ಢವಳಗಿ

ಢವಳಗಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆ ಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ.

ಢವಳಗಿ ಗ್ರಾಮವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೬೦ ಕಿ. ಮಿ. ದೂರ ಇದೆ.

ಢವಳಗಿ
ಢವಳಗಿ
village
Population
 (೨೦೧೨)
 • Total೧೫೦೦೦

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 3233 ಇದೆ. ಅದರಲ್ಲಿ 1651 ಪುರುಷರು ಮತ್ತು 1582 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಢವಳಗಿ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಢವಳಗಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಢವಳಗಿ
  • ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಢವಳಗಿ
  • ಎಮ್.ಬಿ.ಪಿ. ಪ್ರೌಢ ಶಾಲೆ, ಢವಳಗಿ
  • ಎಸ್.ವಿ.ವಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ಢವಳಗಿ
  • ಎನ್.ಎಸ್. ಢವಳಗಿ ಪದವಿ ಪೂರ್ವ ಮಹಾವಿದ್ಯಾಲಯ, ಢವಳಗಿ
  • ಎಸ್.ವಿ.ವಿ. ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಢವಳಗಿ

ಆರೋಗ್ಯ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ವಿದ್ಯುತ್ ಪರಿವರ್ತನಾ ಕೇಂದ್ರ

೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಮಳೆ ಮಾಪನ ಕೇಂದ್ರ

  • ಮಳೆ ಮಾಪನ ಕೇಂದ್ರ, ಢವಳಗಿ

ಬ್ಯಾಂಕ್

  • ಸಿಂಡಿಕೇಟ್ ಬ್ಯಾಂಕ್, ಢವಳಗಿ

ಗ್ರಾಮ ಪಂಚಾಯತಿ

  • ಗ್ರಾಮ ಪಂಚಾಯತಿ, ಢವಳಗಿ

ದೂರವಾಣಿ ವಿನಿಮಯ ಕೇಂದ್ರ

  • ದೂರವಾಣಿ ವಿನಿಮಯ ಕೇಂದ್ರ, ಢವಳಗಿ

ಅಂಚೆ ಕಚೇರಿ

  • ಅಂಚೆ ಕಚೇರಿ, ಢವಳಗಿ
  • ಢವಳಗಿ - 586116 (ಗುಂಡಕರ್ಜಗಿ, ಹಳ್ಳೂರ, ಲಿಂಗದಹಳ್ಳಿ, ಮಡಿಕೇಶ್ವರ, ಪಡೇಕನೂರ, ರೂಡಗಿ, ವನಹಳ್ಳಿ, ಬಳವಾಟ, ಬಸರಕೋಡ).

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಢವಳಗಿ

ಹಾಲು ಉತ್ಪಾದಕ ಸಹಕಾರಿ ಸಂಘ

  • ಹಾಲು ಉತ್ಪಾದಕ ಸಹಕಾರಿ ಸಂಘ, ಢವಳಗಿ

ಪ್ರಾಥಮಿಕ ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಢವಳಗಿ

ರೈತ ಸಂಪರ್ಕ ಕೇಂದ್ರ

  • ರೈತ ಸಂಪರ್ಕ ಕೇಂದ್ರ, ಢವಳಗಿ

ಕಂದಾಯ ಕಚೇರಿ

  • ಕಂದಾಯ ಕಚೇರಿ, ಢವಳಗಿ

ನೆಮ್ಮದಿ (ಹೋಬಳಿ) ಕೇಂದ್ರ

  • ನೆಮ್ಮದಿ ಕೇಂದ್ರ, ಢವಳಗಿ

ಪಶು ಚಿಕಿತ್ಸಾಲಯ

  • ಪಶು ಚಿಕಿತ್ಸಾಲಯ, ಢವಳಗಿ

ರೈತ ಸಂಪರ್ಕ ಕೇಂದ್ರ

  • ರೈತ ಸಂಪರ್ಕ ಕೇಂದ್ರ, ಢವಳಗಿ

ವಿದ್ಯುತ್ ಪರಿವರ್ತನಾ ಕೇಂದ್ರ

  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಢವಳಗಿ

ರಾಜ್ಯ ಹೆದ್ದಾರಿ

  • ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಉಚಿತ ಪ್ರಸಾದನಿಲಯ

  • ಮೆಟ್ರಿಕ್ ಪುರ್ವ ಬಾಲಕರ ಉಚಿತ ಪ್ರಸಾದನಿಲಯ, ಢವಳಗಿ

ಬಿಜಾಪುರ

ಕರ್ನಾಟಕ

ಢವಳಗಿ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ

Tags:

ಢವಳಗಿ ಭೌಗೋಳಿಕಢವಳಗಿ ಹವಾಮಾನಢವಳಗಿ ಜನಸಂಖ್ಯೆಢವಳಗಿ ಸಾಂಸ್ಕೃತಿಕಢವಳಗಿ ಕಲೆ ಮತ್ತು ಸಂಸ್ಕೃತಿಢವಳಗಿ ಧರ್ಮಢವಳಗಿ ಭಾಷೆಢವಳಗಿ ದೇವಾಲಯಢವಳಗಿ ಮಸೀದಿಢವಳಗಿ ನೀರಾವರಿಢವಳಗಿ ಕಾಲುವೆಢವಳಗಿ ಕೃಷಿ ಮತ್ತು ತೋಟಗಾರಿಕೆಢವಳಗಿ ಆರ್ಥಿಕತೆಢವಳಗಿ ಉದ್ಯೋಗಢವಳಗಿ ಬೆಳೆಢವಳಗಿ ಸಸ್ಯಢವಳಗಿ ಪ್ರಾಣಿಢವಳಗಿ ಹಬ್ಬಢವಳಗಿ ಶಿಕ್ಷಣಢವಳಗಿ ಆರೋಗ್ಯಢವಳಗಿ ವಿದ್ಯುತ್ ಪರಿವರ್ತನಾ ಕೇಂದ್ರಢವಳಗಿ ಸಾಕ್ಷರತೆಢವಳಗಿ ರಾಜಕೀಯಢವಳಗಿ ಮಳೆ ಮಾಪನ ಕೇಂದ್ರಢವಳಗಿ ಬ್ಯಾಂಕ್ಢವಳಗಿ ಗ್ರಾಮ ಪಂಚಾಯತಿಢವಳಗಿ ದೂರವಾಣಿ ವಿನಿಮಯ ಕೇಂದ್ರಢವಳಗಿ ಅಂಚೆ ಕಚೇರಿಢವಳಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಢವಳಗಿ ಹಾಲು ಉತ್ಪಾದಕ ಸಹಕಾರಿ ಸಂಘಢವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಢವಳಗಿ ರೈತ ಸಂಪರ್ಕ ಕೇಂದ್ರಢವಳಗಿ ಕಂದಾಯ ಕಚೇರಿಢವಳಗಿ ನೆಮ್ಮದಿ (ಹೋಬಳಿ) ಕೇಂದ್ರಢವಳಗಿ ಪಶು ಚಿಕಿತ್ಸಾಲಯಢವಳಗಿ ರೈತ ಸಂಪರ್ಕ ಕೇಂದ್ರಢವಳಗಿ ವಿದ್ಯುತ್ ಪರಿವರ್ತನಾ ಕೇಂದ್ರಢವಳಗಿ ರಾಜ್ಯ ಹೆದ್ದಾರಿಢವಳಗಿ ಉಚಿತ ಪ್ರಸಾದನಿಲಯಢವಳಗಿಮುದ್ದೇಬಿಹಾಳವಿಜಯಪುರ ಜಿಲ್ಲೆ

🔥 Trending searches on Wiki ಕನ್ನಡ:

ಮಾಸತೆನಾಲಿ ರಾಮ (ಟಿವಿ ಸರಣಿ)ಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಉಪ್ಪಿನ ಸತ್ಯಾಗ್ರಹಭಾರತದ ರಾಷ್ಟ್ರಪತಿಗಳ ಪಟ್ಟಿರಾಷ್ಟ್ರಕೂಟನ್ಯೂಟನ್‍ನ ಚಲನೆಯ ನಿಯಮಗಳುಮಡಿವಾಳ ಮಾಚಿದೇವಉಪನಯನಕ್ರೈಸ್ತ ಧರ್ಮಉತ್ತರ ಕರ್ನಾಟಕಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜಾಪತ್ರೆಜೋಡು ನುಡಿಗಟ್ಟುಮಂಟೇಸ್ವಾಮಿಬೇಲೂರುಭಾರತದ ಸಂವಿಧಾನಶಾತವಾಹನರುಕಿತ್ತೂರು ಚೆನ್ನಮ್ಮಈಸೂರುಕರ್ನಾಟಕದ ಹಬ್ಬಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗೀತಾ (ನಟಿ)ರಾಷ್ಟ್ರೀಯ ಶಿಕ್ಷಣ ನೀತಿಚಪ್ಪಾಳೆವರ್ಗೀಯ ವ್ಯಂಜನರಾಜಕುಮಾರ (ಚಲನಚಿತ್ರ)ಅಮ್ಮಕೈಗಾರಿಕೆಗಳುಆದಿವಾಸಿಗಳುತೆಂಗಿನಕಾಯಿ ಮರಕರ್ನಾಟಕದಲ್ಲಿ ಪಂಚಾಯತ್ ರಾಜ್ದ.ರಾ.ಬೇಂದ್ರೆಅಶೋಕನ ಶಾಸನಗಳುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕಾಮಸೂತ್ರಜಾತಿಪು. ತಿ. ನರಸಿಂಹಾಚಾರ್ವಿದ್ಯಾರಣ್ಯಪಿ.ಲಂಕೇಶ್ಋಗ್ವೇದಎಂ. ಕೆ. ಇಂದಿರಶಬ್ದ ಮಾಲಿನ್ಯಕೆ. ಎಸ್. ನರಸಿಂಹಸ್ವಾಮಿಜರಾಸಂಧಅತ್ತಿಮಬ್ಬೆಎರಡನೇ ಮಹಾಯುದ್ಧಮಾದಕ ವ್ಯಸನನಿಯತಕಾಲಿಕತ್ರಿಪದಿಪ್ರಬಂಧಭಾರತೀಯ ಜನತಾ ಪಕ್ಷಛಂದಸ್ಸುಭಾರತದ ಚುನಾವಣಾ ಆಯೋಗಯಮಮೂಕಜ್ಜಿಯ ಕನಸುಗಳು (ಕಾದಂಬರಿ)ಆದಿ ಶಂಕರಸ್ವಚ್ಛ ಭಾರತ ಅಭಿಯಾನಚದುರಂಗ (ಆಟ)ಕಾದಂಬರಿವಲ್ಲಭ್‌ಭಾಯಿ ಪಟೇಲ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಹಾವಿನ ಹೆಡೆಕ್ರಿಯಾಪದಕರ್ನಾಟಕ ಲೋಕಸೇವಾ ಆಯೋಗವೀರೇಂದ್ರ ಪಾಟೀಲ್ಅನುನಾಸಿಕ ಸಂಧಿಪ್ರಬಂಧ ರಚನೆಸಾಹಿತ್ಯಪ್ರಾಥಮಿಕ ಶಿಕ್ಷಣತತ್ತ್ವಶಾಸ್ತ್ರಮುಖ್ಯ ಪುಟಸೂರ್ಯವ್ಯೂಹದ ಗ್ರಹಗಳುಗಣೇಶಶ್ರೀಧರ ಸ್ವಾಮಿಗಳುಕೃಷ್ಣರಾಜನಗರಮುದ್ದಣ🡆 More