ಡಿಪ್ಟೆರೋಕಾರ್ಪ್ಸ್

ಡಿಪ್ಟೆರೋಕಾರ್ಪಸ್ ಎಂಬುದು ಹೂಬಿಡುವ ಸಸ್ಯಗಳ ಒಂದು ವರ್ಗವಾಗಿದೆ.

ಡಿಪ್ಟೆರೋಕಾರ್ಪ್ಸ್
ಡಿಪ್ಟೆರೋಕಾರ್ಪ್ಸ್
ಡಿಪ್ಟೆರೋಕಾರ್ಪ್ಸ್
Scientific classification

ಇದು ಡಿಪ್ಟೆರೋಕಾರ್ಪಾಸಿಯ ಕುಟುಂಬದ ಪ್ರಭೇದವಾಗಿದೆ. ಡಿಪ್ಟೆರೋಕಾರ್ಪ್ಸ್ನಲ್ಲಿ ಸುಮಾರು ೭೦ ಜಾತಿಗಳಿವೆ.

ಇದರ ಹೆಸರು ಗ್ರೀಕ್ ಭಾಷೆಯಿಂದ ಬಂದಿದೆ ಮತ್ತು "ಎರಡು ರೆಕ್ಕೆಯ ಹಣ್ಣುಗಳು" ಎಂದರ್ಥ.

ಡಿಪ್ಟರೊಕಾರ್ಪೇಸೀ - ದ್ವಿದಳ ಸಸ್ಯಗಳ ಗುಂಪಿಗೆ ಸೇರಿದ ಒಂದು ಕುಟುಂಬ. ಸಾಲ್ (ಬಿಳೇಭೋಗಿ-ಶೋರಿಯ), ಜಾಲಾರಿ, ಕಿರಲ್‍ಬೋಗಿ (ಹೊಪಿಯ) ಮುಂತಾದ ಮರಗಳು ಈ ಕುಟುಂಬಕ್ಕೆ ಸೇರಿವೆ. ಇವು ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತವೆ. ಭಾರತ, ಮಲಯ, ಬರ್ಮ ಮುಂತಾದ ದೇಶಗಳಲ್ಲಿ ಹೇರಳವಾಗಿ ಕಾಣದೊರೆಯುವುವು. ಬಲು ಎತ್ತರಕ್ಕೆ ಬೆಳೆಯುವ ವೃಕ್ಷಗಳಲ್ಲಿ ಇವು ಪ್ರಧಾನವಾದವು. ಇವುಗಳ ಕೊಂಬೆಗಳು ಬಲು ಕಡಿಮೆ. ಭಾರತದಲ್ಲಿ ಅಸ್ಸಾಮ್, ಪಶ್ಚಿಮಘಟ್ಟಗಳು, ದಂಡಕಾರಣ್ಯ ಮುಂತಾದೆಡೆಗಳಲ್ಲಿ ಈ ಕುಟುಂಬದ ವೃಕ್ಷಗಳ ವ್ಯಾಪ್ತಿ ಹೆಚ್ಚು.

ಸಸ್ಯ ಲಕ್ಷಣಗಳು

ಎಲ್ಲ ಬಗೆಯವೂ ಬೃಹದಾಕಾರವಾಗಿ ಬೆಳೆಯುವ ಮರಗಳೇ. ಇವುಗಳ ಕಾಂಡದಲ್ಲಿ ರಾಳಪದಾರ್ಥ (ರೆಸಿನ್) ಹೆಚ್ಚಾಗಿರುತ್ತದೆ. ಎಲೆಗಳು ಸರಳ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಪ್ರತಿ ಎಲೆಯಲ್ಲೂ ಎದ್ದುಕಾಣುವಂಥ ವೃಂತಪರ್ಣಗಳು (ಸ್ಟಿಪ್ಯೂಲ್ಸ್) ಉಂಟು. ಹೂಗಳು ಉಭಯಲಿಂಗಿಗಳು ; ಇವಕ್ಕೆ ಸುವಾಸನೆಯುಂಟು. ಹೂಗಳಲ್ಲಿ ಪುಷ್ಪ ಪಾತ್ರೆ ಪುಷ್ಪಪೀಠಕ್ಕೊ ಅಂಡಾಶಯಕ್ಕೊ ಅಂಟಿಕೊಂಡಿದೆಯಲ್ಲದೆ ಕಾಯಿಯಲ್ಲೂ ಉದುರಿ ಹೋಗದೆ ಹಾಗೇ ಉಳಿದುಕೊಂಡಿರುತ್ತದೆ. ಅಲ್ಲದೆ ಕಾಯಿಯಲ್ಲಿ ಇದು ರೆಕ್ಕೆಗಳಂತೆ ಮಾರ್ಪಟ್ಟು ಫಲ ಪ್ರಸಾರಕ್ಕೆ ಸಹಾಯಮಾಡುತ್ತವೆ. ಉದಾಹರಣೆಗೆ ಸಾಲವೃಕ್ಷ.

ಪ್ರಭೇದಗಳು

ಡಿಪ್ಟರೊಕಾರ್ಪಸ್ ಜಾತಿಗೆ ಸೇರಿದ ಸುಮಾರು 10 ಪ್ರಭೇದಗಳು ಅಸ್ಸಾಮ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತವೆ. ಡಿಪ್ಟರೊಕಾರ್ಪಸ್ ಇಂಡಿಕಸ್, ಡಿ. ಮ್ಯಾಕ್ರೊಕಾರ್ಪಸ್, ಡಿ. ಟ್ಯೂಬಕ್ರ್ಯುಲೇಟಸ್, ಡಿ. ಟರ್ಬಿನೇಟಸ್ ಮುಂತಾದವು ಬಹಳ ಮುಖ್ಯವಾದ ಪ್ರಭೇದಗಳು.

ಉಪಯೋಗಗಳು

ಇವುಗಳ ಚೌಬೀನೆ ಬಲು ಭಾರವಾಗಿಯೂ ಗಟ್ಟಿಯಾಗಿಯೂ ಇದೆ. ಇದನ್ನು ಹಡಗು ನಿರ್ಮಿಸಲು ರೈಲು ಹಳಿಗಳಾಗಿ ಹಾಸಲು, ಬಹು ವಿಧದ ಮರದ ಸಾಮಾನುಗಳನ್ನು ತಯಾರಿಸಲು, ಪ್ಲೈವುಡ್ ಮಾಡಲು, ಇತ್ಯಾದಿ ಕೆಲಸಗಳಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಎಲ್ಲ ಪ್ರಭೇದಗಳಲ್ಲೂ ರಾಳ ನಾಳಗಳುಂಟು. ಇವುಗಳ ಗರ್ಜನ ಎಣ್ಣೆ (ಗರ್ಜನ್ ಬಾಲ್ಸಮ್) ತೆಗೆಯುತ್ತಾರೆ. ಎಣ್ಣೆಯಲ್ಲಿ ಎರಡು ವಿಧಗಳಿವೆ. ಕಂದು ಅಥವಾ ಕಪ್ಪುಮಿಶ್ರಿತ ಹಸಿರುಬಣ್ಣದ ಮೃದುವಾದ ಬಗೆಯ ಎಣ್ಣೆಗೆ ಕನಿಯಿನ್ ತೈಲ ಎಂದು ಹೆಸರು. ತಿಳಿಬೂದುಬಣ್ಣದ ಇನ್ನೊಂದು ರೀತಿಯ ಎಣ್ಣೆಗೆ ಇನ್ ತೈಲ ಎಂದು ಹೆಸರು. ರಬ್ಬರು ಮರಗಳಿಗೆ ಮಾಡುವಂತೆ ಗಾಯಗಳನ್ನು ಮಾಡಿ ರಾಳವನ್ನು ಶೇಖರಿಸುತ್ತಾರೆ. ಕನಿಯನ್ ತೈಲವನ್ನು ಟರ್ಬಿನೇಟಸ್ ಪ್ರಭೇದದಿಂದಲೂ ಇನ್ ತೈಲವನ್ನು ಟ್ಯೂಬಕ್ರ್ಯುಲೇಟಸ್ ಪ್ರಭೇದದಿಂದಲೂ ಪಡೆಯುತ್ತಾರೆ. ಎರಡು ತೆರನ ತೈಲಗಳೂ ಮೆರುಗೆಣ್ಣೆಗಳಾಗಿ ಬಳಕೆಯಲ್ಲಿವೆ. ಸಾಲವೃಕ್ಷ (ಶೋರಿಯ ರೊಬಸ್ಟ) ದಕ್ಷಿಣ ಭಾರತ, ಶ್ರೀಲಂಕಾ, ಫಿಲಿಪೀನ್ಸ್ ಮುಂತಾದ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುತ್ತದೆ. ಇದರ ಹೂಗಳಿಗೆ ಬಹಳ ಸುವಾಸನೆಯುಂಟು. ಇದರ ಚೌಬೀನೆ ಹಳದಿ ಬಣ್ಣದ್ದು. ಅನೇಕ ವಿಧವಾದ ಮರದ ಸಾಮಾನುಗಳನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ. ಇದರ ಬೀಜಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದೆ. ಇದರಿಂದ ಒಂದು ಬಗೆಯ ಬೆಣ್ಣೆಯನ್ನೂ ತೆಗೆಯುವುದುಂಟು. ಕೋಕೋ ಬೆಣ್ಣೆಗೆ ಬದಲಾಗಿ ಇದನ್ನು ಬಳಸುತ್ತಾರೆ. ಅಲ್ಲದೆ ಬೀಜಗಳನ್ನು ಹಾಗೆಯೇ ತಿನ್ನಬಹುದು. ಧೂಪದ ಮರ (ವ್ಯಾಟೇರಿಯ ಇಂಡಿಕ) ಸೇಷಲ್ ದ್ವೀಪ ಮತ್ತು ಕೇರಳಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಗುಗ್ಗುಳ, ಇಂಡಿಯನ್ ಕೋಪಾಲ್ ಮರ ಎಂಬ ಹೆಸರುಗಳೂ ಉಂಟು. ಇದರಿಂದ ಬರುವ ರಾಳವನ್ನು ಧೂಪವಾಗಿ ಬಳಸುವರು. ಇದರ ಬೀಜಗಳಲ್ಲಿ ಕೊಬ್ಬು ಉಂಟು. ಇದಕ್ಕೆ ಮಲಬಾರ್ ಕೊಬ್ಬು ಎಂದು ಹೆಸರು. ತುಪ್ಪಕ್ಕೆ ಬದಲಾಗಿ ಇದನ್ನು ಉಪಯೋಗಿಸುವುದಿದೆ. ಡ್ರೈಬಲನಾಪ್ಸ್ ಎಂಬ ಹೆಸರಿನ ಮರದಿಂದ ಬೋರ್ನಿಯೊ ಕರ್ಪೂರವನ್ನು ತೆಗೆಯುತ್ತಾರೆ. ಅಲ್ಲದೆ ಕಿರಾಲುಬೋಗಿ ಮರದಿಂದ ಧೂಪವನ್ನು ಪಡೆಯುವುದುಂಟು. ಈ ಮರಗಳು ಅನೇಕ ಮರಗೆಲಸಗಳಿಗೂ ಉಪಯುಕ್ತವಾಗಿವೆ

ಬೆಳೆಯುವ ಪ್ರದೇಶ

ಆಗ್ನೇಯ ಏಷ್ಯಾದ ಡಿಪ್ಟೆರೋಕಾರ್ಪ್ ಕಾಡುಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬುಹುದು. ಬೋರ್ನಿಯೋ ದ್ವೀಪಗಳಲ್ಲೂ ಇವು ಬೆಳೆಯುತ್ತವೆ. ಭಾರತದಲ್ಲಿ ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಇವನ್ನು ಕಾಣಬಹುದು.

ಆಯ್ದ ಜಾತಿಗಳು

  1. ಡಿಪ್ಟೆರೊಕಾರ್ಪಸ್ ಅಕುಟಾಂಗುಲಸ್
  2. ಡಿಪ್ಟೆರೋಕಾರ್ಪಸ್ ಅಲ್ಟಸ್
  3. ಡಿಪ್ಟೆರೋಕಾರ್ಪಸ್ ಅಪ್ಪಾನಟಸ್
  4. ಡಿಪ್ಟೆರೋಕಾರ್ಪಸ್ ಬಾಡಿ
  5. ಡಿಪ್ಟೆರೋಕಾರ್ಪಸ್ ಜರೆನೆನ್ಸಿಸ್
  6. ಡಿಪ್ಟೆರೋಕಾರ್ಪಸ್ ಬೋರ್ಡಿಲ್ಲೋನಿ
  7. ಡಿಪ್ಟೆರೊಕಾರ್ಪಸ್ ಕಾಡಟಸ್
  8. ಡಿಪ್ಟೆರೊಕಾರ್ಪಸ್ ಕಾಡಿಫರಸ್
  9. ಡಿಪ್ಟೆರೋಕಾರ್ಪಸ್ ಚಾರ್ಟಸಿಯಸ್
  10. ಡಿಪ್ಟೆರೋಕಾರ್ಪಸ್ ಸಿನಿರಿಯಸ್
  11. ಡಿಪ್ಟೆರೋಕಾರ್ಪಸ್ ಕಾನ್ಕಸ್
  12. ಡಿಪ್ಟೆರೊಕಾರ್ಪಸ್ ಕಾಂಡೋರ್ನ್ಸಿಸ್
  13. ಡಿಪ್ಟೆರೋಕಾರ್ಪಸ್ ಕಾನ್ಪೆರ್ಟಸ್
  14. ಡಿಪ್ಟೆರೋಕಾರ್ಪಸ್ ಕಾನ್ಫಾರ್ಮಿಸ್
  15. ಡಿಪ್ಟೆರೋಕಾರ್ಪಸ್ ಕೊರಿಯಾಸಿಯಸ್
  16. ಡಿಪ್ಟೆರೋಕಾರ್ಪಸ್ ಕಾರ್ನುಟಸ್
  17. ಡಿಪ್ಟೆರೋಕಾರ್ಪಸ್ ಕಾಟೇಟಸ್
  18. ಡಿಪ್ಟೆರೋಕಾರ್ಪಸ್ ಕಾಸ್ಟ್ಲುಟಸ್
  19. ಡಿಪ್ಟೆರೋಕಾರ್ಪಸ್ ಕ್ರಿನಿಟಸ್
  20. ಡಿಪ್ಟೆರೋಕಾರ್ಪಸ್ ಕಸ್ಪಿದಾಟಸ್
  21. ಡಿಪ್ಟೆರೋಕಾರ್ಪಸ್ ಡಯೆರಿ
  22. ಡಿಪ್ಟೆರೋಕಾರ್ಪಸ್ ಎಲೊಂಗಟಸ್
  23. ಡಿಪ್ಟೆರೋಕಾರ್ಪಸ್ ಯೂರಿಂಚಸ್
  24. ಡಿಪ್ಟೆರೋಕಾರ್ಪಸ್ ಫ್ಯಾಗನೈಸ್
  25. ಡಿಪ್ಟೆರೋಕಾರ್ಪಸ್ ಫ್ಯುಸಿಫಾರ್ಮಿಸ್
  26. ಡಿಪ್ಟೆರೋಕಾರ್ಪಸ್ ಜೀನಿಕ್ಯುಲಾಟಸ್
  27. ಡಿಪ್ಟೆರೊಕಾರ್ಪಸ್ ಗ್ಲಾಬ್ರಿಜೆಮೆಟಸ್
  28. ಡಿಪ್ಟೆರೋಕಾರ್ಪಸ್ ಗ್ರಂಥಿಲೋಸಸ್
  29. ಡಿಪ್ಟೆರೋಕಾರ್ಪಸ್ ಗ್ಲೋಬೋಸಸ್
  30. ಡಿಪ್ಟೆರೋಕಾರ್ಪಸ್ ಗ್ರ್ಯಾಸಿಲಿಸ್
  31. ಡಿಪ್ಟೆರೋಕಾರ್ಪಸ್ ಗ್ರ್ಯಾಂಡಿಫ್ಲೋರಸ್
  32. ಡಿಪ್ಟೆರೋಕಾರ್ಪಸ್ ಹ್ಯಾಸೆಲ್ಟೈ
  33. ಡಿಪ್ಟೆರೋಕಾರ್ಪಸ್ ಹಿಸ್ಪಿಡಸ್
  34. ಡಿಪ್ಟೆರೋಕಾರ್ಪಸ್ ಹೆಮರೇಟಸ್
  35. ಡಿಪ್ಟೆರೋಕಾರ್ಪಸ್ ಇಂಡಿಕಸ್
  36. ಡಿಪ್ಟೆರೋಕಾರ್ಪಸ್ ಮುದ್ರೆ
  37. ಡಿಪ್ಟೆರೋಕಾರ್ಪಸ್ ಇಂಟ್ರಿಟಟಸ್
  38. ಡಿಪ್ಟೆರೋಕಾರ್ಪಸ್ ಕೆರ್ರಿ
  39. ಡಿಪ್ಟೆರೋಕಾರ್ಪಸ್ ಕ್ನ್ಸ್ಸ್ಟ್ಲರ್
  40. ಡಿವಪ್ಟೆರೋಕಾರ್ಪಸ್ ಲ್ಯಾಮೆಲ್ಲಟಸ್
  41. ಡಿಪ್ಟೆರೋಕಾರ್ಪಸ್ ಲಿಟೊರಾಲಿಸ್
  42. ಡಿಪ್ಟೆರೋಕಾರ್ಪಸ್ ಲೋಡಿ
  43. ಡಿಪ್ಟೆರೋಕಾರ್ಪಸ್ ಮೆಗಾಕಾರ್ಪಸ್
  44. ಡಿಪ್ಟೆರೋಕಾರ್ಪಸ್ ಮೌಂಡಸ್
  45. ಡಿಪ್ಟೆರೋಕಾರ್ಪಸ್ ನಡಸ್
  46. ಡಿಪ್ಟೆರೋಕಾರ್ಪಸ್ ಆಲೋಂಗ್ಫಿಲಿಯೋಸ್
  47. ಡಿಪ್ಟೆರೋಕಾರ್ಪಸ್ ಸೆಟಾಸಿಫೋಲಿಯಸ್
  48. ಡಿಪ್ಟೆರೋಕಾರ್ಪಸ್ ಒಕ್ರೇಸಸ್
  49. ಡಿಪ್ಟೆರೋಕಾರ್ಪಸ್ ಆರ್ಬಿಕ್ಯುಲಾರಿಸ್
  50. ಡಿಪ್ಟೆರೋಕಾರ್ಪಸ್ ಪ್ಯಾಚಿಫಿಲ್ಲಸ್
  51. ಡಿಪ್ಟೆರೋಕಾರ್ಪಸ್ ಪ್ಯಾಲೆಂಬಿಕಸ್
  52. ಡಿಪ್ಟೆರೋಕಾರ್ಪಸ್ ಪೆರಾಕೆನ್ಸಿಸ್
  53. ಡಿಪ್ಟೆರೋಕಾರ್ಪಡ್ ಸೂಡೋಕೋರ್ನಟಸ್
  54. ಡಿಪ್ಟೆರೋಕಾರ್ಪಸ್ ರೆಟೂಸಸ್
  55. ಡಿಪ್ಟೆರೋಕಾರ್ಪಸ್ ರಿಜಿಡಸ್
  56. ಡಿಪ್ಟೆರೋಕಾರ್ಪಸ್ ರೋಟಂಡಿಫೋಲಿಯಸ್
  57. ಡಿಪ್ಟೆರೋಕಾರ್ಪಸ್ ಸಾರ್ವಾಕೆನ್ಸಿಸ್
  58. ಡಿಪ್ಟೆರೋಕಾರ್ಪಸ್ ಸೆಮಿವೆಸ್ಟಿಟಸ್
  59. ಡಿಪ್ಟೆರೋಕಾರ್ಪಸ್ ಸ್ಟೆಲೆಟಸ್
  60. ಡಿಪ್ಟೆರೋಕಾರ್ಪಸ್ ಸಬ್ಲೆಮೆಲೆಟಸ್
  61. ಡಿಪ್ಟೆರೋಕಾರ್ಪಸ್ ಟೆಂಪೀಸ್
  62. ಡಿಪ್ಟೆರೋಕಾರ್ಪಸ್ ಟ್ಯುಬರ್ಕ್ಯುಲಟಸ್
  63. ಡಿಪ್ಟೆರೋಕಾರ್ಪಸ್ ಟರ್ಬಿನಾಟಸ್
  64. ಡಿಪ್ಟೆರೋಕಾರ್ಪಸ್ ಮಾನ್ಯತೆ
  65. ಡಿಪ್ಟೆರೋಕಾರ್ಪಸ್ ವರ್ರುಕೋಸಸ್
  66. ಡಿಪ್ಟೆರೋಕಾರ್ಪಸ್ ಝೈಲಾನಿಕಸ್

ಉಪಯೋಗ

ಇದನ್ನು ಮರದ ದಿಮ್ಮಿಗಳಿಗೆ ಬಳಸುತ್ತಾರೆ. ಪ್ಲೈವುಡ್ ತಯಾರಿಸಲು ಗುರುಜನ್ ಮರವು ಬಹಳ ಮುಖ್ಯವಾಗಿದೆ. ಇದನ್ನು ಸಾಂಪ್ರದಾಯಿಕ ಮೂಲಿಕೆ ಔಷಧಿಗಳಲ್ಲಿ ಬಳಸುತ್ತಾರೆ.

ಉಲ್ಲೇಖ

ಡಿಪ್ಟೆರೋಕಾರ್ಪ್ಸ್ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಡಿಪ್ಟೆರೋಕಾರ್ಪ್ಸ್ ಸಸ್ಯ ಲಕ್ಷಣಗಳುಡಿಪ್ಟೆರೋಕಾರ್ಪ್ಸ್ ಪ್ರಭೇದಗಳುಡಿಪ್ಟೆರೋಕಾರ್ಪ್ಸ್ ಉಪಯೋಗಗಳುಡಿಪ್ಟೆರೋಕಾರ್ಪ್ಸ್ ಬೆಳೆಯುವ ಪ್ರದೇಶಡಿಪ್ಟೆರೋಕಾರ್ಪ್ಸ್ ಆಯ್ದ ಜಾತಿಗಳುಡಿಪ್ಟೆರೋಕಾರ್ಪ್ಸ್ ಉಪಯೋಗಡಿಪ್ಟೆರೋಕಾರ್ಪ್ಸ್ ಉಲ್ಲೇಖಡಿಪ್ಟೆರೋಕಾರ್ಪ್ಸ್

🔥 Trending searches on Wiki ಕನ್ನಡ:

ಸೋಮನ ಕುಣಿತವಿಕಿಪೀಡಿಯಕನ್ನಡ ಛಂದಸ್ಸುಓಂ ನಮಃ ಶಿವಾಯಜಯಂತಿ (ನಟಿ)ಭರತನಾಟ್ಯಭಾರತದಲ್ಲಿ ಕೃಷಿಚಂದ್ರಯಾನ-೩ಶನಿ (ಗ್ರಹ)ಸಂವತ್ಸರಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕರ್ನಾಟಕ ಸಂಗೀತರಾಮ ಮಂದಿರ, ಅಯೋಧ್ಯೆನಾಲ್ವಡಿ ಕೃಷ್ಣರಾಜ ಒಡೆಯರುಬಂಧನಶುಂಠಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹಸ್ತ ಮೈಥುನಇಂಡೋನೇಷ್ಯಾಭಾರತದ ರಾಷ್ಟ್ರಗೀತೆದಿಕ್ಕುಪರಿಣಾಮಭಾರತ ರತ್ನಕೆ. ಎಸ್. ನರಸಿಂಹಸ್ವಾಮಿಮೈಸೂರು ಮಲ್ಲಿಗೆಎ.ಕೆ.ರಾಮಾನುಜನ್ಕೈಗಾರಿಕೆಗಳುಪಿತ್ತಕೋಶವಿರಾಮ ಚಿಹ್ನೆವ್ಯಾಸರಾಯರುಅಂಬಿಗರ ಚೌಡಯ್ಯಕರ್ನಾಟಕದ ತಾಲೂಕುಗಳುಮೆಕ್ಕೆ ಜೋಳಉಪ್ಪಿನ ಸತ್ಯಾಗ್ರಹಭಾವಗೀತೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರಸ(ಕಾವ್ಯಮೀಮಾಂಸೆ)ಕಾಂತಾರ (ಚಲನಚಿತ್ರ)ವಿಜಯನಗರಆರೋಗ್ಯಉಪೇಂದ್ರ (ಚಲನಚಿತ್ರ)ಭಾರತದ ರಾಷ್ಟ್ರೀಯ ಉದ್ಯಾನಗಳುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಹ್ಯುಯೆನ್ ತ್ಸಾಂಗ್ಇಮ್ಮಡಿ ಪುಲಿಕೇಶಿಭಾರತದ ಸಂಯುಕ್ತ ಪದ್ಧತಿಕರ್ಮಧಾರಯ ಸಮಾಸರಾಮರಾಜ್ಯಸಭೆಚದುರಂಗದ ನಿಯಮಗಳುದ್ವಂದ್ವ ಸಮಾಸಉದಯವಾಣಿ೨೦೧೬ ಬೇಸಿಗೆ ಒಲಿಂಪಿಕ್ಸ್ಬಸವೇಶ್ವರಮುಹಮ್ಮದ್ಅಕ್ಷಾಂಶ ಮತ್ತು ರೇಖಾಂಶಬಾವಲಿಭಾರತದ ಸಂವಿಧಾನದ ೩೭೦ನೇ ವಿಧಿಹಾಗಲಕಾಯಿಕರ್ಣಾಟಕ ಸಂಗೀತಲಡಾಖ್ಜೋಡು ನುಡಿಗಟ್ಟುಶ್ರೀ ಮಂಜುನಾಥ (ಚಲನಚಿತ್ರ)ಕೆರೆಗೆ ಹಾರ ಕಥನಗೀತೆಅರ್ಥಶಾಸ್ತ್ರರಾಷ್ಟ್ರೀಯ ಶಿಕ್ಷಣ ನೀತಿಸಂಭೋಗವೃದ್ಧಿ ಸಂಧಿಎ.ಪಿ.ಜೆ.ಅಬ್ದುಲ್ ಕಲಾಂವಿರಾಟ್ ಕೊಹ್ಲಿಬೇಸಿಗೆಕುರಿ ಸಾಕಾಣಿಕೆಕವಿರಾಜಮಾರ್ಗಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚಾಮುಂಡರಾಯ🡆 More