

ಪೃಥ್ವಿ ಅಂಬಾರ್
ಪೃಥ್ವಿ ಅಂಬಾರ್: ಜನನ,ಜೀವನ ಮತ್ತು ಶಿಕ್ಷಣ, ವೃತ್ತಿಜೀವನ, ವೈಯಕ್ತಿಕ ಜೀವನ
ಪೃಥ್ವಿ ಅಂಬಾರ್
Born೧೭‌ ಆಗಸ್ಟ್‌ ೧೯೮೮
Nationalityಭಾರತೀಯ
Other namesನಾಗರಾಜ್ ಅಂಬಾರ್
Educationದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ , ಕಾಪು
ದಂಡತೀರ್ಥ ಪದವಿಪೂರ್ವ ಕಾಲೇಜು , ಕಾಪು
ಪೂರ್ಣಪ್ರಜ್ಞ ಕಾಲೇಜು , ಉಡುಪಿ
ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು.
Occupation(s)ಆರ್.ಜೆ , ವಿ.ಜೆ , ಮಾಡೆಲ್ ,ನೃತ್ಯಗಾರ, ನಟ.
Spouseಪಾರುಲ್ ಶುಕ್ಲ
Parent(s)ವೀರಪ್ಪ ಅಂಬಾರ್ (ತಂದೆ), ಸುಜಾತ ಅಂಬಾರ್ (ತಾಯಿ)

ಇವರು ಪಿಲಿಬೈಲ್ ಯಮುನಕ್ಕ ,ಪಮ್ಮಣ್ಣೆ ದಿ ಗ್ರೇಟ್ , ಗೋಲ್ ಮಾಲ್ , 2 ಎಕ್ರೆ , ಇಂಗ್ಲಿಷ್ , ಆಟಿಡೊಂಜಿ ದಿನ , ಎನ್ನ , ಕುದುಕನ ಮದಿಮೆ ಎಂಬ ತುಳು ಹಾಗೂ ರಾಜರು , ಡಿ.ಕೆ ಬೋಸ್ , ದಿಯಾ ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ.

ಜನನ,ಜೀವನ ಮತ್ತು ಶಿಕ್ಷಣ

ಪೃಥ್ವಿ ಇವರು ೧೭ ನೇ ಆಗಸ್ಟ್ ೧೯೮೮ ರಂದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರು ಉಡುಪಿಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರಿದರು.

ವೃತ್ತಿಜೀವನ

ಇವರು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಇವರು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು. ಇವರು ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಿಸಿದರು.

೨೦೧೬ ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ ಪಿಲಿಬೈಲ್ ಯಮುನಕ್ಕ ದಲ್ಲಿ ಸೋನಲ್ ಮೊಂಟಿರೊ ಅವರೊಂದಿಗೆ ನಟಿಸಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನ

ಪೃಥ್ವಿ ಅಂಬಾರ್ ತಮ್ಮ ಗೆಳತಿ ಪಾರುಲ್ ಶುಕ್ಲಾ ಅವರನ್ನು ೨೦೧೯ ರ ನವೆಂಬರ್ ೩ ರಂದು ಮಂಗಳೂರಿನಲ್ಲಿ ವಿವಾಹವಾದರು.

ಧಾರಾವಾಹಿ/ಚಿತ್ರಗಳ ಪಟ್ಟಿ

ಅಭಿನಯಿಸಿದ ಧಾರಾವಾಹಿಗಳು

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೦೮ ರಾಧಾ ಕಲ್ಯಾಣ ಶೀಲಂ
೨೦೧೫ ಲವ್ ಲವಿಕೆ ಮನು
೨೦೧೪ ಸಾಗರ ಸಂಗಮ ಸಂಜು
೨೦೨೦ ಜೊತೆ ಜೊತೆಯಲಿ ನೀಲ್

ಅಭಿನಯಿಸಿದ ತುಳು ಚಲನಚಿತ್ರಗಳು

ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೪ ಬರ್ಕೆ
೨೦೧೬ ಪಿಲಿಬೈಲ್ ಯಮುನಕ್ಕ
೨೦೧೮ ಪಮ್ಮಣ್ಣೆ ದಿ ಗ್ರೇಟ್
೨೦೧೯ ಗೋಲ್ಮಾಲ್
ಆಟಿಡೊಂಜಿ ದಿನ
ಇಂಗ್ಲಿಷ್
೨೦೨೦ ಕುದ್ಕನ‌ ಮದ್ಮೆ
ಎನ್ನ
ರಡ್ಡ್ ಎಕ್ರೆ
VIP'S ಲಾಸ್ಟ್ ಬೆಂಚ್

ಅಭಿನಯಿಸಿದ ಕನ್ನಡ ಚಲನಚಿತ್ರಗಳು

Key
ಪೃಥ್ವಿ ಅಂಬಾರ್: ಜನನ,ಜೀವನ ಮತ್ತು ಶಿಕ್ಷಣ, ವೃತ್ತಿಜೀವನ, ವೈಯಕ್ತಿಕ ಜೀವನ  Denotes films that have not yet been released
ವರ್ಷ ಶೀರ್ಷಿಕೆ ಪಾತ್ರ Notes ಉಲ್ಲೇಖ
೨೦೧೬ ಕರ್ವ Unknown
2017 ರಾಜರು Unknown
2019 DK Boss Unknown
೨೦೨೦ Dia ಆದಿ Debut as Lead
೨೦೨೧ Life Is Beautiful ಪೃಥ್ವಿ ಅಂಬಾರ್: ಜನನ,ಜೀವನ ಮತ್ತು ಶಿಕ್ಷಣ, ವೃತ್ತಿಜೀವನ, ವೈಯಕ್ತಿಕ ಜೀವನ  TBA Filming
Sugarlessಪೃಥ್ವಿ ಅಂಬಾರ್: ಜನನ,ಜೀವನ ಮತ್ತು ಶಿಕ್ಷಣ, ವೃತ್ತಿಜೀವನ, ವೈಯಕ್ತಿಕ ಜೀವನ  TBA Filming
For Regnಪೃಥ್ವಿ ಅಂಬಾರ್: ಜನನ,ಜೀವನ ಮತ್ತು ಶಿಕ್ಷಣ, ವೃತ್ತಿಜೀವನ, ವೈಯಕ್ತಿಕ ಜೀವನ  TBA Filming

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ ಉಲ್ಲೇಖ
ದಿಯಾ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅತ್ಯುತ್ತಮ ನಟ ಪ್ರಶಸ್ತಿ (ಪುರುಷ) ನಾಮನಿರ್ದೇಶನ

ಉಲ್ಲೇಖಗಳು

Tags:

ಪೃಥ್ವಿ ಅಂಬಾರ್ ಜನನ,ಜೀವನ ಮತ್ತು ಶಿಕ್ಷಣಪೃಥ್ವಿ ಅಂಬಾರ್ ವೃತ್ತಿಜೀವನಪೃಥ್ವಿ ಅಂಬಾರ್ ವೈಯಕ್ತಿಕ ಜೀವನಪೃಥ್ವಿ ಅಂಬಾರ್ ಧಾರಾವಾಹಿಚಿತ್ರಗಳ ಪಟ್ಟಿಪೃಥ್ವಿ ಅಂಬಾರ್ ನಾಮನಿರ್ದೇಶನ ಮತ್ತು ಪ್ರಶಸ್ತಿಗಳುಪೃಥ್ವಿ ಅಂಬಾರ್ ಉಲ್ಲೇಖಗಳುಪೃಥ್ವಿ ಅಂಬಾರ್ಕನ್ನಡತುಳುಭಾರತೀಯ

🔥 Trending searches on Wiki ಕನ್ನಡ:

ನಾಡ ಗೀತೆಪತ್ರಿಕೋದ್ಯಮಗಾಂಧಾರಪರಮಾಣುಕಾನೂನುಚಾಲುಕ್ಯಕರ್ನಾಟಕದ ಜಿಲ್ಲೆಗಳುಸಿದ್ದಲಿಂಗಯ್ಯ (ಕವಿ)ಲಿಂಗ ವಿವಕ್ಷೆಮಣ್ಣುವಿಭಕ್ತಿ ಪ್ರತ್ಯಯಗಳುಸಂಧಿಎಂ. ಎಂ. ಕಲಬುರ್ಗಿಭಾರತೀಯ ಸಶಸ್ತ್ರ ಪಡೆಸ್ವಚ್ಛ ಭಾರತ ಅಭಿಯಾನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮೋಕ್ಷಗುಂಡಂ ವಿಶ್ವೇಶ್ವರಯ್ಯಡಿ.ಎಸ್.ಕರ್ಕಿದಲಿತಸಾಮ್ರಾಟ್ ಅಶೋಕಬರಗೂರು ರಾಮಚಂದ್ರಪ್ಪಭಾರತೀಯ ವಿಜ್ಞಾನ ಸಂಸ್ಥೆಭೌಗೋಳಿಕ ಲಕ್ಷಣಗಳುರೈತವಾರಿ ಪದ್ಧತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭರತೇಶ ವೈಭವಸರ್ ಐಸಾಕ್ ನ್ಯೂಟನ್ಮಂಜಮ್ಮ ಜೋಗತಿಚಿಪ್ಕೊ ಚಳುವಳಿಯೇಸು ಕ್ರಿಸ್ತಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವವಿಷ್ಣುಶರ್ಮಖಾಸಗೀಕರಣಪ್ರವಾಹವೆಂಕಟೇಶ್ವರ ದೇವಸ್ಥಾನಚಾಮುಂಡರಾಯಕರ್ನಾಟಕದ ಇತಿಹಾಸವ್ಯಾಯಾಮಆರ್ಯ ಸಮಾಜಮಳೆಶಿಕ್ಷಣಪಂಜೆ ಮಂಗೇಶರಾಯ್ಮಾಧ್ಯಮರಸ(ಕಾವ್ಯಮೀಮಾಂಸೆ)ಶಿರ್ಡಿ ಸಾಯಿ ಬಾಬಾಕಣ್ಣುಅಕ್ಬರ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಎರಡನೇ ಮಹಾಯುದ್ಧಭಾರತ ಬಿಟ್ಟು ತೊಲಗಿ ಚಳುವಳಿವಿಧಾನ ಪರಿಷತ್ತುಕುಮಾರವ್ಯಾಸಗೋಪಾಲಕೃಷ್ಣ ಅಡಿಗಕನ್ನಡ ಅಕ್ಷರಮಾಲೆಮಂಡಲ ಹಾವುಕುರಿರಜಪೂತಜವಾಹರ‌ಲಾಲ್ ನೆಹರುಹಿಂದಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಜೋಡು ನುಡಿಗಟ್ಟುಕೈಗಾರಿಕಾ ನೀತಿಯಶವಂತರಾಯಗೌಡ ಪಾಟೀಲಭಾರತದ ಮಾನವ ಹಕ್ಕುಗಳುವಿಜಯನಗರಅಂಗವಿಕಲತೆಮಾನವ ಸಂಪನ್ಮೂಲ ನಿರ್ವಹಣೆಧ್ವನಿಶಾಸ್ತ್ರಕನ್ನಡ ವ್ಯಾಕರಣವರ್ಗೀಯ ವ್ಯಂಜನರಾಮಾಯಣಭಾರತದ ಪ್ರಧಾನ ಮಂತ್ರಿದಶರಥಏಡ್ಸ್ ರೋಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ🡆 More