ಢವಲಾರ

ಢವಲಾರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.

ಢವಲಾರ
ಢವಲಾರ
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 1500 ಇದೆ. ಅದರಲ್ಲಿ 800 ಪುರುಷರು ಮತ್ತು 700 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.

ಕಲೆ

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.

ಸಂಸ್ಕೃತಿ

ಢವಲಾರ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ)

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಕೃಷಿ

ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ಧರ್ಮಗಳು

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಮಾಳಿಂಗರಾಯ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಢವಲಾರ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ


Tags:

ಢವಲಾರ ಭೌಗೋಳಿಕಢವಲಾರ ಹವಾಮಾನಢವಲಾರ ಜನಸಂಖ್ಯೆಢವಲಾರ ಕಲೆಢವಲಾರ ಸಂಸ್ಕೃತಿಢವಲಾರ ಆಹಾರ (ಖಾದ್ಯ)ಢವಲಾರ ಕೃಷಿಢವಲಾರ ಕಾಲುವೆಢವಲಾರ ಉದ್ಯೋಗಢವಲಾರ ಬೆಳೆಗಳುಢವಲಾರ ಸಸ್ಯ ವರ್ಗಢವಲಾರ ಪ್ರಾಣಿ ವರ್ಗಢವಲಾರ ಆರ್ಥಿಕತೆಢವಲಾರ ಧರ್ಮಗಳುಢವಲಾರ ಭಾಷೆಗಳುಢವಲಾರ ದೇವಾಲಯಢವಲಾರ ಮಸೀದಿಢವಲಾರ ಹಬ್ಬಗಳುಢವಲಾರ ಶಿಕ್ಷಣಢವಲಾರ ಸಾಕ್ಷರತೆಢವಲಾರ ರಾಜಕೀಯಢವಲಾರಕರ್ನಾಟಕವಿಜಯಪುರಸಿಂದಗಿ

🔥 Trending searches on Wiki ಕನ್ನಡ:

ಶಾಂತಲಾ ದೇವಿಹಂಪೆಆಹಾರ ಸರಪಳಿಭೂಕಂಪಮಲ್ಲಿಕಾರ್ಜುನ್ ಖರ್ಗೆಜಯಪ್ರಕಾಶ ನಾರಾಯಣಕನ್ನಡದಲ್ಲಿ ಮಹಿಳಾ ಸಾಹಿತ್ಯಶೃಂಗೇರಿರಾಸಾಯನಿಕ ಗೊಬ್ಬರತೀ. ನಂ. ಶ್ರೀಕಂಠಯ್ಯಉಪ್ಪಿನ ಸತ್ಯಾಗ್ರಹಸಂವಹನಸೆಲರಿಒಗಟುಭಾರತದಲ್ಲಿನ ಜಾತಿ ಪದ್ದತಿಎಲೆಕ್ಟ್ರಾನಿಕ್ ಮತದಾನಮೂಕಜ್ಜಿಯ ಕನಸುಗಳು (ಕಾದಂಬರಿ)ಗುಣ ಸಂಧಿಅಮ್ಮಆಂಧ್ರ ಪ್ರದೇಶವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಬೇವುಹೆಣ್ಣು ಬ್ರೂಣ ಹತ್ಯೆಜೈನ ಧರ್ಮಮಂಕುತಿಮ್ಮನ ಕಗ್ಗಜಿ.ಎಸ್.ಶಿವರುದ್ರಪ್ಪಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ಸಂಸತ್ತುಕಾವೇರಿ ನದಿರಜಪೂತಭಾರತದ ಭೌಗೋಳಿಕತೆಮಳೆಗಾಲಪಿತ್ತಕೋಶತತ್ಸಮ-ತದ್ಭವಕಾಂತಾರ (ಚಲನಚಿತ್ರ)ಸಾಲುಮರದ ತಿಮ್ಮಕ್ಕಕರ್ನಾಟಕದ ತಾಲೂಕುಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನಾಯಕ (ಜಾತಿ) ವಾಲ್ಮೀಕಿಮಾನವ ಹಕ್ಕುಗಳುಇಮ್ಮಡಿ ಪುಲಕೇಶಿಜನಪದ ಕಲೆಗಳುಬೌದ್ಧ ಧರ್ಮಕರ್ನಾಟಕದ ಮುಖ್ಯಮಂತ್ರಿಗಳುಭಾರತದಲ್ಲಿ ತುರ್ತು ಪರಿಸ್ಥಿತಿಮೂಲಧಾತುಭಾರತಿ (ನಟಿ)ದಾವಣಗೆರೆಮಾನವನಲ್ಲಿ ನಿರ್ನಾಳ ಗ್ರಂಥಿಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕಲಬುರಗಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀಧರ ಸ್ವಾಮಿಗಳುಶಬರಿ೧೬೦೮ಜೇನು ಹುಳುತುಮಕೂರುಪ್ರದೀಪ್ ಈಶ್ವರ್ದ್ರಾವಿಡ ಭಾಷೆಗಳುಶ್ರೀ ರಾಮಾಯಣ ದರ್ಶನಂಸಂಗ್ಯಾ ಬಾಳ್ಯಬಾಬರ್ಕನ್ನಡ ಚಂಪು ಸಾಹಿತ್ಯಬಾಬು ಜಗಜೀವನ ರಾಮ್ವಿಶ್ವವಿದ್ಯಾಲಯ ಧನಸಹಾಯ ಆಯೋಗಮಾಸಪ್ರವಾಹಕೈಗಾರಿಕೆಗಳುಸಣ್ಣ ಕೊಕ್ಕರೆಯಕೃತ್ತುವಿರಾಮ ಚಿಹ್ನೆನೀನಾದೆ ನಾ (ಕನ್ನಡ ಧಾರಾವಾಹಿ)ಮೆಂತೆಅಭಿಮನ್ಯುಬುಡಕಟ್ಟುಅಷ್ಟ ಮಠಗಳು1935ರ ಭಾರತ ಸರ್ಕಾರ ಕಾಯಿದೆಉಪೇಂದ್ರ (ಚಲನಚಿತ್ರ)ಹೃದಯಾಘಾತ🡆 More